Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಎನ್‌ಆರ್‌ಐ ಖಾತೆ, ಪ್ರತ್ಯೇಕ ಸಚಿವರು,...

ಎನ್‌ಆರ್‌ಐ ಖಾತೆ, ಪ್ರತ್ಯೇಕ ಸಚಿವರು, ಸಾವಿರ ಕೋಟಿ ನಿಧಿಯ ಗ್ಯಾರಂಟಿ ಈಡೇರಿಸಬೇಕು

ಸಂದರ್ಶನ: ನಾಗರಾಜ್ ಅಪ್ಪಸಂದ್ರಸಂದರ್ಶನ: ನಾಗರಾಜ್ ಅಪ್ಪಸಂದ್ರ8 Jun 2026 1:06 PM IST
share
ಎನ್‌ಆರ್‌ಐ ಖಾತೆ, ಪ್ರತ್ಯೇಕ ಸಚಿವರು, ಸಾವಿರ ಕೋಟಿ ನಿಧಿಯ ಗ್ಯಾರಂಟಿ ಈಡೇರಿಸಬೇಕು
► ವಾರ್ತಾಭಾರತಿ ವಿಶೇಷ ಸಂದರ್ಶನದಲ್ಲಿ ಡಾ.ರೊನಾಲ್ಡ್‌ ಕೊಲಾಸೊ ► ಕೇವಲ ಸೆಕ್ರೆಟರಿಯೇಟ್ ಸ್ಥಾಪನೆ ಘೋಷಣೆ ಅನಿವಾಸಿಗಳಿಗೆ ಅತೃಪ್ತಿ ಮೂಡಿಸಿದೆ ► ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಲು ಆಗ್ರಹಿಸುತ್ತೇವೆ

ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸೆಕ್ರೆಟರಿಯೇಟ್ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ವಿಚಾರದಲ್ಲಿ ನಿರಂತರ ಸರಕಾರವನ್ನು ಆಗ್ರಹಿಸುತ್ತಿದ್ದ ಅನಿವಾಸಿ ಕನ್ನಡಿಗ ಸಮುದಾಯದ ನೇತೃತ್ವ ವಹಿಸಿದವರು ಖ್ಯಾತ ಅನಿವಾಸಿ ಉದ್ಯಮಿ, ಕೊಡುಗೈ ದಾನಿ ಡಾ.ರೊನಾಲ್ಡ್ ಕೊಲಾಸೊ. ಕಳೆದ ಬೆಳಗಾವಿ ಅಧಿವೇಶನದ ವೇಳೆ ಸುಮಾರು 30ಕ್ಕೂ ಹೆಚ್ಚು ದೇಶಗಳ ಅನಿವಾಸಿ ಕನ್ನಡಿಗರ ದೊಡ್ಡ ನಿಯೋಗವನ್ನು ಕರೆದುಕೊಂಡು ಹೋಗಿ ಅಂದಿನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಅನಿವಾಸಿಗಳಿಗಾಗಿ ಪ್ರತ್ಯೇಕ ಸಚಿವಾಲಯ, ಪ್ರತ್ಯೇಕ ಸಚಿವರು ಹಾಗೂ ಸಾವಿರ ಕೋಟಿ ಆವರ್ತನ ನಿಧಿಯನ್ನು ಕೂಡಲೇ ಘೋಷಣೆ ಮಾಡುವಂತೆ ಆಗ್ರಹಿಸಿದ್ದರು.

ಹಾಗಾದರೆ ಸರಕಾರ ಈಗ ಮಾಡಿರುವ ಘೋಷಣೆ ಅವರಿಗೆ ತೃಪ್ತಿ ತಂದಿದೆಯೇ ? ಅವರು ಈ ಬಗ್ಗೆ ಏನು ಹೇಳುತ್ತಾರೆ.? ವಾರ್ತಾಭಾರತಿಯೊಂದಿಗೆ ಡಾ.ರೊನಾಲ್ಡ್ ಕೊಲಾಸೊ ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.

ವಾರ್ತಾಭಾರತಿ : ಅನಿವಾಸಿ ಕನ್ನಡಿಗರಿಗೆ ರಾಜ್ಯದಲ್ಲಿ ಪ್ರತ್ಯೇಕ ಸೆಕ್ರೆಟರಿಯೇಟ್ ಸ್ಥಾಪನೆ ಮಾಡುವುದಾಗಿ ನೂತನ ಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಒಟ್ಟು ಎಷ್ಟು ಅನಿವಾಸಿ ಕನ್ನಡಿಗರು ಇದ್ದಾರೆ? ಅವರಿಂದ ದೇಶಕ್ಕೆ, ರಾಜ್ಯಕ್ಕೆ ಏನೆಲ್ಲ ಕೊಡುಗೆ ಸಿಗುತ್ತಿದೆ?

ಡಾ.ರೊನಾಲ್ಡ್ ಕೊಲಾಸೊ : ಪ್ರಪಂಚದ ವಿವಿಧೆಡೆಗಳಲ್ಲಿ ಸುಮಾರು 30 ಲಕ್ಷದಷ್ಟು ಕನ್ನಡಿಗರು ಇದ್ದಾರೆ. ವಿವಿಧ ರೀತಿಯ ಉದ್ಯೋಗಗಳನ್ನು, ಉದ್ಯಮಗಳನ್ನು ಮಾಡಿಕೊಂಡಿದ್ದಾರೆ. ಈ ಹಿಂದೆ ಭಾರತ ಸರಕಾರದಲ್ಲಿ ಎನ್‌ಆರ್‌ಐಗಳಿಗೆ ಸಂಬಂಧಿಸಿದಂತೆ ಒಂದು ಪ್ರತ್ಯೇಕ ಸಚಿವಾಲಯ ಇತ್ತು. ಬೇರೆ ಬೇರೆ ರಾಜ್ಯಗಳಲ್ಲೂ ಇದೆ. ಕರ್ನಾಟಕದಲ್ಲಿ ಎನ್‌ಆರ್‌ಐ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯ ಮಾಡುವುದರಿಂದ ಅನಿವಾಸಿ ಕನ್ನಡಿಗರಿಗೆ ಒಳ್ಳೆಯದಾಗುತ್ತದೆ. ಹೀಗಾಗಿಯೇ ಕಳೆದ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ 43 ಮಂದಿ ವಿವಿಧ ದೇಶಗಳ ಅನಿವಾಸಿ ಕನ್ನಡಿಗರು ಆಗಮಿಸಿ ಸಿಎಂ ಹಾಗೂ ಇತರ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದೆವು. ಆದರೆ ಮೊನ್ನೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಡಿರುವ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸೆಕ್ರೆಟರಿಯೇಟ್ ಸ್ಥಾಪನೆ ಘೋಷಣೆ ನಮಗೆ ಸ್ವಲ್ಪ ಅತೃಪ್ತಿ ಮೂಡಿಸಿದೆ. ಏಕೆಂದರೆ ಅವರು ಒಂದು ಸೆಕ್ರೆಟರಿಯೇಟ್ ಅಂದಿದ್ದಾರೆ. ಆದರೆ ಅದರ ಸ್ವರೂಪ ಯಾವ ರೀತಿ ಇರುತ್ತದೆ? ಬಜೆಟ್ ಏನು? ಇದಾವುದನ್ನು ಹೇಳಿಲ್ಲ. ಈ ಬಗ್ಗೆ ನಾವು ಶೀಘ್ರದಲ್ಲೇ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತನಾಡುತ್ತೇವೆ.

ವಾರ್ತಾಭಾರತಿ: ಯಾವ ಕಾರಣಕ್ಕೆ ಎನ್‌ಆರ್‌ಐಗಳಿಗೆ ಪ್ರತ್ಯೇಕ ಸಚಿವಾಲಯ ಹಾಗೂ ಸಚಿವರು ಬೇಕು?

ಡಾ.ರೊನಾಲ್ಡ್ ಕೊಲಾಸೊ : ನಾನು ಈಗಾಗಲೇ ಹೇಳಿದಂತೆ 30 ಲಕ್ಷ ಕನ್ನಡಿಗರು ವಿದೇಶಗಳಲ್ಲಿ ಇದ್ದಾರೆ. 2023ರ ಅಂಕಿ ಅಂಶಗಳ ಪ್ರಕಾರ ಅನಿವಾಸಿ ಭಾರತೀಯರಿಂದ 125 ಬಿಲಿಯನ್ ಡಾಲರ್ ನಮ್ಮ ದೇಶಕ್ಕೆ ಹೂಡಿಕೆ ಬಂದಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಅನಿವಾಸಿಗಳ ಹೂಡಿಕೆ. ಈ ಪೈಕಿ ಸುಮಾರು ಶೇ.10ರಿಂದ 12ರಷ್ಟು ಕನ್ನಡಿಗರ ಹೂಡಿಕೆ ವಿವಿಧ ರೂಪಗಳಲ್ಲಿ ಕರ್ನಾಟಕಕ್ಕೆ ಬಂದಿದೆ. ಇದು ಸಣ್ಣ ಮೊತ್ತವೇನೂ ಅಲ್ಲ. ರಾಜ್ಯ ಸರಕಾರ ಐದು ಗ್ಯಾರಂಟಿಗಳನ್ನು ನೀಡಿದೆ. 2023ರ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಆರನೇ ಗ್ಯಾರಂಟಿಯಾಗಿ ಕನ್ನಡಿಗರಿಗೆ ಪ್ರತ್ಯೇಕ ಎನ್ನಾರೈ ಸಚಿವಾಲಯ, ಪ್ರತ್ಯೇಕ ಸಚಿವರು ಹಾಗೂ ಒಂದು ಸಾವಿರ ಕೋಟಿ ಅನುದಾನ ನೀಡಬೇಕು. ಆ ಮೂಲಕ ಸರಕಾರ ತನ್ನ ಭರವಸೆಯನ್ನು ಉಳಿಸಿಕೊಳ್ಳಬೇಕು. ಹಾಗೂ ಇದರಿಂದ ರಾಜ್ಯಕ್ಕೆ ಬರುವ ಲಾಭವನ್ನು ಸರಕಾರ ಪಡೆದುಕೊಳ್ಳಬೇಕು.

ವಾರ್ತಾಭಾರತಿ : ಎನ್‌ಆರ್‌ಐಗಳಿಗೆ ಪ್ರತ್ಯೇಕ ಸಚಿವಾಲಯ ರಚಿಸುವುದರಿಂದ ಯಾವೆಲ್ಲ ಉಪಯೋಗಗಳು ರಾಜ್ಯಕ್ಕೆ ಆಗಬಹುದು?

ಡಾ.ರೊನಾಲ್ಡ್ ಕೊಲಾಸೊ : ಸಚಿವಾಲಯ ಇದ್ದರೆ ಏಕಗವಾಕ್ಷಿ ಪದ್ಧತಿಯನ್ನು ಜಾರಿ ಮಾಡಬಹುದು. ನಾನು ಸುಮಾರು 50 ವರ್ಷಗಳನ್ನು ಎಂಟು ದೇಶಗಳಲ್ಲಿ ಕಳೆದಿದ್ದೇನೆ. ಪೆಟ್ರೋ ಕೆಮಿಕಲ್ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿ ಒಂದು ಉದ್ಯಮ ಸ್ಥಾಪಿಸಬೇಕಾದರೆ ಕೆಲವೇ ಗಂಟೆಗಳಲ್ಲಿ ಅನುಮತಿ ಸಿಗುತ್ತದೆ. ಆದರೆ ಭಾರತದಲ್ಲಿ ಫೈಲ್ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ತಿಂಗಳುಗಳೇ ಬೇಕಾಗುತ್ತವೆ. ಹೀಗಾಗಿ ಏಕಗವಾಕ್ಷಿ ಪದ್ಧತಿ ಜಾರಿಗೆ ಬರಬೇಕು ಹಾಗೂ ಒಂದು ಪ್ರತ್ಯೇಕ ಸಚಿವಾಲಯವಿದ್ದು, ಅಲ್ಲಿಯ ಅದರ ಉಸ್ತುವಾರಿ ಸಚಿವರು ಎಲ್ಲ ಅನಿವಾಸಿಗಳ ಜೊತೆ ಸಂಪರ್ಕದಲ್ಲಿದ್ದರೆ ರಾಜ್ಯಕ್ಕೆ ಹೂಡಿಕೆ ಸರಾಗವಾಗಿ ಹರಿದು ಬರುತ್ತದೆ. ಅವರಿಗೆ ಅನುಕೂಲಕರ ವಾತಾವರಣ ನಿರ್ಮಿಸಿದರೆ ಸಾಕಷ್ಟು ಬಂಡವಾಳ ಬರುತ್ತದೆ. ಇದರಿಂದಾಗಿ ಇಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ, ತೆರಿಗೆ ಸಂಗ್ರಹವಾಗುತ್ತದೆ. ಹೀಗೆ ರಾಜ್ಯದ, ದೇಶದ ಅಭಿವೃದ್ಧಿಗೆ ಇದು ಪೂರಕವಾಗುತ್ತದೆ. ಆದರೆ ಈಗ ಪ್ರತ್ಯೇಕ ಸಚಿವಾಲಯ ಇಲ್ಲದೆ ಇರುವುದರಿಂದ ಹೂಡಿಕೆ ಮಾಡುವ ಎನ್‌ಆರ್‌ಐಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸಾಕಷ್ಟು ಭೂಮಿಗಳು ವಿವಾದದಲ್ಲಿ ಇರುತ್ತವೆ. ನ್ಯಾಯಾಲಯದಲ್ಲಿ ವ್ಯಾಜ್ಯಗಳಿರುತ್ತವೆ. ಅವೆಲ್ಲವುಗಳ ನಿರ್ವಹಣೆಯಲ್ಲಿ ಎನ್‌ಆರ್‌ಐಗಳಿಗೆ ಸಾಕಷ್ಟು ತೊಂದರೆಗಳಾಗುತ್ತವೆ. ಅವರಿಗೆ ಸರಕಾರದ ನೆರವು ಅಗತ್ಯವಿರುತ್ತವೆ. ಹೀಗಾಗಿ ನಾವು ವಿದೇಶಿ ಹೂಡಿಕೆಗಳಿಗೆ ಕಾಯುವುದರ ಬದಲಿಗೆ ಇದೇ ರಾಜ್ಯದ, ದೇಶದವರಿಗೆ ಆದ್ಯತೆ ನೀಡುವುದರಿಂದ ನಮ್ಮ ರಾಜ್ಯಕ್ಕೇ ಉಪಯೋಗ ಆಗುತ್ತದೆ. ನಾವು ಅನಿವಾಸಿಗಳೂ ಕನ್ನಡಿಗರೇ ಅಲ್ವ? ನಮ್ಮ ಹಿತವನ್ನೂ ಕಾಯಬೇಕಿರುವುದು ನಮ್ಮ ಸರಕಾರಗಳು ಅಲ್ವೇ?

ವಾರ್ತಾಭಾರತಿ : ಕೇರಳ ಹಾಗೂ ಪಂಜಾಜ್‌ನಲ್ಲಿ ಮಾತ್ರ ಪ್ರತ್ಯೇಕ ಎನ್‌ಆರ್‌ಐ ಸಚಿವಾಲಯಗಳಿರುವಾಗ, ದೇಶದ ಬೇರೆ ರಾಜ್ಯಗಳು ಯಾಕೆ ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ?

ಡಾ.ರೊನಾಲ್ಡ್ ಕೊಲಾಸೊ : ನೀವು ಹೇಳಿದಂತೆ ಕೇರಳ ರಾಜ್ಯ ಎನ್‌ಆರ್‌ಗಳಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಯ ಮೂಲಕ ಬಹಳ ಹೆಚ್ಚಿನ ಪ್ರಮಾಣದಲ್ಲಿ ಲಾಭ ಪಡೆಯುತ್ತಿದೆ. ಪ್ರತ್ಯೇಕ ಸಚಿವಾಲಯವನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿರುವುದರಿಂದ ಕೇರಳದ ಆರ್ಥಿಕತೆಗೆ ದೊಡ್ಡ ಪ್ರಮಾಣದಲ್ಲಿ ಸಹಾಯವಾಗುತ್ತಿದೆ. ಪಂಜಾಬ್ ಕೂಡ ಇದೇ ಮಾದರಿಯನ್ನು ಅನುಸರಿಸುತ್ತಿದೆ. ಅಲ್ಲದೆ ಗುಜರಾತ್, ಉತ್ತರ ಪ್ರದೇಶ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸರಕಾರಗಳು ಪ್ರತ್ಯೇಕ ವಿಭಾಗಗಳನ್ನು ಮಾಡಿವೆ. ಯಾರಿಗೆಲ್ಲ ಇದರ ಲಾಭದ ರುಚಿ ಸಿಕ್ಕಿದೆ, ಪ್ರಯೋಜನದ ಅರಿವು ಆಗಿದೆ ಅವರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ. ಎನ್‌ಆರ್‌ಐಗಳಿಗೆ ಪ್ರತ್ಯೇಕ ಸಚಿವಾಲಯ ಮಾಡುವುದರಿಂದ ಅದಕ್ಕೆ ಒಂದು ಸಾಂಸ್ಥಿಕ ರೂಪ ಸಿಗುತ್ತದೆ ಹಾಗೂ ಎನ್‌ಆರ್‌ಐಗಳಿಂದ ಸಾಕಷ್ಟು ಬಂಡವಾಳ ಪಡೆಯಬಹುದು ಹಾಗೂ ಅವರ ಸಮಸ್ಯೆಗಳನ್ನು ಬಗೆಹರಿಸಬಹುದು. ಇದಲ್ಲದೆ, ಪ್ರಪಂಚದಾದ್ಯಂತ ಸುಮಾರು 200ಕ್ಕೂ ಹೆಚ್ಚು ಕನ್ನಡ ಸಂಘ ಸಂಸ್ಥೆಗಳಿದ್ದು, ನಮ್ಮ ಕನ್ನಡ ಭಾಷೆ, ಕಲೆ, ಸಂಸ್ಕೃತಿಯನ್ನು ಪಸರಿಸಲು ಪ್ರತ್ಯೇಕ ಸಚಿವಾಲಯ ಸಹಕಾರಿಯಾಗುತ್ತದೆ.

ವಾರ್ತಾಭಾರತಿ : ಎನ್‌ಆರ್‌ಐಗಳಿಗೆ ಕೇಂದ್ರ ಸರಕಾರದಲ್ಲೇ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದರಿಂದ ರಾಜ್ಯದ ಸಚಿವಾಲ ಯಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಬಹುದಲ್ವೇ?

ಡಾ.ರೊನಾಲ್ಡ್ ಕೊಲಾಸೊ : ಈ ಚಿಂತನೆ ಕೂಡ ನಮ್ಮಲ್ಲಿದೆ. ಆದರೆ ಅದಕ್ಕೂ ಮೊದಲು ನಮ್ಮ ರಾಜ್ಯದಲ್ಲಿ ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯ ರಚನೆಯಾದರೆ ಅದು ಕೇಂದ್ರದಲ್ಲಿ ಸಚಿವಾಲಯ ಸ್ಥಾಪನೆಗೆ ಒತ್ತಾಯಿಸಲು ನಮಗೆ ಬಲ ನೀಡಲಿದೆ.

ಹಿಂದೇ ಕೇಂದ್ರದಲ್ಲಿ ಅನಿವಾಸಿ ಭಾರತೀಯರಿಗಾಗಿ ಸಚಿವಾಲಯ ಇತ್ತು. ನಮ್ಮ ಆತ್ಮೀಯ ಕೆಲವರು ಸಚಿವರುಗಳಿದ್ದು, ಅವರ ಮುಖಾಂತರವೂ ನಾವು ಪ್ರಯತ್ನ ಮಾಡುತ್ತೇವೆ. ಇದರಿಂದಾಗಿ ಸಾಕಷ್ಟು ಉಪಯೋಗ ಆಗುತ್ತವೆ. ಪ್ರತ್ಯೇಕ ಸಚಿವಾಲಯ ಸ್ಥಾಪನೆಯಿಂದ ನಮ್ಮ ದೇಶದ ಯಾರೆಲ್ಲ ಬೇರೆ ದೇಶಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಅವರಿಗೆ ಇಲ್ಲಿ ಹೂಡಿಕೆ ಮಾಡಲು ಉತ್ತೇಜನ ಕೊಟ್ಟಂತೆ ಆಗುತ್ತದೆ.

ವಾರ್ತಾಭಾರತಿ : ವೈಯಕ್ತಿಕವಾಗಿ ಯಾವ ಸಂದರ್ಭದಲ್ಲಿ ನಮಗೂ ಒಂದು ಪ್ರತ್ಯೇಕ ಸಚಿವಾಲಯ ಇರಲೇಬೇಕಿತ್ತು ಎಂದು ನಿಮಗೆ ಗಾಢವಾಗಿ ಅನ್ನಿಸಿದೆ?

ಡಾ.ರೊನಾಲ್ಡ್ ಕೊಲಾಸೊ : ನಾವು ಅನಿವಾಸಿ ಕನ್ನಡಿಗರ ಹೂಡಿಕೆಗಳಿಂದ ನಮ್ಮ ರಾಜ್ಯಕ್ಕೆ ಯಾವೆಲ್ಲ ಲಾಭಗಳನ್ನು ಪಡೆಯಬಹುದು ಎಂಬುದರ ಬಗ್ಗೆ ಮಾತಾಡುತ್ತಿದ್ದೆವು. ಆದರೆ ಇದೇ ವೇಳೆ ನಾವು ಅಪಾಯದಲ್ಲಿದ್ದ ಸಂದರ್ಭಗಳ ಬಗ್ಗೆಯೂ ಮಾತನಾಡಬೇಕಿದೆ. ಕೊರೋನ ಸಂದರ್ಭದಲ್ಲಿ ಪ್ರತ್ಯೇಕ ಸಚಿವಾಲಯ ಇದ್ದರೂ ಇಲ್ಲದೇ ಇದ್ದರೂ ಏನು ಮಾಡಲು ಆಗುತ್ತಿರಲಿಲ್ಲ. ಆದರೆ ಯುದ್ಧಗಳ ಸಮಯದಲ್ಲಿ ಇಂತಹ ಸಚಿವಾಲಯದಿಂದ ಬಹಳಷ್ಟು ಪ್ರಯೋಜನ ಆಗುತ್ತದೆ. ಉದಾಹರಣೆಗೆ ಇತ್ತೀಚೆಗೆ ಅಮೆರಿಕ-ಇರಾನ್ ಯುದ್ಧ ಸಂದರ್ಭ ದುಬೈಗೆ ಪ್ರವಾಸ ಬಂದಿದ್ದ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂದರ್ಭ ಸರಕಾರ ಒಂದು ಕಮಿಟಿಯೇನೋ ಮಾಡಿತ್ತು. ಅದರೆ ನನಗೆ ತಿಳಿದ ಮಟ್ಟಿಗೆ ಆ ಕಮಿಟಿ ಗಲ್ಫ್ ರಾಷ್ಟ್ರಗಳಲ್ಲಿ ಯಾರೊಬ್ಬರಿಗೂ ಯಾವುದೇ ಪ್ರಯೋಜನಕ್ಕೆ ಬಂದಿಲ್ಲ. ಆದರೆ ನನ್ನ ನೇತೃತ್ವದಲ್ಲಿ 32 ಸಂಘಟನೆಗಳು ಕನ್ನಡಿಗರ ಹೆಲ್ಪ್ ಲೈನ್ ಶುರು ಮಾಡಿ ಸಹಾಯ ಮಾಡಿದೆವು. ಪ್ರವೀಣ್ ಶೆಟ್ಟಿಯವರಂತೆ ಕೆಲವು ಹೋಟೆಲ್ ಮಾಲಕರು ಸಂಕಷ್ಟಕ್ಕೆ ಸಿಲುಕಿದವರಿಗೆ ತಮ್ಮ ಹೊಟೇಲ್‌ಗಳಲ್ಲಿ ವಸತಿ, ಊಟ ನೀಡಿದರು. ಕೆಲವರಲ್ಲಿ ಭಾರತಕ್ಕೆ ಹಿಂದಿರುಗಲು ವಿಮಾನ ಟಿಕೆಟ್ ಮಾತ್ರ ಇತ್ತು, ಬೇರೆ ಯಾವುದೇ ಹಣವಿರಲಿಲ್ಲ. ಅಂಥವರಿಗೆ ನಾನು ನನ್ನ ಕಡೆಯಿಂದ ಆದಷ್ಟು ಸಹಾಯ ಮಾಡಿದೆ. ಆಗ ದುಬೈಗೆ ಪ್ರವಾಸ ಬಂದಿದ್ದ ರಾಜ್ಯದ ಪ್ರಭಾವಿ ರಾಜಕಾರಣಿಗಳೇ ಅನಿವಾರ್ಯವಾಗಿ ನಮ್ಮ ಮನೆಯಲ್ಲಿ ಉಳಿದುಕೊಂಡಿದ್ದರು. ಇಂತಹ ಸನ್ನಿವೇಶದಲ್ಲಿ ಪ್ರತ್ಯೇಕ ಎನ್ನಾರೈ ಸಚಿವಾಲಯ ಇದ್ದಿದ್ದರೆ ಸಹಕಾರಿಯಾಗುತ್ತಿತ್ತು.

ವಾರ್ತಾಭಾರತಿ : ನಿಮ್ಮ ನಿಯೋಗದಿಂದ ಪ್ರತ್ಯೇಕ ಸಚಿವಾಲ ಯದ ಜೊತೆ ಇನ್ನೂ ಏನೆಲ್ಲ ಬೇಡಿಕೆ ಇಡಲಾಗಿತ್ತು? ಎಷ್ಟು ಕೋಟಿ ರೂ. ಮೀಸಲಿಡಲು ಕೇಳಲಾಗಿತ್ತು?

ಡಾ.ರೊನಾಲ್ಡ್ ಕೊಲಾಸೊ : ನಾವು ಪ್ರತ್ಯೇಕ ಸಚಿವಾಲಯ ಸ್ಥಾಪನೆ, ಅದಕ್ಕೊಬ್ಬರು ಸಚಿವರ ನೇಮಕ ಮಾಡುವುದರ ಜೊತೆಗೆ ಸುಮಾರು 1,000 ಕೋಟಿ ರೂ. ನಿಧಿ ಕೂಡಾ ಮೀಸಲಿಡುವಂತೆ ಮನವಿ ಮಾಡಿದ್ದೆವು. ಇವೆರಡು ಭರವಸೆಗಳನ್ನು ಸ್ವತಃ ಕಾಂಗ್ರೆಸ್ ಕೂಡ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದೆ. 1,000 ಕೋಟಿ ರೂ.ನ್ನು ಹೂಡಿಕೆ ಅಂತ ಇಡಬೇಕು. ಯಾಕೆಂದರೆ ಯಾರೋ ಒಬ್ಬ ಅನಿವಾಸಿ ಕನ್ನಡಿಗ ಉದ್ಯಮಿ 100 ಕೋಟಿ ರೂ. ಹೂಡಿಕೆ ಮಾಡಿದರೆ ಅವರಿಗೆ ಪ್ರಾಥಮಿಕವಾಗಿ ಇಂತಿಷ್ಟು ವರ್ಷಕ್ಕೆ ವಾಪಸ್ ಕೊಡುವಂತೆ ಶೇ.20 ಹೂಡಿಕೆ ಹಣ ಕೊಡಬೇಕು. ಇದರಿಂದ ಹೂಡಿಕೆ ಮಾಡಲು ಹೆಚ್ಚು ಹೆಚ್ಚು ಅನಿವಾಸಿ ಕನ್ನಡಿಗರು ಆಕರ್ಷಿತರಾಗುತ್ತಾರೆ.

ವಾರ್ತಾಭಾರತಿ : ಈಗ ಸರಕಾರ ನಿಮ್ಮ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸಿಲ್ಲ. ಹೀಗಾಗಿ ಮುಂದೆ ನಿಮ್ಮ ಬೇಡಿಕೆಗಳ ಈಡೇರಿಕೆಗೆ ಯಾವ ರೀತಿ ಸರಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಲಾಗುತ್ತದೆ?

ಡಾ.ರೊನಾಲ್ಡ್ ಕೊಲಾಸೊ : ಈಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ. ಅವರು ನಮಗೆ ಒಳ್ಳೆಯ ಸ್ನೇಹಿತರಾಗಿದ್ದಾರೆ. ಎನ್ನಾರೈಗಳ ಬಗ್ಗೆ ಅವರಿಗೆ ಕಳಕಳಿಯಿದೆ. ಅವರು ಈ ಹಿಂದೆ ಮಾರ್ಚ್ ಒಳಗೆ ಪ್ರತ್ಯೇಕ ಸಚಿವಾಲಯ ಮಾಡುವುದಾಗಿ ಮಾತು ನೀಡಿದ್ದರು. ಅವರು ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ನಾವು ಶೀಘ್ರದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಲಿದ್ದೇವೆ. ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸೆಕ್ರೆಟರಿಯೇಟ್ ಅಂತ ಘೋಷಿಸಿರುವುದನ್ನು ಸ್ವಲ್ಪ ಬದಲಾಯಿಸಿ ಪ್ರತ್ಯೇಕ ಸಚಿವರ ನೇತೃತ್ವದ ಸಚಿವಾಲಯವನ್ನೇ ಮಾಡಿ ಅದಕ್ಕೆ ಯೋಗ್ಯ ಸಚಿವರೊಬ್ಬರನ್ನು ನೇಮಿಸುವಂತೆ ಒತ್ತಾಯಿಸುತ್ತೇವೆ. ಇದರಿಂದಾಗಿ ಎನ್‌ಆರ್‌ಐಗಳಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೂ ಅನುಕೂಲವಾಗಲಿದೆ.

ಸಿಎಂ ಡಿಕೆಶಿವಕುಮಾರ್ ಅವರು, ಜನರು ಸದಾ ತಮ್ಮನ್ನು ಸ್ಮರಿಸುವಂತೆ ಏನಾದರೂ ದೊಡ್ಡ ಜನಪರ ಕೆಲಸ ಮಾಡಬೇಕು ಎಂಬ ಆಶಯ ಹೊಂದಿದ್ದಾರೆ. ಈ ಹಿಂದೆ ಅವರು ದುಬೈಗೆ ಬಂದಿದ್ದಾಗ ನಾನು ಅವರ ಜೊತೆ ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳೆಸುವ ಕುರಿತು ಮಾತನಾಡಿದ್ದೆ. ಅದರಲ್ಲೂ ವಿಶೇಷವಾಗಿ ನಮ್ಮ ಕಡಲ ತೀರವನ್ನು ದುಬೈ ಮಾದರಿಯಲ್ಲಿ ಅಭಿವೃದ್ಧಿ ಮಾಡಬಹುದು ಎಂದು ಗಮನಸೆಳೆದಿದ್ದೆ. ಅವುಗಳ ಬಗ್ಗೆಯೂ ಅವರು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯಿದೆ.

ಕಾಂಗ್ರೆಸ್ 2023ರ ಪ್ರಣಾಳಿಕೆಯಲ್ಲಿ ಹೇಳಿದ್ದೇನು? :

► ಅನಿವಾಸಿಗಳಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ

► ಅನಿವಾಸಿಗಳ ಉದ್ಯಮಕ್ಕೆ ಉತ್ತೇಜನ ನೀಡಲು ಸಾವಿರ ಕೋಟಿ ಆವರ್ತನ ನಿಧಿ

ಅನಿವಾಸಿ ಕನ್ನಡಿಗರ ಪ್ರಮುಖ ಆಗ್ರಹಗಳು ಏನು :

► ಅನಿವಾಸಿಗಳಿಗೆ ಪ್ರತ್ಯೇಕ ಸಚಿವರ ನೇತೃತ್ವದ ಸಚಿವಾಲಯ ಸ್ಥಾಪನೆ

► ಅನಿವಾಸಿಗಳ ಉದ್ಯಮಕ್ಕೆ ಉತ್ತೇಜನ ನೀಡಲು ಸಾವಿರ ಕೋಟಿ ಆವರ್ತನ ನಿಧಿ

► ಎನ್‌ಆರ್‌ಐಗಳಿಗೆ ಸಹಕರಿಸಲು ಏಕ ಗವಾಕ್ಷಿ ವ್ಯವಸ್ಥೆ

► ಎನ್‌ಆರ್‌ಐ ಕುಂದು ಕೊರತೆ ಪರಿಹಾರ ಕೇಂದ್ರ ಸ್ಥಾಪನೆ

► ವಾರ್ಷಿಕ ಜಾಗತಿಕ ಕನ್ನಡಿಗ ಸಮಾವೇಶ ಆಯೋಜನೆ

► ರಾಜ್ಯದ ಯೋಜನೆಗಳಲ್ಲಿ ಎನ್‌ಆರ್‌ಐಗಳಿಗೆ ಅವಕಾಶ

► ಎನ್‌ಆರ್‌ಐ ಗುರುತಿನ ಚೀಟಿ

ಎನ್‌ಆರ್‌ಐಗಳು ರಾಜ್ಯಕ್ಕೆ ಯಾಕೆ ಮುಖ್ಯ? :

► 2023ರಲ್ಲಿ ಎನ್ ಆರ್ ಐ ಗಳಿಂದ 125 ಬಿಲಿಯನ್ ಡಾಲರ್ ಹೂಡಿಕೆ

► ಕನ್ನಡಿಗ ಅನಿವಾಸಿಗಳಿಂದ ವರ್ಷಕ್ಕೆ 10 ರಿಂದ 12 ಬಿಲಿಯನ್ ಡಾಲರ್ ರಾಜ್ಯಕ್ಕೆ

► ರಾಜ್ಯದಲ್ಲಿ 6,000ಕ್ಕೂ ಹೆಚ್ಚು ಎನ್ ಆರ್ ಐ ಗಳ ಉದ್ಯಮಗಳಿವೆ

► ಬೆಂಗಳೂರು, ಮಂಗಳೂರು, ಉಡುಪಿ, ಮೈಸೂರು, ಹುಬ್ಬಳ್ಳಿ, ಬೆಳಗಾವಿಗೆ ಎನ್‌ಆರ್‌ಐಗಳಿಂದ 8,000 ಕೋಟಿಗೂ ಹೆಚ್ಚು ಹೂಡಿಕೆ

► ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದ ಆದಾಯಕ್ಕೆ ಎನ್‌ಆರ್‌ಐಗಳಿಂದ ಶೇ.25ರಿಂದ 30ಕೊಡುಗೆ

► ಎನ್‌ಆರ್‌ಐಗಳ ರಿಯಲ್ ಎಸ್ಟೇಟ್ ವ್ಯವಹಾರದಿಂದ ರಾಜ್ಯದಲ್ಲಿ ಆದಾಯ ಹಾಗೂ ಉದ್ಯೋಗ ಸೃಷ್ಟಿ

► ಕನ್ನಡಿಗ ಎನ್‌ಆರ್‌ಐಗಳ ವಿದೇಶಿ ಕಂಪೆನಿಗಳಿಂದ ರಾಜ್ಯಕ್ಕೆ ಹೂಡಿಕೆ, ತಂತ್ರಜ್ಞಾನ ನೆರವು

► ಜಗತ್ತಿನ ಪ್ರತಿಷ್ಠಿತ ಕಂಪೆನಿಗಳಲ್ಲಿ ಅತ್ಯುತ್ತಮ ಸ್ಥಾನದಲ್ಲಿದ್ದಾರೆ ಕನ್ನಡಿಗ ಎನ್‌ಆರ್‌ಐಗಳು

► ರಾಜ್ಯದ ಸ್ಟಾರ್ಟ್ ಅಪ್ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಎನ್‌ಆರ್‌ಐಗಳಿಂದ ಲಾಭ

► ಕನ್ನಡಿಗ ಎನ್‌ಆರ್‌ಐಗಳಿಂದ ರಾಜ್ಯಕ್ಕೆ ಪ್ರತಿ ವರ್ಷ 600ರಿಂದ 800 ಕೋಟಿ ರೂ. ದೇಣಿಗೆ

► ಜಾಗತಿಕವಾಗಿ 200ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಕನ್ನಡ ಭಾಷೆ, ಸಂಸ್ಕೃತಿ ಪ್ರಚಾರ

Tags

guaranteeseparate ministerNRI portfolio
share
ಸಂದರ್ಶನ: ನಾಗರಾಜ್ ಅಪ್ಪಸಂದ್ರ
ಸಂದರ್ಶನ: ನಾಗರಾಜ್ ಅಪ್ಪಸಂದ್ರ
Next Story
X