Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮುಸ್ಲಿಮರ ತಲೆಗೇಕೆ ಜೆಡಿಎಸ್‌ನ...

ಮುಸ್ಲಿಮರ ತಲೆಗೇಕೆ ಜೆಡಿಎಸ್‌ನ ಜಾತ್ಯತೀತತೆಯ ಹೊರೆ?

ಜೆಡಿಎಸ್‌ನ ಒಕ್ಕಲಿಗ, ಲಿಂಗಾಯತ ನಾಯಕರನ್ನು ಯಾರೂ ಪ್ರಶ್ನಿಸುತ್ತಿಲ್ಲ ಯಾಕೆ?

ಆರ್. ಕುಮಾರ್ಆರ್. ಕುಮಾರ್1 Oct 2023 9:37 AM IST
share
ಮುಸ್ಲಿಮರ ತಲೆಗೇಕೆ ಜೆಡಿಎಸ್‌ನ ಜಾತ್ಯತೀತತೆಯ ಹೊರೆ?
ಈಗ ಕುಮಾರಸ್ವಾಮಿ ಅವರ ಪಕ್ಷದಿಂದ ಕೇವಲ 19 ಎಂಎಲ್‌ಎಗಳು ಗೆದ್ದಿದ್ದಾರೆ. ಅದಕ್ಕೆ ಮುಸ್ಲಿಮರು ಕಾರಣ. ಮುಸ್ಲಿಮರು ಅವರಿಗೆ ಕೈಕೊಟ್ಟರು ಎಂದು ಬೇಜಾರಾಗಿ ಅವರು ಬಿಜೆಪಿ ಜೊತೆ ಹೋಗುತ್ತಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಾ ಇದೆ. 2004ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ 58 ಎಂಎಲ್‌ಎಗಳು ಗೆದ್ದು ಬಂದಿದ್ದರು. ಸಾಕಷ್ಟು ಪ್ರಮಾಣದಲ್ಲಿ ಮುಸ್ಲಿಮರು ಬೆಂಬಲ ನೀಡಿದ್ದರಿಂದಲೇ ಜೆಡಿಎಸ್ ಅಷ್ಟು ಸ್ಥಾನ ಪಡೆಯಲು ಸಾಧ್ಯವಾಗಿತ್ತು. ಆದರೆ ಅಷ್ಟು ಸ್ಥಾನ ಸಿಕ್ಕಿದಾಗಲೂ 2006ರಲ್ಲಿ ಕುಮಾರಸ್ವಾಮಿಯವರು ಯಾವುದೇ ಮುಲಾಜಿಲ್ಲದೆ ಬಿಜೆಪಿ ಜೊತೆ ಹೋಗಿ ಸೇರಿಕೊಂಡರು. ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಅದೇ ಮೊದಲ ಬಾರಿ ಅಧಿಕಾರ ಕೊಡಿಸಿದರು. ಆಗ ಮುಸ್ಲಿಮರು ನಮಗೆ ಸಾಕಷ್ಟು ಬೆಂಬಲ ನೀಡಿದ್ದಾರೆ, ನಾವು ಬಿಜೆಪಿ ಜೊತೆ ಸೇರುವುದು ಸರಿ ಅಲ್ಲ ಎಂದು ಎಚ್‌ಡಿಕೆಯವರು ಏನಾದರೂ ಹಿಂದೆ ಸರಿದಿದ್ದಾರೆಯೇ? ಇಲ್ಲವಲ್ಲ?

ಜೆಡಿಎಸ್ ಬಿಜೆಪಿ ಜೊತೆ ದೋಸ್ತಿ ಮಾಡಿಕೊಂಡು ಎನ್‌ಡಿಎ ಸೇರಿದೆ. ಅದು ಬಿಜೆಪಿ ಜೊತೆ ಸೇರುತ್ತಾ ಇರುವುದು ಇದೇ ಮೊದಲೇನಲ್ಲ. ಈಗ ಮತ್ತೆ ಅದು ಬಿಜೆಪಿ ಜೊತೆ ಸೇರಿಕೊಂಡಾಗ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪ್ರದರ್ಶಿಸುತ್ತಿರುವ ನಿಲುವು ಹಾಗೂ ಅವರ ಹೇಳಿಕೆಗಳು ಚರ್ಚೆಯಾಗುತ್ತಿವೆ.

ಮೊನ್ನೆ ಟಿವಿ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ‘‘ನಾನು ಮುಸ್ಲಿಮ್ ಸಮಾಜ ಒಂದನ್ನೇ ನಂಬಿಕೊಂಡು ಕೂತಿಲ್ಲ. ಅದೊಂದು ಸಮುದಾಯವನ್ನು ನೆಚ್ಚಿಕೊಂಡು ರಾಜಕೀಯ ಮಾಡುತ್ತಿಲ್ಲ. ಕರ್ನಾಟಕದ ಆರೂವರೆ ಕೋಟಿ ಜನತೆಯ ಪ್ರತಿನಿಧಿಯಾಗಿ ನಮ್ಮ ಪಕ್ಷವಿದೆ’’ ಎಂದು ಹೇಳಿದ್ದಾರೆ.

ಮುಸ್ಲಿಮರು 2018ರಲ್ಲಾಗಲೀ, 2019ರಲ್ಲಾಗಲೀ 2023ರಲ್ಲಾಗಲೀ ಯಾಕೆ ನಮ್ಮನ್ನು ಬೆಂಬಲಿಸಿಲ್ಲ ಎಂದು ಕುಮಾರಸ್ವಾಮಿ ಕೇಳಿದ್ದಾರೆ. ‘‘ಹಿಜಾಬ್ ವಿವಾದ, ಹಲಾಲ್ ಕಟ್ ವಿವಾದ ಆದಾಗ ಮುಸ್ಲಿಮ್ ಸಮುದಾಯದ ಬೆನ್ನಿಗೆ ನಿಂತಿದ್ದೇ ಜೆಡಿಎಸ್. ಆಗ ಕಾಂಗ್ರೆಸ್ ಎಲ್ಲಿ ಹೋಗಿತ್ತು? ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ಗೋಲಿಬಾರ್ ಆದಾಗ ಆ ಸಮುದಾಯದ ಪರ ವಹಿಸಿದ್ದೆವು. ಆವಾಗಲೂ ಕಾಂಗ್ರೆಸ್ ಚಕಾರ ಎತ್ತಿರಲಿಲ್ಲ. ಇಷ್ಟೆಲ್ಲ ಆದರೂ ಮುಸ್ಲಿಮರು ನಮ್ಮನ್ನು ಬೆಂಬಲಿಸಲಿಲ್ಲ’’ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವ ಕಾರಣಕ್ಕೆ ಅವರು ಜನತಾ ದಳವನ್ನು ಬೆಂಬಲಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪಕ್ಷದ ಮುಸ್ಲಿಮ್ ಮುಖಂಡರ ಬಗ್ಗೆ ಕೇಳಿದ್ದಕ್ಕೆ ‘‘ಯಾರು ಬೇಕಾದರೂ ರಾಜೀನಾಮೆ ಕೊಡಲಿ, ಅವರನ್ನು ಇಟ್ಟುಕೊಳ್ಳುವವರು ಯಾರು? ಹೋಗುವವರು ಹೋಗಲಿ. ನಾನು ಯಾವುದೇ ಒಂದು ಸಮಾಜದ ಪ್ರತಿನಿಧಿಯಲ್ಲ. ನಮ್ಮ ಸಮಾಜ, ಒಕ್ಕಲಿಗ ಸಮಾಜ ನನಗೆ ಬೆಂಬಲ ಕೊಟ್ಟಿರಬಹುದು. ಹಾಗೆಂದು ನಾನು ಅದೊಂದು ಸಮಾಜದ ಪ್ರತಿನಿಧಿಯಲ್ಲ. ಕರ್ನಾಟಕದ ಆರೂವರೆ ಕೋಟಿ ಜನತೆಯ ಪ್ರತಿನಿಧಿ. ರಾಜ್ಯದ ಒಳಿತಿಗಾಗಿ ಕ್ರಮ ಕೈಗೊಳ್ಳುತ್ತೇನೆ’’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ‘‘ಜಾಸ್ತಿ ದಿನ ಈ ಸರಕಾರ ಇರುವುದಿಲ್ಲ. ಆಗ ಮುಸ್ಲಿಮ್ ಸಮುದಾಯದ ರಕ್ಷಣೆಗೆ ಯಾರು ಇರುತ್ತಾರೆ? ಕಾಂಗ್ರೆಸ್‌ನವರು ಬರುತ್ತಾರೆಯೇ? ಮತ್ತೆ ನಾನೇ ಅವರಿಗೆ ಬೇಕಾಗಲಿದ್ದೇನೆ ’’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕುಮಾರಸ್ವಾಮಿ ಅವರ ಈ ಹೇಳಿಕೆಗಳು ಏನನ್ನು ಸೂಚಿಸುತ್ತವೆ?

ಅವರ ಈ ಎಲ್ಲ ಹೇಳಿಕೆಗಳು ಹಾಗೂ ಇತ್ತೀಚಿನ ನಿಲುವುಗಳ ಒಟ್ಟು ಸಾರಾಂಶ ಈ ಬಾರಿ ಮುಸ್ಲಿಮರು ನಮಗೆ ವೋಟು ಹಾಕಿಲ್ಲ, ಹಾಗಾಗಿ ನಾವು ಅಧಿಕಾರಕ್ಕೆ ಬಂದಿಲ್ಲ, ನಮಗೆ ಕಡಿಮೆ ಸೀಟು ಬರಲು ಮುಸ್ಲಿಮರು ವೋಟು ಹಾಕದೆ ಇರುವುದು ಕಾರಣ. ಹಾಗಾಗಿ ನಾನೀಗ ಬಿಜೆಪಿ ಜೊತೆ ಸೇರಿದ್ದೇನೆ ಎಂಬುದು.

ಕುಮಾರಸ್ವಾಮಿಯವರು ಮುಸ್ಲಿಮರು ಬೆಂಬಲ ಕೊಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಜೊತೆ ಹೋಗುತ್ತಾ ಇದ್ದಾರೆ ಅಂದರೆ, ಇಲ್ಲಿ ಎರಡು ಮುಖ್ಯ ಪ್ರಶ್ನೆಗಳೇಳುತ್ತವೆ.

ಒಂದು - ಈ ರಾಜ್ಯದ ಮುಸ್ಲಿಮರು ಈ ಸಲ ಕಾಂಗ್ರೆಸ್‌ಗೆ ಒಗ್ಗಟ್ಟಾಗಿ ವೋಟು ಹಾಕಿದ್ದಾರೆ. ಸರಿ. ಅವರೆಲ್ಲರೂ ಒಗ್ಗಟ್ಟಾಗಿ ಜೆಡಿಎಸ್‌ಗೆ ವೋಟು ಹಾಕಿದ್ರೆ ಜೆಡಿಎಸ್‌ಗೆ ಬಹುಮತ ಬರುತ್ತಿತ್ತಾ? ಕುಮಾರಸ್ವಾಮಿ ಸಿಎಂ ಆಗುತ್ತಿದ್ದರಾ? ಮುಸ್ಲಿಮರು ವೋಟು ಹಾಕದೆ ಇರುವುದು ಮಾತ್ರ ಜೆಡಿಎಸ್ ಅಧಿಕಾರಕ್ಕೆ ಬರದೇ ಇರುವುದಕ್ಕೆ ಕಾರಣನಾ? ಮುಸ್ಲಿಮರನ್ನು ಹೊರತುಪಡಿಸಿ ಈ ರಾಜ್ಯದ ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರು, ದಲಿತರು, ಇತರ ಹಿಂದುಳಿದ ವರ್ಗಗಳು - ಈ ಎಲ್ಲಾ ಸಮುದಾಯಗಳ ಎಲ್ಲ ಮತದಾರರು ಈ ಸಲ ಜೆಡಿಎಸ್‌ಗೇ ವೋಟು ಹಾಕಿದ್ದಾರೆಯೇ?

ಎರಡನೇ ಬಹುಮುಖ್ಯ ಪ್ರಶ್ನೆ - ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಕೈಜೋಡಿಸೋದಕ್ಕೂ, ಜಾತ್ಯತೀತ ಅಂದ್ರೆ ಏನರ್ಥ ಎಂದು ಕೇಳುವುದಕ್ಕೂ ಮುಸ್ಲಿಮರು ಅವರಿಗೆ ವೋಟು ಹಾಕುವುದಕ್ಕೂ ಏನು ಸಂಬಂಧ? ಕುಮಾರಸ್ವಾಮಿ ಅವರು ಜಾತ್ಯತೀತ ಅಂದರೆ ಏನು ಎಂದು ಕೇಳದೆ ಇರುವ ಹಾಗೆ ನೋಡಿಕೊಳ್ಳುವುದು, ಅವರು ಬಿಜೆಪಿ ಜೊತೆ ಸೇರಿಕೊಳ್ಳದ ಹಾಗೆ ಅವರನ್ನು ತಡೆಯೋದು ಈ ರಾಜ್ಯದ ಮುಸ್ಲಿಮರ ಕರ್ತವ್ಯವೇ? ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರ ಜಾತ್ಯತೀತ ನಿಲುವು ಮುಸ್ಲಿಮರು ಯಾರಿಗೆ ವೋಟು ಹಾಕುತ್ತಾರೆ ಎಂಬುದನ್ನು ಅವಲಂಬಿಸಿದೆಯೇ? ಕುಮಾರಸ್ವಾಮಿ ಹಾಗೂ ಅವರ ಪಕ್ಷದ ಜಾತ್ಯತೀತತೆಯನ್ನು ಕಾಪಾಡುವುದು ಇಲ್ಲಿನ ಮುಸ್ಲಿಮರ ಕರ್ತವ್ಯವೇ ?

ಕುಮಾರಸ್ವಾಮಿ ಅವರು ಮುಸ್ಲಿಮರಿಗೆ ಹಲವು ಸಂದರ್ಭಗಳಲ್ಲಿ ರಾಜಕೀಯ ಬೆಂಬಲ ನೀಡಿದ್ದಾರೆ. ಹಿಜಾಬ್, ಹಲಾಲ್ ಕಟ್, ವ್ಯಾಪಾರಿಗಳಿಗೆ ನಿರ್ಬಂಧ ಇತ್ಯಾದಿ ವಿವಾದಗಳಾದಾಗ, ಮಂಗಳೂರಿನಲ್ಲಿ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಾಗ ಕುಮಾರಸ್ವಾಮಿ ಧೈರ್ಯದಿಂದ ಮಾತಾಡಿದ್ದಾರೆ. ಕಟು ವಾಸ್ತವಗಳನ್ನು ಜನರ ಮುಂದಿಟ್ಟಿದ್ದಾರೆ. ಬಿಜೆಪಿ ಹಾಗೂ ಸಂಘ ಪರಿವಾರದ ಕೋಮುವಾದಿ ರಾಜಕೀಯವನ್ನು ಖಂಡಿಸಿದ್ದಾರೆ. ಅನ್ಯಾಯಕ್ಕೊಳಗಾದ ಮುಸ್ಲಿಮರ ಪರವಾಗಿ ಧ್ವನಿ ಎತ್ತಿದ್ದಾರೆ. ಅವರಿಗೆ ರಾಜಕೀಯ ಶಕ್ತಿ ತುಂಬಿದ್ದಾರೆ. ಆ ಎಲ್ಲ ಸಂದರ್ಭಗಳಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಅಷ್ಟು ಸಮರ್ಥವಾಗಿ ಸತ್ಯವನ್ನು ಹೇಳಲಿಲ್ಲ, ಕೋಮುವಾದವನ್ನು ಗಟ್ಟಿ ಧ್ವನಿಯಲ್ಲಿ ಖಂಡಿಸಲಿಲ್ಲ, ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ಬಿಜೆಪಿ ಸರಕಾರವನ್ನು ಬಲವಾಗಿ ತರಾಟೆಗೆ ತೆಗೆದುಕೊಳ್ಳಲಿಲ್ಲ. ಕೇವಲ ತೋರಿಕೆಯ ಪ್ರತಿರೋಧ ತೋರಿಸಿದರು.

ಇವೆಲ್ಲವೂ ಸತ್ಯ. ಕುಮಾರಸ್ವಾಮಿ ಅದೆಲ್ಲವನ್ನೂ ಮಾಡಿದ್ದಾರೆ. ಕಾಂಗ್ರೆಸ್‌ನವರು ಆಗ ಕುಮಾರಸ್ವಾಮಿಯವರಷ್ಟು ಸ್ಪಷ್ಟವಾಗಿ ಕೋಮುವಾದವನ್ನು ವಿರೋಧಿಸಿ ಮಾತಾಡಿಲ್ಲ. ಹಿಜಾಬ್ ವಿವಾದ ಆದಾಗ ಆ ಬಗ್ಗೆ ಮಾತಾಡಬೇಡಿ ಎಂದೇ ತಮ್ಮ ಪಕ್ಷದವರಿಗೆ ಕಾಂಗ್ರೆಸ್ ಮುಖಂಡರು ಪರೋಕ್ಷ ಎಚ್ಚರಿಕೆ ನೀಡಿದ್ದರು.

ಆದರೆ ಇದ್ದಿದ್ದನ್ನು ಇದ್ದ ಹಾಗೆ ಹೇಳುವುದು, ದೌರ್ಜನ್ಯಕ್ಕೊಳಗಾದವರಿಗೆ, ಅನ್ಯಾಯಕ್ಕೆ ಒಳಗಾದವರಿಗೆ ಬೆಂಬಲ ನೀಡುವುದು, ಅವರ ಪರವಾಗಿ ಸರಕಾರದ ತಾರತಮ್ಯ ಧೋರಣೆಯನ್ನು ಪ್ರಶ್ನಿಸುವುದು ಮಾಜಿ ಮುಖ್ಯಮಂತ್ರಿಯಾಗಿ, ಹಿರಿಯ ರಾಜಕೀಯ ನಾಯಕನಾಗಿ ಕುಮಾರಸ್ವಾಮಿಯವರ ಕರ್ತವ್ಯವೇ ಆಗಿರಲಿಲ್ಲವೇ? ಮುಸ್ಲಿಮರಂತೆ ಉಳಿದ ಸಮುದಾಯಗಳಿಗೂ ಅವರು ಇದೇ ರೀತಿಯ ಅಥವಾ ಇದಕ್ಕಿಂತ ಬಲವಾದ ಬೆಂಬಲ ಕೊಟ್ಟಿಲ್ಲವೇ? ಅಷ್ಟಕ್ಕೂ ಕಳೆದ ಕೆಲವು ವರ್ಷಗಳಲ್ಲಿ ಮುಸ್ಲಿಮರು ಎದುರಿಸಿದಷ್ಟು ತಾರತಮ್ಯವನ್ನು ಈ ರಾಜ್ಯದ ಯಾವ ಪ್ರಬಲ ಸಮುದಾಯಗಳು ಎದುರಿಸಿವೆ?

ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಸರಣಿ ಅನ್ಯಾಯಗಳನ್ನು ಇಡೀ ರಾಜ್ಯ ನೋಡಿದೆ. ಆ ಬಳಿಕ ಎದುರಾದ ಚುನಾವಣೆಯಲ್ಲಿ ಎಲ್ಲರಿಗೂ ನ್ಯಾಯ ಒದಗಿಸುವ, ಸಂವಿಧಾನಕ್ಕೆ ಬದ್ಧವಾಗಿ ಆಡಳಿತ ನಡೆಸುವಂತಹ ಸರಕಾರ ರಚಿಸಬಲ್ಲ ಸಾಧ್ಯತೆ ಯಾವ ಪಕ್ಷಕ್ಕೆ, ಯಾವ ನಾಯಕರಿಗೆ ಹೆಚ್ಚಿದೆ ಎಂದು ಆಗಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದು ಮುಸ್ಲಿಮರ ತಪ್ಪೇ?

ಕಳೆದ ಚುನಾವಣೆಯಲ್ಲಿ ಬೇರೆ ಬೇರೆ ಕಾರಣಗಳಿಂದ ಈ ರಾಜ್ಯದ ಬಹುತೇಕ ಎಲ್ಲ ಸಮುದಾಯಗಳ ಒಲವು ನಿಲುವುಗಳು ಕಾಂಗ್ರೆಸ್ ಕಡೆಗೇ ಇದೆ ಎಂಬುದನ್ನು ಗಮನಿಸಿಯೇ ಮುಸ್ಲಿಮರೂ ಕಾಂಗ್ರೆಸ್ ಪರ ವಾಲಿದ್ದಲ್ಲವೇ?

ಹಾಗಾದರೆ ರಾಜ್ಯದ ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರು, ದಲಿತರು, ಹಿಂದುಳಿದ ವರ್ಗಗಳ ಬಗ್ಗೆ ಯಾಕೆ ಕುಮಾರಸ್ವಾಮಿ ಇದೇ ರೀತಿಯ ಸಿಟ್ಟು, ಸೆಡವು ತೋರಿಸುತ್ತಿಲ್ಲ? ಕನಿಷ್ಠ ಸೌಜನ್ಯವನ್ನೂ ತೋರಿಸದೆ ಒರಟು ಮಾತಾಡುತ್ತಿಲ್ಲ? ಮುಸ್ಲಿಮರನ್ನು ದೂರಿದಂತೆ ಆ ಪ್ರಬಲ ಸಮುದಾಯಗಳನ್ನು ದೂರಿದರೆ ದುಬಾರಿಯಾದೀತು ಎಂಬ ಭಯವೇ? ಮುಸ್ಲಿಮರನ್ನು ಈಗ ಹೇಗೂ ನಡೆಸಿಕೊಳ್ಳಬಹುದು, ಅವರನ್ನು ಹೇಳುವವರು ಕೇಳುವವರು ಯಾರೂ ಇಲ್ಲ. ಮತ್ತೆ ಏನಾದರೊಂದು ಹೇಳಿ ಒಲಿಸಿಕೊಳ್ಳಬಹುದು ಎಂಬ ತಾತ್ಸಾರ ಭಾವನೆಯೇ?

ಈ ವಿಷಯದಲ್ಲಿ ಕಾಂಗ್ರೆಸ್ ಕೂಡ ಯಾವ ರೀತಿಯಲ್ಲೂ ಸಾಚಾ ಅಲ್ಲ. ಸ್ವತಃ ಮೃದು ಹಿಂದುತ್ವ ನೀತಿ ಪಾಲಿಸುವ ಕಾಂಗ್ರೆಸ್ ನಾಯಕರು ಪ್ರತೀ ಚುನಾವಣೆಯಲ್ಲಿ ಮುಸ್ಲಿಮರಿಗೆ ಮಾತ್ರ ಜಾತ್ಯತೀತ ಸರಕಾರ ಬರಲು ನೀವು ಎಚ್ಚರಿಕೆಯಿಂದ ಮತ ಹಾಕಬೇಕು, ಇಲ್ಲದಿದ್ದರೆ ಬಿಜೆಪಿ ಬರುತ್ತೆ, ಅದರಿಂದ ನಿಮಗೆ ಅಪಾಯ ಎಂದು ತಾಕೀತು ಮಾಡುತ್ತಾರೆ. ನೀವು ನಮಗೆ ಮತ ಹಾಕದೇ ಇದ್ದರೆ ಕೋಮುವಾದಿ ಸರಕಾರ ಬಂದು ನಿಮಗೇ ಅಪಾಯ ಎಂದು ಪರೋಕ್ಷ ಬೆದರಿಕೆಯನ್ನೂ ಹಾಕುತ್ತಾರೆ. ಅದೇ ಬೆದರಿಕೆ ಧಾಟಿಯ ಎಚ್ಚರಿಕೆಯನ್ನು ಅವರು ಬೇರೆ ಯಾವುದೇ ಸಮುದಾಯಗಳಿಗೆ ಅಪ್ಪಿತಪ್ಪಿಯೂ ಕೊಡೋದಿಲ್ಲ. ಆ ಸಮುದಾಯಗಳಿಗೆ ಕಾಂಗ್ರೆಸ್ ನಾಯಕರು ನಿಮ್ಮ ಸಮುದಾಯಕ್ಕೆ ಇಷ್ಟು ಟಿಕೆಟ್ ಕೊಡುತ್ತೇವೆ, ನಾವು ಅಧಿಕಾರಕ್ಕೆ ಬಂದರೆ ಇಷ್ಟು ಸಚಿವ ಸ್ಥಾನ ಕೊಡುತ್ತೇವೆ, ಆಮೇಲೆ ಇಷ್ಟು ಸಂಸದ ಸ್ಥಾನಕ್ಕೆ ಟಿಕೆಟ್ ಕೊಡುತ್ತೇವೆ, ಇಷ್ಟಿಷ್ಟು ನಿಗಮ ಮಂಡಳಿ ಕೊಡುತ್ತೇವೆ ಎಂದು ಭರವಸೆ ಕೊಟ್ಟು ಬೆಂಬಲ ಯಾಚಿಸುತ್ತಾರೆ.

ಇನ್ನೂ ಒಂದು ಪ್ರಶ್ನೆ ಇದೆ. ಈಗ ಕುಮಾರಸ್ವಾಮಿ ಅವರ ಪಕ್ಷದಿಂದ ಕೇವಲ 19 ಎಂಎಲ್‌ಎಗಳು ಗೆದ್ದಿದ್ದಾರೆ. ಅದಕ್ಕೆ ಮುಸ್ಲಿಮರು ಕಾರಣ. ಮುಸ್ಲಿಮರು ಅವರಿಗೆ ಕೈಕೊಟ್ಟರು ಎಂದು ಬೇಜಾರಾಗಿ ಅವರು ಬಿಜೆಪಿ ಜೊತೆ ಹೋಗುತ್ತಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಾ ಇದೆ. 2004ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ 58 ಎಂಎಲ್‌ಎಗಳು ಗೆದ್ದು ಬಂದಿದ್ದರು. ಸಾಕಷ್ಟು ಪ್ರಮಾಣದಲ್ಲಿ ಮುಸ್ಲಿಮರು ಬೆಂಬಲ ನೀಡಿದ್ದರಿಂದಲೇ ಜೆಡಿಎಸ್ ಅಷ್ಟು ಸ್ಥಾನ ಪಡೆಯಲು ಸಾಧ್ಯವಾಗಿತ್ತು. ಆದರೆ ಅಷ್ಟು ಸ್ಥಾನ ಸಿಕ್ಕಿದಾಗಲೂ 2006ರಲ್ಲಿ ಕುಮಾರಸ್ವಾಮಿಯವರು ಯಾವುದೇ ಮುಲಾಜಿಲ್ಲದೆ ಬಿಜೆಪಿ ಜೊತೆ ಹೋಗಿ ಸೇರಿಕೊಂಡರು. ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಅದೇ ಮೊದಲ ಬಾರಿ ಅಧಿಕಾರ ಕೊಡಿಸಿದರು. ಆಗ ಮುಸ್ಲಿಮರು ನಮಗೆ ಸಾಕಷ್ಟು ಬೆಂಬಲ ನೀಡಿದ್ದಾರೆ, ನಾವು ಬಿಜೆಪಿ ಜೊತೆ ಸೇರುವುದು ಸರಿ ಅಲ್ಲ ಎಂದು ಎಚ್‌ಡಿಕೆಯವರು ಏನಾದರೂ ಹಿಂದೆ ಸರಿದಿದ್ದಾರೆಯೇ? ಇಲ್ಲವಲ್ಲ?

ಹಾಗಾಗಿ ಇದು ಮುಸ್ಲಿಮರಿಗೆ ಸಂಬಂಧಿಸಿದ ವಿಷಯ ಅಲ್ಲ. ಕುಮಾರಸ್ವಾಮಿ ಹೇಳಿಕೊಳ್ಳುತ್ತಿರುವಂತೆ ರಾಜ್ಯದ ಹಿತಾಸಕ್ತಿಯ ವಿಷಯವಂತೂ ಅಲ್ಲವೇ ಅಲ್ಲ. ಇದು ಕೇವಲ ರಾಜಕೀಯ ಅವಕಾಶವಾದಿತನದ ವಿಷಯ. ಅಧಿಕಾರದ ಹಪಾಹಪಿಯ ವಿಷಯ.

ಇನ್ನು ಜೆಡಿಎಸ್ ಬಿಜೆಪಿ ಜೊತೆ ಹೋಗಿರುವ ಬಗ್ಗೆ ಆಕ್ಷೇಪ ಇರುವವರೆಲ್ಲರೂ ಆ ಪಕ್ಷದಲ್ಲಿರುವ ಮುಸ್ಲಿಮ್ ಪ್ರತಿನಿಧಿಗಳನ್ನು ಪ್ರಶ್ನಿಸುತ್ತಿದ್ದಾರೆ. ಇದೂ ಬಹಳ ವಿಚಿತ್ರವಾಗಿದೆ. ಪ್ರಶ್ನಿಸುವುದೇ ಆದರೆ ಜೆಡಿಎಸ್‌ನಲ್ಲಿರುವ ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರು, ಇನ್ನಿತರ ಎಲ್ಲ ಸಮುದಾಯಗಳ ನಾಯಕ ನಾಯಕಿ ಯರನ್ನೂ ಜನ ಪ್ರಶ್ನಿಸಬೇಕಲ್ಲವೇ? ಅವರಿಗೆಲ್ಲ ಜೆಡಿಎಸ್‌ನ ‘ಎಸ್’ ಸೈಲೆಂಟ್ ಯಾಕಾಗಿದೆ ಎಂದು ಉತ್ತರಿಸುವ ಹೊಣೆಗಾರಿಕೆ ಇಲ್ಲವೇ? ಕೇವಲ ಜೆಡಿಎಸ್ ನ ಮುಸ್ಲಿಮ್ ನಾಯಕರು ಮಾತ್ರ ಇದಕ್ಕೆ ಜವಾಬ್ದಾರಿ ಹೇಗಾಗುತ್ತಾರೆ? ಅವರನ್ನು ಮಾತ್ರ ಪ್ರಶ್ನಿಸುವುದು, ಹಂಗಿಸುವುದು ಯಾವ ನ್ಯಾಯ?

ಅಷ್ಟಕ್ಕೂ ಜೆಡಿಎಸ್‌ನ ನೀತಿ ನಿರೂಪಣೆಯಲ್ಲಿ ಅಲ್ಲಿರುವ ಮುಸ್ಲಿಮ್ ನಾಯಕರಿಗೆ ಎಷ್ಟು ಪಾತ್ರವಿದೆ? ದೇವೇಗೌಡರಾಗಲೀ, ಕುಮಾರಸ್ವಾಮಿಯವರಾಗಲೀ ಆ ಪಕ್ಷದ ಎಷ್ಟು ಮುಸ್ಲಿಮ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದಾದರೂ ಪ್ರಮುಖ ತೀರ್ಮಾನ ತೆಗೆದುಕೊಳ್ಳುತ್ತಾರೆ?

ಸಂಸತ್ತಿನೊಳಗೆ ಮಾಡಿದ ಭಾಷಣದಲ್ಲೇ ಬಿಜೆಪಿ ಸಂಸದರು ಇನ್ನೊಬ್ಬ ಸಂಸದನನ್ನು ಭಯೋತ್ಪಾದಕ ಎಂದು ಕರೆಯುತ್ತಾರೆ. ಇನ್ನೂ ಏನೇನೋ ಅವಾಚ್ಯ ಅವಹೇಳನಕಾರಿ ಪದ ಬಳಸಿ ಜರೆಯುತ್ತಾರೆ. ಅಂತಹ ಸಂಸದನನ್ನು ಪಕ್ಷದಿಂದ ಉಚ್ಚಾಟಿಸುವುದು ಬಿಟ್ಟು ಆತನಿಗೆ ದೊಡ್ಡ ರಾಜ್ಯದಲ್ಲಿ ಚುನಾವಣಾ ಉಸ್ತುವಾರಿ ಕೊಡುತ್ತಾರೆ ಪ್ರಧಾನಿ ಮೋದಿ ಹಾಗೂ ಅವರ ಪಕ್ಷ ಬಿಜೆಪಿ. ಸ್ಪೀಕರ್ ಕೂಡ ಯಾವುದೇ ಕ್ರಮ ಕೈಗೊಳ್ಳದೆ ಇನ್ನೊಂದು ಸಲ ಹಾಗೆ ಮಾಡಬೇಡಿ ಎನ್ನುತ್ತಾರೆ. ಆ ಪಕ್ಷದ ಸಂಸದರು ಮಹಾತ್ಮಾ ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಈ ದೇಶದ ಸುಪುತ್ರ ಎಂದು ಮತ್ತೆ ಮತ್ತೆ ಹೇಳುತ್ತಾರೆ. ಅವರ ವಿರುದ್ಧವೂ ಆ ಪಕ್ಷ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ದುಡ್ಡು ಕೊಟ್ಟು ಖರೀದಿಸುತ್ತೇವೆ ಎಂದರೂ ರಾಜ್ಯಕ್ಕೆ ಅಕ್ಕಿ ಮಾರಾಟ ಮಾಡಲು ಬಿಡುವುದಿಲ್ಲ ಆ ಪಕ್ಷದ ಕೇಂದ್ರ ಸರಕಾರ. ಅಂತಹ ಪಕ್ಷದ ನಾಯಕರ ಪಕ್ಕ ನಿಂತುಕೊಂಡು ಕುಮಾರಸ್ವಾಮಿ ಮುಸ್ಲಿಮರನ್ನು ನೆಚ್ಚಿಕೊಂಡು ರಾಜಕೀಯ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಈಗ ಕುಮಾರಸ್ವಾಮಿಯವರು ಬಿಜೆಪಿ ಜೊತೆ ದೋಸ್ತಿ ಮಾಡಿಕೊಂಡ ಹೊರೆಯನ್ನು ಮುಸ್ಲಿಮರ ತಲೆಗೆ ಕಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಮತ್ತು ಇಂತಹ ಎಲ್ಲ ಸೋ ಕಾಲ್ಡ್ ಜಾತ್ಯತೀತ ಪಕ್ಷಗಳಿಗೆ ಹಾಗೂ ಅದರ ನಾಯಕರಿಗೆ ಜಾತ್ಯತೀತತೆ ನಾವು ರಾಜಿರಹಿತವಾಗಿ, ಅಚಲವಾಗಿ ಪಾಲಿಸಲೇಬೇಕಾದ ಬಹುಮುಖ್ಯ ತತ್ವ ಎಂಬ ಅರಿವು, ಹೊಣೆಗಾರಿಕೆ ಇಲ್ಲದೆ ಅದು ಮುಸ್ಲಿಮರು ಕಾಪಾಡಬೇಕಾದ ಯಾವುದೊ ಕಾಲದ ಪಳೆಯುಳಿಕೆ ಎಂಬಂತಾಗಿರುವುದು ನಿಜಕ್ಕೂ ವಿಪರ್ಯಾಸ.

share
ಆರ್. ಕುಮಾರ್
ಆರ್. ಕುಮಾರ್
Next Story
X