Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರಾಹುಲ್ ಗಾಂಧಿ ಶಿಕ್ಷೆ ಎತ್ತಿ ಹಿಡಿದ...

ರಾಹುಲ್ ಗಾಂಧಿ ಶಿಕ್ಷೆ ಎತ್ತಿ ಹಿಡಿದ ಗುಜರಾತ್ ಹೈಕೋರ್ಟ್ ಹೇಳಿದ್ದೇನು ?

ಪ್ರಜ್ಞಾ ಸಿಂಗ್ ಹಾಗೂ ರಾಹುಲ್ ಗಾಂಧಿ - ಇಬ್ಬರೂ ಅರ್ಹರಾಗೋದು ಹೇಗೆ ?

ಆರ್. ಜೀವಿಆರ್. ಜೀವಿ11 July 2023 9:33 PM IST
share
ರಾಹುಲ್ ಗಾಂಧಿ ಶಿಕ್ಷೆ ಎತ್ತಿ ಹಿಡಿದ ಗುಜರಾತ್ ಹೈಕೋರ್ಟ್ ಹೇಳಿದ್ದೇನು ?

"It is now the need of the hour to have purity in politics. Representatives of people should be men of clear antecedent"

ಅಂದ್ರೆ " ರಾಜಕೀಯದಲ್ಲಿ ಪರಿಶುದ್ಧತೆ ಇರಬೇಕಾದ್ದು ಈಗ ಅತ್ಯಂತ ಅಗತ್ಯವಾಗಿದೆ. ಜನಪ್ರತಿನಿಧಿಗಳು ಸ್ವಚ್ಛ ಹಿನ್ನೆಲೆ ಇರುವವರಾಗಿರಬೇಕು". ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅಪರಾಧಿ ಎಂದಿರುವ ಕೆಳಹಂತದ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ನಿರಾಕರಿಸಿರುವ ಗುಜರಾತ್ ಹೈಕೋರ್ಟ್ ನೀಡಿರುವ ಆದೇಶದಲ್ಲಿರುವ ಸಾಲುಗಳಿವು.

"ಅಂದ್ರೆ ರಾಹುಲ್ ಗಾಂಧಿಯಂತಹ ನಾಯಕರು ಭಾರತದ ಈಗಿನ ರಾಜಕೀಯದಲ್ಲಿರಬಾರದು. ಅವರ ಹಿನ್ನೆಲೆ ಸರಿಯಿಲ್ಲ. ಜನಪ್ರತಿನಿಧಿಯಾಗಿ ಲೋಕಸಭೆಯಲ್ಲಿರಲು ಅವರು ಅರ್ಹರಲ್ಲ" ಅನ್ನೋದು ಈ ಆದೇಶದ ಒಟ್ಟು ಆಶಯ.

"ಅದೇಗೆ ಎಲ್ಲ ವಂಚಕರಿಗೆ ಮೋದಿ ಅಂತ ಹೆಸರಿರುತ್ತೆ" ಅಂತ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ವಿರುದ್ಧ ಗುಜರಾತ್ ನ ಶಾಸಕ ಪೂರ್ಣೇಶ್ ಮೋದಿ ಅವರು ದಾಖಲಿಸಿದ್ದ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂದು ಗುಜರಾತ್ ನ ನ್ಯಾಯಾಲಯ ಆದೇಶಿಸಿತ್ತು. ಅದರ ಆಧಾರದಲ್ಲಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು. ಈಗ ಜಿಲ್ಲಾ ನ್ಯಾಯಾಲಯ ನೀಡಿರುವ ತೀರ್ಪು ಅತ್ಯಂತ ನ್ಯಾಯಯುತ ಹಾಗು ಸರಿಯಾಗಿದೆ ಎಂದು ಗುಜರಾತ್ ಹೈಕೋರ್ಟ್ ನ ನ್ಯಾಯಾಧೀಶ ಹೇಮಂತ್ ಪ್ರಚಾಕ್ ಹೇಳಿದ್ದಾರೆ.

ಅಲ್ಲಿಗೆ ರಾಹುಲ್ ಗಾಂಧಿ ಮತ್ತೆ ಲೋಕಸಭೆ ಪ್ರವೇಶಿಸುವ ಸಾಧ್ಯತೆಗೆ ಕಲ್ಲು ಬಿದ್ದಿದೆ. ಗುಜರಾತ್ ಹೈಕೋರ್ಟ್ ನ್ಯಾಯಾಧೀಶರು ಹೇಳಿರೋದು ಬಹಳ ಸರಿಯಾಗಿಯೇ ಇದೆ.

ಈಗ ನ್ಯೂ ಇಂಡಿಯಾದಲ್ಲಿ ನಡೀತಿರೋ ರಾಜಕೀಯಕ್ಕೆ ನಿಜಕ್ಕೂ ರಾಹುಲ್ ಗಾಂಧಿ ಅನ್ ಫಿಟ್. ಹಾಗೆಯೇ ನ್ಯೂ ಇಂಡಿಯಾದ ನ್ಯೂ ಸಂಸತ್ತು, ಅದರ ಉದ್ಘಾಟನೆಯಾದ ಶೈಲಿ, ಅದರಲ್ಲಿ ಈಗ ಇರೋ ಹಲವರ ಹಿನ್ನೆಲೆ ಹಾಗು ಸಂಸದರು, ಸಚಿವರಾದ ಮೇಲೂ ಅವರ ವರ್ತನೆ, ಕಾರ್ಯವೈಖರಿ - ಇವೆಲ್ಲವನ್ನೂ ನೋಡಿದರೂ ಅಲ್ಲಿಗೆ ರಾಹುಲ್ ಗಾಂಧಿ ಟೋಟಲ್ ಅನ್ ಫಿಟ್. ಅದರಲ್ಲಿ ಯಾವುದೇ ಸಂಶಯವೇ ಇಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ರಾಹುಲ್ ಗಾಂಧಿ ಸುಲಲಿತವಾಗಿ ಸುಳ್ಳು ಹೇಳೋದರಲ್ಲಿ ಟೋಟಲ್ ಫೇಲ್. ಅವರಿಗೆ ನೂರಾರು ಕೋಟಿಯ ವಿಶೇಷ ವಿಮಾನದಲ್ಲಿ ಬಂದಿಳಿದು, ಇನ್ನೂ ಹಲವು ಕೋಟಿ ಖರ್ಚು ಮಾಡಿ ಲಕ್ಷಾಂತರ ಜನರನ್ನು ಸೇರಿಸಿ ಮಾಡಿದ ಕಾರ್ಯಕ್ರಮದಲ್ಲಿ ಬಂದು " ನಾನು ಏನೂ ಇಲ್ಲದ ಫಕೀರ, ಜೋಳಿಗೆ ಹಿಡಿದುಕೊಂಡು ಹೋಗ್ತೀನಿ " ಅಂತ ಹೇಳಲು ಅವರು ನಾಲಾಯಕ್.

"50 ದಿನಗಳಲ್ಲಿ ನೋಟು ನಿಷೇಧದಿಂದ ಆಗುತ್ತಿರೋ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸ್ತೀನಿ. ಅದಾಗದಿದ್ದರೆ ದೇಶ ಕೊಡೊ ಯಾವುದೇ ಶಿಕ್ಷೆ ಎದುರಿಸಲು ಸಿದ್ಧ " ಎಂದು ಘಂಟಾಘೋಷವಾಗಿ ಹೇಳಿ ಆಮೇಲೆ ಅದಕ್ಕೂ ನನಗೂ ಸಂಬಂಧವೇ ಇಲ್ಲದಂತೆ ವರ್ತಿಸಲು ರಾಹುಲ್ ಗಾಂಧಿಗೆ ಬಾರದು.

"ನನಗೆ ಕೇವಲ 60 ತಿಂಗಳು ಕೊಟ್ಟು ನೋಡಿ. ಕೋಟಿ ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ" ಎಂದು ಹೇಳಿ ಆಮೇಲೆ ಪಕೋಡ ಮಾರೋದು ಕೂಡ ಉದ್ಯೋಗ ಅಲ್ವಾ ಅಂತ ನಿರುದ್ಯೋಗಿ ಯುವಕರ ಗಾಯದ ಮೇಲೆ ಬರೆ ಎಳೆಯೋವಂತ ಹೇಳಿಕೆ ಕೊಡಲು ರಾಹುಲ್ ಗಾಂಧಿಗೆ ಬರೋದೇ ಇಲ್ಲ. "ನನ್ನನ್ನು ಅಧಿಕಾರಕ್ಕೆ ತನ್ನಿ. ಭಯೋತ್ಪಾದಕರ ಹುಟ್ಟಡಗಿಸಿ ಬಿಡ್ತೀನಿ" ಎಂದು ಹೇಳಿ ಅಧಿಕಾರಕ್ಕೆ ಬಂದ ಮೇಲೆ ಪುಲ್ವಾಮಾದಂತಹ ಭಯಾನಕ ಭಯೋತ್ಪಾದಕ ದಾಳಿ ನಡೆದು 40 ಸೈನಿಕರು ಬಲಿಯಾದಾಗ "ನನ್ನಿಂದ ತಪ್ಪಾಯ್ತು, ಸೈನಿಕರ ಪ್ರಾಣ ಉಳಿಸಲು ವಿಫಲನಾದೆ " ಎಂದು ಹೇಳಿ ರಾಜೀನಾಮೆ ಕೊಡದೆ " ಸೈನಿಕರ ಹೆಸರಲ್ಲಿ ನನಗೆ ಓಟು ಕೊಡಿ " ಎಂದು ಯಾವುದೇ ನಾಚಿಕೆ ಹಾಗು ಮುಲಾಜಿಲ್ಲದೆ ಕೇಳಲು ರಾಹುಲ್ ಗಾಂಧಿಗೆ ಸಾಧ್ಯವೇ ಇಲ್ಲ.

ಮಣಿಪುರದಲ್ಲಿ ಎರಡು ತಿಂಗಳಿಂದ ಹಿಂಸಾಚಾರ ನಡೆಯುತ್ತಿದ್ದರೂ, ಅಲ್ಲಿ ತನ್ನದೇ ಪಕ್ಷದ ಸರಕಾರವಿದ್ದರೂ, ಅಲ್ಲಿನ ಹಿರಿಯ ನಾಯಕರು "ಪ್ರಧಾನಿಗಳೇ ಏನಾದರೂ ಮಾಡಿ ಹಿಂಸಾಚಾರ ನಿಲ್ಲಿಸಿ" ಎಂದು ಗೋಗರೆಯುತ್ತಿದ್ದರೂ ಅಲ್ಲಿಗೆ ಭೇಟಿಯನ್ನೂ ಕೊಡದೆ, ಅಲ್ಲಿನ ಪರಿಸ್ಥಿತಿ ಬಗ್ಗೆ ಒಂದೇ ಒಂದು ಹೇಳಿಕೆಯನ್ನೂ ಕೊಡದೆ, ಹೋದಲ್ಲಿ ಬಂದಲ್ಲಿ ಸಮೋಸಗಳ ಬಗ್ಗೆ, ನೂಡಲ್ಸ್ ಬಗ್ಗೆ, ಉಕ್ರೇನ್ - ರಷ್ಯಾ ಯುದ್ಧದ ಬಗ್ಗೆ, ಬಿಜೆಪಿ ಸಾಧನೆಗಳ ಬಗ್ಗೆ ಮಾತಾಡೋದು ರಾಹುಲ್ ಗಾಂಧಿ ಕೈಯಲ್ಲಿ ಆಗೋ ಕೆಲಸ ಅಲ್ಲ.

ಕಾಶ್ಮೀರ್ ಫೈಲ್ಸ್ ಎಂಬ ಸುಳ್ಳುಗಳ ಕಂತೆಯ ಸಿನಿಮಾವನ್ನು ಹಾಡಿ ಹೊಗಳಿ, ಕಾಶ್ಮೀರ ಪಂಡಿತರು "ನಮ್ಮ ಮೇಲೆ ಆಕ್ರಮಣ ನಡೀತಾ ಇದೆ, ನಮ್ಮ ಪ್ರಾಣ ಹೋಗ್ತಾ ಇದೆ, ಸೊತ್ತುಗಳನ್ನು ನಾಶ ಮಾಡಲಾಗ್ತಾ ಇದೆ " ಎಂದು ಅಂಗಲಾಚಿದಾಗ ಅದು ತನಗೆ ಸಂಬಂಧಪಟ್ಟ ವಿಷಯವೇ ಅಲ್ಲ ಎಂಬಂತೆ ನಿರ್ಲಕ್ಷಿಸಲು ರಾಹುಲ್ ಗಾಂಧಿಯಿಂದ ಸಾಧ್ಯವಿಲ್ಲ.

'ಬೇಟಿ ಬಚಾವೋ ಬೇಟಿ ಪಡಾವೋ ' ಎಂದು ಹೊಸ ಘೋಷಣೆ ಹೊರಡಿಸಿ, ಅದರ ಹೆಸರಲ್ಲಿ ದೇಶದೆಲ್ಲೆಡೆ ಪ್ರಚಾರ ಗಿಟ್ಟಿಸಿ, ದೇಶದ ಹೆಣ್ಣುಮಕ್ಕಳು ಅಂತರ್ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದಾಗ ಅವರೊಂದಿಗೆ ನಿಂತು ಫೋಟೋ, ವೀಡಿಯೊಗಳಿಗೆ ಪೋಸು ಕೊಟ್ಟು ಅಲ್ಲೂ ಫುಲ್ ಪಬ್ಲಿಸಿಟಿ ಪಡೆದು ಅದೇ ಹೆಣ್ಣು ಮಕ್ಕಳು "ನಮಗೆ ನಿಮ್ಮ ಪಕ್ಷದ ಸಂಸದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ " ಎಂದು ತಿಂಗಳುಗಟ್ಟಲೆ ದಿಲ್ಲಿಯ ಬೀದಿಯಲ್ಲಿ ಧರಣಿ ನಡೆಸಿದರೂ ಅವರತ್ತ ತಿರುಗಿಯೂ ನೋಡದೆ, ಪೊಕ್ಸೋದಂತಹ ಗಂಭೀರ ಆರೋಪ ಎದುರಿಸುತ್ತಿದ್ದ ತನ್ನ ಪಕ್ಷದ ಸಂಸದನನ್ನ ಬಂಧಿಸದೆ, ಆತನ ಬೆನ್ನಿಗೆ ನಿಲ್ಲುವಂತಹ ಧೈರ್ಯ ರಾಹುಲ್ ಗಾಂಧಿಗೆ ಯಾವತ್ತಾದರೂ ಬರಲು ಸಾಧ್ಯವೇ ?

ತನ್ನ ಸರಕಾರ ಬಂದ ಮೇಲೆ ಹಿಂದುತ್ವ ಸಂಘಟನೆಗಳು ಹಾಗು ಅದರ ಕಾರ್ಯಕರ್ತರು ಒಂದಾದ ಮೇಲೊಂದು ನೆಪ ಹುಡುಕಿ ಅಲ್ಪಸಂಖ್ಯಾತರ ಮೇಲೆ ದ್ವೇಷ ಸಾಧಿಸುತ್ತಿರುವ, ಗುಂಪು ಹಲ್ಲೆ, ಹತ್ಯೆ ನಡೆಸುವ ಘಟನೆಗಳು ಎಗ್ಗಿಲ್ಲದೆ ನಡೆಯುತ್ತಿದ್ದರೂ, ತನ್ನದೇ ಪಕ್ಷದಲ್ಲಿರುವ ಮುಸ್ಲಿಮರನ್ನೂ ಸಂಘ ಪರಿವಾರದ ಸಂಘಟನೆಗಳು ವ್ಯಾಪಾರ ಮಾಡಲು ಬಿಡದೆ ಊರಿಂದ ಓಡಿಸುತ್ತಿದ್ದರೂ ಅದನ್ನು ತಡೆಯದೆ ಅಮೇರಿಕಾದಲ್ಲಿ ಹೋಗಿ " ನಮ್ಮ ದೇಶದಲ್ಲಿ ಯಾವುದೇ ಧರ್ಮೀಯರಿಗೆ ಯಾವುದೇ ರೀತಿಯ ಬೇಧ ಭಾವ ತೋರಿಸುವ ಪ್ರಶ್ನೆಯೇ ಇಲ್ಲ. ಎಲ್ಲರಿಗೂ ನಮ್ಮ ದೇಶದಲ್ಲಿ ಸಮಾನ ಹಕ್ಕು, ಸಮಾನ ಅವಕಾಶಗಳಿವೆ " ಎಂದು ಹಸಿ ಹಸಿ ಸುಳ್ಳು ಹೇಳಲು, ಮತ್ತೆ ಭಾರತಕ್ಕೆ ಬಂದು " ಬೇರೆ ಪಕ್ಷಗಳು ಮುಸ್ಲಿಮರಿಗೆ ಅನ್ಯಾಯ ಮಾಡಿವೆ, ಹಾಗಾಗಿ ಮುಸ್ಲಿಮರು ನಮ್ಮ ಪಕ್ಷದ ಜೊತೆ ನಿಲ್ತಾರೆ " ಎಂದು ಹೇಳಲು ರಾಹುಲ್ ಗಾಂಧಿಗೆ ಬಿಲ್ ಕುಲ್ ಆಗದು.

"ಎನ್ ಸಿ ಪಿ ಪಕ್ಷದ ಮೇಲೆ 70 ಸಾವಿರ ಕೋಟಿ ರೂಪಾಯಿಯ ಹಗರಣಗಳ ಆರೋಪವಿದೆ. ನಾನು ನಿಮಗೆ ಇಂತಹ ಪ್ರತಿಯೊಂದು ಭ್ರಷ್ಟ ಪಕ್ಷಗಳ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮದ ಗ್ಯಾರಂಟಿ ಕೊಡ್ತೇನೆ, ಒಬ್ಬೇ ಒಬ್ಬ ಭ್ರಷ್ಟಾಚಾರಿಯನ್ನೂ ಬಿಡೋದಿಲ್ಲ" ಎಂದು ಭಾಷಣ ಮಾಡಿ ಐದೇ ದಿನದೊಳಗೆ ಅದೇ ಎನ್ ಸಿ ಪಿ ಪಕ್ಷದ, ಹತ್ತು ಹಲವು ಭ್ರಷ್ಟಾಚಾರ ಪ್ರಕರಣಗಳ ಪ್ರಮುಖ ಆರೋಪಿ ಜೊತೆ ಮೈತ್ರಿ ಮಾಡಿ ಆತನನ್ನೇ ಉಪಮುಖ್ಯಮಂತ್ರಿ ಮಾಡಿ, ಅದೇ ಪಕ್ಷದ ಇನ್ನೂ ಕೆಲವು ಭ್ರಷ್ಟಾಚಾರ ಆರೋಪಿಗಳನ್ನು ಮಂತ್ರಿ ಮಾಡುವ ಭಂಡತನ ತೋರಿಸೋದು ರಾಹುಲ್ ಗಾಂಧಿಯಿಂದ ಆಗೋದಿಲ್ಲ. ಅಂತಹದ್ದಕ್ಕೆಲ್ಲ ಅವರು ಟೋಟಲ್ ಅನ್ ಫಿಟ್.

ಲೋಕಸಭೆಯಲ್ಲೂ ಬೇಕಿದ್ರೆ ನೋಡಿ. ಎಂತೆಂತಹ ಹಿನ್ನೆಲೆಯವರೆಲ್ಲ ಇದ್ದಾರೆ. ಈ ಹಿಂದೆ ಗಡೀಪಾರಾಗಿದ್ದ ಅಮಿತ್ ಶಾ, ಮಾಲೇಗಾವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ಗಾಂಧೀಜಿ ಹಂತಕ ಗೋಡ್ಸೆಯನ್ನು ದೇಶಭಕ್ತ ಎಂದ ಪ್ರಜ್ಞಾ ಸಿಂಗ್ ಠಾಕೂರ್, ಮುಸ್ಲಿಮರನ್ನು ಆವತ್ತೇ ಪಾಕಿಸ್ತಾನಕ್ಕೆ ಕಳಿಸಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ ಎಂದು ಹೇಳುವ ಗಿರಿರಾಜ್ ಸಿಂಗ್, ಗೋಲಿ ಮಾರೋ ಸಾಲೊಂಕೋ ಖ್ಯಾತಿಯ ಅನುರಾಗ್ ಠಾಕೂರ್, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್, ಭಯೋತ್ಪಾದನೆಗೆ ಇಸ್ಲಾಂ ಧರ್ಮವೇ ಕಾರಣ ಎಂದು ಹೇಳುವ ಅನಂತ್ ಕುಮಾರ್ ಹೆಗಡೆ, ದಕ್ಷಿಣ ಕನ್ನಡದಲ್ಲಿ ಎಲ್ಲ ಕಡೆ ಗೆಲ್ಲಲು ನಾವು ಫೈನಲ್ ಸೊಲ್ಯೂಶನ್ ಬೇಕು ಎಂದು ಹೇಳುವ ತೇಜಸ್ವಿ ಸೂರ್ಯ, ಸಾಬರ ಮನೆಯಲ್ಲಿ 2- 3 ಹೆಂಡ್ತಿ ಇದ್ದಾರೆ ಎನ್ನುವ ಪ್ರತಾಪ್ ಸಿಂಹ ಇಂತಹವರೆಲ್ಲ ಅಲ್ಲಿದ್ದಾರೆ.

ಈ ರಾಹುಲ್ ಗಾಂಧಿ ನೋಡಿದ್ರೆ ಹೋದಲ್ಲೆಲ್ಲ " ದ್ವೇಷ ಬಿಡಿ, ಪ್ರೀತಿ ಹರಡಿ " ಅಂತಾರೆ. " ಒಬ್ಬರಿಗೊಬ್ಬರು ಪ್ರೀತಿ, ವಿಶ್ವಾಸ ತೋರಿಸಿ " ಅಂತ ಭಾಷಣ ಮಾಡ್ತಾರೆ. ಹಿಂಸಾಚಾರಗ್ರಸ್ತ ಮಣಿಪುರಕ್ಕೆ ಯಾವುದೇ ರಾಷ್ಟ್ರೀಯ ನಾಯಕರು ಹೋಗದಿದ್ದರೂ, ಅಲ್ಲಿ ತಮ್ಮ ಪಕ್ಷ ಸೋತಿದ್ದರೂ ಅಲ್ಲಿಗೆ ಹೋಗಿ ಅಲ್ಲಿನ ಜನರ ಅಳಲು ಕೇಳ್ತಾರೆ, ಅವರ ಜೊತೆ ಕೂತು , ಅವರಿಗೆ ಸಾಂತ್ವನ ಹೇಳ್ತಾರೆ. ಹೋದಲ್ಲೆಲ್ಲ ಜನರೊಂದಿಗೆ ಮುಕ್ತವಾಗಿ ಬೆರೀತಾರೆ. ಎಲ್ಲೂ ಯಾವುದೇ ಕೃತಕತೆ ಇಲ್ಲದೆ ಮಾತಾಡ್ತಾರೆ. ಯಾವ ಪ್ರಶ್ನೆಯನ್ನೂ ಕೇಳಲು ಅವಕಾಶ ಕೊಡ್ತಾರೆ. ಟೆಲಿ ಪ್ರಾಮ್ಪ್ಟರ್ ಇಲ್ಲದೆಯೇ ಕೇಳಿದ ಪ್ರಶ್ನೆಗಳಿಗೆಲ್ಲ ಪಟಪಟನೇ ಉತ್ತರ ಕೊಡ್ತಾರೆ. ಪ್ರೀತಿ, ಸಹೋದರತೆ, ಸಾಂತ್ವನ, ಧೈರ್ಯ - ಇವುಗಳನ್ನು ಬಿಟ್ಟು ಬೇರೆ ವಿಷಯವೇ ಇಲ್ಲ ಅವರಲ್ಲಿ.

ಹಾಗಾಗಿ ಪ್ರಜ್ಞಾ ಸಿಂಗ್ ಗೆ , ಗಿರಿರಾಜ್ ಸಿಂಗ್ ಗೆ, ಅನುರಾಗ್ ಠಾಕೂರ್ ಗೆ , ಬ್ರಿಜ್ ಭೂಷಣ್ ಗೆ ಇರುವ " ರಾಜಕೀಯ ಪರಿಶುದ್ಧತೆ ಹಾಗು ಹಿನ್ನೆಲೆ " ರಾಹುಲ್ ಗಾಂಧಿಗೆ ಇಲ್ಲ ಅನ್ನೋ ಅರ್ಥದಲ್ಲಿ ಗುಜರಾತ್ ಹೈಕೋರ್ಟ್ ನ್ಯಾಯಾಧೀಶರು ಆ ಮಾತನ್ನು ಹೇಳಿರಬಹುದು.

ಅಲ್ವಾ ?

share
ಆರ್. ಜೀವಿ
ಆರ್. ಜೀವಿ
Next Story
X