Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಿನಾಯಕ ಬಾಳಿಗ ಹತ್ಯೆ ಗೆ ಬಳಸಿದ ಮಾಂಸ...

ವಿನಾಯಕ ಬಾಳಿಗ ಹತ್ಯೆ ಗೆ ಬಳಸಿದ ಮಾಂಸ ಕಡಿಯುವ ಕತ್ತಿ ಗುರುತಿಸಿದ ಪ್ರತಿಕೂಲ ಸಾಕ್ಷಿ

ನವೀನ್ ಸೂರಿಂಜೆನವೀನ್ ಸೂರಿಂಜೆ29 April 2024 5:51 PM IST
share
ವಿನಾಯಕ ಬಾಳಿಗ ಹತ್ಯೆ  ಗೆ ಬಳಸಿದ ಮಾಂಸ ಕಡಿಯುವ ಕತ್ತಿ ಗುರುತಿಸಿದ ಪ್ರತಿಕೂಲ ಸಾಕ್ಷಿ

ಸಾಮಾಜಿಕ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ವಿಚಾರಣೆ ಪ್ರಮುಖ ಘಟ್ಟ ಬಂದು ತಲುಪಿದೆ. ವಿನಾಯಕ ಬಾಳಿಗರನ್ನು ಕೊಲೆ ಮಾಡಲು ಬಳಸಿದ್ದ 'ಮಾಂಸ ಕಡಿಯುವ ಕತ್ತಿ'ಯನ್ನು ಆರೋಪಿಗಳಿಗೆ ಮಾರಾಟ ಮಾಡಿದ್ದ ವ್ಯಾಪಾರಿ ಪಾಟಿಸವಾಲಿನಲ್ಲಿ ಗುರುತಿಸಿದ್ದು ಪ್ರಕರಣಕ್ಕೆ ಬಲ ಬಂದಿದೆ. ನಮೋ ಬ್ರಿಗೇಡ್ ನ ನರೇಶ್ ಶೆಣೈ ಪ್ರಮುಖ ಆರೋಪಿಯಾಗಿರುವ ಪ್ರಕರಣದಲ್ಲಿ ಒಟ್ಟು ಏಳು ಆರೋಪಿಗಳಿದ್ದಾರೆ. ಆರೋಪಿಗಳು ಪ್ರಭಾವಿಯಾಗಿದ್ದರಿಂದ ಹಲವು ಸಾಕ್ಷಿಗಳು ಆರೋಪಿಗಳ ಪರ ಸಾಕ್ಷಿ ನುಡಿದಿದ್ದರಿಂದ ಪ್ರಕರಣದಲ್ಲಿ ನ್ಯಾಯ ಸಿಗುವುದು ಜಟಿಲವಾಗಿತ್ತು. ಕತ್ತಿ ಮಾರಾಟ ಮಾಡಿದ್ದ ವ್ಯಾಪಾರಿ ಕೂಡಾ ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷಿ ನುಡಿದಿದ್ದರು. ಆದರೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್ ಬಾಲನ್ ಅವರು ಇಂತಹ ಸಾಕ್ಷಿಗಳನ್ನು ಪಾಟಿ ಸವಾಲಿಗೆ ಗುರಿಪಡಿಸಿ ಸತ್ಯ ಹೊರ ತಂದಿದ್ದಾರೆ.

ನಮೋ ಬ್ರಿಗೇಡ್ ನ ನರೇಶ್ ಶೆಣೈ ತಂಡದ ಆರನೇ ಆರೋಪಿ ಶೈಲೇಶ್ ಎಂಬಾತ ವಿನಾಯಕ ಬಾಳಿಗರನ್ನು ಕೊಲೆ ಮಾಡಲೆಂದೇ ಕೂಳೂರಿನ ಬಸ್ತಿಕಾರ್ ಹಾರ್ಡ್ ವೇರ್ ನಿಂದ ಕತ್ತಿ ಖರೀದಿಸಿದ್ದ. ಕತ್ತಿ ಮಾರಾಟ ಮಾಡಿದ್ದ ಬಸ್ತಿಕಾರ್ ಹಾರ್ಡ್ ವೇರ್ ನ ಮಾಲೀಕ ದೇವದಾಸ ಶೆಣೈರನ್ನು ಪೊಲೀಸರು ಸಾಕ್ಷಿಯನ್ನಾಗಿ ಉಲ್ಲೇಖಿಸಿದರು. ಪೊಲೀಸ್ ತನಿಖೆಯ ವೇಳೆ 'ಆರೋಪಿ ಶೈಲೇಶ್ ಎಂಬಾತ ನಮ್ಮ ಅಂಗಡಿಗೆ ಬಂದು ಕತ್ತಿ ಖರೀದಿಸಿದ್ದ. ಪೊಲೀಸರು ಆರೋಪಿಗಳಿಂದ ವಶಪಡಿಸಿರುವ ಕತ್ತಿ ಮತ್ತು ನಾನು ಮಾರಾಟ ಮಾಡಿರುವ ಕತ್ತಿ ಎರಡೂ ಒಂದೇ' ಎಂದು ಹೇಳಿಕೆ ನೀಡಿದ್ದರು. ಹಾಗಾಗಿ ಚಾರ್ಜ್ ಶೀಟ್ ನಲ್ಲಿ ದೇವದಾಸ ಶೆಣೈ ಹೇಳಿಕೆಯನ್ನೂ ದಾಖಲಿಸಿ ಸಾಕ್ಷಿಯನ್ನಾಗಿ ಉಲ್ಲೇಖಿಸಿದ್ದರು.

ಆದರೆ ನ್ಯಾಯಾಲಯದ ಮುಂದೆ ಹಾಜರಾದ ಸಾಕ್ಷಿ ದೇವದಾಸ ಶೆಣೈ "ನಾನು ಇಂತಹ ಕತ್ತಿಯನ್ನು ಮಾರಾಟವೇ ಮಾಡಿರುವುದಿಲ್ಲ. ನಾನು ಬಿಲ್ಡಿಂಗ್ ಮೆಟೀರಿಯಲ್ ಗಳನ್ನು ಮಾತ್ರ ಮಾರಾಟ ಮಾಡುತ್ತೇನೆ. ಪೊಲೀಸರು ವಶಪಡಿಸಿಕೊಂಡಿರುವ ಕತ್ತಿ ನನ್ನ ಅಂಗಡಿಯದ್ದು ಅಲ್ಲ. ಆರೋಪಿ ಶೈಲೇಶ್ ನನ್ನು ನಾನು ನೋಡಿರುವುದಿಲ್ಲ" ಎಂದು ಹೇಳಿಕೆ ನೀಡಿದರು. ಕೊಲೆ ಮಾಡಿದ ಕತ್ತಿಯೇ ನಕಲಿ ಎಂದ ಮೇಲೆ ಕೇಸು ನಿಲ್ಲುವುದಿಲ್ಲ. ಹಾಗಾಗಿ ಪ್ರತಿಕೂಲ(ಸುಳ್ಳು) ಸಾಕ್ಷಿ ಹೇಳಿದ ದೇವದಾಸ ಶೆಣೈರನ್ನು ಪಾಟಿ ಸವಾಲಿಗೆ ಗುರಿಪಡಿಸಲು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯದ ಅನುಮತಿ ಕೇಳಿದರು. ನ್ಯಾಯಾಲಯ ಅನುಮತಿ ಕೊಟ್ಟ ಹಿನ್ನಲೆಯಲ್ಲಿ ಎಪ್ರಿಲ್ 24 ರಂದು ಸುಧೀರ್ಘ 8 ಪುಟಗಳಷ್ಟು ಪಾಟಿ ಸವಾಲು ನಡೆಯಿತು. ಆ ಪೈಕಿ ಸತ್ಯ ಬಯಲಾದ ಪಾಟಿಸವಾಲಿನ ಪ್ರಮುಖ ಅಂಶಗಳು ಇಲ್ಲಿವೆ :

ಎಸ್ ಪಿಪಿ ಎಸ್ ಬಾಲನ್ : ಪೊಲೀಸರು ನಿಮ್ಮ ಅಂಗಡಿಯ ಬಳಿ ಬಂದು ನಿಮ್ಮನ್ನು ಠಾಣೆಗೆ ಕರೆದಿದ್ರಾ ?

ಸಾಕ್ಷಿ ದೇವದಾಸ ಶೆಣೈ : ಹೌದು.

ಎಸ್ ಪಿಪಿ ಎಸ್ ಬಾಲನ್ : ಸಂಜೆ 6.00 ಗಂಟೆಗೆ ಪೊಲೀಸರು ಬಂದಿದ್ದರು. ಪೊಲೀಸರು ಬಂದು ಅಂಗಡಿಯನ್ನು ಪರಿಶೀಲಿಸಿದಾಗ ನಿಮ್ಮ ಅಂಗಡಿಯಲ್ಲಿ ಕತ್ತಿಗಳೂ ಇದ್ದವು.

ಸಾಕ್ಷಿ ದೇವದಾಸ ಶೆಣೈ : ಹೌದು

ಎಸ್ ಪಿಪಿ ಎಸ್ ಬಾಲನ್ : ಪೊಲೀಸರು ಬಂದಾಗ ನಿಮ್ಮ ಅಂಗಡಿಯಲ್ಲಿ 10-15 ಕತ್ರಿಗಳೂ ಇದ್ದವು.

ಸಾಕ್ಷಿ ದೇವದಾಸ ಶೆಣೈ : ಹೌದು

ಎಸ್ ಪಿಪಿ ಎಸ್ ಬಾಲನ್ : ಈ ಕತ್ತಿ, ಚಾಕು, ಚೂರಿಯನ್ನು ಎಲ್ಲಿಂದ ತರಿಸ್ತೀರಿ ?

ಸಾಕ್ಷಿ ದೇವದಾಸ ಶೆಣೈ : ನನಗೆ ನೆನಪಿಲ್ಲ.

ಎಸ್ ಪಿಪಿ ಎಸ್ ಬಾಲನ್ : ಕತ್ತಿಗಳ ಮೇಲೆ ಬೆಲೆಯನ್ನು ನೀವೇ ಬರೆಯುತ್ತೀರಾ ?

ಸಾಕ್ಷಿ ದೇವದಾಸ ಶೆಣೈ : ನಾವು ಹೇಳಿದಂತೆ ಕೆಲಸಗಾರರು ಬರೆಯುತ್ತಾರೆ.

ಎಸ್ ಪಿಪಿ ಎಸ್ ಬಾಲನ್ : 2016 ರಲ್ಲಿ ನಿಮ್ಮ ಅಂಗಡಿಯಿಂದ ಖರೀದಿಸಿದ ಕತ್ತಿ ಎಂದು ಪೊಲೀಸರು ಹೇಳಿದ್ದಾರಲ್ವಾ... ಆ ಕತ್ತಿಯ ಬೆಲೆ 2016 ರಲ್ಲಿ ಎಷ್ಟಿರಬಹುದು ?

ಸಾಕ್ಷಿ ದೇವದಾಸ ಶೆಣೈ : 2016 ರಲ್ಲಿ ಕತ್ತಿಗಳಿಗೆ 200/- ರೂಪಾಯಿ ಇತ್ತು.

ಎಸ್ ಪಿಪಿ ಎಸ್ ಬಾಲನ್ : ನೀವು ಅ ಸಮಯದ ಬೆಲೆಯನ್ನೇ ಕತ್ರಿಗಳ ಮೇಲೆ ಬರೆಯುತ್ತಿದ್ರಿ.

ಸಾಕ್ಷಿ ದೇವದಾಸ ಶೆಣೈ : ಹೌದು.

ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್ ಬಾಲನ್ ಅವರ ಕೊರಿಕೆಯಂತೆ ಸೀಲ್ಡ್ ಕವರ್ ನಲ್ಲಿದ್ದ ಕತ್ತಿಯ ಪೊಟ್ಟಣವನ್ನು ಸಾಕ್ಷಿಯ ಎದುರು ದಿಡೀರಣೆ ಓಪನ್ ಮಾಡಲಾಯಿತು. ಆ ಮುಚ್ಚಿದ ಪೊಟ್ಟಣದೊಳಗಿದ್ದ ಕತ್ತಿಗೆ ಮರದ ಹಿಡಿ ಇತ್ತು. ಹಿಡಿಯ ಮೇಲೆ 200 ರೂ ಎಂದು ನಮೂದಿಸಲಾಗಿತ್ತು. ಅದು ನರೇಶ್ ಶೆಣೈ ತಂಡ ವಿನಾಯಕ ಬಾಳಿಗನನ್ನು ಕೊಲೆ ಮಾಡಲು ಬಳಸಿದ್ದ ಕತ್ತಿಯಾಗಿದ್ದು ಪೊಲೀಸರು ಅದನ್ನು ಸೀಝ್ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಮಾಂಸ ಕಡಿಯುವ ಆ ಕತ್ತಿಯನ್ನು ಎತ್ತಿಕೊಂಡ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್ ಬಾಲನ್ ಪಾಟಿ ಸವಾಲನ್ನು ಮುಂದುರೆಸಿದರು.

ಎಸ್ ಪಿಪಿ ಎಸ್ ಬಾಲನ್ : ನೋಡಿ, ಇದು ಮಾಂಸ ಕಡಿಯುವ ಕತ್ತಿ. ಇದರ ಮೇಲೆ 200 ರೂಪಾಯಿ ಎಂದು ಬರೆದಿದೆ.

ಸಾಕ್ಷಿ ದೇವದಾಸ ಶೆಣೈ : ಹೌದು

ಎಸ್ ಪಿಪಿ ಬಾಲನ್ : ಈಗ ಈ ಕತ್ತಿಯ ಬೆಲೆ ಎಷ್ಟಿದೆ ?

ಸಾಕ್ಷಿ ದೇವದಾಸ ಶೆಣೈ : 240 ರೂ ಇರಬಹುದು. ಆದರೆ ನಾನು ಈಗ ಅಂತಹ ಕತ್ತಿ ಮಾರಾಟ ಮಾಡುವುದಿಲ್ಲ.

ಎಸ್ ಪಿಪಿ ಎಸ್ ಬಾಲನ್ : ಯಾಕೆ ?

ಸಾಕ್ಷಿ ದೇವದಾಸ ಶೆಣೈ : ಯಾಕೆಂದರೆ ಪೊಲೀಸರು ವಿಚಾರಣೆಗೆ ಕರೆಯುತ್ತಾರೆ.

ಎಸ್ ಪಿಪಿ ಎಸ್ ಬಾಲನ್ : ಈಗ ಅಂದರೆ ಇದು 2024 ನೇ ಇಸವಿ. ಯಾವಾಗದಿಂದ ನೀವು ಈ ಕತ್ತಿ ಮಾರಾಟ ನಿಲ್ಲಿಸಿದ್ರಿ ?

ಸಾಕ್ಷಿ : ಕಳೆದ ಒಂದು ವರ್ಷದಿಂದ ಇಂತಹ ಕತ್ತಿ ಮಾರಾಟ ನಿಲ್ಲಿಸಿದ್ದೇನೆ.

ಎಸ್ ಪಿಪಿ ಎಸ್ ಬಾಲನ್ : ಮಾರಾಟ ಮಾಡಲು ನಿಮಗೆ ಈ ಕತ್ತಿ ಯಾರು ಸರಬರಾಜು ಮಾಡ್ತಾರೆ ?

ಸಾಕ್ಷಿ ದೇವದಾಸ ಶೆಣೈ : ಅದನ್ನು ನೋಡಿಕೊಳ್ಳಲು ಸಿಬ್ಬಂದಿ ಇದ್ದಾರೆ. ಯಾರು ತಂದುಕೊಡುತ್ತಾರೆ ಎಂದು ನನಗೆ ಗೊತ್ತಿರುವುದಿಲ್ಲ.

ಎಸ್ ಪಿಪಿ ಎಸ್ ಬಾಲನ್ : ಈಗ ನನ್ನ ಕೈಯ್ಯಲ್ಲಿರುವ ಈ ಕತ್ತಿ ನೋಡ್ತಾ ಇದ್ದೀರಲ್ವಾ ? ಈ ಕತ್ತಿಯ ಮೇಲೆ ಬೆಲೆಯನ್ನು ನೀವು ಹೇಳಿದಂತೆ ಬರೆದಿದ್ದಾರೆ.

ಸಾಕ್ಷಿ ದೇವದಾಸ ಶೆಣೈ : ಹೌದು

ಎಸ್ ಪಿಪಿ ಎಸ್ ಬಾಲನ್ : ಯಾರು ಬರೆದಿರುವುದು ?

ಸಾಕ್ಷಿ ದೇವದಾಸ ಶೆಣೈ : ಅದು ನೆನಪಿಲ್ಲ. ನಾನು ಹೇಳಿದಂತೆ ಬರೆದಿರುತ್ತಾರೆ.

ಸಾಕ್ಷಿಯು ಕತ್ತಿಗಳ ಬಗ್ಗೆ ಹೇಳಿಕೆ ನೀಡಿದ್ದರಿಂದ ಮತ್ತು ಅದನ್ನು ಗುರುತಿಸಿದ್ದರಿಂದ ನ್ಯಾಯಾಲಯದಲ್ಲಿ ಅದನ್ನು ಮಾರ್ಕ್ ಮಾಡಲಾಯಿತು.

2016ರ ಮಾ. 21ರಂದು ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ನಮೋ ಬ್ರಿಗೇಡ್ನ ಸ್ಥಾಪಕ ನರೇಶ್ ಶೆಣೈ ಅವರ ಅವ್ಯವಹಾರಗಳನ್ನು ಬಯಲು ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ವಿನಾಯಕ ಬಾಳಿಗರನ್ನು ಹತ್ಯೆ ಮಾಡಲಾಗಿತ್ತು ಎಂದು ಆರೋಪಿಸಿ ಡಿವೈಎಫ್ಐ ಸೇರಿದಂತೆ ಕರಾವಳಿಯ ಪ್ರಜ್ಞಾವಂತ ಸಮುದಾಯ ಬೀದಿಗಿಳಿದು ಪ್ರತಿಭಟನೆ ನಡೆಸಿತ್ತು. ಪೊಲೀಸರು ತನಿಖೆ ನಡೆಸಿ ನರೇಶ್ ಶೆಣೈ ಸೇರಿದಂತೆ ಆರು ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ನರೇಶ್ ಶೆಣೈ ಜಾಮೀನಿನ ಮೇಲೆ ಬಿಡುಗಡೆ ಆಗುವ ಸಂದರ್ಭದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಜೈಲಿನ ಹೊರಗೆ ಸಂಭ್ರಮಾಚರಣೆ ನಡೆಸಿ ಕೊಲೆ ಆರೋಪಿ ನರೇಶ್ ಶೆಣೈಯನ್ನು ಸ್ವಾಗತಿಸಿದ್ದು ಚರ್ಚೆಗೆ ಒಳಗಾಗಿತ್ತು‌.

ಈ ಮಧ್ಯೆ ನ್ಯಾಯಾಲಯದ ವಿಚಾರಣೆಗೆ ಹಿರಿಯ ವಕೀಲ ಎಸ್ ಬಾಲನ್ ಅವರನ್ನು ಸರ್ಕಾರಿ ವಿಶೇಷ ಅಭಿಯೋಜಕರನ್ನಾಗಿ ನೇಮಿಸಲಾಗಿತ್ತು. ವಿನಾಯಕ ಬಾಳಿಗ ಕೊಲೆಯಾದಾಗ ಕೊಲೆಗೆ ಬಳಸಿದ್ದ ಕತ್ತಿಯನ್ನು ನನ್ನ ಅಂಗಡಿಯಿಂದಲೇ ಆರೋಪಿಗಳು ಖರೀದಿಸಿದ್ದರು ಎಂದು ಅಂಗಡಿ ಮಾಲೀಕ ಪೊಲೀಸರಿಗೆ ಹೇಳಿಕೆ ಕೊಟ್ಟು ಸಹಿ ಹಾಕಿದ್ದರು. ಆದರೆ ನ್ಯಾಯಾಲಯಕ್ಕೆ ಹಾಜರಾಗಿ "ನನ್ನ ಅಂಗಡಿಯಲ್ಲಿ ಕತ್ತಿಯನ್ನೇ ಮಾರಾಟ ಮಾಡುತ್ತಿಲ್ಲ. ಪೊಲೀಸರು ವಶಪಡಿಸಿಕೊಂಡ ಕತ್ತಿಗಳು ನನ್ನ ಅಂಗಡಿಯದ್ದಲ್ಲ" ಎಂದು ಸಾಕ್ಷಿ ನುಡಿದು ಆರೋಪಿಗಳಿಗೆ ಸಹಾಯ ಮಾಡಿದ್ದರು. ಹಾಗಾಗಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಎಸ್ ಬಾಲನ್ ಅವರು ಸಾಕ್ಷಿಯನ್ನು ವಿಟ್ನೆಸ್ ಬಾಕ್ಸ್ ನಲ್ಲಿ ನಿಲ್ಲಿಸಿ ಪಾಟಿ ಸವಾಲಿಗೆ ಗುರಿಪಡಿಸಿ ಕೊಲೆ ಮಾಡಲು ಬಳಸಿದ್ದ ಕತ್ತಿಯನ್ನು ಅದೇ ಪ್ರತಿಕೂಲ ಸಾಕ್ಷಿಯಿಂದಲೇ ಅಧಿಕೃತಗೊಳಿಸಿದ್ದಾರೆ. ಸಧ್ಯ ವಿನಾಯಕ ಬಾಳಿಗ ಕೊಲೆ ಪ್ರಕರಣದಲ್ಲಿ ಕೊಲೆಗೆ ಬಳಸಿದ ಕತ್ತಿಯನ್ನು ಗುರುತಿಸುವಿಕೆಯ ಪ್ರಕ್ರಿಯೆ ಪೂರ್ಣಗೊಂಡಿದ್ದು ತಾರ್ಕಿಕ ಅಂತ್ಯ ತಲುಪಿದೆ‌.

share
ನವೀನ್ ಸೂರಿಂಜೆ
ನವೀನ್ ಸೂರಿಂಜೆ
Next Story
X