ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಹುಟ್ಟುಹಬ್ಬ ಸಂಭ್ರಮ; ಅಭಿಮಾನಿಗಳಿಗೆ ‘ಮೆರ್ಸಲ್’ ರಿ-ರಿಲೀಸ್ ಉಡುಗೊರೆ

ವಿಜಯ್ | Photo Credit : Mersal (2017) - IMDb
ವಿಜಯ್ ಅವರ ಹುಟ್ಟುಹಬ್ಬ ಸೋಮವಾರ ಇರುವ ಕಾರಣದಿಂದ ಜೂನ್ 19ರಂದು ಶುಕ್ರವಾರ ‘ಮೆರ್ಸಲ್’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ವಾರಾಂತ್ಯ ಹಬ್ಬದ ಸಂಭ್ರಮವಾಗಿದೆ.
ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರ ಸಿನಿಮಾ ಟಿವಿಗಳಲ್ಲಿ ಮರುಪ್ರಸಾರವಾಗುತ್ತಿರುವುದು ಮತ್ತು ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಗುತ್ತಿರುವುದು ಮುಂದುವರಿದಿದೆ. ಇದೀಗ ವಿಜಯ್ ನಟನೆಯ ಮತ್ತೊಂದು ಸೂಪರ್ ಹಿಟ್ ಚಿತ್ರ ಮತ್ತೆ ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿದೆ. ಆಟ್ಲೀ ನಿರ್ದೇಶನದ ಮತ್ತು ತೆನಾಂಡಾಲ್ ನಿರ್ಮಾಣದ ವಿಜಯ್ ನಟಿಸಿದ 2017ರ ಚಲನಚಿತ್ರ ‘ಮೆರ್ಸಲ್’ ಜೂನ್ 22ರಂದು ಅವರ ಹುಟ್ಟುಹಬ್ಬದಂದು ಮರುಬಿಡುಗಡೆಯಾಗುತ್ತಿದೆ.
ವಿಜಯ್ ಅವರ ಹುಟ್ಟುಹಬ್ಬ ಸೋಮವಾರ ಇರುವ ಕಾರಣದಿಂದ ಜೂನ್ 19ರಂದು ಶುಕ್ರವಾರ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ವಾರಾಂತ್ಯ ಹಬ್ಬದ ಸಂಭ್ರಮವಾಗಿದೆ.
ವಿಜಯ್ ಹುಟ್ಟುಹಬ್ಬದ ಸಂಭ್ರಮ ಆಚರಿಸಲು ಕೆಪಿ ಪ್ರಿಯಾಂಕಾ ಪ್ರೊಡಕ್ಷನ್ ಪರವಾಗಿ ‘ಮೆರ್ಸಲ್’ ಅನ್ನು ಕೆ ಕನ್ನಡಿ ಮರುಬಿಡುಗಡೆ ಮಾಡುತ್ತಿದ್ದಾರೆ. ಜೂನ್ 19ರಂದು ಚೆನ್ನೈ, ಚೆಂಗಲ್ಪೇಟೆ, ಕಾಂಚಿಪುರಂ ಮತ್ತು ತಿರುವಳ್ಳೂರು ಜಿಲ್ಲೆಯ ಸುಮಾರು 100 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.
ಆಟ್ಲಿ ನಿರ್ದೇಶನದ ‘ಮೆರ್ಸಲ್’ ಒಂದು ಆ್ಯಕ್ಷನ್-ಥ್ರಿಲ್ಲರ್ ಸಿನಿಮಾವಾಗಿದ್ದು, ವಿಜಯ್ ತ್ರಿಪಾತ್ರದಲ್ಲಿ ನಟಿಸಿದ್ದಾರೆ. ವೈದ್ಯಕೀಯ ಉದ್ಯಮದ ಭ್ರಷ್ಟಾಚಾರದ ವಿಷಯಗಳ ಸುತ್ತ ಕಥೆ ಹೆಣೆಯಲಾಗಿದೆ. ವಿಜಯ್ ಸಿನಿಮಾದಲ್ಲಿ ಜಾದೂಗಾರ, ವೈದ್ಯ ಮತ್ತು ವೈದ್ಯನ ತಂದೆಯ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಆ್ಯಕ್ಷನ್, ನಾಟಕ ಮತ್ತು ಹಾಸ್ಯವನ್ನು ಬಲವಾದ ಸಾಮಾಜಿಕ ಸಂದೇಶಗಳೊಂದಿಗೆ ಬೆರೆಸಲಾಗಿದೆ.
‘ಮೆರ್ಸಲ್’ನಲ್ಲಿ ವಿಜಯ್ ಅಭಿನಯವನ್ನು ಪ್ರಶಂಸಿಸಲಾಗಿದ್ದರೂ, ಮಿಶ್ರ ವಿಮರ್ಶೆ ದೊರೆತಿತ್ತು. ವಿಜಯ್ ತಮ್ಮ ನಡವಳಿಕೆ, ಧ್ವನಿ ಸಮನ್ವಯತೆ ಮತ್ತು ಆಂಗಿಕ ಅಭಿನಯದ ಮೂಲಕ ಮೂರು ಪಾತ್ರವನ್ನು ಪ್ರತ್ಯೇಕವಾಗಿ ಕಾಣುವಂತೆ ವಿಭಿನ್ನಗೊಳಿಸಿದ್ದರು. ಅವರ ಸ್ವಾಭಾವಿಕ ವರ್ಚಸ್ಸು ಮತ್ತು ನಟನೆ ಪರದೆಯ ಮೇಲೆ ಪ್ರಾಬಲ್ಯ ಸಾಧಿಸಿತ್ತು.
ಆಟ್ಲಿ ಮತ್ತು ವಿಜಯ್ ಜೊತೆಯಾಗಿ ಕೆಲಸ ಮಾಡಿದ 2ನೇ ಸಿನಿಮಾ ಮೆರ್ಸಲ್. ‘ಥೇರಿ’ಯಲ್ಲಿ ಇಬ್ಬರೂ ಮೊದಲ ಬಾರಿಗೆ ಜೊತೆಗೂಡಿ ಕೆಲಸ ಮಾಡಿದ್ದರು. ತೆನಂಡಾಲ್ ಸ್ಟುಡಿಯೋಸ್ಗೆ ಇದು 100ನೇ ಸಿನಿಮಾವಾಗಿದೆ. ಸಿನಿಮಾದಲ್ಲಿ ಸಮಂತಾ, ಕಾಜಲ್ ಅಗರವಾಲ್ ಮತ್ತು ನಿತ್ಯಾ ಮೆನನ್ ನಾಯಕಿಯರಾಗಿ ನಟಿಸಿದ್ದರು. ಸಂಗೀತ ಎಆರ್ ರೆಹಮಾನ್, ಛಾಯಾಗ್ರಹಣ ಜಿಕೆ ವಿಷ್ಣು ಮತ್ತು ಸಂಕಲನ ರೂಬೆನ್ ಅವರದ್ದಾಗಿದೆ.
ನಿರ್ದೇಶಕ ಆಟ್ಲಿ ಅವರು ವಿಜಯ್ ಅವರ ಮಾಸ್ ಆಕರ್ಷಣೆಗೆ ತಕ್ಕಂತೆ ದೃಶ್ಯಗಳು ಮತ್ತು ಸಂಭಾಷಣೆಗಳನ್ನು ನೀಡಿ ಭಾವನಾತ್ಮಕವಾದ ಸಿನಿಮಾವನ್ನು ಮುಂದಿಟ್ಟಿದ್ದರು. ವಿಜಯ್ಗೆ ಆಟ್ಲಿ ‘ಥೇರಿ’ಯಲ್ಲಿ ತಂದೆ-ಮಗನ ಡೈನಾಮಿಕ್ಸ್ ಮತ್ತು ‘ಮೆರ್ಸಲ್’ನಲ್ಲಿ ತ್ರಿವಳಿ ಪಾತ್ರದ ಸವಾಲನ್ನು ಒಡ್ಡಿ ಯಶಸ್ವೀ ಸಿನಿಮಾಗಳನ್ನು ನೀಡಿದ್ದಾರೆ.






