Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತದಲ್ಲಿ ಚಲಾವಣೆಯಲ್ಲಿತ್ತು 10,000...

ಭಾರತದಲ್ಲಿ ಚಲಾವಣೆಯಲ್ಲಿತ್ತು 10,000 ರೂ.ನೋಟು!

ಅದನ್ನು ರದ್ದುಗೊಳಿಸಿದ್ದೇಕೆ ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ28 Sept 2024 5:15 PM IST
share
ಭಾರತದಲ್ಲಿ ಚಲಾವಣೆಯಲ್ಲಿತ್ತು 10,000 ರೂ.ನೋಟು!

ಹೊಸದಿಲ್ಲಿ: 2016ರಲ್ಲಿ ನೋಟು ನಿಷೇಧದ ಬಳಿಕ ಪರಿಚಯಿಸಲಾಗಿದ್ದ 2,000 ರೂ.ನೋಟು (ಈಗ ಚಲಾವಣೆಯಿಂದ ಹಿಂದೆಗೆದುಕೊಳ್ಳಲಾಗಿದೆ) ಭಾರತದ ಅತ್ಯಂತ ಹೆಚ್ಚಿನ ಮುಖಬೆಲೆಯ ನೋಟು ಎಂದು ಹೆಚ್ಚಿನವರು ಇಂದು ಭಾವಿಸಿದ್ದಾರೆ.

ಆದರೆ 5,000 ರೂ. ಮತ್ತು 10,000 ರೂ.ನಂತಹ ಇನ್ನೂ ಹೆಚ್ಚಿನ ಮುಖಬೆಲೆಗಳ ನೋಟುಗಳು ಭಾರತದ ವಿತ್ತೀಯ ವ್ಯವಸ್ಥೆಯ ಭಾಗವಾಗಿದ್ದ ಕಾಲವೊಂದಿತ್ತು. ದೇಶದ ಆರ್ಥಿಕ ಇತಿಹಾಸದಲ್ಲಿ ಕಡಿಮೆ ತಿಳಿದಿರುವ ಈ ಅಧ್ಯಾಯವು ಭಾರತದ ನೋಟುಗಳ ವಿಕಸನವನ್ನು ಎತ್ತಿ ತೋರಿಸುತ್ತದೆ.

10,000 ರೂ.ನೋಟಿನ ಸಂಕ್ಷಿಪ್ತ ಇತಿಹಾಸ:

ಭಾರತದ 10,000 ರೂ.ನೋಟು ಸ್ವಾತಂತ್ರ್ಯಪೂರ್ವ ಯುಗದಲ್ಲಿ ತನ್ನ ಮೂಲವನ್ನು ಹೊಂದಿದೆ.

1938ರಲ್ಲಿ ಆರ್‌ಬಿಐ ಮೊದಲ 10,000 ರೂ.ನೋಟನ್ನು ವಿತರಿಸಿದ್ದು,ಇದು ದೇಶದ ಇತಿಹಾಸದಲ್ಲಿ ಚಲಾವಣೆಗೊಂಡ ಅತ್ಯಂತ ಹೆಚ್ಚಿನ ಮುಖಬೆಲೆಯಾಗಿತ್ತು. ಇದನ್ನು ಮುಖ್ಯವಾಗಿ ಉದ್ಯಮಿಗಳು ಮತ್ತು ವ್ಯಾಪಾರಿಗಳು ಹೆಚ್ಚಿನ ಮೌಲ್ಯದ ವಹಿವಾಟುಗಳಿಗಾಗಿ ಬಳಸುತ್ತಿದ್ದರು ಮತ್ತು ಸಾಮಾನ್ಯ ನಾಗರಿಕರು ಇದನ್ನು ಬಳಸುವುದು ಅಪರೂಪವಾಗಿತ್ತು.

ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಉತ್ತುಂಗಕ್ಕೇರಿದ್ದ ಅಕ್ರಮ ದಾಸ್ತಾನು ಮತ್ತು ಕಾಳಸಂತೆ ಚಟುವಟಿಕೆಗಳನ್ನು ನಿಗ್ರಹಿಸಲು 10,000 ರೂ.ನೋಟನ್ನು ರದ್ದುಗೊಳಿಸಲು ಬ್ರಿಟಿಷ್ ಸರಕಾರವು 1946,ಜನವರಿಯಲ್ಲಿ ನಿರ್ಧರಿಸಿತ್ತು. ಆದರೆ 1954ರಲ್ಲಿ 10,000 ರೂ.ನೋಟನ್ನು ಮರುಪರಿಚಯಿಸಲಾಗಿತ್ತು ಮತ್ತು 5,000 ರೂ.ನಂತಹ ಇತರ ದೊಡ್ಡ ಮುಖಬೆಲೆಗಳ ಜೊತೆಗೆ ಚಲಾವಣೆಯಲ್ಲಿ ಮುಂದುವರಿದಿತ್ತು.

ಇದನ್ನು ರದ್ದುಗೊಳಿಸಿದ್ದೇಕೆ?

10,000 ರೂ.ನೋಟಿನ ಭವಿಷ್ಯವು 1978ರಲ್ಲಿ ಇನ್ನೊಂದು ತಿರುವನ್ನು ಪಡೆದುಕೊಂಡಿತ್ತು. ಸ್ವತಂತ್ರ ಭಾರತದ ಸರಕಾರವು 5,000 ರೂ.ನೋಟಿನ ಜೊತೆಗೆ 10,000 ರೂ.ನೋಟನ್ನು ಮತ್ತೆ ನಿಷೇಧಿಸಲು ನಿರ್ಧರಿಸಿತ್ತು.

ಆ ಸಮಯದಲ್ಲಿ ಈ ಹೆಚ್ಚಿನ ಮೌಲ್ಯದ ನೋಟುಗಳು ಜನಸಾಮಾನ್ಯರಿಂದ ವ್ಯಾಪಕವಾಗಿ ಬಳಕೆಯಲ್ಲಿರಲಿಲ್ಲ. ಹೆಚ್ಚಾಗಿ ವ್ಯಾಪಾರದಲ್ಲಿ ದೊಡ್ಡ ಮೊತ್ತದ ವಹಿವಾಟುಗಳಿಗೆ ಅಥವಾ ಹೆಚ್ಚು ಕಳವಳಕಾರಿಯಾಗಿ ಕಾಳಸಂತೆ ವ್ಯವಹಾರಗಳಲ್ಲಿ ಬಳಕೆಯಾಗುತ್ತಿದ್ದವು.

ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಸರಕಾರದ ಕ್ರಮವು ಹಣಕಾಸು ಅವ್ಯವಹಾರಗಳನ್ನು ಮತ್ತು ದೊಡ್ಡ ಮೊತ್ತಗಳ ಅಕ್ರಮ ಬಳಕೆಯನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿತ್ತು.

ಈ ನೋಟು ನಿಷೇಧದ ಪರಿಣಾಮವು ತುಲನಾತ್ಮಕವಾಗಿ ಗೌಣವಾಗಿತ್ತು. ಆರ್‌ಬಿಐ ದತ್ತಾಂಶಗಳಂತೆ 1976,ಮಾ.31ಕ್ಕೆ ಇದ್ದಂತೆ ಚಲಾವಣೆಯಲ್ಲಿದ್ದ ಒಟ್ಟು ನಗದು ಮೊತ್ತವು 7,144 ಕೋಟಿ ರೂ.ಆಗಿತ್ತು. ಈ ಪೈಕಿ 1,000 ರೂ.ನೋಟುಗಳ ಮೌಲ್ಯ 87.91 ಕೋಟಿ ರೂ.ಆಗಿದ್ದು,ಇದು ಚಲಾವಣೆಯಲ್ಲಿದ್ದ ಒಟ್ಟು ನಗದಿನ ಕೇವಲ ಶೇ.1.2 ಆಗಿತ್ತು. 5,000 ರೂ.ನೋಟುಗಳ ಮೌಲ್ಯ 22.90 ಕೋಟಿ ರೂ.ಆಗಿತ್ತು. 10,000 ರೂ.ನೋಟುಗಳ ಸಂಖ್ಯೆ ಕೇವಲ 1,260 ಆಗಿದ್ದು,ಒಟ್ಟು ಮೌಲ್ಯ 1.26 ಕೋಟಿ ರೂ.ಆಗಿತ್ತು. ಒಟ್ಟಾರೆಯಾಗಿ ಹೆಚ್ಚಿನ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ ಚಲಾವಣೆಯಲ್ಲಿದ್ದ ಒಟ್ಟು ಕರೆನ್ಸಿಯ ಶೇ.2ಕ್ಕೂ ಕಡಿಮೆಯಿತ್ತು.

5,000 ರೂ. ಮತ್ತು 10,000 ರೂ.ನೋಟುಗಳು ಈಗ ಭಾರತದ ಆರ್ಥಿಕ ಚರಿತ್ರೆಯ ಅವಶೇಷಗಳಾಗಿದ್ದರೂ ಅವುಗಳ ಇತಿಹಾಸವು ದೇಶದ ವಿತ್ತೀಯ ವಿಕಸನದ ಆಕರ್ಷಕ ಚಿತ್ರಣವನ್ನು ನೀಡುತ್ತಿವೆ.

ಕೃಪೆ: indiatoday.in

share
ವಾರ್ತಾಭಾರತಿ
ವಾರ್ತಾಭಾರತಿ
Next Story
X