ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಪಡೆಯುವುದು ಹೇಗೆ?

Photo Credit : PTI
ಕಾರ್ಯಕ್ರಮಗಳ ವೀಕ್ಷಣೆಗೆ ಆಸಕ್ತಿ ಇರುವವರು ರಕ್ಷಣಾ ಸಚಿವಾಲಯದ ಆಮಂತ್ರಣ ಪೋರ್ಟಲ್ ಮೂಲಕ ಅಥವಾ ನಿಗದಿತ ಕೌಂಟರ್ಗಳಲ್ಲಿ ಟಿಕೆಟ್ ಪಡೆಯಬಹುದಾಗಿದೆ.
ರಕ್ಷಣಾ ಇಲಾಖೆ ಗಣರಾಜ್ಯೋತ್ಸವ ಪರೇಡ್ ಗೆ ಟಿಕೆಟ್ ಬುಕಿಂಗ್ ಅನ್ನು ತೆರೆದಿದೆ. ಜನವರಿ 26ರ ಗಣರಾಜ್ಯೋತ್ಸವ ಮೆರವಣಿಗೆ ಜೊತೆಗೆ ಜನವರಿ 28ರಂದು ನಡೆಯುವ ಬೀಟಿಂಗ್ ರಿಟ್ರೀಟ್ನ ಫುಲ್ ಡ್ರೆಸ್ ರಿಹರ್ಸಲ್ ಮತ್ತು ಜನವರಿ 29ರಂದು ನಡೆಯುವ ಬೀಟಿಂಗ್ ರಿಟ್ರೀಟ್ ಸಮಾರಂಭಕ್ಕೂ ಟಿಕೆಟ್ಗಳನ್ನು ಬುಕಿಂಗ್ ಮಾಡಲು ತೆರೆಯಲಾಗಿದೆ.
2026 ಜನವರಿ 5ರಿಂದ ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಟಿಕೆಟ್ಗಳನ್ನು ಖರೀದಿಸಬಹುದು. ಕಾರ್ಯಕ್ರಮಗಳ ವೀಕ್ಷಣೆಗೆ ಆಸಕ್ತಿ ಇರುವವರು ರಕ್ಷಣಾ ಸಚಿವಾಲಯದ ಆಮಂತ್ರಣ ಪೋರ್ಟಲ್ ಮೂಲಕ ಅಥವಾ ನಿಗದಿತ ಕೌಂಟರ್ಗಳಲ್ಲಿ ಟಿಕೆಟ್ ಪಡೆಯಬಹುದಾಗಿದೆ.
ಯಾವಾಗ ಮತ್ತು ಹೇಗೆ ಟಿಕೆಟ್ ಬುಕ್ ಮಾಡಬಹುದು?
2026 ಜನವರಿ 5ರಿಂದಲೇ ಗಣರಾಜ್ಯೋತ್ಸವ ಸಂಬಂಧಿತ ಕಾರ್ಯಕ್ರಮಗಳ ಟಿಕೆಟ್ ಬುಕಿಂಗ್ ಅನ್ನು ತೆರೆಯಲಾಗಿದೆ. ರಕ್ಷಣಾ ಸಚಿವಾಲಯದ ಆಮಂತ್ರಣ ಪೋರ್ಟಲ್ www.aamantran.mod.gov.in ಮೂಲಕ ನೋಂದಣಿ ಮಾಡಿ ಆನ್ಲೈನ್ನಲ್ಲಿ ಟಿಕೆಟ್ ಪಡೆಯಬಹುದು. ದೇಶಾದ್ಯಂತ ಯಾರು ಬೇಕಾದರೂ 2026 ಜನವರಿ 14ರವರೆಗೆ ಟಿಕೆಟ್ ಪಡೆಯಬಹುದು. ನಿತ್ಯವೂ ಸೀಮಿತ ಸಂಖ್ಯೆಯ ಟಿಕೆಟ್ ಮಾರಾಟವಾಗಲಿದೆ. ಟಿಕೆಟ್ ಬೆಳಿಗ್ಗೆ 9 ಗಂಟೆಯಿಂದಲೇ ಖರೀದಿಸಬಹುದು. ದಿನವೊಂದಕ್ಕೆ ನಿಗದಿತವಾಗಿರುವ ಸೀಮಿತ ಸಂಖ್ಯೆಯ ಟಿಕೆಟ್ಗಳು ಮುಗಿಯುವವರೆಗೂ ಮಾರಾಟ ಮಾಡಲಾಗುತ್ತದೆ. ಬುಕ್ ಮಾಡಿದ ನಂತರ ಕಾರ್ಯಕ್ರಮಕ್ಕೆ ಹೋಗುವಾಗ ಅದೇ ಫೋಟೋ ಗುರುತಿನ ಚೀಟಿಯನ್ನು ಹಿಡಿದುಕೊಂಡಿರಬೇಕು. ಎಲ್ಲಾ ಮೂರು ಕಾರ್ಯಕ್ರಮಗಳಿಗೂ ಗುರುತಿನ ಚೀಟಿಯನ್ನು ಜೊತೆಯಲ್ಲಿ ಕೊಂಡೊಯ್ಯಬೇಕು.
ದಿಲ್ಲಿಯಲ್ಲಿ ಟಿಕೆಟ್ ಖರೀದಿಸುವುದು ಹೇಗೆ?
ಆಫ್ಲೈನ್ನಲ್ಲಿ ದಿಲ್ಲಿಯಲ್ಲಿ ಆರು ನಿಯೋಜಿತ ಕೌಂಟರ್ಗಳಲ್ಲಿ ಜನವರಿ 5ರಿಂದ ಜನವರಿ 14ರವರೆಗೆ ಟಿಕೆಟ್ ಮಾರಾಟವಾಗಲಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 5 ಗಂಟೆಯವರೆಗೆ ಟಿಕೆಟ್ ಖರೀದಿಸಬಹದು.
ಆರು ನಿಯೋಜಿತ ಸ್ಥಳಗಳು ಯಾವುವು?
* ಸೇನಾ ಭವನ (ಗೇಟ್ ಸಂಖ್ಯೆ 5 ರ ಹತ್ತಿರ, ಬೌಂಡರಿ ವಾಲ್ ಒಳಗೆ)
* ಶಾಸ್ತ್ರಿ ಭವನ (ಗೇಟ್ ಸಂಖ್ಯೆ 3 ರ ಹತ್ತಿರ, ಬೌಂಡರಿ ವಾಲ್ ಒಳಗೆ)
* ಜಂತರ್ ಮಂತರ್ (ಮುಖ್ಯ ದ್ವಾರ, ಬೌಂಡರಿ ವಾಲ್ ಒಳಗೆ)
* ಸಂಸತ್ ಭವನ (ರಿಸೆಪ್ಷನ್ ಬಳಿ)
* ರಾಜೀವ್ ಚೌಕ್ ಮೆಟ್ರೋ ನಿಲ್ದಾಣ (ಡಿ ಬ್ಲಾಕ್, ಗೇಟ್ ಸಂಖ್ಯೆ 3 ಮತ್ತು 4 ರ ಬಳಿ)
* ಕಾಶ್ಮೀರಿ ಗೇಟ್ ಮೆಟ್ರೋ ನಿಲ್ದಾಣ (ಕಾನ್ಕೋರ್ಸ್ ಲೆವೆಲ್, ಗೇಟ್ ಸಂಖ್ಯೆ 8ರ ಬಳಿ)
ಕಾರ್ಯಕ್ರಮಗಳಿಗೆ ಟಿಕೆಟ್ ದರವೆಷ್ಟು?
ಗಣರಾಜ್ಯೋತ್ಸವ ದಿನದ ಪರೇಡ್ ಗೆ (ಜನವರಿ 26): 100 ರೂ. ಮತ್ತು ರೂ. 20
ಬೀಟಿಂಗ್ ರಿಟ್ರೀಟ್ನ ಫುಲ್ ಡ್ರೆಸ್ ರಿಹರ್ಸಲ್ (ಜನವರಿ 28) 20 ರೂ.
ಬೀಟಿಂಗ್ ರಿಟ್ರೀಟ್ ಸಮಾರಂಭ (ಜನವರಿ 29): 100 ರೂ.
ಟಿಕೆಟ್ ಖರೀದಿಗೆ ಅಗತ್ಯವಿರುವ ಗುರುತಿನ ಚೀಟಿಗಳೇನು?
ಖರೀದಿದಾರರು ತಮ್ಮ ಫೋಟೋ ಇರುವ ಗುರುತಿನ ಚೀಟಿಯನ್ನು ನೀಡಬೇಕು. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಪಾಸ್ ಪೋರ್ಟ್, ಕೇಂದ್ರ ಅಥವಾ ರಾಜ್ಯ ಸರ್ಕಾರ ನೀಡಿದ ಗುರುತಿನ ಚೀಟಿಗಳು. ಟಿಕೆಟ್ ಖರೀದಿಸುವಾಗ ಸಲ್ಲಿಸಿದ ಆದೇ ಗುರುತಿನ ಚೀಟಿಯನ್ನು ಕಾರ್ಯಕ್ರಮದಲ್ಲಿ ಹಾಜರಿರುವಾಗಲೂ ಹೊಂದಿರಬೇಕು.
ಕೃಪೆ: indiatoday.in







