Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸಂವಿಧಾನವನ್ನು...

ಸಂವಿಧಾನವನ್ನು ಉಳಿಸಿಕೊಳ್ಳಬೇಕೆಂದರೆ.....

ಇಂದು ರಾಷ್ಟ್ರೀಯ ಸಂವಿಧಾನ ದಿನ ► ತಾವು ದೇಶಕ್ಕರ್ಪಿಸಿದ ಸಂವಿಧಾನದ ಕುರಿತು ಡಾ. ಬಿ.ಆರ್. ಅಂಬೇಡ್ಕರ್ ಮಾಡಿದ ಭಾಷಣದ ಆಯ್ದ ಭಾಗಗಳು

ಪ್ರೊ. ಜೆ. ಸೋಮಶೇಖರ್ಪ್ರೊ. ಜೆ. ಸೋಮಶೇಖರ್26 Nov 2023 9:32 AM IST
share
ಸಂವಿಧಾನವನ್ನು ಉಳಿಸಿಕೊಳ್ಳಬೇಕೆಂದರೆ.....

ಜನತೆಯಿಂದ ಜನರಿಗಾಗಿ ಜನರ ಸರಕಾರ ಎಂಬ ಯಾವ ಸಿದ್ಧಾಂತವನ್ನು ಆಧರಿಸಿ ಈ ಸಂವಿಧಾನವನ್ನು ರೂಪಿಸಿದೆಯೋ ಅದನ್ನು ಉಳಿಸಿಕೊಳ್ಳಬೇಕಾದರೆ ದಾರಿಯಲ್ಲಿ ಎದುರಾಗುವ ಎಡರು-ತೊಡರುಗಳನ್ನು ತೊಡೆದುಹಾಕುತ್ತಾ ಮುಂದೆ ಸಾಗಬೇಕು. ಮಾತ್ರವಲ್ಲದೆ ಜನರಿಂದ ಜನರ ಸರಕಾರಕ್ಕೆ ಬದಲಾಗಿ ಜನರಿಗೋಸ್ಕರ ಸರಕಾರ ಬಯಸುವಂತಹ ಜನರನ್ನು ಪ್ರೋತ್ಸಾಹಿಸುವಂತಹ ಅಡ್ಡಿ ಅಡಚಣೆಗಳನ್ನು ನಿವಾರಿಸಬೇಕು.

...ಸಂವಿಧಾನ ಎಷ್ಟೇ ಶ್ರೇಷ್ಠ ಮಟ್ಟದ್ದಾಗಿದ್ದರೂ, ಅದನ್ನು ಅನುಸರಿಸಿ ಕಾರ್ಯನಿರ್ವಹಿಸ ತಕ್ಕವರು ಕೆಟ್ಟವರಾಗಿದ್ದರೆ, ಸಂವಿಧಾನವು ಕೆಟ್ಟ ಸಂವಿಧಾನವಾಗುತ್ತದೆ. ಆದರೆ ಎಷ್ಟೇ ಕೆಟ್ಟ ಸಂವಿಧಾನ ಆಗಿದ್ದರೂ ಅದನ್ನು ಅನುಸರಿಸಿ ಕಾರ್ಯನಿರ್ವಹಿಸತಕ್ಕವರು ಒಳ್ಳೆಯವರಾಗಿದ್ದರೆ ಅದು ಒಳ್ಳೆಯ ಸಂವಿಧಾನ ಎಂದು ತೋರುತ್ತದೆ. ಸಂವಿಧಾನವು ರಾಜ್ಯ ವ್ಯವಸ್ಥೆಯ ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಇವುಗಳನ್ನು ಒದಗಿಸಲು ಮಾತ್ರ ಸಾಧ್ಯ.

ರಾಜ್ಯದ ಅಂಗಗಳನ್ನು ಕಾರ್ಯನಿರ್ವಹಣೆಗಾಗಿ ಯಾವ ಪಕ್ಷಗಳ ಮತ್ತು ವ್ಯಕ್ತಿಗಳ ಕೈಗೆ ಒಪ್ಪಿಸಲಾಗುವುದೋ ಅಂಥ ಪಕ್ಷಗಳ ವ್ಯಕ್ತಿಗಳು ತಮ್ಮ ವ್ಯಕ್ತಿಗತ ಹಿತಸಾಧನೆಯ ಅಥವಾ ಪಕ್ಷದ ಹಿತ ಸಂವರ್ಧನೆಯ ಉದ್ದೇಶಕ್ಕಾಗಿ ಸಂವಿಧಾನವು ಬಳಕೆಯಾಗುತ್ತದೆ. ಆದ್ದರಿಂದ ಸಂವಿಧಾನ ಕಾರ್ಯನಿರ್ವಹಣೆಯು ರಾಜಕೀಯ ಪಕ್ಷಗಳನ್ನು ಜನಸಮುದಾಯವನ್ನು ಅವಲಂಬಿಸಿರುತ್ತದೆ. ಭಾರತದ ಜನಸಮುದಾಯ ಮತ್ತು ರಾಜಕೀಯ ಪಕ್ಷಗಳು ಸಂವಿಧಾನವನ್ನು ಹೀಗೆ ಬಳಸಿಕೊಳ್ಳುತ್ತಾರೆ ಎಂದು ಯಾರೂ ಹೇಳಬಲ್ಲರು ಅವರು ತಮ್ಮ ಉದ್ದೇಶಗಳ ಈಡೇರಿಕೆಗಾಗಿ ಸಂವಿಧಾನದ ವಿಧಿ ವಿಧಾನಗಳನ್ನು ಅನುಸರಿಸುವವರೋ? ಅಥವಾ ಕ್ರಾಂತಿಕಾರಕ ವಿಧಿ ವಿಧಾನಗಳನ್ನು ಅನುಸರಿಸಿದ ಸಂದರ್ಭದಲ್ಲಿ ಆಗ ಸಂವಿಧಾನವು ಎಷ್ಟೇ ಶ್ರೇಷ್ಠ ಮಟ್ಟದ್ದಾಗಿದ್ದರೂ ಅದು ವಿಫಲವಾಗುವಲ್ಲಿ ಸಂದೇಹವಿಲ್ಲ ಎಂದು ಹೇಳಲು ಯಾವ ಪ್ರವಾದಿಯೂ ಬೇಕಾಗಿಲ್ಲ. ಹೀಗಿರುವಾಗ ರಾಜಕೀಯ ಪಕ್ಷಗಳು, ಜನಸಮುದಾಯಗಳು ಯಾವ ರೀತಿಯಲ್ಲಿ ವರ್ತಿಸಬಹುದು ಎಂಬುದನ್ನು ತಿಳಿಯದೆ ಈ ಸಂದರ್ಭದಲ್ಲಿ ಯಾವುದೇ ತೀರ್ಮಾನ ಕೊಡುವುದು ಅರ್ಥಹೀನವಾಗುತ್ತದೆ.

ಸಂವಿಧಾನದ ಅಡಿಯಲ್ಲಿ ನಮ್ಮ ರಾಜ್ಯಗಳು ತಮ್ಮ ತಮ್ಮ ಶಾಸಕಾಂಗದ ಅಧಿಕಾರ ಅಥವಾ ಕಾರ್ಯಾಂಗದ ಅಧಿಕಾರ ಇವುಗಳಿಗಾಗಿ ಕೇಂದ್ರವನ್ನು ಅವಲಂಬಿಸಬೇಕಾಗಿಲ್ಲ. ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳು ಸಮಾನ ಸ್ಥಾನಮಾನದ ಮೇಲೆ ನೆಲೆಸಿರುತ್ತದೆ. ವಸ್ತುಸ್ಥಿತಿ ಹೀಗಿರುವಾಗ ಈ ಸಂವಿಧಾನವನ್ನು ಕೇಂದ್ರ ಪ್ರಧಾನ ಸಂವಿಧಾನ ಎಂದು ಹೇಗೆ ಹೇಳುತ್ತಾರೆ ಎಂದು ಅರ್ಥವಾಗುತ್ತಿಲ್ಲ. ಯಾವುದೇ ಸಂಯುಕ್ತ ಪದ್ಧತಿ ಸಂವಿಧಾನದಲ್ಲಿ ಉಳಿಕೆ ಅಧಿಕಾರವನ್ನು ರಾಜ್ಯಗಳಿಗೆ ಕೊಡದೆ ಕೇಂದ್ರಗಳಿಗೆ ಕೊಡಲಾಗಿದೆ. ನಮ್ಮ ಸಂವಿಧಾನದ ಈ ಲಕ್ಷಣಗಳು ಸಂಯುಕ್ತ ಪದ್ಧತಿಯ ಸಾರಸರ್ವಸ್ವ ಅಲ್ಲ. ನಾನು ಈಗಾಗಲೇ ಹೇಳಿರುವ ಪ್ರಕಾರ ಸಂಯುಕ್ತ ಪದ್ಧತಿಯ ಮುಖ್ಯ ಲಕ್ಷಣಗಳು ಎಂದರೆ, ಸಂವಿಧಾನ ದ್ವಾರ ಅಥವಾ ಸಂವಿಧಾನದ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಶಾಸಕಾಂಗ ಮತ್ತು ಅಧಿಕಾರಗಳ ವಿಭಜನೆ. ಈ ತತ್ವವೇ ನಮ್ಮ ಸಂವಿಧಾನದ ಮೂಲ ಲಕ್ಷಣ ಎನ್ನಬಹುದು.

ದೇಶದ ರಾಜಕೀಯ ಪಕ್ಷಗಳು ಜಾತಿ ಪಂಗಡಗಳನ್ನೇ ಪ್ರಧಾನವಾಗಿ ಭಾವಿಸುತ್ತಾ ರಾಷ್ಟ್ರವನ್ನು ಕಡೆಗಣಿಸಿದರೆ ರಾಷ್ಟ್ರದ ಸ್ವಾತಂತ್ರ್ಯಕ್ಕೆ ಗಂಡಾಂತರ ಅನಿವಾರ್ಯ. ನಮ್ಮ ಸ್ವಾತಂತ್ರ್ಯವನ್ನು ಎರಡನೆಯ ಬಾರಿ ಅಥವಾ ಶಾಶ್ವತವಾಗಿ ಕಳೆದುಕೊಳ್ಳುವ ಘೋರ ಪ್ರಸಂಗವು ಅನಿವಾರ್ಯವೇ, ಅಂಥ ಸಂಭಾವ್ಯ ಘಟನೆಯ ವಿರುದ್ಧ ನಾವು ಕೃತ ನಿಶ್ಚಯರಾಗಿ ನಿಲ್ಲಬೇಕು. ಕಟ್ಟಕಡೆಯ ನೆತ್ತರ ಹನಿಯನ್ನು ಹರಿಸಿಯಾದರೂ ಸ್ವಾತಂತ್ರ್ಯದ ರಕ್ಷಣೆಯ ಪ್ರತಿರಕ್ಷಣೆ ಮತ್ತು ಪರಿರಕ್ಷಣೆ ಮಾಡುತ್ತೇವೆ ಎಂದು ದೃಢಪ್ರತಿಜ್ಞೆ ಮಾಡಬೇಕು.

ಭಾರತವು 1950ರ ಜನವರಿ 26ನೇ ತಾರೀಖಿನಂದು ಸ್ವತಂತ್ರ ಗಣರಾಜ್ಯವಾಗಲಿದೆ. ಅಂದರೆ ಭಾರತ ದೇಶವು, ಭಾರತದ ಜನತೆಯಿಂದ ಜನರಿಗೋಸ್ಕರ, ಜನತಾ ಸರಕಾರವು ರೂಢಿಸಿಕೊಳ್ಳಲಿದೆ. ಪುನಃ ಈ ಸಂದರ್ಭದಲ್ಲೂ ಅದೇ ತಲ್ಲಣವು ನನ್ನನ್ನು ಕಾಡುತ್ತಿದೆ. ಸಂವಿಧಾನವು ತನ್ನ ಪ್ರಜಾಸತ್ತಾತ್ಮಕ ರಕ್ಷಣೆಗಳನ್ನು ಉಳಿಸಿಕೊಳ್ಳಲಿದೆಯೇ? ಉಳಿಸಿಕೊಳ್ಳುತ್ತದೆಯೇ ಅಥವಾ ಮತ್ತೊಮ್ಮೆ ಕಳೆದುಕೊಳ್ಳುತ್ತದೆಯೇ ಈ ಎರಡನೆಯ ವಿಚಾರ ಅಥವಾ ಚಿಂತೆಯು ಮೊದಲನೇ ಚಿಂತೆಯಷ್ಟೇ ನನ್ನನ್ನು ತಲ್ಲಣಗೊಳಿಸುತ್ತಿದೆ.

ಪ್ರಜಾಪ್ರಭುತ್ವವನ್ನು, ಅದರ ಸ್ವರೂಪವಷ್ಟೇ ಅಲ್ಲದೆ, ಅದರ ತತ್ವವನ್ನು ಸತ್ವವನ್ನು ಉಳಿಸಿಕೊಳ್ಳ ಬೇಕಾದರೆ ನಾವು ಏನು ಮಾಡಬೇಕು? ನನ್ನ ಅಭಿಪ್ರಾಯದ ಪ್ರಕಾರ ನಮ್ಮ ಸಾಮಾಜಿಕ ಮತ್ತು ಆರ್ಥಿಕ ಧ್ಯೇಯಗಳನ್ನು ಈಡೇರಿಸಿಕೊಳ್ಳಲು ನಾವು ಸಾಂವಿಧಾನಿಕ ವಿಧಾನಗಳನ್ನೇ ಅನುಸರಿಸಬೇಕು. ಅಂದರೆ ರಕ್ತಪಾತದ ಮಾರ್ಗಗಳನ್ನು ಸಂಪೂರ್ಣ ವಾಗಿ ತೊರೆಯಬೇಕು. ಎಲ್ಲಿ ಸಂವಿಧಾನ ಸಮ್ಮತವಾದ ಮಾರ್ಗಗಳಿಗೆ ಅವಕಾಶ ಇರುವುದೋ ಅಲ್ಲಿ ಸಂವಿಧಾನ ಬಾಹಿರವಾದ ಮಾರ್ಗಗಳಿಗೆ ಸಮರ್ಥನೆ ಇರುವುದಿಲ್ಲ. ಆ ಮಾರ್ಗಗಳೆಲ್ಲ ಅರಾಜಕತೆಯ ನೀತಿ ಸೂತ್ರಗಳಾಗಿದ್ದು ಅವುಗಳನ್ನು ತೊರೆದಷ್ಟು ಜನಸಮುದಾಯಕ್ಕೆ ಕ್ಷೇಮ, ರಾಷ್ಟ್ರಕ್ಕೆ ಕ್ಷೇಮ. ನಾವು ಕೇವಲ ರಾಜಕೀಯ ಪ್ರಜಾಪ್ರಭುತ್ವಗಳಿಂದ ಸಂತೃಪ್ತರಾಗಿ ಉಳಿಯಬಾರದು. ನಮಗೆ ದೊರೆತ ರಾಜಕೀಯ ಪ್ರಜಾಪ್ರಭುತ್ವಕ್ಕೆ ಆಧಾರವಾಗಿ ಆರ್ಥಿಕ ಪ್ರಜಾಪ್ರಭುತ್ವವನ್ನು ಏರ್ಪಡಿಸಿಕೊಳ್ಳಬೇಕು.

ಆರ್ಥಿಕ ಪ್ರಜಾಪ್ರಭುತ್ವದ ಬುನಾದಿ ಇಲ್ಲದೇ ಹೋದರೆ, ರಾಜಕೀಯ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಹಾಗಾದರೆ ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ ಏನು? ಅದೊಂದು ಜೀವನ ಪದ್ಧತಿ, ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಗಳನ್ನು ಒಳಗೊಂಡ ಪದ್ಧತಿ. ಈ ಮೂರು ಅಂಶಗಳನ್ನು ಪ್ರತ್ಯೇಕವೆಂದು ಪರಿಗಣಿಸುವಂತಿಲ್ಲ. ಏಕೆಂದರೆ, ಒಂದು ಇಲ್ಲದೆ ಇನ್ನೊಂದಕ್ಕೆ ಅಸ್ತಿತ್ವವಿಲ್ಲ. ಒಂದಕ್ಕೆ ಇನ್ನೊಂದು ಪೂರಕ. ಅವುಗಳನ್ನು ಪ್ರತ್ಯೇಕಿಸಲು ಪ್ರಯತ್ನಿಸಿದರೆ ಪ್ರಜಾಪ್ರಭುತ್ವದ ಉದ್ದೇಶವೇ ವಿಫಲವಾಗುತ್ತದೆ.

ಸ್ವಾತಂತ್ರ್ಯವನ್ನು ಸಮಾನತೆಯಿಂದ ಬೇರ್ಪಡಿಸು ವಂತಿಲ್ಲ. ಎಲ್ಲಿ ಸಮಾನತೆ ಇರುವುದಿಲ್ಲವೋ ಅಲ್ಲಿ ಸ್ವಾತಂತ್ರ್ಯ ಎನ್ನುವುದು ಬಹುಸಂಖ್ಯಾತರ ಮೇಲೆ ಅಲ್ಪಸಂಖ್ಯಾತರು ನಡೆಸುವ ಅಧಿಕಾರ ಆಗುತ್ತದೆ. ಸ್ವಸ್ವಾತಂತ್ರ್ಯ ಇಲ್ಲದ ಸಮಾನತೆಯು ವ್ಯಕ್ತಿತ್ವವನ್ನು ನಾಶಗೊಳಿಸುತ್ತದೆ. ಸೋದರತೆ ಇಲ್ಲದ ಸಮಾನತೆ ಮತ್ತು ಸ್ವಾತಂತ್ರ್ಯ ಇವು ಸುಸೂತ್ರವಾಗಿ ನಡೆಯುವಂತಿಲ್ಲ.

ಸೋದರತೆ ತತ್ವಕ್ಕೆ ಮನ್ನಣೆ ಇಲ್ಲದಿರುವುದು ಎರಡನೇ ಪ್ರಶ್ನೆ. ಸಹೋದರತೆ ಎಂದರೇನು? ಅಂದರೆ ಭಾರತೀಯರಾದ ನಾವೆಲ್ಲರೂ ಸೋದರರು ಎಂಬ ಭಾವನೆ. ಭಾರತೀಯರೆಲ್ಲರೂ ಒಂದೇ ಎಂಬ ಭಾವನೆ. ಸೋದರತೆಯ ತತ್ವವೇ ಸಾಮಾಜಿಕ ಜೀವನಕ್ಕೆ ಏಕತೆಯ ಶಕ್ತಿಯನ್ನು ಒದಗಿಸಿಕೊಡುತ್ತದೆ. ಈ ಭಾವನೆಯನ್ನು ನೆಲೆಗೊಳಿಸಲು, ವಿಕಾಸಗೊಳಿಸಲು ಅನನ್ಯ ಪರಿಶ್ರಮ ಅಗತ್ಯ.

ಜನತೆಯಿಂದ ಜನರಿಗಾಗಿ ಜನರ ಸರಕಾರ ಎಂಬ ಯಾವ ಸಿದ್ಧಾಂತವನ್ನು ಆಧರಿಸಿ ಈ ಸಂವಿಧಾನವನ್ನು ರೂಪಿಸಿದೆಯೋ ಅದನ್ನು ಉಳಿಸಿಕೊಳ್ಳಬೇಕಾದರೆ ದಾರಿಯಲ್ಲಿ ಎದುರಾಗುವ ಎಡರು-ತೊಡರುಗಳನ್ನು ತೊಡೆದುಹಾಕುತ್ತಾ ಮುಂದೆ ಸಾಗಬೇಕು. ಮಾತ್ರವಲ್ಲದೆ ಜನರಿಂದ ಜನರ ಸರಕಾರಕ್ಕೆ ಬದಲಾಗಿ ಜನರಿಗೋಸ್ಕರ ಸರಕಾರ ಬಯಸುವಂತಹ ಜನರನ್ನು ಪ್ರೋತ್ಸಾಹಿಸುವಂತಹ ಅಡ್ಡಿ ಅಡಚಣೆಗಳನ್ನು ನಿವಾರಿಸಬೇಕು. ಇಷ್ಟೇ ಅಲ್ಲದೆ ಅಂಥ ತೊಡಕು ತೊಂದರೆಗಳನ್ನು ನಿವಾರಿಸು ವಾಗ ದುರ್ಬಲರ ಹಾಗೆ ವರ್ತಿಸಬಾರದು. ಅದೊಂದೇ ದೇಶ ಸೇವೆಯ ಸೂತ್ರ. ಅದೇ ಅನುಸರಿಸತಕ್ಕ ಮಾರ್ಗ. ಅದಕ್ಕಿಂತ ಉತ್ತಮವಾದ ಸೂತ್ರವಾಗಲೀ, ಮಾರ್ಗವಾಗಲೀ ನನಗೆ ಗೊತ್ತಿಲ್ಲ.

share
ಪ್ರೊ. ಜೆ. ಸೋಮಶೇಖರ್
ಪ್ರೊ. ಜೆ. ಸೋಮಶೇಖರ್
Next Story
X