Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅಮೆರಿಕದಲ್ಲಿ ಮಿಂಚುತ್ತಿರುವ ಅಡಿಗರ...

ಅಮೆರಿಕದಲ್ಲಿ ಮಿಂಚುತ್ತಿರುವ ಅಡಿಗರ ಮೊಮ್ಮಗ ಮನುರಾಜು!

ಕೆ. ಆರ್. ಶ್ರೀನಾಥ್, ಅಟ್ಲಾಂಟಕೆ. ಆರ್. ಶ್ರೀನಾಥ್, ಅಟ್ಲಾಂಟ12 May 2026 11:20 AM IST
share
ಅಮೆರಿಕದಲ್ಲಿ ಮಿಂಚುತ್ತಿರುವ ಅಡಿಗರ ಮೊಮ್ಮಗ ಮನುರಾಜು!

►ಭಾರತದ ಪ್ರಧಾನಿ 12 ವರ್ಷಗಳಲ್ಲಿ ಪತ್ರಿಕಾಗೋಷ್ಠಿ ನಡೆಸದಿರುವುದು ಆಶ್ಚರ್ಯ ತಂದಿದೆ: CNN ಪತ್ರಕರ್ತ ಮನು ರಾಜು

►ಭಾರತದ ಮಾಧ್ಯಮ, ಪ್ರಜಾಪ್ರಭುತ್ವದ ಕುರಿತು ಗೋಪಾಲಕೃಷ್ಣ ಅಡಿಗರ ಮೊಮ್ಮಗ ಹೇಳಿದ್ದೇನು?

►ಅಮೆರಿಕದ ಖ್ಯಾತ ಪತ್ರಕರ್ತ ಮನು ರಾಜು ಅವರೊಂದಿಗೆ ವಿಶೇಷ ಸಂದರ್ಶನ

ಅನಿವಾಸಿ ಭಾರತೀಯರು ಇಂದು ಅಮೆರಿಕದಲ್ಲಿ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಖ್ಯಾತಿ ಪಡೆಯುತ್ತಿದ್ದಾರೆ. ಅಂಥವರಲ್ಲಿ CNN ಟಿವಿಯಲ್ಲಿ ಪತ್ರಕರ್ತರಾಗಿರುವ ಕನ್ನಡಿಗ ಶ್ರೀ.ಮನು ರಾಜು ಪ್ರಮುಖರು. ಪ್ರಸ್ತುತ “ಇನ್‌ಸೈಡ್ ಪಾಲಿಟಿಕ್ಸ್ ಸಂಡೇ” ಕಾರ್ಯಕ್ರಮದ ನಿರೂಪಕರಾಗಿ ಮತ್ತು CNNನ ಮುಖ್ಯ ಸಂಸದೀಯ ವರದಿಗಾರರಾಗಿ ಕ್ಯಾಪಿಟಲ್ ಹಿಲ್ ಮತ್ತು ಚುನಾವಣಾ ರಾಜಕೀಯವನ್ನು ವರದಿ ಮಾಡುತ್ತಿರುವ ಮನು ರಾಜು ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಮನು ಅವರು 2012ರಲ್ಲಿ “ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್”‌ ನ ಪ್ರತಿಷ್ಠಿತ “ಮೇರಿ ಸ್ಮಿತ್ ಮೆಮೋರಿಯಲ್”ಪ್ರಶಸ್ತಿಯನ್ನು ಗೆದ್ದ ನಾಲ್ವರು ವರದಿಗಾರರ ತಂಡದ ಭಾಗವಾಗಿದ್ದರು. 2015ರಲ್ಲಿ “ವಾಷಿಂಗ್ಟನ್ ಲೈಫ್ ಮ್ಯಾಗಝಿನ್” ಅವರನ್ನು 40 ವರ್ಷದೊಳಗಿನ ನಗರದ ಪ್ರಭಾವಶಾಲಿ ವ್ಯಕ್ತಿತ್ವಗಳ ಪಟ್ಟಿಯಲ್ಲಿ ಸೇರಿಸಿತು. 2017ರಲ್ಲಿ ಮನು ರಾಜು ಅವರಿಗೆ ಸಂಸದೀಯ ಮತ್ತು ರಾಜಕೀಯ ವ್ಯವಹಾರಗಳ ವರದಿಗಾರಿಕೆಯಲ್ಲಿ ಶ್ರೇಷ್ಠತೆಗಾಗಿ 2016ರ “ ಜೋನ್ ಎಸ್. ಬ್ಯಾರನ್” ಪ್ರಶಸ್ತಿಯನ್ನು ನೀಡಲಾಯಿತು.

ಕವಿ ಪ್ರೊ.ಗೋಪಾಲಕೃಷ್ಣ ಅಡಿಗರ ಮೊಮ್ಮಗನಾಗಿರುವ ಮನು ರಾಜು ಅವರೊಂದಿಗೆ ವಾರ್ತಾ ಭಾರತಿ ಪತ್ರಿಕೆ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ...

ಶ್ರೀನಾಥ್: ಮನು, ಈ ಸಂದರ್ಶನಕ್ಕೆ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು. ವಿಶ್ವದಾದ್ಯಂತವಿರುವ ಭಾರತೀಯರಿಗೆ, ವಿಶೇಷವಾಗಿ ಕನ್ನಡ ಭಾಷಿಕರಿಗೆ ನಿಮ್ಮ ಜೀವನ, ನಿಮ್ಮ ಸಾಧನೆಗಳು ಮತ್ತು ನಿಮ್ಮ ತಾತ ಪ್ರೊ.ಗೋಪಾಲಕೃಷ್ಣ ಅಡಿಗರ ಕುರಿತು ನಿಮ್ಮ ನೆನಪುಗಳನ್ನು ತಿಳಿದುಕೊಳ್ಳಲು ಕುತೂಹಲವಿದೆ.

ಮನು ರಾಜು: ನನ್ನನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ನಿಜಕ್ಕೂ ಗೌರವ ಅನ್ನಿಸುತ್ತದೆ.

ಶ್ರೀನಾಥ್: ನೀವು ಪ್ರೊ.ಅಡಿಗರ ಹಿರಿಯ ಪುತ್ರಿ ವಿದ್ಯಾ ರಾಜು ಅವರ ಮಗ. ನಿಮ್ಮ ಪೋಷಕರು, ಬಾಲ್ಯ ಮತ್ತು ನಿಮ್ಮ ಶಿಕ್ಷಣದ ಕುರಿತು ವಿವರಿಸಬಹುದೇ?

ಮನು ರಾಜು: ಮೊದಲನೆಯದಾಗಿ, ನನ್ನ ಪೋಷಕರು 70ರ ದಶಕದಲ್ಲಿ ಅಮೆರಿಕಕ್ಕೆ ವಲಸೆ ಬಂದರು. ನನ್ನ ತಂದೆ ತೊಣಸೆ ನಾರಾಯಣ ಕೃಷ್ಣ ರಾಜು ಉಡುಪ. ಅವರು ಉಡುಪಿಯ ಮೂಲದವರು. ಅವರು ಪಿರಿಯಾಪಟ್ಟಣ ಎಂಬ ಸಣ್ಣ ನಗರದಲ್ಲಿ ಬೆಳೆದರು. ಅವರ ತಂದೆ ಅಂದರೆ ನನ್ನ ತಾತ, ಆ ಊರಿನ ಏಕೈಕ ವೈದ್ಯರಾಗಿದ್ದರು. ನನ್ನ ತಂದೆ ಕೂಡ ತಮ್ಮ ತಂದೆಯ ಹೆಜ್ಜೆ ತುಳಿಯಬೇಕೆಂದು ಬಯಸಿದರು. ಹೀಗಾಗಿ ಅವರು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದರು. ನಂತರ ಮುಂಬೈಯಲ್ಲಿ ಉನ್ನತ ಅಧ್ಯಯನ ಮಾಡಿದರು ಮತ್ತು ತದನಂತರ ಚಿಕಾಗೋಗೆ ಬಂದು ನಿಯೋನಟಾಲಜಿಸ್ಟ್ [Neonatologist] ಆಗಿ, ಅಂದರೆ ನವಜಾತ ಶಿಶುಗಳ ವೈದ್ಯರಾಗಿ, ತಮ್ಮ ವೃತ್ತಿಜೀವನ ಆರಂಭಿಸಿದರು. ಬಳಿಕ ಅವರು ಚಿಕಾಗೋ ವಿಶ್ವವಿದ್ಯಾಲಯದ ಯುಐಸಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಆ ಸಮಯದಲ್ಲಿ, ಅವರು ಭಾರತಕ್ಕೆ ಮದುವೆಯಾಗಲು ತೆರಳಿದರು. ಪ್ರಸಿದ್ಧ ಕನ್ನಡ ಲೇಖಕ U.R.ಅನಂತಮೂರ್ತಿ ಅವರ ಮೂಲಕ ನನ್ನ ತಾತ ಗೋಪಾಲಕೃಷ್ಣ ಅಡಿಗರ ಪರಿಚಯವಾಗಿ, ನಂತರ ನನ್ನ ತಾಯಿಯನ್ನು ಭೇಟಿಯಾಗಿ 1975ರಲ್ಲಿ ಮದುವೆಯಾದರು. ನನ್ನ ತಾಯಿ ಅಮೆರಿಕಕ್ಕೆ ಬಂದು ಸೇರಿಕೊಂಡರು. 1976ರ ಅಂತ್ಯದಲ್ಲಿ ನನ್ನ ಅಣ್ಣ ಚಿಕಾಗೋ ಉಪನಗರದಲ್ಲಿ ಜನಿಸಿದರು. ನಾನೇ ಅವರ ಏಕೈಕ ಒಡಹುಟ್ಟಿದವನು. ನಾನು 1980ರಲ್ಲಿ ಚಿಕಾಗೋದ ಪಶ್ಚಿಮ ಉಪನಗರ ಡೇರಿಯನ್, ಇಲಿನಾಯ್ಸ್‌ ನಲ್ಲಿ ಜನಿಸಿದೆ. ನಾನು ಅಮೆರಿಕನ್‌ ರೀತಿಯಲ್ಲಿ ಬೆಳೆದೆ. ಜೊತೆಗೆ ನನ್ನ ಪೋಷಕರು ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕೂಡ ಬಹಳ ಮುಖ್ಯವೆಂದು ಪರಿಗಣಿಸಿ ಅದನ್ನು ನನ್ನ ಜೀವನದ ಭಾಗವಾಗಿ ಮಾಡಿದರು. ಲಾಮೊಂಟ್, ಇಲಿನಾಯ್ಸ್‌ ನಲ್ಲಿರುವ ಗ್ರೇಟರ್ ಚಿಕಾಗೋ ಹಿಂದೂ ದೇವಾಲಯದಲ್ಲಿ ನಾನು ಬಿಡುವಿನ ಸಮಯವನ್ನು ಕಳೆಯುತ್ತಿದ್ದೆ. ಶಾಲಾ ದಿನಗಳಲ್ಲಿ ಫುಟ್‌-ಬಾಲ್, ಬ್ಯಾಸ್ಕೆಟ್‌ ಬಾಲ್, ಟ್ರ್ಯಾಕ್ ಮುಂತಾದ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದೆ. ನಾನು ಬೆಳೆದ ಆ ಪ್ರದೇಶದಲ್ಲಿ ಆಗ ಭಾರತೀಯರ ಸಂಖ್ಯೆ ಬಹಳ ಕಡಿಮೆಯಿತ್ತು. ಇಟಾಲಿಯನ್, ಐರಿಷ್, ಪೋಲಿಷ್ ಸ್ನೇಹಿತರೇ ಹೆಚ್ಚಾಗಿದ್ದರು. ಹೈಸ್ಕೂಲ್‌ಗೆ ಬಂದ ಮೇಲೆ ಹೆಚ್ಚು ಭಾರತೀಯರ ಪರಿಚಯವಾಯಿತು. 1998ರಲ್ಲಿ ಹೈಸ್ಕೂಲ್ ಮುಗಿಸಿ ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯಕ್ಕೆ ಸೇರಿದೆ. ಆರಂಭದಲ್ಲಿ ಬಿಸಿನೆಸ್ ಪದವಿ ಪಡೆಯಬೇಕೆಂದುಕೊಂಡಿದ್ದೆ; ಆದರೆ, ಕಾಲೇಜಿನ ವಿದ್ಯಾರ್ಥಿ ಪತ್ರಿಕೆ 'ಬ್ಯಾಡ್ಜರ್ ಹೆರಾಲ್ಡ್'ನಲ್ಲಿ ಕ್ರೀಡಾ ವರದಿ ಬರೆಯಲು ಶುರು ಮಾಡಿ ಪತ್ರಿಕೋದ್ಯಮದ ಕಡೆ ಆಕರ್ಷಿತನಾದೆ. 2002ರಲ್ಲಿ ಪದವಿ ಮುಗಿಸುವ ಹೊತ್ತಿಗೆ ಪತ್ರಕರ್ತನಾಗಬೇಕೆಂದು ನಿರ್ಧರಿಸಿ ವಾಷಿಂಗ್ಟನ್‌ ಗೆ ತೆರಳಿದೆ.

ತಾತ ಗೋಪಾಲಕೃಷ್ಣ ಅಡಿಗರೊಂದಿಗೆ ಪುಟ್ಟ ಮನು ರಾಜು.

ಅಜ್ಜಿ ಲಲಿತರೊಂದಿಗೆ ಮನು ರಾಜು.

ಶ್ರೀನಾಥ್: ನಿಮ್ಮ ತಾತ ಪ್ರೊ. ಅಡಿಗರು ನವ್ಯ ಕಾವ್ಯ ಚಳವಳಿಯ ಪ್ರವರ್ತಕರು. ಬೆಂಗಳೂರಿನಲ್ಲಿ ನೀವು ತಾತನೊಂದಿಗೆ ಕಳೆದ ಸಮಯದ ಕುರಿತು ಹೇಳಿ...

ಮನು ರಾಜು: ಹೌದು, ಅವರ ಕುರಿತು ನನಗೆ ಅಮೂಲ್ಯ ನೆನಪುಗಳಿವೆ. ಅವರು ತುಂಬಾ ಸೌಮ್ಯ ಮತ್ತು ವಿನಮ್ರ ವ್ಯಕ್ತಿತ್ವದವರಾಗಿದ್ದರು. ನಾನು ಭಾರತಕ್ಕೆ ಹೋದಾಗ ಬೆಂಗಳೂರಿನ ಜಯನಗರದಲ್ಲಿರುವ ಅವರ ಮನೆಗೆ ಹೋಗುತ್ತಿದ್ದೆ. ಅಲ್ಲಿ ದೇಶ-ವಿದೇಶಗಳಿಂದ ಸದಾ ಅತಿಥಿಗಳ ಸಾಲು ಇರುತ್ತಿತ್ತು. ಎಲ್ಲರನ್ನೂ ಅವರು ಪ್ರೀತಿಯಿಂದ ಸ್ವಾಗತಿಸುತ್ತಿದ್ದರು. 1986ರಲ್ಲಿ ಅವರು ಚಿಕಾಗೋದ ನಮ್ಮ ಮನೆಗೆ ಬಂದಿದ್ದ ಸಮಯದಲ್ಲಿ ಪ್ರತಿಷ್ಠಿತ ಕಬೀರ್ ಸಮ್ಮಾನ್ ಪ್ರಶಸ್ತಿ ಸಿಕ್ಕಿದ ಮಾಹಿತಿ ದೂರವಾಣಿ ಮೂಲಕ ಬಂತು. ಅವರು ಆ ಪ್ರಶಸ್ತಿಯ ಪ್ರಥಮ ಸ್ವೀಕೃತರಾಗಿದ್ದರು. ಅವರು ಅದನ್ನು ಬಹಳ ವಿನಮ್ರತೆಯಿಂದ ಸ್ವೀಕರಿಸಿದರು. ಗರ್ವ ಪಟ್ಟುಕೊಳ್ಳಲಿಲ್ಲ — ಅದೇ ಅವರ ಸ್ವಭಾವವಾಗಿತ್ತು. ಅವರಿಗೆ ಸ್ಟ್ರೋಕ್ ಆಗಿ ಅನಂತರ ಸ್ವಲ್ಪ ಕಷ್ಟವಾಯಿತು. ನನ್ನ ಅಂಕಲ್‌ ಜಯಂತ ಮತ್ತು ಅಜ್ಜಿ ಅವರನ್ನು ಆರೈಕೆ ಮಾಡಿದರು. ಆದರೂ ಅವರು ಬರೆಯುತ್ತಲೇ ಇದ್ದರು, ಓದುತ್ತಲೇ ಇದ್ದರು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂವಾದ ನಡೆಸುತ್ತಿದ್ದರು. ನಾವು ಭೂಮಿಯ ಇನ್ನೊಂದು ಭಾಗದಲ್ಲಿದ್ದರೂ, ಭಾರತಕ್ಕೆ ನಿಯಮಿತವಾಗಿ ಭೇಟಿ ನೀಡಿ ಅವರೊಂದಿಗೆ ಸಮಯ ಕಳೆಯಲು ಸಾಧ್ಯವಾದುದು ನನ್ನ ಭಾಗ್ಯ.

ಶ್ರೀನಾಥ್: ವಲಸೆ ಬಂದ ಭಾರತೀಯ ಕುಟುಂಬದಿಂದ ಬಂದ ನಿಮ್ಮ ಮೇಲೆ, ತಂದೆಯಂತೆ ವೈದ್ಯಕೀಯ ಕ್ಷೇತ್ರ ಆರಿಸಿಕೊಳ್ಳಬೇಕೆಂದು ಒತ್ತಡ ಇತ್ತೇ?

ಮನು ರಾಜು: ನನ್ನ ಪೋಷಕರಿಗೆ ಕೃತಜ್ಞತೆ ಹೇಳಲೇಬೇಕು, ಅವರು ಎಂದೂ ನನಗೆ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಹೋಗಬೇಕೆಂದು ಒತ್ತಾಯ ಮಾಡಲಿಲ್ಲ. ನಾನು ಒಮ್ಮೆ ವೈದ್ಯಕೀಯ ಕ್ಷೇತ್ರದ ಬಗ್ಗೆ ಸ್ವಲ್ಪ ಯೋಚಿಸಿದ್ದೆ, ಯುಐಸಿ ಆಸ್ಪತ್ರೆಯಲ್ಲಿ ತಂದೆಯ ಜೊತೆ ರೌಂಡ್ಸ್‌ ಗೆ ಹೋದೆ; ಆದರೆ, ವೈದ್ಯಕೀಯ ನನ್ನ ದಾರಿ ಅಲ್ಲ ಎಂದು ಅರ್ಥವಾಯಿತು. ಕಾಲೇಜಿನಲ್ಲಿ ಪತ್ರಿಕೋದ್ಯಮ ಆಸಕ್ತಿ ಮೂಡಿದ ಮೇಲೆ ಅದನ್ನೇ ಮುಂದುವರೆಸಿದೆ. ನನ್ನ ತಂದೆ ಯುಐಸಿ ಆಸ್ಪತ್ರೆ ಬಿಟ್ಟು ರಾಷ್ಟ್ರೀಯ ಆರೋಗ್ಯ ಸಂಸ್ಥೆ (NIH)ಯಲ್ಲಿ ಕೆಲಸ ಮಾಡಲು ವಾಷಿಂಗ್ಟನ್ ಡಿ.ಸಿ ಪ್ರದೇಶಕ್ಕೆ ಸ್ಥಳಾಂತರಗೊಂಡ ಮೇಲೆ ನಾನೂ ಅಲ್ಲಿಗೆ ಬಂದು ಕೆಲಸ ಹುಡುಕಿದೆ. ವಾಷಿಂಗ್ಟನ್‌ ಗೆ ಬಂದ ಮೇಲೆ ಪರಿಸರ ನೀತಿ ವರದಿ ಮಾಡುವ "ಇನ್‌ಸೈಡ್ ಇಪಿಎ" ಎಂಬ ವ್ಯಾಪಾರ ಪ್ರಕಾಶನಕ್ಕೆ ಮೊದಲ ಉದ್ಯೋಗ ಸಿಕ್ಕಿತು. ಅಲ್ಲಿಂದ, "ಕಾಂಗ್ರೆಷನಲ್ ಕ್ವಾರ್ಟರ್ಲಿ", "ದ ಹಿಲ್ ನ್ಯೂಸ್‌ಪೇಪರ್", ನಂತರ "ಪೊಲಿಟಿಕೊ" — ಅಲ್ಲಿ ಏಳು ವರ್ಷ ಸಂಸತ್ ವ್ಯವಹಾರಗಳ ವರದಿ ಮಾಡಿ ದೂರದರ್ಶನ ಕ್ಷೇತ್ರದಲ್ಲೂ ಪ್ರಾವೀಣ್ಯ ಗಳಿಸಿದೆ. ನನಗೆ ಅಂದು ವಾಷಿಂಗ್ಟನ್ ಡಿ.ಸಿ ಬಗ್ಗೆ ಅಷ್ಟು ತಿಳಿದಿರಲಿಲ್ಲ; ನಾನು ಮ್ಯಾಡಿಸನ್ ಬಿಟ್ಟು ಇಲ್ಲಿಗೆ ಬಂದು ಇಳಿದೆ. ಜನರನ್ನು ಭೇಟಿಯಾದೆ; ಬಹಳಷ್ಟು ಕಲಿತುಕೊಂಡೆ. 2015ರಲ್ಲಿ CNN ಸೇರಿದ ನಂತರ ಎರಡು ವರ್ಷಗಳ ಹಿಂದೆ "ಇನ್‌ಸೈಡ್ ಪಾಲಿಟಿಕ್ಸ್ ಸಂಡೇ" ನಿರೂಪಣೆಯ ಜವಾಬ್ದಾರಿ ಕೂಡ ನೀಡಲಾಯಿತು. ಈ ಎಲ್ಲ ಸಾಧನೆಗಳಿಗೆ ನನ್ನ ಪೋಷಕರ ಕೊಡುಗೆ ಅಮೂಲ್ಯ.

ತಾತ ಪ್ರೊ. ಗೋಪಾಲಕೃಷ್ಣ ಅಡಿಗ, ಅಜ್ಜಿ ಲಲಿತ, ತಂದೆ ಕೃಷ್ಣರಾಜು, ತಾಯಿ ವಿದ್ಯಾ ಅವರೊಂದಿಗೆ ಮನು ರಾಜು.

ಶ್ರೀನಾಥ್: ನಿಮ್ಮ 10 ವರ್ಷ ವಯಸ್ಸಿನ ಅವಳಿ ಮಕ್ಕಳ ಕುರಿತು ಹೇಳಿ. ಅವರು ಟಿವಿಯಲ್ಲಿ ನಿಮ್ಮನ್ನು ನೋಡುತ್ತಾರೆಯೇ?

ಮನು ರಾಜು: ಹುಡುಗ ಮತ್ತು ಹುಡುಗಿ ಅವಳಿಗಳು, ಸೋನಿಯಾ ಮತ್ತು ಸಂಜಯ್. ತುಂಬಾ ಚಟುವಟಿಕೆಯ ಮಕ್ಕಳು. ಫುಟ್ಬಾಲ್, ಬ್ಯಾಸ್ಕೆಟ್‌ ಬಾಲ್, ಈಜು, ಗಾಲ್ಫ್ — ಎಲ್ಲದರಲ್ಲೂ ತಲ್ಲೀನರಾಗಿರುತ್ತಾರೆ. ನವೆಂಬರ್ 2015ರಲ್ಲಿ ಜನಿಸಿದ ಈ ಮಕ್ಕಳು ನನ್ನ ಹೆಂಡತಿ ಅರ್ಚನಾ ಮತ್ತು ನನಗೆ ಅಪಾರ ಸಂತೋಷ ತಂದಿದ್ದಾರೆ. ಸೋನ್ಯಾ ಚಲನಚಿತ್ರಗಳಲ್ಲಿ ನಟಿಯಾಗಬೇಕೆಂದು ಬಯಸಿದ್ದಾಳೆ; ಸಂಜಯ್ ವೃತ್ತಿಪರ ಸಾಕರ್ ಆಟಗಾರನಾಗಬೇಕೆಂಬ ಕನಸು ಹೊಂದಿದ್ದಾನೆ. ನೋಡೋಣ.

ತಂದೆ ಕೃಷ್ಣರಾಜು, ತಾಯಿ ವಿದ್ಯಾ, ಪತ್ನಿ ಅರ್ಚನಾ ಮೆಹ್ತಾ, ಅವಳಿ ಮಕ್ಕಳು ಸಾನ್ಯ ಹಾಗೂ ಸಂಜಯ್ ಜೊತೆ ಮನು ರಾಜು.

ಶ್ರೀನಾಥ್: ನಾವೆಲ್ಲರೂ ಜನವರಿ 6ರ ಯು.ಎಸ್. ಕ್ಯಾಪಿಟಲ್ ದಾಳಿಯ ನಿಮ್ಮ ನೇರ ವರದಿ ನೋಡಿದ್ದೇವೆ. ನಿಮ್ಮ ಜೀವಕ್ಕೆ ಅತೀವ ಅಪಾಯವಿದ್ದರೂ ಸಹ ನೀವು ಅಲ್ಲಿಂದ ನೇರ ವರದಿ ಮಾಡಿದ್ದೀರಿ. ಆ ದಿನದ ಅನುಭವ ಹಂಚಿಕೊಳ್ಳಿ.

ಮನು ರಾಜು: ಆ ದಿನ ನಾನು ಶುರುವಿನಲ್ಲಿ ತಪ್ಪು ಭರವಸೆ ಹೊಂದಿದ್ದೆ. ನಾನು ಸುರಕ್ಷಿತನಾಗಿದ್ದೇನೆ, ಬಾಗಿಲು ಲಾಕ್ ಆಗಿದೆ ಎಂದು ಭಾವಿಸಿದ್ದೆ. ಆದರೆ, ಪರಿಸ್ಥಿತಿ ನಿಜಕ್ಕೂ ಎಷ್ಟು ಗಂಭೀರವಾಗಿತ್ತು ಎಂದು ನಂತರ ಅರ್ಥವಾಯಿತು. ಆ ದಿನ ರಿಪಬ್ಲಿಕನ್ ಕೆಲವರು ಆರು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಶ್ನಿಸಲು ಮತ ಚಲಾಯಿಸುವ ಪ್ರಯತ್ನ ಮಾಡಲಿದ್ದರು. ಇದು ಅಸಾಧ್ಯವಾಗದ ಕ್ರಮ ಎಂದು ಎಲ್ಲರಿಗೂ ಗೊತ್ತಿತ್ತು. ಆದರೆ, ಆ ಪ್ರಕ್ರಿಯೆ ಬಹಳ ಗಂಟೆಗಳ ಕಾಲ ನಡೆಯುವ ನಿರೀಕ್ಷೆಯಿತ್ತು. ನಾನು ಕ್ಯಾಪಿಟಲ್‌ ನ ಮೂರನೇ ಮಹಡಿಯ ಸೆನೆಟ್ ಪ್ರೆಸ್ ಗ್ಯಾಲರಿ ಬೂತ್‌ ನಿಂದ ನೇರ ಪ್ರಸಾರ ಮಾಡುತ್ತಿದ್ದೆ. ಕೆಳಗೆ ಎರಡನೇ ಮಹಡಿಯಲ್ಲಿ ದಂಗೆಕೋರರು ನುಗ್ಗುವ ದೃಶ್ಯ ನೋಡಿ ನಂಬಲಾಗಲಿಲ್ಲ. ವೂಲ್ಫ್ ಬ್ಲಿಟ್ಜರ್, ಜೇಕ್ ಟ್ಯಾಪರ್ ಅವರ ಜೊತೆ ನೇರ ವರದಿ ಮಾಡುತ್ತಿದ್ದೆ. ಹೌಸ್ ಚೇಂಬರ್‌ನಲ್ಲಿ ಗುಂಡಿನ ಶಬ್ದ ಕೇಳಿ ಬಂತು — ಅದು ಆ್ಯಷ್ಲಿ ಬ್ಯಾಬಿಟ್ ಪ್ರಸಂಗ ಎಂದು ಅನಂತರ ತಿಳಿಯಿತು. ಸ್ಪೀಕರ್ ಲಾಬಿ ಬಳಿ ನಡೆಯುತ್ತಿದ್ದ ಘಟನೆಗಳ ಬಗ್ಗೆ ಮೂಲಗಳಿಂದ ಸುದ್ದಿ ಸಂಗ್ರಹಿಸಿ ವರದಿ ಮಾಡುತ್ತಲೇ ಇದ್ದೆ. ನ್ಯಾಷನಲ್ ಗಾರ್ಡ್ ಬಂದ ಮೇಲೆ ಸ್ಥಳಾಂತರಗೊಂಡಾಗ ಬಾಗಿಲ ಹೊರ ಕಾಲಿಟ್ಟ ಕ್ಷಣ — ಉರುಳಿದ ಪೀಠೋಪಕರಣ, ಹೊಗೆ ಬಾಂಬ್‌ಗಳ ವಾಸನೆ, ಟಿಯರ್ ಗ್ಯಾಸ್‌ನ ಬೂದು ಪರದೆ, ಜಾರುತ್ತಿದ್ದ ಮಾರ್ಬಲ್ ಮೆಟ್ಟಿಲುಗಳು — ಇವೆಲ್ಲ ಯುದ್ಧ ಭೂಮಿಯ ದೃಶ್ಯದಂತೆ ಕಾಣಿಸಿತು. "ಜೇಕ್, ಇದು ಯುದ್ಧ ಭೂಮಿ" ಎಂದು ಫೋನ್‌ನಲ್ಲಿ ನೇರ ವರದಿ ಮಾಡಿದೆ. ಕೊನೆಗೆ ದಂಗೆಕೋರರನ್ನು ಹೊರಹಾಕಿ ಚುನಾವಣಾ ಫಲಿತಾಂಶ ಅಂಗೀಕರಿಸಲಾಯಿತು. ಇದು ಅಮೆರಿಕದ ಇತಿಹಾಸವನ್ನೇ ಬದಲಿಸಿದ ಒಂದು ಅತ್ಯಂತ ಅವಾಸ್ತವ ಅನುಭವ.

ಶ್ರೀನಾಥ್: ಅದು ಭಯತ್ರಸ್ತ ಸನ್ನಿವೇಶವಾಗಿತ್ತು. ನಿಮ್ಮ ಕುಟುಂಬ ಅಂದು ಹೇಗೆ ಪ್ರತಿಕ್ರಿಯಿಸಿತು?

ಮನು ರಾಜು: ನನ್ನ ಹೆಂಡತಿ ತುಂಬಾ ಚಿಂತಿತಳಾಗಿದ್ದಳು, ನಿರಂತರ ಸಂದೇಶ ಕಳಿಸುತ್ತಿದ್ದಳು. ನಾನು ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾಗ ಅವಳಿಗೆ ಸ್ವಲ್ಪ ನಿರಾಳ ಅನ್ನಿಸುತ್ತಿತ್ತು. "ನಾನು ಸುರಕ್ಷಿತನಾಗಿದ್ದೇನೆ, ಚಿಂತೆ ಬೇಡ" ಎಂದು ಹೇಳುತ್ತಿದ್ದೆ. ಅದು ಅವಳಿಗೆ ಎಷ್ಟು ನಂಬಿಕೆ ಹುಟ್ಟಿಸಿತೋ ಗೊತ್ತಿಲ್ಲ.

ಶ್ರೀನಾಥ್: -ಅಮೆರಿಕನ್ ಪತ್ರಕರ್ತರಾಗಿ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಈ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸುತ್ತೀರಿ? ಅನಿವಾಸಿ ಭಾರತೀಯರಿಗೆ ಅಮೆರಿಕನ್ ಸಂಸ್ಕೃತಿಯೊಂದಿಗೆ ಹೊಂದಿಕೊಳ್ಳುತ್ತಲೇ, ತಮ್ಮ ಭಾರತೀಯ ಮೌಲ್ಯಗಳನ್ನೂ ಹೇಗೆ ಉಳಿಸಿಕೊಳ್ಳುವುದೆಂದು ಸಲಹೆ ನೀಡುತ್ತೀರಿ?

ಮನು ರಾಜು: ಭಾರತೀಯ ಮೌಲ್ಯಗಳನ್ನು ಉಳಿಸಿಕೊಳ್ಳುವುದು ತುಂಬಾ ಮಹತ್ವದ್ದು. ನನ್ನ ಪತ್ನಿ ಅರ್ಚನಾ ಮತ್ತು ನಾನು, ನಮ್ಮ ಮಕ್ಕಳಿಗೆ ಭಾರತೀಯ ಮೂಲದ ಮತ್ತು ಕುಟುಂಬ ಮೌಲ್ಯಗಳ ಕುರಿತು ಅರಿವು ಮೂಡಿಸಲು ಶ್ರಮಿಸುತ್ತಿದ್ದೇವೆ. ಮಾಧ್ಯಮ ಕ್ಷೇತ್ರದಲ್ಲಿ ಭಾರತೀಯ-ಅಮೆರಿಕನ್ನರ ಸಂಖ್ಯೆ ಇನ್ನಷ್ಟು ಹೆಚ್ಚಬೇಕು. ವಾಷಿಂಗ್ಟನ್ ಪ್ರೆಸ್ ಕಾರ್ಪ್ಸ್‌ ನಲ್ಲಿ ನಾನು ಅಪರೂಪದ ಭಾರತೀಯ-ಅಮೆರಿಕನ್. ನನ್ನ ನಡವಳಿಕೆ ನೋಡಿ ಕೆಲವರು ಎಲ್ಲ ಭಾರತೀಯರೂ ಹಾಗೆಯೇ ಇರಬಹುದೆಂದು ಭಾವಿಸಬಹುದು. ಆ ಜವಾಬ್ದಾರಿ ನನಗೆ ಅರಿವಿದೆ. ಈಗ ವಾಷಿಂಗ್ಟನ್ ನಲ್ಲಿ ಬಹಳ ಬದಲಾಗಿದೆ. ನನ್ನ ಮಕ್ಕಳ ಶಾಲೆಯಲ್ಲಿ ದೀಪಾವಳಿ, ಹೋಳಿ ಆಚರಿಸಲಾಗುತ್ತದೆ. ಹಾಗೆಯೇ, ಭಾರತದ ಇತರ ಹಬ್ಬಗಳನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಇದು ಭಾರತೀಯ ಸಮುದಾಯ ಅಮೆರಿಕದಲ್ಲಿ ಹೆಚ್ಚು ಗೋಚರವಾಗುತ್ತಿರುವುದರ ಫಲ. ಈಗ ಭಾರತೀಯರ ಬಗ್ಗೆ ಅಮೆರಿಕನ್ನರಿಗೆ ಹೆಚ್ಚು ಅರಿವು ಮೂಡಿದೆ. ಆದರೂ ಇನ್ನಷ್ಟು ಹೆಚ್ಚಿನ ಸಂಖ್ಯೆಯ ಭಾರತೀಯ ಮೂಲದವರು ಮಾಧ್ಯಮ ಕ್ಷೇತ್ರದಲ್ಲಿ ಮುಂಚೂಣಿಗೆ ಬರಬೇಕಿದೆ. ಭಾರತೀಯ ಮೌಲ್ಯಗಳನ್ನು ಹಾಗೂ ಸಂಸ್ಕೃತಿಯನ್ನು ನಮ್ಮ ಕುಟುಂಬವು ಜತನದಿಂದ ಕಾಪಾಡಿಕೊಳ್ಳುತ್ತಿದ್ದೇವೆ.

ಶ್ರೀನಾಥ್: ಭಾರತ ಮೂಲದ ಪತ್ರಕರ್ತರಾದ ನೀವು, ಭಾರತದ ಬೆಳವಣಿಗೆಗಳನ್ನು ವೀಕ್ಷಿಸುತ್ತಿದ್ದೀರಾ? ಭಾರತದ ಮಾಧ್ಯಮ ಮತ್ತು ಪ್ರಜಾಪ್ರಭುತ್ವದ ಪ್ರಸ್ತುತ ಸ್ಥಿತಿಯ ಕುರಿತು ನಿಮ್ಮ ಅಭಿಪ್ರಾಯ ಏನು?

ಮನು ರಾಜು: ಇದು ಬಹಳ ಮುಖ್ಯವಾದ ಪ್ರಶ್ನೆ. ಭಾರತೀಯ ರಾಜಕೀಯದ ಕುರಿತು ನಾನು ತಜ್ಞ ಅಲ್ಲ ಎಂದು ಹೇಳಬೇಕು. ಆದರೂ ನಾನು ಭಾರತದ ಆಗುಹೋಗುಗಳನ್ನು ಸಾಧ್ಯವಾದಷ್ಟೂ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ಆದರೆ, ಭಾರತದಲ್ಲಿ ಮಾಧ್ಯಮದ ಮೇಲೆ ನಡೆಯುತ್ತಿರುವ ನಿರ್ಬಂಧ ನನ್ನನ್ನು ಚಿಂತೆಗೀಡು ಮಾಡುತ್ತದೆ. ಭಾರತದ ಆಗು-ಹೋಗುಗಳ ಕುರಿತು, ಮೋದಿ... ಚುನಾವಣೆ... ಅಧಿಕಾರದಲ್ಲಿರುವ ಮೋದಿಯ ಪ್ರಬಲ ಹಿಡಿತ ಇತ್ಯಾದಿಗಳ ಕುರಿತು ನಾನು ಮಾಹಿತಿ ಪಡೆಯುತ್ತಿರುತ್ತೇನೆ. ನನ್ನ ಕಾರ್ಯಕ್ರಮ: 'ಇನ್ಸೈಡ್ ಪಾಲಿಟಿಕ್ಸ್' ಆಗಿದೆಯೇ ಹೊರತು 'ಇನ್ಸೈಡ್ ಇಂಡಿಯನ್ ಪಾಲಿಟಿಕ್ಸ್' ಅಲ್ಲ. ಕೆಲವೊಮ್ಮೆ ಭಾರತದ ರಾಜಕೀಯ ಕೆಲವೊಮ್ಮೆ ಮನರಂಜನೆಯಂತಾಗಬಹುದು.

CNN ಕಚೇರಿಯಲ್ಲಿ ಮನು ರಾಜು

ಮಾಧ್ಯಮ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಅಡಿಗಲ್ಲು. ಭಾರತದಲ್ಲಿ ಮಾಧ್ಯಮಗಳ ಮೇಲಿನ ಹರಣವನ್ನು ನಾನು ನೋಡುತ್ತಿದ್ದೇನೆ. ಇದು ನನಗೆ ಕಳವಳಕಾರಿಯಾಗಿದೆ. ಮತದಾರರಿಗೆ, ಪ್ರಜೆಗಳಿಗೆ ತಮ್ಮ ನಾಯಕರ ನಡವಳಿಕೆಗಳನ್ನು ತಿಳಿಸುವ ಕರ್ತವ್ಯ ಮಾಧ್ಯಮದ ಮೇಲಿದೆ. ನಾಯಕರು ಮಾಧ್ಯಮದ ಮಾಹಿತಿ ಪ್ರಸರಣವನ್ನು ಮೊಟಕುಗೊಳಿಸಲು ಪ್ರಯತ್ನಿಸಿದಾಗ, ಮಾಧ್ಯಮದ ಮೇಲೆ ಒತ್ತಡ ತಂದಾಗ, ನಾಗರಿಕರ ತಿಳಿವಳಿಕೆ ಮೊಟಕಾಗುತ್ತದೆ. ಇದರಿಂದ ಪ್ರಜಾಪ್ರಭುತ್ವ ದುರ್ಬಲವಾಗುತ್ತದೆ. ಇಂತಹ ನಿರ್ಬಂಧ ಪ್ರವೃತ್ತಿ ಭಾರತವೇ ಆಗಲಿ ಅಥವಾ ಅಮೆರಿಕವೇ ಆಗಲಿ ಎಲ್ಲಿಯೂ ಸಹ ಮುಂದುವರಿಯಬಾರದು. ಮಾಧ್ಯಮ ನಿರ್ಬಂಧ ಮುಂದುವರೆದರೆ ಪ್ರಜಾಪ್ರಭುತ್ವಕ್ಕೆ, ಮತದಾರರಿಗೆ, ಪ್ರಜೆಗಳಿಗೆ ಒಳ್ಳೆಯದಲ್ಲ.

ಶ್ರೀನಾಥ್: ಆ ಪ್ರಶ್ನೆಯನ್ನು ಕೇಳಿದ ಕಾರಣ, ಅಮೆರಿಕದ ರಾಷ್ಟ್ರಪತಿ ನಿರಂತರವಾಗಿ ಪತ್ರಿಕಾಗೋಷ್ಠಿ ನಡೆಸುತ್ತಾರೆ. ಅವರ ಉತ್ತರಗಳು ತಪ್ಪೊ- ಸರಿಯೊ, ಆದರೂ ಸಹ ಪತ್ರಕರ್ತರ ಪ್ರಶ್ನೆಗಳಿಗೆ ನಿರಂತರವಾಗಿ ಉತ್ತರಿಸುತ್ತಾರೆ. ಆದರೆ ಭಾರತದ ಪ್ರಧಾನಮಂತ್ರಿ 12 ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ.

ಮನು ರಾಜು: ಹೌದು , ನಾನು ಈ ವಿಷಯದ ಬಗ್ಗೆ ಹೇಳಬೇಕೆಂದಿದ್ದೆ. ಅದು ನಿಜಕ್ಕೂ ನನಗೆ ಅಚ್ಚರಿ ತರಿಸುತ್ತದೆ. ಇದು ಖಂಡಿತವಾಗಿಯೂ ಬೆರಗುಗೊಳಿಸುವಂತಹ ವಿಷಯ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ನಾಯಕನು ಮಾಧ್ಯಮದ ಪ್ರಶ್ನೆಗಳಿಗೆ ಇಷ್ಟು ವರ್ಷಗಳಿಂದಲೂ ಉತ್ತರಿಸದಿರುವುದು ಆಶ್ಚರ್ಯ ತಂದಿದೆ. ಹೀಗೆ ಆಗಿರದಿದ್ದರೆ ಚೆನ್ನಾಗಿರುತ್ತಿತ್ತೆಂಬುದು ನನ್ನ ಅನಿಸಿಕೆ.

ಶ್ರೀನಾಥ್: ವೃತ್ತಿಜೀವನದಲ್ಲಿ ಅತ್ಯಂತ ಕಠಿಣ ಮತ್ತು ಅತ್ಯಂತ ಆನಂದದಾಯಕ ಸುದ್ದಿ ವರದಿ ಯಾವುದು?

ಮನು ರಾಜು: ಪ್ರತಿ ಸುದ್ದಿ ತನ್ನದೇ ಸವಾಲು ಹೊತ್ತಿರುತ್ತದೆ. ಆದರೆ ಟ್ರಂಪ್‌ ರ ಮೊದಲ ಮಹಾಭಿಯೋಗ(impeachment) ಪ್ರಕ್ರಿಯೆ ವರದಿ ಮಾಡಿದ್ದು ಅತ್ಯಂತ ಕಷ್ಟಕರ ಸಂದರ್ಭ. ಅದು ಒಂದು ತಿಂಗಳ ದೀರ್ಘ ತನಿಖೆ. ಭದ್ರತಾ ಕೊಠಡಿಯಲ್ಲಿ ನಡೆಯುತ್ತಿದ್ದ ಗೋಪ್ಯ ಹೇಳಿಕೆಗಳ ಕುರಿತು ಮೂಲಗಳಿಂದ ಮಾಹಿತಿ ತೆಗೆಯಲು ಬೆಳಿಗ್ಗೆಯಿಂದ ರಾತ್ರಿಯವರೆಗೆ ಕಾಯಬೇಕಾಗಿತ್ತು. ಊಟಕ್ಕೆ ಹೋದರೆ ಎಲ್ಲಿ ದೊಡ್ಡ ಸುದ್ದಿ ತಪ್ಪಿ ಹೋಗಬಹುದೆಂಬ ಭಯ. ಆದರೆ, ಒಮ್ಮೆ ರಹಸ್ಯ ಹೇಳಿಕೆ ನನ್ನ ಕೈ ಸೇರಿ, ಅದನ್ನು ನೇರ ಪ್ರಸಾರದಲ್ಲಿ ಓದಿದಾಗ ವಿಶ್ವದ ಗಮನ ಸೆಳೆದ ಆನಂದ ಅನನ್ಯ. ಸರಕಾರದ ಸ್ಥಗಿತ, ಸಾಲ ಬಿಕ್ಕಟ್ಟು, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನಿಧನ —ಹೀಗೆ ಪ್ರತಿ ಸಂದರ್ಭವೂ ತನ್ನದೇ ಸವಾಲು ತರುತ್ತದೆ.

ಅಧ್ಯಕ್ಷ ಟ್ರಂಪ್ ಗೆ ಪ್ರಶ್ನೆ ಕೇಳುತ್ತಿರುವ ಮನು ರಾಜು.

ಶ್ರೀನಾಥ್: ರಾಜಕೀಯದಿಂದ ಸಂಪೂರ್ಣ ಬಿಡುವು ತೆಗೆದುಕೊಳ್ಳಲು ಸಾಧ್ಯವಾಗುತ್ತದೆಯೇ?

ಮನು ರಾಜು: ಶುಕ್ರವಾರ ಸಾಧ್ಯವಾದರೆ ರಜೆ ತೆಗೆದುಕೊಳ್ಳಲು ಪ್ರಯತ್ನಿಸುತ್ತೇನೆ. ಶನಿವಾರ ದಿನ ರವಿವಾರದ ಕಾರ್ಯಕ್ರಮದ ತಯಾರಿ. ಆದರೆ, ಕುಟುಂಬ ರಜೆ ನನಗೆ ನಿಜವಾದ ಮರುಪೂರಣ. ಕಳೆದ ವರ್ಷ ಆಫ್ರಿಕಾದ ಸಫಾರಿ, ಮುಂದೆ ಗ್ರೀಸ್‌ ಗೆ ಹೋಗುವ ಯೋಜನೆ ಇದೆ. ಬಿಡುವಿಲ್ಲದ ಕೆಲಸದ ಬಳಿಕ ಕೆಲವು ಹೊತ್ತು ಕುಟುಂಬದೊಂದಿಗೆ ಸಂಭ್ರಮಿಸುವುದು ಬಹಳ ಸಂತಸದ ವಿಷಯವಾಗಿದೆ.

ಶ್ರೀನಾಥ್: ಶಾಲೆಯಲ್ಲಿ ನೀವು ಸ್ಪ್ಯಾನಿಷ್ ಕಲಿತಿದ್ದೀರಂತೆ. ಮನೆಯಲ್ಲಿ ಕನ್ನಡ ಕಲಿಯಲಿಲ್ಲವೇ? ನಿಮ್ಮ ಕನ್ನಡ ಎಷ್ಟರ ಮಟ್ಟಿಗೆ ಚೆನ್ನಾಗಿದೆ ಅನಿಸುತ್ತದೆ?

ಮನು ರಾಜು: ಖಂಡಿತ ಅಷ್ಟು ಚೆನ್ನಾಗಿಲ್ಲ, ಸ್ಪಷ್ಟವಾಗಿ ಹೇಳುತ್ತೇನೆ. ಅಜ್ಜನ ಮಟ್ಟಕ್ಕೆ ಇಲ್ಲ. ಕನ್ನಡವನ್ನು ನಿಧಾನವಾಗಿ ಓದಲು ಗೊತ್ತಿದೆ. ಆದರೆ ಜೀವನ ಮತ್ತು ವೃತ್ತಿ ಇಂಗ್ಲೀಷ್‌ನಲ್ಲೇ ನಡೆಯುತ್ತಿರುವ ಕಾರಣ ಕನ್ನಡ ಪ್ರಾವೀಣ್ಯತೆ ಕಡಿಮೆ ಆಗಿದೆ. ಆದರೆ, ಅಜ್ಜನ ಕಾವ್ಯಗಳು ಇಂಗ್ಲಿಷ್ ಗೆ ಅನುವಾದಗೊಂಡಿರುವ ಕಾರಣ ಅದನ್ನು ಆನಂದಿಸಲು ಸಾಧ್ಯವಾಗುತ್ತದೆ. ಅಪ್ಪ ಅಮ್ಮ ಅವರ ಸಾಹಿತ್ಯ ಅನುವಾದಿಸಲು ತುಂಬಾ ಶ್ರಮ ಪಟ್ಟಿದ್ದಾರೆ. ನಾವಿದ್ದ ಊರಿನ ಅನಿವಾಸಿ ಕನ್ನಡಿಗರಿಗೆ ನನ್ನ ತಾಯಿ ವರ್ಷಗಳ ಕಾಲ ಕನ್ನಡ ತರಗತಿ ನಡೆಸಿದರು.

ಸ್ಪೀಕರ್ ಮೈಕ್ ಜಾನ್ಸನ್ ಗೆ ಪ್ರಶ್ನಿಸುತ್ತಿರುವ ಮನು.

ಶ್ರೀನಾಥ್: ಮನೆಯಲ್ಲಿ ಪೋಷಕರ ಜೊತೆ ಕನ್ನಡದಲ್ಲಿ ಮಾತನಾಡುತ್ತಿದ್ದಿರಾ?

ಮನು ರಾಜು: ಸ್ವಲ್ಪ ಮಾತನಾಡುತ್ತೇನೆ. ಅಮ್ಮ ಕನ್ನಡದಲ್ಲಿ ಮಾತಾಡಿದರೆ ನಾನು ಇಂಗ್ಲೀಷ್‌ನಲ್ಲಿ ಉತ್ತರಿಸುತ್ತಿದ್ದೆ. ಅಮ್ಮನಿಗೆ ನನ್ನ ಮೇಲೆ ಕೋಪ ಆದಾಗ ಮಾತ್ರ ಕನ್ನಡ ಮತ್ತಷ್ಟು ಜೋರಾಗಿ ಕೇಳಿಸುತ್ತಿತ್ತು!

ಪತ್ನಿ ಅರ್ಚನಾ, ಮಗಳು ಸೊನ್ಯ ಹಾಗೂ ಮಗ ಸಂಜಯ್.

ಶ್ರೀನಾಥ್: ನಿಮ್ಮ ಮಕ್ಕಳು ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದಾರೆಯೇ? ಅವರ ಮುತ್ತಾತನ ಸಾಹಿತ್ಯ ಸಾಧನೆ ಬಗ್ಗೆ ಅವರಿಗೆ ಗೊತ್ತಿದೆಯೇ?

ಮನು ರಾಜು: ಇನ್ನೂ ಭೇಟಿ ನೀಡಿಲ್ಲ, ಆದರೆ ಮುಂದಿನ ಒಂದೆರಡು ವರ್ಷಗಳಲ್ಲಿ ಹೋಗಬೇಕೆಂದಿದ್ದೇವೆ. ಮಕ್ಕಳು ಭಾರತಕ್ಕೆ ಹೋಗಲು ತುಂಬಾ ಉತ್ಸುಕತೆಯಿಂದ ಕಾಯುತ್ತಿದ್ದಾರೆ. ಅಜ್ಜನ ಬಗ್ಗೆ ನಿರ್ಮಿಸಿದ ಸಾಕ್ಷ್ಯಚಿತ್ರ ನೋಡಿದ್ದಾರೆ.

ಅವರ ಫೋಟೋಗಳು, ಕನ್ನಡ ಕವಿತೆಗಳ ಇಂಗ್ಲೀಷ್ ಅನುವಾದ ಓದಿದ್ದಾರೆ. ಭಾರತ ನನ್ನ ಬಾಲ್ಯದಲ್ಲಿ ನೋಡಿದ್ದಕ್ಕಿಂತ ಈಗ ತುಂಬಾ ಬದಲಾಗಿದೆ; ಮಕ್ಕಳಿಗೆ ಅದನ್ನು ತೋರಿಸಬೇಕೆಂಬ ಆಸೆ ಇದೆ.

ಶ್ರೀನಾಥ್: ನಿಮ್ಮ ಮಕ್ಕಳಿಗೆ ಭಾರತೀಯ ಊಟ ಇಷ್ಟವೇ? ಯಾವ ಭಾರತೀಯ ಭಕ್ಷ್ಯ ಇಷ್ಟ?

ಮನು ರಾಜು: ಅವರು ಭಾರತೀಯ ಊಟ ತುಂಬಾ ಇಷ್ಟಪಡುತ್ತಾರೆ. ಅವರಿಗೆ ದೋಸೆ, ಇಡ್ಲಿ, ಚನ್ನಾಮಸಾಲ, ಪನೀರ್ ಎಲ್ಲವು ಬಹಳ ಇಷ್ಟ. ಉತ್ತರ ಭಾರತೀಯ ಮತ್ತು ದಕ್ಷಿಣ ಭಾರತೀಯ ಎರಡೂ ಬಗೆ ತಿನ್ನುತ್ತಾರೆ. ಸಂಜಯ್‌ ಗೆ ಹೆಚ್ಚು ಮಸಾಲೆ ಇರುವ ಅಡಿಗೆ ಎಂದರೆ ಆನಂದ. ಚಿಕ್ಕಂದಿನಿಂದ ಭಾರತೀಯ ಊಟಕ್ಕೆ ಒಗ್ಗಿಸಿದ ಕಾರಣ ಅವರು ಈಗ ಸ್ವ-ಇಚ್ಛೆಯಿಂದ ಬಯಸುತ್ತಾರೆ. ಅಮ್ಮ ಮಾಡಿದ ಮಸಾಲೆ ದೋಸೆ, ಇಡ್ಲಿ ತಿಂದು ಬೆಳೆದ ನಾನು ಭಾರತೀಯ ಊಟ ಪ್ರೀತಿಸುತ್ತೇನೆ ಮತ್ತು ಮಕ್ಕಳೂ ಅದನ್ನು ಇಷ್ಟಪಡುತ್ತಾರೆ ಎಂಬುದು ಸಂತೋಷ. ನನ್ನ ತಾಯಿ ಪ್ರತಿ ದಿನ ಭಾರತೀಯ ಅಡುಗೆ ಮಾಡಿ ತಿನ್ನಿಸಲು ಇಷ್ಟಪಡುತ್ತಿದ್ದರು.

ಶ್ರೀನಾಥ್: ಕೊನೆಯದಾಗಿ, ಭವಿಷ್ಯದ ಪತ್ರಕರ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ನಿಮ್ಮ ಸಂದೇಶ ಏನು?

ಮನು ರಾಜು: ಇದು ಕಷ್ಟದ ಕ್ಷೇತ್ರ. ಮಾಧ್ಯಮ ಉದ್ಯಮವು, ತ್ವರಿತವಾಗಿ ಬದಲಾಗುತ್ತಿದೆ. ತಂತ್ರಜ್ಞಾನ, ಮಾಲೀಕತ್ವ ಬದಲಾವಣೆ, ಆರ್ಥಿಕ ಒತ್ತಡ — ಎಲ್ಲಾ ಸವಾಲುಗಳಿವೆ. ಆದರೂ, ಈ ವೃತ್ತಿಯು ಅನ್ವೇಷಣೆಗೆ ಯೋಗ್ಯ. ಜನರಿಗೆ ತಿಳಿದಿಲ್ಲದ ಸತ್ಯವನ್ನು ಬಯಲಿಗೆ ತರುವ ಶಕ್ತಿ ಪತ್ರಿಕೋದ್ಯಮಕ್ಕಿದೆ. ಪ್ರಜಾಪ್ರಭುತ್ವ ಉಳಿಯಲು ಮತ್ತು ಮತದಾರರಿಗೆ ಸರಿಯಾದ ಮಾಹಿತಿ ಸಿಗಲು ಇದು ಅತ್ಯಗತ್ಯ. ನಾನು ಅನೇಕ ತಿರಸ್ಕಾರ ಮತ್ತು ಕಷ್ಟಗಳನ್ನು ಮೀರಿ ಬಂದಿದ್ದೇನೆ. ಛಲ, ಎದೆಗಾರಿಕೆ, ಸೋಲಿಗೆ ಮಣಿಯದ ಮನೋಭಾವ — ಇವು ನನ್ನ ಅಸ್ತ್ರಗಳಾಗಿದ್ದವು. ಜೊತೆಗೆ, ನನ್ನ ಹೆಂಡತಿ ಅರ್ಚನಾ ಅವರ ಬೆಂಬಲವೂ ಅಮೂಲ್ಯ. ಅವರಿಲ್ಲದೆ ನಾನಿಂದು ಇಲ್ಲಿರುತ್ತಿರಲಿಲ್ಲ. ನಿಮ್ಮ ಕನಸು ನನಸು ಮಾಡಲು ಸವಾಲುಗಳನ್ನು ಎದುರಿಸಿ, ಗುರಿ ಸ್ಥಿರವಾಗಿ ಇರಿಸಿಕೊಳ್ಳಿ.

ಶ್ರೀನಾಥ್: ಮನು ಅವರೇ, ಇದು ತುಂಬಾ ಆಸಕ್ತಿದಾಯಕ ಸಂವಾದವಾಗಿತ್ತು. ನಿಮ್ಮ ತಾತ ಪ್ರೊ.ಅಡಿಗರು ಪದವಿ ಶಿಕ್ಷಣ ಪಡೆದ ಬಳಿಕ ಮೊದಲ ಉದ್ಯೋಗ ಪಡೆದುಕೊಂಡ ಊರು ಚಿತ್ರದುರ್ಗ; ಅದು ನನ್ನ ತವರು ಊರು. ಅವರ ಕಾವ್ಯಗಳ ಬಗ್ಗೆ ನಾನು ಬಹಳ ಅಭಿಮಾನ ಹೊಂದಿದ್ದೇನೆ. ಆದರೆ, ಕೆಲವರಿಗೆ ನೀವು ಗೋಪಾಲಕೃಷ್ಣ ಅಡಿಗರ ಮೊಮ್ಮಗ ಎಂದು ತಿಳಿದಿಲ್ಲ. ನೀವು ಪ್ರೊ.ಗೋಪಾಲಕೃಷ್ಣ ಅಡಿಗರ ಮೊಮ್ಮಗ ಎಂಬ ಸಂಗತಿ ಕನ್ನಡ ಪ್ರೇಕ್ಷಕರಿಗೆ ಪರಿಚಯಿಸಬೇಕೆಂದು ಈ ಸಂದರ್ಶನ ಮಾಡಿದೆ. ನಿಮ್ಮ ಸಾಧನೆ ಭಾರತೀಯರಿಗೆ, ವಿಶೇಷವಾಗಿ ಕನ್ನಡಿಗರಿಗೆ ಹೆಮ್ಮೆ ತರುತ್ತದೆ. ಈ ಸಂದರ್ಶನದ ಬಳಿಕ ಭಾರತೀಯರು, ವಿಶೇಷತಃ ಕನ್ನಡಿಗರು, ನಿಮ್ಮ ಸಾಧನೆಗಳ ಕುರಿತು ತಿಳಿಯಲು ಇನ್ನೂ ಉತ್ಸುಕರಾಗಿರುತ್ತಾರೆ. ಸಂದರ್ಶನಕ್ಕೆ ಒಪ್ಪಿದ್ದಕ್ಕೆ ಕೃತಜ್ಞತೆಗಳು.

ಮನು ರಾಜು: ತುಂಬಾ ಧನ್ಯವಾದಗಳು. ಈ ಮಾತುಕತೆ ನನಗೆ ನಿಜಕ್ಕೂ ಸಂತೋಷ ತಂದಿತು.

ಮನು ರಾಜು ಅವರ 10 ವರ್ಷದ ಅವಳಿ ಮಕ್ಕಳಾದ ಸಾನ್ಯ ಹಾಗೂ ಸಂಜಯ್ ಫೋಟೊ

ಹಿಂದಿನ ಸ್ಪೀಕರ್ ಕೆವಿನ್ ಮೆಕ್ಕಾರ್ತಿ ಅವರಿಗೆ ಪ್ರಶ್ನೆ ಕೇಳುತ್ತಿರುವ ಮನು ರಾಜು

2026ರ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ಹೋಗುವ ಮುಂಚೆ

ಕ್ಯಾಪಿಟಲ್ ಬಿಲ್ಡಿಂಗ್ (ಸಂಸತ್ ಭವನ)ಮುಂದೆ ಸಂದರ್ಶನ ನಡೆಸುತ್ತಿರುವ ಮನು ರಾಜು.

ಎಡಗಡೆ ನೀಲಿ ಸೂಟ್‌ನಲ್ಲಿ - ಅಪ್ರಾಪ್ತ ವಯಸ್ಸಿನಲ್ಲಿ ಎಪ್ಸ್ಟೀನ್ ನಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯರೊಂದಿಗೆ

Tags

mediaIndiaKannadigasManu Raju
share
ಕೆ. ಆರ್. ಶ್ರೀನಾಥ್, ಅಟ್ಲಾಂಟ
ಕೆ. ಆರ್. ಶ್ರೀನಾಥ್, ಅಟ್ಲಾಂಟ
Next Story
X