ʼಮರಾಠಿಯಲ್ಲಿ ಮಾತನಾಡಿʼ ಎಂದ ಮಹಾರಾಷ್ಟ್ರ ಸಚಿವರ ವಿನಂತಿಯನ್ನು ನಯವಾಗಿ ತಳ್ಳಿ ಹಾಕಿದ ಸಂಜಯ್ ದತ್!

ಸಂಜಯದ ದತ್ |Screengrab : X
ಆಟೋ ಚಾಲಕರಿಗೆ ಮರಾಠಿ ತಿಳುವಳಿಕೆ ಅಗತ್ಯ ಎನ್ನುವ ನಿಯಮ ತಂದ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಎದುರೇ ಮರಾಠಿಯಲ್ಲಿ ಮಾತನಾಡಲು ನಿರಾಕರಿಸುವ ಮೂಲಕ ಸಂಜಯದ ದತ್ ಸುದ್ದಿಯಾಗಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರೊಂದಿಗೆ ವೇದಿಕೆ ಹಂಚಿಕೊಂಡಾಗ ನಟ ಸಂಜಯ್ ದತ್ ಅವರು ಮರಾಠಿಯಲ್ಲಿ ಮಾತನಾಡುವ ವಿನಂತಿಯನ್ನು ಬದಿಗಿಟ್ಟರು. “ಮರಾಠಿಯಲ್ಲಿ ಮಾತನಾಡಿ” ಎಂದು ಕೇಳಿಕೊಂಡಾಗ ಅವರು ನಯವಾದ ಹಾಸ್ಯದೊಂದಿಗೆ ಮಾತನ್ನು ತಳ್ಳಿ ಹಾಕಿದರು.
“ಪ್ರತಾಪ್ ಭಾಯ್, ನಾನು 6 ವರ್ಷ ಜೈಲಿನಲ್ಲಿದ್ದೆ. ಯೆರ್ವಾಡದಲ್ಲಿ. ಆಗಲೂ ಮರಾಠಿ ಕಲಿಯಲು ಸಾಧ್ಯವಾಗಲಿಲ್ಲ. ನಾನು ಸ್ವಲ್ಪ ಕಲಿತಿದ್ದೇನೆ” ಎಂದು ಹೇಳುತ್ತಾ ಪ್ರತಾಪ್ ಅವರ ಸುತ್ತ ತೋಳು ಹಾಕಿ, “ಇಲ್ಲಿಗೆ ಕರೆದಿದ್ದಕ್ಕಾಗಿ ಪ್ರತಾಪ್ ಭಾಯಿ ಅವರಿಗೆ ಕೃತಜ್ಞನಾಗಿದ್ದೇನೆ. ನಮ್ಮ ಸಂಬಂಧ 25 ವರ್ಷಗಳಷ್ಟು ಹಳೆಯದು” ಎಂದು ಹಿಂದಿ ಭಾಷೆಯಲ್ಲಿ ಹೇಳಿದರು.
ಇದಕ್ಕೆ ಮೊದಲು ಪ್ರತಾಪ್ ಅವರು ಪ್ರೇಕ್ಷಕರಿಗೆ, “ಇತ್ತೀಚೆಗೆ ನಾನು ಎಲ್ಲರಿಗೂ ಮರಾಠಿ ಕಲಿಸುತ್ತಿದ್ದೇನೆ” ಎಂದು ಹೇಳಿದ್ದರು.
ಮುಂಬೈನಲ್ಲಿರುವ ಅಟೋ ರಿಕ್ಷಾ ಚಾಲಕರು ನಗರದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಲು ಮರಾಠಿ ನುಡಿಗಟ್ಟುಗಳ ಕ್ರಿಯಾತ್ಮಕ ತಿಳುವಳಿಕೆ ಅಗತ್ಯ ಎಂಬ ತಮ್ಮ ಇಲಾಖೆಯ ಇತ್ತೀಚಿನ ತೀರ್ಪನ್ನು ಉಲ್ಲೇಖಿಸುತ್ತಾ ಸಚಿವರು, “ಆದ್ದರಿಂದ ಇದೀಗ ಸಂಜಯ್ ದತ್ ಪ್ರವೇಶಿಸಿದ್ದಾರೆ. ನಾವೆಲ್ಲರೂ ಸಂಜಯ್ ದತ್ ಅವರನ್ನು ಮರಾಠಿಯಲ್ಲಿ ಮಾತನಾಡುವಂತೆ ಮಾಡೋಣ ಎಂದು ನಾನು ಭಾವಿಸಿದೆ. ಅವರು ಹಿಂದಿಯಲ್ಲಿ ಮಾತನಾಡುತ್ತಾರೆ. ಆದರೆ ನಾವೆಲ್ಲರೂ ಮರಾಠಿಯಲ್ಲಿ ಅರ್ಥಮಾಡಿಕೊಳ್ಳುತ್ತೇವೆ” ಎಂದು ಪೀಠಿಕೆ ಹಾಕಿದ್ದರು.
ಆದರೆ ಸಂಜಯ್ ದತ್ ನಯವಾಗಿಯೇ ಅವರ ಉದ್ದೇಶವನ್ನು ಬದಿಗೆ ತಳ್ಳಿ, ಹಿಂದಿಯಲ್ಲಿಯೇ ಹಾಸ್ಯಮಯವಾಗಿ ಉತ್ತರಿಸಿದರು. “ನಿಮಗೆಲ್ಲರಿಗೂ ನಮಸ್ಕಾರ” ಎಂದು ಮಾತ್ರ ಮರಾಠಿಯಲ್ಲಿ ಹೇಳಿ ಮಾತನ್ನು ಮುಗಿಸಿದರು.
ಮರಾಠಿ ತಿಳುವಳಿಕೆ ಅಗತ್ಯ ಎನ್ನುವ ತೀರ್ಪು ಮುಂಬೈನಲ್ಲಿ ವಿವಾದಕ್ಕೆ ಕಾರಣವಾಗಿದೆ.
ಸಂಜಯ್ ದತ್ ಇತ್ತೀಚೆಗೆ ಅರೆಬಿಕ್ ಸಿನಿಮಾ ‘7 ಡಾಗ್ಸ್’ ನಲ್ಲಿ ನಟಿಸಿದ್ದರು. ಅದರಲ್ಲಿ ಅವರು ಸಲ್ಮಾನ್ ಖಾನ್ ಜೊತೆಗೆ ಸ್ಕ್ರೀನ್ ಹಂಚಿಕೊಂಡಿದ್ದರು. ಅವರ 2026ರಲ್ಲಿ ಇತ್ತೀಚೆಗೆ ಅಭಿಜೀತ್ ಮೋಹನ್ ವಾರಂಗ್ ಅವರ ರಾಜಕೀಯ ಕತೆ ಇರುವ ‘ಆಕ್ರೀ ಸವಾಲ್’ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನಮಾಶಿ ಚಕ್ರವರ್ತಿ, ಅಮಿತ್ ಸಾಧ್, ತ್ರಿಧಾ ಚೌಧರಿ ಮತ್ತು ಸಮೀರಾ ರೆಡ್ಡಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.






