Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಾಲ್ಕು ವಾಪಿಟಿಯಿಂದ ರಫೇಲ್ ವರೆಗೆ:...

ನಾಲ್ಕು ವಾಪಿಟಿಯಿಂದ ರಫೇಲ್ ವರೆಗೆ: ಭಾರತೀಯ ವಾಯುಪಡೆಯ ಅದಮ್ಯ ಪಯಣ

►1947ರಲ್ಲಿ ಆ ಒಂದು ಫ್ಲೈಟ್ ಹಾರದೇ ಇದ್ದಿದ್ದರೆ ಕಾಶ್ಮೀರ ಭಾರತದಲ್ಲಿ ಇರುತ್ತಿರಲಿಲ್ಲ ► ಎಣ್ಣೆದೀಪದ ಬೆಳಕಲ್ಲಿ ವಿಮಾನ ಇಳಿಸಿ ಪೂಂಚ್ ರಕ್ಷಿಸಿದ ವೀರ ಸೇನಾನಿ ►ಆ ದಿನಗಳು

ವಾರ್ತಾಭಾರತಿವಾರ್ತಾಭಾರತಿ8 Oct 2026 10:49 PM IST
share
ನಾಲ್ಕು ವಾಪಿಟಿಯಿಂದ ರಫೇಲ್ ವರೆಗೆ: ಭಾರತೀಯ ವಾಯುಪಡೆಯ ಅದಮ್ಯ ಪಯಣ

1932ರ ಅಕ್ಟೋಬರ್ 8.

ಕೇಂದ್ರ ಶಾಸಕಾಂಗ ಸಭೆಯಲ್ಲಿ ‘ಇಂಡಿಯನ್ ಏರ್ ಫೋರ್ಸ್ ಆಕ್ಟ್’ ಅಧಿಕೃತವಾಗಿ ಜಾರಿಗೆ ಬಂತು. ಭಾರತೀಯ ವಾಯುಪಡೆ ಎಂಬ ಸಂಸ್ಥೆ ಅಂದು ಜನ್ಮತಳೆಯಿತು.

ಇಂದು ಅದೇ ವಾಯುಪಡೆ ವಿಶ್ವದ ನಾಲ್ಕನೇ ಅತ್ಯಂತ ಬಲಿಷ್ಠ ವಾಯುಶಕ್ತಿಯಾಗಿ ಗರ್ಜಿಸುತ್ತಿದೆ. ಸುಮಾರು 1,70,000ಕ್ಕೂ ಹೆಚ್ಚು ಸೈನಿಕರು, 1,500ಕ್ಕೂ ಅಧಿಕ ಯುದ್ಧ ವಿಮಾನಗಳು ಮತ್ತು ಅತ್ಯಾಧುನಿಕ ರಫೇಲ್, ಸುಖೋಯ್-30 ಹಾಗೂ ಸ್ವದೇಶಿ ತೇಜಸ್ ಯುದ್ಧವಿಮಾನಗಳೊಂದಿಗೆ ಭಾರತದ ಆಕಾಶಕ್ಕೆ ಅಭೇದ್ಯ ಉಕ್ಕಿನ ಕವಚವಾಗಿ ನಿಂತಿದೆ.

ಕಾರ್ಗಿಲ್ನ ಕಡಿದಾದ ಶಿಖರಗಳಿಂದ ಹಿಡಿದು ಬಾಲಾಕೋಟ್ ನ ದಾಳಿಯವರೆಗೂ, ಯುದ್ಧವಿರಲಿ ಅಥವಾ ಸಂಕಷ್ಟದ ಸಂದರ್ಭದ ರಕ್ಷಣಾ ಕಾರ್ಯಾಚರಣೆಯೇ ಇರಲಿ, ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿ ದೇಶದ ಜನರಲ್ಲಿ ಸುರಕ್ಷತೆಯ ಭರವಸೆ ಮೂಡಿಸುವ ಅದಮ್ಯ ಶಕ್ತಿ ನಮ್ಮ ಭಾರತೀಯ ವಾಯುಪಡೆ.

ಆದರೆ ಈ ಮಹಾಶಕ್ತಿ ನೆಲದ ಮೇಲೆ ಕಾರ್ಯರೂಪಕ್ಕೆ ಬಂದಿದ್ದು ಮಾತ್ರ ಅಂದು ಅಕ್ಟೋಬರ್ನಲ್ಲಲ್ಲ; ಮತ್ತೆ ಆರು ತಿಂಗಳ ನಂತರ—1933ರ ಎಪ್ರಿಲ್ 1ರಂದು, ಕರಾಚಿಯ ಡ್ರಿಗ್ ರೋಡ್ ವಾಯುನೆಲೆಯಲ್ಲಿ.

ಅಂದು ಅಲ್ಲಿ ಬ್ರಿಟನ್ ನ ಕ್ರಾನ್‌ ವೆಲ್ ಕಾಲೇಜಿನಲ್ಲಿ ಕಠಿಣ ತರಬೇತಿ ಮುಗಿಸಿ ಬಂದಿದ್ದ ಕೇವಲ ಆರು ಜನ ಭಾರತೀಯ ಯುವ ಅಧಿಕಾರಿಗಳು ಮತ್ತು ಹತ್ತೊಂಬತ್ತು ಮಂದಿ ತಾಂತ್ರಿಕ ಸಿಬ್ಬಂದಿ ಗಂಭೀರ ಮುಖಭಾವದೊಂದಿಗೆ ನಿಂತಿದ್ದರು.

ಅವರ ಮುಂದಿದ್ದದ್ದು ಯುದ್ಧಸನ್ನದ್ಧತೆಯ ಅತ್ಯಾಧುನಿಕ ವಿಮಾನಗಳಲ್ಲ; ಬ್ರಿಟಿಷರು ನೀಡಿದ್ದ ಕೇವಲ ನಾಲ್ಕೇ ನಾಲ್ಕು ಹಳೆಯ ‘Westland Wapiti Mark IIA’ ಬೈಪ್ಲೇನ್ ವಿಮಾನಗಳು.

ಅಂದು ಬ್ರಿಟಿಷ್ ಸಾಮ್ರಾಜ್ಯದ ಅಧೀನದಲ್ಲಿ ಅತ್ಯಂತ ಪುಟ್ಟದಾಗಿ ಆರಂಭವಾದ ಆ ಮೊದಲ ಸ್ಕ್ವಾಡ್ರನ್ ನ ಹೆಸರು: ‘ಎ’ ಫ್ಲೈಟ್ ಸ್ಕ್ವಾಡ್ರನ್.

ಜಗತ್ತಿನ ವಾಯುಪಡೆಗಳಲ್ಲೇ ಅತ್ಯಂತ ಬಲಿಷ್ಠ ನಾಲ್ಕನೇ ಶಕ್ತಿಯಾಗಿ, ಸೂಪರ್ ಸಾನಿಕ್ ಜೆಟ್ ಗಳು ಮತ್ತು ರಫೇಲ್ ಗಳನ್ನು ಹಾರಿಸುತ್ತಾ ಆಕಾಶದಲ್ಲಿ ಗುಡುಗುತ್ತಿರುವ ಇಂದಿನ ಭಾರತೀಯ ವಾಯುಪಡೆಯ ಆರಂಭ ಎಷ್ಟೊಂದು ಸವಾಲಿನದ್ದಾಗಿತ್ತು ಎಂದು ಹಿಂದಿರುಗಿ ನೋಡಿದರೆ ನಿಜಕ್ಕೂ ಮೈಜುಮ್ಮೆನ್ನುತ್ತದೆ. ನಮ್ಮ ವಾಯುಪಡೆಯ ಸ್ಥಾಪನೆ ಸುಲಭವಾಗಿರಲಿಲ್ಲ. ಅದರ ಹಿಂದೆ ಜನಾಂಗೀಯ ತಾರತಮ್ಯದ ವಿರುದ್ಧ ನಡೆದ ದೀರ್ಘ ರಾಜಕೀಯ ಹೋರಾಟವಿತ್ತು.

ಬ್ರಿಟಿಷ್ ಆಡಳಿತಗಾರರಿಗೆ ಭಾರತೀಯರ ಸಾಮರ್ಥ್ಯದ ಬಗ್ಗೆ ಕನಿಷ್ಠ ನಂಬಿಕೆಯೂ ಇರಲಿಲ್ಲ. "ತಾಂತ್ರಿಕ ಜ್ಞಾನ, ಯಾಂತ್ರಿಕ ಸಂಕೀರ್ಣತೆ ಮತ್ತು ಯುದ್ಧ ವಿಮಾನಗಳನ್ನು ಚಲಾಯಿಸುವ ಕೌಶಲ್ಯ ಭಾರತೀಯರಿಗೆ ಇರಲು ಸಾಧ್ಯವೇ ಇಲ್ಲ; ಅವರಿಗೆ ನೆಲದ ಮೇಲೆ ಕಾಲಾಳು ಸೈನಿಕರಾಗಿ ಹೋರಾಡಲಷ್ಟೇ ಯೋಗ್ಯತೆ ಇದೆ" ಎಂಬುದು ಬ್ರಿಟಿಷ್ ಕಮಾಂಡರ್ ಗಳ ಅಹಂಕಾರದ ವಾದವಾಗಿತ್ತು.

ಇದನ್ನು ಭಾರತದ ಅಂದಿನ ರಾಷ್ಟ್ರೀಯ ನಾಯಕರು ಸಾರಾಸಗಟಾಗಿ ವಿರೋಧಿಸಿದರು. ಭಾರತೀಯ ಸೈನ್ಯವನ್ನು ಭಾರತೀಕರಣ ಮಾಡಲೇಬೇಕು ಎಂದು ಕೇಂದ್ರ ಶಾಸಕಾಂಗ ಸಭೆಯಲ್ಲಿ ಪಟ್ಟುಹಿಡಿದರು. ಆ ಹೋರಾಟದ ಫಲವಾಗಿ 1925ರಲ್ಲಿ ಸರ್ ಆಂಡ್ರ್ಯೂ ಸ್ಕೀನ್ ನೇತೃತ್ವದಲ್ಲಿ ‘ಸ್ಕೀನ್ ಸಮಿತಿ’ ರಚನೆಯಾಯಿತು.

ಈ ಸಮಿತಿಯಲ್ಲಿದ್ದ ಪಂಡಿತ್ ಮೋತಿಲಾಲ್ ನೆಹರೂ ಮತ್ತು ಮುಹಮ್ಮದ್ ಅಲಿ ಜಿನ್ನಾ ಮುಂತಾದ ಮುಖಂಡರು, "ಭಾರತೀಯರಿಗಾಗಿಯೇ ಪ್ರತ್ಯೇಕ ವಾಯುಪಡೆ ಆರಂಭವಾಗಬೇಕು ಮತ್ತು ಭಾರತೀಯರನ್ನು ರಾಯಲ್ ಏರ್ ಫೋರ್ಸ್ ನ ತರಬೇತಿ ಕೇಂದ್ರವಾದ ಕ್ರಾನ್‌ ವೆಲ್‌ ಗೆ ಕಳುಹಿಸಬೇಕು" ಎಂದು ತೀವ್ರ ಒತ್ತಡ ತಂದರು. ಆ ರಾಜಕೀಯ ಒತ್ತಡಕ್ಕೆ ಮಣಿದ ಬ್ರಿಟಿಷ್ ಸರ್ಕಾರ ಕೊನೆಗೂ ಭಾರತೀಯ ವಾಯುಪಡೆಯ ಸ್ಥಾಪನೆಗೆ ಒಪ್ಪಿಗೆ ನೀಡಿತು.

1933ರ ಎಪ್ರಿಲ್ 1ರಂದು ‘ಎ’ ಫ್ಲೈಟ್ ಆರಂಭವಾದಾಗ ವಾಯುಪಡೆಯಲ್ಲಿದ್ದ ಆ ಮೊದಲ ಆರು ಜನ ಕೆಚ್ಚೆದೆಯ ಅಧಿಕಾರಿಗಳೆಂದರೆ: ಸುಬ್ಬ್ರತೊ ಮುಖರ್ಜಿ, ಎಚ್.ಸಿ. ಸರ್ಕಾರ್, ಭೂಪೇಂದ್ರ ಸಿಂಗ್, ಎ.ಬಿ. ಅವಾನ್, ಅಮರ್ಜೀತ್ ಸಿಂಗ್ ಮತ್ತು ಜೆ.ಎನ್. ಟಂಡನ್.

ಇವರಲ್ಲಿ ಸುಬ್ಬ್ರತೊ ಮುಖರ್ಜಿ ಮುಂದೆ ಸ್ವತಂತ್ರ ಭಾರತದ ಮೊದಲ ಭಾರತೀಯ ವಾಯುಪಡೆ ಮುಖ್ಯಸ್ಥರಾದರು.

ಈ ಆರಂಭಿಕ ಹಂತ ಎಷ್ಟು ಕಷ್ಟಕರವಾಗಿತ್ತೆಂದರೆ, ವಿಮಾನಗಳನ್ನು ದುರಸ್ತಿ ಮಾಡಲು ಮೂಲಸೌಕರ್ಯಗಳಿರಲಿಲ್ಲ. ಭಾರತೀಯ ತಾಂತ್ರಿಕ ಸಿಬ್ಬಂದಿಗೆ ಅಧಿಕೃತವಾಗಿ ನೀಡಲಾಗಿದ್ದ ಸೇವಾ ಶ್ರೇಣಿ ‘ಹವಾಯಿ ಸಿಪಾಯಿ’. ಸೌಲಭ್ಯಗಳ ತೀವ್ರ ಕೊರತೆಯ ನಡುವೆಯೂ ಈ ಹವಾಯಿ ಸಿಪಾಯಿಗಳು ವಿಮಾನಗಳ ನಿರ್ವಹಣೆಯಲ್ಲಿ ಸಾಟಿಯಿಲ್ಲದ ಪರಿಣತಿ ಮೆರೆದರು.

ಅಧಿಕಾರಿಗಳು ಮತ್ತು ಸಿಬ್ಬಂದಿ ನಾರ್ತ್-ವೆಸ್ಟ್ ಫ್ರಾಂಟಿಯರ್ ಪ್ರಾಂತ್ಯದ ಕಡಿದಾದ, ಅಪಾಯಕಾರಿ ಬೆಟ್ಟಗುಡ್ಡಗಳಲ್ಲಿ ಅದ್ಭುತವಾಗಿ ಹಾರಾಟ ನಡೆಸಿ ಬ್ರಿಟಿಷ್ ಕಮಾಂಡರ್ ಗಳೇ ಬೆರಗಾಗುವಂತೆ ಮಾಡಿದರು.

ಎರಡನೇ ಮಹಾಯುದ್ಧ ಬಂದಾಗ ಬರ್ಮಾದ ರಂಗಿನಲ್ಲಿ ಜಪಾನಿಗಳ ವಿರುದ್ಧ ಭಾರತೀಯ ಪೈಲಟ್ ಗಳು ತೋರಿದ ಅದ್ವಿತೀಯ ಶೌರ್ಯಕ್ಕೆ ತಲೆಬಾಗಿದ ಬ್ರಿಟಿಷ್ ಸರ್ಕಾರ, 1945ರಲ್ಲಿ ಈ ಪಡೆಗೆ ‘ರಾಯಲ್’ ಎಂಬ ಗೌರವ ಪೂರ್ವಪದ ಸೇರಿಸಿ ‘ರಾಯಲ್ ಇಂಡಿಯನ್ ಏರ್ ಫೋರ್ಸ್’ ಎಂದು ನಾಮಕರಣ ಮಾಡಿತು.

ಆದರೆ ನಿಜವಾದ ಅಗ್ನಿಪರೀಕ್ಷೆ ಎದುರಾಗಿದ್ದು 1947ರಲ್ಲಿ.

ಸ್ವಾತಂತ್ರ್ಯ ಸಿಕ್ಕ ಸಂಭ್ರಮದ ಬೆನ್ನಲ್ಲೇ ದೇಶ ವಿಭಜನೆಯ ಭೀಕರತೆ ಎದುರಾಯಿತು. ಭಾರತೀಯ ವಾಯುಪಡೆಯ ಸಂಪನ್ಮೂಲಗಳನ್ನು ಹರಿದು ಹಂಚಲಾಯಿತು. ಇದ್ದ ವಿಮಾನಗಳು, ಇಂಧನ, ನೆಲೆಗಳು ಮತ್ತು ಪೈಲಟ್ ಗಳನ್ನು ಭಾರತ ಮತ್ತು ಪಾಕಿಸ್ತಾನದ ನಡುವೆ ಪಾಲು ಮಾಡಲಾಯಿತು. ಭಾರತಕ್ಕೆ ಸಿಕ್ಕಿದ್ದು ಕೇವಲ ಏಳೂವರೆ ಯುದ್ಧ ಸ್ಕ್ವಾಡ್ರನ್ ಗಳು ಮತ್ತು ಒಂದು ಸಾರಿಗೆ ಸ್ಕ್ವಾಡ್ರನ್ ಮಾತ್ರ.

ದೇಶ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಆ ದಿನಗಳಲ್ಲಿ, ಸ್ವಾತಂತ್ರ್ಯ ಸಿಕ್ಕ ಕೇವಲ ಎರಡು ತಿಂಗಳಲ್ಲೇ, ಅಂದರೆ 1947ರ ಅಕ್ಟೋಬರ್ ಅಂತ್ಯದಲ್ಲಿ ಪಾಕಿಸ್ತಾನಿ ಬೆಂಬಲಿತ ಆಕ್ರಮಣಕಾರರು ಕಾಶ್ಮೀರದ ಮೇಲೆ ದಾಳಿ ಮಾಡಿದರು. ಶ್ರೀನಗರ ಪತನದ ಅಂಚಿನಲ್ಲಿತ್ತು. ಆ ಕ್ಷಣದಲ್ಲಿ ನವಜಾತ ಭಾರತೀಯ ವಾಯುಪಡೆ ತೋರಿದ ಸಾಹಸ ಜಗತ್ತಿನ ವಾಯುಪಡೆ ಇತಿಹಾಸದಲ್ಲೇ ಅಚ್ಚಳಿಯದ ಪುಟವಾಯಿತು.

ರನ್‌ ವೇ ಸಿದ್ಧವಿಲ್ಲದಿದ್ದರೂ, ನಕ್ಷೆಗಳಿಲ್ಲದಿದ್ದರೂ, Dakota DC-3 ಸಾರಿಗೆ ವಿಮಾನಗಳ ಮೂಲಕ 1947ರ ಅಕ್ಟೋಬರ್ 27ರ ಮುಂಜಾನೆ ಭಾರತೀಯ ಸೇನೆಯ 1ನೇ ಸಿಖ್ ರೆಜಿಮೆಂಟ್ ಪಡೆಗಳನ್ನು ಶ್ರೀನಗರಕ್ಕೆ ತಲುಪಿಸಲಾಯಿತು. ಆ ಒಂದೇ ಒಂದು ಏರ್ ಲಿಫ್ಟ್ ಇಡೀ ಕಾಶ್ಮೀರ ಕಣಿವೆ ಭಾರತದ ಕೈತಪ್ಪಿ ಹೋಗುವುದನ್ನು ಕೊನೆ ಕ್ಷಣದಲ್ಲಿ ರಕ್ಷಿಸಿತು.

ಇದೇ ಕಾಶ್ಮೀರ ಸಂಘರ್ಷದಲ್ಲಿ ಮತ್ತೊಂದು ಪವಾಡಸದೃಶ ಐತಿಹಾಸಿಕ ಘಟನೆ ನಡೆಯಿತು.

ಪೂಂಚ್ ಪ್ರದೇಶದಲ್ಲಿ ಸಾವಿರಾರು ನಾಗರಿಕರು ಮತ್ತು ಸೇನಾ ತುಕಡಿ ಶತ್ರುಗಳ ಮುತ್ತಿಗೆಗೆ ಸಿಲುಕಿ ಆಹಾರ-ಮದ್ದುಗುಂಡುಗಳಿಲ್ಲದೆ ನರಳುತ್ತಿದ್ದಾಗ, ವಿಂಗ್ ಕಮಾಂಡರ್ ಮೆಹರ್ ಸಿಂಗ್ ಎಣ್ಣೆದೀಪಗಳ ಮಂದ ಬೆಳಕಿನಲ್ಲಿ, ಗುಂಡುಗಳ ಸುರಿಮಳೆಯ ನಡುವೆ ಕಚ್ಚಾ ಮಣ್ಣಿನ ಪಟ್ಟಿಯ ಮೇಲೆ ಡಕೋಟಾ ವಿಮಾನವನ್ನು ಸುರಕ್ಷಿತವಾಗಿ ಇಳಿಸಿ ಇಡೀ ಪೂಂಚ್ ಪತನವಾಗುವುದನ್ನು ತಪ್ಪಿಸಿದರು. ಆ ನಂತರ ಲೇಹ್ ನ 11,500 ಅಡಿ ಎತ್ತರದ, ರನ್‌ ವೇಯೇ ಇಲ್ಲದ ಮರಳಿನ ನೆಲದ ಮೇಲೆಯೂ ಇತಿಹಾಸದಲ್ಲೇ ಮೊದಲ ಬಾರಿಗೆ ಡಕೋಟಾ ಇಳಿಸಿದ ಕೀರ್ತಿ ಇದೇ ದಿಗ್ಗಜ ಮೆಹರ್ ಸಿಂಗ್ ಅವರಿಗೆ ಸಲ್ಲುತ್ತದೆ.

1950ರಲ್ಲಿ ಭಾರತ ಗಣರಾಜ್ಯವಾದಾಗ ಹೆಸರಿನಲ್ಲಿದ್ದ ‘ರಾಯಲ್’ ಪದವನ್ನು ಅಧಿಕೃತವಾಗಿ ಕೈಬಿಟ್ಟು, ‘ಇಂಡಿಯನ್ ಏರ್ ಫೋರ್ಸ್’ ಎಂದು ಮರುಸ್ಥಾಪಿಸಲಾಯಿತು.

ಸ್ವತಂತ್ರ ಭಾರತದ ಮುಂದಿನ ದಿನಗಳು ಸಂಪನ್ಮೂಲಗಳ ತೀವ್ರ ಕೊರತೆಯದ್ದಾದವು.

ಶಾಲಾ-ಕಾಲೇಜುಗಳು, ಆಹಾರ ಮತ್ತು ಅಣೆಕಟ್ಟುಗಳನ್ನು ನಿರ್ಮಿಸುವುದೇ ದೇಶದ ಮೊದಲ ಆದ್ಯತೆಯಾಗಿದ್ದಾಗ, ದುಬಾರಿ ಯುದ್ಧ ವಿಮಾನಗಳನ್ನು ಖರೀದಿಸುವುದು ಕಷ್ಟಕರವಾಗಿತ್ತು. 1965ರ ಭಾರತ-ಪಾಕ್ ಯುದ್ಧದಲ್ಲಿ ಪಾಕಿಸ್ತಾನದ ಬಳಿ ಅತ್ಯಾಧುನಿಕ, ಅಮೆರಿಕ ನಿರ್ಮಿತ F-86 Sabre ಜೆಟ್ ಗಳಿದ್ದವು. ಭಾರತದ ಬಳಿ ಇದ್ದದ್ದು ಅತ್ಯಂತ ಪುಟ್ಟದಾದ, ಅಗ್ಗದ, ಬ್ರಿಟಿಷ್ ವಿನ್ಯಾಸದ Folland Gnat ವಿಮಾನಗಳು.

ಆದರೆ ಭಾರತೀಯ ಪೈಲಟ್ ಗಳು ಆ ಪುಟ್ಟ ಜ್ಞಾಟ್ ವಿಮಾನಗಳ ಅದ್ಭುತ ವೇಗ ಮತ್ತು ತಿರುವುಗಳ ಬಲದಿಂದ ಆಕಾಶದಲ್ಲಿ ಅಮೆರಿಕದ ಘಟಾನುಘಟಿ ಸೇಬರ್ ಜೆಟ್ ಗಳನ್ನು ಸಾಲುಸಾಲಾಗಿ ಹೊಡೆದುರುಳಿಸಿದರು. ಆ ಪುಟ್ಟ ವಿಮಾನಕ್ಕೆ ಯುದ್ಧರಂಗದಲ್ಲಿ ‘ಸೇಬರ್ ಸ್ಲೇಯರ್’ ಎಂಬ ಐತಿಹಾಸಿಕ ಬಿರುದು ಸಿಕ್ಕಿತು.

1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಂತೂ ಭಾರತೀಯ ವಾಯುಪಡೆ ತೋರಿದ ಪ್ರಾಬಲ್ಯ ಅಭೂತಪೂರ್ವ. ಯುದ್ಧ ಆರಂಭವಾದ ಕೇವಲ ಎರಡೇ ದಿನಗಳಲ್ಲಿ ಪೂರ್ವ ಪಾಕಿಸ್ತಾನದ ಆಕಾಶವನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ವಾಯುಪಡೆ, ಢಾಕಾದ ಗವರ್ನರ್ ಹೌಸ್ ಮೇಲೆ ನಿಖರ ರಾಕೆಟ್ ದಾಳಿ ನಡೆಸಿ ಪಾಕಿಸ್ತಾನದ ಈಸ್ಟರ್ನ್ ಕಮಾಂಡ್ ಶರಣಾಗುವಂತೆ ಮಾಡಿತು.

1999ರ ಕಾರ್ಗಿಲ್ ಯುದ್ಧದಲ್ಲಿ 18,000 ಅಡಿ ಎತ್ತರದ ಕಡಿದಾದ ಹಿಮಶಿಖರಗಳ ಮೇಲೆ ಶತ್ರುಗಳು ಬಂಕರ್ ನಿರ್ಮಿಸಿ ಕುಳಿತಾಗ, ‘ಆಪರೇಷನ್ ಸಫೇದ್ ಸಾಗರ್’ ಮೂಲಕ ಮಿರಾಜ್-2000 ವಿಮಾನಗಳಿಂದ ಲೇಸರ್ ಗೈಡೆಡ್ ಬಾಂಬ್ ಗಳನ್ನು ನಿಖರವಾಗಿ ಎಸೆದು ಯುದ್ಧದ ದಿಕ್ಕನ್ನೇ ಬದಲಿಸಿದ್ದು ಇದೇ ವಾಯುಪಡೆ.

ಕೇವಲ ಯುದ್ಧಗಳಲ್ಲಷ್ಟೇ ಅಲ್ಲ; 2013ರ ಉತ್ತರಾಖಂಡದ ಭೀಕರ ಪ್ರವಾಹದ ವೇಳೆ ವಿಶ್ವದಲ್ಲೇ ಹೆಲಿಕಾಪ್ಟರ್ ಗಳ ಮೂಲಕ ನಡೆಸಲಾದ ಅತಿ ದೊಡ್ಡ ಮಾನವೀಯ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದಾದ ‘ಆಪರೇಷನ್ ರಾಹತ್’ ನಡೆಸಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ನಾಗರಿಕರ ಪ್ರಾಣ ಉಳಿಸಿದ ಹೆಗ್ಗಳಿಕೆ ಭಾರತೀಯ ವಾಯುಪಡೆಗೆ ಸಲ್ಲುತ್ತದೆ.

1933ರಲ್ಲಿ ಕರಾಚಿಯ ನೆಲದಲ್ಲಿ ಕೇವಲ ನಾಲ್ಕು ಹಳೆಯ ವಾಪಿಟಿ ವಿಮಾನಗಳು, ಆರು ಜನ ಅಧಿಕಾರಿಗಳು ಮತ್ತು ಹತ್ತೊಂಬತ್ತು ಮಂದಿ ಹವಾಯಿ ಸಿಪಾಯಿಗಳಿಂದ ಶುರುವಾದ ಆ ನಿಸ್ಸಹಾಯಕ ಪಯಣ, ಇಂದು ಲಡಾಖ್ ನ ಸಿಯಾಚಿನ್ ಗ್ಲೇಸಿಯರ್ ನಿಂದ ಕನ್ಯಾಕುಮಾರಿಯ ಕಡಲತೀರದವರೆಗೂ ದೇಶದ ಸಾರ್ವಭೌಮತೆಯನ್ನು ಕಾಯುವ ಉಕ್ಕಿನ ರಕ್ಷಣಾ ಕವಚವಾಗಿ ಬೆಳೆದು ನಿಂತಿದೆ.

ಭಗವದ್ಗೀತೆಯ ಹನ್ನೊಂದನೇ ಅಧ್ಯಾಯದಿಂದ ಆಯ್ದುಕೊಂಡ ‘ನಭಃ ಸ್ಪೃಶಂ ದೀಪ್ತಂ’ ಅಂದರೆ ಆಕಾಶವನ್ನು ಮುಟ್ಟುವಂತಹ ಪ್ರಖರ ತೇಜಸ್ಸು ಎಂಬ ಧ್ಯೇಯವಾಕ್ಯಕ್ಕೆ ತಕ್ಕಂತೆ, ಭಾರತೀಯ ವಾಯುಪಡೆಯ ಇತಿಹಾಸವು ಸಂಪನ್ಮೂಲಗಳ ಅಭಾವದ ನಡುವೆಯೂ ಅದಮ್ಯ ಇಚ್ಛಾಶಕ್ತಿಯಿಂದ ಕಷ್ಟಗಳನ್ನು ಮೆಟ್ಟಿ ನಿಂತು ಅದ್ಭುತವಾಗಿ ಬೆಳೆದ ಹೆಮ್ಮೆಯ ಇತಿಹಾಸ.

Tags

Indian Air Force
share
ವಾರ್ತಾಭಾರತಿ
ವಾರ್ತಾಭಾರತಿ
Next Story
X