Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕರೆನ್ಸಿ ನೋಟುಗಳ ಮೇಲೆ ಮಹಾತ್ಮಾ...

ಕರೆನ್ಸಿ ನೋಟುಗಳ ಮೇಲೆ ಮಹಾತ್ಮಾ ಗಾಂಧಿಯವರ ಭಾವಚಿತ್ರದ ಕಥೆ

ವಾರ್ತಾಭಾರತಿವಾರ್ತಾಭಾರತಿ2 Oct 2023 11:30 AM IST
share
ಕರೆನ್ಸಿ ನೋಟುಗಳ ಮೇಲೆ ಮಹಾತ್ಮಾ ಗಾಂಧಿಯವರ ಭಾವಚಿತ್ರದ ಕಥೆ

ಹೆನ್ರಿ ಕಾರ್ಟಿಯರ್-ಬ್ರೆಸನ್, ಮಾರ್ಗರೆಟ್ ಬೌರ್ಕ್-ವೈಟ್ ಮತ್ತು ಮ್ಯಾಕ್ಸ್ ಡೆಸ್ಫರ್ ಅವರಂತಹ ಪ್ರತಿಷ್ಠಿತ ಛಾಯಾಚಿತ್ರಗ್ರಾಹಕರು ಮಹಾತ್ಮಾ ಗಾಂಧಿಯವರ ಬದುಕಿನುದ್ದಕ್ಕೂ ಅವರ ಭಾವಚಿತ್ರಗಳನ್ನು ಕ್ಲಿಕ್ಕಿಸಿದ್ದರು. ಆದಾಗ್ಯೂ ಭಾರತೀಯ ಅಧಿಕೃತ ಕರೆನ್ಸಿ ನೋಟುಗಳ ಮೇಲಿನ ಭಾವಚಿತ್ರವು ಅತ್ಯಂತ ವ್ಯಾಪಕವಾಗಿ ಪ್ರಸಾರಗೊಂಡ ಗಾಂಧೀಜಿಯವರ ಚಿತ್ರವಾಗಿದೆ.

1947ರಲ್ಲಿ ಸ್ವತಂತ್ರ ಭಾರತದ ರಚನೆಯ ಬಳಿಕ ರಾಷ್ಟ್ರಪಿತರಾಗಿ ಗಾಂಧೀಜಿಯವರು ರಾಷ್ಟ್ರೀಯ ಕರೆನ್ಸಿಯ ಮೇಲೆ ಕಾಣಿಸಿಕೊಂಡಿದ್ದರು ಮತ್ತು ಅದು ಆಗಿನ ಸ್ಪಷ್ಟವಾದ ಆಯ್ಕೆಯಾಗಿದ್ದಿರಬಹುದು. ಆದರೆ ಹಲವಾರು ದಶಕಗಳ ಬಳಿಕ 1996ರಲ್ಲಷ್ಟೇ ಅವರು ಆರ್‌ಬಿಐ ಹೊರಡಿಸುವ ಎಲ್ಲ ಮುಖಬೆಲೆಗಳ ನೋಟುಗಳ ಮೇಲೆ ಖಾಯಂ ವೈಶಿಷ್ಟ್ಯವಾಗಿದ್ದರು. ಸೋಮವಾರ ದೇಶಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನೋಟುಗಳ ಮೇಲೆ ಗಾಂಧೀಜಿಯವರ ಭಾವಚಿತ್ರದ ಮೂಲ,ಅದು ಬದಲಿಸಿದ್ದ ಚಿಹ್ನೆ ಇತ್ಯಾದಿ ವಿವರಗಳು ಇಲ್ಲಿವೆ.....

ಭಾರತೀಯ ಕರೆನ್ಸಿಯಲ್ಲಿ

ಗಾಂಧಿಯವರ ಚಿತ್ರದ ಮೂಲ

ನೋಟುಗಳ ಮೇಲೆ ಕಾಣಿಸುವ ಗಾಂಧೀಜಿಯವರ ಚಿತ್ರವು ರೇಖಾಚಿತ್ರವಲ್ಲ.

ಅದು 1946ರಲ್ಲಿ ತೆಗೆಯಲಾಗಿದ್ದ ಛಾಯಾಚಿತ್ರವೊಂದರ ಭಾಗವಾಗಿದೆ. ಮೂಲಚಿತ್ರದಲ್ಲಿ ಗಾಂಧೀಜಿಯವರ ಜೊತೆಯಲ್ಲಿ ಬ್ರಿಟಿಷ್ ರಾಜಕಾರಣಿ ಲಾರ್ಡ್ ಫ್ರೆಡ್ರಿಕ್ ವಿಲಿಯಂ ಪೆಥಿಕ್-ಲಾರೆನ್ಸ್ ಅವರಿದ್ದರು. ಛಾಯಾಚಿತ್ರವು ಗಾಂಧೀಜಿಯವರು ಮುಗುಳ್ನಗುತ್ತಿರುವ ಅತ್ಯಂತ ಸೂಕ್ತವಾದ ಅಭಿವ್ಯಕ್ತಿಯನ್ನು ಹೊಂದಿದ್ದರಿಂದ ಅದನ್ನು ಆಯ್ಕೆ ಮಾಡಲಾಗಿತ್ತು. ನೋಟುಗಳಲ್ಲಿಯ ಭಾವಚಿತ್ರವು ಮೂಲಚಿತ್ರದಿಂದ ಪ್ರತ್ಯೇಕಿಸಲಾದ ಭಾಗದ ಪ್ರತಿಬಿಂಬವಾಗಿದೆ.

ಗಮನಾರ್ಹವಾಗಿ,ಈ ನಿರ್ದಿಷ್ಟ ಪೋಟೊ ತೆಗೆದಿದ್ದ ಛಾಯಾಚಿತ್ರಗ್ರಾಹಕ ಮತ್ತು ಅದನ್ನು ಶಾರ್ಟ್‌ಲಿಸ್ಟ್ ಮಾಡಿದ್ದ ವ್ಯಕ್ತಿ ಈಗಲೂ ಅಪರಿಚಿತರಾಗಿಯೇ ಉಳಿದಿದ್ದಾರೆ.

ನೋಟುಗಳಲ್ಲಿ ಗಾಂಧೀಜಿಯವರು ಮೊದಲು ಕಾಣಿಸಿಕೊಂಡಿದ್ದು ಯಾವಾಗ?

1969ರಲ್ಲಿ ಗಾಂಧೀಜಿಯವರ ಜನ್ಮ ಶತಾಬ್ದಿಯ ಅಂಗವಾಗಿ ಆರ್‌ಬಿಐ ವಿಶೇಷ ಸರಣಿಯನ್ನು ಬಿಡುಗಡೆಗೊಳಿಸಿದಾಗ ಅವರು ಮೊದಲ ಬಾರಿಗೆ ಭಾರತೀಯ ನೋಟುಗಳ ಮೇಲೆ ಕಾಣಿಸಿಕೊಂಡಿದ್ದರು. ಆಗಿನ ಆರ್‌ಬಿಐ ಗವರ್ನರ್ ಎಲ್.ಕೆ.ಝಾ ಅವರ ಸಹಿಯನ್ನು ಹೊಂದಿದ್ದ ನೋಟಿನಲ್ಲಿ ಸೇವಾಗ್ರಾಮ ಆಶ್ರಮದ ಹಿನ್ನೆಲೆಯಲ್ಲಿ ಗಾಂಧೀಜಿಯವರನ್ನು ಬಿಂಬಿಸಲಾಗಿತ್ತು. ನಂತರ ಅಕ್ಟೋಬರ್ 1987ರಲ್ಲಿ ಗಾಂಧೀಜಿಯವರ ಭಾವಚಿತ್ರವಿದ್ದ 500 ರೂ.ನೋಟುಗಳ ಸರಣಿಯನ್ನು ಬಿಡುಗಡೆ ಮಾಡಲಾಗಿತ್ತು.

ಸ್ವತಂತ್ರ ಭಾರತಕ್ಕಾಗಿ ನೋಟುಗಳು

ಆ.15,1947ರಂದು ಸ್ವತಂತ್ರ ಭಾರತದ ಘೋಷಣೆಯ ಬಳಿಕ ಆರ್‌ಬಿಐ ಬ್ರಿಟಿಷ್ ದೊರೆ ಆರನೇ ಜಾರ್ಜ್ ಚಿತ್ರವಿದ್ದ ವಸಾಹತುಶಾಹಿ ಅವಧಿಯ ನೋಟುಗಳ ವಿತರಣೆಯನ್ನು ಮುಂದುವರಿಸಿತ್ತು.

ಭಾರತ ಸರಕಾರವು 1949ರಲ್ಲಿ ಹೊಸ ವಿನ್ಯಾಸದ ಒಂದು ರೂ.ಮುಖಬೆಲೆಯ ನೋಟುಗಳನ್ನು ತಂದಿದ್ದು,ಅವು ವಾಟರ್‌ಮಾರ್ಕ್ ವಿಂಡೋದಲ್ಲಿ ದೊರೆ ಆರನೇ ಜಾರ್ಜ್ ಬದಲಿಗೆ ಸಾರನಾಥದಲ್ಲಿಯ ಅಶೋಕ ಸ್ತಂಭದ ಶಿರೋಭಾಗದಲ್ಲಿರುವ ಸಿಂಹದ ಚಿಹ್ನೆಯನ್ನು ಹೊಂದಿದ್ದವು. 1950ರಲ್ಲಿ 2,5,10 ಮತ್ತು 100 ರೂ.ಮುಖಬೆಲೆಯ ಮೊದಲ ರಿಪಬ್ಲಿಕ್ ಆಫ್ ಇಂಡಿಯಾ ನೋಟುಗಳನ್ನು ಬಿಡುಗಡೆಗೊಳಿಸಲಾಗಿದ್ದು, ಅವೆಲ್ಲವೂ ಸಿಂಹದ ಚಿತ್ರವನ್ನು ಹೊಂದಿದ್ದವು. ನಂತರದ ವರ್ಷಗಳಲ್ಲಿ ಹೆಚ್ಚಿನ ಮುಖಬೆಲೆಗಳ ನೋಟುಗಳನ್ನು ಬಿಡುಗಡೆಗೊಳಿಸಲಾಗಿತ್ತು ಮತ್ತು ನೋಟುಗಳ ಹಿಂಭಾಗವನ್ನು ಹೊಸ ಭಾರತವನ್ನು ಪ್ರತಿನಿಧಿಸುವಂತೆ ರೂಪಾಂತರಿಸಲಾಗಿತ್ತು. ಆರಂಭಿಕ ವರ್ಷಗಳಲ್ಲಿ ಹುಲಿ ಮತ್ತು ಸಂಬಾರ ಜಿಂಕೆಗಳಂತಹ ಪ್ರಾಣಿಗಳು ಪ್ರಮುಖವಾಗಿ ಕಾಣಿಸಿಕೊಂಡಿದ್ದರೆ 1970ರ ದಶಕದಲ್ಲಿ ಕೃಷಿ ಚಟುವಟಿಕೆಗಳನ್ನು ಪ್ರಮುಖವಾಗಿ ಬಿಂಬಿಸಲಾಗಿತ್ತು. 1980ರ ದಶಕದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ಹಾಗೂ ಭಾರತೀಯ ಕಲಾ ಪ್ರಕಾರಗಳ ಸಂಕೇತಗಳು ಪ್ರಮುಖವಾಗಿದ್ದವು. 2 ರೂ.ನೋಟಿನಲ್ಲಿ ಆರ್ಯಭಟ ಉಪಗ್ರಹ, 5 ರೂ. ನೋಟಿನಲ್ಲಿ ಕೃಷಿ ಯಾಂತ್ರೀಕರಣ ಮತ್ತು 20 ರೂ.ನೋಟಿನಲ್ಲಿ ಕೋನಾರ್ಕ್ ಚಕ್ರ ಕಾಣಿಸಿಕೊಂಡಿದ್ದವು.

ನೋಟುಗಳಲ್ಲಿ ಗಾಂಧಿಯವರ ಭಾವಚಿತ್ರ ಶಾಶ್ವತ ಲಕ್ಷಣವಾಗಿದ್ದು ಯಾವಾಗ?

1990ರ ವೇಳೆಗೆ ರೆಪ್ರೋಗ್ರಾಫಿಕ (ನಕಲು ಮಾಡುವುದು) ತಂತ್ರಜ್ಞಾನದಲ್ಲಿಯ ಪ್ರಗತಿಯನ್ನು ಪರಿಗಣಿಸಿದರೆ ನೋಟುಗಳಲ್ಲಿಯ ಸಾಂಪ್ರದಾಯಿಕ ಭದ್ರತಾ ವೈಶಿಷ್ಟ್ಯಗಳು ಸಾಕಷ್ಟಿಲ್ಲ ಎಂದು ಆರ್‌ಬಿಐ ಭಾವಿಸಿತ್ತು. ಮಾನವ ಮುಖಕ್ಕೆ ಹೋಲಿಸಿದರೆ ನಿರ್ಜೀವ ವಸ್ತುಗಳನ್ನು ಫೋರ್ಜರಿ ಮಾಡುವುದು ತುಲನಾತ್ಮಕವಾಗಿ ಸುಲಭ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ರಾಷ್ಟ್ರಮಟ್ಟದಲ್ಲಿ ಮನ್ನಣೆಯನ್ನು ಹೊಂದಿದ್ದ ಗಾಂಧಿಯವರನ್ನು ಆಯ್ಕೆ ಮಾಡಲಾಗಿತ್ತು ಮತ್ತು ಮೊದಲಿನ ಅಶೋಕ ಸ್ತಂಭ ನೋಟುಗಳ ಬದಲು ನೂತನ ಮಹಾತ್ಮಾ ಗಾಂಧಿ ಸರಣಿಯನ್ನು ಆರ್‌ಬಿಐ ಆರಂಭಿಸಿತ್ತು. ಈ ನೋಟುಗಳು ಹಲವಾರು ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡಿದ್ದವು. 2016ರಲ್ಲಿ ಆರ್‌ಬಿಐ ನೋಟುಗಳ ಮಹಾತ್ಮಾ ಗಾಂಧಿ ನೂತನ ಸರಣಿಯನ್ನು ಪ್ರಕಟಿಸಿತ್ತು. ಗಾಂಧೀಜಿಯವರ ಭಾವಚಿತ್ರವು ಮುಂದುವರಿದಿದ್ದು,ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳೊಂದಿಗೆ ಸ್ವಚ್ಛ ಭಾರತ ಅಭಿಯಾನದ ಲಾಂಛನವನ್ನು ಸೇರಿಸಲಾಗಿತ್ತು.

ನೋಟುಗಳಲ್ಲಿ ಇತರರನ್ನು ಸೇರಿಸಲು ಬೇಡಿಕೆ

ಇತ್ತೀಚಿನ ವರ್ಷಗಳಲ್ಲಿ ಗಾಂಧೀಜಿಯವರನ್ನು ಹೊರತುಪಡಿಸಿ ನೋಟುಗಳ ಮೇಲೆ ಕಾಣಿಸಿಕೊಳ್ಳಲು ಅರ್ಹರಾದ ಇತರರ ಬಗ್ಗೆ ಹಲವಾರು ಸಲಹೆಗಳು ಬಂದಿದ್ದವು. ಆದರೆ,ಇತರ ಯಾವುದೇ ವ್ಯಕ್ತಿಗಳು ಮಹಾತ್ಮಾ ಗಾಂಧೀಜಿವರಿಗಿಂತ ಉತ್ತಮವಾಗಿ ಭಾರತದ ನೀತಿಯನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ್ದ ಆರ್‌ಬಿಐ ಈ ಸಲಹೆಗಳನ್ನು ತಿರಸ್ಕರಿಸಿತ್ತು.

(ಕೃಪೆ: theindianexpress)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X