Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 5 ವರ್ಷಗಳಲ್ಲಿ ಶೇ. 300ರಷ್ಟು ಏರಿದ...

5 ವರ್ಷಗಳಲ್ಲಿ ಶೇ. 300ರಷ್ಟು ಏರಿದ ಬಿಲಿಯನೇರ್‌ಗಳ ಸಂಖ್ಯೆ!

ವಾರ್ತಾಭಾರತಿವಾರ್ತಾಭಾರತಿ29 July 2026 4:20 PM IST
share
5 ವರ್ಷಗಳಲ್ಲಿ ಶೇ. 300ರಷ್ಟು ಏರಿದ ಬಿಲಿಯನೇರ್‌ಗಳ ಸಂಖ್ಯೆ!

ಭಾರತದಲ್ಲಿ ಬಿಲಿಯನೇರ್‌ ಗಳ ಸಂಖ್ಯೆ ಸ್ಥಿರವಾಗಿ ಏರುತ್ತಾ ಬಂದಿದೆ. 2021-22ರಲ್ಲಿ 142ರಷ್ಟಿದ್ದ ಸಂಖ್ಯೆ 2022-23ರಲ್ಲಿ 301ಕ್ಕೇರಿತ್ತು. ಆದರೆ 2024-25ರಲ್ಲಿ ಈ ಸಂಖ್ಯೆ 415ಕ್ಕೆ ಏರಿದ್ದು, 2025-26ರಲ್ಲಿ 576ಕ್ಕೇರಿದೆ.

ಭಾರತದ ಅತಿ ಶ್ರೀಮಂತರ ಪಟ್ಟಿಗೆ ಇನ್ನಷ್ಟು ಹೆಸರುಗಳು ಸೇರ್ಪಡೆಗೊಂಡಿವೆ. ಕೇಂದ್ರ ಹಣಕಾಸು ಸಚಿವಾಲಯವು ಸಂಸತ್ತಿನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, 2025-26 ವಿತ್ತೀಯ ವರ್ಷದಲ್ಲಿ 100 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ವ್ಯಕ್ತಿಗಳ ಸಂಖ್ಯೆ 576ಕ್ಕೇರಿದೆ. 2024-25ರಲ್ಲಿ ಈ ಸಂಖ್ಯೆ 415ರಷ್ಟಿತ್ತು.

ದೇಶದಲ್ಲಿ ಬಿಲಿಯನೇರ್‌ ಗಳ ಸಂಖ್ಯೆ ಏರುತ್ತಿದೆ ಎನ್ನುವುದನ್ನು ಸರ್ಕಾರ ಗಮನಿಸಿದೆಯೇ ಎಂದು ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರವಾಗಿ, ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ (ಜುಲೈ 27) ಲಿಖಿತ ಉತ್ತರದಲ್ಲಿ ಅಂಕಿ-ಅಂಶಗಳನ್ನು ಒದಗಿಸಿದ್ದಾರೆ.

ಐದು ವರ್ಷಗಳ ಹಿಂದೆ, 2021-22ರಲ್ಲಿ ಬಿಲಿಯನೇರ್‌ಗಳ ಸಂಖ್ಯೆ 142 ಮಾತ್ರ ಇತ್ತು. ಅಂದರೆ, ಆ ಸಂದರ್ಭದಲ್ಲಿ 100 ಕೋಟಿ ರೂ.ಗಿಂತ ಹೆಚ್ಚಿನ ವಾರ್ಷಿಕ ಆದಾಯ ದಾಖಲಿಸಿದ ತೆರಿಗೆ ಪಾವತಿದಾರರ ಸಂಖ್ಯೆ 142 ಮಾತ್ರವಾಗಿತ್ತು. 576 ವ್ಯಕ್ತಿಗಳ ಅಂಕಿ-ಅಂಶವು ಐದು ವರ್ಷಗಳ ಅವಧಿಯಲ್ಲಿ ದೇಶದ ಅತಿ ಹೆಚ್ಚು ಆದಾಯ ಹೊಂದಿರುವ ತೆರಿಗೆದಾರರ ಸಂಖ್ಯೆಯಲ್ಲಿ ಶೇ 300ಕ್ಕಿಂತ ಹೆಚ್ಚಿನ ಹೆಚ್ಚಳವನ್ನು ಪ್ರತಿನಿಧಿಸುತ್ತದೆ.

ಭಾರತದಲ್ಲಿ ಏರುತ್ತಿದ್ದಾರೆ ಬಿಲಿಯನೇರ್‌ಗಳು

ಭಾರತದಲ್ಲಿ ಬಿಲಿಯನೇರ್‌ ಗಳ ಸಂಖ್ಯೆ ಸ್ಥಿರವಾಗಿ ಏರುತ್ತಾ ಬಂದಿದೆ. 2021-22ರಲ್ಲಿ 142ರಷ್ಟಿದ್ದ ಸಂಖ್ಯೆ 2022-23ರಲ್ಲಿ 301ಕ್ಕೇರಿತ್ತು. 2023-24ರಲ್ಲಿ ಮತ್ತೆ 284ಕ್ಕೆ ಇಳಿದಿತ್ತು. ಆದರೆ 2024-25ರಲ್ಲಿ ಈ ಸಂಖ್ಯೆ 415ಕ್ಕೆ ಏರಿದ್ದು, 2025-26ರಲ್ಲಿ 576ಕ್ಕೇರಿದೆ.

ಸಂಸತ್ತಿನಲ್ಲಿ ಪ್ರಶ್ನೆಯು "ಎಷ್ಟು ಬಿಲಿಯನೇರ್‌ಗಳು ಇದ್ದಾರೆ" ಎಂದು ಸ್ಪಷ್ಟವಾಗಿ ಕೇಳಿದ್ದರೂ, ಸರ್ಕಾರವು 'ಬಿಲಿಯನೇರ್‌' ಎಂಬ ಪದಕ್ಕೆ ಅಧಿಕೃತ ವ್ಯಾಖ್ಯಾನವಿಲ್ಲ ಎಂದು ತಿಳಿಸಿದೆ. ಬದಲಾಗಿ, ದೇಶದ ಅತಿ ಹೆಚ್ಚು ಆದಾಯ ಗಳಿಸುವವರನ್ನು 100 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಗಳಿಸುವವರಾಗಿ ಪರಿಗಣಿಸಿ, ಆದಾಯ ತೆರಿಗೆ ರಿಟರ್ನ್‌ (ಐಟಿಆರ್‌) ಸಲ್ಲಿಸಿರುವ ತೆರಿಗೆದಾರರ ಮಾಹಿತಿಯನ್ನು ಆಧರಿಸಿದೆ. 'ಬಿಲಿಯನೇರ್‌' ಎಂಬ ಪದಕ್ಕೆ ಆದಾಯ ತೆರಿಗೆ ಕಾಯ್ದೆ-2025ರ ಅಡಿಯಲ್ಲಿ ಅಥವಾ ಹಿಂದಿನ ಆದಾಯ ತೆರಿಗೆ ಕಾಯ್ದೆ-1961ರ ಅಡಿಯಲ್ಲಿ ಯಾವುದೇ ಶಾಸನಬದ್ಧ ವ್ಯಾಖ್ಯಾನವಿಲ್ಲ ಎಂದು ಸಚಿವರು ಹೇಳಿದ್ದಾರೆ.

ಭಾರತೀಯ ಶತಕೋಟ್ಯಾಧಿಪತಿಗಳ ಒಟ್ಟು ಸಂಪತ್ತಿನ ದತ್ತಾಂಶವನ್ನು ಸರ್ಕಾರ ನಿರ್ವಹಿಸುತ್ತಿದೆಯೇ ಮತ್ತು ಕಳೆದ ಐದು ವರ್ಷಗಳಲ್ಲಿ ಅದು ಹೇಗೆ ಬದಲಾಗಿದೆ ಎಂಬ ಪ್ರಶ್ನೆಗೆ, ಅಂತಹ ಯಾವುದೇ ಅಧಿಕೃತ ದತ್ತಾಂಶವನ್ನು ನಿರ್ವಹಿಸಲಾಗುತ್ತಿಲ್ಲ ಎಂದು ಚೌಧರಿ ಉತ್ತರಿಸಿದ್ದಾರೆ.

"ಸಂಪತ್ತು ತೆರಿಗೆ ಕಾಯ್ದೆ-1957 ಅನ್ನು 2016ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ತೆರಿಗೆದಾರರ ಒಟ್ಟು ಸಂಪತ್ತಿನ ದತ್ತಾಂಶವನ್ನು ಸರ್ಕಾರ ನಿರ್ವಹಿಸುವುದಿಲ್ಲ" ಎಂದು ಸಚಿವರು ತಿಳಿಸಿದ್ದಾರೆ.

ಭಾರತದಲ್ಲಿ ಏರುತ್ತಿರುವ ಆರ್ಥಿಕ ಅಸಮಾನತೆಯ ಕಳವಳ

ಭಾರತದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯ ಕುರಿತ ಕಳವಳಗಳಿಗೆ ಸಂಬಂಧಿಸಿದಂತೆ, ಹಣಕಾಸು ಸಚಿವಾಲಯವು ತನ್ನ ಲಿಖಿತ ಉತ್ತರದಲ್ಲಿ ಪ್ರತ್ಯೇಕ ಅಧ್ಯಯನದ ಬದಲಿಗೆ ಅಸ್ತಿತ್ವದಲ್ಲಿರುವ ಸಮೀಕ್ಷೆಗಳನ್ನು ಉಲ್ಲೇಖಿಸಿದೆ.

ಗಿನಿ ಕೋಯಿಫೀಶಿಯಂಟ್‌ (ಆರ್ಥಿಕ ಅಸಮಾನತೆಯನ್ನು ಅಳೆಯಲು ಬಳಸುವ ಸಂಖ್ಯಾಶಾಸ್ತ್ರೀಯ ಮಾನದಂಡ) ತೋರಿಸಿರುವ ಇತ್ತೀಚಿನ ಗೃಹಬಳಕೆ ವೆಚ್ಚ ಸಮೀಕ್ಷೆ (HCES) 2023-24 ಅನ್ನು ಸಚಿವರು ಉಲ್ಲೇಖಿಸಿದ್ದಾರೆ. ಹಣಕಾಸು ಸಚಿವಾಲಯ ಉಲ್ಲೇಖಿಸಿದ ಸಮೀಕ್ಷೆಯ ಪ್ರಕಾರ, ಗಿನಿ ಕೋಯಿಫೀಶಿಯಂಟ್ 0.266ರಿಂದ 0.237ಕ್ಕೆ ಇಳಿದಿದೆ. ನಗರ ಪ್ರದೇಶದ ಗಿನಿ ಕೋಯಿಫೀಶಿಯಂಟ್ 0.314ರಿಂದ 0.284ಕ್ಕೆ ಇಳಿದಿದೆ. ಹೀಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ಆರ್ಥಿಕ ಅಸಮಾನತೆಯ ಅಂತರ ಕಡಿಮೆಯಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆ.

ಸರ್ಕಾರವು ಕಾರ್ಮಿಕ ಮಾರುಕಟ್ಟೆಯ ದತ್ತಾಂಶವನ್ನೂ ಉಲ್ಲೇಖಿಸಿದ್ದು, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ನಿರುದ್ಯೋಗ ಪ್ರಮಾಣವು 2022ರ ಶೇ 3.6ರಿಂದ 2025ರಲ್ಲಿ ಶೇ 3.1ಕ್ಕೆ ಇಳಿದಿದೆ ಎಂದು ಹೇಳಿದೆ. ನೀತಿ ಆಯೋಗದ ಅಂದಾಜುಗಳನ್ನು ಉಲ್ಲೇಖಿಸಿರುವ ಹಣಕಾಸು ಸಚಿವಾಲಯ, ಬಹುಆಯಾಮದ ಬಡತನವೂ ಕಡಿಮೆಯಾಗುತ್ತಿದೆ ಎಂದು ತಿಳಿಸಿದೆ. 2013-14 ಮತ್ತು 2022-23ರ ನಡುವೆ ಕಳೆದ ದಶಕದಲ್ಲಿ 24.82 ಕೋಟಿ ಮಂದಿ ಬಡತನದಿಂದ ಹೊರಬಂದಿದ್ದಾರೆ ಎಂದು ಅಂದಾಜು ನೀಡಿದೆ.

Tags

Billionaires
share
ವಾರ್ತಾಭಾರತಿ
ವಾರ್ತಾಭಾರತಿ
Next Story
X