Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪ್ರಳಯದ ಭೀತಿ ಬಿತ್ತಿ ಉಪವಾಸಕ್ಕೆ...

ಪ್ರಳಯದ ಭೀತಿ ಬಿತ್ತಿ ಉಪವಾಸಕ್ಕೆ ಪ್ರಚೋದನೆ; ಕೆನ್ಯಾದಲ್ಲಿ ಸ್ವರ್ಗದ ಆಸೆ ತೋರಿಸಿ 190 ಮಕ್ಕಳ ಹತ್ಯೆ!

ಸ್ವಘೋಷಿತ ಧರ್ಮಗುರು ಪಾಲ್ ಮೆಕೆಂಜಿ ಸೇರಿ 29 ಮಂದಿ ದೋಷಿಗಳು

ವಾರ್ತಾಭಾರತಿವಾರ್ತಾಭಾರತಿ22 Oct 2026 9:26 PM IST
share
ಪ್ರಳಯದ ಭೀತಿ ಬಿತ್ತಿ ಉಪವಾಸಕ್ಕೆ ಪ್ರಚೋದನೆ; ಕೆನ್ಯಾದಲ್ಲಿ ಸ್ವರ್ಗದ ಆಸೆ ತೋರಿಸಿ 190 ಮಕ್ಕಳ ಹತ್ಯೆ!

ನೈರೋಬಿ: ಜಗತ್ತು ಅಂತ್ಯಗೊಳ್ಳಲಿದೆ, ಉಪವಾಸ ಆಚರಿಸಿದರೆ ಸ್ವರ್ಗ ಸೇರಬಹುದು ಎಂಬ ನಂಬಿಕೆಯನ್ನು ಅನುಯಾಯಿಗಳಲ್ಲಿ ಬಿತ್ತಿ, ಮಕ್ಕಳೂ ಸೇರಿದಂತೆ ನೂರಾರು ಜನರ ಸಾವಿಗೆ ಕಾರಣವಾದ ಆರೋಪ ಎದುರಿಸುತ್ತಿದ್ದ ಕೆನ್ಯಾದ ಸ್ವಘೋಷಿತ ಧರ್ಮಗುರು ಪಾಲ್ ಮೆಕೆಂಜಿ ಹಾಗೂ ಆತನ 28 ಮಂದಿ ಬೆಂಬಲಿಗರನ್ನು ನ್ಯಾಯಾಲಯ ದೋಷಿಗಳು ಎಂದು ಘೋಷಿಸಿದೆ.

ಕೆನ್ಯಾದ ಕರಾವಳಿ ತೀರದ ಶಾಕಾಹೋಲಾ ಅರಣ್ಯದಲ್ಲಿ ನಡೆದ ಈ ಸಾಮೂಹಿಕ ಹತ್ಯಾಕಾಂಡ ಪ್ರಕರಣದಲ್ಲಿ 190 ಮಕ್ಕಳನ್ನು ಉಪವಾಸ ಕೆಡವಿ, ಹಸಿವಿನಿಂದ ನರಳುವಂತೆ ಮಾಡಿ ಹತ್ಯೆಗೈದ ಆರೋಪ ಸಾಬೀತಾಗಿದೆ. ಈ ಭೀಕರ ಕೃತ್ಯದಲ್ಲಿ ಒಬ್ಬ ವಯಸ್ಕನೂ ಮೃತಪಟ್ಟಿದ್ದಾನೆ. ನವೆಂಬರ್ 6ರಂದು ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ ಎಂದು ನ್ಯಾಯಮೂರ್ತಿ ಡಯಾನಾ ಕವೇಜಾ ಮೋಚಾ ಅವರಿದ್ದ ನ್ಯಾಯಪೀಠ ತಿಳಿಸಿದೆ.

ಜಗತ್ತಿನಾದ್ಯಂತ ತೀವ್ರ ಆಘಾತ ಮೂಡಿಸಿದ್ದ ಈ ಪ್ರಕರಣವು ಧಾರ್ಮಿಕ ನಂಬಿಕೆಗಳ ಹೆಸರಿನಲ್ಲಿ ನಡೆಯುವ ಶೋಷಣೆ ಮತ್ತು ಕಲ್ಟ್‌ ಸಂಸ್ಕೃತಿಯ ಅಪಾಯಕಾರಿ ಮುಖವನ್ನು ತೆರೆದಿಟ್ಟಿದೆ.

ಟ್ಯಾಕ್ಸಿ ಚಾಲಕನಿಂದ ಧರ್ಮಗುರುವಿನವರೆಗೆ

ಈ ಹಿಂದೆ ಟ್ಯಾಕ್ಸಿ ಚಾಲಕನಾಗಿದ್ದ ಪಾಲ್ ಮೆಕೆಂಜಿ 2003ರಲ್ಲಿ ಗುಡ್ ನ್ಯೂಸ್ ಇಂಟರ್‌ನ್ಯಾಷನಲ್ ಚರ್ಚ್ ಸ್ಥಾಪಿಸಿದ್ದ. ಬಳಿಕ ತನ್ನ ಧಾರ್ಮಿಕ ಪ್ರಚಾರದ ಮೂಲಕ ಸಾವಿರಾರು ಜನರನ್ನು ಸೆಳೆದುಕೊಂಡಿದ್ದ. ಪ್ರಳಯ ಸನ್ನಿಹಿತವಾಗಿದೆ, ಜಗತ್ತು ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ಎಂಬ ಭೀತಿಯನ್ನು ಅನುಯಾಯಿಗಳಲ್ಲಿ ಬಿತ್ತಿದ್ದ.

ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಆತನ ಭವಿಷ್ಯವಾಣಿಗಳಿಗೆ ಮತ್ತಷ್ಟು ಬಲ ಸಿಕ್ಕಿತ್ತು. ಜಗತ್ತು ನಾಶವಾಗುವ ಮುನ್ನ ಸತತ ಉಪವಾಸ ವ್ರತ ಆಚರಿಸಿದರೆ ನೇರವಾಗಿ ಸ್ವರ್ಗ ಸೇರಬಹುದು, ಯೇಸುವನ್ನು ಮುಖಾಮುಖಿಯಾಗಿ ಭೇಟಿಯಾಗಬಹುದು ಎಂದು ಜನರನ್ನು ನಂಬಿಸಿದ್ದ. ಈ ನಂಬಿಕೆಯ ಹೆಸರಿನಲ್ಲಿ ಪೋಷಕರು ತಮ್ಮ ಪುಟ್ಟ ಮಕ್ಕಳಿಗೂ ಆಹಾರ ನೀಡದಂತೆ ಕಟ್ಟುನಿಟ್ಟಿನ ಆಜ್ಞೆ ಹೊರಡಿಸಲಾಗಿತ್ತು.

ಅರಣ್ಯದಲ್ಲಿ ಸಾಮೂಹಿಕ ಸಮಾಧಿಗಳು

2023ರಲ್ಲಿ ಮೆಕೆಂಜಿ ಮಾಲಿಂಡಿಯಲ್ಲಿದ್ದ ತನ್ನ ಕೇಂದ್ರವನ್ನು ಮುಚ್ಚಿ, ನೂರಾರು ಅನುಯಾಯಿಗಳೊಂದಿಗೆ ಶಾಕಾಹೋಲಾ ಅರಣ್ಯಕ್ಕೆ ತೆರಳಿದ್ದ. ಅಲ್ಲಿಂದ ಜನರು ನಿಗೂಢವಾಗಿ ನಾಪತ್ತೆಯಾಗುತ್ತಿರುವ ಕುರಿತು ಪೊಲೀಸರಿಗೆ ದೂರುಗಳು ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.

ತನಿಖೆಗಾಗಿ ಅರಣ್ಯ ಪ್ರವೇಶಿಸಿದ ಅಧಿಕಾರಿಗಳಿಗೆ ತೀವ್ರ ಅಪೌಷ್ಟಿಕತೆಯಿಂದ ಜರ್ಜರಿತರಾಗಿದ್ದ ಹಲವು ಅನುಯಾಯಿಗಳು ಪತ್ತೆಯಾಗಿದ್ದರು. ಅರಣ್ಯದ ವಿವಿಧೆಡೆ ಶೋಧ ನಡೆಸಿದಾಗ ಸಾಮೂಹಿಕ ಸಮಾಧಿಗಳು ಪತ್ತೆಯಾಗಿದ್ದವು. ಇದುವರೆಗೆ 400ಕ್ಕೂ ಹೆಚ್ಚು ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಹಲವರು ಹಸಿವಿನಿಂದಲೇ ಪ್ರಾಣ ಕಳೆದುಕೊಂಡಿರುವುದು ದೃಢಪಟ್ಟಿತ್ತು. ಇನ್ನು ಕೆಲವರನ್ನು ಉಸಿರುಗಟ್ಟಿಸಿ, ಕತ್ತು ಹಿಸುಕಿ ಅಥವಾ ತಲೆಗೆ ಬಲವಾಗಿ ಹೊಡೆದು ಕೊಲ್ಲಲಾಗಿತ್ತು.

ಆಹಾರ ಸೇವಿಸಲು ಯತ್ನಿಸಿದವರ ಮೇಲೂ ಹಲ್ಲೆ

ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಈ ಅಮಾನವೀಯ ಕೃತ್ಯದ ಹಲವು ವಿವರಗಳು ಹೊರಬಂದಿವೆ. ಉಪವಾಸದ ಕ್ರೂರ ನಿಯಮವನ್ನು ಮೊದಲು ಮಕ್ಕಳ ಮೇಲೆ ಬಲವಂತವಾಗಿ ಹೇರಲಾಗಿತ್ತು. ಮಕ್ಕಳು ಅಥವಾ ಇತರ ಅನುಯಾಯಿಗಳು ಹಸಿವು ತಾಳಲಾರದೆ ಆಹಾರ ಸೇವಿಸಲು ಯತ್ನಿಸಿದರೆ ಅಥವಾ ಅರಣ್ಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ, ಕಾವಲುಗಾರರು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದರು ಎಂಬ ಅಂಶಗಳು ವಿಚಾರಣೆ ವೇಳೆ ಬಹಿರಂಗವಾಗಿವೆ.

ಅನುಯಾಯಿಗಳು ಶಾಲೆ ಹಾಗೂ ವೈದ್ಯಕೀಯ ಚಿಕಿತ್ಸೆಯಿಂದ ಸಂಪೂರ್ಣ ದೂರವಿರಬೇಕೆಂಬ ನಿಷೇಧವನ್ನೂ ಹೇರಲಾಗಿತ್ತು. ತಾನು ಯಾರ ಮೇಲೂ ಬಲವಂತ ಮಾಡಿಲ್ಲ ಎಂದು ಮೆಕೆಂಜಿ ವಾದಿಸಿದ್ದರೂ, ಆತನ ಮಾಜಿ ಅನುಯಾಯಿಗಳು ನೀಡಿದ ಸಾಕ್ಷ್ಯಗಳು ಪ್ರಕರಣದಲ್ಲಿ ನಿರ್ಣಾಯಕವಾಗಿವೆ.

ಧಾರ್ಮಿಕ ಮೌಢ್ಯದ ಅಪಾಯಕಾರಿ ಪರಿಣಾಮ

ದುರ್ಬಲ ಹಾಗೂ ಅಸಹಾಯಕ ಜನರ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು, ಧಾರ್ಮಿಕ ನಂಬಿಕೆಗಳ ಹೆಸರಿನಲ್ಲಿ ಹೇಗೆ ಜೀವಗಳನ್ನು ಬಲಿಪಡೆಯಬಹುದು ಎಂಬುದಕ್ಕೆ ಶಾಕಾಹೋಲಾ ಸಾಮೂಹಿಕ ಹತ್ಯಾಕಾಂಡ ನಿದರ್ಶನವಾಗಿದೆ. ಈ ಪ್ರಕರಣವು ಧಾರ್ಮಿಕ ಮೌಢ್ಯ ಮತ್ತು ನಿಯಂತ್ರಣವಿಲ್ಲದ ಪಂಥಗಳ ಕಾರ್ಯಚಟುವಟಿಕೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ದುರಂತದ ಬಳಿಕ ಕೀನ್ಯಾದಲ್ಲಿ ಅನಿಯಂತ್ರಿತವಾಗಿ ಕಾರ್ಯನಿರ್ವಹಿಸುತ್ತಿರುವ ಧಾರ್ಮಿಕ ಸಂಘಟನೆಗಳು ಹಾಗೂ ಪಂಥಗಳ ಮೇಲೆ ಕಠಿಣ ನಿಗಾ ಇಡುವಂತೆ ಸಾರ್ವಜನಿಕ ಒತ್ತಡ ಹೆಚ್ಚಾಗಿದೆ. ನೂರಾರು ಜೀವಗಳ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮೆಕೆಂಜಿ ಹಾಗೂ ಆತನ ಬೆಂಬಲಿಗರು ದೋಷಿಗಳು ಎಂದು ಘೋಷಿಸಲ್ಪಟ್ಟಿರುವುದು ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

Tags

children killedKenya
share
ವಾರ್ತಾಭಾರತಿ
ವಾರ್ತಾಭಾರತಿ
Next Story
X