Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅನಗತ್ಯ ವಿವಾದದಲ್ಲಿ ಇಂಡಿಯಾ-ಭಾರತ

ಅನಗತ್ಯ ವಿವಾದದಲ್ಲಿ ಇಂಡಿಯಾ-ಭಾರತ

ನಾ. ದಿವಾಕರನಾ. ದಿವಾಕರ12 Sept 2023 10:03 AM IST
share
ಅನಗತ್ಯ ವಿವಾದದಲ್ಲಿ ಇಂಡಿಯಾ-ಭಾರತ

ಭಾಗ-2

ಇಂಡಿಯಾ-ಭಾರತ ಸಾಂವಿಧಾನಿಕ ಬಿಕ್ಕಟ್ಟುಗಳು

ಇಂಡಿಯಾ ಎಂಬ ಪದದ ಮೂಲ ಧಾತುವನ್ನು ಅರೇಬಿಕ್ ಅಥವಾ ಪರ್ಷಿಯನ್ ಮೂಲದಲ್ಲಿ ಕಾಣಬಹುದು. ಇಂಡಸ್ ಎಂದು ಕರೆಯಲಾಗುತ್ತಿದ್ದ ಸಿಂಧು ನದಿಯ ದಕ್ಷಿಣ ಅಥವಾ ಪೂರ್ವಕ್ಕೆ ಇದ್ದ ಭೂ ಪ್ರದೇಶವನ್ನು ಇಂಡಿಯಾ ಎಂದು ಕರೆಯಲಾಗುತ್ತಿತ್ತು. ಅಫ್ಘಾನ್ ಮತ್ತು ಮೊಘಲರ ಆಳ್ವಿಕೆಯಲ್ಲಿ ಭಾರತೀಯ ಉಪಖಂಡದ ಉತ್ತರ ಭೂಪ್ರದೇಶಗಳನ್ನು ಹಿಂದುಸ್ತಾನ್ ಎಂದೇ ಕರೆಯಲಾಗುತ್ತಿತ್ತು. ಆನಂತರ ಬ್ರಿಟಿಷ್ ವಸಾಹತು ಆಳ್ವಿಕೆಯಲ್ಲಿ ಇಡೀ ಭೂಪ್ರದೇಶವನ್ನು ಇಂಡಿಯಾ ಎಂದು ಗುರುತಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತದ ಪ್ರಾಚೀನ ನಾಗರಿಕತೆಯ ಪುನರುತ್ಥಾನವನ್ನು ಬಯಸಿದ್ದ ಕೆಲವು ವಿದ್ವಾಂಸರು, ಗುಂಪುಗಳು ವಿದೇಶಿಯರು ನೀಡಿದ ಈ ಹೆಸರನ್ನು ಒಪ್ಪಲು ನಿರಾಕರಿಸಲಾರಂಭಿಸಿದ್ದರು. ಆ ಸಂದರ್ಭದಲ್ಲೇ ಭರತ ಖಂಡ ಎಂಬ ಮೂಲಧಾತುವಿನಿಂದ ಉಗಮಿಸಿದ ಭಾರತ್ ಎಂಬ ಪದವೂ ಚಾಲ್ತಿಗೆ ಬಂದಿತ್ತು. ನೇತಾಜಿ ಸುಭಾಷ್ ಚಂದ್ರ ಬೋಸ್ ಮುಂತಾದವರು ಹೆಚ್ಚು ಸಮನ್ವಯದ ಸಂಕೇತವಾಗಿ ಹಿಂದ್ ಪದವನ್ನು ಬಳಸುವಂತೆ ಆಗ್ರಹಿಸಿದ್ದರು. ಈಗಲೂ ಜೈ ಹಿಂದ್ ಎಂಬ ಪದವನ್ನು ಭಾವನಾತ್ಮಕವಾಗಿ ಬಳಸಲಾಗುತ್ತಿದೆ. Indus ಅಥವಾ ಸಿಂಧೂ ನದಿಯ ಚಾರಿತ್ರಿಕ ಅಸ್ಮಿತೆಯ ಹಿನ್ನೆಲೆಯಲ್ಲಿ ಬ್ರಿಟಿಷ್ ವಸಾಹತು ಸರಕಾರ ಇಂಡಿಯಾ ಎಂಬ ಹೆಸರನ್ನು ಚಾಲ್ತಿಗೆ ತಂದಿತ್ತು. ಈಗ ಇದನ್ನು ನಿರಾಕರಿಸುವುದೆಂದರೆ ನಾವು ಸಿಂಧೂ ನದಿಯೊಡನೆ ಇರುವ ಪಾರಂಪರಿಕ ಸಂಬಂಧವನ್ನು ತೊಡೆದುಹಾಕಿದಂತೆಯೇ ಆಗುತ್ತದೆ.

ಈಗ ನರೇಂದ್ರ ಮೋದಿ ಸರಕಾರ ಮತ್ತು ಸಂಘಪರಿವಾರ ಭಾರತ ಎಂಬ ಹೆಸರನ್ನೇ ಅಧಿಕೃತವಾಗಿ ಬಳಸುವ ಇರಾದೆ ತೋರುತ್ತಿದೆ. ಜಿ-೨೦ ಶಿಖರ ಶೃಂಗಸಭೆಯ ಆಹ್ವಾನ ಪತ್ರಿಕೆಯಲ್ಲಿ President of Bharat ಎಂದು ಬಳಸಿರುವುದು ಇದನ್ನೇ ಸೂಚಿಸುತ್ತದೆ. ಇನ್ನು ಮುಂದೆ ಆಂತರಿಕವಾಗಿ ಆಂಗ್ಲಭಾಷೆಯ ಪತ್ರ ವ್ಯವಹಾರ ಹಾಗೂ ದಾಖಲೆಗಳಲ್ಲೂ ಸಹ ಇಂಡಿಯಾ ಬದಲು ಭಾರತ ಎಂದು ಬಳಸುವ ಸಾಧ್ಯತೆಗಳಿವೆ. ಆದರೆ ಅಂತರ್‌ರಾಷ್ಟ್ರೀಯ ವ್ಯವಹಾರಗಳಲ್ಲಿ ಹೀಗೆ ಮಾಡುವುದೇ ಆದರೆ ಅಧಿಕೃತವಾಗಿ ಇಂಡಿಯಾ ಎಂಬ ಹೆಸರನ್ನು ತೆಗೆದುಹಾಕಿ ಭಾರತ ಎಂದು ಸಂವಿಧಾನ ತಿದ್ದುಪಡಿಯ ಮೂಲಕ ದಾಖಲಿಸಬೇಕಾಗುತ್ತದೆ. ಇದಕ್ಕೆ ರಾಜ್ಯಗಳ ಪ್ರತಿರೋಧವೂ ವ್ಯಕ್ತವಾಗುವ ಸಾಧ್ಯತೆಗಳಿವೆ. ಲೋಕಸಭೆಯ ಮಾಜಿ ಮುಖ್ಯ ಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ಅವರ ಅಭಿಪ್ರಾಯದಲ್ಲಿ ಸರಕಾರವು ಒಂದು ವೇಳೆ ಸದನದಲ್ಲಿ ನಿರ್ಣಯ ಮಂಡಿಸುವ ಮೂಲಕ ಈ ರೀತಿಯ ಬದಲಾವಣೆಗೆ ಬಯಸಿದರೆ ಅದು ಕಾರ್ಯಸಾಧುವಾಗುವುದಿಲ್ಲ.

ಚುನಾವಣಾ ರಾಜಕಾರಣ

ಇಂಡಿಯಾ ಮತ್ತು ಭಾರತ ಪದಬಳಕೆಯ ನಡುವೆ ಏರ್ಪಟ್ಟಿರುವ ವಾಗ್ವಾದಗಳ ಹಿಂದೆ ಚುನಾವಣಾ ರಾಜಕಾರಣದ ಛಾಯೆ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ೨೦೨೪ರ ಮಹಾ ಚುನಾವಣೆಗೂ ಮುನ್ನ ಸಾಮಾನ್ಯ ಜನತೆಯ ಮುಂದಿಡಲು ಪಾಕಿಸ್ತಾನ, ರಾಮಮಂದಿರ, ಆರ್ಟಿಕಲ್ ೩೭೦, ತ್ರಿವಳಿ ತಲಾಖ್, ಏಕರೂಪ ನಾಗರಿಕ ಸಂಹಿತೆ ಹೀಗೆ ಯಾವುದೇ ಭಾವನಾತ್ಮಕ ವಿಚಾರಗಳು ಹೆಚ್ಚು ಉಪಯುಕ್ತವಾಗುವುದಿಲ್ಲ. ಇದರಲ್ಲಿ ಕೆಲವು ವಿಷಯಗಳು ತಮ್ಮ ಅಸ್ತಿತ್ವ ಮತ್ತು ಪ್ರಸ್ತುತತೆಯನ್ನು ಕಳೆದುಕೊಂಡಿವೆ. ಈ ದೃಷ್ಟಿಯಿಂದ ನೋಡಿದಾಗ ಬಿಜೆಪಿ ‘ಇಂಡಿಯಾ’ ಹೆಸರನ್ನು ಬದಲಿಸಿ ‘ಭಾರತ’ ಎಂದು ನಾಮಕರಣ ಮಾಡುವ ಆಲೋಚನೆಯನ್ನು ಹೊಂದಿರಬಹುದು. ತನ್ಮೂಲಕ ಸಾಮಾನ್ಯ ಜನರ ನಡುವೆ ‘ಭಾರತ’ ಎಂಬ ಪದದ ಬಗ್ಗೆ ಇರುವ ಭಾವನಾತ್ಮಕ ಸಂಬಂಧವನ್ನು ಬಳಸಿಕೊಳ್ಳಬಹುದು. ಆದರೆ ಈಗಾಗಲೇ ವ್ಯಾಪಕವಾಗಿ ಬಳಕೆಯಲ್ಲಿರುವ ಭಾರತ ದೇಶದ ಯಾವುದೇ ಮೂಲೆಯಲ್ಲೂ ಅಪಥ್ಯ ಎನಿಸಿಕೊಂಡಿಲ್ಲ. ಹಾಗಾಗಿ ಬಿಜೆಪಿಯ ಈ ಭಾವನಾತ್ಮಕ ರಾಜಕಾರಣ ಫಲಕಾರಿಯಾಗದೆಯೂ ಹೋಗಬಹುದು.

ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಧೋರಣೆಯ ಗಂಡಾಳ್ವಿಕೆಯ ಲಕ್ಷಣಗಳೇ ಬಹುಸಂಖ್ಯಾತವಾದಿ ಸಂಸದೀಯ ಬಹುಮತದ ಆಳ್ವಿಕೆಯನ್ನೂ ಆವರಿಸುವುದರಿಂದ, ಈ ಹೆಸರು ಬದಲಾವಣೆಯ ರಾಜಕಾರಣ ಮತ್ತಷ್ಟು ರೋಚಕ ತಿರುವುಗಳನ್ನು ಪಡೆದುಕೊಂಡರೂ ಅಚ್ಚರಿಪಡಬೇಕಿಲ್ಲ. ಸದ್ಯಕ್ಕೆ ಸಂವಿಧಾನವೇ ಹೇಳಿರುವಂತೆ ‘ಇಂಡಿಯಾ-ಅಂದರೆ ಭಾರತ’ ಎಂಬ ಅಧಿಕೃತ ಮಾನ್ಯತೆ ಪಡೆದಿರುವ ಸಂಬೋಧನೆ ಮತ್ತು ಬಳಕೆಯೇ ಚಾಲ್ತಿಯಲ್ಲಿರುವಾಗ ಈಗ ಎದ್ದಿರುವ ವಾಗ್ಯುದ್ಧ ಅನಗತ್ಯ ಎಂದೇ ಹೇಳಬಹುದು.

share
ನಾ. ದಿವಾಕರ
ನಾ. ದಿವಾಕರ
Next Story
X