Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮೈತ್ರಿಕೂಟ ಮುನ್ನಡೆಸುವ ನಾಯಕನನ್ನು...

ಮೈತ್ರಿಕೂಟ ಮುನ್ನಡೆಸುವ ನಾಯಕನನ್ನು ಖರ್ಗೆಯವರಲ್ಲಿ ಕಾಣುತ್ತಿದ್ದಾರೆಯೇ ರಾಹುಲ್?

ಎಂ.ಕೆ. ವೇಣುಎಂ.ಕೆ. ವೇಣು6 Sept 2023 12:19 PM IST
share
ಮೈತ್ರಿಕೂಟ ಮುನ್ನಡೆಸುವ ನಾಯಕನನ್ನು ಖರ್ಗೆಯವರಲ್ಲಿ ಕಾಣುತ್ತಿದ್ದಾರೆಯೇ ರಾಹುಲ್?
ದೇಶದ ಅತ್ಯಂತ ಹಳೆಯ ಪಕ್ಷಕ್ಕೆ ತಾಜಾತನ ಮತ್ತು ಹೊಸ ಶಕ್ತಿ ತುಂಬಲು ರಾಹುಲ್ ಗಾಂಧಿ ವಿಶ್ವಾಸಾರ್ಹ ದಲಿತ ನಾಯಕತ್ವದ ಅಗತ್ಯವನ್ನು ಮನಗಂಡಿದ್ದಾರೆ. ಖರ್ಗೆಯವರು ಪಕ್ಷದ ಈ ಅಗತ್ಯಕ್ಕೆ ಅತ್ಯಂತ ಸೂಕ್ತ ಆಯ್ಕೆಯಾಗುತ್ತಾರೆ. ಮೈತ್ರಿಕೂಟದ ಇತರ ಪಾಲುದಾರ ಪಕ್ಷಗಳು ಅಥವಾ ಮಾಯಾವತಿಯಂಥ ಹೊರಗಿನ ನಾಯಕರು ಮೈತ್ರಿಕೂಟದ ಚುನಾವಣೋತ್ತರ ನಾಯಕರಾಗಿ ಖರ್ಗೆ ಅವರನ್ನು ವಿರೋಧಿಸುವುದು ಕೂಡ ಸಾಧ್ಯವಾಗಲಾರದು.

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆಯಲ್ಲಿ ರಾಹುಲ್ ಗಾಂಧಿ ನಡೆದುಕೊಳ್ಳುತ್ತಿರುವ ರೀತಿಯನ್ನು ಎಲ್ಲರೂ ಗಮನಿಸಿಯೇ ಇರುತ್ತಾರೆ. 81ರ ಹರೆಯದ ಈ ಹಿರಿಯ ಕಾಂಗ್ರೆಸ್ ನಾಯಕನ ಬಗ್ಗೆ ರಾಹುಲ್ ಸಾಕಷ್ಟು ಗೌರವ ಮತ್ತು ಅಭಿಮಾನ ತೋರಿಸುತ್ತಾರೆ. ಕೆಲ ದಿನಗಳ ಹಿಂದೆ ಕರ್ನಾಟಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಖರ್ಗೆಯವರ ಪಕ್ಕದಲ್ಲಿ ಕುಳಿತಿದ್ದ ರಾಹುಲ್ ಬಹಿರಂಗದಲ್ಲೇ ಅಂಥ ಸಜ್ಜನಿಕೆಯ ನಡೆಯೊಂದನ್ನು ತೋರಿಸಿದರು. ಖರ್ಗೆಯವರು ದಣಿದು ಬಾಯಾರಿದಂತಿದೆ ಎಂದು ಭಾವಿಸಿದವರಂತೆ ರಾಹುಲ್, ಒಂದು ಲೋಟಕ್ಕೆ ನೀರನ್ನು ಸುರಿದು ಖರ್ಗೆಯವರಿಗೆ ನೀಡಿದರು. ಈ ಬಗ್ಗೆ ಕೆಲವು ಕಾಂಗ್ರೆಸ್ ವಕ್ತಾರರು ಟ್ವೀಟ್ ಮಾಡಿದ್ದಾರೆ. ಮತ್ತೊಂದು ಸಂದರ್ಭದಲ್ಲಿ, ಕಾಂಗ್ರೆಸ್ ಸಭೆಯ ನಂತರ ಖರ್ಗೆಯವರನ್ನು ಸ್ವತಃ ತಮ್ಮದೇ ಕಾರಿನಲ್ಲಿ ಬಿಟ್ಟುಬರುವ ಸಜ್ಜನಿಕೆಯನ್ನು ರಾಹುಲ್ ತೋರಿಸಿದ್ದೂ ಇತ್ತು.

ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ ವಿಶೇಷ ಬಾಂಧವ್ಯ ಏರ್ಪಡುತ್ತಿದೆ ಎಂಬುದನ್ನು ಒತ್ತಿ ಹೇಳಲು ಈ ನಿದರ್ಶನಗಳನ್ನು ಉಲ್ಲೇಖಿಸಲಾಗುತ್ತಿದೆ. ನಿಜ ಹೇಳಬೇಕೆಂದರೆ, ರಾಹುಲ್ ಯಾವುದೇ ಹಿರಿಯ ಕಾಂಗ್ರೆಸ್ ನಾಯಕರ ಬಗ್ಗೆ ಸಾರ್ವಜನಿಕವಾಗಿ ಅಂತಹ ಗೌರವ ಮತ್ತು ಪ್ರೀತಿಯನ್ನು ಪ್ರದರ್ಶಿಸಿದ್ದಿಲ್ಲ. ಕಳೆದ ಕೆಲವು ತಿಂಗಳುಗಳಿಂದ ಗಣನೀಯ ವೇಗ ಪಡೆದುಕೊಳ್ಳುತ್ತಿರುವ ‘ಇಂಡಿಯಾ’ ಮೈತ್ರಿಯ ಸಂದರ್ಭದಲ್ಲಿ ಇದೆಲ್ಲವೂ ರಾಜಕೀಯವಾಗಿ ಬಹಳ ಮಹತ್ವ ಪಡೆಯುತ್ತದೆ. ಅನುಭವಿ ನಾಯಕರಾಗಿ ‘ಇಂಡಿಯಾ’ ಮೈತ್ರಿಯ ಎಲ್ಲ ಹಂತಗಳನ್ನು ಒಂದು ಹದಕ್ಕೆ ತರುವಲ್ಲಿ ಖರ್ಗೆಯವರು ವಹಿಸಿದ ಪಾತ್ರ ಸಾಕಷ್ಟು ಸ್ಪಷ್ಟವಾಗಿದೆ.

ಬಹಳಷ್ಟು ಅಂಶಗಳು ಖರ್ಗೆ ಅವರ ಪರವಾಗಿವೆ. ಅವರು ದಕ್ಷಿಣ ಭಾರತದ ದಲಿತ ನಾಯಕರಾಗಿದ್ದಾರೆ ಮತ್ತು ಉತ್ತರ ಭಾರತದ ಹಿಂದಿ ಭಾಷಿಕರ ನೆಲದಲ್ಲಿ ಜಾತಿ ಆಧಾರಿತ ನಾಯಕರಿಗೆ ಪ್ರತಿಸ್ಪರ್ಧಿಯಲ್ಲ ಎಂಬುದೂ ಖರ್ಗೆಯವರ ಪಾಲಿಗೆ ಪೂರಕವಾಗಿರುವ ಸಂಗತಿ. ಲೋಕಸಭೆಯಲ್ಲಿ ನಿರ್ಣಾಯಕ ಜನಾದೇಶ ಇಲ್ಲದಿದ್ದಾಗಲೆಲ್ಲ, ದಕ್ಷಿಣದ ಇಂಥ ಅಪಾಯಕಾರಿಯಲ್ಲದ ನಾಯಕರೊಬ್ಬರು ಬಿಜೆಪಿಯೇತರ ಒಕ್ಕೂಟದಲ್ಲಿ ಒಮ್ಮತದ ಅಭ್ಯರ್ಥಿಯಾಗಿ ಹೊರಹೊಮ್ಮುವುದು ಹಿಂದಿನಿಂದಲೂ ಸಂಭವಿಸುತ್ತ ಬಂದಿದೆ. ಆದರೆ, ಇದು ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಅನ್ವಯಿಸುವುದಿಲ್ಲ. ಏಕೆಂದರೆ ಅದು ಬಹುತೇಕ ಉತ್ತರ ಭಾರತದ ಪಕ್ಷವಾಗಿದೆ.

1991ರಲ್ಲಿ ಕಾಂಗ್ರೆಸ್ ಬಹುಮತದ ಕೊರತೆಯ ನಂತರ ಪಿ.ವಿ. ನರಸಿಂಹ ರಾವ್ ಒಮ್ಮತದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಿದರು. ಕಾಂಗ್ರೆಸ್‌ನೊಳಗೆ ಉತ್ತರ ಭಾರತದಿಂದ ಹೆಚ್ಚು ಶಕ್ತಿಶಾಲಿ ನಾಯಕರಿದ್ದರು. ಆದರೆ ಅವರಿಗಿಂತ ಕಡಿಮೆ ಹೆಸರುಳ್ಳವರಾಗಿದ್ದ ನರಸಿಂಹ ರಾವ್ ಒಮ್ಮತದ ಅಭ್ಯರ್ಥಿಯಾಗಿ ಹೊರಹೊಮ್ಮಿದರು. ಯುನೈಟೆಡ್ ಫ್ರಂಟ್ ಒಕ್ಕೂಟವನ್ನು ಮುನ್ನಡೆಸಲು ಲಾಲು ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಇಬ್ಬರ ಬೆಂಬಲವನ್ನೂ ಪಡೆದ ದೇವೇಗೌಡರ ವಿಚಾರದಲ್ಲೂ ಮುನ್ನೆಲೆಗೆ ಬಂದದ್ದು ಇಂಥದೇ ಸನ್ನಿವೇಶ ಎಂದು ಹೇಳಬಹುದು. ಈ ಇಬ್ಬರೂ ನಾಯಕರು ಯಾವುದೇ ರೀತಿಯಲ್ಲಿ ಉತ್ತರದ ರಾಜಕೀಯ ಸಮೀಕರಣಗಳಿಗೆ ಬೆದರಿಕೆಯಾಗಿರಲಿಲ್ಲ.

2024ರ ಲೋಕಸಭೆ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟ ತಯಾರಾಗುತ್ತಿರುವ ಹಿನ್ನೆಲೆಯಲ್ಲಿ ಖರ್ಗೆಯವರ ಪ್ರಾಮುಖ್ಯತೆಯನ್ನು ಒತ್ತಿಹೇಳಬೇಕಾಗಿದೆ. ಕಾಂಗ್ರೆಸ್ 100ಕ್ಕೂ ಹೆಚ್ಚು ಸ್ಥಾನಗಳಿಗೆ ಏರಿದರೆ 2024ರ ಲೋಕಸಭೆ ಚುನಾವಣೆ ಅಚ್ಚರಿಗಳಿಗೆ ಕಾರಣವಾಗಬಹುದು.

2024ರ ಚುನಾವಣೆ 2019ರಂತಲ್ಲ. ‘ಇಂಡಿಯಾ’ ಮೈತ್ರಿಕೂಟ ಪರ್ಯಾಯ ಪ್ರಧಾನಿ ಅಭ್ಯರ್ಥಿಯನ್ನು ಹೊಂದಿದ್ದರೂ, ಪ್ರಧಾನಿ ಮೋದಿ ಅವರ 10 ವರ್ಷಗಳ ಕೆಲಸಗಳ ಹಿನ್ನೆಲೆಯಲ್ಲಿ ಜನರ ತೀರ್ಮಾನ ಏನಿರಲಿದೆ ಎಂಬುದು ಕುತೂಹಲಕಾರಿ. 2019ರಲ್ಲಿ ಮತದಾರರ ಉದ್ದೇಶ ಮೋದಿಯವರಿಗೆ ಇನ್ನೂ ಐದು ವರ್ಷಗಳನ್ನು ಕೊಟ್ಟು ನೋಡುವುದಾಗಿತ್ತು. ಆದರೆ ಈ ಬಾರಿ, ಹಲವು ಮತದಾರರು ಮೋದಿಗೆ ಕೊಟ್ಟಿರುವ ಹತ್ತು ವರ್ಷಗಳು ಬಹಳವಾಯಿತು ಎಂದು ಭಾವಿಸಬಹುದು. ಆದ್ದರಿಂದ, ಗದ್ದಲದ ಹಿಂದುತ್ವ ಪ್ರಚಾರ ಏನೇ ಇದ್ದರೂ, ಹೆಚ್ಚಿನ ಮತದಾರರು ನೋಡುವುದು ಸರಕಾರ ಏನು ಮಾಡಿದೆ ಎಂಬುದನ್ನೇ.

ಹಾಗಾಗಿ ದೇಶದಾದ್ಯಂತ ಬಹಳ ಎಚ್ಚರಿಕೆ ಮತ್ತು ಜಾಣತನದಿಂದ ಸೀಟು ಹಂಚಿಕೆ ಮಾಡಬೇಕಿರುವುದು ಒಂದೆಡೆಯಾದರೆ, ಮೋದಿಯವರ 10 ವರ್ಷಗಳ ಅಧಿಕಾರ ಮತ್ತು ಅವರು ಆರ್ಥಿಕ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಏನು ಮಾಡಿದ್ದಾರೆ ಎಂಬುದರ ಕುರಿತ ಜನಾಭಿಪ್ರಾಯ ಮತ್ತೊಂದೆಡೆಯಿಂದ ಪ್ರತಿಪಕ್ಷಗಳ ಪಾಲಿಗೆ ಪೂರಕವಾದರೆ, ‘ಇಂಡಿಯಾ’ ಮೈತ್ರಿಕೂಟ ಚುನಾವಣೆಯಲ್ಲಿ ಹೋರಾಡುವುದು ಸುಲಭವಾಗಬಹುದು. ಬಿಜೆಪಿಯಲ್ಲಿ ಸ್ಪಷ್ಟವಾಗಿಯೂ ಈಗಾಗಲೇ ತುಸು ಆತಂಕ ತಲೆದೋರಿದೆ. ಈ ಹಂತದಲ್ಲಿ, ಭರ್ತಿ ಮಾಡದ ಸರಕಾರಿ ಹುದ್ದೆಗಳನ್ನು ಮತ್ತು ಹೊಸ ಉದ್ಯೋಗಗಳಂತೆ ತೋರಿಸಲಾಗುತ್ತಿರುವ ಆಂತರಿಕ ಭಡ್ತಿಗಳನ್ನು ಪ್ರಧಾನಿ ಸಾರ್ವಜನಿಕವಾಗಿ ಘೋಷಿಸುತ್ತಿರುವುದು, ಈ ಭಯದ ಕಾರಣದಿಂದಾಗಿಯೇ ಇರಬೇಕು ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಆದ್ದರಿಂದ ‘ಇಂಡಿಯಾ’ ಮೈತ್ರಿಕೂಟ ಪ್ರಧಾನಿ ಅಭ್ಯರ್ಥಿಯನ್ನು ಬಿಂಬಿಸಬೇಕಾಗಿಲ್ಲ. ಆದರೆ ಕಾಂಗ್ರೆಸ್ 110-120 ಸ್ಥಾನಗಳೊಂದಿಗೆ ಮೈತ್ರಿಕೂಟದೊಳಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಖರ್ಗೆ ಅವರು ಸಂಭವನೀಯ ಮೈತ್ರಿಕೂಟವನ್ನು ಮುನ್ನಡೆಸುವ ಒಮ್ಮತದ ನಾಯಕರಾಗಿ ಹೊರಹೊಮ್ಮಬಹುದು ಎಂಬ ಸಂದೇಶವನ್ನು ನಿಧಾನವಾಗಿ ತಲುಪಿಸಬಹುದು. ಈ ಸಾಧ್ಯತೆಗಾಗಿ ರಾಹುಲ್ ಗಾಂಧಿ ಮಾನಸಿಕವಾಗಿ ತಯಾರಾಗುತ್ತಿರುವ ಹಾಗಿದೆ. ಆ ಮೂಲಕ ರಾಹುಲ್ ಮೈತ್ರಿಕೂಟವನ್ನು ಮುನ್ನಡೆಸುವ ವಿಚಾರದಲ್ಲಿ ತಾವು ಸ್ಪರ್ಧೆಯಿಂದ ಸ್ಪಷ್ಟವಾಗಿ ಹೊರಗುಳಿದಿರುವ ಸೂಚನೆಯನ್ನೂ ನೀಡುತ್ತಿರಬಹುದು.

ದೇಶದ ಅತ್ಯಂತ ಹಳೆಯ ಪಕ್ಷಕ್ಕೆ ತಾಜಾತನ ಮತ್ತು ಹೊಸ ಶಕ್ತಿಯನ್ನು ನೀಡಲು ರಾಹುಲ್ ಗಾಂಧಿ ಯಾವಾಗಲೂ ವಿಶ್ವಾಸಾರ್ಹ ದಲಿತ ನಾಯಕತ್ವದ ಅಗತ್ಯವನ್ನು ಮನಗಂಡಿದ್ದಾರೆ. ಖರ್ಗೆ ಅವರು ಪಕ್ಷದ ಈ ಅಗತ್ಯಕ್ಕೆ ಅತ್ಯಂತ ಸೂಕ್ತ ಆಯ್ಕೆಯಾಗಲಿದ್ದಾರೆ ಎಂಬುದೂ ನಿಜ. ಅಲ್ಲದೆ, ‘ಇಂಡಿಯಾ’ ಮೈತ್ರಿಕೂಟದ ಇತರ ಪಾಲುದಾರ ಪಕ್ಷಗಳು ಅಥವಾ ಮಾಯಾವತಿಯಂಥ ಹೊರಗಿನ ನಾಯಕರು ಮೈತ್ರಿಕೂಟದ ಚುನಾವಣೋತ್ತರ ನಾಯಕರಾಗಿ ಖರ್ಗೆ ಅವರನ್ನು ವಿರೋಧಿಸುವುದು ಕೂಡ ಸಾಧ್ಯವಾಗಲಾರದು.

ಇದೆಲ್ಲ ಏನೇ ಇದ್ದರೂ, ಮುಂದಿನ ಏಳು ತಿಂಗಳುಗಳು ಎಂತೆಂತಹ ಕುತೂಹಲಕಾರಿ ಸಾಧ್ಯತೆಗಳನ್ನು ತರಲಿವೆಯೋ ಎಂಬ ಪ್ರಶ್ನೆಯೂ ಇದೆ. ಕಡೆಗೂ, ರಾಜಕೀಯ ಎಂಬುದು ಸಾಧ್ಯತೆಗಳ ಆಟವೇ ಆಗಿದೆ ಅಲ್ಲವೆ?

(ಕೃಪೆ: thewire.in)

share
ಎಂ.ಕೆ. ವೇಣು
ಎಂ.ಕೆ. ವೇಣು
Next Story
X