Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಂಗಳೂರು ಸೆಂಟ್ರಲ್-ಜಂಕ್ಷನ್ ನಿಲ್ದಾಣಗಳ...

ಮಂಗಳೂರು ಸೆಂಟ್ರಲ್-ಜಂಕ್ಷನ್ ನಿಲ್ದಾಣಗಳ ಮಧ್ಯೆ ಹಳಿ ಡಬ್ಲಿಂಗ್ ಬೇಕು

ರೈಲ್ವೆ ಜಾಗೃತಿ

-ಒಲಿವರ್ ಡಿ’ ಸೋಜಾ, ಮುಂಬೈ-ಒಲಿವರ್ ಡಿ’ ಸೋಜಾ, ಮುಂಬೈ16 Dec 2023 11:35 AM IST
share
ಮಂಗಳೂರು ಸೆಂಟ್ರಲ್-ಜಂಕ್ಷನ್ ನಿಲ್ದಾಣಗಳ ಮಧ್ಯೆ ಹಳಿ ಡಬ್ಲಿಂಗ್ ಬೇಕು

ದಕ್ಷಿಣ ರೈಲ್ವೆಯು ಗೊತ್ತಿದ್ದೂ ಕೂಡ ಭಾರತೀಯ ರೈಲ್ವೆ ನಿಯಮಾವಳಿಗಳನ್ನು ಪಾಲಿಸದೆ, ಗಾಳಿಗೆ ತೂರಿದ್ದು ವಾರದ ಹೆಚ್ಚಿನ ದಿನಗಳಲ್ಲಿ ಕಂಡು ಬರುತ್ತಿದೆ. ಮೊನ್ನೆ ದಿನಾಂಕ 10.12.2023ರಂದು ಪುತ್ತೂರಿನಿಂದ ಮಂಗಳೂರು ಸೆಂಟ್ರಲಿಗೆ ಬರುವ ರೈಲು ಬೆಳಗ್ಗೆ 8:50 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಿತ್ತು. ಇಲ್ಲಿ ಈ ರೈಲಿಗೆ ಕೇವಲ ಒಂದು ನಿಮಿಷದ ಪ್ರಯಾಣಿಕರ ನಿಲುಗಡೆ ಇದೆ. ಆದರೆ ಬೆಳಗ್ಗೆ 8:50ಕ್ಕೆ ತಲುಪಿದ ರೈಲನ್ನು ಇದೇ ನಿಲ್ದಾಣದಲ್ಲಿ 9:25ರ ತನಕ ನಿಲುಗಡೆಗೊಳಿಸಲಾಯಿತು.

ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಹೊರಟ ರೈಲು ಸಂಖ್ಯೆ 12619 ಮತ್ಸ್ಯಗಂಧ ರೈಲು 2:15 ಗಂಟೆ ತಡವಾಗಿ ಆಗಮಿಸಿತ್ತು. ಈ ರೈಲಿಗೆ, ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ, ಪುತ್ತೂರು ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲನ್ನು ಹಿಂದಿಕ್ಕಿ ಮುಂದೆ ಹೋಗಲು, 35 ನಿಮಿಷ ನಿಲ್ಲಿಸುವ ಅವಶ್ಯಕತೆ ಏನಿತ್ತು? ಪ್ಯಾಸೆಂಜರ್ ರೈಲು ಜಂಕ್ಷನ್ ನಿಲ್ದಾಣದಿಂದ ಕೇವಲ ಹತ್ತೇ ನಿಮಿಷದಲ್ಲಿ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ತಲುಪುತ್ತದೆ. ಆಗ ಪ್ರಯಾಣಿಕರು ಇಳಿದು ತಮ್ಮ ಗಮ್ಯ ಸ್ಥಳಕ್ಕೆ ಬಸ್ಸು, ಆಟೋ ಹಿಡಿದು ಮನೆ ಸೇರುತ್ತಿದ್ದರು.

9:25 ಗಂಟೆಗೆ ತಡವಾಗಿ ಹೊರಟ ಈ ಪ್ಯಾಸೆಂಜರ್ ರೈಲನ್ನು; ಮಂಗಳೂರು ಸೆಂಟ್ರಲ್ ಔಟರ್ ಕ್ಯಾಬಿನ್‌ನಲ್ಲಿ, ಮಾರ್ಗನ್ ಗೇಟ್ ರಸ್ತೆ ಮೇಲ್ ಸೇತುವೆಯ ಬಳಿ, ಪುದುಚೇರಿ - ಮಂಗಳೂರು ಸೆಂಟ್ರಲ್ ರೈಲು ಮುಂದೆ ಹೋಗಲು ಪುನಃ ನಿಲ್ಲಿಸಲಾಯಿತು. ಹೀಗೆ ನಿಂತೂ ಒಂಭತ್ತು ಗಂಟೆಗೆ ತಲುಪಬೇಕಾದ ಪುತ್ತೂರು ರೈಲು, ಒಂಭತ್ತು ಮುಕ್ಕಾಲು ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪಿತು.

ಭಾರತೀಯ ರೈಲು ನಿಯಮಾವಳಿಗಳ ಪ್ರಕಾರ, ಸರಿಯಾದ ಸಮಯದಲ್ಲಿ ಓಡುವ ರೈಲನ್ನು, ತಡವಾಗಿ ಬರುವ ರೈಲಿಗಾಗಿ ನಿಲ್ಲಿಸಬಾರದು. ಆದರೆ ಈ ನಿಯಮವನ್ನು ರೈಲು ಅಧಿಕಾರಿಗಳು ಸಾರಾಸಗಟಾಗಿ ಗಾಳಿಗೆ ತೂರಿದ್ದಾರೆ. ಕಳೆದ ಶನಿವಾರ 2-12-2023ರಂದು ಇದೇ ರೀತಿ ತಡವಾಗಿ ಬಂದ ರೈಲಿಗೆ ಪ್ರಾಶಸ್ತ್ಯ ನೀಡಿ, ಪ್ಯಾಸೆಂಜರ್ ರೈಲನ್ನು ತಡೆ ಹಿಡಿದಿದ್ದರು ಎನ್ನಲಾಗಿದೆ.

ಪರಿಹಾರವೇನು?

ಕಳೆದ ಸುಮಾರು ಐದು ದಶಕಗಳಿಂದ ಮಂಗಳೂರು ಜಂಕ್ಷನ್ ಹಾಗೂ ಸೆಂಟ್ರಲ್ ರೈಲು ನಿಲ್ದಾಣಗಳ ಮಧ್ಯೆ 1.8 ಕಿ.ಮೀ. ಡಬ್ಲಿಂಗ್ ಮಾಡದೆ ಅರ್ಧ ಕೆಲಸ ಮಾಡಿ ಬಿಟ್ಟಿದ್ದಾರೆ. ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ನೇತ್ರಾವತಿ ಸೇತುವೆಯ ತನಕ ಡಬ್ಲಿಂಗ್ ಮಾಡಿ; ಮಂಗಳೂರು ಜಂಕ್ಷನ್ ಹಾಗೂ ಸೆಂಟ್ರಲ್ ನಡುವೆ ಡಬ್ಲಿಂಗ್ ಯಾಕೆ ಮಾಡಿಲ್ಲ ? ಕೇರಳಕ್ಕೆ ಹೋಗುವ ಎಲ್ಲಾ ರೈಲುಗಳಿಗೆ ಡಬ್ಲಿಂಗ್ ಇದೆ. ಆದರೆ ಕನ್ನಡಿಗರು ಪ್ರಯಾಣಿಸುವ ಮಂಗಳೂರು ಜಂಕ್ಷನ್‌ನಿಂದ 6 ಕಿ.ಮೀ. ದೂರದ ಸೆಂಟ್ರಲ್ ನಿಲ್ದಾಣದ 1.8 ಕಿ.ಮೀ. ದೂರವನ್ನು ಮಾತ್ರ ಏಕ ಹಳಿಯನ್ನಾಗಿಯೇ ದಶಕಗಳ ಕಾಲ ಇಟ್ಟದ್ದು ಏಕೆ?

ಇಂತಹ ಮಲತಾಯಿ ಧೋರಣೆ ಯಾಕೆ?

ಒಂದು ವೇಳೆ ಡಬ್ಲಿಂಗ್ ಇದ್ದರೆ ಆಗ ಮೊನ್ನೆ ಪುತ್ತೂರು ಪ್ಯಾಸೆಂಜರ್ ರೈಲನ್ನು 35 ನಿಮಿಷಗಳ ಕಾಲ ತಡೆ ಹಿಡಿಯುವ ಅವಶ್ಯಕತೆ ಇರುತ್ತಿರಲಿಲ್ಲ. ಎರಡು ರೈಲು ನಿಲ್ದಾಣಗಳ ಮಧ್ಯೆ ಓಡಾಡುವ ಎಲ್ಲಾ ರೈಲುಗಳು ಯಾವುದೇ ಅಡ್ಡಿಯಿಲ್ಲದೆ ಕ್ಲಪ್ತ ಸಮಯದಲ್ಲಿ ಗಮ್ಯ ಸ್ಥಾನವನ್ನು ತಲುಪಬಹುದಿತ್ತು. ಇದೀಗ, ಸೆಂಟ್ರಲ್-ಜಂಕ್ಷನ್ ಮಧ್ಯೆ, ಅತ್ತಿಂದಿತ್ತ ಸಂಚರಿಸಲು; ಒಂದು ರೈಲು ದಾಟಿದ ಬಳಿಕವಷ್ಟೇ ಮತ್ತೊಂದು ರೈಲು ತೆರಳುವ ಪ್ರಮೇಯವಿದ್ದು; ರೈಲು ಪ್ರಯಾಣಿಕರಿಗೆ ಕಾಯುವ ಪರಿಸ್ಥಿತಿ ಬಂದಿದೆ. ಮಂಗಳೂರು ಜಂಕ್ಷನ್‌ನಿಂದ ಒಂದು ರೈಲು ಹೊರಟು, ಅದು ನಿಗದಿತ ದೂರ ತಲುಪಿದ ಬಳಿಕವಷ್ಟೇ ಸೆಂಟ್ರಲ್ ನಿಲ್ದಾಣದಿಂದ ಇನ್ನೊಂದು ರೈಲು ಬರಲು ಅವಕಾಶ ಸಿಗುತ್ತಿದೆ. ರೈಲು ಹಳಿ ದ್ವಿಗುಣಗೊಳಿಸಿದರೆ ರೈಲು ಸಂಚಾರವು ನಿರಂತಕವಾಗಲಿದೆ.

ಹೇಗೂ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಹೊಸ 4 ಹಾಗೂ 5ನೇ ಪ್ಲ್ಯಾಟ್ ಫಾರ್ಮ್ ಸಿದ್ಧವಾಗಿದೆ. ವಾರ್ಷಿಕ ಕೋಟ್ಯಂತರ ರೂ. ವ್ಯಯಿಸುವ ದಕ್ಷಿಣ ರೈಲ್ವೆಯು ಜಂಕ್ಷನ್ ಹಾಗೂ ಸೆಂಟ್ರಲ್ ಮಧ್ಯದ 1.8 ಕಿ.ಮೀ. ಹಳಿ ಡಬ್ಲಿಂಗ್ ಮಾಡುವ ಇಚ್ಛಾಸಕ್ತಿ ಹೊಂದಿಲ್ಲ. ರೈಲು ಪ್ರಯಾಣಿಕರನ್ನು ಕಾಯಿಸುವ ಬದಲು ಹಾಗೂ ರೈಲು ಸೇವೆಯ ವ್ಯತ್ಯಯವನ್ನು ತಪ್ಪಿಸುವ; ಡಬ್ಲಿಂಗ್ ಕೆಲಸವನ್ನು ಸ್ಥಳೀಯ ಸಂಸದರು ಈ ಕೂಡಲೇ ಮಾಡಿಸಬೇಕಾಗಿದೆ.

share
-ಒಲಿವರ್ ಡಿ’ ಸೋಜಾ, ಮುಂಬೈ
-ಒಲಿವರ್ ಡಿ’ ಸೋಜಾ, ಮುಂಬೈ
Next Story
X