Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತದ ಕೃಷಿಯ ಮೇಲೆ ಬಹುರಾಷ್ಟ್ರೀಯ...

ಭಾರತದ ಕೃಷಿಯ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳ ಸವಾರಿ?

ಮಂಜುನಾಥ್ ಎಚ್ಮಂಜುನಾಥ್ ಎಚ್9 Oct 2023 9:20 AM IST
share
ಭಾರತದ ಕೃಷಿಯ ಮೇಲೆ ಬಹುರಾಷ್ಟ್ರೀಯ ಕಂಪೆನಿಗಳ ಸವಾರಿ?
ಈಗಿನ ಬೆಳವಣಿಗೆಗಳನ್ನು ನೊಡುತ್ತಿದ್ದರೆ, ನಾಳೆ ಭಾರತದ ಆಹಾರ ವ್ಯವಸ್ಥೆ ಪೂರ್ತಿಯಾಗಿ ಕಾರ್ಪೊರೇಟ್ ಹಿಡಿತದಲ್ಲಿ ಬೀಳಬಹುದು ಎಂಬ ಆತಂಕ ಮೂಡುತ್ತದೆ. ಮುಂದಿನ ದಿನಗಳಲ್ಲಿ ಕಾರ್ಪೊರೇಟ್ ಕಂಪೆನಿಗಳು ತಮ್ಮ ಸರಕು ಮತ್ತು ಸೇವೆಗಳನ್ನು ಮಾರಾಟ ಮಾಡಲು ನಮ್ಮ ಕೃಷಿ ವಿಜ್ಞಾನ ಕೇಂದ್ರಗಳನ್ನು ಕೈಗೊಂಬೆಯಾಗಿ ಬಳಸಿದರೂ ಅಚ್ಚರಿಯಿಲ್ಲ ಎಂಬ ಕಳವಳವೂ ಕಾಡುತ್ತಿದೆ. ಕಾರ್ಪೊರೇಟ್ ದೈತ್ಯರ ಒಟ್ಟಾರೆ ಧ್ಯೇಯವಾಕ್ಯವೆಂದರೆ, ತಮ್ಮ ವ್ಯವಹಾರವನ್ನು ವಿಶ್ವಾದ್ಯಂತ ವಿಸ್ತರಿಸುವುದು ಮತ್ತು ಬಿಕ್ಕಟ್ಟು ಇರುವಲ್ಲೆಲ್ಲಾ ಲಾಭವನ್ನು ಗಳಿಸುವುದು.

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಮತ್ತು ಬೇಯರ್ ಬಹುರಾಷ್ಟ್ರೀಯ ಕಂಪೆನಿ ಸೆಪ್ಟಂಬರ್ 1ರಂದು ಒಂದು ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದವು ಬೆಳೆಗಳು, ಬೆಳೆ ರಕ್ಷಣೆ, ಕಳೆ ನಿರ್ವಹಣೆ ಮತ್ತು ಸಂಪನ್ಮೂಲ ಸದೃಢತೆ ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಬಲ್ಲ ಯಾಂತ್ರೀಕರಣಕ್ಕೆ ಹೊಸ ಪರಿಹಾರಗಳನ್ನು ಕಂಡುಕೊಳ್ಳುವ ಗುರಿಯನ್ನು ಹೊಂದಿದೆ. ಅಕ್ಕಿ ಮತ್ತು ತೋಟಗಾರಿಕೆ ಉತ್ಪಾದನೆಯ ಮೇಲೆ ಪ್ರಾಥಮಿಕ ಗಮನವನ್ನು ಕೇಂದ್ರೀಕರಿಸುವ ಮೂಲಕ ಪುನರುತ್ಪಾದಕ ಕೃಷಿ ಮಾದರಿಗಳನ್ನು ಅಭಿವೃದ್ಧಿಪಡಿಸಲು ಗಮನ ಹರಿಸಲಾಗುತ್ತದೆ ಎಂದು ಈ ಪಾಲುದಾರಿಕೆ ಹೇಳುತ್ತದೆ. ರೈತರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ಪರಿಸರ ವ್ಯವಸ್ಥೆಯ ಒಳಗೇ ಪರಿಹಾರಗಳನ್ನು ರೂಪಿಸುವ ಮೂಲಕ ಪೌಷ್ಟಿಕಾಂಶದ ಭದ್ರತೆಯ ಸಮಸ್ಯೆಯನ್ನು ನಿವಾರಿಸುವುದು ಉದ್ದೇಶವೆನ್ನಲಾಗಿದೆ. ರೈತರಿಗೆ ಅಗತ್ಯವಾದ ಕೃಷಿ ಒಳಹರಿವು ಮತ್ತು ಸಲಹಾ ಸೇವೆಗಳನ್ನು ಒದಗಿಸುವುದು, ಸಣ್ಣ ಹಿಡುವಳಿದಾರ ರೈತರಿಗೆ ಕೃಷಿ ಸಲಹೆ ಇತ್ಯಾದಿಗಳನ್ನು ಇದು ಒಳಗೊಂಡಿದೆ.

ಐಸಿಎಆರ್ ಮಹಾನಿರ್ದೇಶಕ ಹಿಮಾಂಶು ಪಾಠಕ್ ಪ್ರಕಾರ, ನಿಖರವಾದ ಕೃಷಿ ಪದ್ಧತಿಗಳನ್ನು ಮುನ್ನಡೆಸಲು ಜಂಟಿ ಸಂಶೋಧನೆಯನ್ನು ಯೋಜಿಸಲಾಗಿದೆ. ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ) ತಂತ್ರಜ್ಞಾನ ವರ್ಗಾವಣೆ ಮತ್ತು ಸಾಮರ್ಥ್ಯ ವರ್ಧನೆಯ ಕಾರ್ಯಕ್ರಮಗಳ ಮೂಲಕ ತಾಂತ್ರಿಕ ಜ್ಞಾನ ಮತ್ತು ಪರಿಣತಿಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಕೃಷಿ ವಿಜ್ಞಾನ ಕೇಂದ್ರ ಕೃಷಿ ಉದ್ಯಮಿಗಳಿಗೆ ಅರಿವು ಮತ್ತು ಶಿಕ್ಷಣ ಕಾರ್ಯಕ್ರಮಗಳ ಮೂಲಕ ಬೇಯರ್ ಬೆಂಬಲ ನೀಡುತ್ತದೆ. ಸಣ್ಣ ಹಿಡುವಳಿದಾರ ರೈತರಿಗೆ ಹೆಚ್ಚಿನ ಇಳುವರಿಯನ್ನು ಸಾಧಿಸಲು ಸಹಾಯ ಮಾಡುವುದರೊಂದಿಗೆ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಕೂಡ ಈ ಒಪ್ಪಂದ ಹೊಂದಿದೆ. ಉತ್ತಮ ಮಾರುಕಟ್ಟೆ ಸಂಪರ್ಕ, ಆ ಮೂಲಕ ಹೆಚ್ಚುವರಿ ಪ್ರೋತ್ಸಾಹವನ್ನು ಗಳಿಸುವ ಅವಕಾಶ ಇವೆಲ್ಲವನ್ನೂ ಇದು ಒದಗಿಸುತ್ತದೆ. ಸುಸ್ಥಿರತೆಯನ್ನು ಉತ್ತೇಜಿಸುವುದರ ಜೊತೆಗೇ ಆರ್ಥಿಕ ಯಶಸ್ಸಿನ ಖಚಿತತೆಗೆ ಕೂಡ ಗಮನ ಕೊಡಲಾಗುವುದು.

ಈಗ, ಬೇಯರ್ ಕ್ರಾಪ್ ಸೈನ್ಸಸ್‌ನ ಇತಿಹಾಸವನ್ನು ನೋಡಬೇಕು. ವಿಶೇಷವಾಗಿ ಮೊನ್ಸಾಂಟೊದೊಂದಿಗೆ ಅದರ ಇತ್ತೀಚಿನ ವಿಲೀನದ ಹಿನ್ನೆಲೆಯಲ್ಲಿ ಇದು ಮುಖ್ಯ. ಸೆಪ್ಟಂಬರ್ 2023ರ ಹೊತ್ತಿಗೆ ಮೊನ್ಸಾಂಟೊ ತನ್ನ ರೌಂಡಪ್ ಉತ್ಪನ್ನಕ್ಕೆ ಸಂಬಂಧಿಸಿದ ಸುಮಾರು ಒಂದು ಲಕ್ಷ ಮೊಕದ್ದಮೆಗಳನ್ನು ರಾಜಿ ಮೂಲಕ ಬಗೆಹರಿಸಿಕೊಳ್ಳುವ ಹಾದಿಯಲ್ಲಿದೆ. ಸರಿಸುಮಾರು 11 ಬಿಲಿಯನ್ ಡಾಲರ್ ಪಾವತಿಸಬೇಕಿದೆ. ಅಲ್ಲದೆ, 26,000ರಿಂದ 30,000ಕ್ಕೂ ಹೆಚ್ಚು ರೌಂಡಪ್ ಮೊಕದ್ದಮೆಗಳು ಇನ್ನೂ ಬಾಕಿ ಉಳಿದಿವೆ. ಮೊನ್ಸಾಂಟೊ ಒಡೆತನದ ಗ್ಲೈಫೋಸೇಟ್‌ನ ಸುರಕ್ಷತೆಯ ಬಗ್ಗೆ ಐಸಿಎಆರ್ ಕೂಡ ವೈಜ್ಞಾನಿಕ ಕಳವಳ ವ್ಯಕ್ತಪಡಿಸಿದ್ದಿದೆ. ಅಧ್ಯಯನಗಳ ಪ್ರಕಾರ, ಮನುಷ್ಯನ ಆರೋಗ್ಯ ಮತ್ತು ಪರಿಸರದ ಹಾನಿಗೆ ಅದು ಕಾರಣವಾಗುತ್ತದೆ. ಕ್ಯಾನ್ಸರ್ ಕುರಿತಾದ ಅಂತರ್‌ರಾಷ್ಟ್ರೀಯ ಸಂಸ್ಥೆಯು ಗ್ಲೈಫೋಸೇಟ್ ಮನುಷ್ಯರಲ್ಲಿ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಹೇಳಿದೆ. 2018ರಲ್ಲಿ ಬೇಯರ್ ಈ ಕಾರಣಕ್ಕಾಗಿಯೇ ರೌಂಡಪ್ ಅನ್ನು ಹಿಂದೆಗೆದುಕೊಂಡಿತು. ಅಚ್ಚರಿಯೆಂದರೆ, ಈಗ ಅದೇ ಬೇಯರ್ ಭಾರತೀಯ ಮಾರುಕಟ್ಟೆಗೆ ಜಿಎಂ ಬೀಜಗಳನ್ನು ಪರಿಚಯಿಸುವ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿದೆ. ಇದು ಪ್ರಸ್ತುತ ಸುಪ್ರೀಂ ಕೋರ್ಟ್‌ನ ಪರಿಶೀಲನೆಯಲ್ಲಿದೆ.

ಒಪ್ಪಂದದಲ್ಲಿ ವಿವರಿಸಲಾಗಿರುವ ಅನುಕೂಲಗಳು, ಉಪಯೋಗಗಳ ಹಿನ್ನೆಲೆಯಲ್ಲಿ, ಲಭ್ಯ ಅಂಕಿಅಂಶಗಳೊಂದಿಗೆ ಭಾರತೀಯ ಕೃಷಿಯ ಪ್ರಸ್ತುತ ಸ್ಥಿತಿಯನ್ನು ವಿಶ್ಲೇಷಿಸಬೇಕಿದೆ. ಮೊದಲನೆಯದಾಗಿ, ಇಸ್ರೋ ನೀಡಿದ ಡೇಟಾವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಾರತದ ಸುಮಾರು 96.40 ಮಿಲಿಯನ್ ಹೆಕ್ಟೇರ್‌ನಷ್ಟು ಅಂದರೆ ಶೇ.30ರಷ್ಟು ಭೂಮಿ ಅತಿ ವೇಗವಾಗಿ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಕರ್ನಾಟಕವೊಂದರಲ್ಲಿಯೇ 69,51,000 ಹೆಕ್ಟೇರ್ (ಸುಮಾರು ಶೇ.36.24) ಪ್ರದೇಶದಲ್ಲಿ ಮಣ್ಣಿನ ಉತ್ಪಾದನಾ ಸಾಮರ್ಥ್ಯ ಕುಸಿದಿರುವುದು ಕಂಡುಬಂದಿದೆ. ಜಾರ್ಖಂಡ್, ದಿಲ್ಲಿ, ರಾಜಸ್ಥಾನ, ಗುಜರಾತ್ ಮತ್ತು ಗೋವಾಗಳ ಭವಿಷ್ಯ ಕೂಡ ಅತ್ಯಂತ ಶೋಚನೀಯವಾಗಿದೆ. ಆ ರಾಜ್ಯಗಳು ಸಾಗುವಳಿ ಮಾಡಬಹುದಾದ ಶೇ.50ಕ್ಕಿಂತ ಹೆಚ್ಚು ಭೂಮಿಯನ್ನು ಕಳೆದುಕೊಂಡಿವೆ. ಏಕ ಬೆಳೆ ಕೃಷಿಯೇ ಜೀವವೈವಿಧ್ಯದ ನಷ್ಟಕ್ಕೆ ಮುಖ್ಯ ಕಾರಣ.

ಎರಡನೆಯದಾಗಿ, ಭಾರತವು ವಿಶ್ವದ ಪ್ರಮುಖ ಅಕ್ಕಿ ರಫ್ತುದಾರ ದೇಶವಾಗಿದ್ದು, ಜಾಗತಿಕ ಅಕ್ಕಿ ವ್ಯಾಪಾರದ ಶೇ.40ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಜೊತೆಗೆ ಚೀನಾದ ನಂತರ ಎರಡನೇ ಅತಿದೊಡ್ಡ ಉತ್ಪಾದಕ ದೇಶವಾಗಿದೆ.

ಮೂರನೆಯದಾಗಿ, ಭಾರತವು ಸುಮಾರು 350.87 ಮಿಲಿಯನ್ ಟನ್‌ಗಳಷ್ಟು ತೋಟಗಾರಿಕೆ ಉತ್ಪನ್ನಗಳನ್ನು (2022-23) ಉತ್ಪಾದಿಸುತ್ತದೆ. ಇದು ದೇಶಗಳ ಅಗತ್ಯಕ್ಕಿಂತ ಶೇ.40ರಷ್ಟು ಹೆಚ್ಚು ಎನ್ನಲಾಗಿದೆ.

ನಾಲ್ಕನೆಯದಾಗಿ, ಎಣ್ಣೆಬೀಜ ಉತ್ಪಾದನೆಗೆ ಸಂಬಂಧಿಸಿದಂತೆ ಭಾರತವು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ಸುಮಾರು ಶೇ.60ರಷ್ಟು ಖಾದ್ಯ ಎಣ್ಣೆ ಬೀಜಗಳನ್ನು ಆಮದು ಮಾಡಿಕೊಳ್ಳುತ್ತಿದೆ (2022-23). ಆಗಾಗ ಬರ ಮತ್ತು ಪ್ರವಾಹದಿಂದಾಗಿ ಪ್ರತೀ ವರ್ಷವೂ ದ್ವಿದಳ ಧಾನ್ಯಗಳ ಉತ್ಪಾದನೆ ಡೋಲಾಯಮಾನವಾಗುತ್ತದೆ. ಇಷ್ಟೆಲ್ಲ ಮಾಡಿ ಮುಗಿಸಿದರೂ ಭಾರತ ಇನ್ನೂ ಅಪೌಷ್ಟಿಕತೆಯಿಂದ ಮುಕ್ತವಾಗಿಲ್ಲ. ಮೂರನೇ ಒಂದರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಕಾರಣಗಳು ಇನ್ನೂ ಪ್ರಶ್ನೆಯಾಗಿಯೇ ಉಳಿದಿವೆ. ಅಪೌಷ್ಟಿಕತೆಯ ಸಮಸ್ಯೆಯನ್ನು ಆಳವಾಗಿ ಗಮನಿಸಿದರೆ, ಪ್ರಮುಖ ಕಾರಣಗಳಾಗಿ ಕಾಣುವುದು ಅಸಮಾನತೆಗಳು ಮತ್ತು ತಾರತಮ್ಯಗಳು, ಕಾರ್ಪೊರೇಟ್ ವಲಯದ ಇಚ್ಛೆಗೆ ಅನುಗುಣವಾಗಿ ಇರುವ ರಾಜಕೀಯ ಮತ್ತು ಅಧಿಕಾರಶಾಹಿ ವ್ಯವಸ್ಥೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ರಾಷ್ಟ್ರದಾದ್ಯಂತ ಸರಬರಾಜಾಗುವ ಆಹಾರಧಾನ್ಯಗಳ ಪಾಲಿನಲ್ಲಿ ರಾಸಾಯನಿಕವಾಗಿ ಬೆಳೆದ ಹೈಬ್ರಿಡ್ ಅಕ್ಕಿ ಮತ್ತು ಗೋಧಿಯೇ ದೊಡ್ಡ ಪ್ರಮಾಣದಲ್ಲಿರುವುದು.

ಇದು ವಾಸ್ತವ. ಈ ತಿಳುವಳಿಕೆಗಳೊಂದಿಗೆ, ಈಗಾಗಲೇ ಅನೇಕ ದೇಶಗಳಿಂದ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟ ಮತ್ತು ಲಕ್ಷಾಂತರ ಡಾಲರ್‌ಗಳ ದಂಡವನ್ನು ಪಾವತಿಸಿರುವ ಬೇಯರ್‌ನಂತಹ ಕಾರ್ಪೊರೇಟ್ ಕಂಪೆನಿಯೊಂದಿಗೆ ಐಸಿಎಆರ್ ಏಕೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ವಿಶ್ಲೇಷಿಸಬೇಕು. ಕೃಷಿ ಕ್ಷೇತ್ರದಲ್ಲಿ, ಅದರಲ್ಲೂ ವಿಶೇಷವಾಗಿ ಈಗಾಗಲೇ ಹೆಚ್ಚುವರಿ ಉತ್ಪಾದನೆಯಿರುವ ಅಕ್ಕಿ ಮತ್ತು ತೋಟಗಾರಿಕೆಗಾಗಿ ಕೆಲಸ ಮಾಡಲು ಬೇಯರ್‌ನಂತಹ ಕಂಪೆನಿಯೊಂದರ ಸಹಯೋಗ ಬೇಕೆ ಎಂಬ ಪ್ರಶ್ನೆಯಿದೆ. ಜೈವಿಕ ವೈವಿಧ್ಯ, ಪರಿಸರ ವಿಜ್ಞಾನ ಮತ್ತು ಪರಿಸರದ ಒಂದು ಭಾಗವಾಗಿರುವ ಪುನರುತ್ಪಾದಕ ವಿಜ್ಞಾನದಲ್ಲಿ ಬೇಯರ್‌ನಂತಹ ಕಂಪೆನಿ ಹೇಗೆ ಕೆಲಸ ಮಾಡುತ್ತದೆ? ನೀರು, ಗಾಳಿ, ಮಣ್ಣು, ಸೂಕ್ಷ್ಮಜೀವಿಗಳು, ಪ್ರಾಣಿ ಪ್ರಪಂಚ ಮುಂತಾದವುಗಳೆಲ್ಲವನ್ನೂ ಒಳಗೊಳ್ಳುವ ಪುನರುತ್ಪಾದಕ ಕೃಷಿಗೆ ಹವಾಮಾನ ಹೊಂದಾಣಿಕೆಯ ಪರಿಹಾರಗಳನ್ನು ಅದು ಹೇಗೆ ನೀಡಬಹುದು? ಆಗಾಗ ಬರ ಮತ್ತು ಪ್ರವಾಹದಿಂದ ಸಂಕಷ್ಟಕ್ಕೊಳಗಾಗುವ, ಉತ್ಪಾದನಾ ಖರ್ಚನ್ನೂ ಮರಳಿ ಪಡೆಯಲಾಗದ ಸ್ಥಿತಿಯಲ್ಲಿರುವ ರೈತರ ಆರ್ಥಿಕ ಸ್ಥಿತಿಯನ್ನು ಅದು ಹೇಗೆ ಸುಧಾರಿಸಬಹುದು?

ಸುಸ್ಥಿರ ಕೃಷಿ, ಹವಾಮಾನಕ್ಕೆ ಹೊಂದಿಕೊಳ್ಳುವಿಕೆ, ಪೌಷ್ಟಿಕಾಂಶ ಭದ್ರತೆ, ಸಣ್ಣ ರೈತರ ಸಬಲೀಕರಣ, ಕಾರ್ಬನ್ ಕ್ರೆಡಿಟ್ ಮಾರುಕಟ್ಟೆಗಳು ಮತ್ತು ಸಂಶೋಧನೆಗಾಗಿ ನಿಧಿಯ ಕೊರತೆಯಿಂದ ಈಗಾಗಲೇ ಬಲಿಪಶುವಾಗಿರುವ ಪ್ರಾದೇಶಿಕ ಕೃಷಿ ವಿಜ್ಞಾನ ಕೇಂದ್ರಗಳ ಸಾಮರ್ಥ್ಯ ವರ್ಧನೆಯಂತಹ ನೆಪಗಳನ್ನು ಬಳಸಿಕೊಂಡು ಬೇಯರ್ ಕಂಪೆನಿಯ ಜಿಎಂ ಬೀಜಗಳನ್ನು ಇಲ್ಲಿ ತರಲು ಐಸಿಎಆರ್ ದಾರಿ ಮಾಡಿಕೊಡುತ್ತಿದೆಯೇ ಎಂಬ ಅನುಮಾನವೂ ಮೂಡಬಹುದು. ಮುಂದಿನ ದಿನಗಳಲ್ಲಿ ಕಾರ್ಪೊರೇಟ್ ಕಂಪೆನಿಗಳು ತಮ್ಮ ಸರಕು ಮತ್ತು ಸೇವೆಗಳನ್ನು ಮಾರಾಟ ಮಾಡಲು ಕೃಷಿ ವಿಜ್ಞಾನ ಕೇಂದ್ರಗಳನ್ನು ಕೈಗೊಂಬೆಯಾಗಿ ಬಳಸಿದರೂ ಅಚ್ಚರಿಯಿಲ್ಲ ಎಂಬ ತೀವ್ರ ಆತಂಕವೂ ಮೂಡಿದೆ.

ಬಹುರಾಷ್ಟ್ರೀಯ ಸಂಸ್ಥೆಗಳು, ಜಿಎಂ ಬೀಜಗಳೊಂದಿಗೆ ತಮ್ಮ ಒಳಗೊಳ್ಳುವಿಕೆಯನ್ನು ಹೊರತುಪಡಿಸಿ, ಇತರ ಸಾಮಾನ್ಯ ಆಸಕ್ತಿಗಳನ್ನು ಹಂಚಿಕೊಳ್ಳುತ್ತವೆ. ಈ ಆಸಕ್ತಿಗಳು ಡ್ರೋನ್‌ಗಳು, ಹೊಸದಾಗಿ ರೂಪಿಸಲಾದ ರಾಸಾಯನಿಕಗಳು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಉಪಕರಣಗಳು, ಯಂತ್ರೋಪಕರಣಗಳು ಮತ್ತು ಉಪಕರಣಗಳಂತಹ ವಿವಿಧ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ಮಾರುಕಟ್ಟೆಯನ್ನು ಕಂಡುಕೊಳ್ಳುವುದಕ್ಕೆ ಸಂಬಂಧಿಸಿವೆ. ಇಲ್ಲಿಯೂ ಇತರ ಏಜನ್ಸಿಗಳಂತೆ ಕೃಷಿ ವಿಜ್ಞಾನ ಕೇಂದ್ರಗಳು ಅಂತಹ ಕಂಪೆನಿಗಳ ಕೊನೆಯ ಮಾರುಕಟ್ಟೆ ಸರಣಿಯಾಗಲೂಬಹುದು.

ಇವೆಲ್ಲವೂ, ಮಾರುಕಟ್ಟೆಯನ್ನೂ ಒಳಗೊಂಡಂತೆ ಕೃಷಿ ಒಳಹರಿವಿನ ಎಲ್ಲಾ ಅಂಶಗಳನ್ನು ಈ ಬಹುರಾಷ್ಟ್ರೀಯ ಕಾರ್ಪೊರೇಟ್ ಘಟಕಗಳ ನಿಯಂತ್ರಣದಲ್ಲಿ ಇರಿಸುತ್ತದೆ. ನಾಳೆ ಭಾರತದ ಆಹಾರ ವ್ಯವಸ್ಥೆ ಅವುಗಳ ಹಿಡಿತದಲ್ಲಿ ಬೀಳಬಹುದು. ಇದು ಸಂಭಾವ್ಯ ಅಪಾಯಕಾರಿ ಮತ್ತು ಹಾನಿಕಾರಕ ಪರಿಸ್ಥಿತಿಯನ್ನು ತರಲಿದೆ. ತಾಂತ್ರಿಕ ಪ್ರಗತಿ ಮತ್ತು ಅತ್ಯಾಧುನಿಕ ವಿಜ್ಞಾನದ ನೆಪದಲ್ಲಿ, ಇಕಾಲಜಿ ಮತ್ತು ಪರಿಸರಕ್ಕೆ ಬದಲಾಯಿಸಲಾಗದ ಹಾನಿಯನ್ನು ಉಂಟುಮಾಡುವ ಅಪಾಯವಿದೆ. ಕೋವಿಡ್ ಒಡ್ಡಿದ ಸವಾಲುಗಳಿಗೆ ಸಮಾನವಾದ ಹೊಸ ವೈರಸ್ ತಳಿಗಳು ಹೊರಹೊಮ್ಮುವ ಸಾಧ್ಯತೆಯೂ ಇದೆ. ಇದು ಮನುಷ್ಯರು ಮತ್ತು ಪ್ರಾಣಿಗಳ ಮೇಲೆ ಪರಿಣಾಮ ಬೀರುವ ಅಪರಿಚಿತ ಕಾಯಿಲೆಗಳಿಗೆ ಕಾರಣವಾಗಬಹುದು. ಇವೆಲ್ಲವೂ, ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ಆಗಿರುವಂತೆ ಆರೋಗ್ಯ ರಕ್ಷಣೆಯ ಹೂಡಿಕೆಗಳ ಮೇಲೆ ಗಣನೀಯ ಆರ್ಥಿಕ ಹೊರೆಗೆ ಕಾರಣವಾಗಬಹುದು.

ಈ ಕಾರ್ಪೊರೇಟ್ ದೈತ್ಯರ ಒಟ್ಟಾರೆ ಧ್ಯೇಯವಾಕ್ಯವೆಂದರೆ ತಮ್ಮ ವ್ಯವಹಾರವನ್ನು ವಿಶ್ವಾದ್ಯಂತ ವಿಸ್ತರಿಸುವುದು ಮತ್ತು ಬಿಕ್ಕಟ್ಟು ಇರುವಲ್ಲೆಲ್ಲಾ ಲಾಭವನ್ನು ಗಳಿಸುವುದು.

ಆದ್ದರಿಂದ, ಈ ಎಲ್ಲ ಕಳವಳಕಾರಿ ಅಂಶಗಳ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಮತ್ತು ಸಾಧಕ ಬಾಧಕಗಳನ್ನು ಮರುಪರಿಶೀಲಿಸಲು ಮುಂದಾಗಬೇಕಿದೆ. ಮತ್ತಷ್ಟು ಆಳವಾದ ಮೌಲ್ಯಮಾಪನಕ್ಕಾಗಿ ಈ ವಿಚಾರಗಳನ್ನು ಪ್ರತೀ ರಾಜ್ಯದ ಸಾರ್ವಜನಿಕ, ಶಾಸಕಾಂಗ ಮತ್ತು ಆಡಳಿತ ಅಧಿಕಾರಿಗಳ ಗಮನಕ್ಕೆ ತರಬೇಕಾಗಿದೆ. ಯಾಕೆಂದರೆ, ಅಂತಿಮವಾಗಿ ಈ ಒಪ್ಪಂದದ ಕೃಷಿ ಎಂಬುದು ಭಾರತದ ಸಂವಿಧಾನದ ಪ್ರಕಾರ ರಾಜ್ಯಗಳ ವಿಷಯವಾಗಿದೆ.

ಕಡೆಯದಾಗಿ ಗಮನಿಸಬೇಕಾಗಿರುವುದೆಂದರೆ, ಭಾರತೀಯ ರೈತರು ಪುನರುತ್ಪಾದಕ ಕೃಷಿಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದಾರೆ. ಅವರನ್ನು ಆ ನಿಟ್ಟಿನಲ್ಲಿ ಇನ್ನಷ್ಟು ಪರಿಣತಗೊಳಿಸಬೇಕು ಮತ್ತು ಅವರ ರಕ್ಷಣೆಗೆ ನಿಲ್ಲಬೇಕು. ಇದು ಯಾವುದೇ ಸರಕಾರ ಮತ್ತು ಸಂಸ್ಥೆಗಳ ಕರ್ತವ್ಯವಾಗಿದೆ.

(ಕೃಪೆ:countercurrents.org)

share
ಮಂಜುನಾಥ್ ಎಚ್
ಮಂಜುನಾಥ್ ಎಚ್
Next Story
X