Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 2.8 ಟ್ರಿಲಿಯನ್ ಪ್ಯಾರಾಮೀಟರ್ ತಲುಪಿದ...

2.8 ಟ್ರಿಲಿಯನ್ ಪ್ಯಾರಾಮೀಟರ್ ತಲುಪಿದ ಚೀನಾದ ಮೊದಲ ಓಪನ್ AI ಮಾಡೆಲ್ ಆಗಿರುವ Kimi K3 ಬಗ್ಗೆ ಗೊತ್ತೆ?

ವಾರ್ತಾಭಾರತಿವಾರ್ತಾಭಾರತಿ20 July 2026 6:35 PM IST
share
2.8 ಟ್ರಿಲಿಯನ್ ಪ್ಯಾರಾಮೀಟರ್ ತಲುಪಿದ ಚೀನಾದ ಮೊದಲ ಓಪನ್ AI ಮಾಡೆಲ್ ಆಗಿರುವ Kimi K3 ಬಗ್ಗೆ ಗೊತ್ತೆ?

Kimi K3ನ ಒಟ್ಟು ಕಾರ್ಯಕ್ಷಮತೆ ಅಮೆರಿಕದ Claude Fable 5 ಮತ್ತು GPT 5.6 Sol ನಂತಹ ಶಕ್ತಿಯುತ ಮಾಡೆಲ್‌ಗಳಿಂದ ಹಿಂದುಳಿದಿದೆ ಎಂದು ಒಪ್ಪಿಕೊಂಡರೂ ಕೋಡಿಂಗ್, ಜ್ಞಾನದ ಕೆಲಸ ಮತ್ತು ಮಲ್ಟಿ ಮೀಡಿಯ ಸೃಷ್ಟಿಯ ಸಾಮರ್ಥ್ಯವನ್ನು ಪ್ರಶಂಸಿಸಿದೆ.

ಚೀನಾದ AI ಕಂಪೆನಿಯಾದ Moonshot AI ತನ್ನ Kimi K3 ಮಾಡೆಲ್ 2.8 ಟ್ರಿಲಿಯನ್ ಪ್ಯಾರಾಮೀಟರ್‌ಗಳನ್ನು ತಲುಪಿದ ಮೊದಲ ಓಪನ್ ಸೋರ್ಸ್ ಮಾಡೆಲ್ ಎಂದು ಹೇಳಿದೆ. Kimi K3 ಮಾಡೆಲ್ 1 ಮಿಲಿಯನ್ ಟೋಕನ್ ಕಂಟೆಕ್ಸ್ಟ್ ವಿಂಡೋವನ್ನು ಸಹ ಹೊಂದಿದ್ದು, Kimi K2 ಮಾಡೆಲ್‌ಗೆ ಹೋಲಿಸಿದರೆ Kimi K3 ಮಾಡೆಲ್ ಒಟ್ಟು ಸ್ಕೇಲಿಂಗ್ ದಕ್ಷತೆಯಲ್ಲಿ 2.5× ಸುಧಾರಣೆ ನೀಡಿದೆ ಎಂದು ಕಂಪೆನಿ ಹೇಳಿದೆ.

AI ಮಾಡೆಲ್‌ಗಳಲ್ಲಿ ‘ಪ್ಯಾರಾಮೀಟರ್‌ಗಳು’ ಎಂದರೆ ಮಾಡೆಲ್ ತನ್ನ ಇನ್‌ಪುಟ್‌ಗಳನ್ನು ಔಟ್‌ಪುಟ್‌ಗಳಿಗೆ ನಕ್ಷೆ ಮಾಡಲು ತರಬೇತಿಯ ಸಮಯದಲ್ಲಿ ಕಲಿಯುವ ಆಂತರಿಕ ಮೌಲ್ಯಗಳು. ಮಾಡೆಲ್ ಡೇಟಾವನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಮತ್ತು ಅದರ ನಿಖರತೆ, ನಡವಳಿಕೆ ಮತ್ತು ಕಾರ್ಯಕ್ಷಮತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಅವು ನಿರ್ಧರಿಸುತ್ತವೆ.

“Kimi K3 ಮಾಡೆಲ್ ನಮ್ಮ ಕಿಮಿ ಡೆಲ್ಟಾ ಅಟೆನ್ಷನ್ ಮತ್ತು ಅಟೆನ್ಷನ್ ರೆಸಿಡ್ಯುವಲ್ಸ್‌ಗಳ ಮೇಲೆ ನಿರ್ಮಿಸಲಾದ 2.8T- ಪ್ಯಾರಾಮೀಟರ್ ಮಾಡೆಲ್ ಆಗಿದ್ದು, ಸ್ಥಳೀಯ ವಿಷನ್ ಕೆಪೇಬಿಲಿಟೀಸ್ ಮತ್ತು 1 ಮಿಲಿಯನ್ ಟೋಕನ್ ಕಂಟೆಕ್ಸ್ಟ್ ವಿಂಡೋವನ್ನು ಹೊಂದಿದೆ. ಇದು ಜಗತ್ತಿನ ಮೊದಲ ಓಪನ್ 3T- ಕ್ಲಾಸ್ ಮಾಡೆಲ್ ಆಗಿದ್ದು, ಲಾಂಗ್-ಹಾರಿಜಾನ್ ಕೋಡಿಂಗ್, ಜ್ಞಾನದ ಕೆಲಸ ಮತ್ತು ರೀಸನಿಂಗ್‌ನಲ್ಲಿ ಫ್ರಂಟಿಯರ್ ಇಂಟೆಲಿಜೆನ್ಸ್‌ಗಾಗಿ (ಇಂದು ಲಭ್ಯವಿರುವ ಅತಿ ಶಕ್ತಿಯುತ ಬುದ್ಧಿಮತ್ತೆ) ವಿನ್ಯಾಸಗೊಳಿಸಲಾಗಿದೆ” ಎಂದು Moonshot AI ತನ್ನ ಬ್ಲಾಗ್ ಬರಹದಲ್ಲಿ ಹೇಳಿದೆ.

Kimi K3ನ ಒಟ್ಟು ಕಾರ್ಯಕ್ಷಮತೆ ಅಮೆರಿಕದ Claude Fable 5 ಮತ್ತು GPT 5.6 Sol ನಂತಹ ಶಕ್ತಿಯುತ ಪ್ರೊಪ್ರೈಟರಿ ಮಾಡೆಲ್‌ಗಳಿಂದ ಹಿಂದುಳಿದಿದೆ ಎನ್ನುವುದನ್ನು ಸ್ಟಾರ್ಟಪ್ ಒಪ್ಪಿಕೊಂಡಿದೆ. ಆದರೆ, ಅದು ತನ್ನ ಮೌಲ್ಯಮಾಪನ ಸೂಟ್‌ನಲ್ಲಿ ಫ್ರಂಟಿಯರ್ ಲೆವೆಲ್ ಕಾರ್ಯಕ್ಷಮತೆ ನೀಡಿದೆ ಮತ್ತು ಅನೇಕ ಮಾನದಂಡಗಳಲ್ಲಿ ಅಮೆರಿಕದ ಹಳೆಯ ಪ್ರತಿಸ್ಪರ್ಧಿ ಮಾಡೆಲ್‌ಗಳನ್ನು ಮೀರಿಸಿದೆ.

ಈ ನಡುವೆ, ಅಮೆರಿಕನ್ AI ಕಂಪೆನಿಗಳು ಮತ್ತು ತಂತ್ರಜ್ಞರು ಚೀನೀ AI ಕಂಪೆನಿಗಳು ಸ್ಪರ್ಧಾತ್ಮಕ ಫ್ರಂಟಿಯರ್ ಮಾಡೆಲ್‌ಗಳನ್ನು ಕಡಿಮೆ ದರದಲ್ಲಿ ಬಿಡುಗಡೆ ಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿವೆ.

ಹೀಗೆ ಕಡಿಮೆ ವೆಚ್ಚದಲ್ಲಿ AI ಮಾಡೆಲ್‌ಗಳನ್ನು ನಿರ್ಮಿಸಲು ಮತ್ತು ಹೆಚ್ಚಿನ ಬಳಕೆದಾರರನ್ನು ಸೆಳೆಯಲು ಚೀನೀ AI ಕಂಪೆನಿಗಳು ತಮ್ಮ ಡೇಟಾವನ್ನು “ಡಿಸ್ಟಿಲ್‌” (ಭಟ್ಟಿ ಇಳಿಸುವುದು) ಮಾಡುತ್ತಿವೆ ಎಂದು ಅನೇಕ ಅಮೆರಿಕದ ಕಂಪೆನಿಗಳು ಅನುಮಾನಿಸಿವೆ.

DeepSeek, Moonshot, ಮತ್ತು MiniMax ನಿಂದ ತಮ್ಮದೇ ಆದ ಮಾಡೆಲ್‌ಗಳನ್ನು ಸುಧಾರಿಸಲು “Claude ನ ಸಾಮರ್ಥ್ಯಗಳನ್ನು ಅಕ್ರಮವಾಗಿ ಹೊರತೆಗೆಯಲು” ಕೈಗಾರಿಕಾ ಪ್ರಮಾಣದ ಅಭಿಯಾನಗಳನ್ನು ಗುರುತಿಸಿರುವುದಾಗಿ Anthropic ಹೇಳಿದೆ.

“ಈ ಪ್ರಯೋಗಾಲಯಗಳು ನಮ್ಮ ಸೇವಾ ನಿಯಮಗಳು ಮತ್ತು ಪ್ರಾದೇಶಿಕ ಪ್ರವೇಶ ನಿರ್ಬಂಧಗಳನ್ನು ಉಲ್ಲಂಘಿಸಿ ಸುಮಾರು 24,000 ವಂಚನೆಯ ಖಾತೆಗಳ ಮೂಲಕ Claude ಜೊತೆಗೆ 16 ಮಿಲಿಯನ್‌ಗಿಂತಲೂ ಹೆಚ್ಚು ವಿನಿಯಮಗಳನ್ನು ಸೃಷ್ಟಿಸಿವೆ” ಎಂದು Anthropic ಫೆಬ್ರವರಿಯಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ಹೇಳಿದೆ.

Moonshot AI ವೆಬ್‌ಸೈಟ್‌ನಲ್ಲಿ ತನ್ನ ಸಂಶೋಧನಾ ತಂಡವು AGI (Artificial General Intelligence) ಕಡೆಗೆ ಕೆಲಸ ಮಾಡಿದೆ ಎಂದು ಹೇಳಿಕೊಂಡಿದ್ದು, ಜಾಗತಿಕ ಓಪನ್ ಸೋರ್ಸ್ ಸಮುದಾಯದೊಂದಿಗೆ ಇತ್ತೀಚೆಗಿನ ಸಂಶೋಧನೆಯನ್ನು ಹಂಚಿಕೊಂಡಿದೆ.

ಅಮೆರಿಕದ AI ದೈತ್ಯ ಕಂಪೆನಿಗಳು ಏರುತ್ತಿರುವ ಟೋಕನ್ ಬೆಲೆಗಳು ಮತ್ತು ಭಾರೀ ಹೂಡಿಕೆಗಳನ್ನು ಸಮರ್ಥಿಸುವ ಭರದಲ್ಲಿ ಮುಕ್ತವಲ್ಲದ, ಫ್ಲ್ಯಾಗ್‌ಶಿಪ್ ಮಾಡೆಲ್‌ಗಳ ಕಡೆಗೆ ಗಮನ ಹರಿಸಿರುವಾಗ, ಚೀನೀ ಕಂಪನಿಗಳು ಪ್ರೊಪ್ರೈಟರಿ ಹಕ್ಕುಗಳ ಮೇಲೆ ಕಡಿಮೆ ಗಮನಹರಿಸಿ ಕಸ್ಟಮೈಸ್ ಮಾಡಬಹುದಾದ ಓಪನ್‌-ವೈಟ್ ಮಾಡೆಲ್‌ಗಳ ಸರಣಿಯನ್ನು ವಿತರಿಸಿವೆ.

Moonshot AI ಪೂರ್ಣ ಮಾಡೆಲ್ ವೈಟ್‌ಗಳನ್ನು ಜುಲೈ 27ರೊಳಗೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಈ ಕಂಪನಿಯು ಚೀನಾದ ತಂತ್ರಜ್ಞಾನ ದೈತ್ಯರಾದ ಅಲಿಬಾಬ ಮತ್ತು ಟೆನ್ಸೆಂಟ್‌ನಿಂದ ಬೆಂಬಲಿತವಾಗಿದೆ.

ಮಾಹಿತಿ ಕೃಪೆ: ದಿ ಹಿಂದೂ

Tags

AIKimi K3
share
ವಾರ್ತಾಭಾರತಿ
ವಾರ್ತಾಭಾರತಿ
Next Story
X