Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಆಧ್ಯಾತ್ಮಿಕ ಘನತೆಯನ್ನು ಕಳೆದುಕೊಂಡು...

ಆಧ್ಯಾತ್ಮಿಕ ಘನತೆಯನ್ನು ಕಳೆದುಕೊಂಡು ಧರ್ಮೋನ್ಮಾದದ ಕಾರಣಕ್ಕೆ ಸದ್ದು ಮಾಡುತ್ತಿರುವ ಉತ್ತರಾಖಂಡ

ಎ.ಎನ್. ಯಾದವ್ಎ.ಎನ್. ಯಾದವ್28 Feb 2026 1:28 PM IST
share
ಆಧ್ಯಾತ್ಮಿಕ ಘನತೆಯನ್ನು ಕಳೆದುಕೊಂಡು ಧರ್ಮೋನ್ಮಾದದ ಕಾರಣಕ್ಕೆ ಸದ್ದು ಮಾಡುತ್ತಿರುವ ಉತ್ತರಾಖಂಡ

ಪ್ರತೀ ವರ್ಷ ಚಳಿಗಾಲದಲ್ಲಿ ಒಣ ಹಣ್ಣುಗಳು ಅಥವಾ ಕಾಶ್ಮೀರಿ ಶಾಲುಗಳನ್ನು ಮಾರಾಟ ಮಾಡಲು ಉತ್ತರಾಖಂಡಕ್ಕೆ ಬರುವ ನೂರಾರು ಕಾಶ್ಮೀರಿಗಳಲ್ಲಿ ತಾಬಿಶ್ ಮತ್ತು ದಾನಿಶ್ ಸಹೋದರರೂ ಇದ್ದರು. ಈಗ ಇಬ್ಬರೂ ಉತ್ತರಾಖಂಡದ ರಸ್ತೆಗಳಲ್ಲಿ ನಡೆಯಲು ಸಹ ಭಯಪಡುತ್ತಿದ್ದಾರೆ. ಅವರ ದೇಹದ ಮೇಲಿನ ಗಾಯಗಳು ವಾಸಿಯಾಗಿದ್ದರೂ, ಮನಸ್ಸಿಗಾದ ಗಾಯಗಳು ಎಂದಿಗೂ ಮಾಯದಿರಬಹುದು.

ಒಂದು ಕಾಲದಲ್ಲಿ ಶಾಂತಿಯುತ ದೇವಭೂಮಿ ಎಂದು ಕರೆಸಿಕೊಂಡಿದ್ದ ಉತ್ತರಾಖಂಡ ಈಗ ಕೋಮು ಘರ್ಷಣೆ, ಮುಸ್ಲಿಮರ ವಿರುದ್ಧದ ದ್ವೇಷದ ಉಲ್ಬಣಕ್ಕೆ ಸಾಕ್ಷಿಯಾಗುತ್ತಿದೆ.

ಅಲ್ಲಿ ಕಾಶ್ಮೀರಿ ಶಾಲು ಮಾರಾಟಗಾರರನ್ನು ಥಳಿಸಲಾಗುತ್ತಿದೆ. ಮುಸ್ಲಿಮರ ಅಂಗಡಿಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಮುಸ್ಲಿಮರನ್ನು ಮಾರುಕಟ್ಟೆಯಿಂದ ಹೊರಹಾಕಲು ಸಭೆಗಳು ನಡೆಯುತ್ತಿವೆ. ಮುಸ್ಲಿಮ್ ಹಿರಿಯರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಅವರ ಅಂಗಡಿಗಳ ಹೆಸರುಗಳನ್ನು ಬದಲಾಯಿಸಲು ಹೇಳಲಾಗುತ್ತಿದೆ.

ಉತ್ತರಾಖಂಡದಲ್ಲಿ ಏನು ನಡೆಯುತ್ತಿದೆ?

ಪತ್ರಕರ್ತ ಸೌರಭ್ ಶುಕ್ಲಾ ಉತ್ತರಾಖಂಡದ ಕಣಿವೆಗಳಲ್ಲಿ ಪ್ರಯಾಣಿಸಿ ಒಂದು ಗೊಂದಲಮಯ ಬದಲಾವಣೆಯನ್ನು ದಾಖಲಿಸಿದ್ದಾರೆ. ತಾಬಿಶ್ ಮತ್ತು ದಾನಿಶ್ ಎಂಬ ಯುವಕರು ಶಾಲುಗಳನ್ನು ಮಾರಾಟ ಮಾಡಲು ಬಂದಿದ್ದ ಬಗ್ಗೆ ಸೌರಭ್ ಹೇಳುತ್ತಾರೆ. 17 ವರ್ಷದ ತಾಬಿಶ್ ಡೆಹ್ರಾಡೂನ್ ಬಗ್ಗೆ ಹೇಳಿದರೇ ನಡುಗುತ್ತಾನೆ.

ಜನವರಿ 28ರಂದು, ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ನಲ್ಲಿ ಇಬ್ಬರು ಕಾಶ್ಮೀರಿ ಸಹೋದರರಾದ ತಾಬಿಶ್ ಮತ್ತು ದಾನಿಶ್ ಅವರನ್ನು ಥಳಿಸಲಾಯಿತು.

ಮೊದಲು ಅವರ ಧರ್ಮದ ಬಗ್ಗೆ ಕೇಳಲಾಯಿತು, ಅವರ ಆಧಾರ್ ಕಾರ್ಡ್ಗಳನ್ನು ಪರಿಶೀಲಿಸಲಾಯಿತು. ನಂತರ ಅವರನ್ನು ರಕ್ತ ಬರುವವರೆಗೆ ಹೊಡೆಯಲಾಯಿತು. ಅವರ ಏಕೈಕ ತಪ್ಪು ಎಂದರೆ ಅವರು ಇಬ್ಬರೂ ಕಾಶ್ಮೀರಿಗಳು ಮತ್ತು ಭಾರತೀಯ ಮುಸ್ಲಿಮರು.

ಪ್ರತೀ ವರ್ಷ ಚಳಿಗಾಲದಲ್ಲಿ ಒಣ ಹಣ್ಣುಗಳು ಅಥವಾ ಕಾಶ್ಮೀರಿ ಶಾಲುಗಳನ್ನು ಮಾರಾಟ ಮಾಡಲು ಉತ್ತರಾಖಂಡಕ್ಕೆ ಬರುವ ನೂರಾರು ಕಾಶ್ಮೀರಿಗಳಲ್ಲಿ ಅವರೂ ಇದ್ದರು. ಇಬ್ಬರೂ ಸಹೋದರರು ಉತ್ತರಾಖಂಡದ ರಸ್ತೆಗಳಲ್ಲಿ ನಡೆಯಲು ಸಹ ಈಗ ಭಯಪಡುತ್ತಿದ್ದಾರೆ. ಅವರ ದೇಹದ ಮೇಲಿನ ಗಾಯಗಳು ವಾಸಿಯಾಗಿದ್ದರೂ, ಮನಸ್ಸಿಗಾದ ಗಾಯಗಳು ಎಂದಿಗೂ ಮಾಯದಿರಬಹುದು.

ಅವರು ತಮ್ಮದೇ ಭಾಷೆಯಲ್ಲಿ ಮಾತಾಡುತ್ತಿದ್ದಾಗ, ಅವರನ್ನು ತಡೆಯಲಾಯಿತು. ಇದು ಉತ್ತರಾಖಂಡ, ಇದು ಕಾಶ್ಮೀರವಲ್ಲ. ಕಾಶ್ಮೀರಿ ಇಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಲಾಯಿತು. ಆ ಮೇಲೆ ಧರ್ಮದ ಬಗ್ಗೆ ಕೇಳಿ, ಇಬ್ಬರನ್ನೂ ರಾಡ್ನಿಂದ ಥಳಿಸಲಾಯಿತು.

‘‘ಪಹಲ್ಗಾಂವ್ನಲ್ಲಿ ನೀವು ನಮ್ಮ ಹಿಂದೂಗಳನ್ನು ಕೊಂದಿದ್ದೀರಿ, ನಾವು ಇಲ್ಲಿ ಮುಸ್ಲಿಮರನ್ನು ಕೊಲ್ಲುತ್ತೇವೆ’’ ಎಂದು ಹೇಳಲು ಪ್ರಾರಂಭಿಸಿದ್ದರು. ಆ ಸಮಯದಲ್ಲಿ ಯಾರೂ ತಮಗೆ ಸಹಾಯ ಮಾಡಲಿಲ್ಲ ಎಂದು ಆ ಸಹೋದರರು ಸಂಕಟದಿಂದ ನೆನಪಿಸಿಕೊಳ್ಳುತ್ತಾರೆ.

ಹಲ್ಲೆಗೊಳಗಾಗಿ ಪ್ರಜ್ಞಾಹೀನ ಸ್ಥಿತಿ ಮುಟ್ಟಿದಾಗ, ಕಡೆಗೆ ಅಲ್ಲಿನ ಜನರೇ ಆಸ್ಪತ್ರೆಗೆ ಕರೆದೊಯ್ದು ಉಳಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಉತ್ತರಾಖಂಡದಲ್ಲಿ ಕಾಶ್ಮೀರಿಗಳ ವಿರುದ್ಧ ನಡೆದ ಹಿಂಸಾಚಾರ ಪ್ರಕರಣ ಇದೊಂದೇ ಅಲ್ಲ. ಡಿಸೆಂಬರ್ 24ರಂದು, ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ, ಹಿಂದೂ ಸಂಘಟನೆಯ ಜನ ಕಾಶ್ಮೀರಿ ಶಾಲು ಮಾರಾಟಗಾರ ಅಹ್ಮದ್ ಘನಿಯನ್ನು ಅಪಹರಿಸಿ ಥಳಿಸಿ, ಧಾರ್ಮಿಕ ಘೋಷಣೆ ಕೂಗಲು ಒತ್ತಾಯಿಸಿದರು.

ಪೊಲೀಸರು ಎರಡೂ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಿದರಾದರೂ, ಆರೋಪಿಗಳನ್ನು ಒಂದೆರಡು ದಿನಗಳಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಯಿತು.

ಉತ್ತರಾಖಂಡ ಸರಕಾರ ತಮಗೆ ನ್ಯಾಯ ನೀಡಿಲ್ಲ ಎಂದು ಆ ಯುವಕರು ಹೇಳುತ್ತಾರೆ. ಇಂಥ ಪ್ರಕರಣಗಳಲ್ಲಿ, ಆರೋಪಿಗಳ ಮೇಲೆ ಲಘು ಆರೋಪಗಳನ್ನು ಹೊರಿಸಿ ನಂತರ ಬಿಡುಗಡೆ ಮಾಡಲಾಗುತ್ತಿದೆ. ಪೊಲೀಸರು ನಿರ್ದಿಷ್ಟ ರಾಜಕೀಯ ಅಜೆಂಡಾದ ಪರ ಕೆಲಸ ಮಾಡುತ್ತಿರುವಂತೆ ತೋರುತ್ತಿದೆ.

ಉತ್ತರಾಖಂಡದಲ್ಲಿ ಬಜರಂಗದಳದ ದೌರ್ಜನ್ಯ ಕಾಶ್ಮೀರಿಗಳ ವಿರುದ್ಧ ಮಾತ್ರವಲ್ಲದೆ ಉತ್ತರಾಖಂಡದ ಮುಸ್ಲಿಮರ ವಿರುದ್ಧವೂ ನಡೆದಿದೆ.

ಜನವರಿ 26ರಂದು ಕೋಟ್ದ್ವಾರದಲ್ಲಿ, ಕಳೆದ 30 ವರ್ಷಗಳಿಂದ ಬಾಬಾ ಗಾರ್ಮೆಂಟ್ಸ್ ಎಂಬ ಬಟ್ಟೆ ಅಂಗಡಿ ನಡೆಸುತ್ತಿರುವ ಮುಸ್ಲಿಮ್ ವ್ಯಾಪಾರಿಯನ್ನು ಟಾರ್ಗೆಟ್ ಮಾಡಲಾಯಿತು.

ಬಾಬಾ ಎಂಬ ಪದ ತೆಗೆದು ಹೆಸರನ್ನು ಬದಲಿಸಲು ಒತ್ತಾಯಿಸಲಾಯಿತು.

ಆಗ ಜಿಮ್ ಟ್ರೈನರ್ ದೀಪಕ್ ಕುಮಾರ್ ಮತ್ತು ಅವರ ಸ್ನೇಹಿತ ವಿಜಯ್ ರಾವತ್ ಮುಸ್ಲಿಮ್ ವ್ಯಾಪಾರಿಯ ಪರ ನಿಂತರು. ಬಜರಂಗದಳದ ಕಾರ್ಯಕರ್ತರನ್ನು ಎದುರಿಸಿದರು.

ದೀಪಕ್ ಕುಮಾರ್, ‘‘ನನ್ನ ಹೆಸರು ಮುಹಮ್ಮದ್ ದೀಪಕ್ ಬಜರಂಗದಳದ ಜನರು ಇಲ್ಲಿ ದ್ವೇಷ ಹರಡಲು ನಾನು ಬಿಡುವುದಿಲ್ಲ’’ ಎಂದರು.

ಕಡೆಗೆ ಆ ಜನ ದೀಪಕ್ ಅವರ ಜಿಮ್ ಮೇಲೆ ದಾಳಿ ಮಾಡಿದರು.

ಬಜರಂಗದಳದ ಹಿಂಸಾತ್ಮಕ ಪ್ರತಿಭಟನೆ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತಿದೆ. ದೀಪಕ್ ಅವರನ್ನು ನಿಂದಿಸಲಾಯಿತು ಮತ್ತು ಪೊಲೀಸರೆದುರೇ ಕೊಲೆ ಬೆದರಿಕೆ ಹಾಕಲಾಯಿತು. ಕಡೆಗೆ ಪೊಲೀಸರು ದೀಪಕ್ ವಿರುದ್ಧವೇ ಶಾಂತಿ ಭಂಗದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದರು.

ಬಜರಂಗದಳದ ವಿರುದ್ಧ ಪ್ರಕರಣ ದಾಖಲಿಸಿದ್ದರೂ, ಯಾರನ್ನೂ ಹೆಸರಿಸಲಿಲ್ಲ. ಅಂದರೆ, ಅಷ್ಟರ ಮಟ್ಟಿಗೆ ಗಲಭೆಕೋರರ ಬಗ್ಗೆ ಪೊಲೀಸರು ಕುರುಡಾಗಿದ್ದರು.

ಅಲ್ಲಿ ದೀಪಕ್ ಅವರನ್ನು ಪತ್ರಕರ್ತರು ಮಾತನಾಡಿಸುವುದನ್ನೂ ತಡೆಯಲಾಗುತ್ತಿದೆ. ಸೌರಭ್ ಪೊಲೀಸರ ಕಣ್ಣು ತಪ್ಪಿಸಿ, ಕಿ.ಮೀ. ಗಟ್ಟಲೆ ನಡೆದು ದೀಪಕ್ ಜಿಮ್ ತಲುಪಿದ ಬಗ್ಗೆ ಹೇಳಿಕೊಂಡಿದ್ದಾರೆ.

ಜಿಮ್ ಬಳಿಯೂ ಪೊಲೀಸರು ಮತ್ತೆ ಅವರನ್ನು ತಡೆದರು. ದೀಪಕ್ ತನ್ನ ತಾಯಿಯನ್ನು ಅವರೆಲ್ಲ ನಿಂದಿಸುತ್ತಿದ್ದಾಗಲೂ ಪೊಲೀಸರು ಏನೂ ಮಾಡದೆ ನಿಂತಿದ್ದರು ಎಂಬುದನ್ನು ನೆನೆದೇ ಕಣ್ಣೀರಾಗುತ್ತಾರೆ.

ನನಗೆ ಅವರ ಬಗ್ಗೆ ಸ್ವಲ್ಪವೂ ಭಯವಿಲ್ಲ. ಆದರೆ ನನ್ನ ತಾಯಿಯನ್ನು ಅವರು ನಿಂದಿಸುತ್ತಿದ್ಧಾಗ ನನ್ನ ಆತ್ಮ ನಡುಗಿಹೋಯಿತು ಎನ್ನುತ್ತಾರೆ.

ದೀಪಕ್ ಜಿಮ್ ಹೊರಗೆ ಗಲಾಟೆ ಮಾಡಿದ ಯಾರನ್ನೂ ಪೊಲೀಸರು ಎಫ್ಐಆರ್ನಲ್ಲಿ ಹೆಸರಿಸಿಲ್ಲ. ಅವರನ್ನು ವಿಚಾರಣೆಗೆ ಕರೆಯುವುದೂ ಇಲ್ಲ, ಬಂಧಿಸುವುದೂ ಇಲ್ಲ.

ಗಲಾಟೆ ಸೃಷ್ಟಿಸಿದ ಮತ್ತು ದೀಪಕ್ ಅವರ ಜಿಮ್ ಹೊರಗೆ ಬೆದರಿಕೆ ಹಾಕಿದ ಬಿಜೆಪಿ ಕೌನ್ಸಿಲರ್ ಸೌರಭ್ ನೌಟಿಯಲ್ ಅಂಥವರ ವಿರುದ್ಧ ಪೊಲೀಸರು ಏನೂ ಕ್ರಮ ಕೈಗೊಳ್ಳದೇ ಉಳಿದಿದ್ದಾರೆ.

ಘಟನೆ ನಡೆದು ಒಂದು ತಿಂಗಳು ಕಳೆದರೂ, ಈ ಪ್ರಕರಣದಲ್ಲಿ ಯಾವುದೇ ಬಜರಂಗದಳ ಕಾರ್ಯಕರ್ತರನ್ನು ಬಂಧಿಸಲಾಗಿಲ್ಲ ಅಥವಾ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಯಾವುದೇ ಕ್ರಮ ಕೈಗೊಳ್ಳದಿದ್ದಾಗ, ಹಿಂದೂ ಸಂಘಟನೆಗಳಿಗೆ ಅಂಥದ್ದನ್ನೇ ಮಾಡಲು ಇನ್ನೂ ಧೈರ್ಯ ಬರುತ್ತದೆ. ಮತ್ತೀಗ ಅಲ್ಲಿ ನಡೆಯುತ್ತಿರುವುದು ಕೂಡ ಅದೇ ಆಗಿದೆ.

ಉತ್ತರಾಖಂಡದಲ್ಲಿ ನಡೆಯುತ್ತಿರುವ ದ್ವೇಷ ಘಟನೆಗಳಿಗೆ ಸಂಬಂಧಿಸಿದಂತೆ, ಸಾಮಾಜಿಕ ಸಂಘಟನೆಯಾದ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಂPಅಖ) 2024ರಿಂದ 2026 ರವರೆಗಿನ ಘಟನೆಗಳನ್ನು ದಾಖಲಿಸಿದೆ.

ಈ ಅವಧಿಯಲ್ಲಿ ಉತ್ತರಾಖಂಡದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ಘಟನೆಗಳ ಬಗ್ಗೆ ಅದು ಮಾಹಿತಿ ಸಂಗ್ರಹಿಸಿದೆ.

ಪಹಲ್ಗಾಮ್ ದಾಳಿ ನಂತರ ಉತ್ತರಾಖಂಡದ ನೈನಿತಾಲ್ನಲ್ಲಿ ಮುಸ್ಲಿಮರ ಮೇಲೆ ನಡೆದ ಥಳಿತ ಮತ್ತು ಮಸೀದಿ ಧ್ವಂಸಕ್ಕಾಗಿ ಉತ್ತರಕಾಶಿಯಲ್ಲಿ ನಡೆದ ಹಿಂದೂ ಮಹಾಪಂಚಾಯತ್ಗಳು ಸೇರಿದಂತೆ ದ್ವೇಷ ಘಟನೆಗಳನ್ನು ದಾಖಲಿಸಲಾಗಿದೆ.

ಹರಿದ್ವಾರದ ಧರ್ಮ ಸಂಸದ್ ಅಥವಾ ಪುರೋಲಾದಲ್ಲಿ ಮುಸ್ಲಿಮ್ ಅಂಗಡಿಕಾರರನ್ನು ಓಡಿಸಿದಂಥ ದ್ವೇಷಪೂರ್ವಕ ಘಟನೆಗಳು ಉತ್ತರಾಖಂಡದಲ್ಲಿ ಬಹಳ ಸಮಯದಿಂದ ನಡೆಯುತ್ತಿವೆ.

ಉತ್ತರಕಾಶಿಯಲ್ಲಿ ಶತಮಾನಗಳಷ್ಟು ಹಳೆಯದಾದ ಮಸೀದಿಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಲವಂತವಾಗಿ ವಿವಾದ ಸೃಷ್ಟಿಸಲು ಪ್ರಯತ್ನಿಸಲಾಯಿತು. ಸುತ್ತಮುತ್ತಲಿನ ಎಲ್ಲಾ ಮುಸ್ಲಿಮ್ ವ್ಯಾಪಾರಿಗಳನ್ನು ಥಳಿಸಲಾಯಿತು ಮತ್ತು ಅವರ ಅಂಗಡಿಗಳನ್ನು ಧ್ವಂಸಗೊಳಿಸಲಾಯಿತು.

ಗೌಚರ್ನಲ್ಲಿ ಎಲ್ಲಾ ಮುಸ್ಲಿಮ್ ಕ್ಷೌರಿಕರನ್ನು ಓಡಿಸಲಾಯಿತು.

ಚಮೋಲಿಯ ನಂದನಗರ ಎಂಬ ಪಟ್ಟಣದಲ್ಲಿ ಮುಸ್ಲಿಮ್ ಅಂಗಡಿಕಾರನ ವಿರುದ್ಧ ‘ಲವ್ ಜಿಹಾದ್’ ಆರೋಪ ಹೊರಿಸಿ, ಎಲ್ಲಾ ಮುಸ್ಲಿಮ್ ಅಂಗಡಿಕಾರರನ್ನು ಓಡಿಸಲಾಯಿತು.

ನೈನಿತಾಲ್ನಲ್ಲಿ ಮುಸ್ಲಿಮ್ ವ್ಯಕ್ತಿಯ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಲಾಯಿತು.

ಒಬ್ಬ ಮುಸ್ಲಿಮ್ ವ್ಯಕ್ತಿಯ ಮೇಲೆ ಆರೋಪ ಹೊರಿಸಿ, ಆನಂತರ ಇಡೀ ಸಮುದಾಯವನ್ನು ಟಾರ್ಗೆಟ್ ಮಾಡಲಾಗುವ ಮಾದರಿಯನ್ನು ನೋಡುತ್ತಿದ್ದೇವೆ. ವಿವಿಧ ರೀತಿಯಲ್ಲಿ ಆರ್ಥಿಕ ಬಹಿಷ್ಕಾರ ಹಾಕುವುದು ನಡೆಯುತ್ತಿದೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಂತಿಮವಾಗಿ ಮುಸ್ಲಿಮರನ್ನು ಗುರಿ ಮಾಡುವುದನ್ನೇ ರಾಜಕೀಯ ಮಾಡಿಕೊಂಡಿದ್ದಾರೆ.

ಅವರು ಪ್ರತೀ ರ್ಯಾಲಿಯಲ್ಲಿಯೂ ‘ಭೂ ಜಿಹಾದ್, ಥೋಕ್ (ಉಗುಳು) ಜಿಹಾದ್, ಲವ್ ಜಿಹಾದ್’ ಮತ್ತು ಜನಸಂಖ್ಯಾ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆ.

2025ರಲ್ಲಿ ಅತಿ ಹೆಚ್ಚು ದ್ವೇಷ ಭಾಷಣ ಮಾಡಿದವರಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ದೇಶದ ಎಲ್ಲಾ ಮುಖ್ಯಮಂತ್ರಿಗಳಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಇಂಡಿಯಾ ಹೇಟ್ ಲ್ಯಾಬ್ನ ವರದಿಯ ಪ್ರಕಾರ, ಅವರು ವಿವಿಧ ವೇದಿಕೆಗಳಿಂದ ಮುಸ್ಲಿಮರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಈ ಡೇಟಾವನ್ನು ಸ್ಥಳೀಯ ಪೊಲೀಸರ ನಡೆಯೊಂದಿಗೆ ಹೋಲಿಸಿದರೆ, ಪೊಲೀಸರು ದ್ವೇಷ ಹರಡುವವರ ವಿರುದ್ಧ ಏಕೆ ಲಘು ವಿಭಾಗಗಳ ಅಡಿಯಲ್ಲಿ ಕೇಸ್ ಹಾಕಿ ಏನೂ ಆಗದಂತೆ ಮಾಡುತ್ತಾರೆ ಎನ್ನುವುದು ಅರ್ಥವಾಗುತ್ತದೆ.

ಅಂದರೆ, ದ್ವೇಷ ಹರಡುವ ಜನ ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ.

ಈ ಜನರಿಗೆ ಅಧಿಕಾರದ ಉನ್ನತ ಸ್ಥಾನದಲ್ಲಿರುವವರಿಂದಲೇ ರಕ್ಷಣೆ ಸಿಗುತ್ತಿರುವುದು ಮತ್ತು ಎಲ್ಲವೂ ಅವರ ರಾಜಕೀಯ ಅಜೆಂಡಾದ ಭಾಗವಾಗಿರುವುದು ಕಾಣಿಸುತ್ತದೆ.

ಕಳೆದ ನಾಲ್ಕು ವರ್ಷಗಳಿಂದ ಮುಸ್ಲಿಮರ ವಿರುದ್ಧದ ಹಿಂಸಾತ್ಮಕ ಘಟನೆಗಳಿಗೆ ಉತ್ತರಾಖಂಡ ಸುದ್ದಿಯಲ್ಲಿದೆ. ಪ್ರತೀ ತಿಂಗಳು ಒಂದಲ್ಲ ಒಂದು ಘಟನೆ ನಡೆಯುತ್ತದೆ.

ಪ್ರತೀ ವರ್ಷ ಉತ್ತರಾಖಂಡದಲ್ಲಿ ಧರ್ಮ ಸಂಸತ್ತು ನಡೆಯುತ್ತದೆ. ಅಲ್ಲಿ ಮುಸ್ಲಿಮರನ್ನು ಸಮುದ್ರಕ್ಕೆ ಎಸೆಯಲು ಕರೆ ಕೊಡಲಾಗುತ್ತದೆ. ಆದರೂ, ಪೊಲೀಸರು ಮತ್ತು ಸರಕಾರ ಈ ಧರ್ಮ ಸಂಸತ್ತುಗಳು ನಡೆಯಲು ಅವಕಾಶ ನೀಡುತ್ತದೆ.

ಉಧಮ್ ಸಿಂಗ್ ನಗರದಲ್ಲಿ ರಮಝಾನ್ ದಿನ ಒಬ್ಬರು ಖಾಲಿ ಮೈದಾನದಲ್ಲಿ ಪ್ರಾರ್ಥಿಸುತ್ತಿದ್ದಾಗ ಅವರನ್ನು ಒದ್ದು ನಿಂದಿಸಿದಂಥ ಘಟನೆ ಪ್ರತಿದಿನ ಉತ್ತರಾಖಂಡದಲ್ಲಿ ಸಂಭವಿಸುತ್ತದೆ. ಆದರೆ ಪೊಲೀಸರು ಏಕೆ ಕ್ರಮ ಕೈಗೊಳ್ಳುವುದಿಲ್ಲ? ಕ್ರಮ ಕೈಗೊಂಡರು ಏಕೆ ಅದು ನೆಪಮಾತ್ರವಾಗಿರುತ್ತದೆ ಎಂಬುದು ದೊಡ್ಡ ಪ್ರಶ್ನೆ.

ಚಾರ್ ಧಾಮ್ ದೇವಾಲಯಗಳಾದ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗಳಿಗೆ ಮುಸ್ಲಿಮರು ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂಬ ಬೇಡಿಕೆಗಳಿವೆ.

ಇತ್ತೀಚೆಗೆ, ಹರಿದ್ವಾರದ ಹಿಂದೂ ಸಂಘಟನೆಗಳು ಹರಿದ್ವಾರದ ಗಂಗಾ ಘಾಟ್ಗಳಿಗೆ ಮುಸ್ಲಿಮರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಒತ್ತಾಯಿಸತೊಡಗಿವೆ.

ಈ ವಿಷಯದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ತನ್ನ ನೀರಿನಲ್ಲಿ ಎಂದಿಗೂ ತಾರತಮ್ಯ ಮಾಡದ ಗಂಗೆ ಕೂಡ ಈಗ ಹಿಂದೂ, ಮುಸ್ಲಿಮ್ ಅಥವಾ ಯಾವುದೇ ಜಾತಿಯ ಹೆಸರಿನಲ್ಲಿ ಉತ್ತರಾಖಂಡದಲ್ಲಿ ವಿಭಜನೆಯಾಗುತ್ತಿರುವುದು ವಿಪರ್ಯಾಸ.

Tags

Uttarakhand
share
ಎ.ಎನ್. ಯಾದವ್
ಎ.ಎನ್. ಯಾದವ್
Next Story
X