ಗುಂಪು ಟಿಕೆಟ್ ಬುಕಿಂಗ್ ನಿಯಮ ಪರಿಷ್ಕರಿಸಿದ ರೈಲ್ವೆ; ಹೊಸ ನಿಯಮಗಳೇನು?

ಸಾಂದರ್ಭಿಕ ಚಿತ್ರ
2026ರ ನ. 18ರಂದು ನೈಋತ್ಯ ರೈಲ್ವೆ (SWR) ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಬೃಹತ್ ಮತ್ತು ಗುಂಪು ಬುಕಿಂಗ್ ಗಳಿಗೆ ಇದ್ದ ಬರ್ತ್ ಗಳ ಸಂಖ್ಯೆಯ ಮೇಲಿನ ನಿರ್ದಿಷ್ಟ ಮಿತಿಯನ್ನು ತೆಗೆದುಹಾಕಲಾಗಿದೆ.
ಮದುವೆಗಳು, ಶೈಕ್ಷಣಿಕ ಪ್ರವಾಸಗಳು, ತೀರ್ಥಯಾತ್ರೆಗಳು, ಕ್ರೀಡಾಕೂಟಗಳು ಮತ್ತು ಸಾಂಸ್ಕೃತಿಕ ಉದ್ದೇಶಗಳಿಗಾಗಿ ಜೊತೆಗೂಡಿ ಪ್ರಯಾಣಿಸುವ ಗುಂಪುಗಳಿಗೆ ರೈಲು ಟಿಕೆಟ್ಗಳನ್ನು ಬೃಹತ್ ಪ್ರಮಾಣದಲ್ಲಿ ಬುಕ್ ಮಾಡುವ ನಿಯಮಗಳನ್ನು ನೈಋತ್ಯ ರೈಲ್ವೆ (SWR) ಇತ್ತೀಚೆಗೆ ಪರಿಷ್ಕರಿಸಿದೆ.
ಹೊಸ ನಿಯಮಗಳ ಪ್ರಕಾರ, ಪ್ರಮುಖ ಕಾಯ್ದಿರಿಸುವಿಕೆ ಕೇಂದ್ರಗಳಲ್ಲಿ ಗುಂಪು ಬುಕಿಂಗ್ ಗಳನ್ನು ಬೆಳಿಗ್ಗೆ 9 ಗಂಟೆಯಿಂದ ಸ್ವೀಕರಿಸಲಾಗುತ್ತದೆ. ಇದು ಸಾಮಾನ್ಯ ಪ್ರಯಾಣಿಕರಿಗೆ ಮುಂಗಡ ಕಾಯ್ದಿರಿಸುವಿಕೆ ಅವಧಿ ಪ್ರಾರಂಭವಾದ ಒಂದು ಗಂಟೆಯ ನಂತರದ ಸಮಯವಾಗಿದೆ.
ನ. 19ರಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ನೈಋತ್ಯ ರೈಲ್ವೆ ಪ್ರಕಟಿಸಿದ ಸುತ್ತೋಲೆಯ ಪ್ರಕಾರ, “ಪರಿಷ್ಕೃತ ಮಾರ್ಗಸೂಚಿಗಳ ಅನ್ವಯ, ‘ಮುಂಗಡ ಕಾಯ್ದಿರಿಸುವ ಅವಧಿ’ (Advance Reservation Period) ಪ್ರಾರಂಭವಾದ ಒಂದು ಗಂಟೆಯ ನಂತರ, ಅಂದರೆ ಬೆಳಿಗ್ಗೆ 09:00 ಗಂಟೆಯಿಂದ ಪ್ರಯಾಣಿಕರು ನಿಲ್ದಾಣಗಳಲ್ಲಿ ಮಾತ್ರ ಗುಂಪು ಬುಕಿಂಗ್ ಗೆ ಅವಕಾಶ ಪಡೆಯುತ್ತಾರೆ. ಮದುವೆ ಸಮಾರಂಭಗಳು, ಹಬ್ಬಗಳು, ಯಾತ್ರೆಗಳು, ಕ್ರೀಡಾ ತಂಡಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಗೂ ಇದೇ ರೀತಿಯ ಉದ್ದೇಶಗಳಿಗಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ಗರಿಷ್ಠ ಸಂಖ್ಯೆಯ ಪ್ರಯಾಣ ಟಿಕೆಟ್ ಗಳನ್ನು ಬುಕ್ ಮಾಡಿಕೊಳ್ಳಬಹುದು. ಟಿಕೆಟ್ ಗಳನ್ನು ಖಚಿತಗೊಂಡ (Confirmed), ಆರ್ಎಸಿ (RAC) ಹಾಗೂ ಕಾಯುವ ಪಟ್ಟಿಯಲ್ಲಿರುವ (Waitlisted) ಎಲ್ಲಾ ದರ್ಜೆಗಳಲ್ಲಿ ಇದು ಅನ್ವಯಿಸುತ್ತದೆ.”
2026ರ ನ. 18ರಂದು ನೈಋತ್ಯ ರೈಲ್ವೆ (SWR) ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿತು. ಇದರ ಅನ್ವಯ, ಬೃಹತ್ ಮತ್ತು ಗುಂಪು ಬುಕಿಂಗ್ ಗಳಿಗೆ (bulk and group bookings) ಇದ್ದ ಬರ್ತ್ ಗಳ ಸಂಖ್ಯೆಯ ಮೇಲಿನ ನಿರ್ದಿಷ್ಟ ಮಿತಿಯನ್ನು ತೆಗೆದುಹಾಕಲಾಗಿದೆ. ಅಲ್ಲದೆ, ಮಂಗಳೂರು ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿರುವ ಅಧಿಕಾರಿಗಳಿಗೆ ಇಂತಹ ಬುಕಿಂಗ್ ಗಳನ್ನು ನೇರವಾಗಿ ಅನುಮೋದಿಸುವ ಅಧಿಕಾರವನ್ನು ನೀಡಲಾಗಿದೆ.
► ಭಾರತೀಯ ರೈಲ್ವೆ ಮುಂಗಡ ಕಾಯ್ದಿರಿಸುವಿಕೆಗೆ ಅರ್ಜಿ ಸಲ್ಲಿಸುವುದು ಹೇಗೆ?
► ಭಾರತೀಯ ರೈಲ್ವೆ ಗುಂಪು ಬುಕಿಂಗ್ ಗಾಗಿ, ಅರ್ಜಿದಾರರು ತಮ್ಮ ವಿನಂತಿಗಳನ್ನು ನೇರವಾಗಿ ಅಧಿಕೃತ ರೈಲ್ವೆ ಅಧಿಕಾರಿಗಳಿಗೆ ಸಲ್ಲಿಸಬೇಕು. ಈಗ, ಮುಖ್ಯ ಕಾಯ್ದಿರಿಸುವಿಕೆ ಮೇಲ್ವಿಚಾರಕರು (CRS - Chief Reservation Supervisor) ಅಥವಾ ನಿಲ್ದಾಣ ವ್ಯವಸ್ಥಾಪಕರು (SM - Station Manager) ಗುಂಪು ಕಾಯ್ದಿರಿಸುವಿಕೆಗೆ ಅನುಮತಿ ನೀಡುವ ಅಧಿಕಾರ ಹೊಂದಿರುತ್ತಾರೆ.
► ಪ್ರಮುಖ ಸಡಿಲಿಕೆಯಾಗಿ, ಗುಂಪು ಕಾಯ್ದಿರಿಸುವಿಕೆಯ ಅಡಿಯಲ್ಲಿ ಅನುಮತಿಸಲಾದ ಬರ್ತ್ ಗಳ ಸಂಖ್ಯೆಯ ಮೇಲೆ ಇನ್ನು ಮುಂದೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಈ ಹಿಂದೆ ಇದ್ದ ನಿರ್ದಿಷ್ಟ ಮಿತಿಗಳನ್ನು ತೆಗೆದುಹಾಕಲಾಗಿದೆ.
► ಅರ್ಜಿದಾರರು ತಮ್ಮ ಅರ್ಜಿಗಳನ್ನು ನೇರವಾಗಿ ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಬೇಕು. ವಿದೇಶಿ ಪ್ರವಾಸಿಗರು ಹಾಗೂ ಅನಿವಾಸಿ ಭಾರತೀಯರ (NRIs) ಪರವಾಗಿ ಮಾಡಲಾದ ಬುಕಿಂಗ್ ಗಳನ್ನು ಹೊರತುಪಡಿಸಿ, ಉಳಿದ ಯಾವುದೇ ಸಂದರ್ಭಗಳಲ್ಲಿ ಸ್ಥಳೀಯ ಪ್ರವಾಸ ಸಂಸ್ಥೆಗಳಿಂದ (Travel Agencies) ಅರ್ಜಿಗಳನ್ನು ಸಲ್ಲಿಸುವಂತಿಲ್ಲ.
► ಪ್ರಯಾಣದ ಉದ್ದೇಶವನ್ನು ಸ್ಪಷ್ಟವಾಗಿ ನಮೂದಿಸದಿದ್ದರೆ ಅನುಮತಿ ನೀಡಲಾಗುವುದಿಲ್ಲ.
► ಅರ್ಜಿದಾರರು ಅರ್ಜಿ ಸಲ್ಲಿಸುವಾಗ ಎಲ್ಲಾ ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ, ವಿಳಾಸ ಮತ್ತು ಪ್ರಯಾಣದ ಉದ್ದೇಶವನ್ನು ಒದಗಿಸಬೇಕು.
► ಹಿಂದಿರುಗುವ ಪ್ರಯಾಣಕ್ಕೂ ಸಹ ಇದೇ ಕಾಯ್ದಿರಿಸುವಿಕೆ ಕಚೇರಿಯಲ್ಲಿ ಗುಂಪು ಬುಕಿಂಗ್ಗೆ ಅನುಮತಿ ಪಡೆಯಬಹುದು. ಆದರೆ, ಇದನ್ನು ಪ್ರತ್ಯೇಕ ಪ್ರಯಾಣವೆಂದು ಪರಿಗಣಿಸಲಾಗುತ್ತದೆ. ಮುಖ್ಯ ಕಾಯ್ದಿರಿಸುವಿಕೆ ಮೇಲ್ವಿಚಾರಕರು/ನಿಲ್ದಾಣ ವ್ಯವಸ್ಥಾಪಕರು ಅನುಮತಿ ನೀಡಿದ ಎಲ್ಲಾ ಗುಂಪು ಬುಕಿಂಗ್ ಗಳ ಪ್ರತ್ಯೇಕ ದಾಖಲೆ ಪುಸ್ತಕವನ್ನು ನಿರ್ವಹಿಸಬೇಕು.
► ಅರ್ಜಿ ನಮೂನೆ ಮತ್ತು ಪ್ರಯಾಣಿಕರ ಪಟ್ಟಿಯ ಪ್ರತಿ ಪುಟದ ಮೇಲೆ ತಮ್ಮ ಮೊಹರು ಮತ್ತು ಸಹಿಯನ್ನು ಹಾಕಬೇಕು. ಈ ಸೌಲಭ್ಯವು ಅಕ್ರಮ ಗುಂಪುಗಳು ಬರ್ತ್/ಆಸನಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ಕಡಿವಾಣ ಹಾಕಿ, ನೈಜ ಗುಂಪು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಿದೆ.
► ಉಪ ಮುಖ್ಯ ವಾಣಿಜ್ಯ ವ್ಯವಸ್ಥಾಪಕ (ಪ್ರಯಾಣಿಕರ ಸೇವೆಗಳು) ಪಿ. ಕಿರಣ್ ಕುಮಾರ್ ಅವರು ನವೆಂಬರ್ 18ರಂದು ಹೊರಡಿಸಿದ ಸುತ್ತೋಲೆಯಲ್ಲಿ, ಯಾವುದೇ ವರ್ಗದ ಪ್ರಯಾಣದಲ್ಲಿ ಸೀಟುಗಳು/ಬರ್ತ್ಗಳ ಸಂಖ್ಯೆಯ ಮೇಲೆ ಯಾವುದೇ ನಿರ್ಬಂಧಗಳಿಲ್ಲ ಮತ್ತು ಎಲ್ಲಾ ವರ್ಗಗಳಲ್ಲಿ ಗುಂಪು ಬುಕಿಂಗ್ ಗಳನ್ನು ನೀಡಬಹುದು ಎಂದು ತಿಳಿಸಿದ್ದಾರೆ. ಕಾಯ್ದಿರಿಸುವಿಕೆ ಸ್ಥಿತಿಯನ್ನು ಲೆಕ್ಕಿಸದೆ, ಅಂದರೆ ಖಚಿತಗೊಂಡ ಟಿಕೆಟ್ಗಳು ಅಥವಾ ಹಿಂದೆ ಅಸ್ತಿತ್ವದಲ್ಲಿದ್ದ ವೇಟ್ಲಿಸ್ಟ್ ರದ್ದತಿಯ ವಿರುದ್ಧ ಕಾಯ್ದಿರಿಸುವಿಕೆಯೂ ಇದರಲ್ಲಿ ಒಳಗೊಂಡಿದೆ.
► ಬೃಹತ್ ಕಾಯ್ದಿರಿಸುವಿಕೆಯನ್ನು ಅನುಮತಿಸುವಾಗ, ಗುಂಪು ಬುಕಿಂಗ್ ನೆಪದಲ್ಲಿ ಬರ್ತ್ ಗಳ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳದಂತೆ CRS/SMR ಖಚಿತಪಡಿಸಿಕೊಳ್ಳಬೇಕು.
► ಸಾಮಾನ್ಯ ಮುಂಗಡ ಕಾಯ್ದಿರಿಸುವ ಕೌಂಟರ್ ಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಒಂದು ಗಂಟೆಯ ನಂತರ, ಅಂದರೆ ಬೆಳಿಗ್ಗೆ 9 ಗಂಟೆಯಿಂದ ಗುಂಪು ಕಾಯ್ದಿರಿಸುವಿಕೆಗಳಿಗೆ (group bookings) ಅವಕಾಶ ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಕೌಂಟರ್ ಇದ್ದರೆ ಅಲ್ಲಿ, ಅಥವಾ ಸಾಮಾನ್ಯ ಕೌಂಟರ್ಗಳಲ್ಲಿಯೇ ಈ ವ್ಯವಸ್ಥೆ ಕಲ್ಪಿಸಬಹುದು.






