ಯಾದಗಿರಿ: ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಹುಟ್ಟು ಹಬ್ಬ ಆಚರಣೆ

ಕರವೇ ಜಿಲ್ಲಾಧ್ಯಕ್ಷ ಭೀಮು ನಾಯಕ್ ನೇತೃತ್ವದಲ್ಲಿ ಅನ್ನ ಸಂತರ್ಪಣೆ
ಯಾದಗಿರಿ: ಮಾಜಿ ಸಚಿವ ಹಾಗೂ ಸುರಪುರ ಮಾಜಿ ಶಾಸಕ ರಾಜು ಗೌಡ ಅವರ 47 ನೇ ಹಾಗೂ ಕಿರಿಯ ಸಹೋದರ ಹಣಮಂತ ನಾಯಕ್ (ಬಬ್ಲುಗೌಡ) ಅವರ 42 ನೇ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳಿಂದ ಯಾದಗಿರಿ ನಗರದ ಗಾಂಧಿ ವೃತ್ತ, ಹಾಗೂ ನೂತನ ಬಸ್ ನಿಲ್ದಾಣದಲ್ಲಿ ಅನ್ನ ಸಂತರ್ಪಣೆ ವಿತರಣೆ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಗಾಂಧಿ ವೃತ್ತದಲ್ಲಿ ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮು ನಾಯಕ್ ಹಾಗೂ ಬಿಜೆಪಿ ಯುವ ಮುಖಂಡ ಶ್ರೀಧರ್ ಸಾಹುಕಾರ ರಾಯಚೂರ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ವಿಶ್ವಾರಾಧ್ಯ ಪಾಟೀಲ್, ಜನಾರ್ಧನ ಬಡಿಗೇರ್, ಮಲ್ಲಿಕಾರ್ಜುನ್ ( ಸಾಂಗ್ಲಿಯಾನ ) ಅಶೋಕ್ ನಾಯಕ್, ರವಿ ಜಮ್ಮೆರ್ , ಬಸವರಾಜ್ ಜಗನ್ನಾಥ್, ನಾಗು ತಾಂಡೂರಕರ್ , ನಾಗಪ್ಪ ಗೋಪಾಳಪುರ , ಹಣಮಂತ ನಾನೇಕ್ , ಹಣಮಂತ ದೊರೆ, ಕಾಶಿನಾಥ್ ನಾನೇಕ್ , ರಮೇಶ್ ಡಿ ನಾಯಕ್, ಅಂಬರೀಶ್ ನಾಟೇಕರ್, ಭೀಮು ನಾಟೇಕರ್, ವಿಶ್ವ ಯಾದಗಿರಿ, ಹಣಮಂತ, ಗುಂಡಪ್ಪ ಸೇರಿದಂತೆ ಇನ್ನಿತರರು ಇದ್ದರು.
Next Story





