Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭವಿಷ್ಯವಾಣಿಯೇ ಅಥವಾ ಕಾಕತಾಳೀಯವೇ?: ‘ದಿ...

ಭವಿಷ್ಯವಾಣಿಯೇ ಅಥವಾ ಕಾಕತಾಳೀಯವೇ?: ‘ದಿ ಸಿಂಪ್ಸನ್ಸ್’ ಹೆಸರಿನಲ್ಲಿ ಹರಿದಾಡುವ ಮೀಮ್ ಗಳ ಸತ್ಯಾಸತ್ಯತೆ ಏನು?

ವಾರ್ತಾಭಾರತಿವಾರ್ತಾಭಾರತಿ27 Aug 2026 3:19 PM IST
share
ಭವಿಷ್ಯವಾಣಿಯೇ ಅಥವಾ ಕಾಕತಾಳೀಯವೇ?: ‘ದಿ ಸಿಂಪ್ಸನ್ಸ್’ ಹೆಸರಿನಲ್ಲಿ ಹರಿದಾಡುವ ಮೀಮ್ ಗಳ ಸತ್ಯಾಸತ್ಯತೆ ಏನು?

ನೀವು ಸಾಮಾಜಿಕ ಜಾಲತಾಣ ಬಳಕೆದಾರರಾಗಿದ್ದು, ಅಂತಾರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ, ಅಮೆರಿಕದ ಜನಪ್ರಿಯ ಕಾರ್ಟೂನ್ ಸರಣಿ ‘ದಿ ಸಿಂಪ್ಸನ್ಸ್’ ನಿಮ್ಮ ಗಮನಕ್ಕೆ ಬಂದಿರಬಹುದು. ಜಾಗತಿಕ ರಾಜಕೀಯ ಹಾಗೂ ಹಲವು ಪ್ರಮುಖ ಬೆಳವಣಿಗೆಗಳನ್ನು ‘ದಿ ಸಿಂಪ್ಸನ್ಸ್’ನ ಸಂಚಿಕೆಗಳಲ್ಲಿ ಹಲವು ವರ್ಷಗಳ ಹಿಂದೆಯೇ ಊಹಿಸಲಾಗಿತ್ತು ಎಂಬ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಚರ್ಚೆಯಾಗುತ್ತಿರುತ್ತವೆ. ಫೇಸ್ಬುಕ್ ಸೇರಿದಂತೆ, ವಿಶೇಷವಾಗಿ ಎಕ್ಸ್ನಲ್ಲಿ ಇಂತಹ ಮೀಮ್ಗಳು ವ್ಯಾಪಕವಾಗಿ ಹರಿದಾಡುತ್ತವೆ.

ಯಾವುದೇ ಪ್ರಮುಖ ಘಟನೆ ನಡೆದಾಗ, ಕೆಲವೇ ಗಂಟೆಗಳಲ್ಲಿ ಅದಕ್ಕೆ ಹೋಲುವ ‘ದಿ ಸಿಂಪ್ಸನ್ಸ್’ನ ಹಳೆಯ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದು ಸಾಮಾನ್ಯ. “ಇದನ್ನು ಸಿಂಪ್ಸನ್ಸ್ ಮೊದಲೇ ತೋರಿಸಿತ್ತು”, “ಸಿಂಪ್ಸನ್ಸ್ಗೆ ಭವಿಷ್ಯ ಗೊತ್ತಿತ್ತು” ಎಂಬ ಮಾತುಗಳು ಮತ್ತೆ ಮುನ್ನೆಲೆಗೆ ಬರುತ್ತವೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗುವುದರಿಂದ ಹಿಡಿದು ಕೋವಿಡ್-೧೯, ರಷ್ಯಾ–ಉಕ್ರೇನ್ ಯುದ್ಧ, ಭಾರತ-ಪಾಕ್ ಉದ್ವಿಗ್ನತೆ, ನೊಟ್ರೆ ಡೇಮ್ ಬೆಂಕಿ, ಎಬೋಲಾ, ಕಮಲಾ ಹ್ಯಾರಿಸ್ ಅವರ ಉಡುಗೆ ಹಾಗೂ ಸೆಪ್ಟೆಂಬರ್ 11ರ ದಾಳಿವರೆಗೆ ಹಲವು ಜಾಗತಿಕ ಘಟನೆಗಳನ್ನು ‘ದಿ ಸಿಂಪ್ಸನ್ಸ್’ನ ಹಳೆಯ ದೃಶ್ಯಗಳಿಗೆ ಹೋಲಿಸಲಾಗಿದೆ.

ಆದರೆ ಈ ಎಲ್ಲವೂ ನಿಜವಾಗಿಯೂ ಭವಿಷ್ಯವಾಣಿಗಳೇ? ಕೆಲವು ದೃಶ್ಯಗಳು ಅಚ್ಚರಿಯ ರೀತಿಯಲ್ಲಿ ನೈಜ ಘಟನೆಗಳಿಗೆ ಹೋಲುವುದೇಕೆ? ಮತ್ತೊಂದೆಡೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಇಂತಹ ಹಲವು ಚಿತ್ರಗಳು ಮತ್ತು ವಿಡಿಯೋಗಳು ನಕಲಿ ಅಥವಾ ತಿರುಚಿದವು ಎಂಬುದು ಎಷ್ಟು ಸತ್ಯ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದಾಗ, ‘ದಿ ಸಿಂಪ್ಸನ್ಸ್’ನ ಭವಿಷ್ಯವಾಣಿಗಳ ಹಿಂದಿನ ಕುತೂಹಲಕಾರಿ ಕಥೆ ತೆರೆದುಕೊಳ್ಳುತ್ತದೆ.

‘ದಿ ಸಿಂಪ್ಸನ್ಸ್’ 1989ರಿಂದ ಪ್ರಸಾರವಾಗುತ್ತಿರುವ ಅಮೆರಿಕದ ಅನಿಮೇಟೆಡ್ ಹಾಸ್ಯ ಸರಣಿ. ಸ್ಪ್ರಿಂಗ್ಫೀಲ್ಡ್ ಎಂಬ ಕಾಲ್ಪನಿಕ ಪಟ್ಟಣದಲ್ಲಿ ವಾಸಿಸುವ ಹೋಮರ್, ಮಾರ್ಜ್, ಬಾರ್ಟ್, ಲೀಸಾ ಮತ್ತು ಮ್ಯಾಗಿ ಸಿಂಪ್ಸನ್ ಕುಟುಂಬದ ಸುತ್ತ ಕಥೆಗಳು ಸಾಗುತ್ತವೆ. ಆದರೆ ಇದು ಕೇವಲ ಕುಟುಂಬದ ಹಾಸ್ಯವಲ್ಲ. ರಾಜಕೀಯ, ಮಾಧ್ಯಮ, ತಂತ್ರಜ್ಞಾನ, ಆರ್ಥಿಕತೆ ಮತ್ತು ಜನಪ್ರಿಯ ಸಂಸ್ಕೃತಿಯ ಬೆಳವಣಿಗೆಗಳನ್ನು ವ್ಯಂಗ್ಯದ ಮೂಲಕ ಟೀಕಿಸುತ್ತದೆ.

ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರಸಾರವಾಗಿರುವ ಈ ಸರಣಿಯಲ್ಲಿ ನೂರಾರು ಸಂಚಿಕೆಗಳಿವೆ. ಹೀಗಾಗಿ ನಂತರದ ಘಟನೆಗಳಿಗೆ ಹೋಲುವ ದೃಶ್ಯಗಳು ಕಾಣಿಸಿಕೊಳ್ಳುವುದು ಅಸಾಮಾನ್ಯವಲ್ಲ. ಆದರೆ ಪ್ರತಿಯೊಂದು ಸಾಮ್ಯತೆಯನ್ನೂ ಭವಿಷ್ಯವಾಣಿ ಎಂದು ಹೇಳುವುದು ಸರಿಯಲ್ಲ. ದೃಶ್ಯ ಯಾವಾಗ ಪ್ರಸಾರವಾಯಿತು ಮತ್ತು ನೈಜ ಘಟನೆ ಯಾವಾಗ ನಡೆಯಿತು ಎಂಬ ಕಾಲಕ್ರಮ ಮುಖ್ಯ.

ಅತ್ಯಂತ ಪ್ರಸಿದ್ಧ ಉದಾಹರಣೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುವ ದೃಶ್ಯ. 2000ರ ‘ಬಾರ್ಟ್ ಟು ದಿ ಫ್ಯೂಚರ್’ ಸಂಚಿಕೆಯಲ್ಲಿ ಭವಿಷ್ಯದ ಅಧ್ಯಕ್ಷೆ ಲೀಸಾ ಸಿಂಪ್ಸನ್, ಹಿಂದಿನ ಅಧ್ಯಕ್ಷ ಟ್ರಂಪ್ ಅವರಿಂದ ಭಾರೀ ಬಜೆಟ್ ಬಿಕ್ಕಟ್ಟು ಬಳುವಳಿಯಾಗಿ ಬಂದಿದೆ ಎಂದು ಹೇಳುತ್ತಾಳೆ. ಆಗಲೇ ಟ್ರಂಪ್ ಪ್ರಸಿದ್ಧ ಉದ್ಯಮಿಯಾಗಿದ್ದು, ರಾಜಕೀಯ ಪ್ರವೇಶದ ಬಗ್ಗೆ ಬಹಿರಂಗವಾಗಿ ಚರ್ಚಿಸುತ್ತಿದ್ದರು. 1999ರಲ್ಲಿ ಅವರು ಅಧ್ಯಕ್ಷೀಯ ಸ್ಪರ್ಧೆಯ ಸಾಧ್ಯತೆಯನ್ನು ಪರಿಶೀಲಿಸಲು ಸಮಿತಿಯನ್ನೂ ರಚಿಸಿದ್ದರು. ಹೀಗಾಗಿ ಇದು ಅಸಾಧ್ಯ ಭವಿಷ್ಯವಾಣಿಗಿಂತಲೂ ಆಗಿನ ರಾಜಕೀಯ ಬೆಳವಣಿಗೆಯನ್ನು ಆಧರಿಸಿದ ವ್ಯಂಗ್ಯವಾಗಿತ್ತು.

ಇದಕ್ಕೆ ವಿರುದ್ಧವಾದ ಉದಾಹರಣೆ ಟ್ರಂಪ್ ಎಸ್ಕಲೇಟರ್ ದೃಶ್ಯ. 2015ರಲ್ಲಿ ಟ್ರಂಪ್ ಟ್ರಂಪ್ ಟವರ್ನ ಎಸ್ಕಲೇಟರ್ ನಲ್ಲಿ ಇಳಿದು ಪ್ರಚಾರ ಆರಂಭಿಸಿದ ಬಳಿಕವೇ ಸಿಂಪ್ಸನ್ಸ್ ತಂಡ ಅದನ್ನು ವ್ಯಂಗ್ಯವಾಗಿ ಬಳಸಿತು. ‘ಟ್ರಂಪ್ಟಾಸ್ಟಿಕ್ ವಾಯೇಜ್’ ಎಂಬ ಕಿರುಚಿತ್ರ ಅದೇ ವರ್ಷದ ಜುಲೈನಲ್ಲಿ ಬಿಡುಗಡೆಯಾಯಿತು. ಹೀಗಾಗಿ ಇಲ್ಲಿ ನಡೆದದ್ದು ನೈಜ ಘಟನೆ ನಂತರದ ಸಿಂಪ್ಸನ್ಸ್ ವ್ಯಂಗ್ಯ; ಭವಿಷ್ಯವಾಣಿ ಅಲ್ಲ.

ಕಮಲಾ ಹ್ಯಾರಿಸ್ ಮತ್ತು ಲೀಸಾ ಸಿಂಪ್ಸನ್ ನೇರಳೆ ಬಣ್ಣದ ಉಡುಪು ಧರಿಸಿರುವ ಸಾಮ್ಯತೆಯೂ ವೈರಲ್ ಆಗಿತ್ತು. ಆದರೆ ಲೀಸಾ ಧರಿಸಿದ್ದ ಉಡುಪು 2000ರ ಸಂಚಿಕೆಯದ್ದೇ. ಹ್ಯಾರಿಸ್ ಹಲವು ವರ್ಷಗಳ ಬಳಿಕ ಅದೇ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಚಿಕೆಯಲ್ಲಿ ಹ್ಯಾರಿಸ್ ಅವರ ಹೆಸರಾಗಲಿ, ಅವರ ರಾಜಕೀಯ ಭವಿಷ್ಯದ ಉಲ್ಲೇಖವಾಗಲಿ ಇಲ್ಲ.

ಕೋವಿಡ್, ರಷ್ಯಾ–ಉಕ್ರೇನ್ ಯುದ್ಧ, ನೊಟ್ರೆ ಡೇಮ್ ಬೆಂಕಿ, ಟ್ರಂಪ್ ಸಾವಿನ ದೃಶ್ಯ ಮತ್ತು ಸೆಪ್ಟೆಂಬರ್ 11ರ ದಾಳಿಗೆ ಸಂಬಂಧಿಸಿದ ಹಲವು ವೈರಲ್ ಚಿತ್ರಗಳೂ ಇದೇ ರೀತಿ ಪರಿಶೀಲನೆಗೆ ಒಳಪಟ್ಟಿವೆ. ಕೆಲವು ಚಿತ್ರಗಳಲ್ಲಿ ಮೂಲ ದೃಶ್ಯಗಳನ್ನು ತಿರುಚಲಾಗಿದ್ದರೆ, ಕೆಲವು ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲ್ಪಟ್ಟಿವೆ. 1997ರ ಸಂಚಿಕೆಯಲ್ಲಿ ಎಬೋಲಾ ಹೆಸರಿನ ಪುಸ್ತಕ ಕಾಣಿಸಿಕೊಂಡಿದ್ದರೂ, ಎಬೋಲಾ ಆಗಲೇ 1976ರಿಂದ ಪರಿಚಿತವಾಗಿತ್ತು.

ಹೀಗಾಗಿ ‘ಸಿಂಪ್ಸನ್ಸ್ಗೆ ಭವಿಷ್ಯ ಗೊತ್ತಿತ್ತು’ ಎನ್ನುವುದಕ್ಕಿಂತ, ಸಮಾಜದಲ್ಲಿ ಆಗಲೇ ಕಾಣಿಸುತ್ತಿದ್ದ ಬೆಳವಣಿಗೆಗಳನ್ನು ಬರಹಗಾರರು ವ್ಯಂಗ್ಯವಾಗಿ ಚಿತ್ರಿಸಿದ್ದರು; ಅವುಗಳಲ್ಲಿ ಕೆಲವು ನಂತರದ ಘಟನೆಗಳಿಗೆ ಅಚ್ಚರಿಯ ರೀತಿಯಲ್ಲಿ ಹೋಲಿಕೊಂಡಿವೆ ಎನ್ನುವುದು ಹೆಚ್ಚು ಸರಿಯಾದ ವಿವರಣೆ. ಜೊತೆಗೆ, ಇಂದಿನ ಕೃತಕ ಬುದ್ಧಿಮತ್ತೆ ಯುಗದಲ್ಲಿ ತಿರುಚಿದ ಅಥವಾ ಕೃತಕ ದೃಶ್ಯಗಳನ್ನು ನೈಜ ಸಂಚಿಕೆಯಂತೆ ಹರಡುವುದು ಇನ್ನಷ್ಟು ಸುಲಭವಾಗಿದೆ.

ಭಾರತೀಯರ ಅಸಮಾಧಾನಕ್ಕೆ ಗುರಿಯಾಗಿದ್ದ ವಿವಾದಾತ್ಮಕ ಪಾತ್ರ ʼಆಪುʼ:

ನರೇಂದ್ರ ಮೋದಿ ಅವರ ಅರ್ಜೆಂಟೀನಾ ಭೇಟಿಗೆ ಸಂಬಂಧಿಸಿದ ವರದಿಗೆ ಸ್ಥಳೀಯ ಮಾಧ್ಯಮವೊಂದು ‘ಆಪು’ ಪಾತ್ರವನ್ನು ಬಳಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಯಾಕೆಂದರೆ, ಆಪು ಪಾತ್ರವನ್ನು ಭಾರತೀಯರು ಮತ್ತು ದಕ್ಷಿಣ ಏಷ್ಯನ್ನರನ್ನು ರೂಢಿಗತವಾಗಿ ಚಿತ್ರಿಸುತ್ತದೆ ಎಂಬ ಟೀಕೆ ಹಿಂದಿನಿಂದಲೂ ಇದೆ.

ಭಾರತೀಯ ಮೂಲದ ಕಾಮೇಡಿಯನ್ ಹರಿ ಕೊಂಡಬೋಲು ಅವರ ‘ದಿ ಪ್ರಾಬ್ಲಂ ವಿತ್ ಆಪು’ ಸಾಕ್ಷ್ಯಚಿತ್ರ ಈ ಚರ್ಚೆಯನ್ನು ಮತ್ತಷ್ಟು ಮುನ್ನೆಲೆಗೆ ತಂದಿತ್ತು. ಈ ವಿವಾದಾತ್ಮಕ ಪಾತ್ರದ ಮೂಲಕ ಭಾರತೀಯರ ವಿರುದ್ಧದ ಜನಾಂಗೀಯ ನಿಂದನೆ ಅಥವಾ ವರ್ಣಭೇದ ಮಾಡಲಾಗುತ್ತದೆ ಎಂಬ ಆರೋಪವೂ ಕೇಳಿಬಂದಿತ್ತು.

Tags

DonaldTrump
share
ವಾರ್ತಾಭಾರತಿ
ವಾರ್ತಾಭಾರತಿ
Next Story
X