Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಪ್ರವಾಸಿಗರನ್ನು ಸೆಳೆಯುತ್ತಿರುವ...

ಪ್ರವಾಸಿಗರನ್ನು ಸೆಳೆಯುತ್ತಿರುವ ಮಲೆನಾಡಿನ ಜಲಪಾತಗಳು

ಶರತ್ ಪುರದಾಳ್ಶರತ್ ಪುರದಾಳ್26 May 2025 7:22 AM IST
share
ಪ್ರವಾಸಿಗರನ್ನು ಸೆಳೆಯುತ್ತಿರುವ ಮಲೆನಾಡಿನ ಜಲಪಾತಗಳು

ಶಿವಮೊಗ್ಗ: ಪ್ರಕೃತಿಯ ಅಗಾಧ ಸೌಂದರ್ಯವನ್ನು ತನ್ನೊಳಗೆ ಅಡಗಿಸಿಕೊಂಡಿರುವ ರಾಜ್ಯದ ಸುಂದರ ನಗರವೇ ಮಲೆನಾಡು ಶಿವಮೊಗ್ಗ. ವನ್ಯಜೀವಿ ಅಭಯಾರಣ್ಯ ಸೇರಿದಂತೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜೋಗ ಜಲಪಾತ ಸೇರಿದಂತೆ ಹತ್ತು ಹಲವು ಜಲಪಾತಗಳನ್ನು ಜಿಲ್ಲೆ ಒಳಗೊಂಡಿದೆ.

ಪ್ರಸಕ್ತ ಮಲೆನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದೆ. ಜಲಪಾತ ಸೇರಿದಂತೆ ಜಿಲ್ಲೆಯ ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಮಳೆಗಾಲದಲ್ಲಿ ಜಲಪಾತಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮಲೆನಾಡಿಗೆ ಆಗಮಿಸುತ್ತಾರೆ.

ಶಿವಮೊಗ್ಗ ಜಿಲ್ಲೆಯಲ್ಲಿರುವ ಪ್ರಮುಖ ಜಲಪಾತಗಳು:

ದಬ್ಬೆ ಜಲಪಾತ: ದಬ್ಬೆ ಜಲಪಾತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿದೆ. ಇದು ಸಾಹಸ ಉತ್ಸಾಹಿಗಳಿಗೆ, ಛಾಯಾಗ್ರಹಣ ಅಭಿಮಾನಿಗಳಿಗೆ ಮತ್ತು ಪಕ್ಷಿ ವೀಕ್ಷಣೆಯನ್ನು ಇಷ್ಟಪಡುವ ಜನರಿಗೆ ಹೆಸರುವಾಸಿಯಾಗಿದೆ.

ಶಿವಮೊಗ್ಗದಿಂದ 72 ಕಿ.ಮೀ., ಸಾಗರದಿಂದ 30 ಕಿ.ಮೀ., ಬೆಂಗಳೂರಿನಿಂದ 379 ಕಿ.ಮೀ. ಆಗಲಿದೆ. ಈ ಜಲಪಾತವು ಪಶ್ಚಿಮ ಘಟ್ಟಗಳ ಶರಾವತಿ ಕಣಿವೆಯ ಒಂದು ಭಾಗವಾಗಿದೆ. ಹೀಗಾಗಿ ಈ ಜಲಪಾತದ ನೋಟ ಅತ್ಯಂತ ಸುಂದರವಾಗಿದೆ. ಈ ಜಲಪಾತವನ್ನು ತಲುಪಲು ಚಾರಣ ಮಾಡಬೇಕು. ಚಾರಣದ ಸಮಯದಲ್ಲಿ ದಟ್ಟವಾದ ಕಾಡಿನ ಮೂಲಕ ಹಾದು ಹೋಗಬೇಕು.

ಜೋಗ ಜಲಪಾತ: ರಾಜ್ಯದ ಪ್ರಸಿದ್ಧ ಜಲಪಾತಗಳಲ್ಲಿ ಜೋಗವೂ ಒಂದು. ಇದು ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳ ಗಡಿ ಭಾಗದಲ್ಲಿದೆ. ಶಿವಮೊಗ್ಗ ನಗರದಿಂದ 100 ಕಿಲೋ ಮೀಟರ್ ದೂರದಲ್ಲಿದೆ. ಶಿವಮೊಗ್ಗದಲ್ಲಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಜೋಗ್ ಫಾಲ್ಸ್ ಅಗ್ರಸ್ಥಾನದಲ್ಲಿದೆ.

ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿಯುವ ಶರಾವತಿ ನದಿ ಇಲ್ಲಿ ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ಭವ್ಯವಾದ ಜಲಪಾತದ ರೂಪದಲ್ಲಿ 829 ಅಡಿ ಎತ್ತರದಿಂದ ನೀರು ಧುಮುಕುತ್ತದೆ. ಜೋಗ್ ಫಾಲ್ಸ್ ಅತಿ ಎತ್ತರದ ಜಲಪಾತವಾಗಿದ್ದು, ದಟ್ಟವಾದ ನಿತ್ಯಹರಿದ್ವರ್ಣ ಕಾಡುಗಳ ನಡುವೆ ಇದು ಇದೆ. ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ ರೈಲು ನಿಲ್ದಾಣದಿಂದ 16 ಕಿ.ಮೀ. ದೂರದಲ್ಲಿದೆ ಈ ಜಲಪಾತ.

ಕುಂಚಿಕಲ್ ಜಲಪಾತ: ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಕುಂಚಿಕಲ್ ಜಲಪಾತವು ಒಂದು. ಇದು 1,493 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಈ ಜಲಪಾತವು ಮಾಣಿ ಅಣೆಕಟ್ಟಿನ ಜಲಾಶಯಕ್ಕೆ ತೆರೆದುಕೊಳ್ಳುತ್ತದೆ. ನೀರಿನ ಮಟ್ಟ ಹೆಚ್ಚಾಗುವುದರಿಂದ ಮಳೆಗಾಲದಲ್ಲಿ ತನ್ನ ಅಪೂರ್ವವಾದ ಸೊಬಗಿನಿಂದ ಜಲಪಾತದ ಪ್ರೇಮಿಗಳನ್ನು ಆಕರ್ಷಿಸುತ್ತದೆ.

ಕುಂಚಿಕಲ್ ಜಲಪಾತವು ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಗಡಿಭಾಗದಲ್ಲಿ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಬಳಿಯ ನಿಡಗೋಡು ಗ್ರಾಮದಲ್ಲಿ ಇರುವ ಒಂದು ಜಲಪಾತವಾಗಿದೆ. ಮಾಣಿ ಡ್ಯಾಮ್‌ನಿಂದ ಸುಮಾರು 3 ಕಿಲೋ ಮೀಟರ್ ಕಾಡಿನ ಮಧ್ಯ ದುರ್ಗಮ ದಾರಿಯಲ್ಲಿ ಹೋದರೆ ಈ ಜಲಪಾತದ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಕುಂಚಿಕಲ್ ಜಲಪಾತವು ಶಿವಮೊಗ್ಗದಿಂದ 96.7 ಕಿ.ಮೀ. ಮತ್ತು ಹೊಸನಗರದಿಂದ 40.6 ಕಿ.ಮೀ. ದೂರದಲ್ಲಿ ಇದೆ.

ಹೊನ್ನೆಮರಡು ಜಲಪಾತ: ಶಿವಮೊಗ್ಗ ಜಿಲ್ಲೆಯಲ್ಲಿರುವ ಹೊನ್ನೆಮರಡು ಜಲಪಾತವು ಜಲಕ್ರೀಡಾ ಪ್ರೇಮಿಗಳಿಗೆ ಸ್ವರ್ಗವಾಗಿದೆ. ಇಲ್ಲಿ ಕುಟುಂಬದ ಜೊತೆ ವಿಶ್ರಾಂತಿ ತೆಗೆದುಕೊಳ್ಳಲು ಕಯಾಕಿಂಗ್, ಸ್ಕೂಬಾ ಡೈವಿಂಗ್, ಕೊರಾಕ್ಲಿಂಗ್, ಕ್ಯಾನೋಯಿಂಗ್ ನಂತಹ ರೋಮಾಂಚಕ ಚಟುವಟಿಕೆಗಳನ್ನು ನಡೆಸಲು ಸರಿಯಾದ ಆಯ್ಕೆಯಾಗಿದೆ. ಮಳೆಗಾಲದಲ್ಲಿ ಈ ಜಲಪಾತದ ಸೌಂದರ್ಯ ದುಪ್ಪಟ್ಟಾಗುತ್ತದೆ.

ಹೊನ್ನೆಮರಡು ಶರಾವತಿ ನದಿಯ ಹಿಂಭಾಗದ ನೀರಿನ ಮೇಲೆ ನೆಲೆಗೊಂಡಿರುವ ಒಂದು ಪ್ರವಾಸಿ ಸ್ಥಳವಾಗಿದೆ. ಹೊನ್ನೆಮರಡು ಎಂಬ ಹೆಸರು ಹೊನ್ನೆ ಮರದಿಂದ ಬಂದಿದೆ. ಆದಾಗ್ಯೂ, ಹೊನ್ನೆಮರಡು ಎಂಬ ಪದದ ಅರ್ಥವು ಚಿನ್ನದ ಕೆರೆ. ಇದು ಬಹುಶಃ ಹೊನ್ನೆಮರಡು ಶರಾವತಿ ನದಿಯ ಹಿನ್ನೀರಿನ ಮೇಲಿದೆ ಎಂಬುದಕ್ಕೆ ಉಲ್ಲೇಖವಾಗಿದೆ.

ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಸಾಗರದಿಂದ ಜೋಗ ಜಲಪಾತಕ್ಕೆ ಹೋಗುವ ಮಾರ್ಗದಲ್ಲಿ ಸುಮಾರು 35 ಕಿ.ಮೀ., ತಾಳಗುಪ್ಪದಿಂದ 12 ಕಿ.ಮೀ. ಮತ್ತು ಬೆಂಗಳೂರಿನಿಂದ 392 ಕಿ.ಮೀ. ದೂರದಲ್ಲಿದೆ.

ಉಂಚಳ್ಳಿ ಜಲಪಾತ: ಉಂಚಳ್ಳಿ ಜಲಪಾತವನ್ನು ಮಿನಿ ನಯಾಗರಾ ಎಂದೂ ಕರೆಯಲಾಗುತ್ತದೆ. ಶಿವಮೊಗ್ಗ ಬಸ್ ನಿಲ್ದಾಣದಿಂದ 140 ಕಿ.ಮೀ., ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ 30 ಕಿ.ಮೀ. ದೂರದಲ್ಲಿದೆ.

ಭವ್ಯವಾದ ಉಂಚಳ್ಳಿ ಜಲಪಾತವು ಸುಮಾರು 450 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಇದನ್ನು ಒಂದು ಕಾಲದಲ್ಲಿ ಲುಶಿಂಗ್ಟನ್ ಜಲಪಾತ ಎಂದೂ ಕರೆಯುತ್ತಿದ್ದರು. ಅಘನಾಶಿನಿ ನದಿಯಿಂದ ರೂಪುಗೊಂಡ ಈ ಜಲಪಾತವು ದಟ್ಟವಾದ ಕಾಡಿನ ಮಧ್ಯದಲ್ಲಿದೆ.

ಕೂಡ್ಲುತೀರ್ಥ: ಆಗುಂಬೆಯ ದಟ್ಟ ಕಾನನ ಪ್ರದೇಶದಲ್ಲಿ ಉಗಮಿಸುವ ಸೀತಾ ನದಿಯಿಂದ ಉಂಟಾಗಿರುವ ಪ್ರವಾಸಿ ತಾಣವೇ ಕೂಡ್ಲು ತೀರ್ಥ. ಸೀತಾ ನದಿಯ ಉಗಮ ಸ್ಥಳ. ಕೂಡ್ಲು ತೀರ್ಥ ಜಲಪಾತವು ಶಿವಮೊಗ್ಗ ಬಸ್ ನಿಲ್ದಾಣದಿಂದ 118 ಕಿ.ಮೀ. ದೂರದಲ್ಲಿದೆ.

ಕೂಡ್ಲು ತೀರ್ಥ ಜಲಪಾತವು ಸುಮಾರು 300 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಇದು ಸೀತಾ ನದಿಯಿಂದ ಸೃಷ್ಟಿಯಾದ ಮೊದಲ ಜಲಪಾತವಾಗಿದ್ದು, ಈ ಕಾರಣದಿಂದಲೇ ಈ ಜಲಪಾತವನ್ನು ಸೀತಾ ಜಲಪಾತ ಎಂದೂ ಕರೆಯಲಾಗುತ್ತದೆ. ಕೂಡ್ಲು ತೀರ್ಥ ಜಲಪಾತವು ದಟ್ಟಕಾಡುಗಳ ಮಧ್ಯದಲ್ಲಿದ್ದು, ಮಂತ್ರಮುಗ್ಧಗೊಳಿಸುವ ಸೌಂದರ್ಯದಿಂದ ಕಂಗೊಳಿಸುತ್ತದೆ.

ಶಿವಗಂಗಾ ಜಲಪಾತ: ಶಿವಗಂಗಾ ಜಲಪಾತವೂ ಶಿರಸಿಯಿಂದ 37 ಕಿ.ಮೀ., ಶಿವಮೊಗ್ಗ ಬಸ್ ನಿಲ್ದಾಣದಿಂದ 180 ಕಿ.ಮೀ. ದೂರದಲ್ಲಿದೆ. ಈ ಜಲಪಾತ 74 ಅಡಿ ಎತ್ತರವಿದೆ. ಹಚ್ಚ ಹಸಿರಿನ ದಟ್ಟವಾದ ಕಾಡುಗಳು ನಡುವೆ ನೆಲೆಯಾಗಿರುವ ಶಿವಗಂಗಾ ಜಲಪಾತವು, ಉತ್ತರ ಕನ್ನಡದ ಮೂಲಕ ಹರಿಯುತ್ತದೆ.

ಆಚಾ ಕನ್ಯಾ ಫಾಲ್ಸ್: ಆಚಾ ಕನ್ಯಾ ಫಾಲ್ಸ್ ಶಿವಮೊಗ್ಗ ಬಸ್ ನಿಲ್ದಾಣದಿಂದ 60 ಕಿ.ಮೀ. ದೂರದಲ್ಲಿದೆ. ಈ ಜಲಪಾತವು ಶಿವಮೊಗ್ಗ ಜಿಲ್ಲೆಯ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ತೀರ್ಥಹಳ್ಳಿ ಪಟ್ಟಣದಿಂದ 10 ಕಿ.ಮೀ. ದೂರದಲ್ಲಿರುವ ಅರಳಸುರಳಿ ಎಂಬ ಸ್ಥಳಕ್ಕೆ ಸಮೀಪದಲ್ಲಿದೆ.ಇದು ಪ್ರಕೃತಿ ಪ್ರೇಮಿಗಳನ್ನು ಬಹುವಾಗಿ ಆಕರ್ಷಿಸುತ್ತದೆ. ಆಚಾ ಕನ್ಯಾ ಜಲಪಾತವು ಚಾರಣಿಗರಿಗೆ ಉತ್ತಮ ತಾಣವಾಗಿದೆ.

share
ಶರತ್ ಪುರದಾಳ್
ಶರತ್ ಪುರದಾಳ್
Next Story
X