Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸಕ್ಕರೆ ದುಬಾರಿಯಾಗಲು ನೈಜ ಕಾರಣವೇನು?

ಸಕ್ಕರೆ ದುಬಾರಿಯಾಗಲು ನೈಜ ಕಾರಣವೇನು?

ವಿನಯ್ ಕೆ.ವಿನಯ್ ಕೆ.25 Aug 2026 10:51 AM IST
share
ಸಕ್ಕರೆ ದುಬಾರಿಯಾಗಲು ನೈಜ ಕಾರಣವೇನು?

ಸಕ್ಕರೆ ಬೆಲೆಗಳು ಕುಸಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಪೂರೈಕೆಯ ಕೊರತೆಯಿಲ್ಲ ಎಂದು ಉದ್ಯಮದ ಜನರೇ ಹೇಳುತ್ತಿದ್ದಾರೆ. ಸರಕಾರಕ್ಕೆ ಸಕ್ಕರೆ ಲಭ್ಯತೆ ಮತ್ತು ಪೂರೈಕೆ ಬಗ್ಗೆ ನಿಖರ ಮಾಹಿತಿಯ ಕೊರತೆಯಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಸರಕಾರವನ್ನು ದಾರಿ ತಪ್ಪಿಸಲಾಗುತ್ತಿದೆಯೇ? ಸರಕಾರದ ಮೂರ್ಖತನದಿಂದಾಗಿ ಸಕ್ಕರೆ ದುಬಾರಿಯಾಗಿದೆಯೇ ಎಂಬ ಪ್ರಶ್ನೆಗಳೂ ಎದ್ದಿವೆ. ನಿಖರವಾದ ಡೇಟಾವನ್ನು ತಡೆಹಿಡಿಯುತ್ತಿರುವ ಜನರು ಯಾರು? ಎಥೆನಾಲ್ ಉತ್ಪಾದನೆಗೆ ಕಬ್ಬಿನ ಬಳಕೆ ಹೆಚ್ಚಾಗಿದೆಯೇ ಎಂದು ಯಾರಾದರೂ ನಿಖರವಾಗಿ ಹೇಳುತ್ತಾರೆಯೆ?

ಸಕ್ಕರೆ ರೋಗಕ್ಕೆ ಕಾರಣವಾಗುತ್ತದೆ ಎಂದೆಲ್ಲ ಸಚಿವರುಗಳು ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಸಕ್ಕರೆ ಜೀವನದ ಅತ್ಯಗತ್ಯ ಭಾಗವಾಗಿದೆ. ಅದು ದುಬಾರಿಯಾದರೆ, ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ರೋಗದ ಹೆಸರಿನಲ್ಲಿ ಹಣದುಬ್ಬರವನ್ನು ಸಮರ್ಥಿಸುವವರ ಉದ್ದೇಶವೇನು? ಈ ವಿಷಯದಲ್ಲಿ ಸರಕಾರ ಸ್ಪಷ್ಟವಾಗಿ ವಿವರಿಸಬೇಕು. ಸಕ್ಕರೆ ಕಾರ್ಖಾನೆ ಮಾಲಕರು ಸ್ಟಾಕ್ ಕೊರತೆ ಇಲ್ಲ ಎಂದು ಹೇಳುತ್ತಿದ್ದರೆ, ಬೆಲೆಗಳು ಏಕೆ ಏರುತ್ತಿವೆ?

ಒಂದೇ ವರ್ಷದಲ್ಲಿ ಸಕ್ಕರೆಯ ಚಿಲ್ಲರೆ ಬೆಲೆ ಶೇ. 53ರಷ್ಟು ಏರಿಕೆಯಾಗಿದೆ. ಹಬ್ಬಗಳ ಕಾರಣದಿಂದಾಗಿ ಆಗಸ್ಟ್‌ನಲ್ಲಿ ಸಕ್ಕರೆ ಬೆಲೆ ಸಾಮಾನ್ಯವಾಗಿ ಏರುತ್ತದೆ. ಆದರೆ ಈ ಬಾರಿ ಸಕ್ಕರೆ ಬೆಲೆಗಳು ದಾಖಲೆಯ ಮಟ್ಟ ತಲುಪಿವೆ.

ಇ20 ಅನ್ನು ಕಡ್ಡಾಯಗೊಳಿಸುವ ನಿರ್ಧಾರ ಒಂದೆಡೆ ಜನರ ಜೇಬುಗಳನ್ನು ಖಾಲಿ ಮಾಡುತ್ತಿದೆ. ಅದರ ನಡುವೆಯೇ ಅದು ಸಕ್ಕರೆ ಬೆಲೆ ಮೇಲೂ ಪರಿಣಾಮ ಬೀರಿದೆಯೆ?

ಹಣದುಬ್ಬರ ಪ್ರತಿದಿನ ತಮ್ಮ ಮೇಲೆ ಹೇಗೆ ದಾಳಿ ಮಾಡುತ್ತಿದೆ ಎಂಬುದನ್ನು ಸಾಮಾನ್ಯ ಜನರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗ ಪ್ರಶ್ನೆ, ಸರಕಾರದ ಮೂರ್ಖತನದಿಂದಾಗಿ ಸಕ್ಕರೆ ದುಬಾರಿಯಾಗಿದ್ದಲ್ಲಿ, ಸಾರ್ವಜನಿಕರು ಏಕೆ ಬೆಲೆ ತೆರಬೇಕು ಎಂಬುದು.

ಭಾರತ ವಿಶ್ವದಲ್ಲೇ ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವಾಗಿದ್ದು, ಅತಿ ಹೆಚ್ಚು ಸಕ್ಕರೆಯನ್ನು ಬಳಸುತ್ತದೆ. ಆದರೆ ವರದಿಗಳ ಪ್ರಕಾರ, ಮಳೆ ವೈಫಲ್ಯದಿಂದಾಗಿ ಭಾರತದಲ್ಲಿ ಸಕ್ಕರೆ ಉತ್ಪಾದನೆ ಕಡಿಮೆಯಾಗುತ್ತಿದೆ. ಮತ್ತೊಂದೆಡೆ, ಕಬ್ಬಿನ ಉತ್ಪಾದನೆಯ ಶೇ. 10 ಅನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತಿದೆ. ಈ ಕಾರಣದಿಂದಾಗಿ, ಮುಂದಿನ ಮೂರು ವರ್ಷಗಳವರೆಗೆ ಭಾರತ ರಫ್ತು ಮಾಡಲು ಸಾಧ್ಯವಾಗದು.

ಈಗ, ಅಕ್ಟೋಬರ್‌ನಿಂದ ಸರಕಾರ ಎಥೆನಾಲ್‌ಗೆ ಕಬ್ಬಿನ ಬಳಕೆಯನ್ನು ನಿಷೇಧಿಸಬಹುದು ಎಂಬ ವರದಿಗಳು ಬರುತ್ತಿವೆ.

ಈಗಾಗಲೇ ರಫ್ತು ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿದೆ ಮತ್ತು ಈ ವರ್ಷ ರಫ್ತು ಇಲ್ಲವಾಗಬಹುದು ಎನ್ನಲಾಗಿದೆ.

ಮೇ 13ರಂದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (DGFT), ಸೆಪ್ಟಂಬರ್ 30ರವರೆಗೆ ಸಕ್ಕರೆ ರಫ್ತನ್ನು ನಿರ್ಬಂಧಿಸಿ ಆದೇಶ ಹೊರಡಿಸಿತು. ಅಂದರೆ, ಬಿಕ್ಕಟ್ಟು ಎದುರಾಗುವ ಸುಳಿವು ಮೇ ತಿಂಗಳಲ್ಲಿಯೇ ಇತ್ತು. ಹಾಗಿರುವಾಗ, ಸರಕಾರ ಮೇ ಮತ್ತು ಜುಲೈ ನಡುವೆ ಏನು ಮಾಡಿತು?

ಈ ಹಿಂದೆ ಸರಕಾರ ದೇಶದ ರೈತರಿಗೆ ಸಕ್ಕರೆ ರಫ್ತಿನಿಂದ ಲಾಭವಾಗುವಂತೆ ರಫ್ತು ಸುಂಕಗಳನ್ನು ತೆಗೆದುಹಾಕಿದೆ ಎಂದು ಹೆಮ್ಮೆಪಡಲು ಪ್ರಾರಂಭಿಸಿತು. ದೇಶದ ರೈತರಿಗೆ ಅದರಿಂದ ಎಷ್ಟು ಲಾಭವಾಯಿತು? ಈಗ, ಆಮದು ಸುಂಕಗಳನ್ನು ತೆಗೆದುಹಾಕುತ್ತಿದ್ದಾರೆ. ಹಾಗಾದರೆ, ಅದರಿಂದ ರೈತರಿಗೆ ಕೂಡ ಪ್ರಯೋಜನವಾಗುತ್ತದೆಯೇ?

ವ್ಯವಸ್ಥೆಯಲ್ಲಿರುವವರಿಗೆ ತಪ್ಪು ಮಾಹಿತಿಯನ್ನು ನೀಡಲಾಗುತ್ತಿದೆ ಮತ್ತು ಸಕ್ಕರೆ ಉತ್ಪಾದನೆ ಕುಸಿತದ ಹೊರತಾಗಿಯೂ ಸರಕಾರ ರಫ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.

ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಪ್ರಹ್ಲಾದ್ ಜೋಶಿ ಅವರು ಸಕ್ಕರೆ ಉದ್ಯಮದವರು ರಫ್ತು ವಿನಾಯಿತಿ ಕೋರಿದ್ದಾಗಿ ಹೇಳಿದರು.

ದೇಶದ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರು ಕಳೆದ ವರ್ಷ ಆಗಸ್ಟ್‌ನಿಂದ ರಫ್ತುಗಳನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಮಾಹಿತಿಗಳಿವೆ. ಈ ವರ್ಷದ ಆರಂಭದಿಂದಲೂ ಎಚ್ಚರಿಕೆಯ ಗಂಟೆಗಳು ಮೊಳಗುತ್ತಿವೆ ಎಂದು ಸಕ್ಕರೆ ಉದ್ಯಮದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂಬ ವರದಿಯಿದೆ.

ಆದರೆ ಫೆಬ್ರವರಿಯಲ್ಲಿ ಸರಕಾರ ಸಕ್ಕರೆಯ ಹೆಚ್ಚುವರಿ ರಫ್ತಿಗೆ ಅನುಮತಿ ಕೊಟ್ಟಿತು. ಮಾರ್ಚ್‌ನಿಂದ ಸಕ್ಕರೆ ಕಾರ್ಖಾನೆಗಳು ತಮ್ಮ ಗುರಿ ಪೂರೈಸಲು ವಿಫಲವಾಗುತ್ತಿವೆ ಎಂಬ ವರದಿಗಳು ಬರತೊಡಗಿದವು. ಅಂದರೆ, ಕಬ್ಬು ಪೂರೈಕೆಯಲ್ಲಿ ವ್ಯತ್ಯಯ ಆಗಲೇ ಪ್ರಾರಂಭವಾಗಿತ್ತು. ಪೂರೈಕೆ ಸಮರ್ಪಕವಾಗಿಲ್ಲದಿದ್ದರೂ, ವ್ಯವಸ್ಥೆಯನ್ನು ತಪ್ಪುದಾರಿಗೆಳೆಯಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವರ್ಷದ ಮಾರ್ಚ್‌ನಲ್ಲಿ ಸಕ್ಕರೆ ಬೆಲೆಗಳು ಏರಿಕೆಯಾಗಲು ಇದೇ ಕಾರಣ.

ಮಾರ್ಚ್‌ನಲ್ಲಿ ಸಕ್ಕರೆ ಕೆಜಿಗೆ ರೂ. 41ಕ್ಕೆ ಏರಿತು ಮತ್ತು ಈಗ ಕೆಜಿಗೆ 70 ರೂ. ಆಗಿದೆ. ಹಾಗಾದರೆ, ಪೂರೈಕೆಯಲ್ಲಿನ ವ್ಯತ್ಯಯದ ಹೊರತಾಗಿಯೂ, ರಫ್ತು ನಿರ್ಧಾರವನ್ನು ಯಾರ ಲಾಭಕ್ಕಾಗಿ ತೆಗೆದುಕೊಳ್ಳಲಾಗುತ್ತಿತ್ತು?

ಐದು ತಿಂಗಳಿನಿಂದ ಇಡೀ ದೇಶ ಎಥೆನಾಲ್ ಬಿಕ್ಕಟ್ಟಿನಲ್ಲಿ ತತ್ತರಿಸುತ್ತಿದೆ. ಇ20 ಕುರಿತು ನೂರಾರು ಕಥೆಗಳು ಹರಡಿವೆ.

ಇದು ಎಷ್ಟು ಹಣವನ್ನು ಉಳಿಸುತ್ತಿದೆ ಮತ್ತು ಸಾರ್ವಜನಿಕರು ಇ20ಗೆ ಎಷ್ಟು ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಸರಕಾರ ಬಹಿರಂಗಪಡಿಸಬೇಕು.

ಜುಲೈ 10ರ PIB ವರದಿ ಪ್ರಕಾರ, 2014-15 ರಿಂದ 31.6 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾ ತೈಲ ಆಮದು ಕಡಿತದಿಂದಾಗಿ 1.97 ಲಕ್ಷ ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿದೆ. ನೋಡುವಾಗ ಇದು ಭಾರೀ ದೊಡ್ಡ ಮೊತ್ತವಾಗಿ ಕಾಣಿಸುತ್ತದೆ.

ಭಾರತ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಅನಂತ್ ನಾಗೇಶ್ವರನ್ ಅವರು, ಭಾರತದ ಕಚ್ಚಾ ತೈಲ ಆಮದು ಬಿಲ್ ಕೇವಲ ಶೇ. 3ರಿಂದ 4ರಷ್ಟು ಬದಲಾಗಿದೆ ಎನ್ನುತ್ತಿದ್ದಾರೆ. ಅಂದರೆ, ಗಮನಾರ್ಹ ಬದಲಾವಣೆಯೇನೂ ಆಗಿಲ್ಲ.

ಪಶು ಆಹಾರ ಮತ್ತು ಕೋಳಿ ಆಹಾರ ತಯಾರಿಸಲು ಬಳಸಲಾಗುವ ಹಾಳಾದ ಧಾನ್ಯಗಳನ್ನು ಎಥೆನಾಲ್ ಉತ್ಪಾದನೆಯಲ್ಲಿ ಬಳಸುತ್ತಿದ್ದಂತೆ, ಪಶು ಆಹಾರ ಹೆಚ್ಚು ದುಬಾರಿಯಾಯಿತು. ಇದು ಹಾಲು ಮತ್ತು ಮೊಟ್ಟೆಗಳ ಬೆಲೆಯಲ್ಲಿ ಶೇ. 5ರಿಂದ 10ರಷ್ಟು ಹೆಚ್ಚಳಕ್ಕೆ ಕಾರಣವಾಯಿತು. ಸರಕಾರದ ನೀತಿಗಳು ಎಲ್ಲ ಕಡೆಯಿಂದಲೂ ಜನಸಾಮಾನ್ಯರ ಜೇಬನ್ನು ತೂತು ಮಾಡುತ್ತಿವೆ.

ಕೇವಲ ಶೇ. 33 ಎಥೆನಾಲ್ ಅನ್ನು ಕಬ್ಬು ಮತ್ತು ಅದರ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಶೇ. 67 ಅನ್ನು ಜೋಳ, ನುಚ್ಚಕ್ಕಿ ಮತ್ತು ಹಾಳಾದ ಧಾನ್ಯಗಳಿಂದ ತಯಾರಿಸಲಾಗುತ್ತದೆ.

ಸಕ್ಕರೆ ಉತ್ಪಾದನೆಗೆ ಸೂಕ್ತವಾದ ಕಬ್ಬನ್ನು ಎಥೆನಾಲ್ ಉತ್ಪಾದನೆಗೆ ಬಳಸಿದಾಗ, ಸಕ್ಕರೆ ಲಭ್ಯತೆ ಮೇಲೆ ಪರಿಣಾಮವಾಗುತ್ತದೆ ಎಂಬುದು ಸ್ಪಷ್ಟ. ವಿವಿಧ ವರದಿಗಳು ಸಕ್ಕರೆ ಬೆಲೆ ಏರಿಕೆಗೆ ಎಥೆನಾಲ್‌ಗೆ ಕಬ್ಬಿನ ಪೂರೈಕೆ ಹೆಚ್ಚಳವೇ ಕಾರಣ ಎಂದು ಹೇಳುತ್ತಿವೆ.

ಆದರೆ, ಎಥೆನಾಲ್ ಉತ್ಪಾದನೆಗೆ ಕಬ್ಬಿನ ಬಳಕೆ ಹೆಚ್ಚಾಗಿದ್ದರಿಂದ ಸಕ್ಕರೆ ಕೊರತೆಯಾಗಿದೆ ಎಂಬುದು ಸುಳ್ಳು ಎಂದು ಗ್ರಾಹಕ ಸಚಿವಾಲಯ ಹೇಳಿದೆ.

ಆಗಸ್ಟ್ 20ರ ರಾತ್ರಿ ಸರಕಾರ ಯಾವುದೇ ಸುಂಕವಿಲ್ಲದೆ 10 ಲಕ್ಷ ಟನ್ ಸಕ್ಕರೆ ಆಮದು ಮಾಡಿಕೊಳ್ಳಲು ನಿರ್ಧರಿಸಬೇಕಾಯಿತು.

ಆಗಸ್ಟ್ 21ರ ಬೆಳಗ್ಗೆ ಸಕ್ಕರೆ ಉತ್ಪಾದಿಸುವ ಕಂಪೆನಿಗಳ ಷೇರು ಬೆಲೆಗಳು ಶೇ. 5ರಷ್ಟು ಕುಸಿದವು.

ಸರಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಸಾಮಾನ್ಯ ಹೂಡಿಕೆದಾರರಿಗೆ ಒಂದೇ ಬಾರಿಗೆ ನಷ್ಟ ಉಂಟುಮಾಡುತ್ತಿವೆ.

ವಿವಿಧ ರಾಜ್ಯಗಳ ಮಂತ್ರಿಗಳಿಗೆ ಏನೂ ತಿಳಿದಿಲ್ಲ. ಅವರು ದಾಸ್ತಾನುದಾರರಿಗೆ ಎಚ್ಚರಿಕೆ ನೀಡಲು ಪ್ರಾರಂಭಿಸುತ್ತಾರೆ ಮತ್ತು ಇದರಿಂದಾಗಿ, ಸಚಿವರಿಗೆ ಎಲ್ಲ ಗೊತ್ತಿದೆ ಎಂದು ಜನರು ನಂಬುತ್ತಾರೆ. ಹಾಗಾದರೆ, ದಾಸ್ತಾನುದಾರರು ಎಷ್ಟು ದಾಸ್ತಾನು ಮಾಡಿದ್ದಾರೆ ಮತ್ತು ದಾಸ್ತಾನು ಮಾಡಿದ್ದರೆ, ಆಗ ಸಚಿವರು ಏನು ಮಾಡುತ್ತಿದ್ದರು?

ಭಾರತದ ದುಡಿಯುವ ಜನಸಂಖ್ಯೆ ಹೆಚ್ಚುತ್ತಿದೆ, ಆದರೆ ಮನೆಯ ಉಳಿತಾಯ ಎರಡು ದಶಕಗಳಲ್ಲೇ ಕನಿಷ್ಠ ಮಟ್ಟದಲ್ಲಿದೆ.

ಇಷ್ಟು ಕಠಿಣ ಜೀವನದ ನಂತರವೂ ತಮ್ಮ ಬಳಿ ಯಾವುದೇ ಉಳಿತಾಯ ಏಕೆ ಇಲ್ಲ ಎಂದು ಜನರಿಗೆ ಅರ್ಥವಾಗುತ್ತಿಲ್ಲ?

ತೆರಿಗೆ ಪಾವತಿಸಲಾಗುತ್ತಿದೆ. ಅವರ ಜೀವನ ಏಕೆ ಸುಧಾರಿಸುತ್ತಿಲ್ಲ? ಅವ್ಯವಸ್ಥೆ ಮತ್ತು ಭೀತಿಯ ಸ್ಥಿತಿ ಇದೆ.

ಜನರು ಅದನ್ನು ಅರ್ಥಮಾಡಿಕೊಳ್ಳಲು ಇನ್ನೂ ಎಷ್ಟು ವರ್ಷಗಳು ಬೇಕಾಗುತ್ತದೆ ಎಂದು ಊಹಿಸುವುದು ಕಷ್ಟ.

ಧರ್ಮ ಮತ್ತು ರಾಷ್ಟ್ರದ ರಾಜಕೀಯ ಪ್ರಬಲಗೊಂಡಿದೆ.

ಆದರೆ ನಾಗರಿಕರ ಸ್ಥಿತಿ ಹದಗೆಟ್ಟಿದೆ. ಈಗ ಸರಕಾರ ಸಕ್ಕರೆಯ ಬೆಲೆ ಏರಿಕೆಯನ್ನು ನಿಲ್ಲಿಸುತ್ತದೆ ಎಂದು ನಂಬಬಹುದೆ?

Tags

sugar becoming expensive
share
ವಿನಯ್ ಕೆ.
ವಿನಯ್ ಕೆ.
Next Story
X