Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಿರೋಧದ ನಡುವೆಯೇ ಮುಕ್ತಾಯದ ಹಂತ ತಲುಪಿದ...

ವಿರೋಧದ ನಡುವೆಯೇ ಮುಕ್ತಾಯದ ಹಂತ ತಲುಪಿದ ಎಸ್‌ಐಆರ್ : 5.54 ಕೋಟಿಯಿಂದ 4.46 ಕೋಟಿಗೆ ಇಳಿದ ಕರಡುಪಟ್ಟಿ

ನಮೂನೆ-7ರ ವಿವಾದದ ಬಳಿಕ ಪಾರದರ್ಶಕತೆ ಪ್ರಶ್ನೆ

ಮನೋಜ್ ಆಜಾದ್ಮನೋಜ್ ಆಜಾದ್22 Oct 2026 8:45 AM IST
share
ವಿರೋಧದ ನಡುವೆಯೇ ಮುಕ್ತಾಯದ ಹಂತ ತಲುಪಿದ ಎಸ್‌ಐಆರ್ : 5.54 ಕೋಟಿಯಿಂದ 4.46 ಕೋಟಿಗೆ ಇಳಿದ ಕರಡುಪಟ್ಟಿ

ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‌ಐಆರ್) ನಿರ್ಣಾಯಕ ಹಂತ ತಲುಪಿದೆ. ಮತಪಟ್ಟಿಯನ್ನು ನಿಖರಗೊಳಿಸುವುದು ಪ್ರಕ್ರಿಯೆಯ ಉದ್ದೇಶವೆಂದು ಚುನಾವಣಾ ಆಯೋಗ ಹೇಳಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದವರ ಪ್ರಮಾಣ, ಲಕ್ಷಾಂತರ ಮತದಾರರಿಗೆ ನೀಡಲಾದ ನೋಟಿಸ್‌ಗಳು, ದಾಖಲೆಗಳ ಪರಿಶೀಲನೆ, ಸಾಮೂಹಿಕ ಆಕ್ಷೇಪಣೆಗಳ ವಿವಾದ ಮತ್ತು ಮತದಾರರ ಮರುಸೇರ್ಪಡೆಯ ಪ್ರಶ್ನೆಗಳು ಸಾರ್ವಜನಿಕ ಚರ್ಚೆಯ ಕೇಂದ್ರ ಬಿಂದುವಾಗಿವೆ.

ಎಸ್‌ಐಆರ್ ಪ್ರಕ್ರಿಯೆ ಆರಂಭದಿಂದಲೂ ಅದರ ಉದ್ದೇಶಕ್ಕಿಂತ ಅನುಷ್ಠಾನದ ವಿಧಾನವೇ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಚು.ಆಯೋಗದ ಉದ್ದೇಶವಾದರೂ, ಅರ್ಹ ಮತದಾರರ ಹೆಸರು ಕೈಬಿಡದಂತೆ ನೋಡಿಕೊಳ್ಳುವುದು ಮತ್ತು ಪ್ರಕ್ರಿಯೆಯ ವಿವರಗಳನ್ನು ಪಾರದರ್ಶಕವಾಗಿ ಸಾರ್ವಜನಿಕಗೊಳಿಸುವುದು ಕೂಡ ಅಷ್ಟೇ ಮುಖ್ಯ. ಆದರೆ ನಮೂನೆ-7ರ ಅರ್ಜಿಗಳ ವಿಲೇವಾರಿ, ನೋಟಿಸ್‌ಗಳ ವಿತರಣೆ ಹಾಗೂ ಆಕ್ಷೇಪಣೆಗಳ ಪರಿಶೀಲನೆ ಕುರಿತು ಆಯೋಗದ ಪಾರದರ್ಶಕತೆ ಪ್ರಶ್ನಾರ್ಹವಾಗಿಯೇ ಉಳಿದಿದೆ.

ಈ ಹಂತದಲ್ಲಿಯೇ ಬಿಜೆಪಿಯ ಕೆಲವು ಕಾರ್ಯಕರ್ತರು ಮುಸ್ಲಿಮ್ ಮತದಾರರ ವಿರುದ್ಧ ಸಾಮೂಹಿಕವಾಗಿ ಕಾನೂನು ಉಲ್ಲಂಘಿಸಿ ನಮೂನೆ-7 ಅರ್ಜಿಗಳನ್ನು ಸಲ್ಲಿಕೆ ಮಾಡಿರುವುದು ಬಹಿರಂಗವಾಯಿತು. ಆರಂಭದಲ್ಲಿ ವ್ಯಕ್ತವಾಗಿದ್ದ ಆತಂಕ ಮತ್ತು ನಂತರ ಬಹಿರಂಗವಾದ ಆರೋಪಗಳನ್ನು ಒಟ್ಟಾಗಿ ನೋಡಿದಾಗ, ಸಾರ್ವಜನಿಕ ವಲಯದಲ್ಲಿ ಎಸ್‌ಐಆರ್ ಕುರಿತ ಚರ್ಚೆಯು ಅದೇ ರಾಗ...ಅದೇ ಹಾಡು...ಕೊನೆಗೂ ಗೊಂದಲದಲ್ಲಿಯೇ ಮುಕ್ತಾಯವಾಗುತ್ತಿದೆ ಎನ್ನುವ ಆಕ್ರೋಶ ಉಳಿದುಕೊಂಡಿದೆ.

ಕರ್ನಾಟಕದಲ್ಲಿ ಪ್ರಗತಿಪರ ಸಂಘಟನೆಗಳು, ಜಾತ್ಯತೀತ ಪಕ್ಷಗಳು, ಪ್ರಜ್ಞಾವಂತ ನಾಗರಿಕರು, ತಜ್ಞರು ಸೇರಿದಂತೆ ಹಲವರು ಎಸ್‌ಐಆರ್ ಎಂಬುದು ಕಾನೂನು ಬಾಹಿರ, ಅವೈಜ್ಞಾನಿಕ, ಅಸಂವಿಧಾನಿಕ. ಆದುದರಿಂದ ಈ ಪ್ರಕ್ರಿಯೆಯನ್ನು ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ಎಸ್‌ಐಆರ್ ಆರಂಭಕ್ಕೂ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದರು. ಬದುಕಿದ್ದು ಸತ್ತಿದ್ದಾರೆಂದು ಹೇಳಿ, ಸ್ಥಳದಲ್ಲಿದ್ದರೂ ಸ್ಥಳಾಂತರ-ಗೈರು ಎಂದು ಹೇಳಿ ಹಲವು ಅರ್ಹ ಮತದಾರರನ್ನು ಚುನಾವಣಾ ಆಯೋಗ ಆ.24ರಂದು ಪ್ರಕಟ ಮಾಡಿದ ಕರಡು ಪಟ್ಟಿಯಲ್ಲಿ ಹೊರಗಿಟ್ಟಿರುವುದನ್ನು ನಾಗರಿಕ ಮತಕಾವಲು ಸಮಿತಿ ತಂಡ ನಡೆಸಿದ ಸಮೀಕ್ಷೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯೇ ಅವೈಜ್ಞಾನಿಕ ಎಂದು ಸಾಕ್ಷಿ ಸಮೇತ ಸಾಬೀತುಪಡಿಸಿದೆ.

ರಾಜ್ಯದಲ್ಲಿ ಎಸ್‌ಐಆರ್ ಆರಂಭಕ್ಕೂ ಮುನ್ನ ಜೂ.16 ರಂದು 5,54,32,314 ಮತದಾರರನ್ನು ಹೊಂದಿದ್ದ ಮತದಾರರ ಪಟ್ಟಿಯು ಆ.24ರಂದು ಕರಡು ಪಟ್ಟಿ ಪ್ರಕಟವಾಗುವ ವೇಳೆಗೆ 4,46,35,975ಕ್ಕೆ ಇಳಿದಿತ್ತು. ಅಂದರೆ, ಹಿಂದಿನ ಪಟ್ಟಿಗೆ ಹೋಲಿಸಿದರೆ 1,07,96,339 ಮತದಾರರಷ್ಟು ಕಡಿಮೆಯಾಗಿತ್ತು. ಇವರಲ್ಲಿ 15,17,042 ಮಂದಿ ಗೈರು, 65,45,679 ಮಂದಿ ಶಾಶ್ವತ ಸ್ಥಳಾಂತರ, 16,39,864 ಮೃತರು, 7,09,870 ನಕಲಿ ಹಾಗೂ 3,83,884 ಜನ ಇತರ ವರ್ಗದಲ್ಲಿ ಡಿಲೀಟ್ ಮಾಡಲಾಗಿದೆ.

ನಮೂನೆ-6 ಅರ್ಜಿಗಳು: ಮರುಸೇರ್ಪಡೆಗೆ ಮುಂದಾದರು ಶೇ.9ರಷ್ಟು ಮಾತ್ರ

ಕರಡು ಪಟ್ಟಿಯಿಂದ ಹೊರಗುಳಿದವರು ಮತ್ತು 18 ವರ್ಷ ಮೇಲ್ಪಟ್ಟ ಅರ್ಹ ಮತದಾರರು ತಮ್ಮ ಹೆಸರನ್ನು ಮತಪಟ್ಟಿಯಲ್ಲಿ ಸೇರ್ಪಡೆಗೊಳಿಸಿಕೊಳ್ಳಲು ನಮೂನೆ 6 ಸಲ್ಲಿಸಬಹುದು. ಅ.16ರ ವರದಿಯ ಪ್ರಕಾರ, ಕರ್ನಾಟಕದಲ್ಲಿ 10.07 ಲಕ್ಷ ನಮೂನೆ 6 ಅರ್ಜಿಗಳು ಸ್ವೀಕೃತವಾಗಿದ್ದವು. ಇದು ಎಎಸ್‌ಡಿಡಿಒ ವರ್ಗದ 1.0796 ಕೋಟಿ ಸಂಖ್ಯೆಗೆ ಹೋಲಿಸಿದರೆ ಸುಮಾರು ಶೇ.9ರಷ್ಟು ಮಾತ್ರ ಆಗಿದೆ. ಅರ್ಜಿ ಸಲ್ಲಿಸಿದವರಲ್ಲಿ ಎಷ್ಟು ಮಂದಿಯ ಹೆಸರು ಮರುಸೇರ್ಪಡೆಯಾಗಿದೆ? ಎನ್ನುವುದು ಅಂತಿಮ ಮತಪಟ್ಟಿ ಪ್ರಕಟವಾದ ನಂತರ ಬಹಿರಂಗವಾಗಲಿದೆ.

ನಮೂನೆ 7 ವಿವಾದ: ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವಂತೆ ಕೋರುವ ನಮೂನೆ 7 ಅರ್ಜಿಗಳ ಸಂಖ್ಯೆಯೂ ಚರ್ಚೆಗೆ ಕಾರಣವಾಗಿದೆ. ಅ.16ರ ವೇಳೆಗೆ ಒಟ್ಟು 1,55,109 ನಮೂನೆ-7 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿದು ಬಂದಿದೆ.

ಅ.27ರ ಅಂತಿಮ ಪಟ್ಟಿಯೇ ನಿರ್ಣಾಯಕ

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಇದುವರೆಗೆ ಲಭ್ಯವಾಗಿರುವ ಅಂಕಿಅಂಶಗಳು ದೊಡ್ಡ ಪ್ರಮಾಣದ ಪರಿಶೀಲನೆ ಮತ್ತು ಬದಲಾವಣೆಗಳನ್ನು ತೋರಿಸುತ್ತವೆ. ಅ.22ರಂದು ನೋಟಿಸ್‌ಗಳಿಗೆ ಸಂಬಂಧಿಸಿದ ವಿಚಾರಣೆ ಮತ್ತು ಹಕ್ಕು-ಆಕ್ಷೇಪಣೆಗಳ ವಿಲೇವಾರಿಗೆ ನಿಗದಿಪಡಿಸಿರುವ ಗಡುವು ಮುಕ್ತಾಯಗೊಳ್ಳಲಿದ್ದು, ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.

Tags

SIRDraft List
share
ಮನೋಜ್ ಆಜಾದ್
ಮನೋಜ್ ಆಜಾದ್
Next Story
X