Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನೆಟ್‌ ಫ್ಲಿಕ್ಸ್ ನಲ್ಲಿ ಭಾರಿ ಉದ್ಯೋಗ...

ನೆಟ್‌ ಫ್ಲಿಕ್ಸ್ ನಲ್ಲಿ ಭಾರಿ ಉದ್ಯೋಗ ಕಡಿತ; ಶೇ 6ರಷ್ಟು ಸಿಬ್ಬಂದಿ ವಜಾಕ್ಕೆ OTT ದೈತ್ಯದ ನಿರ್ಧಾರ!

ವಾರ್ತಾಭಾರತಿವಾರ್ತಾಭಾರತಿ16 Oct 2026 11:46 PM IST
share
ನೆಟ್‌ ಫ್ಲಿಕ್ಸ್ ನಲ್ಲಿ ಭಾರಿ ಉದ್ಯೋಗ ಕಡಿತ; ಶೇ 6ರಷ್ಟು ಸಿಬ್ಬಂದಿ ವಜಾಕ್ಕೆ OTT ದೈತ್ಯದ ನಿರ್ಧಾರ!

ನೆಟ್‌ ಫ್ಲಿಕ್ಸ್ ನ ಸಹ ಸಿಇಒಗಳಾದ ಗ್ರೆಗ್ ಪೀಟರ್ಸ್ ಮತ್ತು ಟೆಡ್ ಸರಾಂಡೋಸ್ ಬುಧವಾರ ಉದ್ಯೋಗಿಗಳಿಗೆ ಬರೆದ ಮೆಮೊದಲ್ಲಿ ಉದ್ಯೋಗ ಕಡಿತವನ್ನು ಘೋಷಿಸಿದ್ದಾರೆ.

ಸ್ಟ್ರೀಮಿಂಗ್ ದೈತ್ಯ ಕಂಪೆನಿ ನೆಟ್ಫ್ಲಿಕ್ಸ್ ತನ್ನ ಉದ್ಯೋಗಿಗಳಲ್ಲಿ ಶೇ 6ರಷ್ಟು ಮಂದಿಯನ್ನು, ಅಂದರೆ 1,000 ಹುದ್ದೆಗಳನ್ನು ಕಡಿತಗೊಳಿಸಲು ಯೋಜಿಸಿದೆ.

ಈ ಬಗ್ಗೆ ವಿವರ ನೀಡಿದ ನೆಟ್‌ ಫ್ಲಿಕ್ಸ್ ನ ಸಹ ಸಿಇಒಗಳಾದ ಗ್ರೆಗ್ ಪೀಟರ್ಸ್ ಮತ್ತು ಟೆಡ್ ಸರಾಂಡೋಸ್, ಬುಧವಾರ ಉದ್ಯೋಗಿಗಳಿಗೆ ಬರೆದ ಮೆಮೊದಲ್ಲಿ ಉದ್ಯೋಗ ಕಡಿತವನ್ನು ಘೋಷಿಸಿದ್ದಾರೆ. ಕಂಪೆನಿಯ ಉತ್ಪನ್ನ, ತಂತ್ರಜ್ಞಾನ, ಕಾನೂನು ಮತ್ತು ಮಾನವ ಸಂಪನ್ಮೂಲ ತಂಡಗಳ ಮೇಲೆ ಈ ನಿರ್ಧಾರ ಹೆಚ್ಚು ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.

“ಇಂತಹ ನಿರ್ಧಾರಗಳು ಎಂದಿಗೂ ಸುಲಭವಲ್ಲ ಮತ್ತು ನಾವು ಅವುಗಳನ್ನು ಹಗುರವಾಗಿ ಪರಿಗಣಿಸುವುದಿಲ್ಲ” ಎಂದು ಮೆಮೊದಲ್ಲಿ ತಿಳಿಸಲಾಗಿದೆ. ನೆಟ್‌ ಫ್ಲಿಕ್ಸ್ ನ ವಹಿವಾಟಿನಲ್ಲಿ ಹಿಂಜರಿತವಾಗಿಲ್ಲ, ವ್ಯವಹಾರ ಪ್ರಬಲವಾಗಿದೆ ಎಂದು ಕಂಪೆನಿ ಸಮರ್ಥಿಸಿಕೊಂಡಿದೆ. ಆದರೆ, “ನೆಟ್‌ ಫ್ಲಿಕ್ಸ್ ನ ಭವಿಷ್ಯದ ಬೆಳವಣಿಗೆಗೆ ಮತ್ತು ಸೇವೆಯನ್ನು ಸುಧಾರಿಸಲು ಹೆಚ್ಚಿನ ಪರಿಣಾಮ ಬೀರುವ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದರಿಂದ, ನಮ್ಮ ಜನರು ಮತ್ತು ಸಂಪನ್ಮೂಲಗಳಿಗೆ ಎಲ್ಲಿ ಆದ್ಯತೆ ನೀಡುತ್ತೇವೆ ಎಂಬುದರ ಕುರಿತು ನಾವು ಶಿಸ್ತುಬದ್ಧವಾಗಿರಬೇಕು” ಎಂದು ಅವರು ಮೆಮೊದಲ್ಲಿ ಹೇಳಿದ್ದಾರೆ.

ಮೆಮೊದಲ್ಲಿ ತಿಳಿಸಿರುವುದನ್ನು ಹೊರತುಪಡಿಸಿ ಹೆಚ್ಚಿನ ವಿವರಗಳನ್ನು ನೀಡಲು ನೆಟ್ಫ್ಲಿಕ್ಸ್ ನಿರಾಕರಿಸಿದೆ. ಸದಸ್ಯತ್ವ ನೋಂದಣಿಗಳು ಮತ್ತು ಬೆಲೆ ಏರಿಕೆಯ ನಡುವೆಯೇ ಈ ವರ್ಷ ನೆಟ್‌ ಫ್ಲಿಕ್ಸ್ ನ ಲಾಭ ಹೆಚ್ಚಾಗಿದೆ. ತನ್ನ ಎರಡನೇ ಹಣಕಾಸು ತ್ರೈಮಾಸಿಕದಲ್ಲಿ ಕಂಪೆನಿ 3.4 ಶತಕೋಟಿ ಡಾಲರ್ ಲಾಭ ಗಳಿಸಿದ್ದು, 12.56 ಶತಕೋಟಿ ಡಾಲರ್ ಆದಾಯ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇವು ಕ್ರಮವಾಗಿ ಶೇ 9 ಮತ್ತು ಶೇ 13ರಷ್ಟು ಹೆಚ್ಚಳವಾಗಿವೆ.

ಮೂರನೇ ತ್ರೈಮಾಸಿಕಕ್ಕೆ ಸಂಬಂಧಿಸಿದಂತೆ ನೆಟ್ಫ್ಲಿಕ್ಸ್ ನೀಡಿರುವ ಮುನ್ಸೂಚನೆಯು ವಾಲ್ಸ್ಟ್ರೀಟ್ನ ನಿರೀಕ್ಷೆಗಳಿಗಿಂತ ಕಡಿಮೆಯಾಗಿದೆ. ಕಂಪೆನಿಯು ಮುಂದಿನ ವಾರ ಈ ತ್ರೈಮಾಸಿಕದ ಗಳಿಕೆಯ ವಿವರಗಳನ್ನು ಪ್ರಕಟಿಸಲು ಯೋಜಿಸಿದೆ.

ಸ್ಟ್ರೀಮಿಂಗ್ ವಹಿವಾಟಿನಲ್ಲಿ ಹೆಚ್ಚು ಹೆಚ್ಚು ಕಂಪೆನಿಗಳು ಪ್ರವೇಶಿಸುತ್ತಿದ್ದರೂ ನೆಟ್ಫ್ಲಿಕ್ಸ್ ಪ್ರಬಲ ಸ್ಪರ್ಧಿಯಾಗಿ ಉಳಿದಿದೆ. ಸ್ಟ್ರೀಮಿಂಗ್ ಮಾರ್ಗದರ್ಶಿ ಜಸ್ಟ್ವಾಚ್ನ ಇತ್ತೀಚಿನ ದತ್ತಾಂಶದ ಪ್ರಕಾರ, ನೆಟ್ಫ್ಲಿಕ್ಸ್ ವಹಿವಾಟು ಮಾರುಕಟ್ಟೆಯಲ್ಲಿ ಶೇ 19ರಷ್ಟು ಪಾಲು ಹೊಂದಿದೆ. ಅಮೆಜಾನ್ನ ಪ್ರೈಮ್ ವಿಡಿಯೊ ಮತ್ತು ಡಿಸ್ನಿ+ನಂತಹ ಪ್ರತಿಸ್ಪರ್ಧಿಗಳು ಇದಕ್ಕಿಂತ ಬಹಳ ಹಿಂದಿವೆ.

ಕಳೆದ ವಾರ ವಾರ್ನರ್ ಬ್ರದರ್ಸ್ ಡಿಸ್ಕವರಿ (Warner Bros. Discovery) ಕಂಪೆನಿಯನ್ನು ಪ್ಯಾರಾಮೌಂಟ್ 81 ಶತಕೋಟಿ ಡಾಲರ್ಗೆ ಖರೀದಿಸುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, HBO ಮ್ಯಾಕ್ಸ್ ಮತ್ತು ಪ್ಯಾರಾಮೌಂಟ್+ ಎರಡೂ ಒಂದೇ ಸೂರಿನಡಿ, ಅಂದರೆ ಸ್ಕೈಡ್ಯಾನ್ಸ್ ಅಡಿಯಲ್ಲಿ ಬಂದಿವೆ. ಹೊಸ ಹಾಲಿವುಡ್ ದೈತ್ಯ ಕಂಪೆನಿಯು ತನ್ನ ಸ್ಟ್ರೀಮಿಂಗ್ ಉತ್ಪನ್ನಗಳನ್ನು ಕಾಲಕ್ರಮೇಣ ಒಂದೇ ಸೇವೆಯಾಗಿ ಏಕೀಕರಿಸಲು ಯೋಜಿಸಿದೆ.

ನೆಟ್ಫ್ಲಿಕ್ಸ್ ಆರಂಭದಲ್ಲಿ ಕಳೆದ ವರ್ಷದ ಕೊನೆಯಲ್ಲಿ ವಾರ್ನರ್ನ ಸ್ಟುಡಿಯೊ ಮತ್ತು ಸ್ಟ್ರೀಮಿಂಗ್ ವ್ಯವಹಾರವನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. ಆದರೆ, ಫೆಬ್ರವರಿಯಲ್ಲಿ ಆ ಕೊಡುಗೆಯಿಂದ ಹಿಂದೆ ಸರಿದಿತ್ತು.

2025ರ ಅಂತ್ಯದ ವೇಳೆಗೆ ನಿಯಂತ್ರಕ ದಾಖಲೆಗಳ ಪ್ರಕಾರ, ನೆಟ್ಫ್ಲಿಕ್ಸ್ ವಿಶ್ವದಾದ್ಯಂತ ಸುಮಾರು 16,000 ಪೂರ್ಣಾವಧಿ ಉದ್ಯೋಗಿಗಳನ್ನು ಹೊಂದಿತ್ತು. ಬುಧವಾರ ಘೋಷಿಸಲಾದ ಉದ್ಯೋಗ ಕಡಿತವು ಕಂಪೆನಿಯು ಹಲವು ವರ್ಷಗಳಲ್ಲಿ ಕೈಗೊಂಡ ಅತಿದೊಡ್ಡ ಉದ್ಯೋಗ ಕಡಿತದ ಸುತ್ತಾಗಿದೆ.

Tags

NetflixOTT
share
ವಾರ್ತಾಭಾರತಿ
ವಾರ್ತಾಭಾರತಿ
Next Story
X