Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೆ.ಜಿ.ಎಫ್. ದುರ್ಗತಿ

ಕೆ.ಜಿ.ಎಫ್. ದುರ್ಗತಿ

ಡಾ. ಟಿ. ಜಯರಾಂ, ಕೋಲಾರಡಾ. ಟಿ. ಜಯರಾಂ, ಕೋಲಾರ4 Dec 2023 2:22 PM IST
share
ಕೆ.ಜಿ.ಎಫ್. ದುರ್ಗತಿ
ಜಗತ್ಪ್ರಸಿದ್ಧ ಕೋಲಾರ ಚಿನ್ನದ ಗಣಿಗಳು ಮಾರ್ಚ್ 2024ಕ್ಕೆ ಶಾಶ್ವತವಾಗಿ ಸಂಪೂರ್ಣ ಸ್ತಬ್ದವಾಗಲಿರುವ ಹಿನ್ನೆಲೆಯಲ್ಲಿ ಜಗತ್ತಿನ ಎರಡನೇ ಅತಿ ಹೆಚ್ಚು ಆಳದ ಈ ಗಣಿಗಳು ನಡೆದು ಬಂದ ಹಾದಿಯ ಹಿನ್ನೋಟ ಈ ಲೇಖನ.

ಒಂದಾನೊಂದು ಕಾಲದಲ್ಲಿ ಲಿಟ್ಲ್ ಇಂಗ್ಲೆಂಡ್ ಎಂದು ಕರೆಸಿಕೊಳ್ಳುತ್ತಿದ್ದ ಕೆ.ಜಿ.ಎಫ್. ಚಿನ್ನದ ಗಣಿಗಳ ರೋಚಕ ಇತಿಹಾಸವನ್ನು ಕೋಲಾರ ಜಿಲ್ಲೆಯವರೇ ಆದ ಡಾ.ಎಂ.ವೆಂಕಟಸ್ವಾಮಿಯವರು ತಮ್ಮ ಡಾಕ್ಟರೇಟ್‌ಗಾಗಿ ಸಲ್ಲಿಸಿದ ಮಹಾಪ್ರಬಂಧದಲ್ಲಿ ಅತ್ಯಂತ ವಿಶದವಾಗಿ ವಿವರಿಸಿದ್ದಾರೆ. ಈ ಪ್ರಬಂಧವನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ‘ಸುವರ್ಣ ಕಥನ’ ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ.

ಕೆ.ಜಿ.ಎಫ್.ನದ್ದು ಸಂಘರ್ಷದ ಕಥಾನಕ. ಬ್ರಿಟಿಷರ ವೈಭವೋಪೇತ ಜೀವನ, ಗಣಿ ಕಾರ್ಮಿಕರ ನಿಕೃಷ್ಟ ಬದುಕು ಎರಡಕ್ಕೂ ಈ ಗಣಿಗಳು ಸಾಕ್ಷಿಯಾಗಿವೆ. ಸುಮಾರು 4,000 ವರ್ಷಗಳ ಹಿಂದೆಯೇ ಈ ಭಾಗದಲ್ಲಿ ಚಿನ್ನ ತೆಗೆಯುವ ಚಟುವಟಿಕೆ ನಡೆಸಿದ್ದರೂ, ಆಧುನಿಕ ಗಣಿಗಾರಿಕೆಗೆ ನಾಂದಿ ಹಾಡಿದ್ದು 1880ರಲ್ಲಿ ಜಾನ್ ಟೇಲರ್. 28.2.2001ರಲ್ಲಿ ಗಣಿಗಳು ಶಾಶ್ವತವಾಗಿ ಮುಚ್ಚುವ ತನಕ ಈ 121 ವರ್ಷಗಳಲ್ಲಿ ತೆಗೆದ ಒಟ್ಟು ಚಿನ್ನ ಸುಮಾರು 1,000 ಟನ್‌ಗಳು. ಆದರೆ ಇದರಲ್ಲಿ 1947ರವರೆಗೆ ಬ್ರಿಟನ್ 650 ಟನ್ ಚಿನ್ನವನ್ನು ತನ್ನ ದೇಶಕ್ಕೆ ಸಾಗಿಸಿದೆ. ರವಿ ಮುಳುಗದ ಸಾಮ್ರಾಜ್ಯದ ರಾಜ ರಾಣಿಯರ ವೈಭೋವೋಪೇತ ಜೀವನಕ್ಕೆ ಕಾರಣ ಸಾವಿರಾರು ಅಡಿಗಳ ಆಳದ 60 ಡಿಗ್ರಿ ಸೆಲ್ಸಿಯಸ್ ತಾಪಮಾನದ ಗಣಿಗಳಲ್ಲಿ, ತಮ್ಮ ಜೀವವನ್ನು ಪಣಕ್ಕಿಟ್ಟು ಚಿನ್ನದ ಅದಿರನ್ನು ಹೊತ್ತು ತರುವ ನಮ್ಮ ಬಡ ಕೂಲಿ ಕಾರ್ಮಿಕರು ಎಂಬುದು ಎಂತಹ ವೈರುಧ್ಯ

ಆಗಿನ ಕಾಲಕ್ಕೆ ಕೆ.ಜಿ.ಎಫ್.ನಲ್ಲಿ ಏನೆಲ್ಲ ಸಿಗುತ್ತಿತ್ತು ಎಂಬ ವಿವರ ನೋಡಿದರೆ ದಿಗ್ಭ್ರಮೆ ಉಂಟಾಗುತ್ತದೆ. ಏಶ್ಯದಲ್ಲಿ ಮೊದಲ ವಿದ್ಯುತ್ ಸಂಪರ್ಕ ಪಡೆದದ್ದು ಕೆ.ಜಿ.ಎಫ್.,1902ರಲ್ಲಿ. ಇದಾದ ಎರಡು ವರ್ಷಗಳ ನಂತರ ಬೆಂಗಳೂರು ನಗರಕ್ಕೆ ವಿದ್ಯುತ್ ಸಂಪರ್ಕ ಕೊಡಲಾಯಿತು. ಆದರೆ ವಿಪರ್ಯಾಸವೆಂದರೆ ಗಣಿ ಕಾರ್ಮಿಕರ ಕಾಲನಿಗಳಿಗೆ ವಿದ್ಯುತ್ ಬಂದದ್ದು 1976ರಲ್ಲಿ. ಯೂರೋಪ್ ಮಾದರಿಯ ದೊಡ್ಡ ಬಂಗಲೆಗಳು, ಕ್ಲಬ್ಬುಗಳು, ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ವಿಶಾಲವಾದ ಆಟದ ಮೈದಾನಗಳು ಎಲ್ಲವೂ ಇದ್ದ ಕೆ.ಜಿ.ಎಫ್.ನಲ್ಲಿ ಬ್ರಿಟಿಷ್ ಅಧಿಕಾರಿಗಳು ವೈಭವದ ಜೀವನ ನಡೆಸುತ್ತಿದ್ದರು. ಒಬ್ಬ ಬ್ರಿಟಿಷ್ ಅಧಿಕಾರಿಯ ಮನೆಯಲ್ಲಿ ಬಟ್ಲರ್, ಮೇಟಿ, ಆಯಾ, ಸ್ವೀಪರ್, ಮಾಲಿ, ಡಾಗ್ ಬಾಯ್, ಟೀ ಬಾಯ್ ಇತ್ಯಾದಿ ಹೆಸರಲ್ಲಿ ಕನಿಷ್ಠ 8 ಜನ ನೌಕರರು ಇರುತ್ತಿದ್ದರು. 1884ರಲ್ಲಿ ಪ್ರಾರಂಭವಾದ ಮೈನಿಂಗ್ ಆಸ್ಪತ್ರೆ ದೇಶದ ಅತ್ಯಂತ ಸ್ವಚ್ಛ ಹಾಗೂ ಆಧುನಿಕ ಸವಲತ್ತುಗಳು ಉಳ್ಳ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇಲ್ಲಿ ದಿನವೊಂದಕ್ಕೆ ಸುಮಾರು 2,000 ಜನ ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರಂತೆ.

1894ರಲ್ಲಿಯೇ ಕೆ.ಜಿ.ಎಫ್. ತನಕ ರೈಲು ಹಾದಿ ನಿರ್ಮಾಣವಾಯಿತು. ಬ್ರಿಟಿಷ್ ಮಿಲಿಟರಿ ಅಧಿಕಾರಿ ರಾಬರ್ಟ್‌ಸನ್ ಹೆಸರಲ್ಲಿ ರಾಬರ್ಟ್‌ಸನ್ ಪೇಟೆ, ವಿದೇಶಿ ಮದ್ಯ ಮಾರುತ್ತಿದ್ದ ಆಂಡ್ರಸನ್ ಹೆಸರಲ್ಲಿ ಆಂಡ್ರಸನ್ ಪೇಟೆ ಸ್ಥಾಪಿತವಾಗಿ, ಇದರಲ್ಲಿ ಇಂಗ್ಲೆಂಡ್‌ನಿಂದ ಬಿಯರ್ ತರಿಸಿ ಮಾರುತ್ತಿದ್ದ ಪ್ರದೇಶಕ್ಕೆ ಬೀರ್ ಶಾಪ್ ಎಂದು ಕರೆಯುತ್ತಿದ್ದರು. ಈ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಕೆಲ ಬ್ರಿಟಿಷರು ಸ್ವಂತ ಕಾರು ಹೊಂದಿದ್ದರಂತೆ. ಬಸ್ಸು, ಕಾರು, ಲಾರಿ, ದ್ವಿಚಕ್ರ ವಾಹನ, ಸೈಕಲ್ ಮಾತ್ರವಲ್ಲದೆ ಗೋಡೆ ಗಡಿಯಾರ, ಕೈ ಗಡಿಯಾರ, ವಾಚು, ಕೊಡಕ್ ಕ್ಯಾಮರಾ, ರೇಡಿಯೊ, ಸಂಗೀತ ಸಲಕರಣೆಗಳು, ಇಲೆಕ್ಟ್ರಿಕ್ ಸಾಮಗ್ರಿಗಳು, ಟೈಲರಿಂಗ್ ಯಂತ್ರಗಳು ಇತ್ಯಾದಿ ಎಲ್ಲವೂ ಇಲ್ಲಿ ದೊರಕುತ್ತಿದ್ದವು. ಸಿನೆಮಾ ಬರುವುದಕ್ಕೆ ಮುಂಚೆಯೇ ಒಲಿಂಪಿಕ್ ಹಾಲ್‌ನಲ್ಲಿ ಲ್ಯಾಂಟೀನ್ ಬೆಳಕಲ್ಲಿ ಸ್ಲೈಡ್‌ಗಳನ್ನು ಹಾಕುತ್ತಿದ್ದರು. ಅದೇ ಬೆಳಕಲ್ಲಿ ಸಂಗೀತ ಕಚೇರಿಗಳು, ನಾಟಕಗಳು ನಡೆಯುತ್ತಿದ್ದವು. ರಾಜ್ಯದ ನಾಲ್ಕನೇ ಅತಿ ದೊಡ್ಡ ಪಟ್ಟಣವಾಗಿದ್ದ ಕೆ.ಜಿ.ಎಫ್. ಮದ್ಯಪಾನದಲ್ಲಿ ಮಾತ್ರ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿತ್ತು. ಕೆ.ಜಿ.ಎಫ್.ನಲ್ಲಿ ಕ್ರಿಸ್‌ಮಸ್ ಸಂಭ್ರಮ ಒಂದು ತಿಂಗಳ ಮುಂಚೆಯೇ ಪ್ರಾರಂಭವಾಗಿ ಅತ್ಯಂತ ರಂಗು ರಂಗಾಗಿ ಅನೇಕ ಆಟೋಟಗಳು, ಪ್ರದರ್ಶನಗಳು, ಸ್ಪರ್ಧೆಗಳು ನಡೆಯುತ್ತಿತ್ತು.

ಆ ಕಾಲಕ್ಕೆ ಕೆ.ಜಿ.ಎಫ್.ನಲ್ಲಿ ನೂರಕ್ಕೂ ಹೆಚ್ಚು ಚರ್ಚುಗಳು ಇದ್ದವು. 1942ರಲ್ಲಿ ನಡೆದ ಅಧ್ಯಯನದ ಪ್ರಕಾರ ರಾಜ್ಯದ 3/2 ಭಾಗದಷ್ಟು ಜನರಿಗೆ ತಮ್ಮ ಮಾತೃಭಾಷೆ ಬಿಟ್ಟು ಬೇರೆ ಭಾಷೆಯಲ್ಲಿ ಬರೆಯಲು, ಮಾತನಾಡಲು ಬರುತ್ತಿರಲಿಲ್ಲವಾದರೂ, ಕೆ.ಜಿ.ಎಫ್.ನಲ್ಲಿ ಸುಮಾರು ಹತ್ತು ಸಾವಿರ ಜನ ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದರು. ಅಷ್ಟೇ ಅಲ್ಲ, ಮೇ ತಿಂಗಳಿನಲ್ಲಿ ಕೆಂಪು ಹೂಗಳಿಂದ ಕಂಗೊಳಿಸುವ ಗುಲ್ ಮೊಹರ್ ಮರಗಳು ಮಡಗಾಸ್ಕರ್‌ನಿಂದ ನಮ್ಮ ದೇಶಕ್ಕೆ ಮೊದಲು ಬಂದದ್ದು ಕೆ.ಜಿ.ಎಫ್.ಗೇ.

2001 ಫೆಬ್ರವರಿಯಲ್ಲಿ ಚಿನ್ನದ ಗಣಿಗಳು ಶಾಶ್ವತವಾಗಿ ಮುಚ್ಚುವುದರೊಂದಿಗೆ ಕೆ.ಜಿ.ಎಫ್.ನ ರಂಗು ರಂಗಿನ ಸುವರ್ಣ ಕಥನಕ್ಕೆ ಅಂತಿಮ ತೆರೆ ಬಿದ್ದಿತು. 120ವರ್ಷಗಳಲ್ಲಿ 50 ಮಿಲಿಯನ್ ಟನ್‌ಗಳಷ್ಟು ಶಿಲೆಗಳನ್ನು ಪುಡಿ ಮಾಡಿ ಎಸೆದ ಗಣಿ ತ್ಯಾಜ್ಯ ಮಣ್ಣಿನ ಗುಡ್ಡೆಗಳು ಸುತ್ತ ಬೆಟ್ಟಗಳಂತೆ ಹರಡಿಕೊಂಡು, ಕೆ.ಜಿ.ಎಫ್.ನ ದುಸ್ಥಿತಿಗೆ ಮೌನವಾಗಿ ರೋದಿಸುತ್ತಿರುವಂತೆ ಕಾಣುತ್ತಿದೆ. ಅಳಿದುಳಿದ ಗಣಿ ಕಾರ್ಮಿಕರ ಮನೆಗಳ ಯುವಕ, ಯುವತಿಯರು ಬೆಳಗ್ಗೆಯೇ ‘ಸ್ವರ್ಣ ಎಕ್ಸ್ ಪ್ರೆಸ್’ನಲ್ಲಿ ಯಾವ್ಯಾವುದೋ ಕೆಲಸಗಳಿಗೆ ಬೆಂಗಳೂರಿಗೆ ಹೋಗಿ ತಡ ರಾತ್ರಿ ಹಿಂದಿರುಗುತ್ತಾರೆ.

4,000 ವರ್ಷಗಳ ಇತಿಹಾಸ, 120ವರ್ಷಗಳ ಆಧುನಿಕ ಗಣಿಗಾರಿಕೆ ನಡೆದ, ಜಗತ್ತಿನ ತಾಯಿ ಗಣಿಗಳು ಎಂದು ಪ್ರಸಿದ್ಧವಾಗಿದ್ದ, ಚಿನ್ನದ ಗಣಿಗಳ ರೋಚಕ ಇತಿಹಾಸವನ್ನು, ಗಣಿಗಾರಿಕೆಯ ವಿವಿಧ ಮಜಲುಗಳನ್ನು ಪರಿಚಯಿಸುವ ಸಂಗ್ರಹಾಲಯವನ್ನು ಕೆ.ಜಿ.ಎಫ್.ನಲ್ಲಿ ಸ್ಥಾಪಿಸಿ, ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸಬಹುದಿತ್ತು. ಕೇವಲ ಸಿನೆಮಾ ಹೆಸರಿನಿಂದ ಕೆ.ಜಿ.ಎಫ್. ಅನ್ನು ನೆನೆಯುವ ಇಂದಿನ ಜನಾಂಗದವರಿಗೆ ನಮ್ಮ ಕೆ.ಜಿ.ಎಫ್. ನ ಈ ರೋಚಕ ಹಿನ್ನೆಲೆಯ ಬಗ್ಗೆ ಅರಿವು ಮೂಡಿಸಬಹುದಿತ್ತು. ಆದರೆ ಯಾವುದೇ ಸರಕಾರಗಳು ಈ ಬಗ್ಗೆ ಗಮನಹರಿಸದಿರುವುದು ದುರದೃಷ್ಟಕರ.

share
ಡಾ. ಟಿ. ಜಯರಾಂ, ಕೋಲಾರ
ಡಾ. ಟಿ. ಜಯರಾಂ, ಕೋಲಾರ
Next Story
X