Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪ್ರಾಚೀನ ಭಾರತದಲ್ಲಿ ವಿಮಾನಗಳಿದ್ದದ್ದು...

ಪ್ರಾಚೀನ ಭಾರತದಲ್ಲಿ ವಿಮಾನಗಳಿದ್ದದ್ದು ನಿಜವೇ?!

ವಾರ್ತಾಭಾರತಿವಾರ್ತಾಭಾರತಿ3 Nov 2023 10:33 AM IST
share
ಪ್ರಾಚೀನ ಭಾರತದಲ್ಲಿ ವಿಮಾನಗಳಿದ್ದದ್ದು ನಿಜವೇ?!
ಎನ್‌ಸಿಇಆರ್‌ಟಿಯ ಹೇಳಿಕೆಗಳು ಭಾರದ್ವಾಜರು ಬರೆದಿದ್ದಾರೆ ಎಂದು ಹೇಳಲಾಗುತ್ತಿರುವ ಗ್ರಂಥ ‘ಯಂತ್ರ ಸರ್ವಸ್ವ’ದ ಒಂದು ಭಾಗವಾದ ‘ವೈಮಾನಿಕ ಶಾಸ್ತ್ರ’ವನ್ನು ಆಧರಿಸಿವೆ. ‘ವೈಮಾನಿಕ ಶಾಸ್ತ್ರ’ ವಿಮಾನಗಳನ್ನು ನಿರ್ಮಿಸುವ ಕಾರ್ಯವಿಧಾನವನ್ನು ವಿವರಿಸುವ ಗ್ರಂಥವಾಗಿದೆ. ಋಗ್ವೇದದಲ್ಲಿ ಇದರ ಕರ್ತೃ ಭಾರದ್ವಾಜರ ಉಲ್ಲೇಖವಿದೆ. ಆದರೆ ಈ ಗ್ರಂಥದ ಅಧ್ಯಯನ ಅದರಲ್ಲಿ ಬಳಸಿದ ಭಾಷೆ, ಅದರ ಕರ್ತೃತ್ವ ಮತ್ತು ವಿವರಿಸಿದ ಯಂತ್ರಗಳ ಕಾರ್ಯಸಾಧ್ಯತೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

- ಬಾಪು ಹೆದ್ದೂರಶೆಟ್ಟಿ, ಬೆಂಗಳೂರು

ಇತ್ತೀಚೆಗೆ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಶಾಲಾ ವಿದ್ಯಾರ್ಥಿಗಳಿಗೆ ಚಂದ್ರಯಾನ-3 ಕುರಿತು ಹಲವು ದಾಖಲೆಗಳನ್ನು ಪ್ರಕಟಿಸಿದೆ. ದಾಖಲೆಗಳಲ್ಲಿ ಹಾರುವ ರಥಗಳು, ವಿಮಾನಗಳು ಮತ್ತು ಭಾರದ್ವಾಜರ ವೈಮಾನಿಕ ಶಾಸ್ತ್ರಗಳ ಉಲ್ಲೇಖಗಳಿವೆ. ಹಲವಾರು ವಿಜ್ಞಾನಿಗಳು ಈ ದಾಖಲೆಗಳ ಬಗ್ಗೆ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಅವುಗಳು ಹುಸಿ-ವೈಜ್ಞಾನಿಕ ವಿಚಾರಗಳನ್ನು ಹೊಂದಿವೆ ಮತ್ತು ಹಾನಿಕಾರಕವಾದ ವೈಜ್ಞಾನಿಕ ವಿಷಯಗಳನ್ನು ತಿಳಿಸುವ ಮೂಲಕ ವಿದ್ಯಾರ್ಥಿಗಳನ್ನು ತಪ್ಪುದಾರಿಗೆಳೆಯುತ್ತವೆ ಎಂದು ಹೇಳಿ ಈ ದಾಖಲೆಗಳ ವಾಪಸಾತಿಗೆ ಒತ್ತಾಯಿಸಿದ್ದಾರೆ. ಆದರೂ ಕೇಂದ್ರ ಸರಕಾರವು ಎನ್‌ಸಿಇಆರ್‌ಟಿಯನ್ನು ಸಮರ್ಥಿಸಿದುದರಿಂದ ಈ ದಾಖಲೆಗಳನ್ನು ಮತ್ತೆ ಪ್ರಕಟಿಸಲಾಗಿದೆ.

ಎನ್‌ಸಿಇಆರ್‌ಟಿಯ ಈ ಹೇಳಿಕೆಗಳು ಭಾರದ್ವಾಜರು ಬರೆದಿದ್ದಾರೆ ಎಂದು ಹೇಳಲಾಗುತ್ತಿರುವ ಗ್ರಂಥ ‘ಯಂತ್ರ ಸರ್ವಸ್ವ’ದ ಒಂದು ಭಾಗವಾದ ‘ವೈಮಾನಿಕ ಶಾಸ್ತ್ರ’ವನ್ನು ಆಧರಿಸಿವೆ. ‘ವೈಮಾನಿಕ ಶಾಸ್ತ್ರ’ ವಿಮಾನಗಳನ್ನು ನಿರ್ಮಿಸುವ ಕಾರ್ಯವಿಧಾನವನ್ನು ವಿವರಿಸುವ ಗ್ರಂಥವಾಗಿದೆ. ಋಗ್ವೇದದಲ್ಲಿ ಇದರ ಕರ್ತೃ ಭಾರದ್ವಾಜರ ಉಲ್ಲೇಖವಿದೆ. ಆದರೆ ಈ ಗ್ರಂಥದ ಅಧ್ಯಯನ ಅದರಲ್ಲಿ ಬಳಸಿದ ಭಾಷೆ, ಅದರ ಕರ್ತೃತ್ವ ಮತ್ತು ವಿವರಿಸಿದ ಯಂತ್ರಗಳ ಕಾರ್ಯಸಾಧ್ಯತೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಈ ಗ್ರಂಥದಲ್ಲಿ ಬಳಸಿರುವ ಭಾಷೆ ವೈದಿಕ ಸಂಸ್ಕೃತವಾಗಿರದೆ ಆಧುನಿಕ ಸಂಸ್ಕೃತವಾಗಿದೆ. ಆದುದರಿಂದ ಇದನ್ನು ನಿಜವಾಗಿಯೂ ಭಾರದ್ವಾಜರು ರಚಿಸಿದ್ದರೇ ಎಂಬ ಅನುಮಾನ ಉಂಟಾಗುತ್ತದೆ.

ಔಪಚಾರಿಕ ಶಾಲಾ ಶಿಕ್ಷಣವೂ ಇಲ್ಲದ ಸುಬ್ಬರಾಯ ಶಾಸ್ತ್ರಿ ಎಂಬ ಒಬ್ಬ ವ್ಯಕ್ತಿ (1866-1940), ಭಾರದ್ವಾಜರು ತನ್ನ ಕನಸಿನಲ್ಲಿ ಬಂದು ಈ ಗ್ರಂಥವನ್ನು ಪ್ರಕಟಿಸಿದ್ದಾರೆ ಎಂದು ಹೇಳಿದ್ದರು. ಅದನ್ನು ಅವರು ಜಿ. ವೆಂಕಟಾಚಲ ಶರ್ಮಾ ಎನ್ನುವವರಿಗೆ ಬರೆದುಕೊಳ್ಳಲು ಹೇಳಿದ್ದರಂತೆ. ನಂತರ 1952ರಲ್ಲಿ ಈ ಗ್ರಂಥವನ್ನು ಸಂಸ್ಕೃತದಲ್ಲಿ ಪ್ರಕಟಿಸಲಾಯಿತು ಮತ್ತು ಅದರ ಇಂಗ್ಲಿಷ್ ಅನುವಾದವನ್ನು 1972 ರಲ್ಲಿ ಪ್ರಕಟಿಸಲಾಯಿತು. ಗ್ರಂಥದಲ್ಲಿ ಪ್ರಕಟಿಸಿದ ವಿಮಾನಗಳ ವಿನ್ಯಾಸಗಳನ್ನು ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಡ್ರಾಫ್ಟ್‌ಮ್ಯಾನ್ ಆಗಿದ್ದ ಟಿ.ಕೆ. ಎಲ್ಲಪ್ಪಾ ಅವರು ಸಿದ್ಧಪಡಿಸಿದರು.

ಈ ಗ್ರಂಥವನ್ನು ಪ್ರಕಟಿಸಿದ ಜಿ.ಆರ್.ಜೋಸರ್ ತಮ್ಮ ಮುನ್ನುಡಿಯಲ್ಲಿ ‘‘ಸುಬ್ಬರಾಯ ಶಾಸ್ತ್ರಿ ಅವರು ಈ ಗ್ರಂಥವನ್ನು ವೆಂಕಟಾಚಲ ಶರ್ಮಾ ಅವರಿಂದ ಆಗಸ್ಟ್ 1, 1918 ರಿಂದ ಪ್ರಾರಂಭಿಸಿ 1923ರ ಆಗಸ್ಟ್ 23 ರವರೆಗೆ ಹೇಳಿ ಬರೆಸಿದರು’’ ಎಂದು ಹೇಳುತ್ತಾರೆ. ಇದನ್ನು 23 ನೋಟ್ ಪುಸ್ತಕಗಳಲ್ಲಿ ಬರೆಯಲಾಗಿತ್ತು. ನಂತರ ಜಿ.ಆರ್. ಜೋಸರ್ ಅವರೇ ಈ ಗ್ರಂಥವನ್ನು ಇಂಗ್ಲಿಷ್‌ಗೆ ಅನುವಾದಿಸಿದರು. ಆನಂತರ ಅವರು ಬೆಂಗಳೂರಿನ ಸ್ಥಳೀಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡ್ರಾಫ್ಟ್‌ಮ್ಯಾನ್ ಆಗಿದ್ದ ಟಿ.ಕೆ.ಎಲ್ಲಪ್ಪಾ ಅವರನ್ನು ತೊಡಗಿಸಿಕೊಂಡು ತಾವು ನೀಡಿದ ಸೂಚನೆಗಳ ಪ್ರಕಾರ ವಿಮಾನಗಳ ವಿನ್ಯಾಸಗಳನ್ನು ಸಿದ್ಧಪಡಿಸಲಾಯಿತು ಎಂದು ಹೇಳುತ್ತಾರೆ. ಇದಾದದ್ದು 1923ರಲ್ಲಿ ಎನ್ನುತ್ತಾರೆ.

ರೈಟ್ ಸಹೋದರರು ತಮ್ಮ ವಿಮಾನವನ್ನು ಡಿಸೆಂಬರ್ 17, 1903ರಂದು ಹಾರಿಸಿದರು. ವೈಮಾನಿಕ ಶಾಸ್ತ್ರದ ಪಠ್ಯ ಕಳೆದ ಸಾವಿರ ವರ್ಷಗಳಿಂದ ಲಭ್ಯವಿದ್ದರೂ, 1903ರ ನಂತರ ಅಂದರೆ 1952ರಲ್ಲಿ ಮಾತ್ರವೇ ಯಾಕೆ ಅದು ದಿನದ ಬೆಳಕನ್ನು ಕಾಣುತ್ತದೆ?

ಸಾವಿರಾರು ವರ್ಷಗಳ ಹಿಂದಿನಿಂದ ಅಸ್ತಿತ್ವದಲ್ಲಿದ್ದವು ಎಂದು ಹೇಳಲಾಗುವ ಈ ಪಠ್ಯಗಳು ಪಶ್ಚಿಮದ ದೇಶಗಳಲ್ಲಿ ಏನನ್ನಾದರೂ ಹೊಸತನ್ನು ಕಂಡುಹಿಡಿದ ನಂತರವೇ ಏಕೆ ಪ್ರಕಟವಾಗುತ್ತವೆ ಎಂದು ಪ್ರಶ್ನಿಸುತ್ತಾರೆ ಇತಿಹಾಸಕಾರ ಇರ್ಫಾನ್ ಹಬೀಬ್. ಈ ಗ್ರಂಥ ಇನ್ನೂ ಯಾಕೆ ಹಸ್ತಪ್ರತಿಯ ರೂಪದಲ್ಲಿಯೇ ಇದೆ? ಯಾಕೆ ಇನ್ನೂ ಈ ಗ್ರಂಥವನ್ನು ಆಧರಿಸಿದ ವಿಮಾನದ ಒಂದೂ ಮಾದರಿಯನ್ನು ಇಲ್ಲಿಯವರೆಗೆ ನಿರ್ಮಿಸಲಾಗಿಲ್ಲ?

ಈ ಪ್ರಶ್ನೆಗೆ ಉತ್ತರವೇನೋ ಎಂಬಂತೆ ಹಲವರು ವೈಮಾನಿಕ ಶಾಸ್ತ್ರವನ್ನು ಆಧರಿಸಿ ರಚಿಸಲಾದ ಒಂದು ವಿಮಾನವನ್ನು ಶಿವಕರ್ ಬಾಪುಜಿ ತಲ್ಪಾಡೆ ಎನ್ನುವವರು ಮುಂಬೈನ ಸಮುದ್ರ ತೀರದಲ್ಲಿ 1895ರಲ್ಲಿಯೇ ಅಂದರೆ, ರೈಟ್ ಸಹೋದರರಿಗಿಂತ ಮೊದಲೇ ಹಾರಾಟ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಆ ಹಾರಾಟವನ್ನು ಅಂದಿನ ಮುಂಬೈ ಉಚ್ಚ ನ್ಯಾಯಲಯದಲ್ಲಿ ನ್ಯಾಯಾಧೀಶರಾಗಿದ್ದ ಮಹಾದೇವ ಗೋವಿಂದ ರಾನಡೆ ಹಾಗೂ ಅಂದು ಬರೋಡಾದ ಮಹಾರಾಜರಾಗಿದ್ದ ಸಯಾಜಿರಾವ್ ಗಾಯಕವಾಡ್ ವೀಕ್ಷಿಸಿದ್ದರು ಎಂದೂ ಹೇಳಲಾಗುತ್ತಿದೆ. ಆದರೆ ಇಷ್ಟು ಮಹತ್ವದ ಘಟನೆಯನ್ನು ಯಾವ ಸ್ಥಳೀಯ ಪತ್ರಿಕೆಗಳೂ ವರದಿ ಮಾಡದೇ ಇರುವುದು ಒಂದು ಆಶ್ಚರ್ಯ. ವೆರಿಂಡರ್ ಗ್ರೋವರ್ ಎನ್ನುವವರು ರಾನಡೆಯವರ ಹಾಗೂ ಉಮಾ ಬಾಲಸುಬ್ರಮಣ್ಯಂ ಎನ್ನುವವರು ಸಯಾಜಿರಾವ್ ಗಾಯಕವಾಡ್ ಅವರ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಅವರ ಜೀವಿತಾವಧಿಯಲ್ಲಿ ನಡೆದ ಇಂತಹ ಅದ್ಭುತ ಘಟನೆಯ ಉಲ್ಲೇಖ ಎರಡೂ ಜೀವನ ಚರಿತ್ರೆಗಳಲ್ಲಿ ಕಂಡುಬರುವುದಿಲ್ಲ ಎನ್ನುವುದು ಇನ್ನೂ ಹೆಚ್ಚಿನ ಆಶ್ಚರ್ಯ.

ತಲ್ಪಾಡೆಯವರು ವಿಮಾನ ತಯಾರಿಸಿದ ಪ್ರಕ್ರಿಯೆಯನ್ನು ವಿವರಿಸುವ ಯಾವುದೇ ದಾಖಲೆಗಳು ಅಥವಾ ಹಸ್ತಪ್ರತಿಗಳು ಲಭ್ಯವಿಲ್ಲ. ತಲ್ಪಾಡೆಯವರು ತಯಾರಿಸಿದ ವಿಮಾನವು ಸ್ವಲ್ಪ ಸಮಯದ ವರೆಗೆ ಹಾರಿ ನಂತರ ಭೂಮಿಯಲ್ಲಿ ಅಪ್ಪಳಿಸಿತು ಎಂದು ಹೇಳಲಾಗುತ್ತದೆ. ಅದು ಮಾನವಸಹಿತ ಹಾರಾಟವಾಗಿತ್ತೇ? ಅದರ ಚಾಲಕರು ಯಾರಾಗಿದ್ದರು? ಅವರು ಅಪಘಾತದಿಂದ ಬದುಕುಳಿದರೇ? ಅದು ಮಾನವರಹಿತ ಹಾರಾಟವಾಗಿದ್ದರೆ ಅದನ್ನು ನಾವು ವಿಮಾನ ಎಂದು ಕರೆಯಬಹುದೇ?

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಏರೋಸ್ಪೇಸ್ ಇಂಜಿನಿಯರ್ ಟ್ರಾವಿಸ್ ಟೇಲರ್ ಅವರು 1972ರಲ್ಲಿ ಟಿ.ಕೆ.ಎಲ್ಲಪ್ಪಾ ಸಿದ್ಧಪಡಿಸಿದ್ದ ವೈಮಾನಿಕ ಶಾಸ್ತ್ರದಲ್ಲಿ ನೀಡಲಾದ ವಿನ್ಯಾಸವನ್ನು ಆಧರಿಸಿ ಒಂದು ಮಾದರಿಯನ್ನು ನಿರ್ಮಿಸಿ ಅದನ್ನು ಗಾಳಿಯ ಸುರಂಗದಲ್ಲಿ ಪರೀಕ್ಷಿಸಿದರು ಎಂದೂ ಆ ಮಾದರಿಯು ವಾಯುಬಲಚಲನಶಾಸ್ತ್ರದ (aerodynamics) ಗುಣವನ್ನು ಹೊಂದಿತ್ತೆಂದೂ ಅವರು ಪ್ರಮಾಣೀಕರಿಸಿರುವುದಾಗಿಯೂ ಇವರು ವಾದಿಸುತ್ತಾರೆ. ಆದರೆ ಅದು ಹಾರಬಲ್ಲದು ಎಂದು ಟೇಲರ್ ಅವರು ಹೇಳುವುದಿಲ್ಲ. ಏಕೆಂದರೆ ಆ ಮಾದರಿಯಲ್ಲಿ ಯಾವುದೇ ಯಂತ್ರವನ್ನು ಜೋಡಿಸಿರಲಿಲ್ಲ. ಆದರೆ ಮಕ್ಕಳು ಹಾರಿಸುವ ಗಾಳಿಪಟಗಳೂ ಈ ವಾಯುಬಲಚಲನಶಾಸ್ತ್ರದ ಗುಣವನ್ನು ಹೊಂದಿರುತ್ತವೆ, ಆದುದರಿಂದಲೇ ಅವು ಗಾಳಿಯಲ್ಲಿ ಹಾರಾಡುತ್ತವೆ. ಹಾಗೆ ನೋಡಿದರೆ ಗಾಲ್ಫ್ ಆಟದ ಚೆಂಡು ಕೂಡ ವಾಯುಬಲಚಲನಶಾಸ್ತ್ರದ ರಚನೆಯನ್ನು ಹೊಂದಿರುತ್ತದೆ. ಅದರ ಮೇಲೆ ಅನೇಕ ಗುಳಿಗಳನ್ನು ಮಾಡಲಾಗಿದ್ದು ಅವು ಅದರ ವಾಯುಬಲಚಲನಶಾಸ್ತ್ರದ ಗುಣವನ್ನು ಹೆಚ್ಚಿಸುತ್ತವೆ. ಆದುದರಿಂದಲೇ ಅವುಗಳನ್ನು ಹೊಡೆದಾಗ ಅವು ಹೆಚ್ಚು ಎತ್ತರಕ್ಕೆ ಮತ್ತು ದೂರ ಹೋಗುತ್ತವೆ.

1974ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸಂಶೋಧಕರ ಒಂದು ಗುಂಪು ಈ ಬಗ್ಗೆ ಒಂದು ಅಧ್ಯಯನ ನಡೆಸಿ ವೈಮಾನಿಕ ಶಾಸ್ತ್ರದಲ್ಲಿ ವಿವರಿಸಿದ ವಿಮಾನಗಳು ಹಾರುವ ಸಾಮರ್ಥ್ಯ ಹೊಂದಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ‘‘ಅವುಗಳ ಜ್ಯಾಮಿತಿಗಳು (geometries) ಹಾರಾಟದ ದೃಷ್ಟಿಕೋನದಿಂದ ಸಹಿಸಲಾಗದಷ್ಟು ಭಯಾನಕವಾಗಿವೆ ಮತ್ತು ಅವುಗಳ ಸಂಚಲನೆಯ ತತ್ವಗಳು ಹಾರಾಟಕ್ಕೆ ಸಹಾಯ ಮಾಡುವ ಬದಲು ಹಾರಾಟವನ್ನು ಪ್ರತಿರೋಧಿಸುತ್ತವೆ’’ ಎಂದು ಹೇಳಿದ್ದಾರೆ. ‘‘ಗ್ರಂಥದ ಪಠ್ಯ ಮತ್ತು ರೇಖಾಚಿತ್ರಗಳು ಪರಸ್ಪರ ವಿಷಯಾಧಾರಿತವಾಗಿ ಕೂಡ ಸಂಬಂಧ ಹೊಂದಿಲ್ಲ’’ ಎಂದು ಹೇಳಿದ್ದಾರೆ.

ವಿಮಾನ ಶಾಸ್ತ್ರ ಕಾರ್ಯಸಾಧ್ಯವಾದದ್ದು, ಅದರ ಆಧಾರದ ಮೇಲೆ ಪ್ರಾಚೀನ ಭಾರತದಲ್ಲಿ ವಿಮಾನಗಳಿದ್ದವು ಎನ್ನುವುದನ್ನು ರುಜುವಾತು ಪಡಿಸಲು ಇರುವ ಒಂದೇ ದಾರಿ ಎಂದರೆ ಆ ಗ್ರಂಥದಲ್ಲಿ ವಿವರಿಸಿರುವ ಪ್ರಕಾರವೇ ಒಂದು ಮಾದರಿ ವಿಮಾನವನ್ನು ತಯಾರಿಸಿ ಅದನ್ನು ಯಶಸ್ವಿಯಾಗಿ ಹಾರಾಡಿಸುವುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X