Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಲಬುರಗಿಯದ್ದೇ ವಿಶ್ವದ ಅತಿದೊಡ್ಡ ತೋಪು!

ಕಲಬುರಗಿಯದ್ದೇ ವಿಶ್ವದ ಅತಿದೊಡ್ಡ ತೋಪು!

ದಸ್ತಗೀರ ನದಾಫ್ ಯಳಸಂಗಿದಸ್ತಗೀರ ನದಾಫ್ ಯಳಸಂಗಿ26 Jan 2026 3:33 PM IST
share
ಕಲಬುರಗಿಯದ್ದೇ ವಿಶ್ವದ ಅತಿದೊಡ್ಡ ತೋಪು!
► ಗಿನ್ನಿಸ್ ದಾಖಲೆಗೆ ಸೇರ್ಪಡೆಗಿಲ್ಲ ಕ್ರಮ: ಪುರಾತತ್ವ ಇಲಾಖೆಯ ನಿರ್ಲಕ್ಷ್ಯ ಆರೋಪ ► 14ನೇ ಶತಮಾನದ ಅಪರೂಪದ ತೋಪಿಗೆ ಬೇಕಿದೆ ರಕ್ಷಣೆ

ಕಲಬುರಗಿ: ಗುಲ್ಬರ್ಗಾ ಎಂದರೆ ಬಹಮನಿ ಕೋಟೆ, ಕೊತ್ತಲಗಳು ಹಾಗೂ ಅದ್ಭುತ ವಾಸ್ತುಶಿಲ್ಪಗಳು ನೆನಪಾಗುತ್ತವೆ. ಬಹಮನಿ ಸಾಮ್ರಾಜ್ಯದ ರಾಜಧಾನಿಯಾಗಿದ್ದ ‘ಅಹ್ಸನಾಬಾದ್’ ನಂತರ ‘ಗುಲ್ಬರ್ಗಾ’, ಈಗ ‘ಕಲಬುರಗಿ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಆದರೆ ಈ ಭಾಗದ ಅಪಾರ ಐತಿಹಾಸಿಕ ಮಹತ್ವವನ್ನು ಉಳಿಸಿ, ಜಗತ್ತಿಗೆ ಪರಿಚಯಿಸುವಲ್ಲಿ ಸರಕಾರಗಳು ಮತ್ತು ಸಂಬಂಧಪಟ್ಟ ಇಲಾಖೆಗಳು ವಿಫಲವಾಗಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.

14ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಆಡಳಿತ :

ಕಾಲದಲ್ಲಿ ನಿರ್ಮಿಸಲಾದ ಕಲಬುರಗಿ ಕೋಟೆ ಹಾಗೂ ಅದರೊಳಗಿನ ತೋಪುಗಳು ಇಂದಿಗೂ ಅಚ್ಚಳಿಯದೆ ಉಳಿದಿವೆ. ಅವುಗಳಲ್ಲಿ ಒಂದಾದ ‘ಬಾರಾ ಗಾಜಿ ತೋಪ್’ ಇಡೀ ವಿಶ್ವದಲ್ಲೇ ಅತಿದೊಡ್ಡ ತೋಪು ಎನ್ನಲಾಗುತ್ತಿದೆ. ಆದರೂ ಇದನ್ನು ಅಧಿಕೃತವಾಗಿ ಗುರುತಿಸಿ ಗಿನ್ನಿಸ್ ವಿಶ್ವ ದಾಖಲೆ ಪುಸ್ತಕದಲ್ಲಿ ಸೇರಿಸುವ ಕೆಲಸ ಮಾತ್ರ ಇನ್ನೂ ಆಗಿಲ್ಲ.

ವಿಶ್ವದ ಅತಿದೊಡ್ಡ ತೋಪು ವೈಶಿಷ್ಟ್ಯವೇನು? :

ಈ ತೋಪು ಬಹಮನಿ ಸಾಮ್ರಾಜ್ಯದ ಮೊದಲನೇ ಮಹಮ್ಮದ್ ಶಾಹ್ (ಕ್ರಿ.ಶ. 1358-1377) ಅವರ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡಿದ್ದು, ಟರ್ಕಿಶ್ ಕಾರ್ಮಿಕರಿಂದ ಪಂಚಧಾತು ಮಿಶ್ರಲೋಹದಲ್ಲಿ ತಯಾರಿಸಲ್ಪಟ್ಟಿದೆ. ‘ಬಾರಾ ಗಾಜಿ ತೋಪ್’ ಎಂದು ಕರೆಯಲ್ಪಡುವ ಈ ತೋಪು ಸುಮಾರು 29 ಅಡಿ ಉದ್ದ, 7.6 ಅಡಿ ವೃತ್ತಪರಿಧಿ, 2 ಅಡಿ ವ್ಯಾಸ ಹಾಗೂ 7 ಇಂಚು ದಪ್ಪ ಹೊಂದಿದೆ.

ತೋಪಿನ ಮೇಲ್ಭಾಗದಲ್ಲಿ ಮೂಲತಃ 20 ಉಂಗುರಗಳು ಇದ್ದು, ಯುದ್ಧಕಾಲದಲ್ಲಿ ಕನಿಷ್ಠ 20 ಸೈನಿಕರು ಇದನ್ನು ಎಳೆಯಬೇಕಾಗುತ್ತಿತ್ತು ಎನ್ನಲಾಗಿದೆ. ಆದರೆ ಇಲಾಖೆಗಳ ನಿರ್ಲಕ್ಷ್ಯದಿಂದಾಗಿ ಇಂದು ಕೇವಲ ಐದು ಉಂಗುರಗಳು ಮಾತ್ರ ಉಳಿದಿವೆ. ತೋಪಿನ ತೂಕ ಸುಮಾರು 80 ಟನ್‌ಗಳಷ್ಟು ಇರಬಹುದೆಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ಅಯಾಜುದ್ದೀನ್ ಪಾಟೀಲ್ ತಿಳಿಸಿದ್ದಾರೆ.

ಇತಿಹಾಸಕಾರರ ಪ್ರಕಾರ, ಈ ತೋಪಿನ ಮೂಲಕ ಗುಂಡು(ಮದ್ದು) ಹಾರಿಸಿದರೆ ಸುಮಾರು 50-55 ಕಿಮೀ ದೂರದವರೆಗೆ ಹೋಗುತ್ತಿತ್ತು ಎಂದು ಹೇಳಲಾಗಿದೆ. ಅದರಂತೆಯೇ 70 ಎಕರೆಗೂ ಹೆಚ್ಚು ವಿಸ್ತಾರವಿರುವ ಕೋಟೆಯಲ್ಲಿ ವಿವಿಧ ಗಾತ್ರದ 23 ಫಿರಂಗಿಗಳಿವೆ ಎನ್ನುವುದು ಸಂಶೋಧಕರಿಂದ ಗೊತ್ತಾಗಿದೆ.

ಗಿನ್ನಿಸ್ ದಾಖಲೆಗೆ ಸೇರ್ಪಡೆಗೆ ನಿರ್ಲಕ್ಷ್ಯ? :

ಇಂತಹ ಅಪರೂಪದ ಐತಿಹಾಸಿಕ ತೋಪನ್ನು ‘ವಿಶ್ವದ ಅತಿ ದೊಡ್ಡ ತೋಪು’ ಎಂದು ಗುರುತಿಸಿ ಗಿನ್ನಿಸ್ ವಿಶ್ವ ದಾಖಲೆ ಪುಸ್ತಕದಲ್ಲಿ ಸೇರಿಸುವಂತೆ ಸಂಶೋಧಕರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ರಾಜ್ಯ ಪ್ರವಾಸೋದ್ಯಮ ಸಚಿವರಿಗೆ ಮನವಿ ಸಲ್ಲಿಸಲಾದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಇನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯೂ ಸಮಗ್ರ ಸಮೀಕ್ಷೆ ನಡೆಸದೆ ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿ ಎಂದು ಸಂಶೋಧಕರು, ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗಿರುವ ವಿಶ್ವದ ಅತಿದೊಡ್ಡ ತೋಪು ಯಾವುದು? :

2013ರಲ್ಲಿ ಆಂಧ್ರ ಪ್ರದೇಶದ ನಿಝಾಮಾಬಾದ್ ಜಿಲ್ಲೆಯ ಕೂಳಸ್ ಕೋಟೆಯಲ್ಲಿರುವ 23 ಅಡಿ ಉದ್ದದ ತೋಪನ್ನು ವಿಶ್ವದ ಅತಿದೊಡ್ಡ ತೋಪು ಎಂದು ಗಿನ್ನಿಸ್ ದಾಖಲೆಗೆ ಸೇರಿಸಲಾಗಿದೆ. ಆದರೆ ಕಲಬುರಗಿ ಕೋಟೆಯ ತೋಪು 29 ಅಡಿ ಉದ್ದ ಹೊಂದಿರುವುದರಿಂದ, ಸೂಕ್ತ ಸಮೀಕ್ಷೆ ನಡೆಸಿದರೆ ಈ ತೋಪು ವಿಶ್ವ ದಾಖಲೆಗೆ ಅರ್ಹವಾಗುತ್ತದೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ.

ತೋಪಿಗೆ ಬೇಕಿದೆ ರಕ್ಷಣೆ :

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವ್ಯಾಪ್ತಿಯಲ್ಲಿರುವ ಈ ತೋಪಿಗೆ ತಕ್ಷಣ ಸಂರಕ್ಷಣಾ ಕ್ರಮ ಕೈಗೊಳ್ಳಬೇಕು. ತೋಪಿನ ಸುತ್ತ ಭದ್ರ ಬೇಲಿ, ಮೇಲ್ಛಾವಣಿ ವ್ಯವಸ್ಥೆ ಮಾಡಬೇಕು. ಒಳಭಾಗದಲ್ಲಿ ತುಂಬಿರುವ ಮಣ್ಣು ಹಾಗೂ ಕಲ್ಲುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು. ಜೊತೆಗೆ, ಸಂಪೂರ್ಣ ಅಳತೆ ವಿವರಗಳೊಂದಿಗೆ ‘ವಿಶ್ವದ ಅತಿದೊಡ್ಡ ತೋಪು’ ಎಂಬ ಮಾಹಿತಿ ಫಲಕ ಅಳವಡಿಸುವ ಅಗತ್ಯವಿದೆ ಎಂದು ಪ್ರವಾಸೋದ್ಯಮ ತಜ್ಞರು ಒತ್ತಾಯಿಸಿದ್ದಾರೆ.

ಭಾರತದಲ್ಲೇ ವಿಶ್ವದ ಅತಿದೊಡ್ಡ ಮೂರು ತೋಪುಗಳು :

ವಿಶೇಷವೆಂದರೆ, ವಿಶ್ವದಲ್ಲಿನ ಅತಿದೊಡ್ಡ ತೋಪುಗಳಲ್ಲಿ ಮೂರು ಭಾರತದಲ್ಲೇ ಇರುವುದಾಗಿದೆ.

ಕಲಬುರಗಿ ಕೋಟೆ 29 ಅಡಿ, ನಿಜಾಮಾಬಾದ್ 23 ಅಡಿ, ಜೈಪುರ 20.2 ಅಡಿ. ಇದು ದೇಶಕ್ಕೆ ಹೆಮ್ಮೆಯ ವಿಷಯವಾದರೂ, ಸೂಕ್ತ ಪ್ರಚಾರ ಮತ್ತು ಸಂರಕ್ಷಣೆಯ ಕೊರತೆಯಿಂದ ಈ ಐತಿಹಾಸಿಕ ಸಂಪತ್ತು ಮರೆತು ಹೋಗುತ್ತಿರುವುದು ವಿಷಾದಕರ ಸಂಗತಿ.

29 ಅಡಿ ಉದ್ದದ ತೋಪು ಇರುವ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಗಿನ್ನಿಸ್ ದಾಖಲೆ ಸೇರ್ಪಡೆ ಕುರಿತು ಉನ್ನತ ಅಧಿಕಾರಿಗಳ ಗಮನಕ್ಕೆ ತರುತ್ತೇನೆ.

-ಅಜಯ್ ಕುಮಾರ್, ಸಹಾಯಕ ಸರ್ವೇಕ್ಷಣಾಧಿಕಾರಿ ಭಾರತೀಯ ಪುರಾತತ್ವ ಇಲಾಖೆ, ಕಲಬುರಗಿ

ಬಹಮನಿ ಕೋಟೆಯ ತೋಪನ್ನು ವಿಶ್ವದ ಅತಿದೊಡ್ಡ ತೋಪು ಎಂದು ಸಮೀಕ್ಷೆ ಮಾಡಲಾಗಿದೆ. ಆದರೆ 10 ವರ್ಷಗಳ ಹಿಂದೆಯೇ ಸಲ್ಲಿಸಿದ ಮನವಿಗಳಿಗೆ ಸ್ಪಂದನೆ ಸಿಕ್ಕಿಲ್ಲ.

-ಡಾ. ರೆಹಮಾನ್ ಪಟೇಲ್, ಸಂಶೋಧಕ

ಕಲ್ಯಾಣ ಕರ್ನಾಟಕ ಭಾಗದ ಐತಿಹಾಸಿಕ ಸ್ಥಳಗಳನ್ನು ಗುರುತಿಸುವಲ್ಲಿ ಸರಕಾರಗಳು ವಿಫಲವಾಗಿವೆ. ಇನ್ಮುಂದೆ ಆದರೂ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು.

-ಡಾ. ಲಕ್ಷ್ಮಣ್ ದಸ್ತಿ ಸಂಸ್ಥಾಪಕ ಅಧ್ಯಕ್ಷರು, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ

Tags

Kalaburagi
share
ದಸ್ತಗೀರ ನದಾಫ್ ಯಳಸಂಗಿ
ದಸ್ತಗೀರ ನದಾಫ್ ಯಳಸಂಗಿ
Next Story
X