ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: ಮೈಸೂರು, ಕಲಬುರಗಿ ಸಹಿತ ಹಲವೆಡೆ ನೇಮಕವಾಗದ ನೋಂದಣಾಧಿಕಾರಿಗಳು

ಸಾಂದರ್ಭಿಕ ಚಿತ್ರ (AI)
ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಚಟುವಟಿಕೆ ಕೈಗೊಳ್ಳಲು ಚುನಾವಣಾ ಆಯೋಗವು ರಾಜ್ಯದಲ್ಲಿ ಈಗಾಗಲೇ ಚಾಲನೆ ನೀಡಿದೆಯಾದರೂ ರಾಜ್ಯದ ಕಲಬುರಗಿ, ಮೈಸೂರು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮತದಾರರ ನೋಂದಣಾಧಿಕಾರಿಗಳನ್ನು ನೇಮಿಸಿಲ್ಲ.
ಮತದಾರರ ಪಟ್ಟಿ ಪರಿಷ್ಕರಣೆ-2026ಕ್ಕೆ ಸಂಬಂಧಿಸಿದಂತೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಗಮನ ಸೆಳೆದಿದ್ದರು. ಅಲ್ಲದೇ ಬ್ಲಾಕ್ ಮಟ್ಟದಲ್ಲಿ ಬಿಎಲ್ಒಗಳ ಜತೆಯಲ್ಲಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದು ಎಚ್ಚರಿಕೆಯಿಂದ ಗಮನಿಸಬೇಕು ಎಂದು ಸೂಚಿಸಿದ್ದರು. ಇದರ ಬೆನ್ನಲ್ಲೇ ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಿಸಬೇಕು ಎಂದು 2025ರಲ್ಲೇ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ನಗರಾಭಿವೃದ್ಧಿ ಇಲಾಖೆಗೆ ಬರೆದಿದ್ದ ಪತ್ರವು ಬಹಿರಂಗವಾಗಿದೆ.
ಈ ಪತ್ರ ಬರೆದು ಒಂದ ವರ್ಷವಾದರೂ ಮತದಾರರ ನೋಂದ ಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ 'the-file.in'ಗೆ ನಗರಾಭಿವೃದ್ಧಿ ಇಲಾಖೆಯ (UDD/194/MNE/2025- COMPUTER NUMBER 1807845) ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.
<ಎಲ್ಲೆಲ್ಲಿ ಖಾಲಿ ಇವೆ?: ರಾಜ್ಯದ ಕಲಬುರಗಿ ಮಹಾನಗರಪಾಲಿಕೆಯ ಕಲಬುರಗಿ ದಕ್ಷಿಣ, ಮೈಸೂರು ಮಹಾನಗರ ಪಾಲಿಕೆಯ ನರಸಿಂಹರಾಜ ವಿಧಾನಸಭೆ ಕ್ಷೇತ್ರ, ಬೆಳಗಾವಿ ಮಹಾನಗರಪಾಲಿಕೆಯ ಬೆಳಗಾವಿ ಉತ್ತರ ವ್ಯಾಪ್ತಿಯಲ್ಲಿ ಮತದಾರರ ನೋಂದಣಾಧಿಕಾರಿಗಳ ಹುದ್ದೆಯನ್ನು ಭರ್ತಿ ಮಾಡಿಲ್ಲ. ರಾಜ್ಯದ ಮಹಾನಗರಪಾಲಿಕೆಗಳ ವೃಂದ ಮತ್ತು ನೇಮಕಾಥಿ ನಿಯಮಗಳು 2011ರ ಅನ್ವಯ ರಾಜ್ಯದ ಮಹಾನಗರಪಾಲಿಕೆಗಳಲ್ಲಿ ಉಪ ಆಯುಕ್ತರು (ಆಡಳಿತ) ಹುದ್ದೆಗಳನ್ನು ಕೆಎಎಸ್ ಹಿರಿಯ ಶ್ರೇಣಿ, ಕೆಎಂಎಎಸ್ ಪೌರಾಯುಕ್ತರು ಗ್ರೇಡ್ 1 ವೃಂದದಿಂದ, ಕೌನ್ಸಿಲ್ ಕಾರ್ಯದರ್ಶಿ/ಸಹಾ ಯಕ ಆಯುಕ್ತರು (ವಲಯ ಆಯುಕ್ತರು) ಹುದ್ದೆಗಳನ್ನು ಕೆಎಎಸ್ ಕಿರಿಯ ಶ್ರೇಣಿ, ಕೆಎಂಎಎಸ್ ಪೌರಾಯುಕ್ತರು, ಗ್ರೇಡ್ 2 ವೃಂದದಿಂದ ನಿಯೋಜನೆ ಮೇಲೆ ಭರ್ತಿ ಮಾಡಬೇಕು.
ಮೈಸೂರು ಮಹಾನ ಗರಪಾಲಿಕೆಯ ಉಪ ಆಯುಕ್ತ ರಾಗಿ ಈಗಾಗಲೇ ದಾಸೇಗೌಡ ಎಂಬವರು ಕಾರ್ಯ ನಿರ್ವಹಿ ಸುತ್ತಿದ್ದಾರೆ. ಹೀಗಾಗಿ ಈ ಹುದ್ದೆಯು ಖಾಲಿ ಇಲ್ಲ. ಅಲ್ಲದೇ ಮೈಸೂರು ಮಹಾನ ಗರಪಾಲಿಕೆಯ ನರಸಿಂಹರಾಜ ವಿಧಾನಸಭೆ ಕ್ಷೇತ್ರದಲ್ಲಿ ಸಹಾಯಕ ಮತದಾರರ ನೋಂದ ಣಾಧಿಕಾರಿ ಹುದ್ದೆಯು ಖಾಲಿ ಇದೆ. ಅಲ್ಲದೇ ಪಾಲಿಕೆಯಲ್ಲಿ ಖಾಲಿ ಇರುವ ಕೌನ್ಸಿಲ್ ಕಾರ್ಯದರ್ಶಿ ಹುದ್ದೆಯೂ ಖಾಲಿ ಇರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಈ ಹುದ್ದೆಗಳನ್ನು ಚುನಾವಣೆ ಆಯೋಗದ ನಿರ್ದೇಶನದಂತೆ ತುರ್ತಾಗಿ ಭರ್ತಿ ಮಾ ಡಬೇಕು ಎಂದು 2025ರ ಜೂನ್ 13ರಂದೇ ಇಲಾಖೆಯ ಅಧಿಕಾರಿಯು ಟಿಪ್ಪಣಿ ಹಾಳೆಯಲ್ಲಿ ವಿವರಿಸಿದ್ದರು. ಆದರೆ ವರ್ಷ ಕಳೆದರೂ ಈ ಹುದ್ದೆಗಳನ್ನು ಭರ್ತಿ ಮಾಡಿಲ್ಲ.
‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಂಬಂಧಿತ ಖಾಲಿ ಇರುವ ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಸಂಬಂಧಪಟ್ಟ ಇಲಾ ಖೆಗಳಿಗೆ ನಿರ್ದೇಶನ ನೀಡಲು ಕೋರಲಾಗಿತ್ತು. ಆದರೆ ಇದುವರೆಗೂ ಭರ್ತಿಯಾಗದೇ ಇರುವು ದರಿಂದ ಮತದಾರರ ನೋಂದ ಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಭಾರತ ಚುನಾವಣೆ ಆಯೋಗವು 2025ರ ಆಗಸ್ಟ್ 28ರಂದೇ ಅರೆ ಸರಕಾರಿ ಪತ್ರವನ್ನು ಬರೆದಿತ್ತು.
ಈ ಮಧ್ಯೆ ಕರ್ನಾಟಕ ಮುಖ್ಯ ಚುನಾವಣಾ ಧಿಕಾರಿಗಳು ರಾಜ್ಯದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ವೇಳಾಪಟ್ಟಿಯನ್ನು 2026ರ ಮೇ 14ರಂದು ಪ್ರಕಟಿಸಿತ್ತು. ಆದರೆ, ಇದಕ್ಕೂ ಮುನ್ನವೇ ಕರ್ನಾಟಕ ರಾಜ್ಯದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಪ್ರಾರಂಭಕ್ಕೂ ಮುನ್ನ ವಿಧಾನಸಭೆ ಕ್ಷೇತ್ರವಾರು ಅಧಿಸೂಚಿಸಿರುವ ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಹಲವಾರು ಬಾರಿ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಬರೆದಿದ್ದ ಪತ್ರಗಳನ್ನು ಕಾಲಕಸವಾಗಿದ್ದವು.
‘ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳ ಹುದ್ದೆಗಳನ್ನು ಜರೂರಾಗಿ ಭರ್ತಿ ಮಾಡಬೇಕು. ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ನಿರತರಾಗಿರುವ ಯಾವುದೇ ಅಧಿಕಾರಿ ನೌಕರರನ್ನು ವರ್ಗಾವಣೆ ಮಾಡಬಾರದು. ಅನಿವಾರ್ಯವಾದಲ್ಲಿ ಚುನಾವಣೆ ಆಯೋಗದ ಅನುಮತಿ ಪಡೆಯಬೇಕು’ ಎಂದು ಸೂಚಿಸಲಾಗಿತ್ತು.
ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಸರಕಾರದ ಕಾರ್ಯದರ್ಶಿ ದೀಪಾ ಚೋಳನ್ ಅವರು ಅಧಿಕಾರಿಗಳೊಂದಿಗೆ 2026ರ ಜೂನ್ 1ರಂದು ಚರ್ಚಿಸಿರುವುದು ಗೊತ್ತಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2026ರ ಫೆಬ್ರವರಿ 5 ರಂದು ನಡೆದಿದ್ದ ಸಚಿವ ಸಚಿವ ಸಂಪುಟಕ್ಕೆ ಎಸ್ಐಆರ್ ಕುರಿತಾದ ಸಮಗ್ರ ಮಾಹಿತಿಯನ್ನು ಒದಗಿಸಿತ್ತು.






