Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬಯಲುಸೀಮೆಯಲ್ಲಿ ಅರಳಿದ ಕಾಶ್ಮೀರ ಕೇಸರಿ

ಬಯಲುಸೀಮೆಯಲ್ಲಿ ಅರಳಿದ ಕಾಶ್ಮೀರ ಕೇಸರಿ

ನಾರಾಯಣಸ್ವಾಮಿ ಸಿ.ಎಸ್.ನಾರಾಯಣಸ್ವಾಮಿ ಸಿ.ಎಸ್.17 Nov 2025 8:43 AM IST
share
ಬಯಲುಸೀಮೆಯಲ್ಲಿ ಅರಳಿದ ಕಾಶ್ಮೀರ ಕೇಸರಿ
ಐ.ಟಿ.ಉದ್ಯೋಗಿ ಪವನ್ ಮನೆಯಲ್ಲಿ ಹೊಸ ಪ್ರಯತ್ನ

ಹೊಸಕೋಟೆ: ಕಡಿಮೆ ಉಷ್ಣಾಂಶ, ಶೀತ ವಾತಾವರಣದಲ್ಲಿ ಮಾತ್ರ ಬೆಳೆಯುವ ಕಾಶ್ಮೀರಿ ಕೇಸರಿಯನ್ನು ದೊಡ್ಡಬಳ್ಳಾಪುರದ ಐಟಿ ಉದ್ಯೋಗಿ ಪವನ್ ಅವರು ಬಯಲು ಸೀಮೆಯಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ.

ಮಾರುತಿ ನಗರದ ಪವನ್ ವರ್ಷದ ಹಿಂದೆ ಕಾಶ್ಮೀರದ ಪುಲ್ವಾಮಾದ ತನ್ನ ಸ್ನೇಹಿತರ ಮೂಲಕ 50 ಕೆ.ಜಿ. ಕೇಸರಿ ಹೂವಿನ ಗೆಡ್ಡೆಗಳನ್ನು ತರಿಸಿಕೊಂಡಿದ್ದರು. ಅವುಗಳನ್ನು ಬೆಳೆಸುವ ಮಾಹಿತಿ ಪಡೆದುಕೊಂಡು ಮನೆಯಲ್ಲೇ ಕೃತಕ ವಾತಾವರಣ ಕಲ್ಪಿಸಿ ಕೇಸರಿ ಹೂವು ಬೆಳೆದು ಕೊಯ್ಲು ಮಾಡಿದ್ದಾರೆ.

ಮನೆಯಲ್ಲಿನ ಹತ್ತು ಅಡಿ ಉದ್ದ ಹಾಗೂ ಹತ್ತು ಅಡಿ ಅಗಲ ಇರುವ ಕೊಠಡಿಯಲ್ಲಿ ರ್ಯಾಕ್ ನಿರ್ಮಿಸಿ, ಟ್ರೇಗಳಲ್ಲಿ ಗೆಡ್ಡೆಗಳನ್ನು ಇರಿಸಿ ಕೃತಕ ವಾತಾವರಣದಲ್ಲಿ ಕೃಷಿಯಲ್ಲಿ ತೊಡಗಿದರು.

ಹಗಲಿನಲ್ಲಿ 16 ಡಿಗ್ರಿ, ರಾತ್ರಿ 10 ಡಿಗ್ರಿ ಸೆಲ್ಸಿಯಸ್ ತಣ್ಣನೆಯ ವಾತಾವರಣ ಸೃಷ್ಟಿಸಲು ಎ.ಸಿ. ಅಳವಡಿಸಿದರು. ಬೆಳಕಿಗಾಗಿ ಅಷ್ಟಾಗಿ ಬಿಸಿಯಾಗದ ಎಲ್‌ಇಡಿ ಟ್ಯೂಬ್ ಲೈಟ್ ಅಳವಡಿಸಿದರು.

ಜುಲೈನಲ್ಲಿ ಹೂವಿನ ಗೆಡ್ಡೆ ತರಿಸಿಕೊಂಡು ಟ್ರೇಗಳಲ್ಲಿ ಮಣ್ಣಿನಲ್ಲಿ ಶೇಖರಿಸಿ ಇಡಲಾಗಿತ್ತು. ಗೆಡ್ಡೆಗಳು ಮೊಳಕೆಯಾದ ನಂತರ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಮಣ್ಣಿನಿಂದ ಹೊರ ತೆಗೆದು ಕೊಠಡಿಯಲ್ಲಿನ ರ್ಯಾಕ್ ಮೇಲೆ ಪ್ಲಾಸ್ಟಿಕ್ ಹಾಳೆ ಹಾಸಿ ಅವುಗಳ ಮೇಲೆ ಗೆಡ್ಡೆ ಜೋಡಿಸಿದ ಬಳಿಕ ಮೊಳಕೆ ಹೂವಾಗಿ ಅರಳಿವೆ.

ಅಕ್ಟೋಬರ್ ಕೊನೆಯ ವಾರದಲ್ಲಿ ಗೆಡ್ಡೆಯಲ್ಲಿನ ಹುಲ್ಲಿನಂತಹ ಪೈರಿನಿಂದ ಹೂವಿನ ಮೊಗ್ಗು ಕಾಣಿಸಲಾರಂಭಿಸಿದವು. ಈಗ ಒಂದು ವಾರದಿಂದ ಇಲ್ಲಿಯವರೆಗೆ 50 ಗ್ರಾಂ ಕೇಸರಿ ಕೊಯ್ಲು ಮಾಡಲಾಗಿದೆ.

ಹೂವಿನ ಮಧ್ಯ ಭಾಗದ ಕೇಸರಿ ಬಣ್ಣದ ಸಣ್ಣ ಸಲಾಖೆಗಳನ್ನು (ಕಡ್ಡಿಗಳನ್ನು) ಬೇರ್ಪಡಿಸಿ ಮೂರು ಬಗೆಯಲ್ಲಿ ವಿಗಂಡಿಸಲಾಗುತ್ತದೆ. ಹೂವಿನ ಎಸಳುಗಳನ್ನು ಸುಂಗದ ದ್ರವ್ಯ, ಪೌಡರ್ ತಯಾರಿಕೆಗೆ, ಹೂವಿನ ಮದ್ಯಭಾಗದ ಹಳದಿ ಬಣ್ಣದ ಮಕರಂದ ಸಣ್ಣ ಕಡ್ಡಿಗಳನ್ನು ಸುವಾಸನೆಗೆ, ಕೇಸರಿ ಬಣ್ಣದ ಸಣ್ಣ ಕಡ್ಡಿಗಳನ್ನು ಬಣ್ಣಕ್ಕಾಗಿ ಅಡುಗೆ, ಇತರ ತಿನಿಸು ಹಾಗೂ ಆಯುರ್ವೇದ ಔಷಧಿಯಲ್ಲಿ ಬಳಸಲಾಗುತ್ತದೆ ಎಂದು ಪವನ್ ತಿಳಿಸಿದರು.

ಬೆಳೆಯುವುದು ಹೇಗೆ?

ಡಿಸೆಂಬರ್ ಅಂತ್ಯದ ವೇಳೆಗೆ ಹೂವು ಬಿಟ್ಟ ನಂತರ ಗೆಡ್ಡೆಗಳು ನೀಲಿ ಬಣ್ಣಕ್ಕೆ ತಿರುಗುತ್ತವೆ. ಆಗ ಗೆಡ್ಡೆಗಳನ್ನು ಸಂಗ್ರಹಿಸಿ ಮತ್ತೆ ಟ್ರೇಗಳಲ್ಲಿನ ಮಣ್ಣಿನಲ್ಲಿ ಹುದುಗಿಸಿಟ್ಟು ಮಣ್ಣಿನ ಮೇಲೆ ಕನಿಷ್ಠ ಪ್ರಮಾಣದಲ್ಲಿ ನೀರು ಸಿಂಪರಣೆ ಮಾಡಿದರೆ ಸಾಕು. ಒಂದು ಗೆಡ್ಡೆಯಿಂದ ಕನಿಷ್ಠ ಮೂರು ಗೆಡ್ಡೆಗಳು ಬೆಳೆಯುತ್ತವೆ. ಗೆಡ್ಡೆಗಳನ್ನು ಮತ್ತೆ ಆಗಸ್ಟ್ ವೇಳೆಗೆ ಹೊರತೆಗೆದು ಹೂವು ಬೆಳೆಸಲು ಆರಂಭಿಸಬೇಕು. ಈ ಬಗ್ಗೆ ಆಸಕ್ತರು ಬಂದರೆ ಅಗತ್ಯ ಮಾಹಿತಿ ನೀಡುತ್ತೇನೆ ಎಂದು ಪವನ್ ಹೇಳಿದ್ದಾರೆ.

ಹೊಸದಾಗಿ ಏನಾದರು ಪ್ರಯೋಗ ಮಾಡಬೇಕೆನ್ನುವ ನನ್ನ ಆಸೆ ಈಡೇರಿದೆ. ಕೇಸರಿ ಅದೇ ರುಚಿ ಇದೆಯೇ ಎಂದು ಪರೀಕ್ಷಿಸಲು ಸ್ನೇಹಿತರಿಗೆ ಕಳುಹಿಸಲಾಗಿದೆ. ಸ್ನೇಹಿತರ ಪ್ರತಿಕ್ರಿಯೆ ಬಳಿಕ ಮಾರುಕಟ್ಟೆಗೆ ವ್ಯವಸ್ಥೆ ಮಾಡಲಾಗುವುದು.

-ಪವನ್, ಐಟಿ ಉದ್ಯೋಗಿ

share
ನಾರಾಯಣಸ್ವಾಮಿ ಸಿ.ಎಸ್.
ನಾರಾಯಣಸ್ವಾಮಿ ಸಿ.ಎಸ್.
Next Story
X