ಭಾರತದ ಅತಿವೇಗದ ಮೆಟ್ರೋ ಲೋಕಾರ್ಪಣೆ | ಇದರ ವಿಶೇಷತೆಗಳೇನು?

Photo Credit : PTI
ಪ್ರಧಾನಿ ನರೇಂದ್ರ ಮೋದಿ ರವಿವಾರ ಲೋಕಾರ್ಪಣೆ ಮಾಡಿರುವ 82 ಕಿಮೀ ದಿಲ್ಲಿ-ಮೀರತ್ ರ್ಯಾಪಿಡ್ ರೈಲ್ವೆ ವಿಶೇಷತೆಗಳೇನು? ಇಲ್ಲಿದೆ ವಿವರ
ಪ್ರಧಾನಿ ನರೇಂದ್ರ ಮೋದಿ ಮೀರತ್ ನ ಮೆಟ್ರೋ ಸೇವೆಗೆ ಚಾಲನೆ ನೀಡಿದ್ದು, 82 ಕಿಮೀ ದಿಲ್ಲಿ-ಮೀರತ್ ರ್ಯಾಪಿಡ್ ರೈಲ್ವೆ ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಅರ್ಪಿಸಿದ್ದಾರೆ. ಗಂಟೆಗೆ 120 ಕಿ.ಮೀ ವೇಗದೊಂದಿಗೆ ಚಲಿಸುವ ಮೀರತ್ ಮೆಟ್ರೋ ಭಾರತದ ಅತ್ಯಂತ ವೇಗದ ರೈಲ್ವೇ ವ್ಯವಸ್ಥೆಯಾಗಿದೆ. ಈ ಸಂಯೋಜಿತ ಜಾಲವು ದೆಹಲಿ ಮತ್ತು ಮೀರತ್ ನಡುವಿನ ಪ್ರಯಾಣದ ಸಮಯವನ್ನು ಸುಮಾರು 55 ನಿಮಿಷಗಳಿಗೆ ಇಳಿಸುವ ನಿರೀಕ್ಷೆ ಹೊಂದಿದೆ.
ಶತಾಬ್ದಿ ನಗರ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೀರತ್ ಮೆಟ್ರೋ ಮತ್ತು ನಮೋ ಭಾರತ್ ರೈಲು ಎರಡನ್ನೂ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಮೆಟ್ರೋ ಉದ್ಘಾಟನೆಯೊಂದಿಗೆ ಅವರು ನಮೋ ಭಾರತ್ ರ್ಯಾಪಿಡ್ ರೈಲು ಕಾರಿಡಾರ್ ಅನ್ನು ದೇಶಕ್ಕೆ ಸಮರ್ಪಿಸಲಾಗಿದೆ ಎಂದು ಘೋಷಿಸಿದರು. ಭಾರತದ ನಗರ ಸಾರಿಗೆ ವ್ಯವಸ್ಥೆಯಲ್ಲಿ ಇದೊಂದು ಮೈಲಿಗಲ್ಲಾಗಿದೆ. ಅತ್ಯಾಧುನಿಕ ವೇಗ ಮತ್ತು ಸಂಪರ್ಕದೊಂದಿಗೆ ಈ ಯೋಜನೆಯು ದಿಲ್ಲಿ, ಗಾಝಿಯಾಬಾದ್ ಮತ್ತು ಮೀರತ್ ನಡುವಿನ ಪ್ರಯಾಣವನ್ನು ಕಡಿಮೆ ಮಾಡಲು ಸಜ್ಜಾಗಿದೆ.
📍 ಪ್ರಮುಖ ಅಂಶಗಳು
ಭಾರತದ ಅತಿವೇಗದ ಮೆಟ್ರೋ:
► ಕಾರ್ಯಾಚರಣೆಯ ವೇಗ: 120 ಕಿ.ಮೀ. ವಿನ್ಯಾಸ ವೇಗ ಗಂಟೆಗೆ 135 ಕಿಮೀ.
► ಕಡಿಮೆಯಾದ ಪ್ರಯಾಣ ಸಮಯ: 55 ನಿಮಿಷಗಳಲ್ಲಿ ದಿಲ್ಲಿ-ಮೀರತ್ ನಡುವೆ ಪ್ರಯಾಣಿಸಬಹುದಾಗಿದೆ.
► ಪ್ರಾಜೆಕ್ಟ್ ವೇಳಾಪಟ್ಟಿ: 2019ರಲ್ಲಿ ಯೋಜನೆಗೆ ಶಿಲಾನ್ಯಾಸವಾಗಿ 2025 ಜನವರಿಯಲ್ಲಿ ಪ್ರಾಯೋಗಿಕವಾಗಿ ಚಾಲನೆ ನಡೆಸಿತ್ತು. 2026ರಲ್ಲಿ ಇದೀಗ ಪೂರ್ಣ ಪ್ರಮಾಣದ ಕ್ಯಾರಿಡಾರ್ ಸಿದ್ಧವಾಗಿದೆ
► ಸಂಯೋಜಿತ ಜಾಲ: ಮೀರತ್ ಮೆಟ್ರೋ ನಮೋ ಭಾರತ್ ರೈಲುಗಳೊಂದಿಗೆ ಹಳಿಗಳನ್ನು ಹಂಚಿಕೊಳ್ಳುತ್ತದೆ. ಹೀಗಾಗಿ ತಡೆರಹಿತ ಬದಲಾವಣೆಗೆ ಅನುವು ಮಾಡಿಕೊಡುತ್ತದೆ.
📍 ಕಾರಿಡಾರ್ ವಿವರಗಳು
ದಿಲ್ಲಿ-ಮೀರತ್ ನಮೋ ಭಾರತ್ ಆರ್ಆರ್ಟಿಎಸ್
ಒಟ್ಟು ಉದ್ದ: 82.15 ಕಿಮೀ
ಸಮರ್ಪಿತ ವಿಭಾಗಗಳು:
► 5 ಕಿಮೀ (ಸರಾಯಿ ಕಾಲೇ ಖಾನ್- ನ್ಯೂ ಅಶೋಕ್ ನಗರ್, ದಿಲ್ಲಿ)
► 21 ಕಿಮೀ (ಮೀರತ್ ದಕ್ಷಿಣ- ಮೋದಿಪುರಂ, ಉತ್ತರಪ್ರದೇಶ)
ಮೀರತ್ ಮೆಟ್ರೋ:
► ಉದ್ದ: 23 ಕಿಮೀ (16 ಕಿಮೀ ಇಲವೇಟೆಡ್, 7 ಕಿಮೀ ಸುರಂಗ ಮಾರ್ಗ)
►13 ನಿಲ್ದಾಣಗಳು: 9 ಇಲವೇಟೆಡ್, 3 ಭೂಗತ ಸುರಂಗ, 1 ಅಟ್-ಗ್ರೇಡ್ (ಮೋದಿಪುರಂ ಡಿಪೊ)
► ನಮೋ ಭಾರತ್ ಜೊತೆಗೆ ನಿಲ್ದಾಣಗಳ ಹಂಚಿಕೆ: ಮೀರತ್ ದಕ್ಷಿಣ, ಶತಾಬ್ದಿ ನಗರ, ಬೇಗುಂಪುಲ್, ಮೋದಿಪುರಂ
📍 ಸಮಯ & ವೇಳಾಪಟ್ಟಿ:
► ನಿಬಿಡ ಗಂಟೆಗಳು: ಪ್ರತಿ 5–10 ನಿಮಿಷಗಳಿಗೊಮ್ಮೆ
► ನಿಬಿಡವಲ್ಲದ ಗಂಟೆಗಳು: ಪ್ರತಿ 10–15 ನಿಮಿಷಗಳಿಗೊಮ್ಮೆ
► ಕಾರ್ಯಾಚರಣೆಯ ಸಮಯಗಳು:
► ವಾರದ ದಿನಗಳು ಮತ್ತು ಶನಿವಾರಗಳು: ಬೆಳಿಗ್ಗೆ 6:00 - ರಾತ್ರಿ 10:00
► ರವಿವಾರಗಳು: ಬೆಳಿಗ್ಗೆ 8:00 - ರಾತ್ರಿ 10:00
📍 ಪ್ರಯಾಣಿಕರ ಸೌಲಭ್ಯಗಳು:
ರೈಲಿನ ಸಂಯೋಜನೆ: 3 ಬೋಗಿಗಳ ಸೆಟ್ಗಳು, ಸಾಮರ್ಥ್ಯ 700ಕ್ಕೂ ಅಧಿಕ ಪ್ರಯಾಣಿಕರು
ಆರಾಮ ಫೀಚರ್ ಗಳು: ಏರ್ ಕಂಡೀಷನಿಂಗ್, ಕುಷನ್ಡ್ ಸೀಟ್ ಗಳು, ಲಗೇಜ್ ರ್ಯಾಕ್ ಗಳು
ಸುರಕ್ಷೆ & ತಂತ್ರಜ್ಞಾನ: ಸಿಸಿಟಿವಿ, ತುರ್ತು ಅಲಾರಂಗಳು, ಅಗ್ನಿ ನಿರೋಧಕಗಳು, ಪ್ಲಾಟ್ಫಾರ್ಮ್ ಸ್ಕ್ರೀನ್ ಬಾಗಿಲುಗಳು
ಪ್ರವೇಶ: ರಿಸರ್ವಡ್ ಸೀಟಿಂಗ್, ವೀಲ್ಚೇರ್ ಜಾಗಗಳು, ವೈದ್ಯಕೀಯ ಸ್ಟ್ರೆಚರ್ ಸೌಲಭ್ಯ, ಜಾಗವಿರುವ ಲಿಫ್ಟ್ಗಳು
ವಿನ್ಯಾಸ: ಹೊರಾಂಗಣ ಹಸಿರು, ನೀಲಿ ಮತ್ತು ಕಿತ್ತಳೆ ಬಣ್ಣ
📍 ನಮೋ ಭಾರತ್ ವರ್ಸಸ್ ಮೀರತ್ ಮೆಟ್ರೋ
ವೈಶಿಷ್ಟ್ಯ ನಮೋ ಭಾರತ್ ಮೀರತ್ ಮೆಟ್ರೋ
ಉದ್ದೇಶ ಪ್ರಾದೇಶಿಕ ಪ್ರಯಾಣ ನಗರಗಳ ನಡುವೆ ಪ್ರಯಾಣ
ವೇಗ ಗಂಟೆಗೆ 180/ಕಿಮೀ ಗಂಟೆಗೆ 135/ಕಿಮೀ
ಕಾರ್ಯಾಚರಣೆ ವೇಗ ಗಂಟೆಗೆ 60/ಕಿಮೀ ಗಂಟೆಗೆ 120/ಕಿಮೀ
ಸರಾಸರಿ ವೇಗ ಗಂಟೆಗೆ 90/ಕಿಮೀ ಗಂಟೆಗೆ 60/ಕಿಮೀ
ವ್ಯಾಪ್ತಿ ದೆಹಲಿ-ಗಾಜಿಯಾಬಾದ್- ಮೀರತ್ ಮೀರತ್ ನಗರ (ದಕ್ಷಿಣ-ಮೋದಿಪುರಂ)
📍 ಏನು ಬದಲಾಗಲಿದೆ?
ಸಂಪರ್ಕ: ದಿಲ್ಲಿ, ಗಾಝಿಯಾಬಾದ್, ನೋಯ್ಡಾ, ಮೀರತ್, ಗುರುಗ್ರಾಮ ಗಳನ್ನು ಲಿಂಕ್ ಮಾಡುತ್ತದೆ
ನಿಬಿಡ ಅವಧಿ: ರಸ್ತೆ ಸಾರಿಗೆ ಕಡಿಮೆ ಮಾಡುವ ನಿರೀಕ್ಷೆ
ಆಧುನಿಕ ಪ್ರಯಾಣದ ಅನುಭವ: ಎರಡೂ ಸೇವೆಗಳಿಗೆ ಒಂದೇ ಟಿಕೆಟ್, ವೇಗದ ಪ್ರಯಾಣ, ಆರಾಮದಾಯಕ ಪ್ರಯಾಣ






