Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವೈದ್ಯಕೀಯ ತ್ಯಾಜ್ಯ ವಿಲೇವಾರಿ:...

ವೈದ್ಯಕೀಯ ತ್ಯಾಜ್ಯ ವಿಲೇವಾರಿ: ಮರುಚಿಂತನೆ ಅಗತ್ಯ

ಆರ್. ಬಿ. ಗುರುಬಸವರಾಜಆರ್. ಬಿ. ಗುರುಬಸವರಾಜ10 Dec 2023 9:17 AM IST
share
ವೈದ್ಯಕೀಯ ತ್ಯಾಜ್ಯ ವಿಲೇವಾರಿ: ಮರುಚಿಂತನೆ ಅಗತ್ಯ

ಬಿಸಾಡಬಹುದಾದ ಸಿರಿಂಜ್ ಗಳು, ನೀಡಲ್ ಗಳು, ಡ್ರೆಸ್ಸಿಂಗ್ ಕಾಟನ್, ಬಟ್ಟೆಗಳು, ಖಾಲಿ ಔಷಧಿ ಬಾಟಲಿಗಳು, ಇಂಜೆಕ್ಷನ್ ವಾಯಿಲ್ ಗಳು, ಪಿ.ಪಿ.ಇ. ಕಿಟ್ ಗಳು. ಕೈಗವಸುಗಳು, ಮಾಸ್ಕ್ ಗಳು, ರೋಗಿಗಳ ಬಟ್ಟೆ ಮತ್ತು ಹಾಸಿಗೆಗಳು ಅಪಾಯಕಾರಿಯಲ್ಲವೇ? ಇನ್ನು ವೈದ್ಯಕೀಯ ಪ್ರಯೋಗಾಲಯಗಳು ಮತ್ತು ತಪಾಸಣಾ ಕೇಂದ್ರಗಳಲ್ಲಿ ಸಂಗ್ರಹಿಸಿದ ರಕ್ತ, ಮೂತ್ರ ಮತ್ತು ಇನ್ನಿತರ ಅಂಶಗಳು ರೋಗಕಾರಕವಲ್ಲವೇ? ಇವುಗಳನ್ನು ಸರಿಯಾಗಿ ವಿಲೇವಾರಿ ಮಾಡದೇ ಸಾಮಾನ್ಯ ತ್ಯಾಜ್ಯದೊಂದಿಗೆ ಬೆರೆಸುತ್ತಿರುವುದು ಎಷ್ಟರಮಟ್ಟಿಗೆ ಸಮಂಜಸ?.

ಯಾವುದೇ ನಗರದ ಹೊರ ವಲಯ ಪ್ರವೇಶಿಸುತ್ತಿದ್ದಂತೆ ತ್ಯಾಜ್ಯ ಸಾಮಗ್ರಿಗಳು ರಸ್ತೆಯ ಇಕ್ಕೆಲಗಳಲ್ಲಿ ಕಾಣುವುದು ಸಹಜ. ಇದರಲ್ಲಿ ಒಂದಿಷ್ಟು ವೈದ್ಯಕೀಯ ತ್ಯಾಜ್ಯಗಳೂ ಸೇರಿರುತ್ತವೆ. ಕೋವಿಡ್ ಕಾಲದ ನಂತರ ವೈದ್ಯಕೀಯ ತ್ಯಾಜ್ಯ ಹೆಚ್ಚುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ. ಬಹುತೇಕ ಸಂದರ್ಭಗಳಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಅದರಿಂದ ಹೆಚ್ಚು ಅಪಾಯಗಳು ಇಲ್ಲ ಎಂಬ ಕುಂಟು ನೆಪ ಇದನ್ನು ಗಂಭೀರವಾಗಿ ಪರಿಗಣಿಸದಿರಲು ಕಾರಣವಾಗಿರಬಹುದು.

ವೈದ್ಯಕೀಯ ತ್ಯಾಜ್ಯವು ಒಟ್ಟು ತ್ಯಾಜ್ಯದ ಶೇಕಡಾ 2ರಿಂದ 3ರಷ್ಟಿದೆ. ಆದರೆ ಇದು ಅತ್ಯಂತ ಅಪಾಯಕಾರಿ ತ್ಯಾಜ್ಯಗಳಲ್ಲಿ ಒಂದು ಎಂದು ಪರಿಗಣಿಸಿಲ್ಲದಿರುವುದು ದುರಂತ. ವೈದ್ಯಕೀಯ ತ್ಯಾಜ್ಯವು ಅಪಾಯಕಾರಿ ಸೂಕ್ಷ್ಮಜೀವಿಗಳು, ವಿಷಕಾರಿ ಔಷಧಗಳನ್ನು ಹೊಂದಿರುತ್ತದೆ. ಇದು ಅಪಾಯಗಳ ಒಂದು ಸಣ್ಣ ಅವಲೋಕನವಾಗಿದ್ದು, ಈ ಸಮಸ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಏಕೆಂದರೆ ವೈದ್ಯಕೀಯ ತ್ಯಾಜ್ಯವು ಸೋಂಕಿನ ಅಪಾಯಗಳನ್ನು ಹೊಂದಿರುತ್ತದೆ.

ಆಸ್ಪತ್ರೆಗಳು, ವೈದ್ಯಕೀಯ ಪ್ರಯೋಗಾಲಯಗಳು, ಶವಾಗಾರಗಳು, ಮಾನವ ಹಾಗೂ ಪ್ರಾಣಿ ಸಂಶೋಧನಾ ಕೇಂದ್ರಗಳು, ರಕ್ತನಿಧಿಗಳು, ನರ್ಸಿಂಗ್ ಹೋಂಗಳು ವೈದ್ಯಕೀಯ ತ್ಯಾಜ್ಯವನ್ನು ಉತ್ಪತ್ತಿ ಮಾಡುತ್ತವೆ. ಒಂದು ಸಣ್ಣ ಆಸ್ಪತ್ರೆಯು ದಿನಕ್ಕೆ 100 ಕೆಜಿವರೆಗೆ ವೈದ್ಯಕೀಯ ತ್ಯಾಜ್ಯವನ್ನು ಉತ್ಪಾದಿಸಬಹುದು.

ಕೋವಿಡ್ ನಂತರ ಜಿಲ್ಲಾ ಮತ್ತು ತಾಲೂಕು ಹಂತದ ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ ದ್ವಿಗುಣಗೊಂಡಿದೆ. ಆದರೆ ಅದಕ್ಕನುಗುಣವಾಗಿ ತ್ಯಾಜ್ಯ ವಿಲೇವಾರಿಯಲ್ಲಿ ಬದಲಾವಣೆಗಳು ಆಗಲಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರುವ ಕಾಲದಲ್ಲೂ ಬಹುತೇಕವಾಗಿ ರಾಜ್ಯದ ಎಲ್ಲಾ ನಗರಗಳಲ್ಲೂ ವೈದ್ಯಕೀಯ ತ್ಯಾಜ್ಯದ ವಿಲೇವಾರಿ ಸುರಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲದಿರುವುದು ಶೋಚನೀಯವಲ್ಲವೇ?

ಬಿಸಾಡಬಹುದಾದ ಸಿರಿಂಜ್ಗಳು, ನೀಡಲ್ಗಳು, ಡ್ರೆಸ್ಸಿಂಗ್ ಕಾಟನ್, ಬಟ್ಟೆಗಳು, ಖಾಲಿ ಔಷಧಿ ಬಾಟಲಿಗಳು, ಇಂಜೆಕ್ಷನ್ ವಾಯಿಲ್ಗಳು, ಪಿ.ಪಿ.ಇ. ಕಿಟ್ಗಳು. ಕೈಗವಸುಗಳು, ಮಾಸ್ಕ್ ಗಳು, ರೋಗಿಗಳ ಬಟ್ಟೆ ಮತ್ತು ಹಾಸಿಗೆಗಳು ಅಪಾಯಕಾರಿಯಲ್ಲವೇ? ಇನ್ನು ವೈದ್ಯಕೀಯ ಪ್ರಯೋಗಾಲಯಗಳು ಮತ್ತು ತಪಾಸಣಾ ಕೇಂದ್ರಗಳಲ್ಲಿ ಸಂಗ್ರಹಿಸಿದ ರಕ್ತ, ಮೂತ್ರ ಮತ್ತು ಇನ್ನಿತರ ಅಂಶಗಳು ರೋಗಕಾರಕವಲ್ಲವೇ? ಇವುಗಳನ್ನು ಸರಿಯಾಗಿ ವಿಲೇವಾರಿ ಮಾಡದೇ ಸಾಮಾನ್ಯ ತ್ಯಾಜ್ಯದೊಂದಿಗೆ ಬೆರೆಸುತ್ತಿರುವುದು ಎಷ್ಟರಮಟ್ಟಿಗೆ ಸಮಂಜಸ?.

ಇತ್ತೀಚಿನ ವರ್ಷಗಳಲ್ಲಿ ಪ್ರತೀ ಮನೆಯೂ ಒಂದು ಸಣ್ಣ ಆಸ್ಪತ್ರೆಯಂತಾಗಿದೆ. ಬಹುತೇಕ ಮನೆಗಳಲ್ಲಿ ವೈದ್ಯಕೀಯ ಕಿಟ್ ಲಭ್ಯ ಇದೆ. ಹೀಗೆ ಮನೆಗಳಲ್ಲಿಯೂ ಬಳಸಿ ಬಿಸಾಡುವ ವೈದ್ಯಕೀಯ ತ್ಯಾಜ್ಯವು ಸಾಮಾನ್ಯ ತ್ಯಾಜ್ಯದೊಂದಿಗೆ ಬೆರೆಯುತ್ತಿದೆ. ಕೆಲ ಸಂದರ್ಭಗಳಲ್ಲಿ ತ್ಯಾಜ್ಯದೊಂದಿಗೆ ಬೆರೆತ ಸಿರಿಂಜ್ ನೀಡಲ್ಗಳು ತುಂಬಾ ಅಪಾಯಕಾರಿ ಪರಿಣಾಮಗಳನ್ನು ಬೀರಿರುವುದು ಉಂಟು. ಚಿಂದಿ ಆಯುವವರ ಕಾಲಿಗೆ ಚುಚ್ಚಿ ಗಂಭೀರ ಗಾಯಗಳಾಗಿ ತೊಂದರೆಗೆ ಒಳಗಾಗಿರುವ ಘಟನೆಗಳಿವೆ. ಜೊತೆಗೆ ದನಕರುಗಳ ಬಾಯಿಗೆ ಚುಚ್ಚಿರುವ ಘಟನೆಗಳೂ ಇವೆ.

ಔಷಧೀಯ ಉತ್ಪನ್ನಗಳು ರಾಸಾಯನಿಕ ಅಂಶಗಳನ್ನು ಒಳಗೊಂಡಿರುತ್ತವೆ ಎಂಬುದು ಸಾಮಾನ್ಯ ಸಂಗತಿ. ಹೀಗೆ ಅಳಿದುಳಿದ ರಾಸಾಯನಿಕಗಳು ತ್ಯಾಜ್ಯಗಳ ಮೂಲಕ ಪರಿಸರಕ್ಕೆ ಸೇರ್ಪಡೆಯಾಗುತ್ತವೆ. ಇದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಬಹುತೇಕ ಸಂದರ್ಭಗಳಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಆಸ್ಪತ್ರೆಯ ಆವರಣದಲ್ಲಿ ಸುಡಲಾಗುತ್ತದೆ. ವೈದ್ಯಕೀಯ ತ್ಯಾಜ್ಯ ಸುಡುವಿಕೆಯಿಂದ ಅದರಲ್ಲಿನ ರಾಸಾಯನಿಕಗಳು ವಾಯುವಿನಲ್ಲಿ ಸೇರಿಕೊಂಡು ಉಸಿರಾಟಕ್ಕೆ ಮಾರಕವಾಗುತ್ತವೆ. ವೈದ್ಯಕೀಯ ತ್ಯಾಜ್ಯದಲ್ಲಿ ಪಾದರಸ, ಡಯಾಕ್ಸಿನ್, ಕ್ಲೋರಿನ್, ಸೋಂಕುನಿವಾರಕಗಳು ವಿಷಕಾರಿ ಅಂಶಗಳು ಸೇರಿರುತ್ತವೆ. ಅಸಮರ್ಪಕ ಅಥವಾ ಸೂಕ್ತವಲ್ಲದ ವಸ್ತುಗಳ ದಹನವು ವಾತಾವರಣಕ್ಕೆ ಮಾಲಿನ್ಯಕಾರಕಗಳನ್ನು ಬಿಡುಗಡೆ ಮಾಡುತ್ತದೆ. ಬೂದಿಯಂತಹ ಅವಶೇಷಗಳ ರಚನೆಗೆ ಕಾರಣವಾಗುತ್ತದೆ. ಇನ್ನು ಕೆಲವು ಕಡೆಗಳಲ್ಲಿ ವೈದ್ಯಕೀಯ ತ್ಯಾಜ್ಯವನ್ನು ನೆಲದಲ್ಲಿ ಹೂಳಲಾಗುತ್ತದೆ. ಇದು ಸಹ ಅಪಾಯಕಾರಿ. ಏಕೆಂದರೆ ವೈದ್ಯಕೀಯ ತ್ಯಾಜ್ಯದಲ್ಲಿನ ಬ್ಯಾಕ್ಟೀರಿಯಾಗಳು, ರಾಸಾಯನಿಕಗಳು ಮಣ್ಣು ಮತ್ತು ನೀರಿನ ಮಾಲಿನ್ಯಕ್ಕೆ ಕಾರಣವಾಗಬಹುದು. ಈ ಎಲ್ಲಾ ಪ್ರಕ್ರಿಯೆಗಳು ಇನ್ನಷ್ಟು ರೋಗಗಳಿಗೆ ಆಹ್ವಾನ ನೀಡುತ್ತವೆ.

ಭಾರತ ಸರಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು ದೇಶದಲ್ಲಿ ಪ್ರತಿದಿನ 4,05,702 ಕೆಜಿ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ, ಅದರಲ್ಲಿ 2,91,983 ಕೆಜಿ ಮಾತ್ರ ವಿಲೇವಾರಿಯಾಗಿದೆ ಎಂದು ಹೇಳಿದೆ. ಅಂದರೆ ಪ್ರತಿದಿನ, 1,13,719 ಕೆಜಿ ತ್ಯಾಜ್ಯವನ್ನು ಗಮನಿಸದೆ ಬಿಡಲಾಗುತ್ತದೆ ಎಂಬುದನ್ನು ಅಂಕಿಅಂಶಗಳು ದೃಢಪಡಿಸುತ್ತವೆ. ಹೀಗೆ ನಿತ್ಯವೂ ಪರಿಸರವನ್ನು ಸೇರುತ್ತಿರುವ ವೈದ್ಯಕೀಯ ತ್ಯಾಜ್ಯವು ಗಂಭೀರ ಪರಿಣಾಮಗಳನ್ನು ಬೀರದೇ ಇರದು. ಈಗಲಾದರೂ ನಾವು ಎಚ್ಚೆತ್ತುಕೊಳ್ಳದೆ ಹೋದರೆ ಮುಂದೊಂದು ದಿನ ಇದೇ ತ್ಯಾಜ್ಯ ಅನಾರೋಗ್ಯದ ಟೈಂಬಾಂಬ್ ಆಗಬಹುದು.

ಇದನ್ನು ನಿವಾರಿಸಲು ಪ್ರತೀ ಗ್ರಾಮ ಪಂಚಾಯತ್ ಸೇರಿದಂತೆ ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆಗಳು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ವೈದ್ಯಕೀಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವವರಿಗೆ ಕಠಿಣ ಕಾನೂನುಗಳನ್ನು ರೂಪಿಸಬೇಕಿದೆ. ಪ್ರತೀ ಆಸ್ಪತ್ರೆ, ನರ್ಸಿಂಗ್ ಹೋಂ, ವೈದ್ಯಕೀಯ ಪ್ರಯೋಗಾಲಯಗಳು, ರಕ್ತನಿಧಿಗಳಿಗೆ ಸೂಕ್ತ ಎಚ್ಚರಿಕೆ ಮತ್ತು ತಿಳುವಳಿಕೆ ನೀಡಬೇಕಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯ ಜನರಿಗೂ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯ ಕುರಿತು ಅರಿವು ಮೂಡಿಸಬೇಕಾದ ಅಗತ್ಯವಿದೆ. ಸಾಮಾನ್ಯ ತ್ಯಾಜ್ಯದೊಂದಿಗೆ ವೈದ್ಯಕೀಯ ತ್ಯಾಜ್ಯವನ್ನು ಬೆರೆಸದೆ ಪ್ರತ್ಯೇಕವಾಗಿ ಇರಿಸುವ ಮತ್ತು ಸೂಕ್ತವಾಗಿ ವಿಲೇವಾರಿ ಮಾಡುವ ಕುರಿತ ಜಾಗೃತಿ ಅಗತ್ಯವಾಗಿದೆ. ಇಂತಹ ವಿಷಯಗಳನ್ನು ಕಾನೂನಿನ ಬೆಂಬಲಕ್ಕಿಂತ ಬದಲಾಗಿ ಮಾನವೀಯತೆಯ ನೆಲೆಗಟ್ಟಿನಲ್ಲಿನ ಬೆಂಬಲದೊಂದಿಗೆ ಬಗೆಹರಿಸಬೇಕಾಗಿದೆ. ಸ್ವಚ್ಛತೆಯ ಅಭಿಯಾನದಂತೆ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೂ ಅಭಿಯಾನ ಮಾಡಬೇಕಾದರೂ ಹಿಂಜರಿಯಬೇಕಾಗಿಲ್ಲ. ಎಲ್ಲರೂ ಸೇರಿ ವೈದ್ಯಕೀಯ ತ್ಯಾಜ್ಯವನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸೋಣ.

share
ಆರ್. ಬಿ. ಗುರುಬಸವರಾಜ
ಆರ್. ಬಿ. ಗುರುಬಸವರಾಜ
Next Story
X