AI ಇನ್ಫ್ಲೂಯೆನ್ಸರ್ ಗಳಿಗೆ Instagram ಶಾಕ್; AI ಲೇಬಲ್ ಇಲ್ಲದಿದ್ದರೆ ರೀಚ್ ಕಟ್!

Photo Credit : Instagram
AI-ರಚಿತ ಪ್ರೊಫೈಲ್ ಗಳು ತಮ್ಮ AI ವಿವರ ನೀಡದೆ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುವ ಸಂದರ್ಭದಲ್ಲಿ ಅವರ ರೀಚ್ ಅನ್ನು ಮಿತಿಗೊಳಿಸಲು ಪ್ರಾರಂಬಿಸುವುದಾಗಿ ವೇದಿಕೆ ಹೇಳಿದೆ.
ನಿಜ ವ್ಯಕ್ತಿಗಳಂತೆ ಇನ್ಸ್ಟಾಗ್ರಾಂನಲ್ಲಿ ವೀಡಿಯೋಗಳನ್ನು ಹಾಕುತ್ತಿರುವ ನಕಲಿ AI ಇನ್ಫ್ಲೂಯೆನ್ಸರ್ ಗಳ ವಿರುದ್ಧ ಇನ್ಸ್ಟಾಗ್ರಾಂ ಕಠಿಣ ಕ್ರಮ ಕೈಗೊಳ್ಳುತ್ತಿದೆ. AI-ರಚಿತ ಪ್ರೊಫೈಲ್ ಗಳು ತಮ್ಮ ವಿವರ ನೀಡದೆ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುವ ಸಂದರ್ಭದಲ್ಲಿ ಅವರ ರೀಚ್ ಅನ್ನು ಮಿತಿಗೊಳಿಸಲು ಪ್ರಾರಂಬಿಸುವುದಾಗಿ ವೇದಿಕೆ ಹೇಳಿದೆ.
“ಇನ್ಸ್ಟಾಗ್ರಾಮ್ನಲ್ಲಿ AI-ರಚಿತ ಪ್ರೊಫೈಲ್ಗಳ ವಿಚಾರದಲ್ಲಿ ಹೆಚ್ಚಿನ ಪಾರದರ್ಶಕತೆ ತರುವುದು” ಎಂಬ ಶೀರ್ಷಿಕೆಯ ಬ್ಲಾಗ್ ಫೋಸ್ಟ್ ನಲ್ಲಿ ಮೆಟಾ ಮಾಲಕತ್ವದ ಸಾಮಾಜಿಕ ನೆಟ್ವರ್ಕ್, ಬಳಕೆದಾರರು ಮಾನವರ ಬದಲಿಗೆ AI-ರಚಿತ ಪ್ರೊಫೈಲ್ ನೋಡಿದಾಗ ಆ ಬಗ್ಗೆ ತಿಳಿಸುವುದು ತಮ್ಮ ಗುರಿಯಾಗಿರುತ್ತದೆ ಎಂದು ಹೇಳಿದೆ. ಇದಕ್ಕೆ ಮೊದಲು ಈ ಖಾತೆಗಳಲ್ಲಿ ಕೆಲವು “AI creator” ಎನ್ನುವ ಲೇಬಲ್ ಅನ್ನು ಹೊಂದಿದ್ದವು. ಹಾಗೆ ಆದಾಗ ಕಂಟೆಂಟ್ ಸೃಷ್ಟಿಸಲು ಮಾನವರು AI ಅನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ತಪ್ಪು ಗ್ರಹಿಕೆಗೆ ಕಾರಣವಾಗುತ್ತದೆ.
ಇದೀಗ ವೇದಿಕೆಯು ತನ್ನ ಹಳೆಯ “AI creator” ಎನ್ನುವ ಲೇಬಲ್ ಬದಲಿಗೆ “AI-generated profile” ಎಂದು ಮರುನಾಮಕರಣ ಮಾಡುತ್ತಿದೆ. ಹೀಗೆ ಮಾಡಿದಾಗ AI-ರಚಿತ ಪ್ರೊಫೈಲ್ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ. ಲೇಬಲ್ ಮಾಡದ ಪ್ರೊಫೈಲ್ನಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯನ್ನು “AI-generated profile” ಅಥವಾ AI ಬಳಸಿ ರಚಿಸಿದ ಪ್ರೊಫೈಲ್ ಎಂದು ಬಳಕೆದಾರರು ಗುರುತಿಸಲು ಇದರಿಂದ ಅನುಕೂಲವಾಗುತ್ತದೆ ಎಂದು ಮೆಟಾ ಹೇಳಿದೆ.
AI ಇನ್ಫ್ಲೂಯೆನ್ಸರ್ ಗಳಿಂದ ಬರುವ ಪೋಸ್ಟ್ ಗಳು, ರೀಲ್ ಗಳು ಮತ್ತು ಸ್ಟೋರಿಗಳಿಗೆ ಇನ್ಸ್ಟಾಗ್ರಾಮ್ “AI-generated profile” ಎನ್ನುವ ಲೇಬಲ್ ಸೇರಿಸಲಿದೆ. ಲೇಬಲ್ ಬಳಸದ ಖಾತೆಗಳಿಗೆ ದಂಡ ವಿಧಿಸಬಹುದು, ರೀಲ್ಸ್, ಎಕ್ಸ್ಪ್ಲೋರ್ ಮತ್ತು ಫೀಡ್ ಸಲಹೆಗಳ ಉದ್ದಕ್ಕೂ ಫಾಲೋ ಮಾಡದೆ ಇರುವವರಿಗೆ ಅವರ ಕಂಟೆಂಟ್ ಶಿಫಾರಸು ಮಾಡುವುದನ್ನು ಮಿತಿಗೊಳಿಸಬಹುದು.
ಮಾನವರಂತೆ ಕಾಣುವ ಆದರೆ ನಂತರ ಅದು “AI-generated profile” ಎನ್ನುವುದು ತಿಳಿದಿದಾಗ ಅಂತಹ ಪ್ರೊಫೈಲ್ ನೋಡಲು ಜನರು ಇಷ್ಟಪಡುವುದಿಲ್ಲ ಎಂದು ನಾವು ಕೇಳಿದ್ದೇವೆ. ಅಲ್ಲದೆ, “AI-generated profile” ಅನ್ನು ಗುರುತಿಸಲು ಸಾಧ್ಯವಾಗುವಂತೆ ಮಾಡಲು ಜನರು ವಿನಂತಿಸುತ್ತಿದ್ದಾರೆ ಎಂದು ಇನ್ಸ್ಟಾಗ್ರಾಮ್ ತನ್ನ ಬ್ಲಾಗ್ನಲ್ಲಿ ಬರೆದಿದೆ.
ನಕಲಿ ಇನ್ಫ್ಲೂಯೆನ್ಸರ್ಗಳ ಪ್ರೊಫೈಲ್ಗಳು ಹ್ಯಾಂಡಲ್ ನ ಕೆಳಗೆ ನೇರವಾಗಿ “AI-generated profile”ಎನ್ನುವ ಬ್ಯಾಡ್ಜ್ ಹೊಂದಿರಬೇಕಾಗುತ್ತದೆ. ಖಾತೆಯ ಮುಖ್ಯ ಬಯೋ ಹೆಡರ್ ನಲ್ಲೂ ಹೆಸರನ್ನು ಪ್ರದರ್ಶಿಸಬೇಕು. AI ರಚಿತ ಪ್ರೊಫೈಲ್ಗಳು ಸಾಮಾಜಿಕ ಮಾಧ್ಯಮದಲ್ಲಿ ಬೆಳೆಯುತ್ತಿರುವ ಸಮಯದಲ್ಲಿ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ AI ಇನ್ಫ್ಲೂಯೆನ್ಸರ್ ಗಳು ಹೆಚ್ಚು ಸಾಮಾನ್ಯವಾಗುತ್ತಿರುವ ಸಂದರ್ಭದಲ್ಲಿ ಇನ್ಸ್ಟಾಗ್ರಾಮ್ ಈ ಕ್ರಮ ಕೈಗೊಂಡಿದೆ.






