‘Prime Minister Professorship’ ಯೋಜನೆಯಡಿ ಪ್ರೊಫೆಸರ್ ಆಗಿ ಡಾ. ಕಿಶೋರ್ ಎಂ. ಪಕ್ನಿಕರ್ ಆಯ್ಕೆ; ಏನಿದು ಯೋಜನೆ?

credit: indianexpress
ಪುಣೆಯ ಆಗರ್ಕರ್ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕರಾಗಿರುವ ಖ್ಯಾತ ವಿಜ್ಞಾನಿ ಡಾ ಕಿಶೋರ್ ಎಂ ಪಕ್ನಿಕರ್ ಅವರು ‘ಪ್ರೈಮ್ ಮಿನಿಸ್ಟರ್ ಪ್ರೊಫೆಸರ್ಶಿಪ್’ ಯೋಜನೆಯ ಮೊತ್ತಮೊದಲ ಪ್ರೊಫೆಸರ್ ಆಗಿ ಆಯ್ಕೆಯಾಗಿದ್ದಾರೆ.
ಅನುಸಂಧಾನ್ ನ್ಯಾಷನಲ್ ರಿಸರ್ಚ್ ಆಂಡ್ ಫೌಂಡೇಶನ್ (ಎಎನ್ಆರ್ಎಫ್) ಅಡಿಯಲ್ಲಿ ಪ್ರತಿಷ್ಠಿತ ‘ಪ್ರಧಾನಮಂತ್ರಿ ಪ್ರೊಫಸರ್ಶಿಪ್’ ಯೋಜನೆಯಡಿ ಸಂಶೋಧಕರನ್ನು ಆಯ್ಕೆ ಮಾಡಿ, ಆಯ್ಕೆಯಾದ ಸಂಸ್ಥೆಯ ಸಂಶೋಧನಾ ಸಾಮರ್ಥ್ಯವನ್ನು ವೃದ್ಧಿಸಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಆದ್ಯತೆಯ ಸಂಶೋಧನಾ ಕ್ಷೇತ್ರಗಳಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ. ಬೆಂಗಳೂರು ವಿಶ್ವವಿದ್ಯಾಲಯ ಈ ಯೋಜನೆಯ ನೋಡಲ್ ಸಂಸ್ಥೆಯಾಗಿದೆ.
ಆಯ್ಕೆಯಾದ ಸಂಶೋಧಕರಿಗೆ ಪ್ರತಿ ವರ್ಷ 30 ಲಕ್ಷ ರೂ. ವೇತನ, ಭತ್ಯೆ ನೀಡಲಾಗುವುದು. ಜೊತೆಗೆ 24 ಲಕ್ಷ ರೂ. ಸಂಶೋಧನಾ ಅನುದಾನ ಮತ್ತು ಸಂಸ್ಥೆಗೆ ಪ್ರತಿ ವರ್ಷ 1 ಲಕ್ಷ ರೂಪಾಯಿಯಷ್ಟು ಹೆಚ್ಚುವರಿ ವೆಚ್ಚವನ್ನು ಭರಿಸುತ್ತದೆ. ಈ ಸಹಾಯಧನದ ಅವಧಿ ಐದು ವರ್ಷ.
*ಇದೀಗ ಈ ಯೋಜನೆ ಸುದ್ದಿಯಲ್ಲಿರುವುದು ಏಕೆ?
ಪುಣೆಯ ಆಗರ್ಕರ್ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕರಾಗಿರುವ ಖ್ಯಾತ ವಿಜ್ಞಾನಿ ಡಾ. ಕಿಶೋರ್ ಎಂ ಪಕ್ನಿಕರ್ ಅವರು ‘ಪ್ರೈಮ್ ಮಿನಿಸ್ಟರ್ ಪ್ರೊಫೆಸರ್ಶಿಪ್’ ಯೋಜನೆಯ ಮೊತ್ತಮೊದಲ ಪ್ರಾಧ್ಯಾಪಕರಾಗಿ ಆಯ್ಕೆಯಾಗಿದ್ದಾರೆ. ಅವರು ಐದು ವರ್ಷಗಳ ಅವಧಿಗೆ ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಲಿದ್ದಾರೆ.
*ಯೋಜನೆಯ ಮುಖ್ಯ ಅಂಶಗಳೇನು?
- ಅನುಸಂಧಾನ್ ನ್ಯಾಷನಲ್ ರಿಸರ್ಚ್ ಆಂಡ್ ಫೌಂಡೇಶನ್ (ಎಎನ್ಆರ್ಎಫ್) ಅಡಿಯಲ್ಲಿ ಪ್ರತಿಷ್ಠಿತ ‘ಪ್ರಧಾನಮಂತ್ರಿ ಪ್ರೊಫಸರ್ಶಿಪ್’ ಯೋಜನೆಯಡಿ ಸಂಶೋಧಕರನ್ನು ಆಯ್ಕೆ ಮಾಡಲಾಗುತ್ತದೆ. ಅವರು ಆಯ್ಕೆಯಾದ ಸಂಸ್ಥೆಯ ಸಂಶೋಧನಾ ಸಾಮರ್ಥ್ಯವನ್ನು ವೃದ್ಧಿಸಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಆದ್ಯತೆಯ ಸಂಶೋಧನಾ ಕ್ಷೇತ್ರಗಳಲ್ಲಿ ಮಾರ್ಗದರ್ಶನ ನೀಡಬೇಕಾಗುತ್ತದೆ. ಆಯ್ಕೆಯಾದ ಸಂಶೋಧಕರಿಗೆ ಪ್ರತಿ ವರ್ಷ 30 ಲಕ್ಷ ರೂ. ವೇತನ, ಭತ್ಯೆ ನೀಡಲಾಗುವುದು. ಜೊತೆಗೆ 24 ಲಕ್ಷ ರೂ. ಸಂಶೋಧನಾ ಅನುದಾನ ಮತ್ತು ಸಂಸ್ಥೆಗೆ ಪ್ರತಿ ವರ್ಷ 1 ಲಕ್ಷ ರೂಪಾಯಿ ಹೆಚ್ಚುವರಿ ವೆಚ್ಚವನ್ನು ಭರಿಸುತ್ತದೆ. ಈ ಸಹಾಯಧನದ ಅವಧಿ ಐದು ವರ್ಷ.
- ಭಾರತದ ಸಂಶೋಧನೆಯ ಪರಿಸರವನ್ನು ಬಲಪಡಿಸುವುದು ಯೋಜನೆಯ ಉದ್ದೇಶವಾಗಿದೆ. ಆಯ್ಕೆಯಾದ ಸಂಶೋಧಕರು ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು, ಸಂಶೋಧನಾ ಪ್ರಕಟಣೆಗಳನ್ನು ಹೆಚ್ಚಿಸುವುದು ಮತ್ತು ವಿಶ್ವವಿದ್ಯಾಲಯ ಹಾಗೂ ಕೈಗಾರಿಕಾ ಸಂಸ್ಥೆಗಳ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕಾಗುತ್ತದೆ. ಸಂಶೋಧನೆಗೆ ನಾಯಕತ್ವದ ಅಗತ್ಯವಿರುವ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚು ಅನುಭವಿ ವಿಜ್ಞಾನಿಗಳನ್ನು ನೇಮಿಸುವ ಮೂಲಕ ಭಾರತದ ಸಂಶೋಧನಾ ಪರಿಸರವನ್ನು ಬಲಪಡಿಸುವುದು ಯೋಜನೆಯ ಉದ್ದೇಶವಾಗಿದೆ.
- ಈ ಯೋಜನೆಯು ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಮತ್ತು ಸಹಯೋಗದ ಸಂಶೋಧನಾ ಅವಕಾಶಗಳನ್ನು ನೀಡುತ್ತದೆ. ಜೊತೆಗೆ ಜ್ಞಾನ ವಿನಿಮಯ ಮತ್ತು ದೀರ್ಘಕಾಲೀನ ಶೈಕ್ಷಣಿಕ ಸಂಬಂಧಗಳನ್ನು ಉತ್ತೇಜಿಸುತ್ತದೆ. ವೈಯಕ್ತಿಕ ಸಂಶೋಧನೆಯನ್ನು ಪ್ರಾಥಮಿಕವಾಗಿ ಬೆಂಬಲಿಸುವ ಸಾಂಪ್ರದಾಯಿಕ ಫೆಲೋಶಿಪ್ಗೆ ಭಿನ್ನವಾಗಿ ‘ಪ್ರೈಮ್ಮಿನಿಸ್ಟರ್ ಪ್ರೊಫೆಸರ್ಶಿಪ್’ ಹುದ್ದೆಯು ಭಾರತೀಯ ಮೂಲದ ಸಾಧನೆಗೈದ ಮತ್ತು ನಿವೃತ್ತಿ ಹೊಂದಿದ ಆದರೆ ಸಂಶೋಧನೆಯಲ್ಲಿ ಸಕ್ರಿಯವಾಗಿರುವ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಉದ್ಯಮ ವೃತ್ತಿಪರರನ್ನು ಸಂಶೋಧನಾ ಪರಿಸರ ವ್ಯವಸ್ಥೆ ಹೊಂದಿರದ ವಿಶ್ವವಿದ್ಯಾಲಯಗಳಲ್ಲಿ ನೇರವಾಗಿ ಇರಿಸುತ್ತದೆ.
- ಈ ನೇಮಕಾತಿಯ ನಂತರ ಪ್ರೊಫೆಸರ್ ಐದು ವರ್ಷಗಳ ಅವಧಿಗೆ ಅತಿಥೇಯ ಸಂಸ್ಥೆಯಲ್ಲಿ ಪೂರ್ಣಾವಧಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಯೋಜನೆಯ ಭಾಗವಾಗಿ ನೇಮಕಗೊಂಡ 21 ಪ್ರಾಧ್ಯಾಪಕರಲ್ಲಿ ಪ್ರೊಫೆಸರ್ ಪಕ್ನಿಕರ್ ಅವರೂ ಒಬ್ಬರಾಗಿದ್ದಾರೆ.
- ಡಾ ಪಕ್ನಿಕರ್ ಅವರು ಮೈಕ್ರೋಬಯೋಲಜಿ ಮತ್ತು ನ್ಯಾನೋ ಟೆಕ್ನಾಲಜಿಯಲ್ಲಿ ತಮ್ಮ ಸಂಶೋಧನೆಗಳಿಗೆ ಪ್ರಸಿದ್ಧರು. ಮುಖ್ಯವಾಗಿ ಪರಿಸರ ಜೈವಿಕ ತಂತ್ರಜ್ಞಾನ, ನ್ಯಾನೊಮೆಟೀರಿಯಲ್ಗಳು ಮತ್ತು ಟ್ರಾನ್ಸ್ಲೇಶನಲ್ ಸಂಶೋಧಕರು (ಪ್ರಯೋಗಾಲಯದ ಸಂಶೋಧನೆಗಳು ಮತ್ತು ನೈಜ ಜೀವನದಲ್ಲಿ ಅದನ್ನು ಅನ್ವಯಿಸಲು ನೆರವಾಗುವವರು). ಅವರ ವೃತ್ತಿಜೀವನದಲ್ಲಿ ಮೂಲಭೂತ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಸಂಯೋಜನೆಯಲ್ಲಿ ಕೆಲಸ ಮಾಡಿದ್ದಾರೆ. ಯುವ ವಿಜ್ಞಾನಿಗಳು ಮತ್ತು ಸಂಶೋಧನಾ ಸಮೂಹವನ್ನು ಪ್ರೋತ್ಸಾಹಿಸುವಲ್ಲಿ ಪ್ರಮುಖ ಪಾತ್ರವಹಸಿದ್ದಾರೆ.
*ಪ್ರೈಮ್ಮಿನಿಸ್ಟರ್ ಪ್ರೊಫೆಸರ್ಶಿಪ್ ಗೆ ಅರ್ಹತೆ
- ಭಾರತದ ಖ್ಯಾತ ಸಂಶೋಧನಾ ಸಂಸ್ಥೆಗಳು, ಸಂಶೋಧನಾ ಪ್ರಯೋಗಾಲಯಗಳು ಅಥವಾ ಖಾಸಗಿ ಸಂಸ್ಥೆಗಳಿಂದ ನಿವೃತ್ತ ಸಿಬ್ಬಂದಿಯನ್ನು ಆಯ್ಕೆಮಾಡಲಾಗುತ್ತದೆ. ಅನಿವಾಸಿ ವಿಜ್ಞಾನಿಗಳು ಅಂದರೆ ಭಾರತದಲ್ಲಿ ನೆಲೆಸಿರದ, ಭಾರತೀಯ ಮೂಲದ, ಭಾರತದ ವಿದೇಶೀ ಪ್ರಜೆಗಳು ಭಾರತದಲ್ಲಿ ಸಂಶೋಧನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
- ಉದ್ಯಮ ಮೂಲದ ಸಂಶೋಧನಾ ವೃತ್ತಿಪರರು, ಪ್ರಬಲ ಸಂಶೋಧನಾ ಮೂಲವಿರುವ ಅಭ್ಯರ್ಥಿಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಮುನ್ನಡೆಸುವಲ್ಲಿ ಬದ್ಧತೆ ಇರುವವರು ಅರ್ಜಿ ಸಲ್ಲಿಸಬಹುದು.
- ಸಂಶೋಧನೆ ಮತ್ತು ಅನ್ವೇಷಣೆ ಇನ್ನೂ ಆರಂಭಿಕ ಹಂತದಲ್ಲಿರುವ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು.
ಅನುಸಂಧಾನ್ ನ್ಯಾಷನಲ್ ರಿಸರ್ಚ್ ಆಂಡ್ ಫೌಂಡೇಶನ್ (ಎಎನ್ಆರ್ಎಫ್)
2023ರಲ್ಲಿ ಎಎನ್ಆರ್ಎಪ್ ಸ್ಥಾಪನೆಯಾಗಿದೆ. ಯೋಜನೆಯಡಿ ಸಂಶೋಧಕರನ್ನು ಆಯ್ಕೆ ಮಾಡಿ, ಆಯ್ಕೆಯಾದ ಸಂಸ್ಥೆಯ ಸಂಶೋಧನಾ ಸಾಮರ್ಥ್ಯವನ್ನು ವೃದ್ಧಿಸಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಆದ್ಯತೆಯ ಸಂಶೋಧನಾ ಕ್ಷೇತ್ರಗಳಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ.
ನ್ಯಾಚುರಲ್ ಸೈನ್ಸ್, ಗಣಿತ ವಿಜ್ಞಾನ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಭೂ ವಿಜ್ಞಾನ, ಆರೋಗ್ಯ ಮತ್ತು ಕೃಷಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ, ಮಾನವೀಯ ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳಲ್ಲಿ ಸಂಶೋಧನೆ ಕೈಗೊಳ್ಳಬಹುದು.
ಭಾರತೀಯ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರೋತ್ಸಾಹ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.







