ನೀವು ಭೇಟಿ ನೀಡಬಹುದಾದ ವಿಶ್ವದ ಅತಿ ಹಳೆಯ 10 ಅರಣ್ಯಗಳು

ಸಾಂದರ್ಭಿಕ ಚಿತ್ರ | Photo Credit : AI
ಅರಣ್ಯಗಳು ಕೇವಲ ಮರಗಳ ಸಮೂಹಗಳಲ್ಲ. ಬದಲಾಗಿ ಹಿಮಯುಗಗಳು, ಟೆಕ್ಟೋನಿಕ್ ಬದಲಾವಣೆಗಳು, ಬದುಕುಳಿದ ಪರಿಸರ ವ್ಯವಸ್ಥೆಗಳ ಜೀವಂತ ದಾಖಲೆಗಳು. ಆದರೆ ಈಗ ಖಂಡಗಳಾದ್ಯಂತ ಬೆರಳೆಣಿಕೆಯಷ್ಟು ಪ್ರಾಚೀನ ಕಾಡುಗಳು ಇನ್ನೂ ಉಳಿದುಕೊಂಡಿವೆ. ಹೀಗಾಗಿ ಈ ಕಾಡುಗಳು ಸಮಯದ ಜೊತೆಗೆ ನಡೆಯಲು ಅಪರೂಪದ ಅವಕಾಶ ಕೊಡುತ್ತದೆ.
ಡೈನ್ಟ್ರೀ ಮಳೆಕಾಡು:
ಸುಮಾರು 180 ದಶಲಕ್ಷ ವರ್ಷಗಳಷ್ಟು ಹಳೆಯ ಕಾಡೆಂದು ಅಂದಾಜಿಸಲಾಗಿದೆ. ಇದು ಭೂಮಿಯ ಮೇಲಿನ ಅತ್ಯಂತ ಹಳೆಯ ಉಷ್ಣವಲಯದ ಮಳೆಕಾಡು. ಇದರ ಜೀವವೈವಿಧ್ಯವು ದಿಗ್ಭ್ರಮೆಗೊಳಿಸುವಂತಿದೆ. ಡೈನೋಸಾರ್ ಗಳ ಯುಗದ ಪ್ರಾಚೀನ ಸಸ್ಯ ಪ್ರಭೇದಗಳು ಇಲ್ಲಿ ಕಂಡುಬರುತ್ತವೆ.
ಬೊರ್ನಿಯೊ ಲೋಲ್ಯಾಂಡ್ ಮಳೆಕಾಡು:
ಸುಮಾರು 130 ದಶಲಕ್ಷ ವರ್ಷಗಳಷ್ಟು ಹಿಂದಿನ ಈ ಅರಣ್ಯವು ಮಲೇಷ್ಯಾ, ಇಂಡೋನೇಷ್ಯಾ ಮತ್ತು ಬ್ರೂನಿಯನ್ನು ವ್ಯಾಪಿಸಿದೆ. ಇದು ಜಾಗತಿಕವಾಗಿ ಶ್ರೀಮಂತ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ. ಒರಾಂಗುಟನ್ ಗಳು ಮತ್ತು ಪಿಗ್ನಿ ಆನೆಗಳಿಗೆ ನೆಲೆಯಾಗಿವೆ.
ತಮನ್ ನೆಗಾರ:
ವಿಶ್ವದ ಅತ್ಯಂತ ಹಳೆಯ ಮಳೆಕಾಡುಗಳಲ್ಲಿ ಸಾಮಾನ್ಯವಾಗಿ ಉಲ್ಲೇಖಿಸಲಾಗುವ ತಮನ್ ನೆಗಾರ 130 ಮಿಲಿಯನ್ ವರ್ಷಗಳಿಗಿಂತ ಹಳೆಯದು. ಈ ಪ್ರಾಚೀನ ಪರಿಸರ ವ್ಯವಸ್ಥೆಯಲ್ಲಿ ಸಂದರ್ಶಕರು ದಟ್ಟವಾದ ಕಾಡಿನ ಹಾದಿಗಳನ್ನು ಅನ್ವೇಷಿಸಬಹುದು.
ಅಮೆಝಾನ್ ಮಳೆಕಾಡು:
ಅಮೆಝಾನ್ 55 ದಶಲಕ್ಷ ವರ್ಷಗಳಿಗೂ ಹಳೆಯದಾದ ಕಾಡು. ಭೂಮಿಯ ಮೇಲಿನ ಅತಿದೊಡ್ಡ ಮತ್ತು ಅತ್ಯಂತ ಜೀವವೈವಿಧ್ಯಮಯ ಮಳೆಕಾಡು ಆಗಿ ಉಳಿದಿದೆ.
ಯಕುಶಿಮಾ ಅರಣ್ಯ:
ಈ ವಿಶಿಷ್ಟ ಅರಣ್ಯ ಪ್ರದೇಶವು 7000 ವರ್ಷಗಳಿಗೂ ಹಳೆಯದಾದ ಪ್ರಾಚೀನ ದೇವದಾರು ಮರಗಳನ್ನು ಹೊಂದಿದೆ. ಇವು ಪಾಚಿ ಮತ್ತು ಮಂಜಿನಿಂದ ಆವೃತವಾಗಿವೆ. ಪ್ರಿನ್ಸೆಸ್ ಮೊನೊನೊಕ್ ಸಿನಿಮಾಗಳಿಗೆ ಸ್ಫೂರ್ತಿ ನೀಡಿದೆ.
ಪ್ರಾಚೀನ ಬ್ರಿಸ್ಟಲ್ಕೋನ್ ಪೈನ್ ಅರಣ್ಯ:
5000 ವರ್ಷಗಳಿಗೂ ಹಳೆಯದಾದ ಭೂಮಿಯ ಮೇಲಿನ ಅತ್ಯಂತ ಹಳೆಯ ಜೀವಂತ ಮರಗಳಿಗೆ ನೆಲೆಯಾಗಿದೆ. ಈ ಒರಟಾದ ಕಾಡು ತೀವ್ರ ಹವಾಮಾನಕ್ಕೂ ಸಹಿಷ್ಣುತೆ ತೋರಿಸಿದೆ.
ಕ್ಯಾಸ್ಪಿಯನ್ ಹೈರ್ಕಾನಿಯನ್ ಕಾಡುಗಳು:
ಈ ಹಚ್ಚ ಹಸಿರಿನ ಕಾಡುಗಳು 25-50 ದಶಲಕ್ಷ ವರ್ಷಗಳಷ್ಟು ಹಿಂದಿನವು ಮತ್ತು ಒಂದು ಕಾಲದಲ್ಲಿ ಉತ್ತರ ಗೋಳಾರ್ಧದ ಬಹುಭಾಗವನ್ನು ಆವರಿಸಿದ್ದವು. ಅವುಗಳನ್ನು ಪರಿಸರ ವಿಜ್ಞಾನದ ಅವಶೇಷಗಳನ್ನಾಗಿ ನೋಡಲಾಗುತ್ತಿದೆ.
ರಿಯೂನಿಯನ್ ನ್ಯಾಷನಲ್ ಪಾರ್ಕ್:
ಸುಮಾರು 2-2.5 ದಶಲಕ್ಷ ವರ್ಷಗಳಷ್ಟು ಕಿರಿಯವಾಗಿದ್ದರೂ, ಅದರ ಜ್ವಾಲಾಮುಖಿ ಭೂಪ್ರದೇಶ ಮತ್ತು ದಟ್ಟವಾದ ಕಾಡುಗಳು ವಿಶಿಷ್ಟವಾದ ಪ್ರಾಚೀನ ಪರಿಸರ ವ್ಯವಸ್ಥೆಯನ್ನಾಗಿ ಮಾಡುತ್ತದೆ.
ಪಶ್ಚಿಮ ಘಟ್ಟಗಳು:
ವಿಶ್ವದ ಹಳೆಯ ಪರ್ವತ ಶ್ರೇಣಿಗಳಲ್ಲಿ ಒಂದಾದ (150 ಮಿಲಿಯನ್ ವರ್ಷಗಳು) ಪಶ್ಚಿಮ ಘಟ್ಟಗಳ ಕಾಡುಗಳು ಪ್ರಾಚೀನ, ಜೀವವೈವಿಧ್ಯ ಮತ್ತು ಲೆಕ್ಕವಿಲ್ಲದಷ್ಟು ಸ್ಥಳೀಯ ಪ್ರಭೇದಗಳ ನೆಲೆಯಾಗಿದೆ. ಕೇರಳ ಮತ್ತು ಕರ್ನಾಟಕದಲ್ಲಿ ದಟ್ಟವಾದ ನಿತ್ಯಹರಿದ್ವರ್ಣ ವಿಸ್ತಾರಗಳು ಕೆಲವು ಶ್ರೀಮಂತ ಪರಿಸರ ವಲಯಗಳನ್ನು ರೂಪಿಸುತ್ತವೆ. ಅಪರೂಪದ ವನ್ಯಜೀವಿಗಳು, ಔಷಧೀಯ ಸಸ್ಯಗಳು ಮತ್ತು ಭೂಮಿಯ ಮೇಲೆ ಬೇರೆಲ್ಲೂ ಕಂಡುಬರದ ವಿಶಿಷ್ಟ ಸಸ್ಯವರ್ಗಗಳಿಂದ ತುಂಬಿವೆ.
ಸುಂದರ್ಬನ್ಸ್ ಮ್ಯಾಂಗ್ರೋವ್ ಅರಣ್ಯ:
ಭೌಗೋಳಿಕವಾಗಿ ಕಿರಿಯವಾಗಿದ್ದರೂ, ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಯು ಬಹಳ ಪ್ರಾಚೀನ ಅರಣ್ಯ ಪ್ರದೇಶ. ವಿಶ್ವದ ಅತ್ಯಂತ ಹಳೆಯ ಮ್ಯಾಂಗ್ರೋವ್ ಕಾಡುಗಳಲ್ಲಿ ಒಂದಾಗಿ, ಸುಂದರಬನ್ಸ್ ಉಬ್ಬರವಿಳಿತಗಳಿಂದ ರೂಪುಗೊಂಡ ಜೀವಂತ, ಬದಲಾಗುತ್ತಿರುವ ಅರಣ್ಯದ ಅಪರೂಪದ ಉದಾಹರಣೆಯಾಗಿದೆ.
ಕೃಪೆ: indianexpress.com






