Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಿಜೋರಾಂ: ಎಂಎನ್‌ಎಫ್‌ಗೆ ಝಡ್‌ಪಿಎಂ...

ಮಿಜೋರಾಂ: ಎಂಎನ್‌ಎಫ್‌ಗೆ ಝಡ್‌ಪಿಎಂ ಸೆಡ್ಡು ಹೊಡೆದೀತೇ?

ಪಂಚ ರಾಜ್ಯ ಚುನಾವಣೆ

ಹರೀಶ್ ಎಚ್.ಕೆ.ಹರೀಶ್ ಎಚ್.ಕೆ.31 Oct 2023 12:51 PM IST
share
ಮಿಜೋರಾಂ: ಎಂಎನ್‌ಎಫ್‌ಗೆ ಝಡ್‌ಪಿಎಂ ಸೆಡ್ಡು ಹೊಡೆದೀತೇ?
ಪಂಚರಾಜ್ಯ ಚುನಾವಣೆಗಳಲ್ಲಿ ಈಶಾನ್ಯ ರಾಜ್ಯವಾದ ಮಿಜೋರಾಂ ಚುನಾವಣೆಯೂ ಸೇರಿದೆ. ಈ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳೇ ಪ್ರಬಲವಾಗಿವೆ. ಕಾಂಗ್ರೆಸ್ ಪೈಪೋಟಿ ನೀಡಬಲ್ಲುದಾದರೂ, ಬಿಜೆಪಿಗೆ ಮಾತ್ರ ಇಲ್ಲಿ ನೆಲೆಯಿಲ್ಲ. ಈ ಸಲ ಆಡಳಿತಾರೂಢ ಎಂಎನ್ಎಫ್ಗೆ ಝಡ್ಪಿಎಂ ಭಾರೀ ಪೈಪೋಟಿ ಒಡ್ಡುತ್ತಿದೆ.

ಮಿಜೋರಾಂ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಒಂದು.

ಮಿರೆ ಭಾಷೆಯಲ್ಲಿ ಮಿಜೋರಾಂ ಎಂದರೆ ಬೆಟ್ಟಗಳ ನಾಡು ಎಂದರ್ಥ.

ಐಜ್ವಾಲ್ ಇದರ ರಾಜಧಾನಿ ನಗರ.

ಇದು ತ್ರಿಪುರಾ, ಅಸ್ಸಾಂ ಮತ್ತು ಮಣಿಪುರಗಳೊಂದಿಗೆ ಮಾತ್ರವಲ್ಲದೆ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ದೇಶಗಳೊಂದಿಗೂ 722 ಕಿಮೀ ಗಡಿಯನ್ನು ಹಂಚಿಕೊಂಡಿದೆ.

ಭಾರತದ ಹಲವಾರು ಇತರ ಈಶಾನ್ಯ ರಾಜ್ಯಗಳಂತೆ ಮಿಜೋರಾಂ ಕೂಡ ಈ ಹಿಂದೆ 1972ರವರೆಗೆ ಅಸ್ಸಾಂನ ಭಾಗವಾಗಿತ್ತು. ಆ ಬಳಿಕ ಅದು ಕೇಂದ್ರಾಡಳಿತ ಪ್ರದೇಶವಾಯಿತು. 1987ರ ಫೆಬ್ರವರಿ 20ರಂದು ಇದು ಪೂರ್ಣ ಪ್ರಮಾಣದ ರಾಜ್ಯವಾಗಿ ರಚನೆಯಾಯಿತು.

ಮಿಜೋರಾಂ ಜನಸಂಖ್ಯೆಯ ಸುಮಾರು ಶೇ.95ರಷ್ಟು ವೈವಿಧ್ಯಮಯ ಬುಡಕಟ್ಟು ಮೂಲದವರು. ಮಿರೆ ಜನರು ಮಂಗೋಲಿಯನ್ ಬುಡಕಟ್ಟಿಗೆ ಸೇರಿದವರು.

ಮಿರೆಗಳಲ್ಲಿ ಲುಷಾಯಿ, ಪಾವಿ, ಸೈಥೆ, ರಾಲ್ಟೆ, ಪಾಂಗ್ ಹ್ಮಾರ್, ಕುಕಿ, ಮರಾ ಲಾಖೆರ್ ಮುಂತಾದ ಅನೇಕ ಬುಡಕಟ್ಟುಗಳಿವೆ.

ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯಗಳ ಸಾಲಿನಲ್ಲಿ ಕೇರಳದ ನಂತರದ ಸ್ಥಾನದಲ್ಲಿ ಮಿಜೋರಾಂ ಇದೆ. ಒಟ್ಟು ಜನಸಂಖ್ಯೆಯ ಶೇ.87ರಷ್ಟು ಕ್ರಿಶ್ಚಿಯನ್ನರೇ ಇದ್ದಾರೆ. ಉಳಿದಂತೆ, ಬೌದ್ಧರು, ಹಿಂದೂಗಳು, ಮುಸ್ಲಿಮರು ಮತ್ತಿತರ ಸಮುದಾಯದವರಿದ್ದಾರೆ.

ಕೃಷಿ ಇಲ್ಲಿನ ಆರ್ಥಿಕತೆಯ ಜೀವಾಳವಾಗಿದೆ. ಕೈಮಗ್ಗ, ಕರಕುಶಲ ಉದ್ಯಮಗಳೂ ಇವೆ.

11 ಜಿಲ್ಲೆಗಳನ್ನು ಹೊಂದಿರುವ ಮಿಜೋರಾಂನ ವಿಧಾನಸಭೆ 40 ಸದಸ್ಯ ಬಲವನ್ನು ಹೊಂದಿದೆ.

ಪ್ರಸಕ್ತ ಆಡಳಿತಾರೂಢ ಪಕ್ಷ-ಮಿರೆ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ಹಾಗೂ ಎಂಎನ್ಎಫ್ ಅಧ್ಯಕ್ಷರಾಗಿರುವ ಪು ರೆರಮ್ತಂಗ ಮುಖ್ಯಮಂತ್ರಿ.

ಪ್ರತಿಪಕ್ಷ-ರೆರಾಂ ಪೀಪಲ್ಸ್ ಮೂವ್ಮೆಂಟ್ (ಝಡ್ಪಿಎಂ)

ರಾಜ್ಯದಲ್ಲಿನ ಒಟ್ಟು ಮತದಾರರು - 8,56,868

2018ರ ಚುನಾವಣೆಯಲ್ಲಿನ ಬಲಾಬಲ ಹೀಗಿತ್ತು: ಎಂಎನ್ಎಫ್ 26, ಪಕ್ಷೇತರರು 8, ಕಾಂಗ್ರೆಸ್ 5, ಬಿಜೆಪಿ1.

ಆನಂತರ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಎಂಎನ್ಎಫ್ 2 ಸ್ಥಾನಗಳನ್ನು ಗೆದ್ದುಕೊಂಡು, ಸ್ಥಾನ ಬಲವನ್ನು 28ಕ್ಕೆ ಹೆಚ್ಚಿಸಿಕೊಂಡಿತ್ತು.

ಪ್ರಾದೇಶಿಕ ಪಕ್ಷಗಳೇ ಪ್ರಬಲವಾಗಿರುವ ಮಿಜೋರಾಂ ನಲ್ಲಿ ಆಡಳಿತಾರೂಢ ಎಂಎನ್ಎಫ್ಗೆ ಝಡ್ಪಿಎಂ ಪ್ರಮುಖ ಸವಾಲಾಗಿದೆ.

ಎರಡು ಪಕ್ಷಗಳ ಆಡಳಿತದ ಇತಿಹಾಸ ಹೊಂದಿರುವ ರಾಜ್ಯದಲ್ಲಿ ಎಂಎನ್ಎಫ್ ಮತ್ತು ಕಾಂಗ್ರೆಸ್ ನಡುವೆ ಸಾಮಾನ್ಯವಾಗಿ ಸ್ಪರ್ಧೆ ಇರುತ್ತಿತ್ತು.

ಈಗ ಕಾಂಗ್ರೆಸ್ಗೆ ಪರ್ಯಾಯವಾಗಿ ಝಡ್ಪಿಎಂ ಕಾಣಿಸಿಕೊಳ್ಳುತ್ತಿದ್ದು, ಯುವ ಮತದಾರರ ಪಾಲಿಗೆ ಪರ್ಯಾಯವಾಗಿ ಹೊರಹೊಮ್ಮುತ್ತಿದೆ ಎಂಬ ವಿಶ್ಲೇಷಣೆಗಳಿವೆ.

ಮತದಾರರು ಸಾಮಾನ್ಯವಾಗಿ ಪ್ರತಿ ಎರಡು ಅವಧಿಗೆ ಸರಕಾರವನ್ನು ಬದಲಾಯಿಸುತ್ತಾರೆ. 1987ರಲ್ಲಿ ರಾಜ್ಯ ರಚನೆಯಾದಾಗಿನಿಂದಲೂ ಇದೇ ಸಂಪ್ರದಾಯ ನಡೆದುಕೊಂಡು ಬಂದಿದೆ.

ಎಂಎನ್ಎಫ್ ಜನಾಂಗೀಯ ರಾಷ್ಟ್ರೀಯತೆ ಮತ್ತು ರೆ ಜನಾಂಗದ ಏಕತೆಯನ್ನು ಪ್ರತಿಪಾದಿಸುತ್ತದೆ. ಈ ಬಾರಿಯೂ ಅಧಿಕಾರಕ್ಕೆ ಮರಳುವ ವಿಶ್ವಾಸ ಹೊಂದಿದೆ. ಆದರೂ ಕೆಲ ಗ್ರಾಮೀಣ ಮತದಾರರು ಎಂಎನ್ಎಫ್ ಸರಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿಲ್ಲ ಎನ್ನಲಾಗುತ್ತಿದೆ.

ಎಂಎನ್ಎಫ್ ಬಿಜೆಪಿ ನೇತೃತ್ವದ ನಾರ್ತ್ ಈಸ್ಟ್ ಡೆಮಾಕ್ರಟಿಕ್ ಅಲಯನ್ಸ್ ಹಾಗೂ ಕೇಂದ್ರದಲ್ಲಿ ಎನ್ಡಿಎ ಮೈತ್ರಿಕೂಟದ ಭಾಗವಾಗಿದೆ. ಆದರೆ ರಾಜ್ಯದಲ್ಲಿ ಅದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ‘‘ಈ ಬಾರಿ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಬಂದಾಗ ನಾನು ಅವರ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಪಕ್ಕದ ಮಣಿಪುರದಲ್ಲಿ ಮೈತೈ ಜನರು ನೂರಾರು ಚರ್ಚ್ಗಳನ್ನು ಸುಟ್ಟು ಹಾಕಿರುವಾಗ ನಾವು ಬಿಜೆಪಿ ಜೊತೆ ಗುರುತಿಸಿಕೊಂಡರೆ ನಮ್ಮ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಹಾಗಾಗಿ ಪ್ರಧಾನಿ ಅವರಷ್ಟಕ್ಕೆ ಬಂದು ಹೋಗಲಿ, ನಾನು ನನ್ನಷ್ಟಕ್ಕೆ ಪ್ರತ್ಯೇಕವಾಗಿಯೇ ಪ್ರಚಾರ ಮಾಡುತ್ತೇನೆ. ಅದು ಎರಡೂ ಪಕ್ಷಗಳಿಗೂ ಒಳ್ಳೆಯದು’’ ಎಂದು ಮಿಜೋರಾಂ ಸಿಎಂ ರೆರಮ್ತಂಗ ಹೇಳಿದ್ದು ಚರ್ಚೆಯಾಗಿದೆ.

ಈ ಹಂತದಲ್ಲಿ ಝಡ್ಪಿಎಂ ವ್ಯವಸ್ಥೆಯನ್ನು ಬದಲಾಯಿಸಬಲ್ಲ ಒಂದು ಸಾಧ್ಯತೆಯಾಗಿ ಮತದಾರರಿಗೆ ಕಾಣಿಸತೊಡಗಿದೆ.

ಹೆಚ್ಚಿನ ಯುವ ಮತ್ತು ಹೊಸ ಮತದಾರರು ಈಗ ರಾಜ್ಯದ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಬಯಸುತ್ತಿದ್ದು, ಝಡ್ಪಿಎಂ ಭವಿಷ್ಯದ ಬಗ್ಗೆ ಅದರ ನಾಯಕರಲ್ಲಿ ವಿಶ್ವಾಸ ಮೂಡಿದೆ.

ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಯುವಜನರಲ್ಲಿ ರಾಜಕೀಯ ಪ್ರಜ್ಞೆ ಬಲವಾಗಿದೆ. ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ಐಜ್ವಾಲ್ ನಗರ ಮತ್ತು ಸೆರ್ಚಿಪ್ ಟೌನ್ನಲ್ಲಿ ಯುವ ಮತದಾರರಿಗೆ ಝಡ್ಪಿಎಂ ಒಂದು ಪರ್ಯಾಯವಾಗಿ ಕಂಡಿದೆ ಎನ್ನಲಾಗುತ್ತದೆ.

ಕಾಂಗ್ರೆಸ್‌ಗೆ ಸಂಕಷ್ಟ?

ಆದರೆ, ಕಾಂಗ್ರೆಸ್ ತನ್ನ ಮೂಲ ಕ್ಷೇತ್ರವಾಗಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಸಂಕಷ್ಟ ಎದುರಿಸುತ್ತಿದೆ ಎಂಬ ಮಾತುಗಳಿವೆ.

ಜಾತ್ಯತೀತ ರಾಜಕಾರಣಕ್ಕೆ ಒತ್ತು ನೀಡುತ್ತಿರುವ ಕಾಂಗ್ರೆಸ್ ಎರಡು ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಪೀಪಲ್ಸ್ ಕಾನ್ಫರೆನ್ಸ್ ಮತ್ತು ಮೂಲತಃ ಝಡ್ಪಿಎಂ ಬಣವಾದ ರೆರಮ್ ನ್ಯಾಶನಲಿಸ್ಟ್ ಪಾರ್ಟಿ ಆ ಎರಡು ಪಕ್ಷಗಳಾಗಿವೆ. ಇವೆರಡೂ ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದ್ದು, ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ.

ಎಂಎನ್ಎಫ್, ಝಡ್ಪಿಎಂ ಮತ್ತು ಕಾಂಗ್ರೆಸ್ ಎಲ್ಲಾ 40 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿವೆ.

28 ಹಾಲಿ ಎಂಎನ್ಎಫ್ ಶಾಸಕರ ಪೈಕಿ ಮೂವರನ್ನು ಹೊರತುಪಡಿಸಿ ಎಲ್ಲರೂ 2023ರ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದಾರೆ.

ಹಾಲಿ ಸ್ಪೀಕರ್ ಲಾಲ್ರಿನ್ಲಿಯಾನಾ ಸೈಲೊ, ಗೃಹ ಸಚಿವ ಲಾಲ್ಚಾಮ್ಲಿಯಾನ, ಮಾಜಿ ಸಚಿವ ಡಾ.ಕೆ.ಬೀಚುವಾ ಅವರಿಗೆ ಟಿಕೆಟ್ ನೀಡಲಾಗಿಲ್ಲ.

ಸ್ಪೀಕರ್ ಸೈಲೋ ಇತ್ತೀಚೆಗೆ ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವಂತೆ ಸೂಚಿಸಿದ್ದರು. ಅವರು ಉಪಮುಖ್ಯಮಂತ್ರಿ ವಿರುದ್ಧವೂ ಗಂಭೀರ ಆರೋಪ ಮಾಡಿದ್ದರು.

ಹಾಲಿ ಗೃಹ ಸಚಿವರು ಈ ಬಾರಿ ಮರು ಚುನಾವಣೆಗೆ ಸ್ಪರ್ಧಿಸುವುದರಿಂದ ಹಿಂದೆ ಸರಿದರು.

ಇನ್ನು ಡಾ.ಬೀಚುವಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದ್ದು, ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ 23 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.ಕಳೆದ ಚುನಾವಣೆಯಲ್ಲಿ ಬಿಜೆಪಿ 39 ಸ್ಥಾನಗಳಲ್ಲಿ ಸ್ಪರ್ಧಿಸಿತ್ತಾದರೂ ಒಂದು ಸ್ಥಾನವನ್ನು ಮಾತ್ರ ಗೆದ್ದಿತ್ತು.

ಏಕರೂಪ ನಾಗರಿಕ ಸಂಹಿತೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಈ ಚುನಾವಣೆಯಲ್ಲಿ ನಿರ್ಣಾಯಕ ವಿಷಯಗಳಾಗಿವೆ.

ಮಿಜೋರಾಂ ವಿಧಾನಸಭೆ ಈಗಾಗಲೇ ಏಕರೂಪ ನಾಗರಿಕ ಸಂಹಿತೆಯನ್ನು ತಿರಸ್ಕರಿಸಿದೆ ಮತ್ತು ಅದರ ಬಗ್ಗೆ ನಿರ್ಣಯ ಅಂಗೀಕರಿಸಿದೆ.

25 ವರ್ಷಗಳಿಗೂ ಹೆಚ್ಚು ಕಾಲದ ಇಲ್ಲಿನ ಚುನಾವಣಾ ಇತಿಹಾಸದಲ್ಲಿ ಬ್ರೂ ಅಥವಾ ರಿಯಾಂಗ್ ಸಮುದಾಯ ರಾಜ್ಯದ ಎರಡನೇ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದ್ದರೂ ತನ್ನದೇ ಆದ ಶಾಸಕರನ್ನು ಪಡೆಯಲು ಸಾಧ್ಯವಾಗಿಲ್ಲ.

ಅತಿ ಹೆಚ್ಚು ಅಲ್ಪಸಂಖ್ಯಾತ ಜನಸಂಖ್ಯೆ ಹೊಂದಿರುವ ಚಕ್ಮಾ ಸಮುದಾಯದಿಂದ ಇಬ್ಬರು ಶಾಸಕರಿದ್ದಾರೆ.

ಮಿಜೋರಾಂನಲ್ಲಿ ಅಭ್ಯರ್ಥಿಯ ವ್ಯಕ್ತಿತ್ವ, ಸಾಮಾಜಿಕ, ಧಾರ್ಮಿಕ ಹಿನ್ನೆಲೆ ಮತ್ತು ಸಾಮಾಜಿಕ ಸೇವಾ ಗುಣಗಳೇ ಅಭಿವೃದ್ಧಿ ಅಥವಾ ಆಡಳಿತದ ವಿಚಾರಗಳಿಗಿಂತ ಮುಖ್ಯ ಎನ್ನಲಾಗುತ್ತದೆ.

ಶೇ. 50ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಚರ್ಚ್ ಹಿರಿಯರು, ಯಂಗ್ ಮಿರೆ ಅಸೋಸಿಯೇಷನ್ ಮಾಜಿ ಅಧಿಕಾರಿಗಳು ಮತ್ತು ವಿದ್ಯಾರ್ಥಿ ಸಂಘಗಳ ಪ್ರತಿನಿಧಿಗಳಾಗಿದ್ದವರೇ ಆಗಿರುವುದಕ್ಕೆ ಈ ಅಂಶವೇ ಕಾರಣ.

ಇಲ್ಲಿ ಕೂಡ ಬಿಜೆಪಿಯ ಅಜೆಂಡಾ ಬಗ್ಗೆ ಜನರಲ್ಲಿ ಆತಂಕವಿದೆ.

‘ಫ್ರಂಟ್ಲೈನ್’ ವರದಿ ಮಾಡಿರುವಂತೆ, ಚಂಫೈ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಲಾಲಿಯಾನ್ಚುಂಗಾ ಹೇಳುವ ಪ್ರಕಾರ, ಬಿಜೆಪಿಯ ಹಿಡನ್ ಅಜೆಂಡಾ ಬಗ್ಗೆ ಮಿರೆಗಳು ಹೆದರುತ್ತಿದ್ದಾರೆ. ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಸಂಘಪರಿವಾರದ ರಾಜಕೀಯ ಅಸ್ತ್ರ ಬಿಜೆಪಿ ಎಂಬುದು ಗೊತ್ತಿರುವ ವಿಚಾರ. ಮಿರೆಗಳು ಇಂತಹ ಕ್ರೂರ ರಾಜಕೀಯ ಅಜೆಂಡಾವನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಭಾರತ ಜಾತ್ಯತೀತ ರಾಷ್ಟ್ರವಾಗಿ ಉಳಿಯಬೇಕೆಂದು ಬಯಸುವ ಮಿರೆಗಳು, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಎನ್ಡಿಎಯನ್ನು ಸೋಲಿಸುವುದನ್ನು ಎದುರು ನೋಡುತ್ತಿದ್ದಾರೆ.

ರಾಜಕೀಯೇತರ ಪ್ರಭಾವ

ರಾಜ್ಯದಲ್ಲಿನ ಎರಡು ರಾಜಕೀಯೇತರ ಘಟಕಗಳೆಂದರೆ, ಚರ್ಚ್ ಮತ್ತು ‘ಮಿಜೋರಾಂ ಪೀಪಲ್ಸ್ ಫೋರಂ’ (ಎಂಪಿಎಫ್). ಇವು ಇಲ್ಲಿನ ರಾಜಕೀಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಚುನಾವಣೆಯಲ್ಲಿ ಹಣದ ಮತ್ತು ದುರಾಚಾರದ ರಾಜಕೀಯ ನಡೆಯದಂತೆ ಇವು ನೋಡಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ.

ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಪ್ರಚಾರದ ಸಮಯದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಎಂಪಿಎಫ್ ಬಿಡುಗಡೆ ಮಾಡುತ್ತದೆ.

ರಾಜ್ಯವು ಎರಡು ಪ್ರತ್ಯೇಕ ಮಾದರಿ ನೀತಿ ಸಂಹಿತೆಗಳನ್ನು ಹೊಂದಿದೆ, ಒಂದು ಚುನಾವಣಾ ಆಯೋಗದ್ದು ಮತ್ತು ಇನ್ನೊಂದು ಎಂಪಿಎಫ್ ರೂಪಿಸಿರುವಂಥದ್ದು.

ಎಂಪಿಎಫ್ನ ಮಾದರಿ ಸಂಹಿತೆ, ಚುನಾವಣೆಗಳನ್ನು ಅಪರಾಧ, ಹಿಂಸಾಚಾರ ಮತ್ತು ಹಣ ಮತ್ತು ತೋಳ್ಬಲದ ಬಳಕೆಯಿಂದ ದೂರ ಇಡುವಲ್ಲಿನ ತನ್ನ ಪಾತ್ರಕ್ಕಾಗಿ ಹೆಸರಾಗಿದೆ.

ಆದರೆ ದಕ್ಷಿಣ ಮಿಜೋರಾಂನಲ್ಲಿ ಮತ್ತು ಮೂರು ಸ್ವಾಯತ್ತ ಜಿಲ್ಲಾ ಕೌನ್ಸಿಲ್ಗಳಲ್ಲಿ ಎಂಪಿಎಫ್ ಹೆಚ್ಚು ಸಕ್ರಿಯವಾಗಿಲ್ಲ. ಈ ಸ್ಥಳಗಳಲ್ಲಿ, ‘ಮಿಜೋರಾಂ ಇನ್ ಇಂಡಿಯಾ’ ಎಂಬ ರಾಜಕೀಯೇತರ ನಾಗರಿಕ ಸಮಾಜ ವೇದಿಕೆ ಸರಕಾರಿ ಚುನಾವಣಾ ಏಜೆನ್ಸಿಯಂತೆ ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ.

ಜನರು ಇದನ್ನು ಗಂಭೀರವಾಗಿ ಪರಿಗಣಿಸುವುದನ್ನೂ ರಾಜ್ಯದ ಚುನಾವಣಾ ರಾಜಕೀಯದಲ್ಲಿ ಅದರ ಪಾತ್ರ ಇರಬೇಕೆಂದು ಬಯಸುವುದನ್ನೂ ಪರಿಣಿತರು ಗಮನಿಸಿದ್ದಾರೆ.

ಚುನಾವಣೆಗಳಲ್ಲಿನ ಈ ಸಂಸ್ಥೆಗಳ ಪಾತ್ರ ಚುನಾವಣೆಗಳನ್ನು ಇತರ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚು ನ್ಯಾಯೋಚಿತ ಮತ್ತು ಕಡಿಮೆ ವೆಚ್ಚದಾಯಕವಾಗಿಸಿದೆ ಎನ್ನಲಾಗುತ್ತದೆ.

ಇಲ್ಲಿ ಮತದಾನ ನ.7ರಂದು ನಡೆಯಲಿದೆ. ಪ್ರಕಟವಾಗಿರುವ ಕೆಲವು ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಸುಳಿವನ್ನು ನೀಡಿವೆ. ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಲಿದೆ ಎಂಬ ಅಂಶಗಳು ಸಮೀಕ್ಷೆಯಲ್ಲಿ ಕಂಡಿವೆ.

ಇತ್ತೀಚೆಗೆ ರಾಹುಲ್ ಗಾಂಧಿಯವರು ರಾಜ್ಯದಲ್ಲಿ ಪಾದಯಾತ್ರೆಯನ್ನೂ ನಡೆಸಿದ್ದಾರೆ.

ಮತದಾರರ ತೀರ್ಮಾನ ಏನಿರಲಿದೆ ಎಂಬುದನ್ನು ನೋಡಬೇಕಿದೆ.

ಮಿಜೋರಾಂ ರಾಜಕೀಯದಲ್ಲಿ ಮಹಿಳೆಯರಿಗೆ ಆದ್ಯತೆ ಇಲ್ಲ!

ಮಿಜೋರಾಂ ಲಿಂಗಾನುಪಾತದಲ್ಲಿ ಸ್ತ್ರೀಯರು ಮುಂದಿದ್ದಾರೆ. ನೋಂದಾಯಿತ ಮತದಾರರಲ್ಲಿಯೂ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಜನಸಂಖ್ಯೆಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಚುನಾವಣೆಯಲ್ಲಿ ಅವರ ಪ್ರಾತಿನಿಧ್ಯ ಮಾತ್ರ ಬಹಳ ಕಡಿಮೆ.

ಮಿಜೋರಾಂನ ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ರಾಜಕೀಯ ಅಧಿಕಾರದ ಸ್ಥಾನಗಳಿಂದ ದೂರವೇ ಇಡಲಾಗುತ್ತಿದೆ. ಎಲ್ಲಿಯ ವರೆಗೆ ಎಂದರೆ ಮಹಿಳಾ ಮತದಾರರು ಕೂಡ ಮಹಿಳಾ ಅಭ್ಯರ್ಥಿಗಳಿಗೆ ಮತ ಹಾಕುವುದಿಲ್ಲ.

ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಬರುವುದರಿಂದ ಮಾತ್ರವೇ ಮಿರೆ ರಾಜಕೀಯದಲ್ಲಿ ಮಹಿಳೆಯರ ಪಾಲಿಗೆ ಅವಕಾಶಗಳು ಲಭಿಸಲು ಸಾಧ್ಯ ಎಂಬುದು ಪರಿಣಿತರ ಅಭಿಪ್ರಾಯ.

ಸಂಸತ್ತಿನಲ್ಲಿ ಅಂಗೀಕರಿಸಿದ ಮಹಿಳಾ ಮೀಸಲಾತಿ ಮಸೂದೆಗೂ ಮಿರೆ ಸಮಾಜದಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚರ್ಚ್, ರಾಜಕೀಯ ಪಕ್ಷಗಳು ಮತ್ತು ಪುರುಷ ಪ್ರಾಬಲ್ಯದ ನಾಗರಿಕ ಸಮಾಜ ಸಂಸ್ಥೆಗಳು ಮಹಿಳೆಯರ ಹಕ್ಕುಗಳಿಗೆ ಧ್ವನಿ ನೀಡುವುದಿಲ್ಲ.

share
ಹರೀಶ್ ಎಚ್.ಕೆ.
ಹರೀಶ್ ಎಚ್.ಕೆ.
Next Story
X