Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬಾಹ್ಯಾಕಾಶದ ಮೂಲಕ ಭವಿಷ್ಯ...

ಬಾಹ್ಯಾಕಾಶದ ಮೂಲಕ ಭವಿಷ್ಯ ಭದ್ರಪಡಿಸುತ್ತಿರುವ ಭಾರತ

ವಾರ್ತಾಭಾರತಿವಾರ್ತಾಭಾರತಿ4 Jan 2026 10:12 AM IST
share
ಬಾಹ್ಯಾಕಾಶದ ಮೂಲಕ ಭವಿಷ್ಯ ಭದ್ರಪಡಿಸುತ್ತಿರುವ ಭಾರತ

ಮುಂದಿನ ಯುದ್ಧಗಳು ಭೂಮಿಯಲ್ಲಿ ಸ್ಫೋಟಗಳ ಮೂಲಕ ಆರಂಭಗೊಳ್ಳುವ ಸಾಧ್ಯತೆಗಳಿಲ್ಲ. ಬದಲಿಗೆ, ಅವು ಬಾಹ್ಯಾಕಾಶದಲ್ಲಿ ಲಭಿಸುವ ಸಂಕೇತಗಳ ಮೂಲಕ ಆರಂಭಗೊಳ್ಳಬಹುದು. ಕ್ಷಿಪಣಿಗಳು ಹೆಚ್ಚು ಹೆಚ್ಚು ವೇಗ ಪಡೆಯುತ್ತಿದ್ದು, ಬಾಹ್ಯಾಕಾಶ ಒಂದು ಯುದ್ಧಭೂಮಿಯಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತ ಬಾಹ್ಯಾಕಾಶ ಗುಪ್ತಚರ ಸಾಮರ್ಥ್ಯವನ್ನು ಹೊಂದುವುದು ಕಾರ್ಯತಂತ್ರದ ಅನಿವಾರ್ಯತೆಯಾಗಿದೆ.

ಭವಿಷ್ಯದಲ್ಲಿ ನಡೆಯುವ ಯುದ್ಧಗಳಲ್ಲಿ, ಮೊದಲ ಯುದ್ಧ ಟ್ಯಾಂಕ್‌ಗಳು ಅಥವಾ ಸೈನಿಕರ ಮೂಲಕ ಸೆಣಸಲ್ಪಡುವುದಿಲ್ಲ. ಭವಿಷ್ಯದ ಯುದ್ಧ ಬಾಹ್ಯಾಕಾಶದಲ್ಲಿ, ನಮ್ಮ ತಲೆಗಳ ಮೇಲೆ ನೂರಾರು ಕಿ.ಮೀ. ಎತ್ತರದಲ್ಲಿ, ಕ್ಷಿಪಣಿ ಉಡಾವಣೆಯ ವೇಳೆ ಹೊರಹೊಮ್ಮುವ ಕಿಡಿಗಳನ್ನೂ ಗಮನಿಸುವ ಉಪಗ್ರಹಗಳು ಇರುವಲ್ಲಿ ನಡೆಯಲಿದೆ. ಈ ಕ್ಷಿಪಣಿಗಳ ಉಡಾವಣೆಯನ್ನು ಮೊದಲು ಗಮನಿಸುವ, ಅದನ್ನು ಹಿಂಬಾಲಿಸುವ ಮತ್ತು ಅತ್ಯಂತ ವೇಗವಾಗಿ ನಿರ್ಧಾರ ಕೈಗೊಳ್ಳುವ ದೇಶಕ್ಕೆ ಮೇಲುಗೈ ಲಭಿಸುತ್ತದೆ. ಈ ಕಾರಣದಿಂದಲೇ ಕ್ಷಿಪಣಿಗಳ ಟ್ರ್ಯಾಕಿಂಗ್ ರಾಷ್ಟ್ರೀಯ ಭದ್ರತೆಗೆ ಮೌನವಾಗಿಯೇ ಕೊಡುಗೆ ನೀಡುತ್ತದೆ.

ಯಾಕೆ ಪ್ರತಿಯೊಂದು ಕ್ಷಣವೂ ಮುಖ್ಯವಾಗುತ್ತದೆ?

ಜಗತ್ತಿನ ಯಾವುದೋ ಭಾಗದಲ್ಲಿ ಒಂದು ಕ್ಷಿಪಣಿ ಉಡಾವಣೆಯಾಗುವುದನ್ನು ಊಹಿಸಿ. ಆ ನಿರ್ದಿಷ್ಟ ಕ್ಷಣದಿಂದ, ನಾಯಕರ ಬಳಿ ಕೆಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಕೇವಲ ನಿಮಿಷಗಳು ಮಾತ್ರ, ಅದರಲ್ಲೂ ಕೆಲವೊಮ್ಮೆ ಸೆಕೆಂಡುಗಳು ಮಾತ್ರ ಸಮಯವಿರುತ್ತದೆ. ಈ ಪ್ರಶ್ನೆಗಳೆಂದರೆ: ಇದು ಕ್ಷಿಪಣಿ ಪರೀಕ್ಷೆಯೇ? ಒಂದು ಸಾಂಪ್ರದಾಯಿಕ ದಾಳಿಯೇ? ಅಥವಾ ಪರಮಾಣು ದಾಳಿಯೇ? ಕ್ಷಿಪಣಿ ಉಡಾವಣೆಯಾಗುವುದು ಆರಂಭದಲ್ಲೇ ತಿಳಿದರೆ, ರಕ್ಷಕರಿಗೆ ಆ ಕ್ಷಿಪಣಿ ಎಲ್ಲಿಂದ ಉಡಾವಣೆಯಾಯಿತು, ಅದರ ಗುರಿ ಯಾವುದಿರಬಹುದು? ಮತ್ತು ಅದನ್ನು ತಡೆಯಬೇಕೇ ಎಂದು ನಿರ್ಧರಿಸಲು ನೆರವಾಗುತ್ತದೆ. ಇದು ಪ್ರಮುಖ ನೆಲೆಗಳನ್ನು ರಕ್ಷಿಸಲು, ನಾಗರಿಕ ರಕ್ಷಣಾ ವ್ಯವಸ್ಥೆ ಕೈಗೊಳ್ಳಲು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಪರಮಾಣು ಯುದ್ಧಕ್ಕೆ ಹಾದಿ ಮಾಡಿಕೊಡಬಲ್ಲ ದುರಂತಮಯ ತಪ್ಪುಗಳನ್ನು ತಡೆಯಲು ಅಮೂಲ್ಯ ಸಮಯವನ್ನು ಒದಗಿಸುತ್ತದೆ.

ಇಂದಿನ ಹೈಪರ್‌ಸಾನಿಕ್ ಕ್ಷಿಪಣಿಗಳ (ಶಬ್ದದ ವೇಗಕ್ಕಿಂತ ಐದು ಪಟ್ಟು ಹೆಚ್ಚು ವೇಗದ ಆಯುಧಗಳು), ಬಹು ಸಿಡಿತಲೆಗಳ ಮತ್ತು ರಕ್ಷಣೆಯನ್ನು ಸಾಲದಾಗಿಸುವಂತಹ ಗಂಭೀರ ದಾಳಿಗಳನ್ನು ಹೊಂದಿರುವ ಜಗತ್ತಿನಲ್ಲಿ ಕ್ಷಿಪಣಿಯನ್ನು ಹೊಡೆದುರುಳಿಸುವ ಮೂಲಕ ರಕ್ಷಣೆ ಆರಂಭವಾಗುವುದಿಲ್ಲ. ಬದಲಿಗೆ, ಕ್ಷಿಪಣಿಯ ಉಡಾವಣೆಯನ್ನು ಗಮನಿಸುವುದರಿಂದ ಆರಂಭಗೊಳ್ಳುತ್ತದೆ. ಕ್ಷಿಪಣಿ ಉಡಾವಣೆಯನ್ನು ಬಾಹ್ಯಾಕಾಶದಿಂದಲೇ ಗಮನಿಸಲು ಸಾಧ್ಯ.

ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ

ಅಮೆರಿಕದ ಬಳಿ ಜಗತ್ತಿನ ಅತ್ಯಾಧುನಿಕ ಕ್ಷಿಪಣಿ ಟ್ರ್ಯಾಕಿಂಗ್ ವ್ಯವಸ್ಥೆಯಿದೆ. ಅಮೆರಿಕದ ಬಾಹ್ಯಾಕಾಶ ಆಧಾರಿತ ಇನ್‌ಫ್ರಾರೆಡ್ ಉಪಗ್ರಹಗಳು ಕ್ಷಿಪಣಿ ಉಡಾವಣೆ ಆರಂಭಗೊಂಡ ಸೆಕೆಂಡುಗಳ ಒಳಗಾಗಿ ಅದರ ಬಿಸಿಯ ಸಂಕೇತಗಳನ್ನು ಗುರುತಿಸುತ್ತವೆ. ಇವುಗಳನ್ನು ಹೊಗೆಯನ್ನು ಗುರುತಿಸುವ ವ್ಯವಸ್ಥೆಯಂತೆ ಕಲ್ಪಿಸಿಕೊಳ್ಳಿ. ಆದರೆ, ಅಡುಗೆ ಕೋಣೆಯಲ್ಲಿ ಹೊಗೆಯನ್ನು ಗುರುತಿಸುವ ಬದಲು, ಈ ಉಪಗ್ರಹಗಳು ಬಾಹ್ಯಾಕಾಶದಿಂದಲೇ ರಾಕೆಟ್ ಹೊರಚೆಲ್ಲುವ ಅತಿಯಾದ ಉಷ್ಣವನ್ನು ಗುರುತಿಸುತ್ತವೆ. ಈ ಮಾಹಿತಿಯನ್ನು ತಕ್ಷಣವೇ ಭೂಮಿಯಲ್ಲಿರುವ ರೇಡಾರ್‌ಗಳು ಮತ್ತು ನೌಕಾಪಡೆಯ ಸೆನ್ಸರ್‌ಗಳೊಡನೆ ಹೋಲಿಸಿ, ಸಂಪೂರ್ಣ ಚಿತ್ರಣವನ್ನು ಭೂಮಿ ಮತ್ತು ಸಮುದ್ರದಲ್ಲಿನ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಿಗೆ ಒದಗಿಸಲಾಗುತ್ತದೆ. ಅಮೆರಿಕದ ಶಕ್ತಿ ಹೆಚ್ಚುವರಿ ವ್ಯವಸ್ಥೆಗಳು, ಜಾಗತಿಕ ವ್ಯಾಪ್ತಿ ಮತ್ತು ಎಲ್ಲ ಮಾಹಿತಿಗಳನ್ನು ಕ್ಷಣದಲ್ಲಿ ಒಗ್ಗೂಡಿಸುವ ಸಾಮರ್ಥ್ಯದಲ್ಲಿದೆ.

ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಚೀನಾ

ಚೀನಾ ಈ ಸ್ಪರ್ಧೆಗೆ ತಡವಾಗಿ ಪ್ರವೇಶಿಸಿದರೂ, ಬಹಳ ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದೆ. ಬೀಜಿಂಗ್ ಈಗ ದೀರ್ಘ ವ್ಯಾಪ್ತಿಯ ರೇಡಾರ್‌ಗಳ ಜೊತೆಗೆ, ಕ್ಷಿಪಣಿ ಮುನ್ನೆಚ್ಚರಿಕಾ ಉಪಗ್ರಹಗಳನ್ನು ನಿಯೋಜಿಸುತ್ತಿದ್ದು, ಮುಖ್ಯವಾಗಿ ಏಶ್ಯ ಮತ್ತು ಪೆಸಿಫಿಕ್ ಪ್ರದೇಶದಲ್ಲಿನ ಕ್ಷಿಪಣಿಗಳನ್ನು ಟ್ರ್ಯಾಕ್ ಮಾಡುವತ್ತ ಗಮನ ಹರಿಸಿದೆ. ಚೀನಾದ ಗುರಿ ಜಾಗತಿಕ ಪಾರಮ್ಯ ಸಾಧಿಸುವುದೇನಲ್ಲ. ಬದಲಿಗೆ, ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡುವುದು, ತನ್ನ ಮೇಲೆ ದಾಳಿಯಾದರೆ ಕ್ಷಿಪ್ರ ಪ್ರತಿದಾಳಿ ನಡೆಸುವುದು (ಇದನ್ನು ಸೆಕೆಂಡ್ ಸ್ಟ್ರೈಕ್ ಸಾಮರ್ಥ್ಯ ಎನ್ನಲಾಗುತ್ತದೆ) ಮತ್ತು ತನ್ನ ಗಡಿಯ ಸುತ್ತ ಏನಾಗುತ್ತಿದೆ ಎನ್ನುವುದರ ಕುರಿತು ಕಾರ್ಯತಂತ್ರದ ಖಚಿತತೆ ಹೊಂದುವುದಾಗಿದೆ.

ಭಾರತಕ್ಕಿದೆ ವಿಭಿನ್ನ ಸವಾಲು

ಭಾರತದ ಮುಂದೆ ಒಂದು ಸಂಕೀರ್ಣವಾದ ಪರಿಸ್ಥಿತಿಯಿದೆ. ನಮ್ಮ ಬಳಿ ಪಾಕಿಸ್ತಾನ ಮತ್ತು ಚೀನಾಗಳ ರೂಪದಲ್ಲಿ ಎರಡು ಅಣ್ವಸ್ತ್ರ ನೆರೆ ರಾಷ್ಟ್ರಗಳಿವೆ. ಎರಡರ ಬಳಿಯೂ ಪರ್ವತ, ಬಯಲು, ಮೊಬೈಲ್ ಲಾಂಚರ್‌ಗಳು ಮತ್ತು ಜಲಾಂತರ್ಗಾಮಿಗಳಿಂದಲೂ ಉಡಾಯಿಸಬಲ್ಲ ವಿವಿಧ ರೀತಿಯ ಕ್ಷಿಪಣಿಗಳಿವೆ. ಭಾರತದ ಕ್ಷಿಪಣಿ ಟ್ರ್ಯಾಕಿಂಗ್ ವ್ಯವಸ್ಥೆ ಭೂ ರೇಡಾರ್‌ಗಳು, ಬಾಹ್ಯಾಕಾಶದಲ್ಲಿರುವ ಉಪಗ್ರಹಗಳು, ಮತ್ತು ಹೆಚ್ಚುತ್ತಲೇ ಇರುವ ಖಾಸಗಿ ವಲಯದ ನಾವೀನ್ಯತೆಗಳನ್ನು ಒಳಗೊಂಡಿದೆ.

ಬೆಂಗಳೂರು ಮೂಲದ ಸ್ಟಾರ್ಟಪ್ ಸಂಸ್ಥೆಯಾದ ‘ದಿಗಂತರ’ವೂ ಈ ಹಂತದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.

ದಿಗಂತರ: ಬಾಹ್ಯಾಕಾಶದಲ್ಲಿ ಭಾರತದ ನೆರೆಹೊರೆಯ ಮೇಲಿನ ಕಣ್ಣು

ಕ್ಷಿಪಣಿಗಳ ವಿರುದ್ಧ ರಕ್ಷಣೆ ಹೊಂದಬೇಕಾದರೆ, ಮೊದಲಿಗೆ ಕ್ಷಿಪಣಿಗಳ ಚಲನೆಯನ್ನು ಗಮನಿಸುವ ಉಪಗ್ರಹಗಳನ್ನು ರಕ್ಷಿಸಬೇಕಾಗುತ್ತದೆ. ದಿಗಂತರ ಬಾಹ್ಯಾಕಾಶ ಪರಿಸ್ಥಿತಿಯ ಅರಿವಿನ ಕ್ಷೇತ್ರದಲ್ಲಿ (ಸ್ಪೇಸ್ ಸಿಚುಯೇಷನಲ್ ಅವೇರ್‌ನೆಸ್) ಪರಿಣತಿ ಪಡೆದಿದ್ದು, ಇದು ಬಾಹ್ಯಾಕಾಶದಿಂದ ನಡೆಸುವ ‘ನೆರೆಹೊರೆಯವರತ್ತ ಗಮನ’ವಾಗಿದೆ. ಇವು ನಿರಂತರವಾಗಿ ಉಪಗ್ರಹಗಳನ್ನು ಗಮನಿಸುತ್ತಾ, ಸುತ್ತುತ್ತಿರುವ ಬಾಹ್ಯಾಕಾಶ ತ್ಯಾಜ್ಯಗಳು ಮತ್ತು ಅನುಮಾನಾಸ್ಪದ ವಸ್ತುಗಳನ್ನು ವೀಕ್ಷಿಸಿ, ಅವು ಯಾವುವೂ ನಮ್ಮ ಪ್ರಮುಖ ರಕ್ಷಣಾ ವ್ಯವಸ್ಥೆಗಳ ಮೇಲೆ ಅಪ್ಪಳಿಸದಂತೆ ಅಥವಾ ದಾಳಿ ಮಾಡದಂತೆ ಖಾತರಿಪಡಿಸುತ್ತವೆ.

2025-2027ರ ಯೋಜನೆ

ಜನವರಿ 2025ರಲ್ಲಿ, ದಿಗಂತರ ಎಸ್‌ಸಿಒಟಿ ಎಂಬ ಒಂದು ಉಪಗ್ರಹವನ್ನು ಉಡಾವಣೆಗೊಳಿಸಿತು. ಇದು ಒಂದು ರೀತಿ ಕಕ್ಷೆಯಲ್ಲಿ ಗಸ್ತು ತಿರುಗುವ ಭದ್ರತಾ ಕ್ಯಾಮರಾ ರೀತಿಯಲ್ಲಿತ್ತು. 50 ಮಿಲಿಯನ್ ಡಾಲರ್ (450 ಕೋಟಿ ರೂಪಾಯಿ) ಹೂಡಿಕೆ ಪಡೆದಿರುವ ಈ ಸಂಸ್ಥೆ ಇಲ್ಲಿಗೇ ಸುಮ್ಮನಾಗಲು ಸಿದ್ಧವಿಲ್ಲ! ದಿಗಂತರ 2027ರ ವೇಳೆಗೆ ಇನ್ನೂ 15 ಕಣ್ಗಾವಲು ಉಪಗ್ರಹಗಳನ್ನು ಉಡಾವಣೆಗೊಳಿಸಿ, ಭಾರತಕ್ಕೆ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರೀ ಉತ್ತೇಜನ ನೀಡುವ ಗುರಿ ಹೊಂದಿದೆ.

‘ಗೇಮ್ ಚೇಂಜರ್’ ಉಪಗ್ರಹಗಳು

ಈ ಯೋಜನೆಯಲ್ಲಿ ಎಲ್ಲಕ್ಕಿಂತ ಮುಖ್ಯವಾದ ಭಾಗವೆಂದರೆ, 2026 ಮತ್ತು 27ರ ನಡುವೆ ಎರಡು ಅಲ್ಬಟ್ರಾಸ್ ಉಪಗ್ರಹಗಳ ಉಡಾವಣೆ. ಇವು ಮಾಮೂಲಿ ಕ್ಯಾಮರಾಗಳ ಬದಲಿಗೆ, ತಜ್ಞರಂತೆ ಕಾರ್ಯಾಚರಿಸುತ್ತವೆ. ಇವುಗಳ ಕೆಲಸವೆಂದರೆ, ಉಷ್ಣತೆ ಬಿಡುಗಡೆಯಾಗುವುದಕ್ಕಾಗಿ ಹುಡುಕಾಡುತ್ತಾ, ಯಾವುದೇ ಕ್ಷಿಪಣಿಯ ಸಂಭಾವ್ಯ ಪಥವನ್ನುಅತ್ಯಂತ ನಿಖರವಾಗಿ ಗುರುತಿಸುವುದಾಗಿದೆ.

ಭೂ ಬೆಂಬಲ: ಸ್ಕೈಗೇಟ್

ಈ ಕಾರ್ಯಗಳನ್ನು ಬಾಹ್ಯಾಕಾಶ ಕ್ಯಾಮರಾಗಳು ಮಾತ್ರವೇ ನಡೆಸಲು ಸಾಧ್ಯವಿಲ್ಲ. ದಿಗಂತರ ಭೂಮಿಯಲ್ಲಿರುವ ಸ್ಕೈಗೇಟ್ ಎನ್ನುವ ಶಕ್ತಿಶಾಲಿ ದೂರದರ್ಶಕಗಳು ಮತ್ತು ಸೆನ್ಸರ್‌ಗಳ ಜಾಲವನ್ನು ಬಳಸುತ್ತವೆ. ಇವುಗಳನ್ನು ಉಪಗ್ರಹಗಳಿಗೆ ಬೆಂಬಲ ನೀಡುವ ಸಲುವಾಗಿ ಭೂಮಿಯಲ್ಲಿರುವ, ನಿರಂತರವಾಗಿ 24/7 ಬಾಹ್ಯಾಕಾಶದ ಮೇಲೆ ಕಣ್ಣಿಟ್ಟಿರುವ ಬೈನಾಕುಲರ್‌ಗಳೆಂದು ಕಲ್ಪಿಸಬಹುದು.

ಯೋಜನೆಯ ಮೆದುಳು: ಎಐಆರ್‌ಎ

ಬಾಹ್ಯಾಕಾಶದಲ್ಲಿರುವ ಉಪಗ್ರಹಗಳು ಮತ್ತು ಭೂಮಿಯಲ್ಲಿರುವ ಸ್ಕೈಗೇಟ್‌ನಿಂದ ಲಭಿಸುವ ಎಲ್ಲ ಮಾಹಿತಿಗಳು ಎಐಆರ್‌ಎ ಎನ್ನುವ ಮೆದುಳಿಗೆ ರವಾನೆಯಾಗುತ್ತವೆ.

ಎಐಆರ್‌ಎ ಒಂದು ಸ್ಮಾರ್ಟ್ ಪ್ಲಾಟ್‌ಫಾರಂ ಆಗಿದ್ದು, ಎಲ್ಲ ಮಾಹಿತಿಗಳನ್ನು ಒಗ್ಗೂಡಿಸಿ ‘ಬಹುಪಾತ್ರಗಳ ಕಣ್ಗಾವಲು’ ನಿರ್ಮಿಸುತ್ತದೆ. ಸರಳವಾಗಿ ಹೇಳುವುದಾದರೆ, ಏಕಕಾಲಕ್ಕೆ ಒಂದೇ ಅಪಾಯವನ್ನು ವಿವಿಧ ಕೋನಗಳಿಂದ ಗಮನಿಸುತ್ತದೆ. ಎಐಆರ್‌ಎ ಭೂಮಿಯಲ್ಲಿರುವ ಕಣ್ಣುಗಳು ಮತ್ತು ಬಾಹ್ಯಾಕಾಶದಲ್ಲಿರುವ ಕಣ್ಣುಗಳನ್ನು ಸಂಪರ್ಕಿಸುತ್ತದೆ. ಇದು ನಡೆಸುವ ಕಾರ್ಯಗಳೆಂದರೆ:

ಕ್ಷಿಪಣಿ ಉಡಾವಣೆಯನ್ನು ತಕ್ಷಣವೇ ಗುರುತಿಸುವುದು.

ಅದು ನಿಖರವಾಗಿ ಎಲ್ಲಿಗೆ ಸಾಗುತ್ತದೆಂದು ಗುರುತಿಸುವುದು.

ದೇಶದ ನಾಯಕರಿಗೆ ಸೆಕೆಂಡುಗಳಲ್ಲಿ ನಂಬಿಕಾರ್ಹ ಮಾಹಿತಿ ಒದಗಿಸುವುದು.

ಉಪಗ್ರಹಗಳು, ಭೂಮಿಯಲ್ಲಿರುವ ದೂರದರ್ಶಕಗಳು ಮತ್ತು ಸ್ಮಾರ್ಟ್ ಸಾಫ್ಟ್ ವೇರ್‌ಗಳನ್ನು ಒಗ್ಗೂಡಿಸುವ ಮೂಲಕ, ಏನಾದರೂ ಅಪಾಯ ಎದುರಾದರೆ ಭಾರತ ಅದನ್ನು ನೋಡುವುದು ಮಾತ್ರವಲ್ಲದೆ, ಸರಿಯಾದ ಕ್ರಮವನ್ನೂ ಕೈಗೊಳ್ಳುತ್ತದೆ ಎಂದು ದಿಗಂತರ ಖಾತರಿಪಡಿಸುತ್ತದೆ.

ಇದು ಭಾರತಕ್ಕೇಕೆ ಮುಖ್ಯ?

ಇಲ್ಲೊಂದು ಮುಖ್ಯವಾದ ಅಂಶವಿದೆ: ಒಂದು ವೇಳೆ ಶತ್ರುಗಳೇನಾದರೂ ನಮ್ಮ ಉಪಗ್ರಹಗಳ ಕಣ್ಣು ತಪ್ಪಿಸಿದರೆ ಅಥವಾ ನಾಶಪಡಿಸಿದರೆ, ನಮ್ಮ ಸಂಪೂರ್ಣ ಕ್ಷಿಪಣಿ ಎಚ್ಚರಿಕಾ ವ್ಯವಸ್ಥೆ ಪತನಗೊಂಡರೆ, ನಾವು ನಮ್ಮ ಮೇಲಾಗುವ ಅಪಾಯಗಳ ಕುರಿತು ಕುರುಡು ಮತ್ತು ಕಿವುಡಾಗುವ ಸಾಧ್ಯತೆಗಳಿವೆ. ಆದರೆ, ನಮ್ಮ ಕಕ್ಷೆಯಲ್ಲಿ ನಡೆಯುತ್ತಿರುವ ಘಟನೆಗಳ ಕುರಿತು ಮಾಹಿತಿ ಮತ್ತು ಮುಂದಾಗುವ ವಿಚಾರಗಳ ಕುರಿತು ವಿಶ್ಲೇಷಣೆ ಒದಗಿಸುವ ಮೂಲಕ, ದಿಗಂತರ ನಮ್ಮ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಅವಲಂಬಿಸಿರುವ ಬಾಹ್ಯಾಕಾಶ ಆಸ್ತಿಗಳನ್ನು ರಕ್ಷಿಸಲು ನೆರವಾಗುತ್ತದೆ.

ಇದು ನಮ್ಮ ದೇಶದ ಸ್ವಾವಲಂಬನೆ, ನಮ್ಮ ವ್ಯವಸ್ಥೆಗಳ ಮೇಲಿನ ದಾಳಿಯಿಂದ ರಕ್ಷಣೆ ಮತ್ತು ನಿರ್ಧಾರ ಕೈಗೊಳ್ಳುವ ಆತ್ಮವಿಶ್ವಾಸವನ್ನು ಒದಗಿಸುತ್ತದೆ. ಇವೆಲ್ಲ ಜೊತೆಯಾಗಿ, ಸಂಭಾವ್ಯ ದಾಳಿಕೋರರಿಗೆ ಭಾರತದ ಮೇಲೆ ದಾಳಿ ನಡೆಸುವುದು ಅತ್ಯಂತ ಅಪಾಯಕಾರಿ ಎಂಬ ಎಚ್ಚರಿಕೆ ರವಾನಿಸುತ್ತವೆ.

ಮುಂದಿನ ಯುದ್ಧಗಳು ಭೂಮಿಯಲ್ಲಿ ಸ್ಫೋಟಗಳ ಮೂಲಕ ಆರಂಭಗೊಳ್ಳುವ ಸಾಧ್ಯತೆಗಳಿಲ್ಲ. ಬದಲಿಗೆ, ಅವು ಬಾಹ್ಯಾಕಾಶದಲ್ಲಿ ಲಭಿಸುವ ಸಂಕೇತಗಳ ಮೂಲಕ ಆರಂಭಗೊಳ್ಳಬಹುದು. ಕ್ಷಿಪಣಿಗಳು ಹೆಚ್ಚು ಹೆಚ್ಚು ವೇಗ ಪಡೆಯುತ್ತಿದ್ದು, ಬಾಹ್ಯಾಕಾಶ ಒಂದು ಯುದ್ಧಭೂಮಿಯಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತ ಬಾಹ್ಯಾಕಾಶ ಗುಪ್ತಚರ ಸಾಮರ್ಥ್ಯವನ್ನು ಹೊಂದುವುದು ಕಾರ್ಯತಂತ್ರದ ಅನಿವಾರ್ಯತೆಯಾಗಿದೆ. ದಿಗಂತರದಂತಹ ಕಂಪೆನಿಗಳು ಸ್ವದೇಶೀ ಸಾಮರ್ಥ್ಯಗಳನ್ನು ನಿರ್ಮಿಸುವುದರಿಂದ, ಸೆಕೆಂಡುಗಳ ಸಮಯ ಉಳಿದಿರುವಾಗಲೂ ಭಾರತಕ್ಕೆ ಏನಾಗುತ್ತಿದೆ ಎನ್ನುವುದನ್ನು ಗಮನಿಸಲು ಕಣ್ಣುಗಳು ಮತ್ತು ಪ್ರತಿಕ್ರಿಯಿಸಲು ವೇಗ ಲಭಿಸುವಂತೆ ಮಾಡುತ್ತಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X