Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬೆಳಗಾವಿಯಲ್ಲಿ ತುರ್ತು ಲ್ಯಾಂಡ್ ಆದ...

ಬೆಳಗಾವಿಯಲ್ಲಿ ತುರ್ತು ಲ್ಯಾಂಡ್ ಆದ ತರಬೇತಿ ವಿಮಾನದಲ್ಲಿ ಮಿತಿಗಿಂತ ಹೆಚ್ಚು ಎಥೆನಾಲ್ ಪೆಟ್ರೋಲ್ ಬಳಕೆ : DGCA ತನಿಖಾ ವರದಿಯಲ್ಲಿ ಬಹಿರಂಗ

►ಇಂಜಿನ್ ವೈಫಲ್ಯಕ್ಕೆ ತೈಲ ವ್ಯವಸ್ಥೆಯ ನಿರ್ವಹಣಾ ಲೋಪವೇ ಪ್ರಮುಖ ಕಾರಣ ► ತರಬೇತಿ ಸಂಸ್ಥೆಯಲ್ಲೂ ಸುರಕ್ಷತಾ ಕೊರತೆ

ಇರ್ಷಾದ್ ಎಂ. ವೇಣೂರುಇರ್ಷಾದ್ ಎಂ. ವೇಣೂರು9 Nov 2026 8:20 AM IST
share
ಬೆಳಗಾವಿಯಲ್ಲಿ ತುರ್ತು ಲ್ಯಾಂಡ್ ಆದ ತರಬೇತಿ ವಿಮಾನದಲ್ಲಿ ಮಿತಿಗಿಂತ ಹೆಚ್ಚು ಎಥೆನಾಲ್ ಪೆಟ್ರೋಲ್ ಬಳಕೆ : DGCA ತನಿಖಾ ವರದಿಯಲ್ಲಿ ಬಹಿರಂಗ

ಬೆಂಗಳೂರು : ವಿಮಾನದಲ್ಲಿ ಅನುಮೋದಿತಮಿತಿಗಿಂತ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸಿರುವುದು ಹಾಗೂ ಇಂಜಿನ್ ನಿರ್ವಹಣೆಯಲ್ಲಿನ ಲೋಪಗಳು 2023ರಲ್ಲಿ ಬೆಳಗಾವಿಯಲ್ಲಿ ಸಂಭವಿಸಿದ ತರಬೇತಿ ವಿಮಾನದ ತುರ್ತು ಲ್ಯಾಂಡಿಂಗ್ ಘಟನೆಯ ಕುರಿತ DGCA ತನಿಖಾ ವರದಿಯಲ್ಲಿ ಬೆಳಕಿಗೆ ಬಂದಿವೆ.

ಆಉಅಂ ಸಹಾಯಕ ನಿರ್ದೇಶಕ ಸಯ್ಯದ್ ಖಾಸಿಮ್ ರಝ್ವಿ ಅವರು ಈ ಘಟನೆಯ ತನಿಖೆ ನಡೆಸಿದರು. ವಿಮಾನ ಸುರಕ್ಷತಾ ಅಧಿಕಾರಿ ಸಿದ್ಧಾಂತ್ ಗುಪ್ತಾ ತನಿಖಾ ತಂಡದ ಸದಸ್ಯರಾಗಿದ್ದರು. 2024ರ ಸೆಪ್ಟೆಂಬರ್ 18ರಂದು ತನಿಖಾ ವರದಿ ಪೂರ್ಣಗೊಂಡಿತ್ತು. ಘಟನೆ ನಡೆದು ಸುಮಾರು ಎರಡು ವರ್ಷಗಳ ಬಳಿಕ ಕೇಂದ್ರ ಸರಕಾರ ಈ ವರದಿಯನ್ನು ಬಹಿರಂಗಪಡಿಸಿದೆ.

ರೆಡ್ ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡಮಿಗೆ ಸೇರಿದ ಟೆಕ್ನಾಮ್ P2008JC ಮಾದರಿಯ VT-RBF ವಿಮಾನವು 2023ರ ಮೇ 30ರಂದು ವಿದ್ಯಾರ್ಥಿ ಪೈಲಟ್ ನ ಏಕಾಂಗಿ ತರಬೇತಿ ಹಾರಾಟದ ವೇಳೆ ಇಂಜಿನ್ ವೈಫಲ್ಯದಿಂದ ತುರ್ತು ಲ್ಯಾಂಡಿಂಗ್ ಮಾಡಿತ್ತು. ವಿಮಾನಕ್ಕೆ ತೀವ್ರ ಹಾನಿಯಾಗಿದ್ದರೂ ಪೈಲಟ್ ಸುರಕ್ಷಿತವಾಗಿದ್ದರು.

ವಿಮಾನದಲ್ಲಿದ್ದ ರೊಟಾಕ್ಸ್ 912 S2ಇಂಜಿನ್‌ಗೆ ಶೇ.10ರವರೆಗಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಗೆ ಮಾತ್ರ ಅನುಮತಿ ಇತ್ತು. ಆದರೆ, ವಿಮಾನದಲ್ಲಿ ಬಳಸಿದ್ದ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ್(IOCL) MoGAS 95 ಪೆಟ್ರೋಲ್‌ನಲ್ಲಿ ಶೇ.12ರಷ್ಟು ಎಥೆನಾಲ್ ಇತ್ತು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA)ತನಿಖಾ ವರದಿ ತಿಳಿಸಿದೆ.

ಎಥೆನಾಲ್ ಪ್ರಮಾಣ ಅನುಮೋದಿತ ಮಿತಿಯನ್ನು ಮೀರಿತ್ತು. ಜೊತೆಗೆ ಇಂಜಿನ್ ಅಳವಡಿಸುವಾಗ ತೈಲ ವ್ಯವಸ್ಥೆಯಲ್ಲಿನ ಗಾಳಿಯನ್ನು ಸರಿಯಾಗಿ ಹೊರಹಾಕದಿರುವುದೇ ವೈಫಲ್ಯಕ್ಕೆ ಪ್ರಮುಖ ಕಾರಣ ಎಂದು ತನಿಖೆ ಗುರುತಿಸಿದೆ.

ನಾಲ್ಕನೇ ಹಾರಾಟದಲ್ಲಿ ಇಂಜಿನ್ ವೈಫಲ್ಯ: ಘಟನೆಯ ದಿನವಾದ 2023ರ ಮೇ 30ರಂದು ಬೆಳಗ್ಗೆ 9:16ರ ವೇಳೆಗೆ ಬೆಳಗಾವಿ ವಿಮಾನ ನಿಲ್ದಾಣದ ಸಮೀಪ ಈ ಘಟನೆ ಸಂಭವಿಸಿತ್ತು. ಅಂದು ವಿಮಾನದಲ್ಲಿ ಬೇರೆ ವಿದ್ಯಾರ್ಥಿ ಪೈಲಟ್‌ಗಳು ಬೋಧಕರೊಂದಿಗೆ ಎರಡು ಹಾರಾಟ ನಡೆಸಿದ್ದರು. ಯಾವುದೇ ದೋಷ ವರದಿಯಾಗಿರಲಿಲ್ಲ. ನಂತರ 24 ವರ್ಷದ ವಿದ್ಯಾರ್ಥಿ ಪೈಲಟ್ ಏಕಾಂಗಿಯಾಗಿ ಹಾರಾಟ ನಡೆಸಿದ್ದರು. ಮೊದಲ ಮೂರು ಸರ್ಕ್ಯೂಟ್‌ಗಳನ್ನು ಪೂರ್ಣಗೊಳಿಸಿದ ಬಳಿಕ ನಾಲ್ಕನೇ ಬಾರಿ ಟೇಕ್‌ಆಫ್ ಆಗಿ ಏರು ಹಾರಾಟ ನಡೆಸುತ್ತಿದ್ದಾಗ ಇಂಜಿನ್‌ನಲ್ಲಿ ಕಂಪನ ಕಾಣಿಸಿಕೊಂಡಿತ್ತು. ಸುಟ್ಟ ವಾಸನೆ ಬಂದಿದ್ದು, RPMಏರಿಳಿತವಾಗತೊಡಗಿತ್ತು. ವಿಮಾನ ಟೇಕ್ ಆಫ್ ಆಗಲು ಅಗತ್ಯವಾದಷ್ಟು ಶಕ್ತಿ ದೊರೆಯದೆ ಕೆಳಕ್ಕೆ ಇಳಿಯತೊಡಗಿತ್ತು.

ಪೈಲಟ್ ಇಂಜಿನ್ ವೈಫಲ್ಯದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಕೈಗೊಂಡರೂ, ಎತ್ತರ ಕಡಿಮೆಯಾಗುತ್ತಿದ್ದುದರಿಂದ ಸಮೀಪದ ತೆರೆದ ಮೈದಾನದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ್ದರು. ವಿಮಾನ ನೆಲಕ್ಕೆ ಅಪ್ಪಳಿಸಿ ಎಡಭಾಗಕ್ಕೆ ವಾಲಿ ನಿಂತಿತ್ತು. ವಿಮಾನಕ್ಕೆ ಗಣನೀಯ ಹಾನಿಯಾಗಿದ್ದರೂ ಪೈಲಟ್‌ಗೆ ಗಾಯವಾಗಿರಲಿಲ್ಲ.ಘಟನೆಯ ಸ್ಥಳವು ರನ್ ವೇ 08ರ ಅಂತ್ಯದಿಂದ ಸುಮಾರು ಐದು ಕಿ.ಮೀ. ದೂರದಲ್ಲಿತ್ತು.

ಪೆಟ್ರೋಲ್‌ನಲ್ಲಿ ಶೇ.12ರಷ್ಟು ಎಥೆನಾಲ್: ವಿಮಾನದಲ್ಲಿ ಬಳಸಿದ್ದ MoGAS 95, MS-XP95-BSVI-E12ಮಾದರಿಯ ಪೆಟ್ರೋಲ್ನಲ್ಲಿ ಶೇ.12ರಷ್ಟು ಎಥೆನಾಲ್ ಮಿಶ್ರಣವಾಗಿತ್ತು. ರೊಟಾಕ್ಸ್‌ನ 30 ಸೆಪ್ಟೆಂಬರ್ 2021ರ ಸೂಚನೆ ಪ್ರಕಾರ, ಭಾರತದಲ್ಲಿ ಶೇ.10ರವರೆಗಿನ ಎಥೆನಾಲ್ ಮಿಶ್ರಿತ ಇಂಧನ (E10) ಬಳಕೆಗೆ ಮಾತ್ರ ಅನುಮತಿ ಇತ್ತು. ಶೇ.10ಕ್ಕಿಂತ ಹೆಚ್ಚಿನ ಎಥೆನಾಲ್ ಹೊಂದಿರುವ ಪೆಟ್ರೋಲ್ಅನ್ನು ಪರೀಕ್ಷಿಸಿಲ್ಲ ಹಾಗೂ ಅದರ ಬಳಕೆಗೆ ಅನುಮತಿ ನೀಡಿಲ್ಲ ಎಂದು ಇಂಜಿನ್ ತಯಾರಕ BRP- ರೊಟಾಕ್ಸ್ ತಿಳಿಸಿತ್ತು.

ಘಟನೆಯ ಬಳಿಕ ಸಂಗ್ರಹಿಸಿದ ಇಂಧನದ ಮಾದರಿಯನ್ನು DGCA ಹೊಸದಿಲ್ಲಿಯ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿತ್ತು. ಮಾದರಿಯು ಪರಿಶೀಲಿಸಲಾದ ಗುಣಮಟ್ಟದ ಮಾನದಂಡಗಳನ್ನು ಪೂರೈಸಿದ್ದರೂ, ಅದರಲ್ಲಿ ಶೇ.12ರಷ್ಟು ಎಥೆನಾಲ್ ಇರುವುದು ದೃಢಪಟ್ಟಿತ್ತು.

ಹೆಚ್ಚಿನ ಎಥೆನಾಲ್ ಅಂಶದಿಂದ ಇಂಧನದಲ್ಲಿನ ಆಲ್ಕೋಹಾಲ್ ಮತ್ತು ನೀರು ಬೇರ್ಪಡುವುದು, ನೀರಿನ ಅಂಶ ಹೆಚ್ಚಳ, ಆವಿಯಿಂದ ಇಂಧನ ಪೂರೈಕೆಗೆ ತಡೆ, ಐಸಿಂಗ್ ಹಾಗೂ ಇಂಜಿನ್‌ನ ಕೆಲವು ಭಾಗಗಳ ವಸ್ತುಗಳೊಂದಿಗೆ ಹೊಂದಾಣಿಕೆಯ ಸಮಸ್ಯೆಗಳು ಉಂಟಾಗಬಹುದು ಎಂದು ರೊಟಾಕ್ಸ್ ಎಚ್ಚರಿಸಿತ್ತು.

ತರಬೇತಿ ಸಂಸ್ಥೆಯಲ್ಲೂ ಲೋಪಗಳು: ರೆಡ್ ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡಮಿ DGCA ಅನುಮೋದನೆ ಹೊಂದಿದ್ದು, ಬಾರಾಮತಿ ಮುಖ್ಯ ನೆಲೆಯೊಂದಿಗೆ ಲಿಲಾಬಾಡಿ, ಸಿಯೋನಿ, ಕಲಬುರಗಿ ಮತ್ತು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಸೆಸ್ನಾ 172, ಟೆಕ್ನಾಮ್ P2006T, ಟೆಕ್ನಾಮ್ P2008 ಮತ್ತು P-Mentor ಮಾದರಿಯ ಒಟ್ಟು 30 ವಿಮಾನಗಳು ಸಂಸ್ಥೆಯ ಬಳಿಯಿದ್ದವು.

ಘಟನೆಯ ಬಳಿಕ 2023ರ ಆಗಸ್ಟ್ 31ರಂದು DGCA ಅಧಿಕಾರಿಗಳು ಬೆಳಗಾವಿ ನೆಲೆಯನ್ನು ಪರಿಶೀಲಿಸಿದಾಗ ಹಲವು ಲೋಪಗಳು ಪತ್ತೆಯಾಗಿದ್ದವು. ಮೇ 26ರಂದು ನಡೆಸಿದ್ದ 100 ಗಂಟೆಗಳ ನಿರ್ವಹಣಾ ಪರಿಶೀಲನೆಯ ದಾಖಲೆ ಅಪೂರ್ಣವಾಗಿತ್ತು. ಪರಿಶೀಲನೆ ನಡೆಸಿದ ತಂತ್ರಜ್ಞರಿಗೆ ವಿಮಾನದ ಮಾದರಿಯ ಕುರಿತು ತರಬೇತಿ ನೀಡಿರಲಿಲ್ಲ. ಬಳಕೆಗೆ ಯೋಗ್ಯವೆಂದು ದಾಖಲಿಸಿದ್ದ 12 ಸ್ಪಾರ್ಕ್ ಪ್ಲಗ್‌ಗಳಲ್ಲಿ 8 ಬಳಸಿದವುಗಳಾಗಿದ್ದವು. ಕೂಲಂಟ್‌ಗೆ ಬೆರೆಸಬೇಕಾದ ಡಿಸ್ಟಿಲ್ಡ್ ವಾಟರ್ ಇರಲಿಲ್ಲ. ಇಂಜಿನ್‌ನ ಕೂಲಂಟ್‌ಗೆ ಶೇ.50ರಷ್ಟು ಡಿಸ್ಟಿಲ್ಡ್ ವಾಟರ್ ಬೆರೆಸಬೇಕಿತ್ತು. ಇಂಧನದಲ್ಲಿನ ನೀರನ್ನು ಪತ್ತೆಹಚ್ಚುವ ಅಕ್ವಾಡಿಸ್ ಪೇಸ್ಟ್ ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ.

ಮೂರು ವಿಮಾನಗಳ ನಿರ್ವಹಣೆ, ದಾಸ್ತಾನು ಮತ್ತು ಯೋಜನೆಯ ಮೇಲ್ವಿಚಾರಣೆಗೆ ಒಬ್ಬರೇ ವಿಮಾನ ನಿರ್ವಹಣಾ ಇಂಜಿನಿಯರ್ ಇದ್ದರು. ನಿರ್ವಹಣಾ ಸಿಬ್ಬಂದಿಯ ಕರ್ತವ್ಯ ಸಮಯದ ಮಿತಿಯನ್ನೂ ಪಾಲಿಸಲಾಗುತ್ತಿರಲಿಲ್ಲ ಎಂದು ವರದಿ ತಿಳಿಸಿದೆ.

ಪೈಲಟ್ ಮತ್ತು ಬೋಧಕರ ವಿವರ: ವಿದ್ಯಾರ್ಥಿ ಪೈಲಟ್‌ಗೆ ಒಟ್ಟು 30 ಗಂಟೆ 30 ನಿಮಿಷಗಳ ಹಾರಾಟದ ಅನುಭವವಿತ್ತು. ಇದರಲ್ಲಿ ಬೋಧಕರೊಂದಿಗೆ 27 ಗಂಟೆ 40 ನಿಮಿಷ ಮತ್ತು ಏಕಾಂಗಿಯಾಗಿ 2 ಗಂಟೆ 50 ನಿಮಿಷ ಹಾರಾಟ ನಡೆಸಿದ್ದರು. ಅವರ ಪರವಾನಿಗೆ ಮತ್ತು ವೈದ್ಯಕೀಯ ಅರ್ಹತೆ ಮಾನ್ಯವಾಗಿದ್ದವು. ಬೋಧಕರೊಂದಿಗೆ ನಾಲ್ಕು ಏಕಾಂಗಿ ಹಾರಾಟದ ಪರಿಶೀಲನೆಗಳು ಹಾಗೂ ನಾಲ್ಕು ಏಕಾಂಗಿ ಹಾರಾಟಗಳನ್ನು ಪೂರ್ಣಗೊಳಿಸಿದ್ದರು. ಘಟನೆಯ ದಿನದ ಹಾರಾಟಗಳು ಅವರ ಮೊದಲ ಸ್ವತಂತ್ರ ಏಕಾಂಗಿ ಹಾರಾಟಗಳಾಗಿದ್ದವು.

ಹಿಂದಿನ ಹಾರಾಟದ ಬೋಧಕರ ಪ್ರಕಾರ, ವಿದ್ಯಾರ್ಥಿಯ ಕಾರ್ಯಕ್ಷಮತೆ ತೃಪ್ತಿಕರವಾಗಿದ್ದರಿಂದ ಏಕಾಂಗಿ ಹಾರಾಟಕ್ಕೆ ಅನುಮತಿ ನೀಡಲಾಗಿತ್ತು. ಬೋಧಕರು ವಿಮಾನದಿಂದ ಇಳಿದ ಬಳಿಕವೂ ಇಂಜಿನ್ ಸ್ಥಗಿತಗೊಳಿಸಿರಲಿಲ್ಲ. ವಿದ್ಯಾರ್ಥಿ ಸುಮಾರು 15 ನಿಮಿಷಗಳ ಕಾಲ ಏಕಾಂಗಿಯಾಗಿ ಹಾರಾಟ ಮುಂದುವರಿಸಿದ್ದರು.

ಘಟನೆಯ ಬಳಿಕ ಪರಿಶೀಲಿಸಿದಾಗ ಚೋಕ್ on ಸ್ಥಿತಿಯಲ್ಲಿತ್ತು. ಆದರೆ, ಇಂಜಿನ್ ಆರಂಭಿಸುವ ಪರಿಶೀಲನಾ ಪಟ್ಟಿಯ ಪ್ರಕಾರ ಅದು off ಆಗಿರಬೇಕಿತ್ತು. ಇಂಧನ ಆಯ್ಕೆ ವಾಲ್ವ್ ಕೂಡ ವಿಮಾನ ನಿಲ್ಲಿಸುವ ಪ್ರಕ್ರಿಯೆಯ ಪ್ರಕಾರ off ಆಗಿರಬೇಕಿದ್ದರೂ ಬಲಭಾಗದ ಸ್ಥಾನದಲ್ಲಿತ್ತು.

ಭಾರತೀಯ ನೋಂದಣಿ ಹೊಂದಿರುವ ವಿಮಾನಗಳಲ್ಲಿ ಭಾರತೀಯ MoGASಇಂಧನ ಬಳಸದಂತೆ DGCA 2024ರ ಫೆಬ್ರವರಿ 12ರಂದು ಸೂಚಿಸಿತ್ತು. ಈ ಹಿಂದೆ ಭಾರತೀಯ MoGAS ಬಳಸಿದ್ದ ವಿಮಾನಗಳನ್ನು ಮತ್ತೆ ಹಾರಾಟಕ್ಕೆ ನಿಯೋಜಿಸುವ ಮೊದಲು ಅವುಗಳ ರೊಟಾಕ್ಸ್ 912 ಇಂಜಿನ್‌ಗಳನ್ನು ಓವರ್ ಹಾಲ್ ಮಾಡಿಸಬೇಕು ಎಂದೂ ತಿಳಿಸಿತ್ತು.

ರೆಡ್ ಬರ್ಡ್ ಸಂಸ್ಥೆಯ ಎಲ್ಲ ನೆಲೆಗಳಲ್ಲಿ ವಿಮಾನ ನಿರ್ವಹಣೆ ಮತ್ತು ಬಿಡಿಭಾಗಗಳ ದಾಸ್ತಾನು ವ್ಯವಸ್ಥೆಯ ವಿಶೇಷ ಪರಿಶೀಲನೆ ನಡೆಸಬೇಕು. ತೈಲ ವ್ಯವಸ್ಥೆಯಲ್ಲಿನ ಗಾಳಿಯನ್ನು ಸರಿಯಾಗಿ ಹೊರಹಾಕುವ ಕುರಿತು ಸುತ್ತೋಲೆ ಹೊರಡಿಸಬೇಕು. ಬೆಳಗಾವಿ ನೆಲೆಯಲ್ಲಿ ಸಾಕಷ್ಟು ನಿರ್ವಹಣಾ ಸಿಬ್ಬಂದಿಯನ್ನು ನೇಮಿಸಿ, ಕರ್ತವ್ಯ ಸಮಯದ ಮಿತಿಯನ್ನು ಪಾಲಿಸಬೇಕು ಎಂದು ತನಿಖಾ ವರದಿ ಶಿಫಾರಸು ಮಾಡಿದೆ.

ತೈಲ ವ್ಯವಸ್ಥೆಯ ನಿರ್ವಹಣೆಯಲ್ಲಿ ಲೋಪ

ವಿಮಾನದಲ್ಲಿದ್ದ ಇಂಜಿನ್ ಅನ್ನು 2023ರ ಎಪ್ರಿಲ್ 30ರಂದು ಅಳವಡಿಸಲಾಗಿತ್ತು. ಘಟನೆಯ ವೇಳೆಗೆ ಅದು 126 ಗಂಟೆ 40 ನಿಮಿಷ ಕಾರ್ಯನಿರ್ವಹಿಸಿತ್ತು. ಇಂಜಿನ್ ಪರಿಶೀಲಿಸಿದಾಗ ಇಂಜಿನ್‌ನ ಎರಡನೇ ಸಿಲಿಂಡರ್‌ನಲ್ಲಿದ್ದ ವಾಲ್ವ್ ಅನ್ನು ಅದರ ಜಾಗದಲ್ಲಿ ಹಿಡಿದಿಡುವ ಭಾಗ ಮುರಿದಿತ್ತು. ಇದರಿಂದ ವಾಲ್ವ್ ಸಿಲಿಂಡರ್‌ನ ಒಳಗೆ ಬಿದ್ದು, ಪಿಸ್ಟನ್‌ಗೆ ಅಪ್ಪಳಿಸಿತ್ತು. ಅದರಿಂದ ಹಾನಿ ಉಂಟುಮಾಡಿತ್ತು.

ಇಂಜಿನ್ ಅಳವಡಿಸುವಾಗ ತೈಲ ವ್ಯವಸ್ಥೆಯಲ್ಲಿನ ಗಾಳಿಯನ್ನು ಸರಿಯಾಗಿ ಹೊರಹಾಕಿರಲಿಲ್ಲ. ಇದರಿಂದ ವಾಲ್ವ್ ವ್ಯವಸ್ಥೆಯಲ್ಲಿ ನಿರಂತರ ಅಪ್ಪಳಿಸುವಿಕೆ ಉಂಟಾಗಿ ರಿಟೇನರ್ ಮೇಲೆ ಒತ್ತಡ ಹೆಚ್ಚಿತ್ತು. ಅದರ ತಡೆದುಕೊಳ್ಳುವ ಮಿತಿ ಮೀರಿದಾಗ ಅದು ಮುರಿದಿತ್ತು ಎಂದು ರೊಟಾಕ್ಸ್ ಮತ್ತು CFS ಏರೊ ನಡೆಸಿದ ಪರಿಶೀಲನೆ ತಿಳಿಸಿದೆ.

ಸ್ಪಾರ್ಕ್ ಪ್ಲಗ್ ಗಳು ಮತ್ತು ವಾಲ್ವ್ ಹೆಡ್ ಗಳ ಮೇಲೆ ಎಣ್ಣೆಯುಕ್ತ ಕಪ್ಪುಅವಶೇಷ ಹಾಗೂ ಇಂಗಾಲದ ಪದರ ಕಂಡುಬಂದಿತ್ತು. ಚೋಕ್ ದೀರ್ಘಕಾಲ ಔಓ ಸ್ಥಿತಿಯಲ್ಲಿದ್ದುದರಿಂದ ಇಂಧನ-ಗಾಳಿ ಮಿಶ್ರಣ ಸರಿಯಾಗಿ ದಹನವಾಗದೆ ಈ ಸ್ಥಿತಿ ಉಂಟಾಗಿರಬಹುದು ಎಂದು ವರದಿ ಹೇಳಿದೆ.

share
ಇರ್ಷಾದ್ ಎಂ. ವೇಣೂರು
ಇರ್ಷಾದ್ ಎಂ. ವೇಣೂರು
Next Story
X