Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಹಿಳೆಯ ಘನತೆಯನ್ನು ಹೆಚ್ಚಿಸಲಿರುವ...

ಮಹಿಳೆಯ ಘನತೆಯನ್ನು ಹೆಚ್ಚಿಸಲಿರುವ ಪರ್ಯಾಯ ಪದಗಳು

ಡಾ. ಅಮ್ಮಸಂದ್ರ ಸುರೇಶ್ಡಾ. ಅಮ್ಮಸಂದ್ರ ಸುರೇಶ್23 Aug 2023 12:55 PM IST
share
ಮಹಿಳೆಯ ಘನತೆಯನ್ನು ಹೆಚ್ಚಿಸಲಿರುವ ಪರ್ಯಾಯ ಪದಗಳು

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳಲ್ಲಿ ಸಾಮಾನ್ಯ ದೃಷ್ಟಿಕೋನದ ಪದಗಳ (ಸ್ಟಿರಿಯೋಟೈಪ್) ಬಳಕೆಯನ್ನು ತಡೆಯಬೇಕು ಮತ್ತು ಅಸಮರ್ಪಕ ಪದಗಳ ಬಳಕೆ ವಿಚಾರದಲ್ಲಿ ಸೂಕ್ಷ್ಮತೆಯನ್ನು ಅನುಸರಿಸುವುದು ಸೇರಿದಂತೆ ಹಲವು ವಿಷಯಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹೊರತಂದಿರುವ ಕೈಪಿಡಿಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಕಾನೂನು ಪ್ರಕ್ರಿಯೆಗಳಲ್ಲಿ ಮಹಿಳೆಯರ ಕುರಿತಾದ ಸಾಮಾನ್ಯ ದೃಷ್ಟಿಕೋನದ ಪದಗಳನ್ನು ಗುರುತಿಸಲು, ಅರ್ಥಮಾಡಿಕೊಳ್ಳಲು ಮತ್ತು ಎದುರಿಸಲು ನ್ಯಾಯಾಧೀಶರಿಗೆ ಮತ್ತು ವಕೀಲರಿಗೆ ಇದು ಸಹಾಯ ಮಾಡುತ್ತದೆ ಎಂದು ಸುಪ್ರಿಂಕೋರ್ಟ್ ಹೇಳಿದೆ.

ಕೋಲ್ಕತಾ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಮೌಶುಮಿ ಭಟ್ಟಾಚಾರ್ಯರವರ ನೇತೃತ್ವದಲ್ಲಿ ರಚಿಸಲಾದ ಸಮಿತಿಯು ಈ ಕೈಪಿಡಿಯನ್ನು ‘ಲಿಂಗ ಆಧಾರಿತ ಸಾಮಾನ್ಯ ದೃಷ್ಟಿಕೋನವನ್ನು ಎದುರಿಸುವ ಕೈಪಿಡಿ’ (Handbook on COMBATING GENDER STEROTYPES, Spreme Court of India) ಎಂಬ ಹೆಸರಿನಲ್ಲಿ ಸಿದ್ಧಗೊಳಿಸಿದೆ. ಕೈಪಿಡಿಯಲ್ಲಿ ಮಹಿಳೆಯರ ಕುರಿತಾದ ಸಾಮಾನ್ಯ ಮಹಿಳೆಯ ಗುಣ ಅಥವಾ ಉಡುಪಿನ ಆಧಾರದ ಮೇಲೆ ಕಲ್ಪನೆ ಮಾಡಿಕೊಳ್ಳುವುದು, ಲೈಂಗಿಕ ಸಂಬಂಧಗಳ ಸಹಮತದ ಪ್ರಾಮುಖ್ಯತೆಯನ್ನು ಮತ್ತು ಮಹಿಳೆಯ ವ್ಯಕ್ತಿತ್ವವನ್ನು ಕುಂದಿಸುವ ಹಾಗೂ ಹಾನಿಕಾರಕವಾದ ಸಾಮಾನ್ಯ ದೃಷ್ಟಿಕೋನದ ಪದಗಳನ್ನು ಮತ್ತು ಆಡುಭಾಷೆಯ ಪದಗಳನ್ನು ಬಳಸುವುದರಿಂದ ಕಾನೂನಿನ ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತವಾದ ಅನ್ವಯವನ್ನು ವಿರೂಪಗೊಳಿಸಬಹುದು ಎಂದು ಹೇಳಲಾಗಿದೆ.

ಕೈಪಿಡಿಯಲ್ಲಿ ಹಲವು ಸಾಮಾನ್ಯ ದೃಷ್ಟಿಕೋನದ (ಸ್ಟಿರಿಯೋಟೈಪ್) ಪದಗಳಿಗೆ ಪರ್ಯಾಯ ಪದಗಳನ್ನು ಮತ್ತು ವಿವರಣೆಗಳನ್ನು ನೀಡಲಾಗಿದ್ದು ಇವುಗಳು ಮಹಿಳೆಯ ಘನತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಉದಾಹರಣೆಗೆ ‘ಬಾಲ ವೇಶ್ಯೆ’ ಎಂಬ ಪದಕ್ಕೆ ‘ಕಳ್ಳಸಾಗಣೆ ಮಾಡಲಾದ ಮಗು’, ‘ಪ್ರಚೋದನಕಾರಿ ಉಡುಪು’ ಎಂಬ ಪದಕ್ಕೆ ‘ಬಟ್ಟೆ’ ಅಥವಾ ‘ಉಡುಗೆ’ ಹೀಗೆ ಮಹಿಳೆಯರಿಗೆ ಸಂಬಂಧಿಸಿದಂತೆ ದಿನನಿತ್ಯದ ಬಳಕೆಯಲ್ಲಿರುವ ಕೆಟ್ಟ ಅಥವಾ ದ್ವಂದ್ವಾರ್ಥಗಳನ್ನು ನೀಡುವ ಹಲವು ಪದಗಳಿಗೆ ಗೌರವಯುತವಾದ ಪದಗಳನ್ನು ಅಥವಾ ವಾಕ್ಯಗಳನ್ನು ಕೈಪಿಡಿಯಲ್ಲಿ ಸೂಚಿಸುವ ಮೂಲಕ ನ್ಯಾಯಾಲಯದ ಆದೇಶಗಳಲ್ಲಿ ತಪ್ಪಿಸಬೇಕಾದ ಅನುಚಿತ ಪದಗಳನ್ನು ಪಟ್ಟಿ ಮಾಡಲಾಗಿದೆ.

ನ್ಯಾಯಾಂಗದ ಕರಡು ಸಿದ್ಧಪಡಿಸುವಿಕೆ, ಆದೇಶ ಹಾಗೂ ತೀರ್ಪುಗಳ ಸಂದರ್ಭದಲ್ಲಿ ಮಹಿಳೆಯರನ್ನು ಕುರಿತು ಬರೆಯುವಾಗ ಈ ಪರ್ಯಾಯ ಪದಗಳು ನ್ಯಾಯಾಧೀಶರಿಗೆ ಸಹಾಯಕವಾಗುತ್ತವೆ. ಮಹಿಳೆಯರ ಕುರಿತು ಈಗಾಗಲೇ ಬಳಕೆಯಲ್ಲಿರುವ ಪದಗಳು ಅಥವಾ ವಾಕ್ಯಗಳನ್ನು ಬಳಸುವ ಬದಲು ಕೈಪಿಡಿಯಲ್ಲಿ ಪ್ರಕಟಿಸಿರುವ ಪದಗಳನ್ನು ಬಳಸಬೇಕು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಾಧೀಶರು ಹೇಳಿದ್ದಾರೆ. ಪ್ರಕರಣಗಳ ಅರ್ಹತೆಯ ಮೇಲೆ ನ್ಯಾಯಾಲಯಗಳ ತೀರ್ಪುಗಳು ನಿರ್ಧಾರವಾಗುತ್ತವೆ. ಲಿಂಗತ್ವವು ಸಿದ್ಧ ಮಾದರಿಯನ್ನು ಯಾವುದೇ ಸಂದರ್ಭದಲ್ಲಿಯೂ ಅವಲಂಬಿಸಿರುವುದಿಲ್ಲ. ಆದ್ದರಿಂದ ಮಹಿಳೆಯರ ಕುರಿತು ಬಳಸುವ ಸಿದ್ಧ ಮಾದರಿಯ ಪದಗಳು ಅಥವಾ ವಾಕ್ಯಗಳ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡುವುದೇ ಈ ಕೈಪಿಡಿಯ ಮೂಲ ಉದ್ದೇಶವಾಗಿದೆ ಎಂದು ವಿವರಿಸಲಾಗಿದೆ.

ಸಾಮಾನ್ಯ ದೃಷ್ಟಿಕೋನದ ಪದಗಳ ಪರಿಣಾಮವಾಗಿ ನ್ಯಾಯಾಲಯದ ಮುಂದೆ ವ್ಯಕ್ತಿಗಳ ವಿಶಿಷ್ಟ ಗುಣಲಕ್ಷಣಗಳು, ಸ್ವಾಯತ್ತತೆ ಮತ್ತು ಘನತೆಯನ್ನು ದುರ್ಬಲಗೊಳಿಸುತ್ತವೆ. ಈ ರೀತಿಯ ಪದಗಳನ್ನು ಬಳಸುವುದರಿಂದ ಪರಿಸ್ಥಿತಿಯನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡುವುದಕ್ಕೆ ಅಡಚಣೆಯುಂಟು ಮಾಡುತ್ತಿದ್ದು ಕಾನೂನುಗಳ ಸಮಾನ ರಕ್ಷಣೆ ಎಂಬ ಸಾಂವಿಧಾನಿಕ ತತ್ವಕ್ಕೆ ವಿರುದ್ಧವಾಗಿದೆ. ಉದಾಹರಣೆಗೆ, ‘‘ಕಡಿಮೆ ಆದಾಯದ ಹಿನ್ನೆಲೆಯ ವ್ಯಕ್ತಿಗಳು ಅಪರಾಧ ಪ್ರಕರಣಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ’’ ಎಂಬುದು ಸಾಮಾನ್ಯ ದೃಷ್ಟಿಕೋನದ ವಾಕ್ಯ. ಆದರೆ ಇದು ತಪ್ಪು. ಅಪರಾಧಗಳನ್ನು ಬಡವರು ಮಾತ್ರ ಮಾಡುವುದಿಲ್ಲ, ಹೆಚ್ಚಿನ ಮಟ್ಟದ ಆದಾಯವನ್ನು ಹೊಂದಿರುವ ಶ್ರೀಮಂತರೂ ಅಪರಾಧ ಪ್ರಕರಣಗಳಲ್ಲಿ ತೊಡಗುತ್ತಾರೆ. ಇಂತಹ ಸ್ಟಿರಿಯೋಟೈಪ್ ಪದ ಅಥವಾ ವಾಕ್ಯಗಳಿಂದ ಒಬ್ಬ ವ್ಯಕ್ತಿಯ ವೈಯಕ್ತಿಕ ಹಕ್ಕುಗಳನ್ನು ಪೂರ್ವಾಗ್ರಹಪೀಡಿತ ಗೊಳಿಸಿದಂತಾಗುತ್ತದೆ. ನ್ಯಾಯಾಲಯದ ಆದೇಶಗಳು ಮತ್ತು ಕಾನೂನು ಭಾಷೆಯೊಳಗೆ ಲಿಂಗ ಪಕ್ಷಪಾತವನ್ನು ಹೊಂದಿರುವ ಪದಗಳು ಮತ್ತು ವಾಕ್ಯಗಳ ಬಳಕೆಯನ್ನು ಗುರುತಿಸಲು ಮತ್ತು ಅವುಗಳನ್ನು ತೆಗೆದುಹಾಕಲು ಈ ಕೈಪಿಡಿ ಮಾರ್ಗದರ್ಶಿಯಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಕೈಪಿಡಿಯ ಬಿಡುಗಡೆಯ ಸಂದರ್ಭದಲ್ಲಿ ತಿಳಿಸಿದ್ದಾರೆ.

ಮಹಿಳೆಯರ ಕುರಿತು ಪುರಾತನವಾದ, ಪಿತೃಪ್ರಧಾನವಾದ ಒಳಾರ್ಥಗಳು ಅಥವಾ ತಪ್ಪು ಕಲ್ಪನೆಗಳು ನ್ಯಾಯಾಂಗದ ಭಾಷೆಯ ಮೇಲೆ ಪ್ರಭಾವವನ್ನು ಹೊಂದಿದ್ದವು. ಇದು ಕಾನೂನು ಮತ್ತು ಭಾರತದ ಸಂವಿಧಾನದ ಮೂಲತತ್ವಗಳ ಜಾರಿಯನ್ನು ಒಂದು ರೀತಿಯಲ್ಲಿ ಪ್ರತಿಬಂಧಿಸುತ್ತಿದ್ದವು. ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಹಲವು ಸ್ಟಿರಿಯೋಟೈಪ್ ಪದಗಳು ಬಳಕೆಯಲ್ಲಿವೆ ಉದಾಹರಣೆಗೆ, ಎಲ್ಲಾ ಮಹಿಳೆಯರು ಎಲ್ಲಾ ಪುರುಷರಿಗಿಂತ ದೈಹಿಕವಾಗಿ ದುರ್ಬಲರು ಎಂಬುದು ಸಾಮಾನ್ಯವಾಗಿ ಬಳಸುವ ವಾಕ್ಯವಾಗಿದೆ. ಆದರೆ ಪುರುಷರು ಮತ್ತು ಮಹಿಳೆಯರು ಶಾರೀರಿಕವಾಗಿ ಭಿನ್ನವಾಗಿದ್ದರೂ, ಎಲ್ಲಾ ಮಹಿಳೆಯರು ಎಲ್ಲಾ ಪುರುಷರಿಗಿಂತ ದೈಹಿಕವಾಗಿ ದುರ್ಬಲರಾಗಿರುತ್ತಾರೆ ಎಂಬುದು ನಿಜವಲ್ಲ. ಒಬ್ಬ ವ್ಯಕ್ತಿಯ ಶಕ್ತಿಯು ಲಿಂಗವನ್ನು ಮಾತ್ರ ಅವಲಂಬಿಸಿರುವುದಿಲ್ಲ. ಬದಲಾಗಿ ಅವರ ವೃತ್ತಿ ಮತ್ತು ದೈಹಿಕ ಚಟುವಟಿಕೆಯಂತಹ ಅಂಶಗಳ ಮೇಲೂ ಅವಲಂಬಿತವಾಗಿರುತ್ತದೆ. ತುಳಿತಕ್ಕೊಳಗಾದ ಅಥವಾ ಅಳಿವಿನ ಅಂಚಿನಲ್ಲಿರುವ ಸಮುದಾಯಗಳ ಮಹಿಳೆಯರ ಅರಿವಿನ ಸಾಮರ್ಥ್ಯ ಕಡಿಮೆ ಇರುತ್ತದೆ ಅಥವಾ ಅವರು ಸೀಮಿತ ತಿಳುವಳಿಕೆಯನ್ನು ಹೊಂದಿರುತ್ತಾರೆ ಎಂಬುದು ಸಾಮಾನ್ಯ ದೃಷ್ಟಿಕೋನದ ವಾಕ್ಯ. ಆದರೆ ಒಬ್ಬ ವ್ಯಕ್ತಿ ಪುರುಷನೇ ಇರಲಿ ಅಥವಾ ಮಹಿಳೆಯೇ ಇರಲಿ ಅವರಿಗೆ ಸೇರಿದ ಸಮುದಾಯವು ಅವರ ಅರಿವಿನ ಸಾಮರ್ಥ್ಯಗಳನ್ನು ಅಥವಾ ಪ್ರಪಂಚದ ಕುರಿತಾದ ಅವರ ತಿಳುವಳಿಕೆಯನ್ನು ನಿರ್ಧರಿಸುವುದಿಲ್ಲ.

ನಿರ್ದಿಷ್ಟ ಲಿಂಗಗಳಿಗೆ ನಿರ್ದಿಷ್ಟ ಪಾತ್ರಗಳನ್ನು ಸಮಾಜವು ಹೇರುತ್ತದೆ. ಉದಾಹರಣೆಗೆ, ‘ಪುರುಷರು ಹೆಚ್ಚಾಗಿ ವೃತ್ತಿಪರ ಉದ್ಯೋಗಗಳಿಗೆ ಹೆಚ್ಚು ಸೂಕ್ತ, ಮಹಿಳೆಯರು ಮನೆ ಕೆಲಸ ಮಾಡುವುದಕ್ಕೆ ಮತ್ತು ಮಕ್ಕಳ ಪೋಷಣೆ ಮಾಡಲು ಹೆಚ್ಚು ಸೂಕ್ತ ಎಂದು ನಂಬಲಾಗಿದೆ. ಆದರೆ ಮಹಿಳೆಯರು ಕೂಡ ವೃತ್ತಿಪರ ಉದ್ಯೋಗಗಳನ್ನು ಮಾಡಲು ಶಕ್ತರಾಗಿರುತ್ತಾರೆ. ಮಹಿಳೆಯರು ಪುರುಷರಿಗೆ ಅಧೀನರಾಗಿರಬೇಕು ಎಂಬುದು ಸಾಮಾನ್ಯವಾದ ವಾಕ್ಯವಾಗಿದೆ. ಆದರೆ ಭಾರತದ ಸಂವಿಧಾನವು ಲಿಂಗಬೇಧವಿಲ್ಲದೆ ಎಲ್ಲರಿಗೂ ಸಮಾನ ಹಕ್ಕುಗಳನ್ನು ಖಾತರಿಪಡಿಸಿದೆ. ಮಹಿಳೆಯರು ಪುರುಷರಿಗೆ ಅಧೀನರಲ್ಲ ಅಥವಾ ಅವರು ಯಾರಿಗೂ ಅಧೀನರಾಗಿರಬೇಕಾಗಿಲ್ಲ ಎಂದು ಕೈಪಿಡಿಯಲ್ಲಿ ಹೇಳಲಾಗಿದೆ. ಆ ಮೂಲಕ ಸ್ಟೀರಿಯೋಟೈಪ್ ಪದಗಳನ್ನು ಗುರುತಿಸಲು ಮತ್ತು ಅವುಗಳಿಗೆ ಪರ್ಯಾಯ ಪದಗಳು ಮತ್ತು ನುಡಿಗಟ್ಟುಗಳನ್ನು ನೀಡುವ ಮೂಲಕ ವಕೀಲರುಗಳಿಗೆ ಮತ್ತು ನ್ಯಾಯಾಧೀಶರಿಗೆ ಈ ಕೈಪಿಡಿ ಸಹಾಯಕವಾಗಿದೆ. ಹೀಗೆಯೇ ಲೈಂಗಿಕತೆ ಅಥವಾ ಲೈಂಗಿಕ ಹಿಂಸೆಗಳಿಗೆ ಸಂಬಂಧಿಸಿದಂತೆ ಹಲವು ಸ್ಟೀರಿಯೋಟೈಪ್‌ಗಳು ಪದಗಳ ಬಗ್ಗೆ ಬದಲಿ ಪದಗಳನ್ನು ಕೈಪಿಡಿ ಸೂಚಿಸುತ್ತದೆ.

೧೦೦ಕ್ಕೂ ಹೆಚ್ಚು ಪದಗಳ ಪಟ್ಟಿಯನ್ನು ಒಳಗೊಂಡಿದ್ದು ಅವುಗಳಿಗೆ ಪರ್ಯಾಯ ಪದಗಳನ್ನು ಒಳಗೊಂಡಿದೆ. ಮಹಿಳೆಯ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಹೊರತಂದಿರುವ ಈ ಕೈಪಿಡಿ ಮಹತ್ವದ ಪಾತ್ರವನ್ನು ವಹಿಸಲಿದೆ.

share
ಡಾ. ಅಮ್ಮಸಂದ್ರ ಸುರೇಶ್
ಡಾ. ಅಮ್ಮಸಂದ್ರ ಸುರೇಶ್
Next Story
X