ಏನಿದು ʼಗ್ರೀಫ್ ಅಟ್ಯಾಕ್ʼ? ವೇದನೆಯನ್ನು ತಡೆದುಕೊಳ್ಳುವುದು ಹೇಗೆ?

ಸಾಂದರ್ಭಿಕ ಚಿತ್ರ | Photo Credit : freepik
ಗ್ರೀಫ್ ಅಟ್ಯಾಕ್ ಮತ್ತು ಪ್ಯಾನಿಕ್ ಅಟ್ಯಾಕ್ ಎಂದರೇನು? ರೋಗ ಚಿಹ್ನೆಗಳನ್ನು ಗುರುತಿಸುವುದು ಹೇಗೆ? ವಿವರ ಇಲ್ಲಿದೆ
ಪ್ರೀತಿ ಪಾತ್ರರನ್ನು ಅಥವಾ ಆಪ್ತರನ್ನು ಕಳೆದುಕೊಂಡಲ್ಲಿ ಮನದಲ್ಲಿ ಏಳುವ ನೋವನ್ನು ‘ಗ್ರೀಫ್ ಅಟ್ಯಾಕ್’ (ದುಃಖದ ದಾಳಿ) ಎಂದು ಕರೆಯಲಾಗುತ್ತದೆ. ದುಃಖಭರಿತ ಅಗಾಧ ವೇದನೆಗೆ ವೈದ್ಯಕೀಯ ಭಾಷೆಯಲ್ಲಿ ‘ಗ್ರೀಫ್ ಅಟ್ಯಾಕ್’ ಎಂದು ವಿವರಿಸಲಾಗುತ್ತದೆ. ಕಳೆದು ಹೋಗಿರುವುದರ ಭಯ, ವೇದನೆಯ ಸೆಡೆತ ಮೊದಲಾಗಿಯೂ ಕರೆಯಲಾಗುತ್ತದೆ.
ದುಃಖದ ಪರಿಣಾಮಗಳನ್ನು ಅಧ್ಯಯನ ಮಾಡಿ ಚಿಕಿತ್ಸೆ ನೀಡುವ ತಜ್ಞರು ‘ಗ್ರೀಫ್ ಅಟ್ಯಾಕ್ ಗೆ ನಿರ್ದಿಷ್ಟ ರೋಗಚಿಹ್ನೆಗಳನ್ನು ಮತ್ತು ಸಂದರ್ಭಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ. ‘ಗ್ರೀಫ್ ಅಟ್ಯಾಕ್’ನ ಗಂಭೀರತೆಯನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಎಷ್ಟು ಗಂಭೀರವಾಗಿದೆ ಎಂದು ರೇಟಿಂಗ್ ನೀಡುತ್ತಿದ್ದಾರೆ. ತಜ್ಞರ ಪ್ರಕಾರ ಇದು ಪ್ಯಾನಿಕ್ ಅಟಾಕ್ನಂತೆಯೇ ಇರುತ್ತದೆ. ಆಳವಾದ ನೋವಿನ ನಂತರದ ಭಾವನೆಯಾಗಿರುತ್ತದೆ.
ದುಃಖದ ದಾಳಿಯನ್ನು ಅರಿತುಕೊಳ್ಳುವುದು ಹೇಗೆ?
ವರ್ಜಿನಿಯದ ಕ್ರಿಸ್ಟೋಫರ್ ನ್ಯೂಪೋರ್ಟ್ ವಿಶ್ವವಿದ್ಯಾಲಯದ ಮನಶ್ಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಆಗಿರುವ ಶರ್ಮನ್ ಲೀ ನವೆಂಬರ್ನಲ್ಲಿ ಪ್ರಕಟಿಸಿದ ಅಧ್ಯಯನ ವರದಿಯೊಂದರ ಸಹಲೇಖಕರಾಗಿದ್ದಾರೆ. ಅವರು ಗ್ರೀಫ್ ಅಟ್ಯಾಕ್ ಎದುರಿಸಿದ 247 ವಯಸ್ಕರನ್ನು ಮಾತನಾಡಿಸಿ ಅಧ್ಯಯನ ನಡೆಸಿದ್ದಾರೆ. ಅಧ್ಯಯನದಲ್ಲಿ ತಿಳಿದಿರುವ ಪ್ರಕಾರ ಗ್ರೀಫ್ ಅಟ್ಯಾಕ್ ಮತ್ತು ಪ್ಯಾನಿಕ್ ಅಟ್ಯಾಕ್ ಬಹುತೇಕ ಒಂದೇ ರೀತಿ ಇರುತ್ತದೆ. ಯಾವುದೇ ಇತರ ವೇದನೆಯ ರೀತಿಯಲ್ಲಿಯೇ ಇದು ಮೂರು ರೀತಿಯಲ್ಲಿ ಬರುತ್ತದೆ. ಅವುಗಳೆಂದರೆ ಹಂಬಲ, ಹತಾಶೆ ಮತ್ತು ಸಮಂಜಸ ಚಿಂತನೆಯ ಕುಸಿತ.
ಗ್ರೀಫ್ ಅಟ್ಯಾಕ್ ಯಾವುದೇ ಸಮಯದಲ್ಲಿ ಬೇಕಾದರೂ ದಾಳಿ ಮಾಡಬಹುದು. ಪದೇಪದೆ ಪ್ರೀತಿ ಪಾತ್ರರ ನೆನಪನ್ನು ತರುವ ಮೂಲಕ ಅದರ ದಾಳಿಯಾಗಬಹುದು. ಆದರೆ, ಬಹುತೇಕ ಮನೆಯಲ್ಲಿ ಒಂಟಿಯಾಗಿ ಕುಳಿತಿದ್ದಾಗ ಅದು ದಾಳಿ ಮಾಡಬಹುದು. ಕಳೆದು ಹೋದ ಭಾವನೆ ಹಠಾತ್ ಆಗಿ ನುಗ್ಗಿ ವೇದನೆಯ ದಾಳಿಯಾಗಬಹುದು.
ದಿನಕ್ಕೆ ಒಂದೆರಡು ಬಾರಿ ಇಂತಹ ದಾಳಿ ಸಂಭವಿಸಬಹುದು. ಈ ದಾಳಿ ದೀರ್ಘಕಾಲ ಮುಂದುವರಿದಲ್ಲಿ ಮತ್ತು ಕಾಲಾನುಸಾರ ಕಡಿಮೆಯಾಗದೆ ಇದ್ದರೆ, ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು. ಹೆಚ್ಚು ಗಂಭೀರವಲ್ಲದ ಪ್ರಕರಣಗಳಲ್ಲಿ ಆ ಕ್ಷಣಕ್ಕೆ ವೇದನೆ ಸಹಿಸುವುದು ಕಠಿಣವಾಗಬಹುದು. ಆದರೆ ಬೇಗನೇ ಮರೆಯಾಗಿಬಿಡುತ್ತದೆ ಮತ್ತು ಧನಾತ್ಮಕ ಲಾಭವೂ ಸಿಗಬಹುದು.
ದುಃಖದ ದಾಳಿ ಉತ್ತಮ ಏಕೆ?
ಮನಶ್ಶಾಸ್ತ್ರಜ್ಞರು ಹೇಳುವ ಪ್ರಕಾರ, ದುಃಖದ ದಾಳಿ ಸಾಮಾನ್ಯ ವಿಚಾರ ಮತ್ತು ಚಿಕಿತ್ಸಾತ್ಮಕವಾಗಿ ಗುಣಪಡಿಸಬಹುದು. ಉದಾಹರಣೆಗೆ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವಿದ್ದರೆ, ಅವರು ಹೋಗಿರುವುದನ್ನು ಒಪ್ಪಿಕೊಳ್ಳಲು ವೇದನೆ ನೆರವಾಗುತ್ತದೆ. ಬಹುತೇಕರಿಗೆ ಪ್ಯಾನಿಕ್ ಅಟ್ಯಾಕ್ ನ ರೋಗಚಿಹ್ನೆಗಳು ಬಾರದೆ ಇದ್ದರೂ ಆಗಾಗ ನೆನಪಾಗಿ ವೇದನೆ ಕಾಡುತ್ತಿರುತ್ತದೆ. ಆ ಕ್ಷಣದಲ್ಲಿ ಹಠಾತ್ ವೇದನೆ ಕಂಡುಬರಬಹುದು. ಮತ್ತು ಆಗಾಗ್ಗೆ ಜೀವನದ ಪ್ರಮುಖ ಘಟ್ಟಗಳಲ್ಲಿ ವೇದನೆ ಮರುಕಳಿಸಬಹುದು.
ದುಃಖದ ದಾಳಿಯನ್ನು ತಡೆಯುವುದು ಹೇಗೆ?
ತಜ್ಞರ ಪ್ರಕಾರ ದುಃಖವನ್ನು ಸಹಿಸುವುದು ಕೆಲವೊಮ್ಮೆ ಪ್ಯಾನಿಕ್ ಅಟ್ಯಾಕ್ ನಂತೆಯೇ ಇರುತ್ತದೆ. ಹೊಟ್ಟೆಯಿಂದಲೇ ನಿಧಾನವಾಗಿ ಉಸಿರಾಡುವುದು ದುಃಖ ತಡೆದುಕೊಳ್ಳಲು ನೆರವಾಗಬಹುದು. ಪಾದಗಳನ್ನು ಪದೇಪದೆ ನೆಲಕ್ಕೆ ಹೊಡೆಯುವಂತಹ ದೈಹಿಕ ಚಲನೆಯಿಂದಲೂ ದುಃಖ ತಡೆಯಬಹುದು.
ಗ್ರೀಫ್ ಅಟ್ಯಾಕ್ ಆದ ಕೆಲವರು ಹೇಳುವ ಪ್ರಕಾರ ಯಾವುದೇ ಕ್ಷಣದಲ್ಲಿ ವಾಕರಿಕೆ ಬರುವ ಅನುಭವವಾಗುತ್ತದೆ. ಅಂತಹವರು ತಣ್ಣೀರಿಗೆ ಕೈಗಳನ್ನು ಹಿಡಿದು ನಿಂತಾಗ ದುಃಖ ಕಡಿಮೆಯಾದದ್ದಿದೆ ಎಂದು ವಿವರಿಸಿದ್ದಾರೆ.
ಇನ್ನು ಕೆಲವರು ಕಣ್ಣು ಕಂಪನವಾಗುವ ಅನುಭವವಾಗಿದ್ದಾಗಿ ಹೇಳಿದ್ದಾರೆ.
ಕೆಲವೊಮ್ಮೆ ಪ್ರೀತಿಪಾತ್ರರಿಗೆ ಸಂಬಂಧಿತ ವಸ್ತುಗಳನ್ನು ಕಂಡಾಗ ಗ್ರೀಫ್ ಅಟಾಕ್ ಆಗಬಹುದು. ಹಾಗೆ ವಸ್ತುಗಳು ಅಥವಾ ವಿಷಯಗಳನ್ನು ಕಂಡಾಗ ನೆನಪಾದಲ್ಲಿ ನಿಧಾನವಾಗಿ ಅದನ್ನು ನೋಡುವುದು ಅಭ್ಯಾಸವಾಗಿ ದುಃಖ ಕಡಿಮೆಯಾಗಲಿದೆ ಎನ್ನುತ್ತಾರೆ ತಜ್ಞರು.
ಕೃಪೆ: indianexpress.com







