Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಗೋಕುಲ ಸಹೃದಯನಲ್ಲಿ ಅರಳಿದ ‘ಚಿಟ್ಟೆ’

ಗೋಕುಲ ಸಹೃದಯನಲ್ಲಿ ಅರಳಿದ ‘ಚಿಟ್ಟೆ’

ಗಣೇಶ ಅಮೀನಗಡಗಣೇಶ ಅಮೀನಗಡ25 Aug 2023 11:38 AM IST
share
ಗೋಕುಲ ಸಹೃದಯನಲ್ಲಿ ಅರಳಿದ ‘ಚಿಟ್ಟೆ’

ಚುಕ್ಕಿ ಚಂದ್ರಮನ ಜೊತೆ

ಓಡಾಡಬೇಕು

ಕನಸಿನ ಜಾತ್ರೆಯಲಿ

ನೋವ ಮರೀಬೇಕು

ಜೋ ಜೋ ಜೋಜೋ

ಹೀಗೆ ಹಾಡುವ ಹಾಡಿಗೆ ಅಭಿನಯಿಸುವನು ಗೋಕುಲ ಸಹೃದಯ ಎಂಬ ಏಳನೆಯ ತರಗತಿ ಓದುವ ಬಾಲಕ. ಪಾಪಣ್ಣಿ ಎಂಬ ಪಾತ್ರಧಾರಿಯು ತಾನೇ ಆಗಿ ರಂಗದ ಮೇಲೆ ಒಂದು ಗಂಟೆಗೂ ಹೆಚ್ಚು ಕಾಲ ಪ್ರೇಕ್ಷಕರನ್ನು ಹಿಡಿದಿಡುತ್ತಾನೆ. ರಾಜ್ಯದಾದ್ಯಂತ ಅಲ್ಲದೆ ಮಧ್ಯಪ್ರದೇಶ, ರಾಜಸ್ಥಾನ ಮೊದಲಾದ ರಾಜ್ಯಗಳಲ್ಲಿಯೂ ಅವನ ಅಭಿನಯದ ‘ಚಿಟ್ಟೆ’ ಪ್ರದರ್ಶನ ಕಂಡಿದೆ. ಸದ್ಯ ೯೫ಕ್ಕೂ ಅಧಿಕ ಪ್ರದರ್ಶನ ಕಂಡಿರುವ ಈ ನಾಟಕದ ನೂರನೇ ಪ್ರದರ್ಶನವನ್ನು ಸೆಪ್ಟಂಬರ್ ೧೬ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಹೀಗೆ ಥಟ್ಟನೆ ನೂರು ಪ್ರದರ್ಶನ ಕಂಡಿದ್ದಲ್ಲ. ಲಾಕ್‌ಡೌನ್ ಮುಂಚೆ ಈ ನಾಟಕ ಶುರುವಾದಾಗ ಗೋಕುಲ ಸಹೃದಯ ನಾಲ್ಕನೆಯ ತರಗತಿ ಓದುತ್ತಿದ್ದ. ನೂರನೆಯ ಪ್ರದರ್ಶನ ಕಾಣುವ ವೇಳೆಗೆ ಏಳನೆಯ ತರಗತಿಯಲ್ಲಿ ಓದುತ್ತಿದ್ದಾನೆ.

ಇನ್ನು ನಾಟಕ ಕುರಿತು; ಶಾಲೆ ಬಿಟ್ಟ ಮೇಲೆ ಬ್ಯಾಗು ಸಮೇತ ಕೆರೆ ಬಳಿ ಬಂದು, ಚಿಟ್ಟೆ ಹಿಡಿಯಲು ಪ್ರಯತ್ನಿಸಿ ನಿರಾಸೆಯಾಗಿ ಕೆರೆಯೊಂದಿಗೆ ಮಾತನಾಡುತ್ತಾನೆ. ಹೀಗೆ ಕೆರೆಯೊಂದಿಗೆ ಮಾತನಾಡುವುದೇ ಸೋಜಿಗ, ಸೊಗಸು. ತನ್ನ ಕಷ್ಟನಷ್ಟ, ಸಂಕಟ, ಸಂತಸಗಳನ್ನೆಲ್ಲ ಕೆರೆಯೊಂದಿಗೆ ಹಂಚಿಕೊಳ್ಳುತ್ತಾನೆ. ‘‘ನೀ ಏನೂ ಮಾತನಾಡ್ತಾನೇ ಇಲ್ಲ ಯಾಕೆ?’’ ಎಂದು ಕೆರೆಯನ್ನು ಕೇಳಿದಾಗ ಗಾಳಿ ಬೀಸುವುದನ್ನು ಅನುಭವಿಸುತ್ತ ‘‘ಗಾಳಿ ಬೀಸ್ತಾ ಇದೆ, ಅಲೆಗಳು ಬರ್ತಾ ಇವೆ. ನಂಗೊತ್ತು ನೀನು ನನ್ನ ಜೊತೆ ಮಾತಾಡ್ತಾ ಇದ್ದೀಯ ಅಂತ’’ ಎಂದು ಸಮಾಧಾನಪಟ್ಟುಕೊಳ್ಳುತ್ತಾನೆ. ನಂತರ ಕಾಗದದ ದೋಣಿಗಳನ್ನು ಕೆರೆಯಲ್ಲಿ ತೇಲಿಬಿಟ್ಟು ಖುಷಿಪಡುತ್ತಾನೆ. ನಂತರ ಎಷ್ಟೇ ಮಾತನಾಡಿದರೂ ಮಾತನಾಡದ ಕೆರೆಗೆ ‘‘ಏನಾದ್ರೂ ಮಾತಾಡು ಪ್ಲೀಸ್’’ ಎಂದು ಗೋಗರೆಯುತ್ತಾನೆ. ಹಾಗೆಯೇ ಹಾರಿ ಬಂದ ಚಿಟ್ಟೆಯನ್ನು ಹಿಡಿದು

ಡೋಂಟ್ ಶೌಟ್

ಡೋಂಟ್ ಟಾಕ್

ಡೋಂಟ್ ಲಾಫ್

ಡೋಂಟ್ ಫ್ಲೈ

ಎಂದು ತನ್ನ ಶಿಕ್ಷಕರು ಗದರುವ ಹಾಗೆ ಗದರುತ್ತಾನೆ. ನಂತರ ತನ್ನ ಶಾಲೆಯ ಶಮೀನಾ ಶಿಕ್ಷಕಿಯನ್ನು ನೆನಪಿಸಿಕೊಳ್ಳುತ್ತಾನೆ. ಆವತ್ತು ಇದ್ದ ಶಾಲೆಯ ವಾರ್ಷಿಕೋತ್ಸವದ ದಿನದಂದು ಓಟದ ಸ್ಪರ್ಧೆಯಲ್ಲಿ ಮೊದಲ ಬಹುಮಾನವಾಗಿ ಟಿಫಿನ್ ಬಾಕ್ಸ್ ಪಡೆದುದನ್ನು ನೆನಪಿಸಿಕೊಳ್ಳುತ್ತಾನೆ. ಅಂದು ಶಾಲೆಯಲ್ಲಿ ಕೊಟ್ಟ ಬಾಳೆಹಣ್ಣನ್ನು ತಿಂದು, ಲಾಡುವನ್ನು ತನ್ನ ತಂಗಿ, ಅಮ್ಮನೊಂದಿಗೆ ತಿನ್ನಬೇಕೆಂದು ಬಚ್ಚಿಟ್ಟುಕೊಳ್ಳುತ್ತಾನೆ. ಬಳಿಕ ತನ್ನ ಸಹಪಾಠಿಗಳೊಂದಿಗೆ ನೃತ್ಯ ಮಾಡುವಾಗ ಕುಡಿದುಕೊಂಡು ಬಂದ ಆತನ ಅಪ್ಪ, ವೇದಿಕೆ ಹತ್ತಿ, ಗಲಾಟೆ ಮಾಡಿದಾಗ ಅವನ ತಾಯಿ ಗಲಾಟೆ ಮಾಡಬೇಡಿರೆಂದು ಕೇಳಿಕೊಂಡರೂ ಕೇಳದೆ ಶಮೀನಾ ಶಿಕ್ಷಕಿಗೆ ಬೈದು ಪಾಪಣ್ಣಿಯನ್ನು ಎಳೆದೊಯ್ಯುವಾಗ ‘‘ಅಪ್ಪ, ನಾನು ಡ್ಯಾನ್ಸ್ ಮಾಡಬೇಕು. ಪ್ಲೀಸ್ ಬಿಡಪ್ಪ. ಹೊಡಿಬೇಡಪ್ಪ’’’ ಎಂದು ಬೇಡಿಕೊಳ್ಳುತ್ತಾನೆ. ಆಗ ಶಮೀನಾ ಟೀಚರ್ ‘‘ಯಾಕೆ ಹೊಡಿತೀರಾ? ಡ್ಯಾನ್ಸ್ ಮಾಡೋಕೆ ಹೊಸ ಬಟ್ಟೆ ತಗೊಬೇಕಂತ ಮನೆಯಿಂದ ನೂರೈವತ್ತು ರೂಪಾಯಿ ತಂದಿದ್ದಾನೆ’’ ಎನ್ನುತ್ತಾರೆ. ಆಗ ಅವನ ಅಪ್ಪ ‘‘ದುಡ್ಡು ವಾಪಸು ಕೊಡಿ, ಇಲ್ಲದಿದ್ರೆ ಡ್ಯಾನ್ಸು ಏನೂ ಬೇಡ’’ ಎಂದು ಜೋರು ಮಾಡುತ್ತಾನೆ. ‘‘ಒಂದು ತಿಂಗಳಿಂದ ತಾಲೀಮು ಮಾಡಿದ್ದಾರೆ. ಸುಮ್ಮನಿರಿ’’ ಎಂದರೂ ಕೇಳದ ಅಪ್ಪ ದುಡ್ಡು ಕೊಡಲು ಒತ್ತಾಯಿಸುತ್ತಾನೆ. ಆಗ ಹೆಡ್ ಮಾಸ್ಟ್ರು ‘‘ಅವರಿಬ್ಬರನ್ನೂ ಕೆಳಗೆ ಇಳಿಸಿ, ಡ್ಯಾನ್ಸ್ ಮುಂದುವರಿಸಿ’’ ಎನ್ನುತ್ತಾರೆ. ಆಗ ಶಮೀನಾ ಶಿಕ್ಷಕಿ ತಮ್ಮ ಪರ್ಸ್‌ನಿಂದ ನೂರೈವತ್ತು ರೂಪಾಯಿ ತೆಗೆದು ಅಪ್ಪನಿಗೆ ಕೊಟ್ಟಾಗ ಕೂಡಲೇ ಹೊರಟುಬಿಡುತ್ತಾನೆ. ನಂತರ ನೃತ್ಯಕ್ಕೆ ಹೆಜ್ಜೆ ಹಾಕುತ್ತಾನೆ ಪಾಪಣ್ಣಿ. ಆದರೆ ಮನೆಗೆ ಬಂದಾಗ ಅವನ ಅಪ್ಪ, ಅಮ್ಮನ ಮೇಲೆ ರೇಗಾಡಿದಾಗ ತನ್ನ ಅಣ್ಣ ಬಾಗಿನಕ್ಕೆ ಕೊಟ್ಟ ದುಡ್ಡಲ್ಲಿ ಮಗನಿಗೆ ಹೊಸ ಬಟ್ಟೆ ಕೊಡಿಸಿದೆ ಎಂದರೂ ರಂಪ ಮಾಡಿ, ಹೊಡೆದುದನ್ನು ನೆನಪಿಸಿಕೊಳ್ಳುತ್ತಾನೆ. ಓಟದಲ್ಲಿ ತನಗೆ ಬಹುಮಾನವಾಗಿ ಟಿಫಿನ್ ಬಾಕ್ಸ್ ಬಂದಿರುವುದನ್ನು ತೋರಿಸಿದಾಗ ಅಮ್ಮ ‘‘ಈ ಟಿಫಿನ್ ಬಾಕ್ಸ್ ಹುಷಾರಾಗಿ ಇಟ್ಕೊ ಮಗನೆ. ಇದ್ರಲ್ಲಿ ಯಾವತ್ತಾದ್ರೂ ಒಂದು ದಿನ ಊಟ ಹಾಕಿ ಕೊಟ್ಟೇ ಕೊಡ್ತೀನಿ’’ ಎನ್ನುವ ಮೂಲಕ ಕಾಡುವ ಹಸಿವು, ಮಗನಿಗೆ ಊಟ ಕಳಿಸಿಕೊಡಲಾಗದ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಆಮೇಲೆ ಶಾಲೆಯಲ್ಲಿ ಕೊಟ್ಟಿದ್ದ ಲಾಡುವನ್ನು ಹಂಚಿಕೊಂಡು ತಿನ್ನುತ್ತಾರೆ. ಇಷ್ಟಾದರೂ ಅವನ ಅಮ್ಮ ಜೋಗುಳ ಹಾಡಿ ಮಲಗಿಸುತ್ತಾಳೆ.

ನಗುತಾ ಇರಬೇಕು

ಅಳುವನ್ನು ಮರಿಬೇಕು

ಹಸಿವಿನ ಭೂತವ

ಓಡಿಸಬೇಕು ಓಡಿಸಬೇಕು

ಎನ್ನುವ ಮೂಲಕ ಧೈರ್ಯ ತುಂಬುತ್ತಾಳೆ. ಒಂದು ದಿನ ಕಂಡ ಕನಸಿನಲ್ಲಿ ತನ್ನ ಅಪ್ಪ ಮಿಠಾಯಿ ತಿನ್ನಿಸಿದ್ದು, ತಂಗಿಯ ಕಾಲಿಗೆ ಮುಳ್ಳು ಚುಚ್ಚಿದಾಗ ಆರೈಕೆ ಮಾಡಿದ್ದು ನೆನಪಿಸಿಕೊಳ್ಳುತ್ತಾನೆ. ತನ್ನ ಅಪ್ಪ ಕನಸಿನಲ್ಲಿ ಇದ್ದ ಹಾಗೆ ನಿಜಜೀವನದಲ್ಲಿ ಯಾಕಿಲ್ಲ ಎಂದು ಕೇಳಿಕೊಳ್ಳುತ್ತಾನೆ. ಆಗ ತಂಗಿಗೆ ಹಸಿವಾಗಿದ್ದಕ್ಕೆ ‘‘ಒಂದು ಲೋಟ ಹಾಲು ತರ್ತೇನೆ, ಕಣ್ಣು ಮುಚ್ಚಿಕೊಂಡು ಕುಡಿಯಬೇಕು’’ ಎಂದು ಕುಡಿಯಲು ನೀರು ತಂದು ಕುಡಿಸುತ್ತಾನೆ. ನಂತರ ಸುಳ್ಳು ಹೇಳಿದೆ ಎಂದು ಪರಿತಪಿಸುತ್ತಾನೆ. ಇದಾದ ಮೇಲೆ ಹಸಿವಿನ ಕುರಿತು ಮತ್ತೊಂದು ದೃಶ್ಯದಲ್ಲೂ ಅನಾವರಣಗೊಳಿಸುತ್ತಾನೆ. ತನ್ನ ಗೆಳೆಯ ಬಶೀರನ ಮನೆಗೆ ಹೋಗುವಾಗ ಬೀದಿ ತುಂಬಾ ಚಿಕನ್ ಬಿರಿಯಾನಿ ಪರಿಮಳ ಘಮ್ ಅಂತ ಬರ್ತಿದೆ ಎಂದು ‘‘ಹೊಟ್ಟೆ ತುಂಬಾ ಪರಿಮಳ ಕುಡಿತೀನಿ’’ ಎಂದು ಪರಿಮಳ ಹೀರುತ್ತಾನೆ. ನಂತರ ಮನೆಗೆ ಬಂದು ತನ್ನ ತಾಯಿಗೆ ಹೇಳಿದಾಗ ‘‘ಮಾರವಾಡಿ ಅಂಗಡಿಯಲ್ಲಿ ನಾಲ್ಕು ಬಿಂದಿಗೆ ಕದ್ದು ಮಾರಿಕೊಂಡು ದುಡ್ಡು ತಗೊಂಡು ಬಾ, ಬಿರಿಯಾನಿ ಮಾಡಿಕೊಡ್ತಿನಿ’’ ಎನ್ನುತ್ತಾಳೆ. ತಾಯಿ ಹೇಳಿದ ಹಾಗೆ ಬಿಂದಿಗೆ ಕದ್ದು, ಮಾರಾಟ ಮಾಡಿ ಬಂದ ದುಡ್ಡನ್ನು ತಾಯಿಗೆ ಕೊಡುತ್ತಾನೆ. ಇದನ್ನೆಲ್ಲ ಮತ್ತೆ ಕೆರೆ ಬಳಿ ಹೇಳಿಕೊಳ್ಳುತ್ತಾನೆ.

ಹೀಗೆ ಸಾಗುವ ನಾಟಕದ ಮೂಲಕ ಪಾಪಣ್ಣಿ ಎಂಬ ಬಡಬಾಲಕನ ಹಸಿವು, ಸಂಕಟ, ತಳಮಳಗಳನ್ನು ಗೋಕುಲ ಸಹೃದಯ ಸಮರ್ಥವಾಗಿ ತೆರೆದಿಡುತ್ತಾನೆ. ಎಲ್ಲವನ್ನೂ ಕೆರೆಯ ಬಳಿ ಹೇಳಿಕೊಂಡು ಹಗುರಾಗುತ್ತಾನೆ. ಆದರೆ ಹಸಿವಿನ ಪರಿಹಾರಕ್ಕೆ ಕದಿಯೋದೊಂದೇ ದಾರಿ ಎಂದು ಬಿಂಬಿಸಬೇಕಿರಲಿಲ್ಲ. ಇದರಾಚೆಗೆ ಗೋಕುಲ ಸಹೃದಯ ಪಾಪಣ್ಣಿಯೇ ಆಗಿದ್ದಾನೆ. ಅಳುವ, ನಗುವ ಮೊದಲಾದ ಭಾವನೆಗಳನ್ನು ವ್ಯಕ್ತಪಡಿಸಿದ ಬಗೆ ಬೆರಗುಗೊಳಿಸುತ್ತದೆ. ಈ ಮೂಲಕ ನಾಟಕಕ್ಕೆ ನ್ಯಾಯ ಒದಗಿಸಿದ್ದಾನೆ. ಇದು ಏಕವ್ಯಕ್ತಿ ಪ್ರಯೋಗವಾಗಿದ್ದು, ತನ್ನ ಅಭಿನಯದಿಂದಲೇ ಪ್ರೇಕ್ಷಕರನ್ನು ಸೆಳೆಯುತ್ತಾನೆ. ನಾಟಕಕ್ಕೆ ಪೂರಕವಾಗಿ ಚಿಟ್ಟೆ, ಛತ್ರಿ ಮೊದಲಾದ ಉಪಕರಣಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾನೆ. ಇದರಿಂದ ನಾಟಕ ಯಶಸ್ವಿಯಾಗಿದೆ. ಈ ಮೂಲಕ ಗೋಕುಲ ಸಹೃದಯ ಸಹೃದಯಿ ಪ್ರೇಕ್ಷಕರ ಮನದಲ್ಲಿ ಉಳಿಯುತ್ತಾನೆ. ಹೀಗೆ ತಮ್ಮ ಮಗನ ರಂಗಾಸಕ್ತಿ ಕಂಡು ಪ್ರೋತ್ಸಾಹಿಸುತ್ತಿರುವ ಬೇಲೂರು ರಘುನಂದನ್ ಅವರಿಗೂ ಅಭಿನಂದನೆಗಳು.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X