Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 2024ರ ಮಹಾ ಚುನಾವಣೆಯಲ್ಲಿ ಮಹಾಪತನ ಕಂಡ...

2024ರ ಮಹಾ ಚುನಾವಣೆಯಲ್ಲಿ ಮಹಾಪತನ ಕಂಡ ಪ್ರಭಾವೀ ಪ್ರಾದೇಶಿಕ ಪಕ್ಷಗಳು!

ವಾರ್ತಾಭಾರತಿವಾರ್ತಾಭಾರತಿ6 Jun 2024 8:59 PM IST
share
2024ರ ಮಹಾ ಚುನಾವಣೆಯಲ್ಲಿ ಮಹಾಪತನ ಕಂಡ ಪ್ರಭಾವೀ ಪ್ರಾದೇಶಿಕ ಪಕ್ಷಗಳು!

2024ರ ಲೋಕಸಭಾ ಚುನಾವಣೆಯು ಹಲವು ಅನಿರೀಕ್ಷಿತ ತಿರುವುಗಳನ್ನು ತಂದಿದೆ. ಹಲವಾರು ಘಟಾನುಘಟಿ ನಾಯಕರು ಅನಿರೀಕ್ಷಿತವಾಗಿ ಸೋಲನುಭವಿಸಿದ್ದಾರೆ. ಇತಿಹಾಸವನ್ನೇ ಬರೆದಿದ್ದ ಅತ್ಯಂತ ಪ್ರಭಾವೀ ಪ್ರಾದೇಶಿಕ ಪಕ್ಷಗಳು ಊಹೆ ಕೂಡ ಮಾಡಿರದ ಮಟ್ಟಿಗೆ ಪತನ ಕಂಡಿದೆ.

ಒಡಿಶಾದಲ್ಲಿ ಬಿಜು ಜನತಾ ದಳ (ಬಿಜೆಡಿ) ಪತನವಾಗಿದೆ. ನವೀನ್ ಪಟ್ನಾಯಕ್ ಅವರ ಬಿಜೆಡಿ 24 ವರ್ಷಗಳ ಬಳಿಕ ಚುನಾವಣಾ ರಾಜಕಾರಣದಲ್ಲಿ ನೆಲ ಕಚ್ಚಿದೆ. ಬಿಜೆಡಿ ಇಂಥದೊಂದು ಹೀನಾಯ ಸೋಲು ಕಾಣುತ್ತದೆಂದು ಯಾರೂ ಅಂದುಕೊಂಡಿರಲಿಲ್ಲ. ನವೀನ್ ಪಟ್ನಾಯಕ್ ಅವರ ಆಪ್ತ ವಿಕೆ ಪಾಂಡ್ಯನ್ ಕೂಡ ದೊಡ್ಡ ಗೆಲುವಿನ ವಿಶ್ವಾಸದಲ್ಲಿಯೇ ಇದ್ದರು. ಲೋಕಸಭಾ ಸ್ಥಾನಗಳಲ್ಲಿ ಸ್ವಲ್ಪ ಆಚೀಚೆ ಆದರೂ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದೇ ಬರ್ತೀವಿ ಅನ್ನೋ ಗಟ್ಟಿ ನಂಬಿಕೆಯೂ ಅವರಲ್ಲಿತ್ತು. ಆದರೆ ಪ್ರಾದೇಶಿಕ ಪಕ್ಷವಾಗಿ ಅತಿ ದೊಡ್ಡ ಸೋಲನ್ನು ಬಿಜೆಡಿ ಕಂಡಿದೆ.

ಲೋಕಸಭಾ ಸ್ಥಾನಗಳೂ ಬಿಜೆಡಿ ಪಾಲಿಗೆ ಶೂನ್ಯವೇ ಆಗಿದೆ. ವಿಧಾನಸಭಾ ಚುನಾವಣೆಯಲ್ಲೂ ಸೋತು ರಾಜ್ಯದಲ್ಲಿಯೂ ಅದು ಅಧಿಕಾರ ಕಳೆದುಕೊಂಡಿದೆ. ಒಡಿಶಾದಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಬಿಜೆಪಿ ಅಧಿಕಾರಕ್ಕೇರುತ್ತಿದೆ. ಆ ಮೂಲಕ ಪಟ್ನಾಯಕ್ ಯುಗವೇ ಕೊನೆಗೊಂಡಂಥ ಸನ್ನಿವೇಶ ನಿರ್ಮಾಣವಾಗಿದೆ.

21ರಲ್ಲಿ 20 ಲೋಕಸಭಾ ಸ್ಥಾನಗಳು ಬಿಜೆಪಿ ಪಾಲಾಗಿವೆ. ಒಂದನ್ನು ಕಾಂಗ್ರೆಸ್ ಗೆದ್ದಿದೆ. ಬಿಜೆಡಿ ಸೊನ್ನೆ ಸುತ್ತಿದೆ. ಈ ಅನಿರೀಕ್ಷಿತ ಹೊಡೆತದಿಂದ ಅದು ಚೇತರಿಸಿ ಮೇಲೇಳಲು ಬಿಜೆಡಿಗೆ ತುಂಬಾ ಸಮಯ ಬೇಕಾಗಬಹುದು. ಇದುವರೆಗೂ ಒಡಿಶಾದಲ್ಲಿ ಬಿಜೆಪಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಅವಕಾಶ ಸಿಕ್ಕಿರಲಿಲ್ಲ. ಈಗ ಬಿಜೆಡಿಯ ಪತನ ಬಿಜೆಪಿಗೆ ಅಲ್ಲಿ ಅಧಿಕಾರದ ಹೆಬ್ಬಾಗಿಲು ತೆರೆದುಕೊಟ್ಟಿದೆ. ಅಲ್ಲದೇ, ನವೀನ್ ಪಟ್ನಾಯಕ್ ಬಳಿಕ ಬಿಜೆಡಿಯ ಪಕ್ಷದ ಮುಂದಿನ ನಾಯಕ ಯಾರು ಎಂಬ ಬಗ್ಗೆಯೂ ದೊಡ್ಡ ಗೊಂದಲವಿದೆ.

ಅತ್ತ ಪಂಜಾಬ್‌ ನಲ್ಲಿ ಶಿರೋಮಣಿ ಅಕಾಲಿ ದಳ(SAD)ದ್ದೂ ಕರುಣಾಜನಕ ಕಥೆ. ಪಂಜಾಬ್‌ ನಲ್ಲಿ ಒಂದು ಕಾಲದಲ್ಲಿ ಅಸಾಧಾರಣ ಶಕ್ತಿಯಾಗಿದ್ದ ಪಕ್ಷ ಎಸ್ಎಡಿ. ಅದು ಬಿಜೆಪಿಯ ದೀರ್ಘಕಾಲದ ಮೈತ್ರಿ ಪಕ್ಷವಾಗಿತ್ತು. ರೈತರ ಪ್ರತಿಭಟನೆ ಸಂದರ್ಭದಲ್ಲಿ ಬಿಜೆಪಿಯ ಮೈತ್ರಿ ಮುರಿದುಕೊಂಡು ಹೊರಬಂದ ಎಸ್ಎಡಿ ಈಗ ಐತಿಹಾಸಿಕ ಕುಸಿತ ಕಂಡಿದೆ.

ಪಂಜಾಬ್‌ ನಲ್ಲಿ ಕೇವಲ ಒಂದು ಲೋಕಸಭಾ ಸ್ಥಾನವನ್ನು ಮಾತ್ರವೇ ಅದು ಈ ಬಾರಿ ಗೆದ್ದಿದೆ. ಹರ್ಸಿಮ್ರತ್ ಕೌರ್ ಬಾದಲ್ ಅವರು ಬಟಿಂಡಾ ಕ್ಷೇತ್ರದಿಂದ ಗೆದ್ದಿರುವ ಏಕೈಕ ಶಿರೋಮಣಿ ಅಕಾಲಿ ದಳದ ಅಭ್ಯರ್ಥಿ. ಪಕ್ಷದ ಮತ ಪ್ರಮಾಣ ಕೂಡ ಪಂಜಾಬ್‌ ನಲ್ಲಿ ಶೇ.13.43ಕ್ಕೆ ಕುಸಿದಿದೆ.

ಬಹುಜನ ಸಮಾಜ ಪಕ್ಷ (BSP) ದೊಡ್ಡ ಮಟ್ಟಿಗೆ ಪತನ ಕಂಡಿರುವ ಮತ್ತೊಂದು ಪಕ್ಷ. ಒಂದು ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿದ್ದ ಮಾಯಾವತಿಯವರ ಪಕ್ಷದ್ದು ಈ ಬಾರಿ ಶೂನ್ಯ ಸಂಪಾದನೆ. 2019ರಲ್ಲಿನ ಅದರ ಸಾಧನೆಗೆ ಪೂರ್ತಿ ವಿರುದ್ಧವಾಗಿ ಈ ಬಾರಿ ಮಾಯಾವತಿ ಪೂರ್ತಿ ನೇಪಥ್ಯಕ್ಕೆ ಸರಿದಂತಾಗಿದೆ. ಬಿಎಸ್ಪೊಯು ಬಿಜೆಪಿಯ ಬಿ ಟೀಮ್ ಆಗಿ ಕೆಲಸ ಮಾಡುತ್ತಿದೆ ಎಂಬ ಆರೋಪವೂ ಅದರ ವರ್ಚಸ್ಸನ್ನು ಇನ್ನಷ್ಟು ಕುಗ್ಗಿಸಿದೆ. ಚುನಾವಣೆಯ ನಡುವೆಯೇ ಪಕ್ಷದ ನಾಯಕನನ್ನು ವಜಾ ಮಾಡಿದ್ದು, ಈಗ ಹದಿನಾರು ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿನ ಅಂತರಕ್ಕಿಂತ ಹೆಚ್ಚು ಮತವನ್ನು ಬಿಎಸ್ಪಿ ಪಡೆದಿರುವುದು ಆ ಪಕ್ಷದ ವರ್ಚಸ್ಸನ್ನು ಕುಗ್ಗಿಸಿದೆ.

ಮಾಯಾವತಿ ಮತ್ತು ಬಿಎಸ್‌ಪಿ ಭವಿಷ್ಯದ ಕುರಿತ ಚಿಂತನೆಗಳು ನಡೆಯುತ್ತಿವೆ. ಪಕ್ಷದ ಮತಗಳ ಪ್ರಮಾಣ ಕೂಡ ಹಿಂದೆಂದೂ ಕಂಡಿರದಷ್ಟು ಮಟ್ಟಿಗೆ ಕುಸಿದಿದೆ. ಅದು ಈಗ ಉತ್ತರ ಪ್ರದೇಶದ ರಾಜಕೀಯದಲ್ಲಿ ತನ್ನ ಪ್ರಸ್ತುತತೆಯನ್ನೇ ಕಳೆದುಕೊಂಡಂತಾಗಿದೆ. ಅಲ್ಲಿ ಈಗ ಭೀಮ್ ಆರ್ಮಿ ದಲಿತರ ಪಾಲಿನ ಪರ್ಯಾಯ ಶಕ್ತಿಯೆಂಬಂತೆ ಕಾಣಿಸತೊಡಗಿದೆ. ನಗೀನ ಕ್ಷೇತ್ರದಲ್ಲಿ ಗೆದ್ದ ಭೀಮ್ ಆರ್ಮಿಯ ಚಂದ್ರಶೇಖರ್ ಆಝಾದ್ ಅವರದ್ದು ಐತಿಹಾಸಿಕ ಗೆಲುವಾಗಿದೆ.

ಮಾಯಾವತಿಯವರು ಉತ್ತರಪ್ರದೇಶದ ಪ್ರಯಾಗ್ರಾಜ್ ಮೊದಲಾಡೆಗೆ ನಡೆದ ದಲಿತರ ಹತ್ಯೆಯಂಥ ಪ್ರಕರಣಗಳ ವಿಚಾರದಲ್ಲಿ ತೋರಿದ ಧೋರಣೆಯು ಅವರು ಬಿಜೆಪಿಯ ಜೊತೆಗೆ ಒಗ್ಗಿಕೊಂಡಂಥ ಸುಳಿವು ನೀಡಿತ್ತು. ಬಿಜೆಪಿಯ ಭಯ, ಅದು ತೋರಿಸಿದ್ದ ಈಡಿ, ಸಿಬಿಐನಂಥ ತನಿಖಾ ಏಜನ್ಸಿಗಳ ತೂಗುಗತ್ತಿಯ ಭಯ ಇವೆಲ್ಲವೂ ಮಾಯಾವತಿಯವರ ಸಾಮರ್ಥ್ಯವನ್ನು ಕಸಿದಿದ್ದವು.

ಬಿಜೆಪಿಯ ಹುಕುಂಗಳಿಗೆ ಒಳಗೊಳಗೇ ಮಣಿಯುತ್ತ ನಡೆದದ್ದು ಮಾಯಾವತಿಯವರ ದೊಡ್ಡ ಹಿನ್ನಡೆಗೆ ಕಾರಣ ಎಂದು ವಿಶ್ಲೇಶಿಸಲಾಗುತ್ತಿದೆ. ಕೆಲವೆಡೆ ಬಿಎಸ್ಪಿ ಅಭ್ಯರ್ಥಿಗಳು 25 ಸಾವಿರ, 39 ಸಾವಿರ ಮತಗಳನ್ನಷ್ಟೇ ಪಡೆದಿದ್ದಾರೆ. ಈ ಕಳಪೆ ಸಾಧನೆಯು ಬಿಎಸ್ಪಿಯ ದುರ್ದೆಸೆಯನ್ನು ತೋರಿಸುವಂತಿದೆ.

ದಕ್ಷಿಣದ ರಾಜ್ಯಗಳಲ್ಲಿನ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳ ಹಿನ್ನಡೆಯೂ ಗಮನಿಸುವಂಥದ್ದೇ. ತಮಿಳುನಾಡಿನಲ್ಲಿ ಎಐಎಡಿಎಂಕೆ ಭಾರೀ ನಿರೀಕ್ಷೆಯ ಹೊರತಾಗಿಯೂ ದೊಡ್ಡ ಹಿನ್ನಡೆ ಕಂಡಿದೆ. ಈ ಬಾರಿ ಎಐಎಡಿಎಂಕೆ ಪಕ್ಷವು ಒಂದೇ ಒಂದು ಲೋಕಸಭಾ ಸ್ಥಾನವನ್ನೂ ಪಡೆಯಲು ಸಾಧ್ಯವಾಗಿಲ್ಲ. ಇದು ಅದರ ಪಾಲಿಗೆ ಬಹಳ ದೊಡ್ಡ ಹಿನ್ನಡೆಯಾಗಿದೆ. ಆದರೂ 24 ಕ್ಷೇತ್ರಗಳಲ್ಲಿ ಅದು ಎರಡನೇ ಸ್ಥಾನದಲ್ಲಿ ಬಂದಿರುವುದರಿಂದ, ಮತ್ತೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿ ( BRS ) ಹಿನ್ನಡೆ ಕಂಡಿದೆ. ಕೆಸಿಆರ್ ಅವರ BRS ಸಂಪೂರ್ಣ ಪತನವಾಗಿದೆ. ಅಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಗಣನೀಯವಾಗಿ ಸ್ಥಾನ ಹೆಚ್ಚಿಸಿಕೊಂಡಿವೆ. BRS ಮತ ಹಂಚಿಕೆಯ ಪ್ರಮಾಣ ಶೇ.41ರಿಂದ ಶೇ.16ಕ್ಕೆ ಕುಸಿದಿದೆ!

ಹಾಗಂತ BRS ರಾಜಕೀಯವಾಗಿ ಅಪ್ರಸ್ತುತವಾಗುವುದಿಲ್ಲ. ವಿಶ್ಲೇಷಕರು ಹೇಳುವ ಪ್ರಕಾರ, ಆ ಪಕ್ಷದ ಹೋರಾಟ ಮುಂದುವರಿಯಲಿದೆ. ಈ ರೀತಿಯ ಹೊಡೆತಗಳಿಂದ ಚೇತರಿಸಿ ಎದ್ದು ನಿಲ್ಲಬಲ್ಲ ತಾಕತ್ತನ್ನು BRS ಹೊಂದಿದೆ.

ಎಐಎಡಿಎಂಕೆ ಮತ್ತು BRS ಎರಡೂ ತಮ್ಮ ಈ ಪತನವನ್ನು ಮೀರಿ ಹೊಸ ಶಕ್ತಿ ಪಡೆಯಲಿವೆ ಎಂದೇ ಚುನಾವಣಾ ಪರಿಣಿತರು ನಂಬುತ್ತಾರೆ. ಎಐಎಡಿಎಂಕೆಯು 2026ರ ವಿಧಾನಸಭಾ ಚುನಾವಣೆಯ ಕಡೆ ತನ್ನ ಗಮನವನ್ನು ಇಟ್ಟುಕೊಂಡು ಆ ಗುರಿಯೊಂದಿಗೆ ಕೆಲಸ ಮಾಡುತ್ತಿದೆ ಎಂಬುದನ್ನೂ ಇಲ್ಲಿ ಗಮನಿಸಬಹುದು. ಆದರೆ ಒಡಿಶಾದಲ್ಲಿ ಬಿಜೆಡಿ ಹಾಗೂ ಯುಪಿಯಲ್ಲಿ ಬಿಎಸ್ಪಿ ಕಂಡಿರುವ ಪತನಗಳು ಮಾತ್ರ ಆ ಪಕ್ಷಗಳಿಗೆ ಬಹಳ ಕಳವಳಕಾರಿಯಾದ ವಿದ್ಯಮಾನಗಳಾಗಿವೆ.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X