ವಿದೇಶಿ ವಿದ್ಯಾಭ್ಯಾಸಕ್ಕೆ ರೆಡಿಯೆ? ಹಾಗಿದ್ದರೆ ನಿಮ್ಮ ROI ಗರಿಷ್ಠಗೊಳಿಸುವ ತಾಣ ಯಾವುದು ಗೊತ್ತೆ?

ಸಾಂದರ್ಭಿಕ ಚಿತ್ರ | Photo Credit : freepik.com
ವಿದೇಶಿ ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳು ಮಾಡುವ ತಪ್ಪೇನು? ರಿಟರ್ನ್ ಆನ್ ಇನ್ವೆಸ್ಟ್ಮೆಂಟ್ ಏಕೆ ಮುಖ್ಯ? ನಿಮಗೆ ಅಗತ್ಯವಿರುವ ಭಾಷೆಗಳು ಮತ್ತು ಸ್ಕಾಲರ್ಶಿಪ್ಗಳ ಅಂತಿಮ ಗಡುವುಗಳ ಬಗ್ಗೆ ಮೊದಲು ತಿಳಿದುಕೊಳ್ಳಿ.
ವಿದ್ಯಾಭ್ಯಾಸದ ಮೇಲೆ ಲಕ್ಷಾಂತರ ಖರ್ಚು ಮಾಡಿ ಕಡಿಮೆ ವೇತನದ ಉದ್ಯೋಗಪಡೆಯಲು ಯಾರೂ ಬಯಸುವುದಿಲ್ಲ. ಹೀಗಾಗಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಪ್ರತಿಯೊಬ್ಬರು ತೆರಳುವ ಮೊದಲೇ ಹೂಡಿಕೆಗೆ ತಕ್ಕ ಫಲ ಸಿಗುತ್ತದೆಯೇ (ರಿಟರ್ನ್ ಆನ್ ಇನ್ವೆಸ್ಟ್ಮೆಂಟ್) ಎಂದು ಪರೀಕ್ಷಿಸಬೇಕು. ನೀವು ಎಲ್ಲಿ ಓದಲು ಹೋಗುತ್ತೀರಿ ಎನ್ನುವುದರ ಮೇಲೆ ರಿಟರ್ನ್ ಆನ್ ಇನ್ವೆಸ್ಟ್ಮೆಂಟ್ (ROI) ಗ್ಯಾರಂಟಿ ಸಿಗುತ್ತದೆ. ಉತ್ತಮ ROI ಇರುವ ದೇಶವನ್ನು ಆರಿಸಿದಲ್ಲಿ ಓದಿಗೆ ಖರ್ಚು ಮಾಡಿದ ಮೂರುಪಟ್ಟು ಉದ್ಯೋಗದಲ್ಲಿ ಗಳಿಸಬಹುದು. ಹೀಗಾಗಿ ಉತ್ತಮ ROI ಇರುವ ದೇಶವನ್ನು ಆರಿಸುವುದು ಮುಖ್ಯ. ಜರ್ಮನಿಯಂತಹ ದೇಶದಲ್ಲಿ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಉಚಿತ ವಿದ್ಯಾಭ್ಯಾಸವಿರುತ್ತದೆ. ದುಬೈನಂತಹ ದೇಶಗಳಲ್ಲಿ ತೆರಿಗೆ ರಹಿತ ವೇತನಗಳು ಸಿಗುತ್ತವೆ. ಹಾಗಿದ್ದರೆ ಉತ್ತಮ ಆರ್ಒಐ ನೀಡುವ ದೇಶ ಯಾವುದು?
ವಿದೇಶಿ ವಿದ್ಯಾಭ್ಯಾಸಕ್ಕೆ ಉತ್ತಮ ROI ಏಕೆ ಬೇಕು?
ಆರ್ಒಐ ಎಂದರೆ ಕೇವಲ ಟ್ಯೂಷನ್ಗೆ ವೆಚ್ಚ ಮಾಡಿದ ಹಣವಲ್ಲ. ವಿದೇಶದಲ್ಲಿರುವಾಗ ಸಂತೃಪ್ತಿಗೆ, ಆರೋಗ್ಯಕ್ಕೆ ಮತ್ತು ಸಂಪತ್ತಿನ ಮೇಲೆ ವ್ಯಯ ಮಾಡಿದ ಹಣವೂ ಸೇರುತ್ತದೆ.
ಅತ್ಯುತ್ತಮ ದೇಶವೆಂದರೆ,
ಕಡಿಮೆ ಟ್ಯೂಶನ್ ಶುಲ್ಕ: ಸ್ಕಾಲರ್ಶಿಪ್ಗಳು ಮತ್ತು ಸರ್ಕಾರಿ ಅನುದಾನ.
ಅತ್ಯುತ್ತಮ ಆರಂಭಿಕ ವೇತನಗಳು: ಸ್ನಾತಕೋತ್ತರ ಕಲಿಕೆಯ ಜೊತೆಗೆ ಗಳಿಕೆ.
ಅತ್ಯುನ್ನತ ಆರ್ಒಐ ಇರುವ ಹತ್ತು ದೇಶಗಳೆಂದರೆ, ಜರ್ಮನಿ, ಆಸ್ಟ್ರೇಲಿಯ, ಯುಎಇ (ದುಬೈ), ನೆದರ್ಲ್ಯಾಂಡ್ಸ್, ಐರ್ಲ್ಯಾಂಡ್, ಸ್ವಿಝರ್ಲ್ಯಾಂಡ್, ದಕ್ಷಿಣ ಕೊರಿಯ, ಜಪಾನ್, ಸ್ವೀಡನ್, ಇಟಲಿ ಸೇರಿದೆ.
ಕೆಲವು ದೇಶಗಳೇಕೆ ಉತ್ತಮ ROI ಹೊಂದಿವೆ?
ಮೊದಲನೇ ಸ್ಥಾನದಲ್ಲಿರುವ ಜರ್ಮನಿಯಲ್ಲಿ ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ಶೂನ್ಯ ಟ್ಯೂಷನ್ ಶುಲ್ಕವಿದೆ. ಆರಂಭಿಕ ವೇತನ 40-60 ಲಕ್ಷ ರೂ.ಗಳು. ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉತ್ತಮ ಅವಕಾಶವಿದೆ. ನಂತರದ ಸ್ಥಾನಗಳಲ್ಲಿರುವ ಆಸ್ಟ್ರೇಲಿಯದಲ್ಲಿ ಟ್ಯೂಷನ್ ಶುಲ್ಕ ಮಧ್ಯಮದಿಂದ/ಅತ್ಯಧಿಕದವರೆಗೆ ಇದೆ. ಆರಂಭಿಕ ವೇತನ ಅತ್ಯಧಿಕವಿದೆ. ನೇರ ವಲಸೆ ಹಾದಿಯಲ್ಲಿ ಶಾಶ್ವತ ಪೌರತ್ವ ಪಡೆಯಬಹುದು. ಯುಎಇಯಲ್ಲಿ (ದುಬೈ) ಟ್ಯೂಷನ್ ಶುಲ್ಕ ಮಧ್ಯಮ ಮಟ್ಟದಲ್ಲಿದೆ. ಆರಂಭಿಕ ವೇತನ ತೆರಿಗೆ ರಹಿತ ಮತ್ತು ಅತ್ಯಧಿಕವಿದೆ. ಅರ್ಥವ್ಯವಸ್ಥೆ ಅಭಿವೃದ್ದಿ ಹೊಂದುತ್ತಿದೆ ಮತ್ತು ತಂತ್ರಜ್ಞಾನದ ವಲಯವಾಗಿದೆ. ಐರ್ಲೆಂಡ್ನಲ್ಲಿ ಟ್ಯೂಷನ್ ಶುಲ್ಕ 15-20 ಲಕ್ಷ ರೂ.ಗಳ ನಡುವೆ ಇದೆ. ಆರಂಭಿಕ ವೇತನ 35-45 ಲಕ್ಷ ರೂ.ಗಳ ನಡುವೆ ಇದೆ. ಇದು ಯುರೋಪಿಯನ್ ತಂತ್ರಜ್ಞಾನದ ಮುಖ್ಯ ವಲಯ! (ಇಂಗ್ಲೆಂಡ್ ಯುರೋಪಿಯನ್ ಒಕ್ಕೂಟದಿಂದ ಹೊರ ಹೋದ ನಂತರ), ಸ್ವಿಝರ್ಲ್ಯಾಂಡ್ನಲ್ಲಿ ವಿದ್ಯಾಭ್ಯಾಸ ಶುಲ್ಕ 1-2 ಲಕ್ಷ ರೂ.ಗಳವರೆಗೆ ಇದೆ. ಆರಂಭಿಕ ವೇತನ 80 ಲಕ್ಷ ರೂ.ಗಳಿಂದ ಶುರುವಾಗುತ್ತದೆ. ಅತಿ ಕಡಿಮೆ ಟ್ಯೂಷನ್ ಶುಲ್ಕ ಮತ್ತು ಅತ್ಯಧಿಕ ಆರಂಭಿಕ ವೇತನವಾಗಿರುವ ಕಾರಣ ಉತ್ತಮ ತಾಣ. ನಂತರದ ಸ್ಥಾನಗಳಲ್ಲಿರುವ ದಕ್ಷಿಣ ಕೊರಿಯದಲ್ಲಿ ಸ್ಕಾಲರ್ಶಿಪ್ಗಳು ಸಿಕ್ಕರೆ ಕಡಿಮೆ ಟ್ಯೂಷನ್ ಶುಲ್ಕ ಇರುತ್ತದೆ. ಆರಂಭಿಕ ವೇತನ ಅತ್ಯಧಿಕ ಇರುತ್ತದೆ. ಸೆಮಿಕಂಡಕ್ಟರ್ ತಂತ್ರಜ್ಞಾನದಲ್ಲಿ ಟಾಪ್ ಸ್ಥಾನದಲ್ಲಿದೆ. ಜಪಾನ್ನಲ್ಲಿ ಟ್ಯೂಷನ್ ಶುಲ್ಕ 3-10 ಲಕ್ಷ ರೂ.ಗಳಷ್ಟಿರುತ್ತದೆ. ಆರಂಭಿಕ ವೇತನ ಅತ್ಯಧಿಕ ಇರುತ್ತದೆ. ರೋಬೋಟಿಕ್ಸ್ ಮತ್ತು ಎಐಗೆ ಉತ್ತಮ ಉದ್ಯೋಗ ಮಾರುಕಟ್ಟೆ ಇದೆ. ಉಳಿದಂತೆ, ಸ್ವೀಡನ್ನಲ್ಲಿ ಟ್ಯೂಷನ್ ಶುಲ್ಕ 12-20 ಲಕ್ಷ ರೂ.ಗಳಿದ್ದರೆ, ಆರಂಭಿಕ ವೇತನ 40-50 ಲಕ್ಷ ರೂ.ಗಳಷ್ಟಿದೆ. ಇಂಗ್ಲಿಷ್ ಭಾಷೆ ಗೊತ್ತಿರುವ ತಂತ್ರಜ್ಞರಿಗೆ ಉತ್ತಮ ತಾಣ. ಇಟಲಿಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಬಹುತೇಕ ಶೂನ್ಯ ಟ್ಯೂಷನ್ ಶುಲ್ಕವಿದೆ. ಆರಂಭಿಕ ವೇತನ ಸಾಧಾರಣ ಮಟ್ಟದಲ್ಲಿರುತ್ತದೆ. ವಿನ್ಯಾಸ ಮತ್ತು ಫ್ಯಾಷನ್ ಕ್ಷೇತ್ರಗಳಿಗೆ ಉತ್ತಮ ತಾಣ.
ಓದು-ಗಳಿಕೆಗೆ ಅವಕಾಶವಿರುವ ದೇಶಗಳು ಯಾವುವು?
2026ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಓದಬೇಕೆಂದರೆ ತಂತ್ರಜ್ಞಾನ, ಆರೋಗ್ಯ ಸೇವೆ ಮತ್ತು ಎಂಜಿನಿಯರಿಂಗ್ನಲ್ಲಿ ಉದ್ಯೋಗಾವಕಾಶಗಳು ನೀಡುವ ದೇಶಗಳು ಉತ್ತಮ. ಹೀಗಾಗಿ ಹಣ ಗಳಿಕೆಗೆ ಜರ್ಮನಿ, ಆಸ್ಟ್ರೇಲಿಯ ಮತ್ತು ಯುಎಇ (ದುಬೈ) ಉತ್ತಮ.
2026ರಕ್ಕೆ ನಿಮ್ಮ ವಿದ್ಯಾಭ್ಯಾಸದ ROI ಲೆಕ್ಕ ಮಾಡುವುದು ಹೇಗೆ?
ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ಶಿಕ್ಷಣ ಸಾಲ ತೆಗೆದುಕೊಳ್ಳುವ ಮೊದಲು ನೀವು ಪಡೆಯುವ ಪದವಿಗೆ ಎಷ್ಟು ಮೌಲ್ಯವಿದೆ ಎಂದು ತಿಳಿದುಕೊಳ್ಳಬೇಕು. ಓದಿನ ಒಟ್ಟು ವೆಚ್ಚ (ಟ್ಯೂಷನ್ + ವಿದೇಶದ ವಸತಿ + ವೀಸಾ) ಮತ್ತು 3 ವರ್ಷಗಳ ಕೆಲಸದ ನಂತರ ಒಟ್ಟು ಉಳಿತಾಯದ ನಿರೀಕ್ಷೆಯನ್ನು ಲೆಕ್ಕ ಮಾಡಬೇಕು. ನೀವು ಉದ್ಯೋಗವನ್ನು ಆರಂಭಿಸಿದ ನಂತರ ನಿಮ್ಮ ವಿದ್ಯಾಭ್ಯಾಸದ ಸಾಲವನ್ನು 24-36 ತಿಂಗಳಲ್ಲಿ ಮುಗಿಸಲು ಸಾಧ್ಯವಾದಲ್ಲಿ ಉತ್ತಮ ಆರ್ಒಐ ಇರುವ ದೇಶವನ್ನು ಆರಿಸಿಕೊಂಡಿದ್ದೀರಿ ಎಂದು ತಿಳಿದುಕೊಳ್ಳಬೇಕು.
ಭಾರತೀಯ ವಿದ್ಯಾರ್ಥಿಗಳಿಗೆ ಅತ್ಯಧಿಕ ಬೇಡಿಕೆ ಇರುವ ವೃತ್ತಿಗಳು ಯಾವುವು?
ಸೂಕ್ತ ದೇಶವನ್ನು ಮಾತ್ರ ಆಯ್ಕೆ ಮಾಡಿಕೊಂಡರೆ ಸಾಲದು. ಅತ್ಯಧಿಕ-ಬೇಡಿಕೆ ಇರುವ ವೃತ್ತಿಯನ್ನೂ ಆರಿಸಿಕೊಳ್ಳಬೇಕು. 2026ರ ಮಾರುಕಟ್ಟೆ ದತ್ತಾಂಶದ ಪ್ರಕಾರ ಅತ್ಯುನ್ನತ ಆರಂಭಿಕ ವೇತನ ಮತ್ತು ಸರಳವಾದ ಕೆಲಸದ ಅವಕಾಶ ನೀಡುವ ದೇಶಗಳು ಈ ಕೆಳಗಿನಂತಿವೆ.
1. ಎಐ ಮತ್ತು ಮೆಷಿನ್ ಲರ್ನಿಂಗ್ ಸ್ಪೆಷಲಿಸ್ಟ್ಗಳು: ಜರ್ಮನಿ ಮತ್ತು ಅಮೆರಿಕದಲ್ಲಿ ಅತಿಯಾದ ಬೇಡಿಕೆ ಇದೆ.
2. ನವೀಕೃತ ಇಂಧನ ಎಂಜಿನಿಯರ್ಗಳಿಗೆ ನೆದರ್ಲ್ಯಾಂಡ್ ಮತ್ತು ಸ್ವೀಡನ್ನಲ್ಲಿ ಬೇಡಿಕೆ ಇದೆ.
3. ಆರೋಗ್ಯಸೇವೆ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಜರ್ಮನಿ ಮತ್ತು ಕೆನಡಾದಲ್ಲಿ ಉದ್ಯೋಗವಕಾಶಗಳಿವೆ.
4. ಫಿನ್ಟೆಕ್ ಮತ್ತು ಬ್ಲಾಕ್ಚೈನ್ ಕ್ಷೇತ್ರದಲ್ಲಿ ತೆರಿಗೆ ರಹಿತ ಗಳಿಕೆಯನ್ನು ಯುಎಇ (ದುಬೈ)ಯಲ್ಲಿ ಪಡೆಯಬಹುದು.
ಭಾರತೀಯರಿಗೆ ಉತ್ತಮ ROI ಮತ್ತು ಅಗ್ಗದ ಕಲಿಕೆಗೆ ಅವಕಾಶವಿರುವ ದೇಶಗಳು ಯಾವುವು?
ನಿಮ್ಮ ಬಳಿ ಖರ್ಚು ಮಾಡಲು ಹಣ ಕಡಿಮೆ ಇದ್ದು, ವಿದ್ಯಾಭ್ಯಾಸಕ್ಕೆ ಉತ್ತಮ ದೇಶವನ್ನು ಆರಿಸಿಕೊಳ್ಳಬೇಕು ಎಂದಿದ್ದರೆ ಕೆಲವು ದೇಶಗಳಲ್ಲಿ ಅವಕಾಶವಿದೆ. 2026ರಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್ಗಳಲ್ಲಿ ಬಹಳ ದುಬಾರಿ ವಿದ್ಯಾಭ್ಯಾಸಪಡೆಯುವ ಬದಲಾಗಿ ಈ ದೇಶಗಳಿಗೆ ಹೋಗಬಹುದು. ಮೊದಲನೆಯ ಸ್ಥಾನದಲ್ಲಿದೆ ಜರ್ಮನಿ. ಅಲ್ಲಿನ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣ ಸಿಗುತ್ತದೆ. ಇಟಲಿಯಲ್ಲಿ ಡಿಎಸ್ಯು ಸ್ಕಾಲರ್ಶಿಪ್ ಪಡೆದರೆ ನಿಮ್ಮ ಪದವಿಯನ್ನು ಬಹುತೇಕ ಉಚಿತವಾಗಿ ಮುಗಿಸಬಹುದು. ಸೆಮಿಕಂಡಕ್ಟರ್ ಉದ್ಯಮದಲ್ಲಿ ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಅನುದಾನವಿರುವ ತೈವಾನ್ನಲ್ಲಿ ಉತ್ತಮ ಅವಕಾಶವಿದೆ. ಪೋಲಂಡ್ನಲ್ಲಿ ವಸತಿ ವೆಚ್ಚ ಅತಿ ಕಡಿಮೆ ಇದೆ. ಇದು ಯುರೋಪ್ನ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ವಲಯವಾಗಿದೆ.
ಕೃಪೆ: shiksha.com







