Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವರ್ತಮಾನದ ಎದುರಿಗೆ ಇರುವ ಮೂರು ಭೀಮಾ...

ವರ್ತಮಾನದ ಎದುರಿಗೆ ಇರುವ ಮೂರು ಭೀಮಾ ಕೋರೆಗಾಂವ್‌ಗಳು

ಕೆ. ಫಣಿರಾಜ್ಕೆ. ಫಣಿರಾಜ್4 Jan 2026 10:22 AM IST
share
ವರ್ತಮಾನದ ಎದುರಿಗೆ ಇರುವ ಮೂರು ಭೀಮಾ ಕೋರೆಗಾಂವ್‌ಗಳು

ಮೂರೂ ಭೀಮಾ ಕೋರೆಗಾಂವ್ ವಿದ್ಯಮಾನಗಳನ್ನು ಗಮನಿಸಿದರೆ, 2007 ವರ್ಷಗಳ ನಂತರವೂ ದಮನಿತರು ಹೊಸ ಬಗೆಗಳಲ್ಲಿ ದಮನಿತರಾಗುತ್ತಿರುವುದು, ಜಾತಿವಾದಿ ಬ್ರಾಹ್ಮಣ್ಯ ಸರ್ವಾಧಿಕಾರಿ ಪೇಶ್ವೆಶಾಹಿಯು ವಿಭಿನ್ನ ರೂಪಗಳಲ್ಲಿ ಪ್ರಕಟವಾಗುತ್ತಿರುವುದು ನಿಚ್ಚಳವಾಗಿ ಕಾಣುತ್ತದೆ. ಭೀಮಾ ಕೋರೆಗಾಂವ್ ಕದನ ಮುಂದುವರಿಯುತ್ತಿದೆ; ವರ್ತಮಾನದ ಎದುರಿಗಿರುವ ಈ ವಾಸ್ತವವನ್ನು ಗಮನಿಸದಿರಲು ಸಾಧ್ಯವಿಲ್ಲ.

ಪ್ರತೀ ವರ್ಷ ಜನವರಿ 1ರಂದು, ಭಾರತದಾದ್ಯಂತದ ದಲಿತ ಜಾತಿಗಳಿಗೆ ಸೇರಿದ ಸಾವಿರಾರು ಜನರು ಮಹಾರಾಷ್ಟ್ರದ ಭೀಮಾ ನದಿಯ ದಡದಲ್ಲಿರುವ ಭೀಮಾ ಕೋರೆಗಾಂವ್‌ಗೆ, ದಮನಿತರ ಸ್ವಾಭಿಮಾನಿ ಹೋರಾಟದ ಸ್ಫೂರ್ತಿಯಲ್ಲಿ ಯಾತ್ರೆ ಹೋಗುತ್ತಾರೆ. ದೇಶದಾದ್ಯಂತ ದಲಿತ ಸಂಘಟನೆಗಳು ಈ ದಿನವನ್ನು ಭೀಮಾ ಕೋರೆಗಾಂವ್ ವಿಜಯೋತ್ಸವ ದಿನವಾಗಿ ಆಚರಿಸುತ್ತವೆ. ಇದು ದಲಿತರಿಗೆ ಮಾತ್ರ ಪ್ರಾಮುಖ್ಯತೆ ಇರುವ ವಿದ್ಯಮಾನವೇ? ಅಥವಾ ವರ್ತಮಾನದಲ್ಲಿ, ಪ್ರಜಾಪ್ರಭುತ್ವದ ತೆರೆಯ ಮರೆಯಲ್ಲಿ ನಡೆಯುತ್ತಿರುವ ದೇಶಿ ನವ ಫ್ಯಾಶಿಸ್ಟ್ ಆಳ್ವಿಕೆಯಿಂದ ಬಾಧೆಗೊಳಗಾಗಿರುವ ಎಲ್ಲ ಜನ ಸಮೂಹಕ್ಕೂ, ನವ ಫ್ಯಾಶಿಸ್ಟ್ ಆಳ್ವಿಕೆಯ ದೇಶೀಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ತೆರೆದಿರುವ ಅರಿವಿನ ಬೆಳಕಿಂಡಿಯಲ್ಲವೇ? ಈ ಕುರಿತು ವಿಷಯಕ್ಕೆ ಸಂಬಂಧಿಸಿದ ಕೆಲವು ಟಿಪ್ಪಣಿಗಳನ್ನು ಮುಂದಿಡುತ್ತಿರುವೆ.

ಭೀಮಾ ಕೋರೆಗಾಂವ್-1

1817ರ ಡಿಸೆಂಬರ್ 31ರ ಇಳಿ ಸಂಜೆಯಿಂದ 1818ರ ಜನವರಿ 1ರ ಇಳಿ ಸಂಜೆಯವರೆಗೆ ಮೂರನೇ ಆಂಗ್ಲ-ಮರಾಠಾ ಯುದ್ಧದ ಭಾಗವಾಗಿ ನಡೆದ ಕದನವಿದು. ಅಂದಿನ ಭಾರತದ ಇಡಿ ವ್ಯಾಪಿಸಿಕೊಳ್ಳಬೇಕು ಎಂದಿದ್ದ ಬ್ರಾಹ್ಮಣ ಪೇಶ್ವೆಗಳ ಚಕ್ರಾಧಿಪತ್ಯದ ಯಾತ್ರೆ ಅದಾಗಲೇ ಶಿಥಿಲವಾಗುತ್ತಿದ್ದು, ಪೇಶ್ವೆಗಳ ಪಾಳೆಯದ ಹಲವು ರಾಜರು ಆಂಗ್ಲ ಈಸ್ಟ್ ಇಂಡಿಯಾ ಕಂಪೆನಿಯ ಜೊತೆ ರಾಜಿಯಾಗಿದ್ದರು. ಆಂಗ್ಲರ ಸೇನೆಯು ಪೇಶ್ವೆ ಆಡಳಿತದ ಪೂನವನ್ನು ಆಕ್ರಮಿಸಿಕೊಂಡು ತಮ್ಮ ಆಯಕಟ್ಟಿನ ಅಧಿಕಾರ ಸ್ಥಾಪಿಸಿಕೊಂಡಿದ್ದರು. ಉಳಿದ ಆಧಿಪತ್ಯದ ಉಳಿವು ಹಾಗೂ ಮರು ಚಕ್ರಾಧಿಪತ್ಯ ಸ್ಥಾಪನೆಯ ಉದ್ದೇಶಕ್ಕಾಗಿ ಪೇಶ್ವೆಗಳ ಪಾಳಯದ ಒಂದು ಬಣವು ಈ ಯುದ್ಧವನ್ನು ಮುನ್ನಡೆಸುತ್ತಿತ್ತು. 2,500ರಷ್ಟು ಸೇನಾ ಬಲವಿದ್ದ ಪೇಶ್ವೆಗಳ ಸೈನವು ಕೋರೆಗಾಂವ್ ಬದಿಯ ಭೀಮಾ ನದಿಯನ್ನು ದಾಟುವಾಗ, ಪೂನದ ಅಂಗ್ಲಾ ಸೇನೆಗೆ ಬಲ ಒದಗಿಸಲು ಹೊರಟ್ಟಿದ್ದ 800 ಸಂಖ್ಯೆಯ ಆಂಗ್ಲ ಸೇನೆಯ ತುಕಡಿಗೆ ಎದುರಾಯಿತು. ಆಂಗ್ಲ ಸೇನೆಯಲ್ಲಿ 200ರಷ್ಟು ಮಹಾರ್ ಸೈನಿಕರು ಇದ್ದರು. ಮಹಾರ್ ಎಂಬುದು ಮಹಾರಾಷ್ಟ್ರದ ದಲಿತ ಸಮುದಾಯವಾಗಿದ್ದು, ಪೇಶ್ವೆಗಳ ಆಡಳಿತ ಅಡಿ ಹೀನಾಯ ಹಿಂಸೆಗೆ ಈಡಾಗಿದ್ದ ಜನ ಸಮುದಾಯವಾಗಿತ್ತು. ತಮ್ಮ ಸ್ವಾಭಿಮಾನ ಹಾಗೂ ಸ್ವಾಯತ್ತ ಬದುಕಿಗಾಗಿ ಮಹಾರ್ ಜನರು ಆಂಗ್ಲರ ಸೇನೆಗೆ ಸೇರಿದ್ದರು. 1817ರ ಡಿಸೆಂಬರ್ 31ರ ಇಳಿಸಂಜೆಯಿಂದ 1818ರ ಜನವರಿ 1ರ ಇಳಿ ಸಂಜೆಯವರೆಗೆ ಕೋರೆಗಾಂವ್‌ನ ಭೀಮಾ ನದಿ ತೀರದಲ್ಲಿ ನಡೆದ ಕದನದಲ್ಲಿ 800 ಸೈನಿಕರ ಆಂಗ್ಲ ಸೇನೆಯು 2,500 ಸೇನಾಬಲದ ಪೇಶ್ವೆಗಳನ್ನು ಹಿಮ್ಮೆಟ್ಟಿಸುವಂತೆ ಕಾದಾಡಿದರು. ಆ ಕದನದಲ್ಲಿ ಮರಣವನ್ನಪ್ಪಿದವರಲ್ಲಿ 22 ಜನ ಮಹಾರ್ ಸೈನಿಕರಾಗಿದ್ದರು. ಆ ಕದನದ ನೆನಪಿಗೆ ಆಂಗ್ಲರು ಕೋರೆಗಾಂವ್‌ನಲ್ಲಿ ವಿಜಯ ಸ್ತಂಭ ನೆಟ್ಟು, 22 ಮಹಾರ್ ಸೈನಿಕರ ಹೆಸರು ಸೇರಿಸಿ ಮಡಿದ ಉಳಿದ ಸೈನಿಕರ ಹೆಸರನ್ನೂ ಅದರ ಭಿತ್ತಿಯಲ್ಲಿ ನಮೂದಿಸಿದರು.

ಯುದ್ಧದ ಕೊನೆಗೆ ಸೋತ ಎರಡನೇ ಪೇಶ್ವೆ ಬಾಜಿರಾಯನು ಮೈಸೂರಿಗೆ ಪಲಾಯನಗೈಯಲು ಯತ್ನಿಸುವಾಗ ಆಂಗ್ಲರ ಕೈಗೆ ಸಿಕ್ಕನು. ಅವರೊಂದಿಗೆ ರಾಜಿ ಮಾಡಿಕೊಂಡು, ಅಧಿಕಾರವನ್ನು ಅವರ ಕೈಗಿತ್ತು, 8,000 ಪೌಂಡುಗಳ ಮಾಸಾಶನ ಪಡೆದು ವೈಭೋಗದ ಜೀವನ ನಡೆಸಿದನು.

ಆದರೆ, ಜೀವದ ಹಂಗು ತೊರೆದು ಕಾದಾಟ ಮಾಡಿದ ಮಹಾರ್ ಸೈನಿಕ ತುಕಡಿಯನ್ನು, ಅವರು ಕ್ಷತ್ರಿಯರಲ್ಲವೆಂದು ಪರಿಗಣಿಸಿ 1857ರ ನಂತರ ಸೇನೆಯಿಂದ ಆಂಗ್ಲರು ಹೊರಗಿಟ್ಟರು. ಈ ಅನ್ಯಾಯದ ವಿರುದ್ಧ ಬಾಬಾ ಸಾಹೇಬರ ತಂದೆ ರಾಮ್ಜಿಯವರು ಹಾಗೂ ಬಾಬಾ ಸಾಹೇಬರು ನಿರಂತರವಾಗಿ ಸೆಣೆಸಿ 20ನೇ ಶತಮಾನದಲ್ಲಿ ಮತ್ತೆ ಸೇನೆಗೆ ಸೇರುವ ಅವಕಾಶ ಕಲ್ಪಿಸಿದರು. ಇಂದಿಗೂ ದೇಶದ ಸೇನೆಯಲ್ಲಿ ಮಹಾರ್ ರೆಜಿಮೆಂಟ್ ಇರುವುದಕ್ಕೆ ಈ ಹೋರಾಟವೇ ಕಾರಣವಾಗಿದೆ.

ಭೀಮಾ ಕೋರೆಗಾಂವ್-2

ಬಾಬಾ ಸಾಹೇಬರು 1927ರ ಜನವರಿ 1ರಂದು ಭೀಮಾ ಕೋರೆಗಾಂವ್‌ನ ವಿಜಯಸ್ತಂಭಕ್ಕೆ ತಮ್ಮ ಸಂಗಾತಿಗಳ ಜೊತೆ ಭೇಟಿ ಕೊಟ್ಟಿದ್ದರು. ಮಹಾರ್ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಬಾಲ್ಯದಲ್ಲೇ ಅವಮಾನಗಳನ್ನುಂಡ ಬಾಬಾ ಸಾಹೇಬರಿಗೆ, ದಲಿತರು ಶಿಕ್ಷಣ ಪಡೆದರೆ, ಸಾಮಾಜಿಕ ಸ್ಥಾನಮಾನ ಪಡೆದು ಜಾತಿ ಅಪಮಾನಗಳನ್ನು ನೀಗಿಸಿಕೊಳ್ಳಬಹುದು ಎಂದು ನಂಬಿದ್ದರು. ಆದರೆ ಅವರು ವಿದೇಶದಲ್ಲಿ ಅತ್ಯುನ್ನತ ವಿದ್ಯೆ ಪಡೆದು ಬಂದ ನಂತರವೂ ಅಪಾರವಾದ ಅವಮಾನಗಳನ್ನು ಎದುರಿಸಬೇಕಾಯಿತು. ಶಿಕ್ಷಣ ಪಡೆಯುವುದಷ್ಟೇ ಅಲ್ಲದೆ, ದಲಿತರು ಸಂಘಟಿತರಾಗಬೇಕಾದ ಅವಶ್ಯಕತೆ ಇದೆ ಎಂದರಿತು ಸಂಘಟನಾ ಕಾಯಕದಲ್ಲಿ ತೊಡಗಿದ್ದರು ಹಾಗೂ ನಾಗರಿಕ ಹಕ್ಕುಗಳ ಹೋರಾಟವನ್ನೂ ನಡೆಸಲು ಆರಂಭಿಸಿದ್ದರು. ಇಂತಹ ಸಕ್ರಿಯ ಸಮಯದಲ್ಲಿ ಭೀಮಾ ಕೋರೆಗಾಂವ್ ಭೇಟಿಯು ಅವರಿಗೆ ತಮ್ಮ ಹೋರಾಟದ ಹಾದಿಗೆ ಹೊಸ ದರ್ಶನವನ್ನು ನೀಡಿತು. ಬ್ರಾಹ್ಮಣಶಾಹಿಯ ಪ್ರಬಲ ಪ್ರತಿಪಾದಕರೂ, ದಲಿತರ ಮೇಲೆ ನಡೆವ ದೌರ್ಜನ್ಯಗಳಿಗೆ ಅಧಿಕಾರ ಬೆಂಬಲ ಒದಗಿಸುತ್ತಿದ್ದವರೂ ಆದ ಪೇಶ್ವೆಗಳ ಸೈನ್ಯದ ಎದುರು ಮಹಾರ್ ಸೈನಿಕರು ಸೆಣೆಸಿದ್ದು, ಬಾಬಾ ಸಾಹೇಬರಿಗೆ ಬರೀ ರಾಜ್ಯಾಧಿಕಾರಕ್ಕಾಗಿ ಕದನವಾಗಿ ಕಾಣದೆ, ಜಾತಿವಿನಾಶಕ್ಕಾಗಿ ಬ್ರಾಹ್ಮಣಶಾಹಿಯ ವಿರುದ್ಧ ನಡೆಸಬೇಕಾದ ಹೋರಾಟದ ಚಾರಿತ್ರಿಕ ಪ್ರತಿಮೆಯಾಗಿ ಕಂಡಿತು. ಅಂದು ಅವರು ಯಾವ ಭಾಷಣವನ್ನು ಮಾಡದಿದ್ದರೂ, ತಮ್ಮ ಹಲವಾರು ಭಾಷಣ ಬರಹಗಳಲ್ಲಿ ಭೀಮಾ ಕೋರೆಗಾಂವ್ ಯುದ್ಧದಲ್ಲಿ ಮಹಾರ್ ರೆಜಿಮೆಂಟಿನ ನಿರ್ಣಾಯಕ ಪಾತ್ರದ ಮಹತ್ವ ಹಾಗೂ ದಲಿತರ ಸಂಘಟಿತ ಹೋರಾಟಕ್ಕೆ ನೀಡುವ ಪ್ರೇರಣೆಗಳ ಬಗ್ಗೆ ಪ್ರಸ್ತಾಪಿಸಿದರು.

1927ರ ಮಾರ್ಚ್‌ನಲ್ಲಿ ನಡೆದ ಮಹಾಡ್ ಸತ್ಯಾಗ್ರಹದ ವೇಳೆ, ಮೇಲ್ಜಾತಿಯವರು ದಲಿತರ ಮೇಲೆ ಹಲ್ಲೆ ನಡೆಸಿದಾಗ, ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಮಹಾರ್ ಸೈನಿಕರು ಪ್ರತಿ ಹಿಂಸೆ ನಡೆಸಲು ಒಪ್ಪಿಗೆ ಕೇಳಿದಾಗ ಬಾಬಾ ಸಾಹೇಬರು ಖಡಾಖಂಡಿತವಾಗಿ ಹಿಂಸಾ ಮಾರ್ಗವನ್ನು ನಿರಾಕರಿಸಿದರು. ಬಾಬಾ ಸಾಹೇಬರಿಗೆ ಭೀಮಾ ಕೋರೆಗಾಂವ್ ಸಶಸ್ತ್ರ ಹೋರಾಟ ಮಾರ್ಗದ ಪ್ರಚೋದನೆಯಾಗಿರದೆ, ಬ್ರಾಹ್ಮಣಶಾಹಿಯ ವಿರುದ್ಧದ ಜನ ಸಾಮೂಹಿಕ ಸಂಘಟಿತ ಹೋರಾಟದ ಪ್ರೇರಣೆಯಾಗಿತ್ತು ಎಂದು ಇದರಿಂದ ತಿಳಿಯುತ್ತದೆ.

ಅದೇ ಕಾಲದಲ್ಲಿ, ಮಹಾರಾಷ್ಟ್ರದಲ್ಲಿ ಹಬ್ಬುತ್ತಿದ್ದ ಜಾತಿವಿರೋಧಿ ಚಳವಳಿಗಳ ಪ್ರಭಾವವನ್ನು ಮಣಿಸಿ ಬ್ರಾಹ್ಮಣಶಾಹಿ ಅಧಿಕಾರ ಕೇಂದ್ರವನ್ನು ರಕ್ಷಿಸುವ ಉದ್ದೇಶದಿಂದ ಆರೆಸ್ಸೆಸ್ ಸ್ಥಾಪಿತವಾಗಿತ್ತು. ಇಂತಹ ಆರೆಸ್ಸೆಸ್‌ಗೆ ಬಾಬಾ ಸಾಹೇಬರು ನಡೆಸುತ್ತಿದ್ದ ಬ್ರಾಹ್ಮಣಶಾಹಿಯ ವಿರುದ್ಧದ ಹೋರಾಟವೂ, ಅವರು ಸಾರುತ್ತಿದ್ದ ಭೀಮಾ ಕೋರೆಗಾಂವ್ ವಿಜಯದ ಸಂಕೇತವೂ ತೀವ್ರ ಅಪಥ್ಯವಾಗಿತ್ತು. ಇದನ್ನು ಆರೆಸ್ಸೆಸಿಗರು ವೈಚಾರಿಕ ಹಾಗೂ ಸಂಘಟನಾ ತಂತ್ರಗಳ ಗುರು ಎಂದೇ ಆರಾಧಿಸುವ ಎಂ.ಎಸ್. ಗೋಳ್ವಾಲ್ಕರ್ ಬಹಿರಂಗವಾಗಿಯೇ ಪ್ರಕಟಿಸಿದ್ದಾರೆ. ಗೋಳ್ವಾಲ್ಕರ್, ಭೀಮಾ ಕೋರೆಗಾಂವ್ ವಿಜಯ ಮತ್ತು ಅದಕ್ಕೆ ಅಂಬೇಡ್ಕರ್ ನೀಡುತ್ತಿದ್ದ ಮಹತ್ವದ ಬಗ್ಗೆ ಹೀಗೆ ಹೇಳುತ್ತಾರೆ:

‘‘ಜಾತಿವಿರೋಧಿ ಮತಾಂಧರ ಇಂದಿನ ವಿಕೃತ ಕಾಲದಲ್ಲಿ (siಛಿ!) ಏಕತೆಯ ಭಾವವನ್ನು ಎದೆಯೊಳಗೆ ಕಾದಿಟ್ಟುಕೊಂಡವರು ಬಹಳ ಜನರಿಲ್ಲ. ಜಾತಿ ವಿರೋಧಿ ವಿಕಾರವನ್ನು ಮೆರೆಯುತ್ತಿರುವವರಿಗೆ, ತಮ್ಮ ಜಾತಿಯ ಜನರ ನಡುವೆ ತಮ್ಮ ಹಿರಿಮೆಯನ್ನು ಹೆಚ್ಚಿಸಿಕೊಳ್ಳುವುದಷ್ಟೇ ಮುಖ್ಯವಾಗಿದೆ. ಈ ವಿಷವು ನಮ್ಮ ದೇಹವನ್ನು ಆವರಿಸಿಕೊಂಡಿರುವ ಬಗೆಯನ್ನು ವಿವರಿಸಲು ಕೆಲ ವರ್ಷಗಳ ಹಿಂದೆ ನಡೆದ ವಿದ್ಯಮಾನವೊಂದನ್ನು ಉದಾಹರಣೆಯಾಗಿ ನೋಡಬಹುದು. ಪುಣೆಯ ಸಮೀಪ ಒಂದು ‘ವಿಜಯ ಸ್ತಂಭ’ವಿದೆ. 1818ರಲ್ಲಿ ಪೇಶ್ವೆಗಳ ವಿರುದ್ಧ ಸಾಧಿಸಿದ ವಿಜಯದ ಸಂಕೇತವಾಗಿ ಬ್ರಿಟಿಷರು ಆ ಸ್ತಂಭವನ್ನು ನೆಟ್ಟಿದ್ದಾರೆ. ಈ ಸ್ಥಳಕ್ಕೆ ಒಬ್ಬ ‘ಹರಿಜನ ನಾಯಕ’ ಬಂದು ತನ್ನ ಜಾತಿ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ. ತಮ್ಮ ಜಾತಿಯವರು ಬ್ರಿಟಿಷ್ ಸೈನ್ಯದಲ್ಲಿ ಸೇರಿ, ಸೆಣೆಸಿ ಬ್ರಾಹ್ಮಣ ಪೇಶ್ವೆಗಳನ್ನು ಸೋಲಿಸಿದ ಕಾರಣವಾಗಿ, ಈ ವಿಜಯ ಸ್ತಂಭವು ಬ್ರಾಹ್ಮಣರ ವಿರುದ್ಧ ನಾವು ಸಾಧಿಸಿದ ವಿಜಯದ ಸಂಕೇತವೆಂದು ಅತ ಘೋಷಿಸಿದ. ಈ ಉನ್ನತ ನಾಯಕನ ಮಾತುಗಳು ಎದೆ ಒಡೆಯುವಂತಿವೆ! ಅಸಹ್ಯ ಜೀತದ ಸಂಕೇತವನ್ನು ಈತ ವಿಜಯದ ಸಂಕೇತವೆನ್ನುತ್ತಾನೆ! ಪರಕೀಯರ ಜೀತದಾಳುಗಳಾಗಿ ತಮ್ಮ ಬಂಧು ಬಾಂಧವರ ವಿರುದ್ಧ ಸೆಣೆಸುವ ನಾಚಿಕೆಗೇಡು ಕೃತ್ಯವನ್ನು ಈತ ಮಹೋನ್ನತ ಕೃತ್ಯವೆಂದು ಸಾರುತ್ತಾನೆ! ದ್ವೇಷದಲ್ಲಿ ಅತನ ದೃಷ್ಟಿ ಎಷ್ಟು ಕುರುಡಾಗಿರಬಹುದು! ಯಾರು ವಿಜಯಿಗಳು ಯಾರು ಸೋತವರು ಎಂಬ ಸರಳ ವಿಚಾರವನ್ನು ವಿವೇಚಿಸದಷ್ಟು ಆತನಿಗೆ ಅಂಧಕಾರ ಕವಿದಿದೆ! ಇದಕ್ಕಿಂತ ಬೇರೆ ವಿಕೃತಿಯುಂಟೇ!’’

(ಎಂ.ಎಸ್. ಗೋಳ್ವಾಲ್ಕರ್, ಬಂಚ್ ಆಫ್ ಥಾಟ್ಸ್, ಪುಟ 110-111, ನಾಲ್ಕನೇ ಮರುಮುದ್ರಣ, 1968, ವಿಕ್ರಮ ಪ್ರಕಾಶನ, ಬೆಂಗಳೂರು)

ಭಾರತವು ಸಾಮಾಜಿಕ ಅಸಮಾನತೆಗಳನ್ನು ಕಿತ್ತೊಗೆದು, ಎಲ್ಲ ಪ್ರಜೆಗಳಿಗೂ ಸಮಾನ ರಾಜಕೀಯ-ಸಾಮಾಜಿಕ ಹಕ್ಕುಗಳು ಸಹಜವಾಗಿ ದಕ್ಕುವಂತಹ ಪ್ರಜಾಪ್ರಭುತ್ವ ದೇಶವಾಗಬೇಕು ಎಂಬ ವಸಾಹತುಶಾಹಿ ವಿರೋಧಿ ಹೋರಾಟ ನಡೆಯುತ್ತಿದ್ದ ಕಾಲದಲ್ಲಿ, ಚರಿತ್ರೆಯ ಘಟನೆಯೊಂದನ್ನು ಸಮಾನತೆ ಸಹಬಂಧುತ್ವದ ಕ್ರಾಂತಿಕಾರಿ ಹರಿಕಾರ ಹೇಗೆ ಕಂಡರು ಮತ್ತು ಬ್ರಾಹ್ಮಣಶಾಹಿ ಸರ್ವಾಧಿಕಾರದಡಿ ಜಾತಿ ಶ್ರೇಣೀಕರಣದ ಸಮಾಜ ಕಟ್ಟಲು ಸಂಘಟನೆ ನಡೆಸುತ್ತಿದ್ದವರು ಹೇಗೆ ಕಂಡರು ಎನ್ನುವುದು ನಿಚ್ಚಳವಾಗಿದೆ. ಇದು ಬರೀ ಅಂದಿನ ಕಾಲದ ವೈಚಾರಿಕ ಭೇದ ಮಾತ್ರವಾಗಿರದೆ, ಭಾರತ ದೇಶದ ಭವಿಷ್ಯತ್ತಿನ ನಡೆಯ ಸ್ಪಷ್ಟ ಸೂಚನೆಯೂ ಆಗಿತ್ತು.

ಭೀಮಾ ಕೋರೆಗಾಂವ್-3

ಕೇಂದ್ರದಲ್ಲಿ ಯಾವ ಪಕ್ಷದ ಸರಕಾರ ಆಡಳಿತದಲ್ಲಿದ್ದರೂ ದಲಿತರ ಮೇಲೆ ನಡೆಯುವ ಹಿಂಸೆಗೆ ತಡೆ ಇಲ್ಲದಂತಾಗಿರುವುದನ್ನು, ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ಸಂಸ್ಥೆಯಾದ National Crime Report Buero (NCRB)ಯ ಅಂಕಿ ಅಂಶಗಳು ಜಾಹೀರು ಪಡಿಸುತ್ತವೆ. ಸಾಧಾರಣವಾಗಿ NCRB ಅಂಕಿ ಸಂಖ್ಯೆಗಳು ದಾಖಲಿತವಾದ ಪ್ರಕರಣಗಳನ್ನು ಮಾತ್ರ ಅವಲಂಭಿಸಿರುವುದರಿಂದ ಅದು ಯಾವತ್ತೂ ಕೆಳ ಅಂದಾಜುಗಳಾಗಿರುತ್ತವೆ. ಇಷ್ಟಿದ್ದೂ 2014ರಿಂದ 2018ರ ಅಂಕಿ ಅಂಶಗಳನ್ನು ಗಮನಿಸಿದರೆ, ದಲಿತರ ಮೇಲಿನ ಹಿಂಸಾಚಾರ ಪ್ರಕರಣಗಳು ಏರುಗತಿಯಲ್ಲಿ ಇರುವುದು ಕಂಡು ಬರುತ್ತದೆ. ಕೇಂದ್ರದಲ್ಲಿ ‘ಹಿಂದುತ್ವವಾದಿ ರಾಜಕಾರಣ’ವನ್ನು ಪ್ರತಿಪಾದಿಸುವ ಸರಕಾರವು ಅಧಿಕಾರಕ್ಕೆ ಬಂದಂದಿನಿಂದ ಅಪರಾಧಗಳ ಸಂಖ್ಯೆ ಹೆಚ್ಚಾಗತೊಡಗಿದ್ದವು. 2017ರಲ್ಲಿ ಉತ್ತರ ಪ್ರದೇಶದ ಉನ್ನಾವೋದಲ್ಲಿ ಬಿಜೆಪಿಯ ಶಾಸಕನಿಂದ ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ, ಕಾನೂನು ವ್ಯವಸ್ಥೆಯು ಕಣ್ಮುಚ್ಚಿ ಕುಳಿತದ್ದು, ಬಾಲಕಿಯ ತಂದೆಯನ್ನೇ ಹುಸಿ ಆರೋಪದಲ್ಲಿ ಸೆರೆಗೆ ತಳ್ಳಿದ್ದು, ದಲಿತ ಹಾಗೂ ಮಾನವ ಹಕ್ಕು ಸಂಘಟನೆಗಳು ಕನಿಷ್ಠ ಆರೋಪಿತ ಶಾಸಕನ ವಿರುದ್ಧ ದೂರು ದಾಖಲಿಸಲು ಪ್ರತಿಭಟನೆ ನಡೆಸುತ್ತಿದ್ದ ಹೊತ್ತಲ್ಲಿ, ಭೀಮಾ ಕೋರೆಗಾಂವ್ ವಿಜಯದ 200ನೇ ವರ್ಷವು ಬಂದಿತು. ಆ ದಿನವನ್ನು ದಲಿತ ಪ್ರತಿರೋಧದ ಮಹತ್ವದ ಕರೆಯಾಗಿಸಲು 250 ದಲಿತ ಸಂಘಟನೆಗಳು ‘ಎಲ್ಗಾರ್ ಪರಿಷತ್’ ಎಂಬ ವೇದಿಕೆಯಲ್ಲಿ ಒಂದಾದವು. 2017ರ ಡಿಸೆಂಬರ್ 31ರಂದು ಬ್ರಾಹ್ಮಣಶಾಹಿ ಪೇಶ್ವೆಗಳ ಅಧಿಕಾರ ಕೇಂದ್ರವಾಗಿದ್ದ ಮಹಾರಾಷ್ಟ್ರದ ಪುಣೆಯಲ್ಲಿ ದಲಿತ ಸಮಾವೇಶವನ್ನು ‘ಎಲ್ಗಾರ್ ಪರಿಷತ್’ ಆಯೋಜಿಸಿತು. ನಿವೃತ್ತ ನ್ಯಾಯಮೂರ್ತಿಗಳಾಗಿದ್ದ ಬಿ.ಜಿ.ಕೊಲ್ಸೆ ಪಾಟೀಲ್ ಹಾಗೂ ಪಿ.ಬಿ.ಸಾವಂತ್ ಅವರುಗಳು ‘ಎಲ್ಗಾರ್ ಪರಿಷತ್’ ನ ಮುಖ್ಯ ಸಂಘಟಕರಾಗಿದ್ದರು.

2018ರ ಜನವರಿ 1ರಂದು, ಬಾಬಾ ಸಾಹೇಬರು ಹಾಕಿಕೊಟ್ಟ ಸ್ವಾಭಿಮಾನದ ನಡೆಯ ಮಾರ್ಗವನ್ನು 1927ರಿಂದಲೂ ಅನುಸರಿಸುತ್ತಿದ್ದ ಸಾವಿರಾರು ದಲಿತರು ಭೀಮಾ ಕೋರೆಗಾಂವ್ ವಿಜಯ ಸ್ತಂಭಕ್ಕೆ ನಮನ ಸಲ್ಲಿಸುವ ಸಲುವಾಗಿ ಭೀಮಾ ಕೋರೆಗಾಂವ್‌ಗೆ ತೆರಳಿದರು. ಆದರೆ, ಹಿಂದುತ್ವವಾದಿ ಸಂಘಟನೆಯ ಮಿಲಿಂದ್ ಎಕಬೋಟೆ ಮತ್ತು ಸಂಭಾಜಿ ಭಿಡೆಯವರು ಆ ದಿನವನ್ನು ‘ಕರಾಳ ದಿನ’ವೆಂದು ಘೋಷಿಸಿ, ದಲಿತರ ಸ್ವಾಭಿಮಾನಿ ಯಾತ್ರೆಗೆ ತಡೆಯೊಡ್ಡುವಂತೆ ಗ್ರಾಮಸ್ಥರನ್ನು ಪ್ರಚೋದಿಸಿದರು. ದಲಿತ ಯಾತ್ರಿಕರು ಗ್ರಾಮ ಪ್ರವೇಶಿಸಿದಾಗ, ಅವರ ಮೇಲೆ ಹಲ್ಲೆ ನಡೆಸಲಾಯಿತು.

ಈ ಆಕ್ರಮಣದ ವಿರುದ್ಧ ಮಹಾರಾಷ್ಟ್ರದ ದಲಿತ ಸಂಘಟನೆಗಳು ಪುಣೆ ಹಾಗೂ ಮುಂಬೈಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಿದ ಕಾರಣವಾಗಿ ಎರಡೂ ನಗರಗಳು ಮೂರು ದಿನ ಸ್ತಬ್ಧವಾಗಿ ಹೋಗಿದ್ದವು.

ಭೀಮಾ ಕೋರೆಗಾಂವ್‌ನಲ್ಲಿ ನಡೆದ ಹಿಂಸೆಗೆ ಕಾರಣರಾದ ಮಿಲಿಂದ್ ಹಾಗೂ ಸಂಭಾಜಿಯವರನ್ನು ಬಂಧಿಸಿದ ಮಹಾರಾಷ್ಟ್ರ ಕಾನೂನು ಪಾಲಕರು, 300 ಜನ ದಲಿತ ಪ್ರತಿಭಟನಾಕಾರರ ಮೇಲೆ ಕೇಸು ಹಾಕಿತು. ಭೀಮಾಕೋರೆಗಾಂವ್ ಹಿಂಸೆಗೆ ‘ಎಲ್ಗಾರ್ ಪರಿಷತ್’ನ ಸಮಾವೇಶವೇ ಪ್ರಚೋದನೆ ಎಂದು ಆರೋಪಿಸಿ, 2018ರ ಸೆಪ್ಟಂಬರ್ ತಿಂಗಳಲ್ಲಿ ಸಮಾವೇಶದ ಸಹಭಾಗಿ ಸಂಘಟನೆಗಳಲ್ಲಿ ಒಂದಾಗಿದ್ದ ‘ಕಬೀರ್ ಕಲಾಮಂಚ್’ ಎಂಬ ದಲಿತ ಕಲಾ ಮಂಡಳಿಯ ಜ್ಯೋತಿ ಜಗ್ತಾಪ್, ಸಾಗರ್ ಗೋರ್ಕೆ ಮತ್ತು ರಮೇಶ್ ಗಾಯ್ಚೋರ್ ಅವರುಗಳನ್ನು ಕರಾಳ UAPA ಕಾಯ್ದೆಯಡಿ ಬಂಧನ ಮಾಡಲಾಯಿತು. ನಂತರ, ಎಲ್ಗಾರ್ ಪರಿಷತ್‌ನ ಆಯೋಜನೆ ಹಾಗೂ ನಂತರದ ಹಿಂಸಾಚಾರಕ್ಕೆ ಪ್ರಚೋದಿಸಿದವರು ಮಾವೋವಾದಿ ಸಂಘಟನೆಯ ಜೊತೆ ನಂಟನ್ನು ಹೊಂದಿದವರು ಎಂದು ಆರೋಪಿಸಿ ಮತ್ತೆ 13 ಜನ ದಲಿತ-ಆದಿವಾಸಿಗಳ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದವರನ್ನು UAPA ಕಾಯ್ದೆಯಡಿ ಬಂಧಿಸಿತು. ಈ 13 ಜನ ಎಲ್ಗಾರ್ ಪರಿಷತ್‌ನ ಸಭೆಯಲ್ಲಿ ಭಾಗವಹಿಸಿದ್ದರೋ ಇಲ್ಲವೋ ಎನ್ನುವುದನ್ನು ಖಾತರಿಪಡಿಸಿಕೊಳ್ಳುವುದಾಗಲಿ, ಅಲ್ಲಿ ಉದ್ರೇಕಕಾರಿ ಮಾತುಗಳನ್ನಾಡಿದ್ದರೋ ಎಂಬ ದಾಖಲೆಗಳನ್ನಾಗಲೀ UAPA ದಡಿ ಬಂಧಿಸುವಾಗ ಅಗತ್ಯವಿಲ್ಲದಿರುವುದು, ಇಂಥವರು ಪ್ರಭುತ್ವವನ್ನು ಬುಡಮೇಲು ಕೃತ್ಯದಲ್ಲಿ ಭಾಗಿ ಎಂಬ ತೆಳು ಆರೋಪ ಹೋರಿಸಿ ವರ್ಷಾಂತರಗಳ ವಿಚಾರಣೆ, ಪುರಾವೆಗಳಿರದೆ ಸೆರೆಯಲ್ಲಿ ಇರಿಸಲು ಅನುವು ಮಾಡಿಕೊಡುವುದು ಈ ಕಾಯ್ದೆಯ ಕರಾಳತೆ. ವಿವಿಧ ವೃತ್ತಿ ಪ್ರವೃತ್ತಿಗಳಲ್ಲಿ ಇದ್ದ ಇವರುಗಳಲ್ಲಿ ಇದ್ದ ಒಂದು ಸಾಮಾನ್ಯ ಸಂಗತಿ: ಇವರುಗಳು ಸಕ್ರಿಯ ದಲಿತ- ಆದಿವಾಸಿ ಹಕ್ಕುಗಳ ಬಗ್ಗೆ ಸಾರ್ವಜನಿಕವಾಗಿ ದನಿ ಎತ್ತುವ, ಪ್ರಭುತ್ವವನ್ನು ಪ್ರಶ್ನಿಸುವ ಧೀಮಂತರು. ಕಬೀರ್ ಕಲಾಮಂಚ್‌ನ ಮೂವರ ಜೊತೆ ಬಿಕೆ-16 ಎಂದು ಗುರುತಿಸಲಾಗುವ ಬಾಕಿ 13 ಜನರ ವಿವರ ಇಂತಿದೆ:

ಸುರೇಂದ್ರ ಗಾಡ್ಲಿಂಗ್ (ವಕೀಲರು), ರೋನಾ ವಿಲ್ಸನ್ (ಸಾಮಾಜಿಕ ಕಾರ್ಯಕರ್ತರು), ಶೋಮಾಸೇನ್ (ಅಧ್ಯಾಪಕರು), ಸುಧೀರ್ ದಾವ್ಳೆ (ದಲಿತ ಸಂಘಟಕರು), ಮಹೇಶ್ ರಾವುತ್ (ಅದಿವಾಸಿ ಹಕ್ಕುಗಳ ಚಳವಳಿಯ ಸಂಘಟಕರು), ಸುಧಾ ಭಾರದ್ವಾಜ್ (ವಕೀಲರು), ಅರುಣ್ ಫೆರೇರಾ (ವಕೀಲರು), ಗೌತಮ ನವ್ಲಾಖ (ಪತ್ರಕರ್ತರು), ವೆರ್ನಾನ್ ಗೊನ್ಸಾಲ್ವೆಸ್ (ಅಧ್ಯಾಪಕರು), ಸ್ಟ್ಯಾನ್ ಸ್ವಾಮಿ (ಪಾದ್ರಿ), ಹನಿ ಬಾಬು (ಅಧ್ಯಾಪಕರು), ಆನಂದ್ ತೇಲ್ತುಂಬ್ಡೆ (ಲೇಖಕರು, ಅಧ್ಯಾಪಕರು), ವರವರ ರಾವ್ (ಕವಿ, ಅಧ್ಯಾಪಕರು).

ಇವರಲ್ಲಿ ಸ್ಟ್ಯಾನ್ ಸ್ವಾಮಿಯವರ ಬಂಧನದ ವೇಳೆ ಅವರಿಗೆ 80ರ ವಯಸ್ಸು; ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು; ಸೆರೆಯಲ್ಲಿ ಅವರಿಗೆ ಅಗತ್ಯವಾದ ಆರೋಗ್ಯ ಸೇವೆ ನೀಡದೆ ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು; ಹಲವು ಬಾರಿ ವೈದ್ಯಕೀಯ ಕಾರಣಗಳಿಗೆ ಜಾಮೀನು ಕೋರಿದಾಗಲೂ ನಿರಾಕರಿಸಲಾಯಿತು; 1921ರ ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಅವರು ಇಂತಹ ದುಸ್ಥಿತಿಯ ಕಾರಣದಿಂದ ಮರಣ ಹೊಂದಿದರು.

ಇಂದಿಗೆ, ವರವರ ರಾವ್, ಸುಧಾ ಭಾರದ್ವಾಜ್, ಆನಂದ್ ತೇಲ್ತುಂಬ್ಡೆ, ಗೌತಮ್ ನವ್ಲಾಖ ಅವರಿಗೆ ಕಠಿಣ ಶರತ್ತುಬದ್ಧ ಜಾಮೀನು ನೀಡಲಾಗಿದೆ; ಉಳಿದ 11 ಜನ ಯಾವ ವಿಚಾರಣಾ ಪ್ರಕ್ರಿಯೆ ನಡೆಯದೆ ಸೆರೆಯಲ್ಲಿ ಉಳಿದಿದ್ದಾರೆ. ಅರುಣ್ ಫೆರೇರಾ ಅವರನ್ನು, ಈ ಹಿಂದೆ 2007ರಿಂದ 2014ರ ವರೆಗೆ ನಕ್ಸಲ್ ಸಂಪರ್ಕ ಇರುವವರೆಂದು ಸೆರೆಯಲ್ಲಿ ಇರಿಸಲಾಗಿತ್ತು; ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇರದ ಕಾರಣ ಬಿಡುಗಡೆಗೊಳಿಸಲಾಗಿತ್ತು!

ಈ ಮೂರು ಭೀಮಾ ಕೋರೆಗಾಂವ್ ವಿದ್ಯಮಾನಗಳನ್ನು ಗಮನಿಸಿದರೆ, 2007 ವರ್ಷಗಳ ನಂತರವೂ ದಮನಿತರು ಹೊಸ ಬಗೆಗಳಲ್ಲಿ ದಮನಿತರಾಗುತ್ತಿರುವುದು, ಜಾತಿವಾದಿ ಬ್ರಾಹ್ಮಣ್ಯ ಸರ್ವಾಧಿಕಾರಿ ಪೇಶ್ವೆಶಾಹಿಯು ವಿಭಿನ್ನ ರೂಪಗಳಲ್ಲಿ ಪ್ರಕಟವಾಗುತ್ತಿರುವುದು ನಿಚ್ಚಳವಾಗಿ ಕಾಣುತ್ತದೆ. ಭೀಮಾ ಕೋರೆಗಾಂವ್ ಕದನ ಮುಂದುವರಿಯುತ್ತಿದೆ; ವರ್ತಮಾನದ ಎದುರಿಗಿರುವ ಈ ವಾಸ್ತವವನ್ನು ಗಮನಿಸದಿರಲು ಸಾಧ್ಯವಿಲ್ಲ.

ಈ ಹಿನ್ನೆಲೆಯಲ್ಲಿ ‘ಭೀಮಾ ಕೋರೆಗಾಂವ್ ವಿಜಯೋತ್ಸವ’ ಎನ್ನುವುದು ಬರೀ ದಲಿತ ಸಂಘಟಕರಿಗೆ ಮಾತ್ರ ಪ್ರಸ್ತುತವಾದ ಚಾರಿತ್ರಿಕ ಸ್ಮತಿ ಆಚರಣೆ ಎಂದುಕೊಳ್ಳುವುದು ಮಹಾ ಪ್ರಮಾದ.

share
ಕೆ. ಫಣಿರಾಜ್
ಕೆ. ಫಣಿರಾಜ್
Next Story
X