Ferrari - Audi ಯನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ Royal Enfield!

Photo Credit : royalenfield.com
ರಾಯಲ್ ಎನ್ಫೀಲ್ಡ್ ಜೊತೆಗೆ ಭಾರತೀಯ ಅಟೋಮೋಟಿವ್ ಬ್ರ್ಯಾಂಡ್ಗಳಾದ ಮಹೀಂದ್ರಾ, ಟಾಟಾ ಮೋಟಾರ್ಸ್ ಮತ್ತು ಮಾರುತಿ ಸುಝುಕಿ ಕೂಡ ಪಟ್ಟಿಯಲ್ಲಿದೆ.
ಇತ್ತೀಚೆಗೆ ಬಿಡುಗಡೆಯಾಗಿರುವ ಬ್ರ್ಯಾಂಡ್ ಪೈನಾನ್ಸ್ ಆಟೋಮೋಟಿವ್ ಇಂಡಸ್ಟ್ರಿ 2026 ವರದಿಯು ರಾಯಲ್ ಎನ್ಫೀಲ್ಡ್ ವಿಶ್ವದ ಮೂರನೇ ಬಲಿಷ್ಠ ಅಟೋಮೋಟಿವ್ ಬ್ರ್ಯಾಂಡ್ ಎಂದು ಹೇಳಿದೆ. ಟೊಯೋಟಾ ಮತ್ತು ಬಿಎಂಡಬ್ಲ್ಯು ನಂತರ ರಾಯಲ್ ಎನ್ಫೀಲ್ಡ್ ಮೂರನೇ ಸ್ಥಾನದಲ್ಲಿದೆ. ಆಡಿ ನಾಲ್ಕನೇ ಮತ್ತು ಫೆರಾರಿ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ರಾಯಲ್ ಎನ್ಫೀಲ್ಡ್ ಜೊತೆಗೆ ಭಾರತೀಯ ಅಟೋಮೋಟಿವ್ ಬ್ರ್ಯಾಂಡ್ಗಳಾದ ಮಹೀಂದ್ರಾ, ಟಾಟಾ ಮೋಟಾರ್ಸ್ ಮತ್ತು ಮಾರುತಿ ಸುಜುಕಿ ಕೂಡ ಪಟ್ಟಿಯಲ್ಲಿದೆ. ವಿಶ್ವದ ಬಲಿಷ್ಠ ಅಟೋಮೊಬೈಲ್ ಬ್ರ್ಯಾಂಡ್ ಗಳಲ್ಲಿ ಟಾಟಾ ಮೋಟಾರ್ಸ್ ಐದನೇ ಸ್ಥಾನದಲ್ಲಿದ್ದರೆ, ಮಾರುತಿ ಸುಝುಕಿ 34ನೇ ಸ್ಥಾನದಲ್ಲಿ ಮತ್ತು ಮಹೀಂದ್ರಾ 25ನೇ ಸ್ಥಾನದಲ್ಲಿದೆ.
ವರದಿಯಲ್ಲಿ ರಾಯಲ್ ಎನ್ಫೀಲ್ಡ್ಗೆ ಬ್ರ್ಯಾಂಡ್ ಬಲ ಇಂಡೆಕ್ಸ್ ಸ್ಕೋರ್ ಮತ್ತು ಎಎಎ ರೇಟಿಂಗ್ ನೀಡಲಾಗಿದೆ. ಇದು ಜಾಗತಿಕ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ನ ಬೆಳೆಯುತ್ತಿರುವ ಪ್ರಭಾವವನ್ನು ಒತ್ತಿ ಹೇಳುತ್ತದೆ. ಇದರ ಒಟ್ಟು ಬ್ರ್ಯಾಂಡ್ ಮೌಲ್ಯವು ಶೇ 30ರಷ್ಟು ವೇಗವಾಗಿ 1.2 ಬಿಲಿಯನ್ ಡಾಲರ್ಗೆ ಏರಿದೆ. ಇದು ಒಂದು ಕಾಲದಲ್ಲಿ ಮುಖ್ಯವಾಗಿ ಸ್ಥಾಪಿತ ರೆಟ್ರೋ ಮೋಟಾರ್ ಸೈಕಲ್ ತಯಾರಕ ಎಂದು ಪರಿಗಣಿಸಲಾದ ಕಂಪನಿಗೆ ಹೊಸ ಮೈಲಿಗಲ್ಲನ್ನು ಸೂಚಿಸುತ್ತದೆ.
ರಾಯಲ್ ಎನ್ಫೀಲ್ಡ್ ಏರುಹಾದಿಯಲ್ಲಿ ಸಾಗಲು ಅದರ ವಿಸ್ತರಿಸುತ್ತಿರುವ ಅಂತರರಾಷ್ಟ್ರೀಯ ಹೆಜ್ಜೆಗುರುತು ಮುಖ್ಯ ಕಾರಣವಾಗಿದೆ. ಕಂಪನಿಯು ಈಗ 80ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ವಿಶ್ವಾದ್ಯಂತ 3,200ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳ ಜಾಲವನ್ನು ಹೊಂದಿದೆ. ಇದು ಏಳು ಅಂತರರಾಷ್ಟ್ರೀಯ ಸಿಕೆಡಿ ಅಸೆಂಬ್ಲಿ (ಭಾಗಗಳನ್ನು ಜೋಡಿಸುವ) ಘಟಕಗಳನ್ನೂ ಸಹ ಹೊಂದಿದೆ. ಇದು ಪ್ರಮುಖ ಮಾರುಕಟ್ಟೆಗಳಲ್ಲಿ ಬಲವಾದ ಉಪಸ್ಥಿತಿ ನಿರ್ಮಿಸಲು ನೆರವಾಗಿದೆ. ಬ್ರ್ಯಾಂಡ್ ಪ್ರಕಾರ, ಯುರೋಪ್, ದಕ್ಷಿಣ ಅಮೆರಿಕ, ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯದಂತಹ ಪ್ರದೇಶಗಳಲ್ಲಿ ಬೇಡಿಕೆ ಸ್ಥಿರವಾಗಿ ಉಳಿದಿದೆ.
ಈ ಬೆಳವಣಿಗೆಯ ಹಿಂದಿನ ಪ್ರಮುಖ ಕಾರಣ ರಾಯಲ್ ಎನ್ಫೀಲ್ಡ್ ನ ಉತ್ಪನ್ನ ಕಾರ್ಯಯೋಜನೆ. ಕಂಪನಿಯು ತನ್ನ ಮೂಲ ಗುರುತಿಗೆ ಹತ್ತಿರದಲ್ಲಿದೆ. ಸರಳ ಎಂಜಿನಿಯರಿಂಗ್ ಜೊತೆಗೆ ಕ್ಲಾಸಿಕ್ ಶೈಲಿಯನ್ನು ಸಂಯೋಜಿಸಿ ಮೋಟಾರ್ ಸೈಕಲ್ ಗಳನ್ನು ತಯಾರಿಸುತ್ತಿದೆ. ಹಂಟರ್ 350 ಮತ್ತು ಸೂಪರ್ ಮೀಟಿಯರ್ 650ನಂತಹ ಮಾದರಿಗಳು ವಿಶಿಷ್ಟ ವಿನ್ಯಾಸದೊಂದಿಗೆ ಸರಳ ಸವಾರಿ ಅನುಭವ ಹುಡುಕುವ ಖರೀದಿದಾರರನ್ನು ಆಕರ್ಷಿಸುತ್ತಲೇ ಇವೆ. ಅದೇ ಸಮಯದಲ್ಲಿ ನವೀಕರಿಸಿದ ಹಿಮಾಲಯನ್ 450 ಬ್ರ್ಯಾಂಡ್ ಗೆ ಹೆಚ್ಚು ಸಮರ್ಥ ಸಾಹಸ ಶ್ರೇಣಿಯನ್ನು ನೀಡಿದೆ. ಹೆಚ್ಚು ಬಹುಮುಖಿ ಬಯಸುವ ಸವಾರರಲ್ಲಿ ಅದರ ಆಕರ್ಷಣೆ ವಿಸ್ತರಿಸಿದೆ.






