ರಾಜ್ಯದಲ್ಲಿ ಹೆಚ್ಚುತ್ತಿರುವ ಎನ್ಡಿಪಿಎಸ್ ಪ್ರಕರಣಗಳು: ಮೂರು ವರ್ಷಗಳಲ್ಲಿ 25,196 ಪ್ರಕರಣಗಳು ದಾಖಲು
34,896 ಆರೋಪಿಗಳ ವಶ: 22,450 ಚಾರ್ಜ್ ಶೀಟ್ ಸಲ್ಲಿಕೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ರಾಜ್ಯಾದ್ಯಂತ ಮಾದಕ ವಸ್ತುಗಳ ಮಾರಾಟ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, 2023ರಿಂದ 2026ರವರೆಗೆ 25,196 ಎನ್ಡಿಪಿಎಸ್ (ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ) ಪ್ರಕರಣಗಳು ದಾಖಲಾಗಿವೆ. ಒಟ್ಟು 34,896 ಆರೋಪಿಗಳನ್ನು ವಶಕ್ಕೆ ಪಡೆದಿದ್ದು, 22,450 ಚಾರ್ಜ್ಶೀಟ್ಗಳನ್ನು ಸಲ್ಲಿಕೆ ಮಾಡಲಾಗಿದೆ. 2023ರಿಂದ 2026ರವರೆಗೆ ಎನ್ಡಿಪಿಎಸ್ ಪ್ರಕರಣಗಳ ಸಂಖ್ಯೆಯಲ್ಲಿ ಶೇ.12.41ರಷ್ಟು ಹೆಚ್ಚಾಗಿದೆ.
ರಾಜ್ಯಾದ್ಯಂತ 2023ರಲ್ಲಿ 6,768 ಎನ್ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು, 9,201 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾದಕ ವಸ್ತು ಮಾರಾಟ ಮಾಡುವ ಆರೋಪಿಗಳ ವಿರುದ್ಧ 6,740 ಚಾರ್ಜ್ಶೀಟ್ಗಳನ್ನು ಸಲ್ಲಿಕೆ ಮಾಡಲಾಗಿದೆ. 2024ರಲ್ಲಿ 4,105 ಪ್ರಕರಣಗಳು ದಾಖಲಾಗಿದ್ದು, 6,392 ಮಂದಿಯನ್ನು ಬಂಧಿಸಿ, 4,059 ಚಾರ್ಜ್ಶೀಟ್ಗಳನ್ನು ಸಲ್ಲಿಕೆ ಮಾಡಲಾಗಿದೆ. 2025ರಲ್ಲಿ 6,715 ಪ್ರಕರಣಗಳು ದಾಖಲಾಗಿದ್ದು, 9,172 ಮಂದಿಯನ್ನು ವಶಕ್ಕೆ ಪಡೆದು, 6,402 ಚಾರ್ಜ್ಶೀಟ್ಗಳನ್ನು ಸಲ್ಲಿಕೆ ಮಾಡಲಾಗಿದೆ. 2026ರ ಜುಲೈ ಅಂತ್ಯದ ವೇಳೆಗೆ 7,608 ಪ್ರಕರಣಗಳು ದಾಖಲಾಗಿದ್ದು, 10,131 ಆರೋಪಿಗಳನ್ನು ಬಂಧಿಸಲಾಗಿದೆ. 5,249 ಚಾರ್ಜ್ಶೀಟ್ಗಳನ್ನು ಸಲ್ಲಿಕೆ ಮಾಡಲಾಗಿದೆ.
2023ರಿಂದ ಇಲ್ಲಿಯವರೆಗೆ ಬೆಂಗಳೂರು ನಗರವೊಂದರಲ್ಲೇ 8,808 ಎನ್ಡಿಪಿಎಸ್ ಪ್ರಕರಣ ದಾಖಲಾಗಿದ್ದು, 11,580 ಆರೋಪಿಗಳನ್ನು ಬಂಧಿಸಿ, 7,674 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಮೈಸೂರು ನಗರದಲ್ಲಿ 839 ಪ್ರಕರಣಗಳಲ್ಲಿ 1,035 ಮಂದಿಯನ್ನು ಬಂಧಿಸಲಾಗಿದೆ. 759 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 730 ಪ್ರಕರಣಗಳನ್ನು ದಾಖಲಿಸಿಕೊಂಡು, 2,172 ಆರೋಪಿಗಳನ್ನು ಬಂಧಿಸಲಾಗಿದೆ. 668 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಬೆಳಗಾವಿ ನಗರದಲ್ಲಿ 448 ಪ್ರಕರಣಗಳಲ್ಲಿ 634 ಆರೋಪಿಗಳನ್ನು ಬಂಧಿಸಿ, 394ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಕೆಜಿಎಫ್ ನಗರದಲ್ಲಿ 176 ಪ್ರಕರಣ ದಾಖಲಾಗಿದ್ದು, 237 ಆರೋಪಿಗಳನ್ನು ಬಂಧಿಸಿ, 162 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ.
ಬೆಂಗಳೂರು ನಗರ ಹೊರತುಪಡಿಸಿ ಬೆಂಗಳೂರು ಜಿಲ್ಲೆಯಲ್ಲಿ 469 ಎನ್ಡಿಪಿಎಸ್ ಪ್ರಕರಣ ದಾಖಲಾಗಿದ್ದು, 423 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ತುಮಕೂರು ಜಿಲ್ಲೆ 525 ಪ್ರಕರಣ ದಾಖಲಾಗಿದ್ದು, 483 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಕೆಜಿಎಫ್ ಹೊರತುಪಡಿಸಿ ಕೋಲಾರ ಜಿಲ್ಲೆ 211 ಪ್ರಕರಣ ದಾಖಲಾಗಿದ್ದು, 195ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ರಾಮನಗರ ಜಿಲ್ಲೆ 233 ಪ್ರಕರಣ ದಾಖಲಾಗಿದ್ದು, 220 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಚಿಕ್ಕಬಳ್ಳಾಪುರ 145 ಪ್ರಕರಣ ದಾಖಲಾಗಿದ್ದು, 129 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಮೈಸೂರು ಜಿಲ್ಲೆ 264 ಪ್ರಕರಣ ದಾಖಲಾಗಿದ್ದು, 220 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ.
ಚಾಮರಾಜನಗರ 195 ಎನ್ಡಿಪಿಎಸ್ ಪ್ರಕರಣ ದಾಖಲಾಗಿದ್ದು, 182 ಚಾರ್ಜ್ಶೀಟ್ಸಲ್ಲಿಕೆ ಮಾಡಲಾಗಿದೆ. ಮಂಡ್ಯದಲ್ಲಿ 292 ಪ್ರಕರಣ ದಾಖಲಾಗಿದ್ದು, 262 ಚಾರ್ಜ್ಶೀಟ್ಸಲ್ಲಿಕೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆ 731 ಪ್ರಕರಣ ದಾಖಲಾಗಿದ್ದು, 675 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆ 343 ಪ್ರಕರಣ ದಾಖಲಾಗಿದ್ದು, 314 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಹಾವೇರಿ ಜಿಲ್ಲೆ 127 ಪ್ರಕರಣ ದಾಖಲಾಗಿದ್ದು, 97 ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ರೈಲ್ವೆ 63 ಪ್ರಕರಣ ದಾಖಲಾಗಿದ್ದು, 61 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ.
ಬೆಳಗಾವಿ ನಗರ ಹೊರತುಪಡಿಸಿ ಬೆಳಗಾವಿ ಜಿಲ್ಲೆಯಲ್ಲಿ 308 ಎನ್ಡಿಪಿಎಸ್ ಪ್ರಕರಣ ದಾಖಲಾಗಿದ್ದು, 263 ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಗದಗದಲ್ಲಿ 112 ಪ್ರಕರಣ ದಾಖಲಾಗಿದ್ದು, 97 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 97 ಪ್ರಕರಣ ದಾಖಲಸಿ, 85 ಚಾರ್ಜ್ಶೀಟ್ ಸಲ್ಲಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ 139 ಪ್ರಕರಣ ದಾಖಲಾಗಿದ್ದು, 106 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಬಾಗಲಕೋಟೆಯಲ್ಲಿ 140 ಪ್ರಕರಣ ದಾಖಲಾಗಿದ್ದು, 117 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ.
ಮಲೆನಾಡಿನ ಜಿಲ್ಲೆಗಳಲ್ಲಿ 3,514 ಎನ್ಡಿಪಿಎಸ್ ಪ್ರಕರಣಗಳು ದಾಖಲು: ಹಾಸನ ಜಿಲ್ಲೆಯಲ್ಲಿ 514 ಪ್ರಕರಣ ದಾಖಲಿಸಿ, 756 ಆರೋಪಿಗಳನ್ನು ಬಂಧಿಸಲಾಗಿದೆ. 441 ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ 473 ಪ್ರಕರಣ ದಾಖಲಾಗಿದ್ದು, 999 ಆರೋಪಿಗಳನ್ನು ಬಂಧಿಸಿ, 473 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 1,642 ಪ್ರಕರಣ ದಾಖಲಿಸಿ, 2,064 ಆರೋಪಿಗಳನ್ನು ಬಂಧಿಸಿ, 1,513 ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಚಿಕ್ಕಮಗಳೂರು 885 ಪ್ರಕರಣ ದಾಖಲಿಸಿ, 1,009 ಆರೋಪಿಗಳನ್ನು ಬಂಧಿಸಲಾಗಿದೆ. 827 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ 4,630 ಎನ್ಡಿಪಿಎಸ್ ಪ್ರಕರಣಗಳು: ಮಂಗಳೂರು ನಗರವೊಂದರಲ್ಲಿ 3,018 ಪ್ರಕರಣಗಳಲ್ಲಿ 3,978 ಆರೋಪಿಗಳನ್ನು ಬಂಧಿಸಿ, 2,875 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಮಂಗಳೂರು ನಗರ ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 190 ಪ್ರಕರಣ ದಾಖಲಾಗಿದ್ದು, 310 ಆರೋಪಿಗಳನ್ನು ಬಂಧಿಸಿ, 168 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 763 ಪ್ರಕರಣ ದಾಖಲಾಗಿದ್ದು, 987 ಆರೋಪಿಗಳನ್ನು ಬಂಧಿಸಿ, 705 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ 659 ಪ್ರಕರಣ ದಾಖಲಾಗಿದ್ದು, 788 ಆರೋಪಿಗಳನ್ನು ಬಂಧಿಸಿ, 618 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ.
ಕಲ್ಯಾಣ ಕರ್ನಾಟಕ: ಕಲಬುರಗಿ ನಗರದಲ್ಲಿ 621 ಪ್ರಕರಣಗಳಲ್ಲಿ 740 ಆರೋಪಿಗಳನ್ನು ಬಂಧಿಸಿ, 401 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 125 ಪ್ರಕರಣ ದಾಖಲಾಗಿದ್ದು, 152 ಆರೋಪಿಗಳನ್ನು ಬಂಧಿಸಿ, 125ಚಾರ್ಜ್ಶೀಟ್ಸಲ್ಲಿಕೆ ಮಾಡಲಾಗಿದೆ. ಬೀದರ್ ಜಿಲ್ಲೆ 148 ಪ್ರಕರಣ ದಾಖಲಾಗಿದ್ದು, 203 ಆರೋಪಿಗಳನ್ನು ಬಂಧಿಸಿ, 93 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಯಾದಗಿರಿ ಜಿಲ್ಲೆ 46 ಪ್ರಕರಣ ದಾಖಲಾಗಿದ್ದು, 59 ಆರೋಪಿಗಳನ್ನು ಬಂಧಿಸಿ, 42 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆ 160 ಪ್ರಕರಣ 259 ಆರೋಪಿಗಳನ್ನು ಬಂಧಿಸಿ, 106 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ರಾಯಚೂರು ಜಿಲ್ಲೆ 272 ಪ್ರಕರಣ 316 ಆರೋಪಿಗಳನ್ನು ಬಂಧಿಸಿ, 208 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆ 98 ಪ್ರಕರಣ ದಾಖಲಿಸಿ 144 ಆರೋಪಿಗಳನ್ನು ಬಂಧಿಸಿ, 94 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ವಿಜಯನಗರ ಜಿಲ್ಲೆ 187 ಪ್ರಕರಣ ದಾಖಲಿಸಿ 252 ಆರೋಪಿಗಳನ್ನು ಬಂಧಿಸಿ, 181 ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ.
ಎನ್ಡಿಪಿಎಸ್ ಕಾಯ್ದೆ ಅಡಿ ಯಾವುದೇ ವ್ಯಕ್ತಿಯು ಮಾದಕ ದ್ರವ್ಯಗಳಾದ ಕೋಕಾ ಎಲೆ, ಗಾಂಜಾ, ಅಫೀಮು ಅಥವಾ ಮನೋವಿಕೃತ ವಸ್ತುಗಳಾದ ಸಂಶ್ಲೇಷಿತ ಡ್ರಗ್ಸ್ಗಳನ್ನು ಉತ್ಪಾದಿಸುವುದು, ಮಾರಾಟ, ಸಾಗಣೆ, ಸಂಗ್ರಹಣೆ ಅಥವಾ ಸೇವನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಪೊಲೀಸ್ ಇಲಾಖೆ ತಿಳಿಸಿದೆ.
2.69 ಕೋಟಿ ರೂ. ದಂಡ ಸಂಗ್ರಹ
2024ರಿಂದ ಇಲ್ಲಿಯವರೆಗೆ ರಾಜ್ಯಾದ್ಯಂತ ದಾಖಲಾದ ಎನ್ಡಿಪಿಎಸ್ ಪ್ರಕರಣಗಳಲ್ಲಿ 2.69 ಕೋಟಿ ರೂ.ದಂಡವನ್ನು ಸಂಗ್ರಹಿಸಲಾಗಿದೆ. 2024ರಲ್ಲಿ 981 ಪ್ರಕರಣಗಳಲ್ಲಿ 2,130 ಆರೋಪಿಗಳಿಂದ 44,28,460 ರೂ., 2025ರಲ್ಲಿ 2,813 ಪ್ರಕರಣಗಳಲ್ಲಿ 3,515 ಆರೋಪಿಗಳಿಂದ 1,36,54,721 ರೂ. ಹಾಗೂ 2026ರಲ್ಲಿ 2,173 ಪ್ರಕರಣಗಳಲ್ಲಿ 2,839 ಆರೋಪಿಗಳಿಂದ 88,42,724 ರೂ. ಸಂಗ್ರಹಿಸಲಾಗಿದೆ ಎಂದು ಪೊಲೀಸ್ ಇಲಾಖೆಯು ಹೇಳಿದೆ.






