Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ESI ಅನುದಾನದ 80 ಕೋಟಿ ರೂ. ಕಡಿತ:...

ESI ಅನುದಾನದ 80 ಕೋಟಿ ರೂ. ಕಡಿತ: ಬಿಡುಗಡೆಗೆ ಕಾರ್ಮಿಕ ಇಲಾಖೆ ಒತ್ತಾಯ

ವೈದ್ಯಕೀಯ ಸೇವೆಗಳ ಅನುದಾನದಲ್ಲಿ ಗೊಂದಲ; ಕಾರ್ಮಿಕ ಇಲಾಖೆಯಿಂದ ಪತ್ರ

ಜಿ. ಮಹಾಂತೇಶ್ಜಿ. ಮಹಾಂತೇಶ್11 Nov 2026 8:48 AM IST
share
ESI ಅನುದಾನದ 80 ಕೋಟಿ ರೂ. ಕಡಿತ: ಬಿಡುಗಡೆಗೆ ಕಾರ್ಮಿಕ ಇಲಾಖೆ ಒತ್ತಾಯ

ಬೆಂಗಳೂರು: ಕರ್ನಾಟಕದಲ್ಲಿ ಇಎಸ್‌ಐ ಯೋಜನೆಯಡಿ ವಿಮೆ ಹೊಂದಿರುವ ವ್ಯಕ್ತಿಗಳು ಮತ್ತು ಅವರ ಕುಟುಂಬದ ಸದಸ್ಯರಿಗೆ ವೇತನ, ಔಷಧಿಗಳು, ಚಿಕಿತ್ಸೆ ಹಾಗೂ ಇತರ ವೈದ್ಯಕೀಯ ಸೌಲಭ್ಯಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಲು ಮತ್ತು ವೈದ್ಯಕೀಯ ಸೇವೆಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು 80 ಕೋಟಿಗೂ ಹೆಚ್ಚು ಮೊತ್ತವನ್ನು ಕಾರ್ಮಿಕ ಇಲಾಖೆಯು ಬಿಡುಗಡೆ ಮಾಡಿಲ್ಲ!

ಬಿಡುಗಡೆಗೆ ಬಾಕಿ ಇರಿಸಿಕೊಂಡಿರುವ ಮೊತ್ತವನ್ನು ಹೊಸದಿಲ್ಲಿಯ ಇಎಸ್‌ಐಸಿ ಪ್ರಧಾನ ನಿರ್ದೇಶಕರಿಗೆ ರವಾನಿಸಿ, ಬಾಕಿ ಅನುದಾನವನ್ನು ಬಿಡುಗಡೆ ಮಾಡಬೇಕು. ಹೀಗಾಗಿ ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸುವ ಮೂಲಕ ಸಹಕರಿಸಬೇಕು ಎಂದು ಕಾರ್ಮಿಕ ಇಲಾಖೆಯ ಆಯುಕ್ತರು, ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಈ ಪತ್ರವನ್ನು ಆಧರಿಸಿ ಅನುದಾನ ಬಿಡುಗಡೆ ಮಾಡುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ. ಆದರೆ ಇದುವರೆಗೂ 80 ಕೋಟಿ ಅನುದಾನ ಬಿಡುಗಡೆ ಸಂಬಂಧ ಅಧಿಕೃತ ಆದೇಶ ಹೊರಬಿದ್ದಿಲ್ಲ ಎಂದು ತಿಳಿದು ಬಂದಿದೆ.

2026ರ ಅಕ್ಟೋಬರ್ 27 ಮತ್ತು 28ರಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಬರೆದಿರುವ ಪತ್ರದ ಪ್ರತಿಯು the-file.in ಗೆ ಲಭ್ಯವಾಗಿದೆ.

2026-27ನೇ ಹಣಕಾಸು ವರ್ಷದ ಮೊದಲ ಅರ್ಧವಾರ್ಷಿಕ ಅವಧಿಯ ಪರಿಷ್ಕೃತ ಬಳಕೆ ಪ್ರಮಾಣಪತ್ರವನ್ನು ಸಲ್ಲಿಸುವುದು ಹಾಗೂ ಕರ್ನಾಟಕ ನೌಕರರ ರಾಜ್ಯ ವಿಮಾ ಸಂಘಕ್ಕೆ (KESIS) ಎರಡನೇ ಕಂತಿನ ಮುಂಗಡ ಪಾವತಿಯ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಇಲಾಖೆಯ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

2026-27ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಏಪ್ರಿಲ್ 2026ರಿಂದ ಸೆಪ್ಟೆಂಬರ್ 2026ರವರೆಗಿನ ಅವಧಿಯನ್ನು ಒಳಗೊಂಡ ಕರ್ನಾಟಕ ನೌಕರರ ರಾಜ್ಯ ವಿಮಾ ಸಂಘಕ್ಕೆ (KESIS) ವಾರ್ಷಿಕ ಬಜೆಟ್ ಆಧಾರದ ಮೇಲೆ ಆರಂಭದಲ್ಲಿ ಮೊದಲ ಕಂತಿನ ಮುಂಗಡ ಪಾವತಿಯನ್ನು ರೂ. 6,96,83,31,106 ರ ಅಂದಾಜು ಲೆಕ್ಕಾಚಾರ ಮಾಡಲಾಗಿತ್ತು. ಅದರಂತೆ, ಅಂದಾಜು ವಾರ್ಷಿಕ ಬಜೆಟ್‌ನ ಶೇ.90ರಷ್ಟು ಮೊತ್ತವಾದ ರೂ. 6,27,14,97,961 ಅನ್ನು ಅರ್ಹ ವೆಚ್ಚವೆಂದು ಪರಿಗಣಿಸಲಾಗಿತ್ತು. ಈ ಮೊತ್ತದ ಶೇ.50ರಷ್ಟಾದ ರೂ.3,13,09,01,841 ಅನ್ನು ಮೊದಲ ಕಂತಿನ ರೂಪದಲ್ಲಿ ಬಿಡುಗಡೆ ಮಾಡಲಾಗಿತ್ತು.

2026ರ ಅಕ್ಟೋಬರ್ 23ರಂದು ಕರ್ನಾಟಕದ ಇಎಸ್‌ಐಎಸ್ ವೈದ್ಯಕೀಯ ಸೇವೆಗಳ ಇಲಾಖೆಯ ಅಧ್ಯಕ್ಷತೆಯಲ್ಲಿ ಸಮನ್ವಯ ಸಭೆ ನಡೆದಿತ್ತು. ಕರ್ನಾಟಕದ ಇಎಸ್‌ಐಎಸ್ ವೈದ್ಯಕೀಯ ಸೇವೆಗಳ ಆಯುಕ್ತಾಲಯದ ಅಧಿಕಾರಿಗಳು ಮತ್ತು ಬೆಂಗಳೂರಿನ ಇಎಸ್‌ಐಸಿ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಬೆಂಗಳೂರಿನ ಇಎಸ್‌ಐಸಿ ಜಂಟಿ ನಿರ್ದೇಶಕರು (ಹಣಕಾಸು) ಕರ್ನಾಟಕಕ್ಕೆ ಅನ್ವಯವಾಗುವ ಅನುದಾನದ ಪಾಲಿನ ಕುರಿತು ಸ್ಪಷ್ಟನೆ ನೀಡಿದ್ದರು.

ಅದರಂತೆ, ಇಎಸ್‌ಐಸಿಯ 7/8ನೇ ಪಾಲಿನ ಆಧಾರದ ಮೇಲೆ ಅರ್ಹ ಬಜೆಟ್ ಮೊತ್ತವನ್ನು ಮರುಲೆಕ್ಕಾಚಾರ ಮಾಡಲಾಗಿತ್ತು. ಅದು ರೂ.6,09,72,89,685 ರು ನಷ್ಟಿತ್ತು ಎಂದು ಸ್ಪಷ್ಟನೆಯಲ್ಲಿ ವಿವರಿಸಿದ್ದರು.

ಅರ್ಹ ಮೊತ್ತದ ಪರಿಷ್ಕೃತ ಲೆಕ್ಕಾಚಾರ


ಇದಲ್ಲದೆ, 2026-27ನೇ ಹಣಕಾಸು ವರ್ಷದ ಮೊದಲ ಕಂತಿನ ಮುಂಗಡ ಪಾವತಿಯಡಿ ಮಾಡಲಾದ ವೆಚ್ಚಕ್ಕೆ ಸಂಬಂಧಿಸಿದ ಬಳಕೆ ಪ್ರಮಾಣಪತ್ರ ನೀಡಿತ್ತು. ಕೆಇಎಸ್‌ಐಎಸ್‌ಗೆ (KESIS) ಅನ್ವಯವಾಗುವ ಅರ್ಹ ಅನುದಾನವನ್ನು ಲೆಕ್ಕಾಚಾರ ಮಾಡುವಲ್ಲಿ ಉಂಟಾದ ತಪ್ಪಿನಿಂದಾಗಿ ಈ ಹಿಂದೆ ತಪ್ಪಾಗಿ ಸಲ್ಲಿಸಲಾಗಿತ್ತು. ಅರ್ಹ ಅನುದಾನದಲ್ಲಿ ಇಎಸ್‌ಐಸಿಯ ಶೇ.100ರಷ್ಟು ಪಾಲನ್ನು ಪರಿಗಣಿಸಲಾಗಿತ್ತು ಎಂದು ಸಭೆಗೆ ಮಾಹಿತಿ ಒದಗಿಸಿದ್ದರು.

ಪರಿಷ್ಕೃತ ಮತ್ತು ನವೀಕರಿಸಿದ ಬಳಕೆ ಪ್ರಮಾಣಪತ್ರ ಒದಗಿಸಲಾಗಿದ್ದು, ನವೀಕರಿಸಿದ ಪ್ರಮಾಣಪತ್ರದ ಪ್ರಕಾರ, ಮೊದಲ ಕಂತಿಗೆ ಅರ್ಹವಾಗಿದ್ದ ರೂ.2,74,37,80,358 ಮೊತ್ತದಲ್ಲಿ ರೂ.2,61,58,44,132 ಮೊತ್ತವನ್ನು ವಾಸ್ತವವಾಗಿ ಬಳಸಿಕೊಳ್ಳಲಾಗಿದೆ. ಹೀಗಾಗಿ, ಬಳಕೆಯ ಪ್ರಮಾಣವು ಶೇ.95.33ರಷ್ಟಾಗಿತ್ತು.

'ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತಾವನೆಯಲ್ಲಿನ ಅಂಶಗಳ ಪ್ರಕಾರ ಪರಿಷ್ಕೃತ ಮತ್ತು ನವೀಕರಿಸಿದ ಬಳಕೆ ಪ್ರಮಾಣಪತ್ರದೊಂದಿಗೆ ನೌಕರರ ರಾಜ್ಯ ವಿಮಾ ನಿಗಮದ (ESIC), ಹೊಸದಿಲ್ಲಿಯ ಪ್ರಧಾನ ನಿರ್ದೇಶಕರಿಗೆ ದಯವಿಟ್ಟು ರವಾನಿಸಬೇಕು. ಹಾಗೂ ಪರಿಷ್ಕೃತ ಬಳಕೆ ಪ್ರಮಾಣಪತ್ರವನ್ನು ದಾಖಲೆಯಲ್ಲಿ ಸ್ವೀಕರಿಸಬೇಕು. 2026-27ನೇ ಹಣಕಾಸು ವರ್ಷಕ್ಕೆ ಕೆಇಎಸ್‌ಐಎಸ್‌ಗೆ (KESIS) ಎರಡನೇ ಕಂತಿನ ಮುಂಗಡ ಪಾವತಿಗಾಗಿ ಬಾಕಿ ಉಳಿದಿರುವ ರೂ.1,36,40,91,914 ಮೊತ್ತವನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಬೇಕು,' ಎಂದು ಆಯುಕ್ತರು ಕೋರಿರುವುದು ಪತ್ರದಿಂದ ತಿಳಿದು ಬಂದಿದೆ.

ಕರ್ನಾಟಕದಲ್ಲಿ ಇಎಸ್‌ಐ ಯೋಜನೆಯಡಿ ವಿಮೆ ಹೊಂದಿರುವ ವ್ಯಕ್ತಿಗಳು ಮತ್ತು ಅವರ ಕುಟುಂಬದ ಸದಸ್ಯರಿಗೆ ವೇತನ, ಔಷಧಿಗಳು, ಚಿಕಿತ್ಸೆ ಹಾಗೂ ಇತರ ವೈದ್ಯಕೀಯ ಸೌಲಭ್ಯಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಲು ಮತ್ತು ವೈದ್ಯಕೀಯ ಸೇವೆಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಈ ಬಾಕಿ ಮೊತ್ತದ ಬಿಡುಗಡೆ ಅತ್ಯಗತ್ಯವಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದರು.

ಆದ್ದರಿಂದ, ಈ ಪ್ರಸ್ತಾವನೆಯನ್ನು ಆದಷ್ಟು ಶೀಘ್ರವಾಗಿ ಪರಿಗಣಿಸಿ, ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಅದನ್ನು ಹೊಸದಿಲ್ಲಿಯ ಇಎಸ್‌ಐಸಿ ಪ್ರಧಾನ ನಿರ್ದೇಶಕರಿಗೆ ರವಾನಿಸಿ, ಬಾಕಿ ಅನುದಾನವನ್ನು ಬಿಡುಗಡೆ ಮಾಡಲು ತಮ್ಮ ಮಧ್ಯಸ್ಥಿಕೆ ಮತ್ತು ಸಹಕಾರಬೇಕು ಎಂದೂ ಕೋರಿದ್ದರು.

2026-27ನೇ ಹಣಕಾಸು ವರ್ಷದ ಕೆಇಎಸ್‌ಐಎಸ್‌ಗೆ (KESIS) ನೀಡಲಾಗುವ ಮುಂಗಡ ಪಾವತಿಯ ಎರಡನೇ ಕಂತಿನಿಂದ ಕಡಿತಗೊಳಿಸಲಾದ 80.00 ಕೋಟಿ ರೂ. ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು 2026ರ ಅಕ್ಟೋಬರ್ 28ರಂದು ಮತ್ತೊಂದು ಪತ್ರ ಬರೆದಿದ್ದರು.

2025-26ನೇ ಹಣಕಾಸು ವರ್ಷದಲ್ಲಿ ಹೆಚ್ಚುವರಿ ಅನುದಾನದ ಅಗತ್ಯವಿದ್ದ ಕೆಳಕಂಡ ಯೋಜನೆಗಳಿಗಾಗಿ ಹೆಚ್ಚುವರಿಯಾಗಿ 80 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು.


2026-27ನೇ ಹಣಕಾಸು ವರ್ಷದ ಅಕ್ಟೋಬರ್ 2026ರಿಂದ ಮಾರ್ಚ್ 2027ರವರೆಗಿನ ಅವಧಿಗೆ ಸಂಬಂಧಿಸಿದಂತೆ, ಕರ್ನಾಟಕ ನೌಕರರ ರಾಜ್ಯ ವಿಮಾ ಸಂಘಕ್ಕೆ (KESIS) ಮುಂಗಡ ಪಾವತಿಯ ಎರಡನೇ ಕಂತಿನ ರೂಪದಲ್ಲಿ ರೂ. 80 ಕೋಟಿ (ಎಂಬತ್ತು ಕೋಟಿ ರೂಪಾಯಿಗಳು ಮಾತ್ರ) ಬಿಡುಗಡೆ ಮಾಡಲಾಗಿತ್ತು. ಇದೇ ಪತ್ರದಲ್ಲಿ ಎರಡನೇ ಕಂತಿನ ಮೊತ್ತದ ಬಿಡುಗಡೆಗೆ ಸಂಬಂಧಿಸಿದ ವಿವರಗಳನ್ನೂ ಒದಗಿಸಿತ್ತು.

ಆದರೆ, 2025-26ನೇ ಹಣಕಾಸು ವರ್ಷಕ್ಕೆ ಹೆಚ್ಚುವರಿ ಅನುದಾನದ ಅಗತ್ಯಕ್ಕಾಗಿ 10-04-2026ರಂದು ಕೆಇಎಸ್‌ಐಎಸ್‌ಗೆ (KESIS) ಬಿಡುಗಡೆ ಮಾಡಲಾದ ರೂ.80,00,00,000/- (ಎಂಬತ್ತು ಕೋಟಿ ರೂಪಾಯಿಗಳು ಮಾತ್ರ) ಮೊತ್ತವನ್ನು, 2026-27ನೇ ಹಣಕಾಸು ವರ್ಷಕ್ಕೆ ಅರ್ಹವಾಗಿರುವ ಅನುದಾನದ ವಿರುದ್ಧ ಹೊಂದಾಣಿಕೆ ಮಾಡಲಾಗಿದೆ ಎಂಬುದನ್ನು ಇಲಾಖೆಯು ಗಮನಿಸಿತ್ತು.

ಈ ಹೊಂದಾಣಿಕೆಯು 2026-27ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಸಂಘವು ಸಲ್ಲಿಸಿರುವ ಬಳಕೆ ಪ್ರಮಾಣಪತ್ರದಲ್ಲಿ ಸದರಿ ಮೊತ್ತವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ ಎಂಬ ಕಾರಣದ ಆಧಾರದ ಮೇಲೆ ಈ ಹೊಂದಾಣಿಕೆ ಮಾಡಲಾಗಿತ್ತು ಎಂದು ಪತ್ರದಲ್ಲಿ ವಿವರಿಸಿತ್ತು.

2025-26ನೇ ಹಣಕಾಸು ವರ್ಷಕ್ಕೆ ಅಗತ್ಯವಿದ್ದ ಹೆಚ್ಚುವರಿ ರೂ.80.00 ಕೋಟಿ ಮೊತ್ತವನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಏಪ್ರಿಲ್ 2026ರಲ್ಲಿ ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿತ್ತು. ಆದ್ದರಿಂದ, 2026-27ನೇ ಹಣಕಾಸು ವರ್ಷದ ಮುಂಗಡ ಪಾವತಿಯ ಎರಡನೇ ಕಂತಿನಿಂದ ಈ ಮೊತ್ತವನ್ನು ಕಡಿತಗೊಳಿಸಲಾಗಿದೆ. 2026ರ ಅಕ್ಟೋಬರ್‌ನಿಂದ 2027ರ ಮಾರ್ಚ್‌ವರೆಗಿನ ಅವಧಿಗೆ ಕೆಇಎಸ್‌ಐಎಸ್‌ಗೆ (KESIS) ಲಭ್ಯವಿರುವ ಅನುದಾನದಲ್ಲಿ ಅದೇ ಪ್ರಮಾಣದ ಕಡಿತ ಉಂಟಾಗಿದೆ.

'ಈ ಗಣನೀಯ ಮೊತ್ತವನ್ನು ಕಡಿತಗೊಳಿಸಿರುವುದರಿಂದ, ಸದರಿ ಅವಧಿಯಲ್ಲಿ ಕೆಇಎಸ್‌ಐಎಸ್‌ನ ಅಭಿವೃದ್ಧಿ ಯೋಜನೆಗಳು ಮತ್ತು ಆಡಳಿತಾತ್ಮಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ,' ಎಂದು ಆಯುಕ್ತರು ಕಳವಳ ವ್ಯಕ್ತಪಡಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಈ ವಿಷಯವನ್ನು ಹೊಸದಿಲ್ಲಿಯ ನೌಕರರ ರಾಜ್ಯ ವಿಮಾ ನಿಗಮದ (ESIC) ಪ್ರಧಾನ ನಿರ್ದೇಶಕರ ಗಮನಕ್ಕೆ ತರಲು ಈ ಪತ್ರವನ್ನು ರವಾನಿಸುವ ಮೂಲಕ ಅಗತ್ಯ ಕ್ರಮ ಕೈಗೊಳ್ಳಬೇಕು. 2026-27ನೇ ಹಣಕಾಸು ವರ್ಷಕ್ಕೆ ಕೆಇಎಸ್‌ಐಎಸ್‌ಗೆ (KESIS) ಅರ್ಹವಾಗಿರುವ ಮುಂಗಡ ಪಾವತಿಯ ಮೊತ್ತದ ವಿರುದ್ಧ ಹೊಂದಾಣಿಕೆ ಮಾಡದೆ, ಕಡಿತಗೊಳಿಸಲಾದ ರೂ.80.00 ಕೋಟಿ ಮೊತ್ತವನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಬೇಕು ಎಂದು ಕೋರಿರುವುದು ಗೊತ್ತಾಗಿದೆ.

Tags

ESILabour Department
share
ಜಿ. ಮಹಾಂತೇಶ್
ಜಿ. ಮಹಾಂತೇಶ್
Next Story
X