Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕರ್ನಾಟಕ SIR | ಮತದಾರರ ಪಟ್ಟಿಯಿಂದ...

ಕರ್ನಾಟಕ SIR | ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಲು ಸಲ್ಲಿಕೆಯಾದ ಆಕ್ಷೇಪಣೆಗಳಲ್ಲಿ ಶೇ. 78.2ರಷ್ಟು ಮುಸ್ಲಿಮರೇ ಟಾರ್ಗೆಟ್!

►ಬೆಳ್ತಂಗಡಿಯಲ್ಲಿ ಸಲ್ಲಿಸಿದ ಆಕ್ಷೇಪಣೆಗಳಲ್ಲಿ ಶೇ. 50ರಷ್ಟು ಮುಸ್ಲಿಮರೇ ಗುರಿ ►ಭಾಲ್ಕಿಯಲ್ಲಿ 3,079 ಹೆಸರಿಗೆ ಆಕ್ಷೇಪಣೆ; ಆ ಪೈಕಿ 92.1% ಮುಸ್ಲಿಂ ಮತದಾರರು ►‘ಸಂಕಲ್ಪ್’ ಹಂಚಿಕೊಂಡಿರುವ ಮಾಹಿತಿಯ ವಿಶ್ಲೇಷಣೆಯಲ್ಲಿ ಬಹಿರಂಗ

ವಾರ್ತಾಭಾರತಿವಾರ್ತಾಭಾರತಿ30 Sept 2026 9:20 AM IST
share
ಕರ್ನಾಟಕ SIR | ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಲು ಸಲ್ಲಿಕೆಯಾದ ಆಕ್ಷೇಪಣೆಗಳಲ್ಲಿ ಶೇ. 78.2ರಷ್ಟು ಮುಸ್ಲಿಮರೇ ಟಾರ್ಗೆಟ್!

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಆಗಸ್ಟ್ 20ರಿಂದ ಸೆಪ್ಟೆಂಬರ್ 26ರ ನಡುವೆ ನಡೆದಿದ್ದು, ಈ ವೇಳೆ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವಂತೆ ಕೋರಿ ಸಲ್ಲಿಕೆಯಾದ ಒಟ್ಟು 29,360 ಆಕ್ಷೇಪಣೆಗಳಲ್ಲಿ ಶೇ. 99.26ರಷ್ಟು ಅರ್ಜಿಗಳನ್ನು ಖಾಸಗಿ ವ್ಯಕ್ತಿಗಳೇ ಸಲ್ಲಿಸಿದ್ದಾರೆ. ಅದರಲ್ಲೂ ಅತ್ಯಂತ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸಿದವರ ಗುಂಪಿನಲ್ಲಿ ಮುಸ್ಲಿಂ ಮತದಾರರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿರುವುದು ಅಧಿಕೃತ ಡೇಟಾದಿಂದ ತಿಳಿದುಬಂದಿದೆ.

‘ಸಂಕಲ್ಪ್’ ಹಂಚಿಕೊಂಡಿರುವ ಡೇಟಾ ಪ್ರಕಾರ, ಕರ್ನಾಟಕದಾದ್ಯಂತ ಕನಿಷ್ಠ ಮೂರು ಆಕ್ಷೇಪಣೆಗಳಂತೆ ಒಟ್ಟು 195 ದೊಡ್ಡ ಪ್ರಮಾಣದ ಅರ್ಜಿದಾರರು ಸಲ್ಲಿಸಿದ 5,304 ಫಾರ್ಮ್ 7 ಆಕ್ಷೇಪಣೆಗಳಲ್ಲಿ ಶೇ. 78.2ರಷ್ಟು ಅರ್ಜಿಗಳು ಮುಸ್ಲಿಂ ಮತದಾರರನ್ನು ಗುರಿಯಾಗಿಸಿದ್ದವು.

ಚುನಾವಣಾ ಅಧಿಕೃತ ಪಟ್ಟಿಯಲ್ಲಿರುವ ಹೆಸರುಗಳ ವಿರುದ್ಧ ಬರುವ ಆಕ್ಷೇಪಣೆಗಳ ಪಟ್ಟಿಯನ್ನು ಪ್ರದರ್ಶಿಸಲು ಚುನಾವಣಾಧಿಕಾರಿಗಳು ನಿರ್ವಹಿಸುವ ಆಡಳಿತಾತ್ಮಕ ಸಾರ್ವಜನಿಕ ದಾಖಲೆಯೇ ಫಾರ್ಮ್ 10.

ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಅವಧಿಯಲ್ಲಿ ಒಟ್ಟು 29,360 ಫಾರ್ಮ್ 7 ಆಕ್ಷೇಪಣೆಗಳು ದಾಖಲಾಗಿವೆ. ಇದರಲ್ಲಿ 29,142 ಅರ್ಜಿಗಳನ್ನು ಖಾಸಗಿ ವ್ಯಕ್ತಿಗಳು ಸಲ್ಲಿಸಿದ್ದರೆ, ಕೇವಲ 215 ಅರ್ಜಿಗಳನ್ನು ಮಾತ್ರ ಮತದಾರರ ನೋಂದಣಾಧಿಕಾರಿಗಳು (EROs) ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಗಳು (AEROs) ದಾಖಲಿಸಿಕೊಂಡಿದ್ದಾರೆ.

ಫಾರ್ಮ್ 10ರಲ್ಲಿ ದಾಖಲಾದ ಈ ಆಕ್ಷೇಪಣೆಗಳು, ವಿವಿಧ ನಮೂನೆಗಳ ಅಡಿಯಲ್ಲಿ ಸಲ್ಲಿಕೆಯಾದ ಒಟ್ಟು 7,07,284 ಅರ್ಜಿಗಳನ್ನು ಒಳಗೊಂಡಿರುವ ಬೃಹತ್ ಪರಿಷ್ಕರಣಾ ಪ್ರಕ್ರಿಯೆಯ ಭಾಗವಾಗಿವೆ. ಹೊಸ ಮತದಾರರ ಸೇರ್ಪಡೆ ಕೋರಿ ಸಲ್ಲಿಕೆಯಾದ ಫಾರ್ಮ್ 9ರ ಅಡಿಯಲ್ಲಿ 3,47,156 ಅರ್ಜಿಗಳು ದಾಖಲಾಗಿದ್ದು, ಇದು ಒಟ್ಟು ಅರ್ಜಿಗಳ ಶೇ. 49.1ರಷ್ಟಿದೆ. ಹಾಗೆಯೇ, ಅಸ್ತಿತ್ವದಲ್ಲಿರುವ ನಮೂದುಗಳ ತಿದ್ದುಪಡಿಗಾಗಿ ಸಲ್ಲಿಕೆಯಾದ ಫಾರ್ಮ್ 11ರ ಅರ್ಜಿಗಳು 2,79,451ರಷ್ಟಿದ್ದು, ಇದು ಶೇ. 39.5ರಷ್ಟಿದೆ.

ಅದೇ ವಿಧಾನಸಭಾ ಕ್ಷೇತ್ರದೊಳಗೆ ಸ್ಥಳಾಂತರಗೊಳ್ಳಲು ಫಾರ್ಮ್ 11ಎ ಅಡಿಯಲ್ಲಿ 38,800 ಅರ್ಜಿಗಳು (ಶೇ. 5.5) ಸಲ್ಲಿಕೆಯಾಗಿವೆ. ಹಾಗೆಯೇ, ಕ್ಷೇತ್ರದಿಂದ ಹೊರಗೆ ಸ್ಥಳಾಂತರಗೊಳ್ಳಲು ಫಾರ್ಮ್ 11ಬಿ ಅಡಿಯಲ್ಲಿ 12,517 ಅರ್ಜಿಗಳು (ಶೇ. 1.8) ದಾಖಲಾಗಿವೆ. ಫಾರ್ಮ್ 10ರ ಅಡಿಯಲ್ಲಿ ದಾಖಲಾದ ಹೆಸರು ಡಿಲೀಟ್ ಮಾಡಲಿರುವ ಆಕ್ಷೇಪಣೆಗಳು 29,360ರಷ್ಟಿದ್ದು, ಇದು ಒಟ್ಟು ಅರ್ಜಿಗಳ ಶೇ. 4.2ರಷ್ಟಿದೆ.

ಹೆಸರು ಡಿಲೀಷನ್ ಗಾಗಿ ಇರುವ ಈ ಆಕ್ಷೇಪಣೆಗಳು ಕೆಲವೇ ಕೆಲವು ಕ್ಷೇತ್ರಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೇಂದ್ರೀಕೃತವಾಗಿವೆ. ಪ್ರತಿ ಕ್ಷೇತ್ರದಲ್ಲಿ ಫಾರ್ಮ್ 10ರ ಅಡಿಯಲ್ಲಿ ದಾಖಲಾದ ಆಕ್ಷೇಪಣೆಗಳ ಸರಾಸರಿ 77ರಷ್ಟಿದ್ದರೆ, ರಾಜ್ಯದ ಒಟ್ಟು ಡಿಲೀಷನ್ ಅರ್ಜಿಗಳಲ್ಲಿ ಶೇ. 29.9ರಷ್ಟು ಭಾಗ ಕೇವಲ 10 ಕ್ಷೇತ್ರಗಳಿಂದಲೇ ಬಂದಿವೆ.

ಕೇವಲ ಭಾಲ್ಕಿ ಮತ್ತು ಬಬಲೇಶ್ವರ ಕ್ಷೇತ್ರಗಳಲ್ಲೇ ಫಾರ್ಮ್ 10ರ ಅಡಿಯಲ್ಲಿ ದಾಖಲಾದ ಒಟ್ಟು ಆಕ್ಷೇಪಣೆಗಳ ಶೇ. 16.1ರಷ್ಟು ಭಾಗ ದಾಖಲಾಗಿದೆ. ಹೊಸ ಸೇರ್ಪಡೆ ಅರ್ಜಿಗಳಿಗಿಂತ ಹೆಸರು ಕೈಬಿಡುವ ಆಕ್ಷೇಪಣೆಗಳೇ ಹೆಚ್ಚಿರುವ ರಾಜ್ಯದ ಎರಡು ಕ್ಷೇತ್ರಗಳು ಇವಾಗಿವೆ.

ಭಾಲ್ಕಿಯಲ್ಲಿ 2,368 ಸೇರ್ಪಡೆ ಅರ್ಜಿಗಳ ವಿರುದ್ಧ 3,079 ಹೆಸರು ಡಿಲೀಷನ್ ಆಕ್ಷೇಪಣೆಗಳು ದಾಖಲಾಗಿವೆ. ಬಬಲೇಶ್ವರದಲ್ಲಿ 1,226 ಸೇರ್ಪಡೆ ಅರ್ಜಿಗಳ ವಿರುದ್ಧ 1,647 ಹೆಸರು ಡಿಲೀಷನ್ ಆಕ್ಷೇಪಣೆಗಳು ದಾಖಲಾಗಿವೆ. ಉಳಿದ ಎಲ್ಲ ಕ್ಷೇತ್ರಗಳಲ್ಲಿ ಹೊಸ ಸೇರ್ಪಡೆ ಅರ್ಜಿಗಳೇ ಹೆಚ್ಚಿವೆ.

ಅತ್ಯಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದವರಲ್ಲಿ ಮುಸ್ಲಿಮರನ್ನು ಗುರಿಯಾಗಿಸಿದ ಆಕ್ಷೇಪಣೆಗಳ ಪ್ರಮಾಣ ಬಹಳ ಹೆಚ್ಚಿದೆ. 2011ರ ಜನಗಣತಿಯ ಪ್ರಕಾರ ಕರ್ನಾಟಕದ ಮುಸ್ಲಿಂ ಜನಸಂಖ್ಯೆ ಶೇ. 12.9ರಷ್ಟಿದೆ. ಫಾರ್ಮ್ 10ರ ಅಡಿಯಲ್ಲಿ ದಾಖಲಾದ ಒಟ್ಟು 29,360 ಆಕ್ಷೇಪಣೆಗಳಲ್ಲಿ ಶೇ. 27.1ರಷ್ಟು ಅರ್ಜಿಗಳು ಮುಸ್ಲಿಂ ಮತದಾರರನ್ನು ಗುರಿಯಾಗಿಸಿದ್ದವು. ಭಾಲ್ಕಿ ಮತ್ತು ಬಬಲೇಶ್ವರ ಕ್ಷೇತ್ರಗಳನ್ನು ಹೊರತುಪಡಿಸಿದರೆ ಈ ಪ್ರಮಾಣ ಶೇ. 15.4ಕ್ಕೆ ಕುಸಿಯುತ್ತದೆ.

ಭಾಲ್ಕಿಯಲ್ಲಿ ಅತ್ಯಧಿಕ ಅರ್ಜಿಗಳನ್ನು ಸಲ್ಲಿಸಿದವರು ಒಟ್ಟು 3,024 ಆಕ್ಷೇಪಣೆಗಳನ್ನು ಮಂಡಿಸಿದ್ದು, ಇವುಗಳಲ್ಲಿ ಶೇ. 92.1ರಷ್ಟು ಅರ್ಜಿಗಳು ಮುಸ್ಲಿಂ ಮತದಾರರನ್ನು ಗುರಿಯಾಗಿಸಿದ್ದವು. ಬಬಲೇಶ್ವರದಲ್ಲಿ ಪ್ರಮುಖ ಅರ್ಜಿದಾರರು 1,607 ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಇದರಲ್ಲಿ ಶೇ. 80ರಷ್ಟು ಅರ್ಜಿಗಳು ಮುಸ್ಲಿಮರನ್ನು ಗುರಿಯಾಗಿಸಿವೆ.

ಬಸವಕಲ್ಯಾಣದಲ್ಲಿ ಪ್ರಮುಖ ಅರ್ಜಿದಾರರು ಸಲ್ಲಿಸಿದ 43 ಆಕ್ಷೇಪಣೆಗಳಲ್ಲಿ ಶೇ. 56.81ರಷ್ಟು ಮುಸ್ಲಿಮರನ್ನು ಗುರಿಯಾಗಿಸಿವೆ. ಬೆಳ್ತಂಗಡಿಯಲ್ಲಿ ಸಲ್ಲಿಸಿದ 34 ಆಕ್ಷೇಪಣೆಗಳಲ್ಲಿ ಶೇ. 50ರಷ್ಟು ಮುಸ್ಲಿಮರನ್ನು ಗುರಿಯಾಗಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಮೇಲುಕೋಟೆಯಲ್ಲಿ ಪ್ರಮುಖ ಅರ್ಜಿದಾರರು 72 ಮತ್ತು ರಾಮನಗರದಲ್ಲಿ 34 ಆಕ್ಷೇಪಣೆಗಳನ್ನು ಸಲ್ಲಿಸಿದ್ದರೂ, ಅಲ್ಲಿ ಯಾರೂ ಮುಸ್ಲಿಮರನ್ನು ಗುರಿಯಾಗಿಸಿರಲಿಲ್ಲ.

ಭಾಲ್ಕಿಯ ಕೆಲವೊಬ್ಬ ಪ್ರತ್ಯೇಕ ಅರ್ಜಿದಾರರಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿದೆ. 148 ಆಕ್ಷೇಪಣೆಗಳನ್ನು ಸಲ್ಲಿಸಿದ ಒಬ್ಬ ವ್ಯಕ್ತಿ ಶೇ. 97.3ರಷ್ಟು ಪ್ರಕರಣಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿದ್ದಾರೆ. 198 ಆಕ್ಷೇಪಣೆಗಳನ್ನು ಸಲ್ಲಿಸಿದ ಮತ್ತೊಬ್ಬ ವ್ಯಕ್ತಿ ಶೇ. 96.5ರಷ್ಟು ಪ್ರಕರಣಗಳಲ್ಲಿ, ಹಾಗೂ 153 ಆಕ್ಷೇಪಣೆಗಳನ್ನು ಸಲ್ಲಿಸಿದ ಮೂರನೇ ವ್ಯಕ್ತಿ ಶೇ. 94.8ರಷ್ಟು ಪ್ರಕರಣಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿದ್ದಾರೆ. ಈ ಕ್ಷೇತ್ರದ ಅತ್ಯಧಿಕ ಆಕ್ಷೇಪಣೆಗಳನ್ನು ಸಲ್ಲಿಸಿದವರು (241 ಅರ್ಜಿಗಳು) ಶೇ. 92.9ರಷ್ಟು ಪ್ರಕರಣಗಳಲ್ಲಿ ಮುಸ್ಲಿಮರ ಮೇಲೆಯೇ ಗುರಿ ಇಟ್ಟಿದ್ದಾರೆ.

ಫಾರ್ಮ್ 10ರ ಅಡಿಯಲ್ಲಿ ದಾಖಲಾದ ಆಕ್ಷೇಪಣೆಗಳಲ್ಲಿ ಅಧಿಕಾರಿಗಳ ಪಾತ್ರವು ಬಹಳ ಕಡಿಮೆ ಹಾಗೂ ಅಲ್ಲಲ್ಲಿ ಮಾತ್ರ ಕಂಡುಬಂದಿದೆ. ರಾಜ್ಯದ 47 ಕ್ಷೇತ್ರಗಳ 53 ನಮೂದುಗಳಲ್ಲಿ ERO ಮತ್ತು AERO ಅಧಿಕಾರಿಗಳು ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಇವುಗಳಲ್ಲಿ ಹೆಚ್ಚಿನವು ಒಂದೆರಡು ಆಕ್ಷೇಪಣೆಗಳನ್ನು ಮಾತ್ರ ಒಳಗೊಂಡಿವೆ.

ಅಧಿಕಾರಿಯೊಬ್ಬರು ಅತಿ ಹೆಚ್ಚು ಆಕ್ಷೇಪಣೆಗಳನ್ನು ದಾಖಲಿಸಿದವರಲ್ಲಿ ನರಗುಂದ ಮೊದಲ ಸ್ಥಾನದಲ್ಲಿದ್ದು, ಅಲ್ಲಿನ AERO 21 ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಇದರ ಬಳಿಕ ಮೊಳಕಾಲ್ಮೂರಿನಲ್ಲಿ ERO 14 ಆಕ್ಷೇಪಣೆಗಳನ್ನು ಮತ್ತು ಸಕಲೇಶಪುರದಲ್ಲಿ AERO 12 ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಆದರೆ ಭಾಲ್ಕಿ ಅಥವಾ ಬಬಲೇಶ್ವರದಲ್ಲಿ ಯಾವುದೇ ERO ಅಥವಾ AERO ಕಡೆಯಿಂದ ಒಂದೇ ಒಂದು ಫಾರ್ಮ್ 7 ಆಕ್ಷೇಪಣೆ ದಾಖಲಾಗಿಲ್ಲ.

ಖಾಸಗಿ ವ್ಯಕ್ತಿಗಳು ಹಾಗೂ ಅಧಿಕಾರಿಗಳು ಸೇರಿ ಒಟ್ಟು 23,779 ಮಂದಿ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಇವರಲ್ಲಿ ಶೇ. 97.2ರಷ್ಟು ಮಂದಿ ತಲಾ ಒಂದೇ ಒಂದು ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೆ, ERO ಹಾಗೂ AERO ಅಧಿಕಾರಿಗಳನ್ನು ಹೊರತುಪಡಿಸಿ 48 ಮಂದಿ ತಲಾ 10 ಅಥವಾ ಅದಕ್ಕಿಂತ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಈ 48 ಮಂದಿ ಸೇರಿ ಒಟ್ಟು 4,686 ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಇದು ರಾಜ್ಯದಲ್ಲಿ ದಾಖಲಾಗಿರುವ ಒಟ್ಟು ಹೆಸರು ಡಿಲೀಷನ್ ಆಕ್ಷೇಪಣೆಗಳ ಶೇ. 15.96ರಷ್ಟಾಗಿದೆ.

ಭಾಲ್ಕಿ ಮತ್ತು ಬಬಲೇಶ್ವರದಲ್ಲಿ ಕೇವಲ 11 ಖಾಸಗಿ ವ್ಯಕ್ತಿಗಳು 2,531 ಹೆಸರು ಕೈಬಿಡುವ ಅರ್ಜಿಗಳನ್ನು ಸಲ್ಲಿಸಿದ್ದು, ಇದು ಕರ್ನಾಟಕದ ಫಾರ್ಮ್ 10ರ ಅಡಿಯಲ್ಲಿ ದಾಖಲಾದ ಒಟ್ಟು ಆಕ್ಷೇಪಣೆಗಳ ಶೇ. 8.6ರಷ್ಟಿದೆ.

ಭಾಲ್ಕಿಯಲ್ಲಿ 91 ಪ್ರತ್ಯೇಕ ಅರ್ಜಿದಾರರು 3,079 ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಪ್ರತಿ ಅರ್ಜಿದಾರರ ಸರಾಸರಿ 33.8ರಷ್ಟಿದೆ. ಅಗ್ರ 10 ಅರ್ಜಿದಾರರು ಕ್ಷೇತ್ರದ ಒಟ್ಟು ಆಕ್ಷೇಪಣೆಗಳ ಶೇ. 50.8ರಷ್ಟನ್ನು ಹೊಂದಿದ್ದಾರೆ. 32 ಅರ್ಜಿದಾರರು ತಲಾ 20 ಅಥವಾ ಅದಕ್ಕಿಂತ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಇವು ಒಟ್ಟು 2,980 ನಮೂದುಗಳನ್ನು ಒಳಗೊಂಡಿವೆ. ಜಗನ್ನಾಥ್ (241 ಆಕ್ಷೇಪಣೆಗಳು), ಕಲ್ಯಾಣ ರಾವ್ (198), ಸಂತೋಷ್ (179), ಹವಗೆಪ್ಪ (178), ಬಾಬು ರಾವ್ (153) ಮತ್ತು ಸುನಿಲ್ ಕುಮಾರ್ (148) ಪ್ರಮುಖ ದೊಡ್ಡ ಅರ್ಜಿದಾರರಾಗಿದ್ದಾರೆ.

ಬಬಲೇಶ್ವರದಲ್ಲಿ 50 ಪ್ರತ್ಯೇಕ ಅರ್ಜಿದಾರರು 1,647 ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಪ್ರತಿ ಅರ್ಜಿದಾರರ ಸರಾಸರಿ 32.9ರಷ್ಟಿದೆ. ಅಗ್ರ 10 ಅರ್ಜಿದಾರರು ಹೆಸರು ಡಿಲೀಷನ್ನ ಎಲ್ಲ ಆಕ್ಷೇಪಣೆಗಳ ಶೇ. 97ರಷ್ಟನ್ನು ಹೊಂದಿದ್ದಾರೆ. 9 ವ್ಯಕ್ತಿಗಳು ತಲಾ 20 ಅಥವಾ ಅದಕ್ಕಿಂತ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಇವು ಒಟ್ಟು 1,580 ನಮೂದುಗಳಾಗಿವೆ. ಹುಚ್ಚಪ್ಪ ಗಣಿಗರ್ 493 ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಇವರ ನಂತರ ಗೋವಿಂದರಾಜ್ ಮುದ್ನೂರ್ (440), ಭೀಮಪ್ಪ ಗೊಲಸಂಗಿ (208), ಮಹೇಶ್ ಮುಕರ್ತಿಹಾಲ್ (157) ಮತ್ತು ವಿನಾಯಕ ಮಮದಾಪುರ್ (127) ಇದ್ದಾರೆ.

ಭಾಲ್ಕಿ ಮತ್ತು ಬಬಲೇಶ್ವರ ಎರಡೂ ಕ್ಷೇತ್ರಗಳೂ ಕಾಂಗ್ರೆಸ್ ವಶದಲ್ಲಿವೆ. 2023ರ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕ್ರಮವಾಗಿ 27,706 ಮತ್ತು 15,216 ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು.

ಅರ್ಜಿ ಸಲ್ಲಿಕೆಯ ಸಮಯದಲ್ಲೂ ನಿರಂತರ ದೈನಂದಿನ ಸರಾಸರಿಯ ಬದಲಿಗೆ ಹಠಾತ್ ಹಾಗೂ ತೀವ್ರ ಏರಿಕೆ ಕಂಡುಬಂದಿದೆ. ರಾಜ್ಯಾದ್ಯಂತ ಫಾರ್ಮ್ 7 ಅರ್ಜಿಗಳ ಒಟ್ಟು ಏರಿಕೆಯ ಶೇ. 53ರಷ್ಟು ಭಾಗವು ಸೆಪ್ಟೆಂಬರ್ 22ರಿಂದ 24ರ ನಡುವಿನ ಕೇವಲ 72 ಗಂಟೆಗಳ ಒಳಗೆ ದಾಖಲಾಗಿದೆ.

ದೈನಂದಿನ ಸರಾಸರಿ ಕೇವಲ ಎರಡು ಆಕ್ಷೇಪಣೆಗಳನ್ನು ಹೊಂದಿದ್ದ ಭಾಲ್ಕಿಯಲ್ಲಿ, ಸೆಪ್ಟೆಂಬರ್ 22ರಂದು 384, ಸೆಪ್ಟೆಂಬರ್ 23ರಂದು 1,895 ಹಾಗೂ ಸೆಪ್ಟೆಂಬರ್ 24ರಂದು 525 ಆಕ್ಷೇಪಣೆಗಳು ದಾಖಲಾಗಿವೆ. ಸೆಪ್ಟೆಂಬರ್ 23ರಂದು ದಾಖಲಾದ ಸಂಖ್ಯೆಯು ಅದರ ಸಾಮಾನ್ಯ ದೈನಂದಿನ ಪ್ರಮಾಣಕ್ಕಿಂತ 948 ಪಟ್ಟು ಹೆಚ್ಚಾಗಿದೆ.

ಅದೇ ರೀತಿ, ದೈನಂದಿನ ಸರಾಸರಿ ಎರಡು ಆಕ್ಷೇಪಣೆಗಳನ್ನು ಹೊಂದಿದ್ದ ಬಬಲೇಶ್ವರದಲ್ಲಿ, ಸೆಪ್ಟೆಂಬರ್ 22ರಂದು 1,373 ಹಾಗೂ ಸೆಪ್ಟೆಂಬರ್ 23ರಂದು 257 ಆಕ್ಷೇಪಣೆಗಳು ದಾಖಲಾಗಿವೆ.

ಕರ್ನಾಟಕದಾದ್ಯಂತ 115 ಕ್ಷೇತ್ರಗಳಲ್ಲಿ ಹೆಸರು ಡಿಲೀಷನ್ ಅರ್ಜಿಗಳ ಸಲ್ಲಿಕೆಯು ಸಾಮಾನ್ಯ ದೈನಂದಿನ ಪ್ರಮಾಣಕ್ಕಿಂತ ಗಣನೀಯವಾಗಿ ಹೆಚ್ಚಿರುವ ಕನಿಷ್ಠ ಒಂದು ದಿನವಾದರೂ ದಾಖಲಾಗಿದೆ.

ಅರಸೀಕರೆಯಲ್ಲಿ ಸಾಮಾನ್ಯ ದೈನಂದಿನ 2 ಅರ್ಜಿಗಳ ವಿರುದ್ಧ ಸೆಪ್ಟೆಂಬರ್ 19ರಂದು 216 ಆಕ್ಷೇಪಣೆಗಳು ದಾಖಲಾಗಿದ್ದು, ಇದು 108 ಪಟ್ಟು ಹೆಚ್ಚಳವಾಗಿದೆ. ಮುಳಬಾಗಿಲಿನಲ್ಲಿ ಸಾಮಾನ್ಯ 3 ಅರ್ಜಿಗಳ ವಿರುದ್ಧ ಸೆಪ್ಟೆಂಬರ್ 23ರಂದು 205 ಅರ್ಜಿಗಳು ಸಲ್ಲಿಕೆಯಾಗಿದ್ದು, 68 ಪಟ್ಟು ಹೆಚ್ಚಳ ಕಂಡಿದೆ. ನಾಗಠಾಣದಲ್ಲಿ 2ರ ಬದಲಿಗೆ 133 (66 ಪಟ್ಟು) ಹಾಗೂ ಕೋಲಾರದಲ್ಲಿ 2ರ ಬದಲಿಗೆ 129 (64 ಪಟ್ಟು) ಆಕ್ಷೇಪಣೆಗಳು ದಾಖಲಾಗಿವೆ.

ಕೂಡ್ಲಿಗಿಯಲ್ಲಿ ಸಾಮಾನ್ಯ 3 ಅರ್ಜಿಗಳ ಬದಲಿಗೆ 174 (58 ಪಟ್ಟು), ಚಿಕ್ಕಮಗಳೂರಿನಲ್ಲಿ 3ರ ಬದಲಿಗೆ 147 (49 ಪಟ್ಟು), ಮಡಿಕೇರಿಯಲ್ಲಿ 6ರ ಬದಲಿಗೆ 223 (37 ಪಟ್ಟು), ಶಿಕಾರಿಪುರದಲ್ಲಿ 11ರ ಬದಲಿಗೆ 301 (27 ಪಟ್ಟು) ಹಾಗೂ ಶಿವಮೊಗ್ಗದಲ್ಲಿ 6ರ ಬದಲಿಗೆ 156 (26 ಪಟ್ಟು) ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.

ಮೇಲುಕೋಟೆಯಲ್ಲಿ ಸಾಮಾನ್ಯ 11 ಅರ್ಜಿಗಳ ವಿರುದ್ಧ ಸೆಪ್ಟೆಂಬರ್ 16ರಂದು 196 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಇದು 18 ಪಟ್ಟು ಹೆಚ್ಚಳವಾಗಿದೆ. ಹಡಗಲಿಯಲ್ಲಿ ಸಾಮಾನ್ಯ 16 ಅರ್ಜಿಗಳ ವಿರುದ್ಧ 212 ಅರ್ಜಿಗಳು ಸಲ್ಲಿಕೆಯಾಗಿದ್ದು, 13 ಪಟ್ಟು ಹೆಚ್ಚಳ ಕಂಡಿದೆ.

ಭಾಲ್ಕಿ ಮತ್ತು ಬಬಲೇಶ್ವರದಂತೆ ಅಲ್ಲದೆ, ಮೇಲುಕೋಟೆ, ಶಿಕಾರಿಪುರ, ಮಡಿಕೇರಿ ಮತ್ತು ಹನೂರು ಮುಂತಾದ ಕ್ಷೇತ್ರಗಳಲ್ಲಿ ಈ ತೀವ್ರ ಏರಿಕೆಯು ನೂರಾರು ವ್ಯಕ್ತಿಗಳಲ್ಲಿ ಹಂಚಿಹೋಗಿತ್ತು. ಇವರಲ್ಲಿ ಹೆಚ್ಚಿನವರು ಒಂದೇ ಒಂದು ಆಕ್ಷೇಪಣೆಯನ್ನು ಮಾತ್ರ ಸಲ್ಲಿಸಿದ್ದರು. ಉದಾಹರಣೆಗೆ, ಮೇಲುಕೋಟೆಯಲ್ಲಿ 648 ಆಕ್ಷೇಪಣೆಗಳು 565 ಪ್ರತ್ಯೇಕ ವ್ಯಕ್ತಿಗಳಿಂದ ಬಂದಿದ್ದವು.

ಭಾಲ್ಕಿ ಮತ್ತು ಬಬಲೇಶ್ವರ ಹೊರತುಪಡಿಸಿ, ಕರ್ನಾಟಕದ ಇತರೆಡೆ ಕೇವಲ ನಾಲ್ಕು ಖಾಸಗಿ ವ್ಯಕ್ತಿಗಳು ಮಾತ್ರ 10 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಬಸವಕಲ್ಯಾಣದಲ್ಲಿ ಸಿದ್ಧಪ್ಪ ಅವರು 81 ಆಕ್ಷೇಪಣೆಗಳಲ್ಲಿ 32 ಅನ್ನು ಸಲ್ಲಿಸಿದ್ದಾರೆ. ಬೆಳ್ತಂಗಡಿಯಲ್ಲಿ ಉಮೇಶ್ ಬಂಗೇರ ಅವರು 300ರಲ್ಲಿ 21 ಅನ್ನು ಸಲ್ಲಿಸಿದರೆ, ಉಮೇಶ್ ಎಂದು ದಾಖಲಾದ ಮತ್ತೊಬ್ಬ ವ್ಯಕ್ತಿ 10 ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಸಾಗರದಲ್ಲಿ ಮಹಾಬಲೇಶ್ವರ ಎಸ್. ಅವರು 311 ಆಕ್ಷೇಪಣೆಗಳಲ್ಲಿ 18 ಅನ್ನು ಸಲ್ಲಿಸಿದ್ದಾರೆ.

ಫಾರ್ಮ್ 9ರ ಮೂಲಕ ಹೊಸ ಮತದಾರರ ಸೇರ್ಪಡೆ ಪ್ರಕ್ರಿಯೆಯಲ್ಲೂ ತೀವ್ರ ಏರಿಕೆ ಕಂಡುಬಂದಿದೆ. ಒಟ್ಟು 117 ಕ್ಷೇತ್ರಗಳಲ್ಲಿ ಅಸಹಜ ಪ್ರಮಾಣದ ಅರ್ಜಿ ಸಲ್ಲಿಕೆ ದಾಖಲಾಗಿದ್ದು, ಹಠಾತ್ ಏರಿಕೆಯ ದಿನಗಳಲ್ಲಿ 54,525 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಒಟ್ಟು ಏರಿಕೆಯ ಮೂರನೇ ಎರಡರಷ್ಟು ಭಾಗವು 72 ಗಂಟೆಗಳ ಒಳಗೆ ಬಂದಿದ್ದು, ಇದರಲ್ಲಿ ಶೇ. 61ರಷ್ಟು ಅರ್ಜಿಗಳು ಸೆಪ್ಟೆಂಬರ್ 22 ಮತ್ತು 23ರಂದು ಸಲ್ಲಿಕೆಯಾಗಿವೆ.

ಕೇವಲ ಸೆಪ್ಟೆಂಬರ್ 23ರಂದೇ 98 ಕ್ಷೇತ್ರಗಳಲ್ಲಿ ಸಾಮಾನ್ಯ ದೈನಂದಿನ ಪ್ರಮಾಣಕ್ಕಿಂತ ಅತ್ಯಧಿಕ ಅರ್ಜಿಗಳು ದಾಖಲಾಗಿವೆ.

ಈ ಹಠಾತ್ ಏರಿಕೆಯ ಅರ್ಧಕ್ಕಿಂತ ಹೆಚ್ಚು ಭಾಗವು ಆರು ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿದೆ. ದಕ್ಷಿಣ ಕನ್ನಡದಲ್ಲಿ ಏರಿಕೆಯ ದಿನಗಳಲ್ಲಿ 9,404 ಅರ್ಜಿಗಳು ಸಲ್ಲಿಕೆಯಾಗಿದ್ದರೆ, ಕಲಬುರಗಿಯಲ್ಲಿ 5,460, ಯಾದಗಿರಿಯಲ್ಲಿ 5,307, ಉತ್ತರ ಕನ್ನಡದಲ್ಲಿ 4,879, ಬೀದರ್ ನಲ್ಲಿ 4,337 ಮತ್ತು ರಾಯಚೂರಿನಲ್ಲಿ 3,661 ಅರ್ಜಿಗಳು ದಾಖಲಾಗಿವೆ.

ಯಾದಗಿರಿಯಲ್ಲಿ ದೈನಂದಿನ ಸರಾಸರಿ 34 ಅರ್ಜಿಗಳ ವಿರುದ್ಧ 761 ಸೇರ್ಪಡೆ ಅರ್ಜಿಗಳು ಸಲ್ಲಿಕೆಯಾಗಿವೆ. ಬಂಟ್ವಾಳದಲ್ಲಿ 30ರ ವಿರುದ್ಧ 715, ಸಿಂಧನೂರಿನಲ್ಲಿ 96ರ ವಿರುದ್ಧ 626 ಮತ್ತು ಗುರುಮಠಕಲ್ನಲ್ಲಿ 54ರ ವಿರುದ್ಧ 616 ಅರ್ಜಿಗಳು ದಾಖಲಾಗಿವೆ.

ಹೊಸ ಸೇರ್ಪಡೆಗಳ ಹಠಾತ್ ಏರಿಕೆಯ ಒಟ್ಟು 301 ಘಟನೆಗಳಲ್ಲಿ, 111 ಘಟನೆಗಳು 2023ರ ಚುನಾವಣೆಯಲ್ಲಿ 10,000ಕ್ಕಿಂತ ಕಡಿಮೆ ಮತಗಳ ಅಂತರದಿಂದ ನಿರ್ಧಾರವಾದ ಕ್ಷೇತ್ರಗಳಲ್ಲಿ ನಡೆದಿವೆ. ಇವುಗಳ ಅಡಿಯಲ್ಲಿ 21,181 ಅರ್ಜಿಗಳು ಸಲ್ಲಿಕೆಯಾಗಿವೆ. ಕೇವಲ 2,579 ಮತಗಳ ಅಂತರದಿಂದ ಗೆಲುವು ಸಾಧಿಸಿದ ಗುರುಮಠಕಲ್ ನಲ್ಲಿ ಏರಿಕೆಯ ದಿನಗಳಲ್ಲಿ 2,226 ಸೇರ್ಪಡೆ ಅರ್ಜಿಗಳು ದಾಖಲಾಗಿದ್ದರೆ, 3,673 ಮತಗಳ ಅಂತರದಿಂದ ಗೆದ್ದ ಯಾದಗಿರಿಯಲ್ಲಿ ಇಂತಹ 2,206 ಅರ್ಜಿಗಳು ಸಲ್ಲಿಕೆಯಾಗಿವೆ.

ಮೇಲಿನ ವರದಿಯು ಬೆಂಗಳೂರು ಮೂಲದ ಪ್ರಮುಖ ರಾಜಕೀಯ ಸಂಶೋಧನಾ ಸಂಸ್ಥೆಯಾದ ‘ಸಂಕಲ್ಪ್’ ಹಂಚಿಕೊಂಡಿರುವ ಮಾಹಿತಿಯನ್ನು ಆಧರಿಸಿದೆ.

Tags

KarnatakaSIR
share
ವಾರ್ತಾಭಾರತಿ
ವಾರ್ತಾಭಾರತಿ
Next Story
X